in

ರಾಷ್ಟ್ರ ಚಲನಚಿತ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್

ಸಂಚಾರಿ ವಿಜಯ್
ಸಂಚಾರಿ ವಿಜಯ್

ಸಂಚಾರಿ ವಿಜಯ್ ಎಂದರೆ ಎಲ್ಲರಿಗೂ ಗೊತ್ತು ಇತ್ತೀಚಿಗಷ್ಟೇ ನಾವು ಇವರನ್ನು ಕಳೆದುಕೊಂಡಿದ್ದೇವೆ. ಕಳೆದುಕೊಂಡಿದ್ದನ್ನು ತುಂಬಾ ದೊಡ್ಡ ನಷ್ಟವನ್ನು ಅನುಭವಿಸಿರುವುದು ನಮ್ಮ ಕನ್ನಡ ಚಿತ್ರರಂಗ. ಅತಿ ಚಿಕ್ಕ ವಯಸ್ಸಿನಲ್ಲಿ ಅತಿ ದೊಡ್ಡ ಹೆಸರನ್ನು ಬಿಟ್ಟು ಹೋಗಿದ್ದಾರೆ.

ಸಂಚಾರಿ ವಿಜಯ್’ ಹೆಸರಿನಿಂದ ಪರಿಚಿತರಾಗಿರುವ ಬಿ. ವಿಜಯ್ ಕುಮಾರ್ (೧೫ ಜುಲೈ ೧೯೮೩ – ೧೫ ಜೂನ್ ೨೦೨೧) ಒಬ್ಬ ಚಲನಚಿತ್ರ ಮತ್ತು ರಂಗಭೂಮಿ ನಟ.ಚಿಕ್ಕಮಗಳೂರು ಜಿಲ್ಲೆಯ, ಕಡೂರು ತಾಲ್ಲೂಕಿನ ಸಿಂಗಟಗೆರೆ ಹೋಬಳಿಯ ರಂಗಾಪುರ ಗ್ರಾಮದಲ್ಲಿ ಹುಟ್ಟಿದರು, ಪಂಚನಹಳ್ಳಿ ಗ್ರಾಮದಲ್ಲಿ ಬೆಳೆದರು. ಇವರ ತಂದೆ ಬಸವರಾಜಯ್ಯನವರು ಚಿತ್ರಕಲಾವಿದರು, ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದರು. ತಾಯಿ ಗೌರಮ್ಮನವರು ಜಾನಪದ ಕಲಾವಿದರಾಗಿದ್ದು, ಭದ್ರಾವತಿಯ ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದರು. ಇಂತಹ ಕುಟುಂಬದಲ್ಲಿ ಜನಿಸಿದ ಇವರು ಬಾಲ್ಯದಿಂದಲೇ ರಂಗಭೂಮಿ ಹಾಗೂ ಚಿತ್ರಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬೆಂಗಳೂರಿನ ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪೂರೈಸಿದ್ದಾರೆ.

ರಾಷ್ಟ್ರ ಚಲನಚಿತ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್
ಸಂಚಾರಿ ವಿಜಯ್

ಸಂಚಾರಿ ಹೆಸರಿನ ನಾಟಕತಂಡದಲ್ಲಿ ಇವರು ಒಬ್ಬರಾಗಿದ್ದರಿಂದ ಇವರಿಗೆ ಸಂಚಾರಿ ವಿಜಯ್ ಎಂಬ ಹೆಸರು ಬಂತು. ೨೦೧೪ರ ಸಾಲಿನ ೬೨ನೇ ರಾಷ್ಟ್ರ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರಿನಿಂದ 40 ಕಿ.ಮೀ. ದೂರದ ಪಂಚನಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ವಿಜಯ್‌ಕುಮಾರ್, ‘ರಾಷ್ಟ್ರ ಪ್ರಶಸ್ತಿ’ ಪಡೆಯುವವರೆಗಿನ ಹಾದಿ ಸಾಮಾನ್ಯದ್ದೇನೆಲ್ಲ. ಬಾಲ್ಯದಲ್ಲೇ ಕಷ್ಟಗಳನ್ನು ಉಂಡರೂ, ತಮ್ಮ ಗುರಿಯನ್ನು ವಿಜಯ್ ಎಂದಿಗೂ ಮರೆತಿರಲಿಲ್ಲ. ವಿಜಯ್‌ಗೆ ಸಿನಿಮಾ, ನಟನೆ ಮೇಲೆ ವಿಪರೀತ ಆಸಕ್ತಿ. ಅದರ ಪರಿಣಾಮವೇ ಅವರು ಬಣ್ಣದ ಲೋಕದತ್ತ ಮುಖ ಮಾಡಿದ್ದು. ಆನಂತರ ರಂಗಭೂಮಿಯಲ್ಲಿ ಪಯಣ ಆರಂಭಿಸಿದರು. ಸಂಚಾರಿ ನಾಟಕ ತಂಡದಲ್ಲಿ ಇದ್ದಿದ್ದರಿಂದ ವಿಜಯ್‌ ಕುಮಾರ್‌, ಸಂಚಾರಿ ವಿಜಯ್ ಆಗಿ ಬದಲಾದರು. ಆರಂಭದಲ್ಲಿ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳು, ಸಾಕ್ಷ್ಯಚಿತ್ರಗಳಲ್ಲಿ ನಟಿಸಿದರು.

ಕೆಲಕಾಲ ಕೆಐಇಟಿ ಶಿಕ್ಷಣ ಸಂಸ್ಥೆಯಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಇವರು, ತಮ್ಮ ಕನಸನ್ನು ಈಡೇರಿಸಿಕೊಳ್ಳಲು ತಮ್ಮ ಕೆಲಸಕ್ಕೆ ವಿದಾಯ ಹೇಳಿ ಪೂರ್ಣಪ್ರಮಾಣವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ಹತ್ತು ವರ್ಷಗಳಿಂದ ಸಂಚಾರಿ ಥಿಯೇಟರ್ ನಲ್ಲಿ ರಂಗ ತಂಡದ ಹಲಾವಾರು ನಾಟಕಗಳಲ್ಲಿ ಅಭಿನಯಿಸುವುದರ ಜೊತೆಗೆ ಕನ್ನಡದ ಹಲವಾರು ರಂಗತಂಡಗಳಲ್ಲಿ ನಟಿಸಿದ್ದಾರೆ. ರಂಗಭೂಮಿಯಲ್ಲಿ ನಟನೆ ಮಾತ್ರವಲ್ಲದೇ ಎರಡು ನಾಟಕಗಳನ್ನು ನಿರ್ದೇಶಿಸಿದ್ದಾರೆ.

ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ವಿಜಯ್, ರಮೇಶ್ ಅರವಿಂದ್ ನಟನೆಯ ‘ರಂಗಪ್ಪ ಹೋಗ್ಬಿಟ್ನಾ’ ಹಾಗೂ ‘ಜೋಗಿ’ ಪ್ರೇಮ್ ನಟಿಸಿದ್ದ ‘ದಾಸ್ವಾಳ’ ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲೂ ‘ದಾಸ್ವಾಳ’ ಚಿತ್ರದಲ್ಲಿನ ಅವರ ನಟನೆಗೆ ಎಲ್ಲರಿಂದಲೂ ಮೆಚ್ಚುಗೆ ಸಿಕ್ಕಿತ್ತು. ಆ ಬಳಿಕವೇ ಬಹುಭಾಷಾ ನಟ ಪ್ರಕಾಶ್ ರೈ ನಟಿಸಿ, ನಿರ್ದೇಶನ ಮಾಡಿದ್ದ ‘ಒಗ್ಗರಣೆ’ ಚಿತ್ರದಲ್ಲಿ ಒಂದು ಮಹತ್ವದ ಪಾತ್ರ ಮಾಡಿದ್ದರು ವಿಜಯ್. ಅದು ಮೂರು ಭಾಷೆಯಲ್ಲಿ ತೆರೆಕಂಡಿದ್ದ ಸಿನಿಮಾವಾಗಿತ್ತು. ಆ ಸಿನಿಮಾದ ನಂತರ ವಿಜಯ್‌ಗೆ ದೊಡ್ಡ ಬ್ರೇಕ್ ಸಿಕ್ಕಿದ್ದು ‘ನಾನು ಅವನಲ್ಲ ಅವಳು’ ಚಿತ್ರದ ಮೂಲಕ.

ರಾಷ್ಟ್ರ ಚಲನಚಿತ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್
ನಾನು ಅವನಲ್ಲ ಅವಳು ಚಿತ್ರ

ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವನ್ನೂ ಅಭ್ಯಸಿಸಿರುವ ಇವರು, ಹಲವಾರು ನಾಟಕಗಳಲ್ಲಿ ಹಾಡಿದ್ದಾರೆ.

ಬಿ.ಎಸ್. ಲಿಂಗದೇವರು ನಿರ್ದೇಶನ ಮಾಡಿದ್ದ ‘ನಾನು ಅವನಲ್ಲ ಅವಳು’ ಚಿತ್ರದಲ್ಲಿ ಮಂಗಳಮುಖಿ ಪಾತ್ರ ಮಾಡಿದ್ದರು. ಅದು ಅವರ ವೃತ್ತಿ ಜೀವನಕ್ಕೆ ಬಹುದೊಡ್ಡ ಮೈಲೇಜ್ ನೀಡಿತ್ತು. ಆ ಚಿತ್ರದಲ್ಲಿ ಮಂಗಳಮುಖಿಯರ ಬದುಕಿನ ಕಥಾಹಂದರವಿತ್ತು. ಮಂಗಳಮುಖಿ ಪಾತ್ರ ಮಾಡುವ ದೊಡ್ಡ ಸವಾಲು ವಿಜಯ್‌ ಮುಂದಿತ್ತು. ಬಹಳ ಚಿಕ್ಕ ವಯಸ್ಸಿನಲ್ಲೇ ತುಂಬ ಸವಾಲು ಇರುವ ಪಾತ್ರ ಮಾಡುವ ಅವಕಾಶ ವಿಜಯ್‌ಗೆ ಸಿಕ್ಕಿತ್ತು. ಪಾತ್ರಕ್ಕಾಗಿ ಸಾಕಷ್ಟು ಅಧ್ಯಯನ ಮಾಡಿ, ಅವರೊಂದಿಗೆ ಬೆರೆತು, ಅವರ ಬದುಕಿನ ಶೈಲಿಯನ್ನು ಅರ್ಥ ಮಾಡಿಕೊಂಡು ವಿಜಯ್ ಪಾತ್ರ ನಿರ್ವಹಿಸಿದ್ದರು. ಅದಕ್ಕೆ ತಕ್ಕನಾದ ಪ್ರತಿಫಲವನ್ನೂ ಸಹ ವಿಜಯ್ ಪಡೆದುಕೊಂಡರು.

ಸಂಚಾರಿ ವಿಜಯ್ ಅವರು ಬೆಂಗಳೂರಿನಲ್ಲಿ ಸ್ನೇಹಿತನ ಜೊತೆ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ಅಪಘಾತವಾಗಿ ಬಿದ್ದು ತೀವ್ರವಾಗಿ ಗಾಯಗೊಂಡರು.ಅವರ ಮೆದುಳಿಗೆ ಪೆಟ್ಟಾಗಿ ಕೋಮಾ ಸ್ಥಿತಿಗೆ ಹೋಗಿದ್ದರು. ಅಪೊಲೊ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದು ಸುಧಾರಣೆ ಕಾಣದೆ ಅವರ ಮೆದುಳು ನಿಷ್ಕ್ರಿಯವಾಗಿತ್ತು. ಅವರ ಕುಟುಂಬದವರ ಇಚ್ಛೆಯಂತೆ ಆಸ್ಪತ್ರೆಯಲ್ಲಿ ವಿಜಯ್ ಅವರ ಅಂಗಾಂಗದಾನ ಪ್ರಕ್ರಿಯೆಗಳನ್ನು ಕೈಗೊಂಡು ೧೫ ಜೂನ್ ೨೦೨೧ರ ಬೆಳಗಿನ ಜಾವ ಅವರು ಮರಣಹೊಂದಿದರೆಂದು ಘೋಷಿಸಲಾಯಿತು.

ಆದರೆ ಅದೆಷ್ಟು ಮಂದಿ ದೇವರನ್ನು ದೂರಿದರು, ಆದರೆ ದೇವರು ಅವರನ್ನು ಕರೆದುಕೊಂಡು ಹೋದರು. ದೇವರೇ ನಮ್ಮನ್ನು ಆದರೂ ಕರೆದುಕೊಂಡು ಹೋಗು, ಅವರು ಇನ್ನೊಬ್ಬರ ಬದುಕಬೇಕಾದ ಜೀವ, ಇನ್ನೂ ಅನೇಕ ಅನೇಕ ಚಿತ್ರಗಳಲ್ಲಿ ನಟಿಸಬೇಕು ಎಂದು ಎಷ್ಟು ಮಂದಿ ಬೇಡಿಕೊಂಡರು ಏನು ಮಾಡುವುದು ವಿಧಿ ಕೇಳಲಿಲ್ಲ ಕರೆದುಕೊಂಡು ಹೋಯಿತು. ಅದೇ ಮಾತು ಇದೆಯಲ್ಲಾ ಒಳ್ಳೆಯವರಿಗೆ ಇಲ್ಲಿ ಜಾಗವಿಲ್ಲ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕಾಲೇಜಿನಲ್ಲಿ ಕೇಳಬಾರದ ಪ್ರಶ್ನೆಗೆ ಟೀಚರ್ ಕೇಳಿದಾಗ ಸೈಕಾಲಜಿ ವಿದ್ಯಾರ್ಥಿನಿ ಮಾಡಿದ್ದೇನೆ.

ಕಾಲೇಜಿನಲ್ಲಿ ಕೇಳಬಾರದ ಪ್ರಶ್ನೆಗೆ ಟೀಚರ್ ಕೇಳಿದಾಗ ಸೈಕಾಲಜಿ ವಿದ್ಯಾರ್ಥಿನಿ ಮಾಡಿದ್ದೇನೆ.

ಹೊಯ್ಸಳ ಸಾಮ್ರಾಜ್ಯ

ಹೊಯ್ಸಳ ವಂಶ