ಸೇನೆಯ ಮೂಲಗಳ ಪ್ರಕಾರ, ಆಯ್ದ ಘಟಕದ ಸುಮಾರು 25 ಪ್ರತಿಶತ ಲಘು ವಾಹನಗಳು, 38 ಪ್ರತಿಶತ ಬಸ್‌ಗಳು ಮತ್ತು 48 ಪ್ರತಿಶತ ಮೋಟಾರ್‌ಸೈಕಲ್‌ಗಳು ಇವಿಗಳಾಗಿ ಬದಲಾಗುತ್ತವೆ.
ಸೇನಾ ಘಟಕಗಳಿಗಾಗಿ ಎಲೆಕ್ಟ್ರಿಕ್ ವಾಹನ ಖರೀದಿಗೆ ನಿರ್ಧಾರ ಮಾಡಲಾಗಿದ್ದು, ಶೇ.25 ಲಘು ವಾಹನ, ಶೇ.38 ಬಸ್, ಶೇ.48 ಬೈಕ್ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಪ್ಲ್ಯಾನ್ ಮಾಡಲಾಗಿದೆ. ಕಾರ್ಬನ್ ಹೊರಸೂಸುವಿಕೆ ತಗ್ಗಿಸಲು ಮತ್ತು ಭಾರತೀಯ ಸೇನೆಯು ಸೈನ್ಯ ಕಾರ್ಯಾಚರಣೆಯ ಬದ್ಧತೆಗಳಿಗೆ ಅನುಗುಣವಾಗಿ ಫ್ಲೀಟ್‌ನಲ್ಲಿ EV ಗಳನ್ನು ಈ ಕ್ರಮ ಮಾಡಲಾಗಿದ್ದು, ಶೀಘ್ರದಲ್ಲೇ ಎಲೆಕ್ಟ್ರಿಕ್ ವಾಹನ ಖರೀದಿಗೆ ಟೆಂಡರ್ ಹಾಕಲಾಗಿದೆ.
ದೂರಸ್ಥ ಉದ್ಯೋಗ ಸ್ಥಳಗಳು ಮತ್ತು ಕಾರ್ಯಾಚರಣೆಯ ಬದ್ಧತೆಗಳನ್ನು ಒಳಗೊಂಡಂತೆ ಭಾರತೀಯ ಸೇನೆಯಲ್ಲಿ ಇವಿಗಳ ಇಂಡಕ್ಷನ್‌ಗೆ ಅಗತ್ಯವಿರುವ ವಿವಿಧ ಅಂಶಗಳನ್ನು ಒಳಗೊಂಡಿದೆ. ವಿವಿಧ ಭೂಪ್ರದೇಶಗಳಲ್ಲಿ EVಗಳ ಅಗತ್ಯತೆ ಮತ್ತು ಉದ್ಯೋಗಾವಕಾಶವನ್ನು ಗಮನದಲ್ಲಿಟ್ಟುಕೊಂಡು ಪರಿವರ್ತನೆ ಮಾಡಲಾಗುತ್ತಿದೆ.
ದೇಶಾದ್ಯಂತ ಸಾಕಷ್ಟು ಚಾರ್ಜಿಂಗ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗುವುದು, ಕಚೇರಿಗಳು ಮತ್ತು ವಸತಿ ಸಂಕೀರ್ಣಗಳ ಹೊರಗಿನ ಪಾರ್ಕಿಂಗ್ ಸ್ಥಳಗಳಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಹೊಂದಿದೆ. ಈ EV ಚಾರ್ಜಿಂಗ್ ಸ್ಟೇಷನ್‌ಗಳು ಕನಿಷ್ಠ ಒಂದು ವೇಗದ ಚಾರ್ಜರ್ ಮತ್ತು ಎರಡರಿಂದ ಮೂರು ನಿಧಾನ ಚಾರ್ಜರ್‌ಗಳನ್ನು ಹೊಂದಿರುತ್ತದೆ.
ಈ ಇವಿಗಳ ಪರಿಸ ಮಾಲಿನ್ಯವನ್ನು ತಡೆಗಟ್ಟಲು ಅಗತ್ಯ ಕ್ರಮವಾಗಿದೆ ಇಂಗಾಲದ ಬಿಡುಗಡೆಯನ್ನು ಶೂನ್ಯಕ್ಕೆ ತರಲು ಹಂತ ಹಂತವಾಗಿ ಸೋಲಾರ್ ಪ್ಯಾನಲ್ ಚಾರ್ಜಿಂಗ್, ಚಾರ್ಜಿಂಗ್ ಸ್ಟೇಷನ್‌ಗಳ ಜೊತೆಗೆ ಪ್ರತಿ ನಿಲ್ದಾಣಕ್ಕೆ ಇವಿಗಳನ್ನು ಸ್ಥಾಪಿಸಲಾಗುತ್ತದೆ. ಭಾರತೀಯ ಸೇನೆಯ ಈ ಕ್ರಮವು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಭಾರತದ ಪ್ರಯತ್ನಗಳಿಗೆ ಕೊಡುಗೆ ನೀಡುತ್ತದೆ.

ಇಂಗಾಲ ಹೊರಸೂಸುವಿಕೆಯನ್ನು ತಗ್ಗಿಸುವ ಸರ್ಕಾರದ ನಿರ್ಧಾರಕ್ಕೆ ಪೂರಕವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಜಾರಿಗೊಳಿಸಲು ನಾನಾ ಕ್ರಮ ಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರ, ಈಗ ಸೇನೆಯಲ್ಲೂ ‘ವಿದ್ಯುತ್ ಚಾಲಿತ ವಾಹನ’ಗಳ ಮಂತ್ರ ಪಠಿಸಲು ನಿರ್ಧರಿಸಿದೆ. ಆಯ್ದ ಸೇನಾ ಘಟಕಗಳಿಗಾಗಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಭಾರತೀಯ ಸೇನೆ ನಿರ್ಧರಿಸಿದೆ. ಆಯ್ದ ಸೇನಾ ಘಟಕಗಳಲ್ಲಿ ಹಾಲಿ ಇರುವ ಶೇ. 25 ರಷ್ಟು ಲಘು ವಾಹನಗಳು, ಶೇ. 38 ರಷ್ಟು ಬಸ್ ಹಾಗೂ ಶೇ. 48 ರಷ್ಟು ಮೋಟಾರು ಸೈಕಲ್‌ಗಳನ್ನು ಎಲೆಕ್ಟ್ರಿಕ್ ವಾಹನಗಳೊಂದಿಗೆ ಬದಲಾಯಿಸುವ ಯೋಜನೆಯಿದೆ.
ಇಂಗಾಲಕ್ಕೆ ಕಡಿವಾಣ :
‘ಫಾಸಿಲ್ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಕಾರ್ಬನ್ ಹೊರಸೂಸುವಿಕೆಯನ್ನು ತಗ್ಗಿಸುವ ಸರ್ಕಾರದ ನಿರ್ಧಾರಕ್ಕೆ ಬದ್ಧವಾಗಿ ಭಾರತೀಯ ಸೇನೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಸೇರ್ಪಡೆ ಮಾಡುವ ಮಾರ್ಗಸೂಚಿಯನ್ನು ಸೇನೆ ರೂಪಿಸಿದೆ. ಎಲೆಕ್ಟ್ರಿಕ್ ವಾಹನಗಳನ್ನು ಸೇನೆಯಲ್ಲಿ ಪರಿಚಯಿಸುವ ನಿರ್ಧಾರವನ್ನು ಅಂತಿಮಗೊಳಿಸುವ ಮೊದಲು ಭಾರತೀಯ ಸೇನೆಯ ಉದ್ಯೋಗಶೀಲತೆ, ದುರ್ಗಮ ಸ್ಥಳದಲ್ಲಿ ಕಾರ್ಯನಿರ್ವಹಣೆ ಹಾಗೂ ಕಾರ್ಯಾಚರಣೆಯ ಬದ್ಧತೆ ಮೊದಲಾದ ವಿವಿಧ ವಿಷಯಗಳನ್ನು ಪರಿಗಣಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಾರ್ಜಿಂಗ್ ಸೌಲಭ್ಯ :
‘ಸೇನಾ ಘಟಕಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಸೇರ್ಪಡೆ ಮಾಡಿಕೊಳ್ಳುವ ಮೊದಲು ಅದನ್ನು ಬೆಂಬಲಿಸುವ ಇವಿ ಚಾರ್ಜಿಂಗ್ ಪಾಯಿಂಟ್‌ಗಳು ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳನ್ನು ನಿರ್ಮಾಣ ಮಾಡಲಾಗುವುದು. ಪ್ರತಿ ಇವಿ ಚಾರ್ಜಿಂಗ್ ನಿಲ್ದಾಣದಲ್ಲಿ ಕನಿಷ್ಠ ಒಂದು ಫಾಸ್ಟ್ ಚಾರ್ಜರ್ ಹಾಗೂ 2-3 ನಿಧಾನ ಚಾರ್ಜರ್‌ಗಳಿರಲಿವೆ. ಇದಲ್ಲದೇ ಎಲೆಕ್ಟ್ರಿಕ್ ಸರ್ಕ್ಯೂಟ್ ಕೇಬಲ್ ಹಾಗೂ ಸಮರ್ಪಕ ಲೋಡ್ ಹೊರುವ ಸಾಮರ್ಥ್ಯವುಳ್ಳ ಟ್ರಾನ್ಸ್‌ಫಾರ್ಮರ್‌ಗಳನ್ನು ಇವಿ ಚಾರ್ಜಿಂಗ್ ನಿಲ್ದಾಣದಲ್ಲಿ ಅಭಿವೃದ್ಧಿ ಪಡಿಸಲಾಗುವುದು’ ಎಂದು ಹೇಳಿದ್ದಾರೆ.

ಇದಲ್ಲದೆ ಸೇನೆಯು ಸೌರ ಪ್ಯಾನೆಲ್ ಚಾರ್ಜಿಂಗ್ ಘಟಕಗಳನ್ನು ನಿರ್ಮಾಣ ಮಾಡುವ ಯೋಜನೆ ಹಮ್ಮಿಕೊಂಡಿದ್ದು, ಹಂತ ಹಂತವಾಗಿ ಈ ಯೋಜನೆ ಅನುಷ್ಠಾನಕ್ಕೆ ಮುಂದಾಗಲಿದೆ. ಸದ್ಯದ ಯೋಜನೆಯ ಪ್ರಕಾರ ಸೇನೆಯಲ್ಲಿರುವ ಬಸ್‌ಗಳ ಕೊರತೆಯನ್ನು ನೀಗಿಸಲು ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಲಾಗುವುದು. ಈ ನಿಟ್ಟಿನಲ್ಲಿ ಶೀಘ್ರವೇ 60 ಬಸ್‌ಗಳು ಹಾಗೂ 24 ಫಾಸ್ಟ್ ಚಾರ್ಜರ್‌ಗಳ ಖರೀದಿಯ ಟೆಂಡರ್ ಆಹ್ವಾನಿಸಲಾಗುವುದು ಎಂದಿದ್ದಾರೆ.
ಸರ್ಕಾರದ ಹಸಿರು ಉಪಕ್ರಮಗಳ ಅನುಷ್ಠಾನದ ನಿಟ್ಟಿನಲ್ಲಿ ಬದಲಾಗುತ್ತಿರುವ ಪರಿಸರಕ್ಕೆ ಹೊಂದಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಇನ್ನೋರ್ವ ಅಧಿಕಾರಿ ತಿಳಿಸಿದ್ದಾರೆ. ಏಪ್ರಿಲ್ ತಿಂಗಳಿನಲ್ಲಿ ಸೇನೆಯು ಲಭ್ಯವಿರುವ ಎಲೆಕ್ಟ್ರಿಕ್ ವಾಹನಗಳ ಪ್ರದರ್ಶನವನ್ನು ನಡೆಸಿತ್ತು. ಇದರಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕರಾದ ಟಾಟಾ ಮೋಟರ್ಸ್, ಪರ್ಫೆಕ್ಟ್ ಮೆಟಲ್ ಇಂಡಸ್ಟ್ರೀಸ್, ರಿವೋಲ್ಟ್ ಮೋಟರ್ಸ್ ಮೊದಲಾದ ಕಂಪನಿಗಳು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ತಮ್ಮ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಮಾಹಿತಿ ನೀಡಿದ್ದರು.
ಧನ್ಯವಾದಗಳು.
GIPHY App Key not set. Please check settings