in ,

ಅಯೋಧ್ಯೆಯ ರಾಮಮಂದಿರ ಸಂಕ್ರಾಂತಿಗೆ ಪೂರ್ಣಗೊಳ್ಳಲಿದೆ

ಅಯೋಧ್ಯೆಯ ರಾಮಮಂದಿರ
ಅಯೋಧ್ಯೆಯ ರಾಮಮಂದಿರ

ಜೈ ಶ್ರೀ ರಾಮ್

ದೇಶವೇ ಎದುರು ನೋಡುತ್ತಿರುವ ಅಯೋಧ್ಯೆ ರಾಮಮಂದಿರದ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು ಶೇ.50ರಷ್ಟು ಪೂರ್ಣಗೊಂಡಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ. ಮಂದಿರ ನಿರ್ಮಾಣ ಟ್ರಸ್ಟ್ ತಿಳಿಸಿರುವ ಪ್ರಕಾರ 2024ರ ಮಕರ ಸಂಕ್ರಾಂತಿ ದಿನ ದೇವಸ್ಥಾನದ ಗರ್ಭಗುಡಿಯಲ್ಲಿ ಶ್ರೀರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. 2020ರಲ್ಲಿ ಮಂದಿರ ನಿರ್ಮಾಣ ಕಾರ್ಯ ಪ್ರಾರಂಭವಾಗಿದ್ದು 2024ರ ಅಂತ್ಯಕ್ಕೆ ಮುಗಿಯುವ ನಿರೀಕ್ಷೆ ಇದೆ.

ಅಯೋಧ್ಯೆಯ ರಾಮಮಂದಿರ ಹಿಂದೂ ದೇವಾಲಯವಾಗಿದ್ದು, ಇದನ್ನು ಭಾರತದ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ರಾಮ ಜನ್ಮಭೂಮಿಯ ಪವಿತ್ರ ಯಾತ್ರಾ ಸ್ಥಳದಲ್ಲಿದೆ. ೦೬-೦೮-೨೦೧೮ ರಂದು ಭಾರತದ ಪ್ರಧಾನಿ ನರೇಂದ್ರಮೋದಿ ದೇವಾಲಯದ ಶಿಲಾನ್ಯಾಸವನ್ನು ನೆರವೇರಿಸಿದರು. ಹಿಂದೂಗಳು ಈ ಸ್ಥಳವು ರಾಮನ ಜನ್ಮಸ್ಥಳವೆಂದು ನಂಬುತ್ತಾರೆ, ರಾಮ ವಿಷ್ಣುವಿನ ಏಳನೇ ಅವತಾರ ಎಂದು ಪೂಜಿಸುತ್ತಾರೆ. ೧೫೨೮ ರಲ್ಲಿ ಮೊಘಲರು ರಾಮಮಂದಿರವನ್ನು ಕೆಡವಿ ಬಾಬರಿ ಮಸೀದಿಯನ್ನು ನಿರ್ಮಿಸಿದರು. ರಾಮಜನ್ಮಭೂಮಿಯ ಸ್ಥಳದ ಬಗೆಗೆ ಅನೇಕ ವಿವಾದಗಳು ನಡೆದವು. ೧೯೯೨ ರಲ್ಲಿ ಕರಸೇವಕರ ಗುಂಪು ಮಸೀದಿಯನ್ನು ಕೆಡವಿತು.

ಈ ದೇವಾಲಯದ ನಿರ್ಮಾಣದ ಹೊಣೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ್ದು. ಗುಜರಾತ್‌ನ ಸೋಮಪುರ ಕುಟುಂಬ ಈ ದೇವಾಲಯವನ್ನು ವಿನ್ಯಾಸಗೊಳಿಸಿದೆ.

ಅಯೋಧ್ಯೆಯ ರಾಮಮಂದಿರ ಸಂಕ್ರಾಂತಿಗೆ ಪೂರ್ಣಗೊಳ್ಳಲಿದೆ
ಕಲ್ಲಿನ ಕೆತ್ತನೆ ಚಿತ್ರಗಳು

ವಿಷ್ಣು ದೇವರ ಅವತಾರವೆಂದು ಪರಿಗಣಿಸಲ್ಪಟ್ಟ ರಾಮನು ವ್ಯಾಪಕವಾಗಿ ಪೂಜಿಸಲ್ಪಡುವ ಹಿಂದೂ ದೇವತೆ . ಪ್ರಾಚೀನ ಭಾರತೀಯ ಮಹಾಕಾವ್ಯವಾದ ರಾಮಾಯಣದ ಪ್ರಕಾರ, ರಾಮನು ಅಯೋಧ್ಯೆಯಲ್ಲಿ ಜನಿಸಿದರು. ಇದನ್ನು ರಾಮ್ ಜನ್ಮಭೂಮಿ ಅಥವಾ ರಾಮ್ ಲಲ್ಲಾ (ರಾಮನ ಬಾಲರೂಪ) ಅವರ ಜನ್ಮಸ್ಥಳ ಎಂದು ಕರೆಯಲಾಯಿತು. ೧೫ ನೇ ಶತಮಾನದಲ್ಲಿ ಮೊಘಲರು ರಾಮ್ ಜನ್ಮಭೂಮಿಯಲ್ಲಿ ಬಾಬರಿ ಮಸೀದಿ ಎಂಬ ಮಸೀದಿಯನ್ನು ನಿರ್ಮಿಸಿದರು. ಹಿಂದೂ ದೇವಾಲಯವನ್ನು ಧ್ವಂಸ ಮಾಡಿದ ನಂತರ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹಿಂದೂಗಳು ಹೋರಾಟವನ್ನು ಆರಂಭಿಸಿದರು. ೧೮೫೦ ರ ದಶಕದಲ್ಲಿ ಪುನಃ ಹಿಂಸಾತ್ಮಕ ವಿವಾದ ಉಂಟಾಯಿತು.

ವಿಶ್ವಹಿಂದೂಪರಿಷತ್ ರಾಮಜನ್ಮಭೂಮಿಯ ಶಿಲಾನ್ಯಾಸವನ್ನು ನಡೆಸಲು ೧೯೮೦ ರ ದಶಕದಲ್ಲಿ ಪ್ರಯತ್ನಗಳನ್ನು ಆರಂಭಿಸಿತು. ಅಲಹಾಬಾದ್ ಹೈಕೋರ್ಟ್ ನ ಲಖನೌ ಪೀಠ ಶಿಲಾನ್ಯಾಸಕ್ಕೆ ತಡೆಯಾಜ್ಞೆಯನ್ನು ನೀಡಿತು. ನಂತರ ವಿವಾದಿತವಲ್ಲದ ಜಾಗದಲ್ಲಿ ಶಿಲಾನ್ಯಾಸ ನಡೆಸಲು ಅನುಮತಿ ನೀಡಲಾಯಿತು. ಆಗಿನ ಗೃಹಸಚಿವ ಬೂಟಾಸಿಂಗ್ ವಿ.ಹೆಚ್ ಪಿ ನಾಯಕ ಅಶೋಕ ಸಿಂಘಲ್ ರಿಗೆ ಔಪಚಾರಿಕವಾಗಿ ಅನುಮತಿ ನೀಡಿದರು. ನವಂಬರ್ ೯ ರ೯೮೯ ರಂದು ವಿ.ಹೆಚ್.ಪಿ ನಾಯಕರು ಹಾಗೂ ಸಾಧುಗಳ ಗುಂಪು ಹಳ್ಳ ತೆಗೆದು ಅಡಿಪಾಯ ಹಾಕಿತು. ಗರ್ಭಗುಡಿ ವಿವಾದಿತ ಸ್ಥಳದಲ್ಲಿತ್ತು. ಬಿಹಾರ ಮೂಲದ ದಲಿತ ನಾಯಕ ಶಿಲಾನ್ಯಾಸ ಮಾಡಿದ ಮೊದಲ ಜನರಲ್ಲಿ ಒಬ್ಬರಾದರು.

೬ ಡಿಸೆಂಬರ್ ೧೯೯೨ ರಂದು ವಿಶ್ವ ಹಿಂದೂ ಪರಿಷತ್ ಮತ್ತು ಭಾರತೀಯ ಜನತಾ ಪಕ್ಷವು ಕರಸೇವಕರು ಎಂದು ಕರೆಯಲ್ಪಡುವ ೧೫೦೦೦೦ ಸ್ವಯಂಸೇವಕರನ್ನು ಒಳಗೊಂಡ ಸ್ಥಳದಲ್ಲಿ ಶೋಭಾಯಾತ್ರೆ ಆಯೋಜಿಸಿತು. ಶೋಭಾಯಾತ್ರೆ ಹಿಂಸಾತ್ಮಕವಾಯಿತು, ಕರಸೇವಕರು ಭದ್ರತಾ ಪಡೆಗಳನ್ನೂ ಲೆಕ್ಕಿಸದೆ ಬಾಬ್ರಿ ಮಸೀದಿಯನ್ನು ಉರುಳಿಸಿದರು. ತದನಂತರ ಭಾರತದ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಹಲವಾರು ತಿಂಗಳುಗಳ ಗಲಭೆಯಾಯಿತು, ಕನಿಷ್ಠ ೨೦೦೦ ಜನ ತಮ್ಮ ಪ್ರಾಣಗಳನ್ನು ಕಳೆದುಕೊಂಡರು.

ಮುಂದಿನ ದಿನಗಳಲ್ಲಿ ವಿವಾದಾತ್ಮಕ ಭೂಮಿಯ ಕುರಿತಾಗಿ ಸುದೀರ್ಘ ಕಾನೂನು ವಿವಾದಗಳು ನಡೆದವು. ದೇವಾಲಯದ ದೇವತೆಯಾದ ರಾಮ್ ಲಲ್ಲಾ ಹೆಸರಿನಲ್ಲಿ 1989 ರಲ್ಲಿ ದಾವೆ ಹೂಡಲಾಗಿತ್ತು. ಹಿರಿಯ ವಿಎಚ್‌ಪಿ ನಾಯಕ ತ್ರಿಲೋಕಿ ನಾಥ್ ಪಾಂಡೆ ರಾಮಲಲ್ಲಾನ ಪ್ರತಿನಿಧಿಯಾಗಿದ್ದರು. ಕೆ. ಪರಾಶರನ್ ರಾಮಲಲ್ಲಾನ ಪರವಾಗಿ ವಾದ ಮಂಡಿಸಿದವರಲ್ಲಿ ಪ್ರಮುಖರು. ಅಯೋಧ್ಯೆ ವಿವಾದದ ಕುರಿತು ೨೦೧೯ ನವಂಬರ್ ೯ ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ವಿವಾದಿತ ಭೂಮಿಯನ್ನು ಸರ್ಕಾರ ರಚಿಸಿದ ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಹಸ್ತಾಂತರಿಸಲು ನಿರ್ಧರಿಸಲಾಯಿತು. ೨೦೨೦ ರ ಫೆಬ್ರವರಿ ೫ ರಂದು ಪ್ರಧಾನಮಂತ್ರಿ ಸಚಿವಾಲಯವು ದೇವಾಲಯವನ್ನು ನಿರ್ಮಿಸುವ ಯೋಜನೆಯನ್ನು ಅಂಗೀಕರಿಸಿದೆ ಎಂದು ಸಂಸತ್ತಿನಲ್ಲಿ ಘೋಷಿಸಲಾಯಿತು.

ಅಯೋಧ್ಯೆಯ ರಾಮಮಂದಿರ ಸಂಕ್ರಾಂತಿಗೆ ಪೂರ್ಣಗೊಳ್ಳಲಿದೆ
ರಾಮ ಮಂದಿರ ನಿರ್ಮಾಣ ಕಾರ್ಯ

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಾರ್ಚ್ ೨೦೨೦ ರಲ್ಲಿ ರಾಮ್ ದೇವಾಲಯದ ಮೊದಲ ಹಂತದ ನಿರ್ಮಾಣವನ್ನು ಪ್ರಾರಂಭಿಸಿತು. ಆದಾಗ್ಯೂ, ಭಾರತದಲ್ಲಿ ಕರೋನಾ ಸಾಂಕ್ರಾಮಿಕ ಲಾಕ್‌ಡೌನ್ ಮತ್ತು ೨೦೨೦ ರ ಚೀನಾ-ಭಾರತ ಮಾತಿನ ಚಕಮಕಿ ನಿರ್ಮಾಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು. ನಿರ್ಮಾಣ ಸ್ಥಳದ ನೆಲಮಟ್ಟದಲ್ಲಿ ಮತ್ತು ಉತ್ಖನನದ ಸಮಯದಲ್ಲಿ ನೆಲದ ಅಡಿಭಾಗದಲ್ಲಿ ಶಿವಲಿಂಗ, ಕಂಬಗಳು ಮತ್ತು ಮುರಿದ ವಿಗ್ರಹಗಳು ಕಂಡುಬಂದವು. ಮಾರ್ಚ್ ೨೫, ೨೦೨೦ ರಂದು ರಾಮವಿಗ್ರಹವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಮ್ಮುಖದಲ್ಲಿ ತಾತ್ಕಾಲಿಕ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.

ರಾಮಮಂದಿರದ ನಿರ್ಮಾಣದ ಅಂಗವಾಗಿ ವಿಶ್ವ ಹಿಂದೂ ಪರಿಷತ್ ವಿಜಯ ಮಹಾಮಂತ್ರ ಜಪಾನುಷ್ಠಾನವನ್ನು ಏರ್ಪಡಿಸಿತು. ರಾಮಭಕ್ತರು ಶ್ರೀ ರಾಮ್, ಜೈ ರಾಮ್, ಜೈ ಜೈ ರಾಮ್, ಎಂದು ೨೦೨೦ ರ ಏಪ್ರಿಲ್ ೬ ರಂದು ಜಪಿಸುತ್ತಿದ್ದರು. ದೇವಾಲಯದ ನಿರ್ಮಾಣಕಾಲದಲ್ಲಿನ ಸಂಕಷ್ಟಗಳ ನಿವಾರಣೆಗಾಗಿ ಜಪಾನುಷ್ಠಾನವನ್ನು ಆಯೋಜಿಸಲಾಗಿತ್ತು. ಲಾರ್ಸೆನ್ ಆ್ಯಂಡ್ ಟೌಬ್ರೊ ಸಂಸ್ಥೆ ದೇವಾಲಯನಿರ್ಮಾಣದ ಗುತ್ತಿಗೆ ತೆಗೆದುಕೊಂಡಿದೆ.

ಮುಂದಿನ ವರ್ಷದ ಸಂಕ್ರಾಂತಿ ವೇಳೆಗೆ ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ ಎಂದು ಶ್ರೀರಾಮ ಮಂದಿರ ನಿರ್ಮಾಣ ಸಮಿತಿ ಕೇವಲ ವಾರದ ಹಿಂದಷ್ಟೇ ತಿಳಿಸಿತ್ತು.

ಈ ಬಗ್ಗೆ ಮಾತನಾಡಿದ್ದ ದೇವಸ್ಥಾನ ನಿರ್ಮಾಣ ಸಮಿತಿಯ ಸದಸ್ಯರಾದ ಗೋಪಾಲ್ ಅವರು, ಈಗಾಗಲೇ ದೇವಾಲಯದ ಅಡಿಪಾಯದ ಕೆಲಸ ಪೂರ್ಣಗೊಂಡಿದ್ದು, ಅಡಿಪಾಯದ ಮೇಲೆ ನೆಲದಿಂದ ಸುಮಾರು 20 ಅಡಿ ಎತ್ತರದಷ್ಟಿರುವ ದೇವಾಲಯದ ನೆಲಹಾಸು ಅಳವಡಿಕೆ ಕಾಮಗಾರಿ ಸಾಗುತ್ತಿದೆ.

ದೇವಸ್ಥಾನದ ನೆಲಹಾಸು ಮುಗಿದ ನಂತರ ದೇವಾಲಯದ ನೆಲ ಅಂತಸ್ತಿನ ನಿರ್ಮಾಣ ಭರದಿಂದ ಆರಂಭವಾಗಲಿದೆ. 2024ರ ಸಂಕ್ರಾಂತಿಯ ಹೊತ್ತಿಗೆ ಶ್ರೀರಾಮನ ದೇಗುಲದಲ್ಲಿ ಬಾಲರಾಮನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದರು.

ನೆಲಮಹಡಿಯ ಕಾಮಗಾರಿಯನ್ನು 2024ರಲ್ಲೇ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ. ಆ ವರ್ಷದ ಸಂಕ್ರಾಂತಿಯಂದು ರಾಮನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ, ಸಾರ್ವಜನಿಕರಿಗೆ ನೆಲಮಹಡಿಯ ರಾಮಮಂದಿರಕ್ಕೆ ಪ್ರವೇಶ ಕಲ್ಪಿಸುವ ಇರಾದೆಯಿದೆ. ಇದಾದ ನಂತರ, ಮತ್ತೊಂದು ವರ್ಷದ ಅವಧಿಯಲ್ಲಿ ರಾಮಮಂದಿರದ ಮೊದಲ ಅಂತಸ್ತಿನ ಕೆಲಸವೂ ಪೂರ್ಣಗೊಂಡು ಸಂಪೂರ್ಣ ರಾಮಮಠವನ್ನು ಭಕ್ತರಿಗಾಗಿ ಮುಕ್ತಗೊಳಿಸಲಾಗುತ್ತದೆ ಎಂದು ತಿಳಿಸಿದ್ದರು.

ಇತ್ತ ದೇಗುಲದ ನೆಲಹಾಸಿನ ಕೆಲಸ ಪೂರ್ಣಗೊಳ್ಳುತ್ತಿದ್ದಂತೆ, ಬನ್ಸಿ ಪಹರ್ಪುರ್ ಕಲ್ಲುಗಳ ಕೆತ್ತನೆಯೂ ಪೂರ್ಣಗೊಂಡು ರಾಮ ಮಂದಿರದ ಮುಖ್ಯ ಕಟ್ಟಡ ನಿರ್ಮಾಣವೂ ಆರಂಭವಾಗುತ್ತದೆ. ಅದರ ಜೊತೆಯಲ್ಲೇ ನೆಲ ಅಂತಸ್ತಿನಲ್ಲಿ ಬಾಲರಾಮನ ವಿಗ್ರಹವನ್ನು ಪ್ರತಿಷ್ಠಾಪನೆಗೊಳಿಸಲಾಗುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕಾಮಾಲೆ ರೋಗಲಕ್ಷಣ

ಕಾಮಾಲೆ ರೋಗಲಕ್ಷಣಗಳು

ಪ್ರಚಂಡ್‌'ನ ವಿಶೇಷತೆ

ಮಾನವ ರಹಿತ ವೈಮಾನಿಕ ವಾಹನ ಮತ್ತು ಪ್ರಚಂಡ್‌’ನ ವಿಶೇಷತೆ