in , ,

ಮಾನವ ರಹಿತ ವೈಮಾನಿಕ ವಾಹನ ಮತ್ತು ಪ್ರಚಂಡ್‌’ನ ವಿಶೇಷತೆ

ಪ್ರಚಂಡ್‌'ನ ವಿಶೇಷತೆ
ಪ್ರಚಂಡ್‌'ನ ವಿಶೇಷತೆ

ನಮೀಬಿಯಾದ ಚೀತಾಗಳನ್ನು ಭಾರತಕ್ಕೆ ತರುವ ಪ್ರಾಜೆಕ್ಟ್ ಚೀತಾ ಇತ್ತೀಚೆಗೆ ಸುದ್ದಿಯಲ್ಲಿತ್ತು. ಆದರೆ, ವಾಯುಪಡೆಯ ಪ್ರಾಜೆಕ್ಟ್ ಚೀತಾ ಬೇರೆಯದೇ ಉದ್ದೇಶ ಮತ್ತು ವಲಯದ ಯೋಜನೆ.

ಭಾರತೀಯ ವಾಯುಪಡೆ ಈಗ ತನ್ನ ಪ್ರಾಜೆಕ್ಟ್ ಚೀತಾ ಹೆಸರಿನ ಯೋಜನೆಯನ್ನು ಮೇಕ್ ಇನ್ ಇಂಡಿಯಾ ಯೋಜನೆಯಡಿ ಜಾರಿಗೆ ತರಲು ಯೋಜಿಸುತ್ತಿದೆ. ಈ ಯೋಜನೆಯಡಿ ಭಾರತೀಯ ರಕ್ಷಣಾ ಉಪಕರಣಗಳ ಉತ್ಪಾದಕರು ನಿರ್ಮಿಸಿದ ಆಯುಧಗಳನ್ನು ಇಸ್ರೇಲ್ ನಿರ್ಮಿತ ಹೆರೋನ್ ಡ್ರೋನ್‌ಗಳಿಗೆ ಅಳವಡಿಸಿ, ಅವುಗಳ ದಾಳಿ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತದೆ.

ಭಾರತದ ಸೇನಾ ವಲಯಕ್ಕೆ ಎಎಚ್‌ಎಲ್‌ ನಿರ್ಮಿಸಿರುವ ಲಘು ಯುದ್ಧ ಹೆಲಿಕಾಪ್ಟರ್‌ಗಳು ಮತ್ತಷ್ಟು ಶಕ್ತಿ ತುಂಬಿವೆ. ಪ್ರಚಂಡ್ ಹೆಲಿಕಾಪ್ಟರ್‌ನ ಮೊದಲ ಬ್ಯಾಚ್‌ನ 15 ಚಾಪರ್‌ಗಳು ಭಾರತೀಯ ವಾಯುಪಡೆಗೆ ಸೋಮವಾರ ಸೇರ್ಪಡೆಯಾಗಿವೆ.

ಭಾರತೀಯ ವಾಯುಪಡೆ ಪ್ರಸ್ತುತ ತನ್ನ ಬಳಿ ಇರುವ ಇಸ್ರೇಲ್ ನಿರ್ಮಿತ ಹೆರೋನ್ ಮಾನವ ರಹಿತ ಹಾರಾಟ ವಾಹನಗಳಿಗೆ ಇನ್ನೂ ಹೆಚ್ಚಿನ ಸಂವಹನ ವ್ಯವಸ್ಥೆ ಹಾಗೂ ಕ್ಷಿಪಣಿಗಳನ್ನು ಅಳವಡಿಸಿ, ಆ ಮೂಲಕ ಸಾಕಷ್ಟು ದೂರದಿಂದಲೇ ಶತ್ರುಗಳ ಸ್ಥಾನಗಳ ಮೇಲೆ ಕರಾರುವಾಕ್ಕಾಗಿ ದಾಳಿ ಮಾಡುವ ಸಾಮರ್ಥ್ಯವನ್ನು ವೃದ್ಧಿಸುವ ಉದ್ದೇಶ ಹೊಂದಿದೆ.

ಮಾನವ ರಹಿತ ವೈಮಾನಿಕ ವಾಹನ ಮತ್ತು ಪ್ರಚಂಡ್‌'ನ ವಿಶೇಷತೆ
ಲಘು ಯುದ್ಧ ಹೆಲಿಕಾಪ್ಟರ್‌

ದೇಶೀಯ ತಂತ್ರಜ್ಞಾನ ಬಳಸಿಕೊಂಡು ಎಚ್‌ಎಎಲ್‌ (ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌) ನಿರ್ಮಿಸಿರುವ ಲಘು ಯುದ್ಧ ಹೆಲಿಕಾಪ್ಟರ್‌ಗಳನ್ನು ಭಾರತೀಯ ವಾಯುಪಡೆಗೆ ಸೋಮವಾರ ಅಧಿಕೃತವಾಗಿ ಸೇವೆಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ.

ಈ ಹೆರೋನ್ ಡ್ರೋನ್‌ಗಳ ಪತ್ತೆ ಕಾರ್ಯದ ಸಾಮರ್ಥ್ಯ ಅಭಿವೃದ್ಧಿ ಪಡಿಸಿದ ಬಳಿಕ, ನೆಲದ ಮೇಲೆ ಕಾರ್ಯಾಚರಣೆ ನಡೆಸುವ ಭೂಸೇನಾ ಪಡೆಗಳಿಗೂ ಶತ್ರುಗಳ ಅಡಗುತಾಣಗಳ ಕುರಿತು, ಅಪಾಯಗಳ ಕುರಿತು ಅತ್ಯಂತ ನಿಖರವಾದ ಮಾಹಿತಿ ಸಿಗಲು ಸಾಧ್ಯವಾಗುತ್ತದೆ.

ಪ್ರಾಜೆಕ್ಟ್ ಚೀತಾದ ಅಭಿವೃದ್ಧಿಯ ಮೂಲಕ ನೆಲದ ಆಧಾರಿತ ಕೇಂದ್ರಗಳಿಂದ ಈ ಮಾನವ ರಹಿತ ವೈಮಾನಿಕ ವಾಹನಗಳನ್ನು ಅತ್ಯಂತ ದೂರದಿಂದಲೇ ಸುಲಭವಾಗಿ ನಿರ್ವಹಿಸಲು, ನಿಯಂತ್ರಿಸಲು ಸಾಧ್ಯವಾಗುತ್ತದೆ. ಇದು ಉಪಗ್ರಹ ಆಧಾರಿತ ಸಂವಹನವನ್ನು ಬಳಸಿಕೊಳ್ಳುತ್ತದೆ.

ಹೆರೋನ್ ಯುಎವಿಗಳ ಗಸ್ತು ಸಾಮರ್ಥ್ಯವನ್ನೂ ಅಭಿವೃದ್ಧಿ ಪಡಿಸಲು ಯೋಜನೆ ಹಮ್ಮಿಕೊಂಡಿದ್ದು, ಇವನ್ನು ಭಾರತೀಯ ಭೂಸೇನೆ ಮತ್ತು ವಾಯುಪಡೆಗಳಿಗೆ ತುರ್ತು ಪರಿಸ್ಥಿತಿಯಲ್ಲಿ ಆಯುಧಗಳನ್ನು ಖರೀದಿಸಲು ಸರ್ಕಾರ ನೀಡಿದ ಅಧಿಕಾರವನ್ನು ಬಳಸಿ ಮಿಲಿಟರಿ ಘರ್ಷಣೆಗಳ ಸಂದರ್ಭದಲ್ಲಿ ಖರೀದಿಸಲಾಗಿತ್ತು.

“ಎಚ್‌ಸಿಎಲ್‌ಗಳನ್ನು ನವರಾತ್ರಿ ಉತ್ಸವದ ವೇಳೆ ಸೇನೆಗೆ ಸೇರ್ಪಡೆ ಮಾಡಿಕೊಂಡಿರುವುದು ನಿಜಕ್ಕೂ ಖುಷಿ ಕೊಟ್ಟಿದೆ. ದೇಶೀಯವಾಗಿ ಸೇನೆಯನ್ನು ಬಲವರ್ಧನೆಗೊಳಿಸುವ ಸರಕಾರದ ಸಂಕಲ್ಪ ಸಾಕಾರಕ್ಕೆ ಇದು ಸಾಕ್ಷಿಯಾಗಿದೆ,” ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ಆಗಸದಿಂದಲೇ ಕ್ಷಿಪಣಿಗಳನ್ನು ಹೊಡೆದುರುಳಿಸಬಲ್ಲ ಹಾಗೂ ಸುಮಾರು 700 ಕೆ.ಜಿಯಷ್ಟು ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವಿರುವ ಮತ್ತು ಪ್ರತಿಕೂಲ ವಾತಾವರಣದಲ್ಲೂ ಬಹುವಿಧದ ಪಾತ್ರ ನಿರ್ವಹಿಸಬಲ್ಲ ಕಾಪ್ಟರ್‌ ಇದಾಗಿದ್ದು, ಇದರ ಸೇರ್ಪಡೆಯಿಂದ ಸೇನೆಗೆ ಆನೆಬಲ ಬಂದಂತಾಗಿದೆ. ದೇಶೀಯವಾಗಿ ಸೇನೆಯನ್ನು ಆಧುನೀಕರಣಗೊಳಿಸಬೇಕೆಂಬ ಪ್ರಧಾನಿ ಮೋದಿ ಸರಕಾರದ ಸಂಕಲ್ಪದ ಫಲ ಇದಾಗಿದೆ.

ಮಾನವ ರಹಿತ ವೈಮಾನಿಕ ವಾಹನ ಮತ್ತು ಪ್ರಚಂಡ್‌'ನ ವಿಶೇಷತೆ
ಹೆರೋನ್ ಡ್ರೋನ್‌

1999ರ ಕಾರ್ಗಿಲ್‌ ಯುದ್ಧದ ಸಮಯದಲ್ಲಿ ಎತ್ತರದ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಬಲ್ಲ ಲಘು ಯುದ್ಧ ಹೆಲಿಕಾಪ್ಟರ್‌ಗಳ ಅಗತ್ಯ ಭಾರತೀಯ ವಾಯುಪಡೆಗಿತ್ತು. ಅಂದಿನಿಂದಲೂ ಸರಕಾರಗಳು ಈ ಬಗ್ಗೆ ಚಿಂತನೆ ನಡೆಸಿದ್ದವು. ಎಚ್‌ಎಎಲ್‌ ಹಾಗೂ ಐಎಎಫ್‌ಗಳು ದೇಶೀಯವಾಗಿ ಎಚ್‌ಸಿಎಲ್‌ಗಳನ್ನು ನಿರ್ಮಿಸುವ ಬಗ್ಗೆ ಸಂಶೋಧನೆ ಕೈಗೊಂಡಿದ್ದವು.

ಭಾರತದ ಬಳಿ ಅಮೆರಿಕ ನಿರ್ಮಿತ ಅಪಾಚೆ ಹೆಲಿಕಾಪ್ಟರ್ ಕೂಡ ಇವೆ. ಅವು ಇವುಗಳಿಗಿಂತಲೂ ದೊಡ್ಡದು ಮತ್ತು ಹೆಚ್ಚು ಸಮರ್ಥಶಾಲಿ. ಆದರೆ ಎಚ್‌ಎಎಲ್‌ನ ಹೆಲಿಕಾಪ್ಟರ್‌ಗಳು ನಿರ್ದಿಷ್ಟ ಪಾತ್ರಗಳನ್ನು, ಅದರಲ್ಲಿಯೂ ಮುಖ್ಯವಾಗಿ ಅಧಿಕ ಪ್ರಮಾಣದ ಪೇಲೋಡ್‌ಗಳನ್ನು ಹೊತ್ತೊಯ್ಯುವ ಬಹಳ ಎತ್ತರದ ಕಾರ್ಯಾಚರಣೆಗಳಲ್ಲಿ ಅನುಕೂಲಕರವಾಗಿದೆ. ಈ ಹೆಲಿಕಾಪ್ಟರ್‌ನ ಸಂಪೂರ್ಣ ವಿನ್ಯಾಸ ಭಾರತದ್ದು. ಅದರ ಜೋಡಣೆ ಭಾರತದ್ದು ಹಾಗೆಯೇ ಅದು ಭಾರತದ ಅಗತ್ಯಗಳನ್ನು ಪೂರೈಸುತ್ತದೆ.

ಚಾಪರ್ ಅನ್ನು ಲಡಾಖ್ ಮೇಲ್ಭಾಗದಲ್ಲಿ ಪರೀಕ್ಷೆ ನಡೆಸಲಾಗಿದೆ. ಇದು ಗಾಳಿಯಿಂದ ಗಾಳಿಗೆ ಕ್ಷಿಪಣಿಗಳ ಮೂಲಕ ಚೀನಾದ ಡ್ರೋನ್‌ಗಳನ್ನು ನಿಯಂತ್ರಿಸುತ್ತದೆ. ಹಾಗೆಯೇ ಗಾಳಿಯಿಂದ ಮೇಲ್ಮೈ ಆಂಟಿ ಟ್ಯಾಂಕ್ ಮ್ಯುನಿಷನ್‌ಗಳ ಮೂಲಕ ನೆಲದ ಮೇಲಿನ ಟ್ಯಾಂಕ್‌ಗಳನ್ನು ನಾಶಪಡಿಸಬಲ್ಲದು.

ಇದರ ವಿಶೇಷ :
*ಶಕ್ತಿಶಾಲಿ ಅವಳಿ ಎಂಜಿನ್‌ ಹೊಂದಿರುವ ಹೆಲಿಕಾಪ್ಟರ್‌ನ ತೂಕ 5.8 ಟನ್‌.
*ಗ್ಲಾಸ್‌ ಕಾಕ್‌ಪಿಟ್‌, ಕಾಂಪೊಸಿಟ್‌ ಏರ್‌ಫ್ರೇಮ್‌ ವಿನ್ಯಾಸ ಹೊಂದಿದೆ.
*700 ಕೆ.ಜಿ. ಶಸ್ತ್ರಾಸ್ತ್ರ ಹೊತ್ತೊಯ್ಯಬಲ್ಲ, ಆಗಸದಿಂದಲೇ ಕ್ಷಿಪಣಿ ಹಾರಿಸಬಲ್ಲ ಸಾಮರ್ಥ್ಯ.
*ರಾಕೆಟ್‌ ಪಾಡ್ಸ್‌, ಬಾಂಬ್‌, ಮಿಸೈಲ್‌, 20 ಎಂಎಂ. ಎಂ621 ಗನ್‌ ಸೇರಿ ಕಾಪ್ಟರ್‌ ಬತ್ತಳಿಕೆಯಲ್ಲಿ.
*ಸಿಯಾಚಿನ್‌ನಂತಹ ಪ್ರದೇಶ, ಮರುಭೂಮಿಯಲ್ಲೂ ಪ್ರಖರ ದಾಳಿ ನಡೆಸಬಲ್ಲ ಸಾಮರ್ಥ್ಯ.
*16,400 ಅಡಿ ಎತ್ತರದಲ್ಲೂ ಬಹುಬೇಗ ಟೇಕಾಫ್‌ ಆಗಬಲ್ಲದು.
*15 ಹೆಲಿಕಾಪ್ಟರ್‌ಗಳ ನಿರ್ಮಾಣಕ್ಕೆ ವ್ಯಯಿಸಲಾಗಿರುವ ಅಂದಾಜು ವೆಚ್ಚ 3,887 ಕೋಟಿ ರೂ.
*ಭಾರತೀಯ ಸೇನೆ ಹಾಗೂ ವಾಯುಪಡೆಗೆ ಬೇಕಿರುವ ಇಂತಹ ಹೆಲಿಕಾಪ್ಟರ್‌ಗಳ ಅಂದಾಜು ಸಂಖ್ಯೆ 160
ಇವುಗಳಲ್ಲಿ 95 ಭಾರತೀಯ ಸೇನೆಗೆ ಮತ್ತು 65 ವಾಯುಪಡೆಗೆ ಸಿಗಲಿವೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಅಯೋಧ್ಯೆಯ ರಾಮಮಂದಿರ

ಅಯೋಧ್ಯೆಯ ರಾಮಮಂದಿರ ಸಂಕ್ರಾಂತಿಗೆ ಪೂರ್ಣಗೊಳ್ಳಲಿದೆ

ಉಚ್ಚಿಪಿಳ್ಳ್ಯಾರ್ ಗಣೇಶನ ದೇವಾಲಯ

ಉಚ್ಚಿಪಿಳ್ಳ್ಯಾರ್ ಗಣೇಶನ ದೇವಾಲಯ