in ,

ಬೀಟ್ರೂಟ್ ಬಗ್ಗೆ ಹಾಗೂ ಆರೋಗ್ಯ ಲಾಭ

ಬೀಟ್ರೂಟ್
ಬೀಟ್ರೂಟ್

ಬೀಟ್ ಕೀನೋಪೋಡಿಯೇಸೀ ಕುಟುಂಬಕ್ಕೆ ಸೇರಿದ ಉಪಯುಕ್ತ ದ್ವೈವಾರ್ಷಿಕ ಮೂಲಿಕೆ ಸಸ್ಯ. ಬೀಟ್‍ಗೆಡ್ಡೆ ಬೀಟ್‍ರೂಟ್ ಮುಂತಾದ ಹೆಸರುಗಳಿಂದ ಕೂಡ ಪರಿಚಿತವಾಗಿದೆ. ಬೀಟ ವಲ್‍ಗ್ಯಾರಿಸ್ ಇದರ ಸಸ್ಯಶಾಸ್ತ್ರೀಯ ಹೆಸರು. ದಪ್ಪ ಗಾತ್ರದ ಹಾಗೂ ಮಾಂಸಲವಾದ ಬೇರಿಗಾಗಿ ಇದನ್ನು ಪ್ರಪಂಚಾದ್ಯಂತ ಕೃಷಿ ಮಾಡಲಾಗುತ್ತಿದೆ.

ಕಾರ್ಬನಿಕ ವಸ್ತು ಹೆಚ್ಚಾಗಿರುವಂಥ ಮತ್ತು ಸುಲಭವಾಗಿ ಪುಡಿಪುಡಿಯಾಗುವಂಥ ಆಳಮಣ್ಣು ಬೀಟ್ ಗೆಡ್ಡೆಯ ವ್ಯವಸಾಯಕ್ಕೆ ತುಂಬ ಉತ್ತಮ. ರಾಸಾಯನಿಕ ಗೊಬ್ಬರಗಳನ್ನು ಹಾಕಿದರೆ ಬೆಳೆ ಮತ್ತಷ್ಟು ಹುಲುಸು. ಇದನ್ನು ನೀರಾವರಿಯಲ್ಲಿ ವ್ಯಾಪಕಾಗಿ ಬೆಳೆಸಲಾಗುತ್ತದೆ. ನೆಲದಲ್ಲಿ ಲವಣತೆ ಹೆಚ್ಚಾಗಿದ್ದರೂ ಪರವಾಗಿ ಇಲ್ಲ. ಆದರೆ ಆಮ್ಲತೆ ಹೆಚ್ಚಾಗಿದ್ದರೆ ಅಥವಾ ಬೋರಾನ್ ಕೊರತೆ ಇದ್ದರೆ ಸಹಿಸದು. ಬೋರಾನ್ ಕೊರತೆ ಇರುವೆಡೆಯಲ್ಲಿ ಬೆಳೆವಣಿಗೆ ಕುಂಠಿತವಾಗುತ್ತದಲ್ಲದೆ ಬೇರಿನೊಳಗೆ ಕಪ್ಪು ಗಾಯಗಳಾಗುವುವು ಕೂಡ.

ಬೀಟ್ ಸಮಶೀತೋಷ್ಣ ಹಾಗೂ ಶೀತವಲಯಗಳ ಬೆಳೆಯೆಂದು ಪರಿಗಣಿತವಾಗಿದ್ದರೂ ಇದನ್ನು ಉಷ್ಣಹವೆಯ ಪ್ರದೇಶಗಳಲ್ಲಿ ಚಳಿಗಾಲದಲ್ಲಿ ಬೆಳೆಸಬಹುದು. ತಂಪು ಹವೆಯಲ್ಲಿ ಬೆಳೆದ ಬೀಟ್ ಗೆಡ್ಡೆಗಳಲ್ಲಿಯ ಸಕ್ಕರೆ ಅಧಿಕ ಮೊತ್ತದಲ್ಲಿದ್ದು ಗೆಡ್ಡೆಗಳು ಕಡುಬಣ್ಣದವಾಗಿರುವುವು. ಉಷ್ಣತೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಬೆಳೆದವುಗಳಲ್ಲಿ ಸಕ್ಕರೆ ಕಡಿಮೆ ಮೊತ್ತದಲ್ಲಿರುವುದು ಬಣ್ಣವೂ ತಿಳಿಯಾಗಿರುತ್ತದೆ.

ಬೀಟ್ ಸಸ್ಯ ದ್ವೈವಾರ್ಷಿಕ ಮೂಲಿಕೆ ಎಂದು ಹೇಳಿದೆಯಷ್ಟೆ. ಬೆಳೆವಣಿಗೆಯ ಮೊದಲ ವರ್ಷದಲ್ಲಿ ಎಲೆ ಬೇರುಗಳು ಸಂಪೂರ್ಣ ರೂಪುಗೊಳ್ಳುವುವು. ಎರಡನೆಯ ವರ್ಷದಲ್ಲಿ ಹೂಗಳು ಅರಳಿ ಬೀಜಗಳು ಉತ್ಪತ್ತಿಯಾಗುವುವು. ಈ ಸಸ್ಯದಲ್ಲಿ ತಾಯಿ ಬೇರೇ ಮುಖ್ಯ ಅಂಗ. ಇದು ಕುಂಭೀ ರೂಪವಾಗಿಯೂ ರಸಭರಿತವಾಗಿಯೂ ಇದ್ದು ಆಹಾರ ಸಂಗ್ರಹಣೆಗೆ ಯುಕ್ತರೀತಿಯಲ್ಲಿ ಮಾರ್ಪಾಟುಗೊಂಡಿರುವ ಬೇರು ಎನಿಸಿದೆ. ಬೇರಿನ ಮೇಲಿನ ಅರ್ಧ ಗುಂಡಗೆ ಚಂಡಿನಂತಿದೆಯಾದರೆ ಕೆಳಗಿನ ಅರ್ಧ ಬಾಲದಂತೆ ಚಾಚಿಕೊಂಡಿರುವುದು. ಬೇರಿಗೆ ಮಂದವಾದ ಮತ್ತು ಬಿರುಸಾದ ಸಿಪ್ಪೆಯುಂಟು. ಒಳಗಿನ ರಸಭರಿತ ತಿರುಳನ್ನು ಅಡ್ಡಕೊಯ್ದರೆ ಒಂದರೊಳಗೊಂದರಂತೆ ಇರುವ ನಸುಗೆಂಪು, ಊದಾ ಅಥವಾ ಬಿಳಿಯ ಬಣ್ಣದ ಉಂಗುರಗಳಂಥ ವಲಯಗಳಿರುವುವು. ಬೇಯಿಸಿದಾಗ ಈ ಬಣ್ಣಗಳೆಲ್ಲ ಕಲೆಸಿಕೊಳ್ಳುವುವು.

ಬೀಟ್ರೂಟ್ ಬಗ್ಗೆ ಹಾಗೂ ಆರೋಗ್ಯ ಲಾಭ
ಬೀಟ್ ಸಸ್ಯ

ಹಣ್ಣು ಹಾಗೂ ತಕಾರಿಗಳು ನಮ್ಮ ಆರೋಗ್ಯಕ್ಕೆ ಲಾಭಕಾರಿ ಎನ್ನುವ ವಿಚಾರ ನಮಗೆಲ್ಲರಿಗೂ ತಿಳಿದಿದೆ. ಹೀಗಾಗಿ ನಾವು ತರಕಾರಿಗಳನ್ನು ದೈನಂದಿನ ಆಹಾರ ಕ್ರಮದಲ್ಲಿ ಅಳವಡಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಂಡು ಹೋಗುತ್ತೇವೆ. ಬೇರೆ ಬೇರೆ ರೀತಿಯ ತರಕಾರಿಗಳಲ್ಲಿ ಪೋಷಕಾಂಶಗಳು ವಿಭಿನ್ನ ರೂಪದಲ್ಲಿ ಸಿಗುವುದು.

ರಕ್ತಹೀನತೆ ಸಮಸ್ಯೆಗೆ ಪರಿಹಾರ
ರಕ್ತಹೀನತೆ, ರಕ್ತದ ಶುದ್ಧೀಕರಣ, ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಹಲ್ಲುಗಳ ಸಮಸ್ಯೆಗಳನ್ನೂ ದೂರಾಗಿಸುತ್ತದೆ. ಆದರೆ, ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವವರು ಮಾತ್ರ ಬೀಟ್ ರೂಟ್ ಸೇವನೆ ಮಾಡುವ ವೇಳೆ ಬಹಳ ಎಚ್ಚರದಿಂದ ಇರಬೇಕಾಗುತ್ತದೆ.

ಪ್ರತೀ ನಿತ್ಯ ಒಂದು ಲೋಟ ಬೀಟ್ ರೂಟ್ ಜ್ಯೂಸ್ ಕುಡಿದರೆ ಅದರಿಂದ ತ್ರಾಣ ಹೆಚ್ಚಾಗುತ್ತದೆ. ನೈಟ್ರೇಟ್ ಅಂಶವು ನೈಟ್ರೇಟ್ ಆಕ್ಸೈಡ್ ಆಗಿ ಪರಿವರ್ತನೆಗೊಳ್ಳೂವ ಮೂಲಕ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆ ವೇಳೆ ಆಮ್ಲಜನಕದ ಸರಬರಾಜು ಹೆಚ್ಚಿಸುವುದು ಮತ್ತು ಆಯಾಸ ಕಡಿಮೆ ಮಾಡುವುದು. ಜ್ಯೂಶ್ ನ್ನು ನಿಯಮಿತವಾಗಿ ಕುಡಿದರೆ ಅದರಿಂದ ದೈಹಿಕವಾಗಿ ಶಕ್ತಿ ಬರುವುದು.

ಬೊಜ್ಜು ಸಮಸ್ಯೆಯೂ ಕಡಿಮೆಯಾಗುವುದು
ದೀರ್ಘಕಾಲದ ಉರಿಯೂತ, ಪಿತ್ತಜನಕಾಂಗ ಸಂಬಂಧಿಸಿದ ಕಾಯಿಲೆಗಳು, ಬೊಜ್ಜು ಮತ್ತು ಕ್ಯಾನ್ಸರ್ ನಂತಹ ಸಮಸ್ಯೆಗಳಿಂದ ಬಳಲುತ್ತಿರುವವರಿಗೂ ಈ ಬೀಟ್ರೂಟ್ ಸಾಕಷ್ಟು ಉಪಯೋಗಗಳನ್ನು ನೀಡಬಲ್ಲದು.

ಯಕೃತ್ ನ ಶುದ್ದೀಕರಣವು ಸರಿಯಾಗಿ ಇಲ್ಲದೆ ಇದ್ದರೆ ಅದರಿಂದ ಕಾಯಿಲೆಗಳು ಬರುವುದು. ಇಂತಹ ಸಮಯದಲ್ಲಿ ಬೀಟ್ ರೂಟ್ ಜ್ಯೂಸ್ ಪರಿಣಾಮಕಾರಿ ಆಗಿರುತ್ತದೆ. ಇದರಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್, ವಿಟಮಿನ್ ಬಿ, ಕ್ಯಾಲ್ಸಿಯಂ, ಕಬ್ಬಿನಾಂಶ ಮತ್ತು ಬೀಟೈನ್ ದೇಹಕ್ಕೆ ತುಂಬಾ ಒಳ್ಳೆಯದು.

ಬೀಟ್ರೂಟ್ ಬಗ್ಗೆ ಹಾಗೂ ಆರೋಗ್ಯ ಲಾಭ
ಬೀಟ್ರೂಟ್

ಕೂದಲು ಉದುರುವ ಸಮಸ್ಯೆ ನಿವಾರಣೆ
ಒಣ ತಲೆಬುರುಡೆ, ಕೂದಲು ಉದುರುವಿಕೆ ಮತ್ತು ಕಾಂತಿಯುತ ಕೂದಲು ಪಡೆಯಲು ನೀವು ಬೀಟ್ರೂಟ್ ಜ್ಯೂಸ್ ಬಳಸಿ. ಬೀಟ್ ರೂಟ್ ಜ್ಯೂಸ್ ಗೆ ಸ್ವಲ್ಪ ಶುಂಠಿ ಹಾಕಿ ಕುಡಿದರೆ ಆಗ ಕೂದಲು ಉದುರುವಿಕೆ ಸಮಸ್ಯೆ ನಿವಾರಣೆ ಮಾಡಬಹುದು. ಬೀಟ್ರೂಟ್ ಜ್ಯೂಸ್​ಗೆ ವಿನೇಗರ್ ಹಾಕಿದರೆ ಆಗ ಒಣ ತಲೆಬುರುಡೆ ಸಮಸ್ಯೆ ನಿವಾರಣೆಯಾಗುತ್ತದೆ.

ಯಕೃತ್‌ನ್ನು ನಿರ್ವಿಷಗೊಳಿಸುವುದು
ಬೀಟ್ ರೂಟ್ ನಲ್ಲಿ ಇರುವಂತಹ ಬೀಟೈನ್ ಎನ್ನುವ ಅಂಶವು ಯಕೃತ್ ಅದ್ಭುತವಾಗಿ ಕೆಲಸ ಮಾಡುವಂತೆ ಮಾಡುವುದು. ದೇಹದಲ್ಲಿ ಯಕೃತ್ ಶುದ್ಧೀಕರಿಸುವ ಗುಣ ಹೊಂದಿರುವ ಕಾರಣದಿಂದಾಗಿ ಇದು ವಿಷಕಾರಿ ಅಂಶವನ್ನು ಕಡಿಮೆ ಮಾಡುವುದು.

ಸಾಮಾನ್ಯವಾಗಿ ಮಧುಮೇಹದಿಂದ ಬಳಲುತ್ತಿರುವವರು ಬೀಟ್ರೂಟ್ ಸೇವನೆ ಮಾಡಲು ಹಿಂದೇಟು ಹಾಕುತ್ತಾರೆ. ಹಾಗೆಂದು ಬೀಟ್ರೂಟನ್ನೇ ಸೇವನೆ ಮಾಡದೆ ಸಂಪೂರ್ಣವಾಗಿ ನಿಯಂತ್ರಿಸಬಾರದು. ಮಧುಮೇಹದಿಂದ ಬಳಲುತ್ತಿರುವವರೂ ಕೂಡ ಮಧ್ಯಮ ಪ್ರಮಾಣದಲ್ಲಿ ಸೇವನೆ ಮಾಡಬಹುದಾಗಿದೆ.

ಬೀಟ್ ರೂಟ್ ಜ್ಯೂಸ್ ನ್ನು ದಿನನಿತ್ಯವೂ ಕುಡಿದರೆ ಅದರಿಂದ ಸ್ನಾಯುಗಳ ಶಕ್ತಿ ಹೆಚ್ಚಾಗುತ್ತದೆ. ಇದರಿಂದಾಗಿ ದೈಹಿಕ ಚಟುವಟಿಕೆ ಮತ್ತು ವ್ಯಾಯಾಮ ಮಾಡುವ ವೇಳೆ ಯಾವುದೇ ಹಾನಿ ಆಗದು.

ಬೀಟ್ರೂಟ್​ನಲ್ಲಿ ವಿಟಮಿನ್ ಸಿ, ಮೆಗ್ನೇಶಿಯಂ ಹಾಗೂ ಕ್ಯಾಲ್ಶಿಯಂ ಹೇರಳವಾಗಿದ್ದು, ಪ್ರತಿನಿತ್ಯವೂ ಬೀಟ್ ರೂಟ್ ಜ್ಯೂಸ್ ಕುಡಿಯುವುದರಿಂದ ದೇಹದ ತ್ರಾಣವು ಹೆಚ್ಚಾಗುತ್ತದೆ. ಇದೇ ನೈಟ್ರೇಟ್ ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತನೆಗೊಂಡ ಬಳಿಕ ವ್ಯಾಯಾಮ ಮತ್ತು ಇತರ ದೈಹಿಕ ಚಟುವಟಿಕೆ ವೇಳೆ ಆಮ್ಲಜನಕದ ಉಪಯೋಗವನ್ನು ತಗ್ಗಿಸುವ ಪರಿಣಾಮವಾಗಿ ದಣಿವು ಕಡಿಮೆ ಆಗುವುದು.

ಮೆದುಳಿನ ಸಹಿತ ದೇಹದ ಪ್ರತಿಯೊಂದು ಅಂಗಾಂಗವು ಹೆಚ್ಚಿನ ರಕ್ತ ಸಂಚಾರವನ್ನು ಪಡೆದರೆ, ಆಗ ದೇಹವು ಹೆಚ್ಚು ಆಮ್ಲಜನಕ ಸರಬರಾಜು ಮಾಡಿದೆ ಎಂದು ಅರ್ಥ. ಬೀಟ್ ರೂಟ್ ನಲ್ಲಿ ನೈಸರ್ಗಿಕ ರಾಸಾಯನಿಕವಾಗಿರುವಂತಹ ನೈಟ್ರೇಟ್ ಇದೆ. ಇದು ಪ್ರತಿಕ್ರಿಯೆಗೆ ಒಳಗಾದ ಬಳಿಕ ನೈಟ್ರಿಕ್ ಆಕ್ಸೈಡ್ ಆಗಿ ಬದಲಾಗುವುದು ಮತ್ತು ರಕ್ತ ಸಂಚಾರವನ್ನು ಸುಗಮಗೊಳಿಸಲು ನೆರವಾಗುವುದು.

ಬೀಟ್ ರೂಟ್ ಜ್ಯೂಸ್ ನಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಗುಣವು ವಯಸ್ಸಾಗುವ ಲಕ್ಷಣ ತಡೆಯುವುದು. ಬೀಟ್ ರೂಟ್ ಜ್ಯೂಸ್ ತಯಾರಿಸುವ ವೇಳೆ ಇದು ಕಲುಷಿತವಾಗಿರದೆ, ನೈಸರ್ಗಿಕ ರೀತಿಯಲ್ಲಿ ಬೆಳೆಸಿರಬೇಕು. ಪ್ರತಿನಿತ್ಯ ಬೆಳಗ್ಗೆ ಒಂದು ಲೋಟ್ ಬೀಟ್ ರೂಟ್ ಜ್ಯೂಸ್ ಕುಡಿದರೆ ಅದರಿಂದ ನಿಮ್ಮ ದೈನಂದಿನ ಚಟುವಟಿಕೆಯು ಅತ್ಯುತ್ತಮವಾಗಿ ಆಗುವುದು.

ಇದು ಚರ್ಮದ ಸಮಸ್ಯೆ ಮತ್ತು ನೆರಿಗೆ ವಿರುದ್ಧ ಹೋರಾಡುವುದು ಮಾತ್ರವಲ್ಲದೆ ಚರ್ಮಕ್ಕೆ ಪುನಶ್ಚೇತನ ನೀಡುವುದು. ನಿಯಮಿತವಾಗಿ ಬೀಟ್ರೂಟ್ ಜ್ಯೂಸ್ ಕುಡಿದರೆ ಅದರಿಂದ ಆರೋಗ್ಯಕಾರಿ ಮತ್ತು ಕಾಂತಿಯುತ ಚರ್ಮ ಪಡೆಯಬಹುದು.

ಬೀಟ್ ರೂಟ್ ನ ಜ್ಯೂಸ್ ಹೊಟ್ಟೆಯ ಹಲವಾರು ಸಮಸ್ಯೆಗಳನ್ನು ನಿವಾರಣೆ ಮಾಡುವುದು. ಮುಖ್ಯವಾಗಿ ಇದು ಮಲಬದ್ಧತೆ ಮತ್ತು ಜೀರ್ಣಕ್ರಿಯೆ ಸಮಸ್ಯೆ ನಿವಾರಣೆ ಮಾಡುವುದು. ಇದು ಚಯಾಪಚಯ ಹೆಚ್ಚಿಸುವುದು. ಇದನ್ನು ಜ್ಯೂಸ್ ಮಾತ್ರವಲ್ಲದೆ ಬೇರೆ ವಿಧದಿಂದಲೂ ಬಳಕೆ ಮಾಡಬಹುದು.

ಇದರಲ್ಲಿ ಇರುವಂತಹ ವಿಟಮಿನ್ ಸಿ ಮತ್ತು ಬೆಟಾಲೈನ್ಸ್ ಅಂಶವು ಕ್ಯಾನ್ಸರ್ ಕಾರಕವಾಗಿರುವಂತಹ ಫ್ರೀ ರ್ಯಾಡಿಕಲ್ ನ್ನು ದೇಹದಿಂದ ಹೊರಗೆ ಹಾಕಲು ನೆರವಾಗುವುದು. ಇದು ಡಿಎನ್ ಎ ಮತ್ತು ಅಣುಗಳಿಗೆ ಆಗುವ ಹಾನಿ ತಪ್ಪಿಸುವುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

26 Comments

  1. Главные новости мира https://ua-vestnik.com и страны: политика, экономика, спорт, культура, технологии. Оперативная информация, аналитика и эксклюзивные материалы для тех, кто следит за событиями в реальном времени.

  2. Занятие с логопедом https://logoped-online1.ru онлайн для детей от 4 до 10 лет. Логопед онлайн проведет диагностику, поможет поставить звуки, проработать дислексию и дисграфию, устранить задержки речевого развития и обогатить словарный запас.

ಶಿವಮೊಗ್ಗ ಇತಿಹಾಸ

ಶಿವಮೊಗ್ಗ ಇತಿಹಾಸ ಕಥೆ

ವಿಶ್ವಾಮಿತ್ರ

ವಿಶ್ವಾಮಿತ್ರ : ಪೂಜನೀಯರಾದ ಸನ್ಯಾಸಿಗಳಲ್ಲಿ ಒಬ್ಬರು