in

ನಕ್ಷತ್ರಗಳ ಹುಟ್ಟು ಸಾವು

ನಕ್ಷತ್ರಗಳ ಹುಟ್ಟು ಸಾವು
ನಕ್ಷತ್ರಗಳ ಹುಟ್ಟು ಸಾವು

ನಕ್ಷತ್ರವೊಂದು ಹುಟ್ಟುವುದು ಅನೇಕ ಸಹಸ್ರ ಸಂವತ್ಸರಗಳ ಕ್ರಿಯೆ. ಈ ಕ್ರಿಯೆ ಕೆಲವೇ ಹಂತಗಳಲ್ಲಿ ಸಾಗುತ್ತವೆ. ಸೂರ್ಯನೇ ಭೂಮಿಗೆ ಹತ್ತಿರದ ನಕ್ಷತ್ರ. ಅದು ಒಂದು ಮಧ್ಯಮ ಗಾತ್ರದ ತಾರೆ ತನ್ನ ಗುರುತ್ವದಿಂದಲೇ ಒಟ್ಟುಗೂಡಿದ ಪ್ಲಾಸ್ಮಾದ ಹೊಳೆಯುವ ಗೋಳ. ಇತರ ಅನೇಕ ನಕ್ಷತ್ರಗಳು ಭೂಮಿಯಿಂದ ಬರಿಗಣ್ಣಿಗೆ ರಾತ್ರಿ ಸಮಯದಲ್ಲಿ ಅಪಾರ ವೇಗದ ಚಲನೆ ಇದ್ದರೂ ಹೊಳೆಯುವ ಆಕಾಶದಲ್ಲಿ ಸ್ಥಿರ ಬಂದುಗಳಂತೆ ಕಾಣಿಸುತ್ತವೆ. ಕಾರಣ ಅವು ಭೂಮಿಯಿಂದ ಅಪಾರ ದೂರ ಇವೆ.
ನಕ್ಷತ್ರದ ಮೊದಲ ರೂಪ ಜ್ಯೋತಿರ್ಮೇಘ. ಈ ಜ್ಯೋತಿರ್ಮೇಘವು ಧೂಳು, ಜಲಜನಕ, ಹೀಲಿಯಮ್ ಮತ್ತು ಇತರ ಅಯಾನೀಕೃತ ಅನಿಲಗಳ ಒಂದು ಅಂತರತಾರಾ ಮೋಡ. ಒಂದು ನಕ್ಷತ್ರದ ಜೀವನದ ಆರಂಭ-ಜನನವು ಜ್ಯೋತಿರ್ಮೇಘದ ಕುಸಿತದಿಂದ ಆಗುತ್ತದೆ. ಜ್ಯೋತಿರ್ಮೇಘವು ಭಾರವಾದ ಮೂಲವಸ್ತುಗಳಾದ ಹೀಲಿಯಂ ಮತ್ತು ಪ್ರಾಥಮಿಕವಾಗಿ ಅತ್ಯಲ್ಪ ಪ್ರಮಾಣದಲ್ಲಿ ಜಲಜನಕವನ್ನು ಒಳಗೊಂಡಿರುತ್ತದೆ. ಯಾವಾಗ ನಾಕ್ಷತ್ರಿಕ ಅನಿಲರೋಪದ ಜ್ಯೋತಿರ್ಮೇಘದ ಒಳಭಾಗವು ಸಾಕಷ್ಟು ದಟ್ಟವಾದ ಗುರುತ್ವದ ಕಾರಣ ಕುಸಿತ ಆರಂಭವಾದಾಗ, ಪರಮಾಣು ಸಮ್ಮಿಳನ ಮೂಲಕ ಹೈಡ್ರೋಜನ್ ತಡೆಯಿಲ್ಲದೆ ಹೀಲಿಯಂ ಆಗಿ ಪರಿವರ್ತಿತವಾಗುತ್ತದೆ. ಈ ಪರಿವರ್ತನೆ ಪ್ರಕ್ರಿಯೆಯಲ್ಲಿ ಶಕ್ತಿಯು ಬಿಡುಗಡೆ ಆಗುತ್ತದೆ. ನಕ್ಷತ್ರದ ಆಂತರಿಕ ಭಾಗದಲ್ಲಿ ಉಳಿದ ವಿಕಿರಣ ಮತ್ತು ಸಂವಾಹಕ ಶಾಖದ ವರ್ಗಾವಣೆಯ ವಿಧಾನಗಳ ಮೂಲಕ ಕೇಂದ್ರ ಬೀಜದಿಂದ (ಕೋರ್) ಬಿಡುಗಡೆಯಾದ ಶಕ್ತಿಯನ್ನು ದೂರ ಒಯ್ಯುತ್ತದೆ. ನಕ್ಷತ್ರದ ಆಂತರಿಕ ಒತ್ತಡ ಅದರ ಗುರುತ್ವದಿಂದ ಅದು ಮತ್ತಷ್ಟು ಕುಸಿತ ಉಂಟಾಗುವುದನ್ನು ತಡೆಯುತ್ತದೆ. ಯಾವಾಗ ಅಂತರಂಗದಲ್ಲಿ ಜಲಜನಕ ಇಂಧನ ಬರಿದಾಗಿರುತ್ತದೆಯೋ ಆಗ ದ್ರವ್ಯರಾಶಿ ಸೂರ್ಯನ 0.4 ರಷ್ಟು ಹೆಚ್ಚಿನ ಪ್ರಮಾಣದ್ದಾಗುತ್ತದೆಯೋ, ಆಗ ಅದು ಕೆಂಪು ದೈತ್ಯ ಆಗಲು ಹಿಗ್ಗುತ್ತದೆ. ನಕ್ಷತ್ರ ಕೆಲವು ಸಂದರ್ಭಗಳಲ್ಲಿ, ಬೀಜದ ಭಾರವಾದ ದ್ರವ್ಯರಾಶಿಯನ್ನು ಒಳಬೀಜದ ಸುತ್ತಲೂ ತೊಗಟೆ ಅಥವಾ ಚಿಪ್ಪುಗಳನ್ನಾಗಿ ಪರಿವರ್ತಿಸುತ್ತದೆ. ಹೀಗೆ ಅದು ಒಂದು ದೈತ್ಯ ಅಂತರತಾರಾ ಆಣ್ವಿಕ ಮೋಡದ ಗುರುತ್ವ ಕುಸಿತದಿಂದ ಉಂಟಾಗುವುದು.

ಒಂದು ಭ್ರೂಣನಕ್ಷತ್ರ ಒಂದು ಚಿಕ್ಕ ನಕ್ಷತ್ರ. ಅದು ಪೋಷಕ ಆಣ್ವಿಕ ಮೋಡವನ್ನು ಒಟ್ಟಾಗಿ ಜೋಡಿಸಲು ಆರಂಭಿಸಿರುತ್ತದೆ. ಭ್ರೂಣಾವಸ್ತೆಯ ಹಂತದ ನಾಕ್ಷತ್ರಿಕ ವಿಕಸನ ಪ್ರಕ್ರಿಯೆಯಲ್ಲಿ ಮೊದಲ ಹಂತವಾಗಿದೆ. ಒಂದು ಸೌರ ದ್ರವ್ಯರಾಶಿಯ ನಕ್ಷತ್ರವು ಅದರ ವಿಕಸನಕ್ಕೆ ತೆಗೆದುಕೊಳ್ಳುವ ಕಾಲ 1,000,000 ವರ್ಷಗಳ ಅವಧಿಯದ್ದಾಗಿರುತ್ತದೆ. ಈ ಹಂತವು ಆಣ್ವಿಕ ಮೋಡದ ಮೊದಲ ಸ್ವಯಂ ಗುರುತ್ವ ಬಲದಿಂದ ಕುಸಿದಾಗ ಆರಂಭವಾಗುತ್ತದೆ. ಈ ಭ್ರೂಣ ತಾರೆ (ಪ್ರೋಟೊಸ್ಟಾರ್) ಒಳಬೀಳುವ ಅನಿಲವನ್ನು ಮತ್ತೆ ಹೊರ ಚಿಮ್ಮುತ್ತದೆ ಮತ್ತು ನಂತರ ಕಣ್ಣಿಗೆ ಕಾಣುವ ‘ಪೂರ್ವ ಮುಖ್ಯ ಅನುಕ್ರಮ ತಾರೆ’ ಆಗುವುದು. ನಂತರ ಒಂದು ಗೋಚರ ಪ್ರಧಾನ ಅನುಕ್ರಮ ತಾರೆಯಾಗಿ ಈ ಸರಣಿ ಕ್ರಿಯೆ ಕೊನೆಗೊಳ್ಳುತ್ತದೆ.

ನಕ್ಷತ್ರಗಳ ಹುಟ್ಟು ಸಾವು
ನಕ್ಷತ್ರ

ಅಂತ್ಯ: ನಕ್ಷತ್ರ ಹಿಗ್ಗಿದಂತೆ ತನ್ನ ಕೆಲವು ಭಾಗ ದ್ರವ್ಯರಾಶಿಯ ಅಂಶಗಳನ್ನು, ಅಂತರತಾರಾ ಪರಿಸರಕ್ಕೆ, ಎಸೆಯುತ್ತದೆ. ಅದು ನಂತರ ಮರುಬಳಕೆಯ ಪ್ರಕ್ರಿಯೆಯಿಂದ ಹೊಸ ನಕ್ಷತ್ರಗಳ ಉಗಮಕ್ಕೆ ಕಾರಣವಾಗುತ್ತದೆ. ಏತನ್ಮಧ್ಯೆ, ನಕ್ಷತ್ರದ ಬೀಜ ಒಂದು ನಾಕ್ಷತ್ರಿಕ ಅವಶೇಷ ಆಗುತ್ತದೆ. ಅದು ಒಂದು ವೈಟ್ ಡ್ವಾರ್ಫ್ ಆಗಬಹುದು, ಇಲ್ಲವೇ ನ್ಯೂಟ್ರಾನ್ ನಕ್ಷತ್ರವಾಗಬಹುದು, ಅಥವಾ ಸಾಕಷ್ಟು ಅಗಾಧ ಪ್ರಮಾಣದಲ್ಲಿ ದ್ರವ್ಯರಾಶಿ ಇದ್ದಲ್ಲಿ ಒಂದು ಕಪ್ಪು ಕುಳಿಯಾಗಬಹುದು.

ಐತಿಹಾಸಿಕವಾಗಿ, ನಕ್ಷತ್ರಗಳು ವಿಶ್ವದಾದ್ಯಂತ ನಾಗರಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಅವು ಧಾರ್ಮಿಕ ಪದ್ಧತಿಗಳ ಭಾಗವಾಗಿವೆ. ಪ್ರಾಚೀನರು ಆಕಾಶ ಪರಶೀಲನೆ ಮತ್ತು ಒಂದು ನಿರ್ದಿಷ್ಟ ದೃಷ್ಟಿಕೋನವನ್ನು ಹೊಂದಿದ್ದರು. ಅನೇಕ ಪ್ರಾಚೀನ ಖಗೋಳ ಶಾಸ್ತ್ರಜ್ಞರು ನಕ್ಷತ್ರಗಳು ಶಾಶ್ವತವಾಗಿ ಸ್ವರ್ಗೀಯ ಗೋಳದಲ್ಲಿ ಅಂಟಿಕೊಂಡಿರುತ್ತವೆ ಎಂದು ನಂಬಿದ್ದರು, ಅವು ಬದಲಾವಣೆ ಇಲ್ಲದವು ಎಂದು ನಂಬಿದ್ದರು. ರೂಢಿಯಂತೆ, ಖಗೋಳಶಾಸ್ತ್ರಜ್ಞರು ನಕ್ಷತ್ರಗಳನ್ನು ನಕ್ಷತ್ರಪುಂಜಗಳಾಗಿ ಗುಂಪುಮಾಡಿ ಹೆಸರಿಸಿದ್ದರು. ಅವುಗಳನ್ನು ಕ್ಯಾಲೆಂಡರ್ ಗಳನ್ನು ರಚಿಸಲು ಬಳಸಲಾಗಿತ್ತು. ಗ್ರಹಗಳು ಮತ್ತು ನಕ್ಷತ್ರಗಳ ಹಿನ್ನೆಲೆಯಲ್ಲಿ ಮತ್ತು ಕ್ಷಿತಿಜದ ವಿರುದ್ಧ ಸೂರ್ಯನ ಚಲನೆಯ ಕಕ್ಷೆಯನ್ನು ಕ್ಯಾಲೆಂಡರ್ಗಳನ್ನು ರಚಿಸಲು ಬಳಸಿಕೊಂಡಿದ್ದರು. ಇದು ಕೃಷಿಯ ಕೆಲಸಗಳನ್ನು ನಿಯಂತ್ರಿಸಲು ಬಳಸಬಹುದಿತ್ತು. ಹಾಲಿ ವಿಶ್ವದ ಸುಮಾರು ಎಲ್ಲೆಡೆ ಬಳಸಲಾಗುತ್ತಿರವ ಗ್ರೆಗೋರಿಯನ್ ಕ್ಯಾಲೆಂಡರ್’ ಒಂದು ಸೂರ್ಯನನ್ನು ಆಧರಿಸಿದ ಸೌರ ಕ್ಯಾಲೆಂಡರ್. ಅದು ಭೂಮಿಯ ಓರೆ-ಕೋನವುಳ್ಳ ಅಕ್ಷದಲ್ಲಿ ಸೂರ್ಯನನ್ನು ಪರಿಭ್ರಮಣ ಮಾಡುವುದಕ್ಕೆ ಸಂಬಂಧಿಸಿದಂತೆ ತಯಾರಿಸಿದ ಕ್ಯಾಲೆಂಡರ್.

1838 ರಲ್ಲಿ ಫ್ರೆಡ್ರಿಚ್ ಬೆಸ್ಸೆಲ್ ನಿಂದ ನಕ್ಷತ್ರದ ಮೊದಲಬಾರಿ ದಿಗ್ವೆತ್ಯಾಸ ತಂತ್ರವನ್ನು ಬಳಸಿಕೊಂಡು ದೂರವನ್ನು ಮಾಪನ ಮಾಡಲಾಯಿತು. ಅದು 11.4 ಜ್ಯೋತಿರ್ವರ್ಷಗಳ ದೂರದ 61 ಸಿಗ್ನಿ ಎಂಬ ನಕ್ಷತ್ರ. ಈ ಮಾಪನಗಳು ಆಕಾಶದಲ್ಲಿ ನಕ್ಷತ್ರಗಳು ದೂರ ದೂರ ಪ್ರತ್ಯೇಕತೆಯನ್ನು ಹೊಂದಿದ್ದು ವ್ಯಾಪಕವಾಗಿ ಹರಡಿದೆ ಎಂದು ಪ್ರದರ್ಶಿಸಿದರು. ದ್ಯುತಿವಿದ್ಯುತ್ ಫೋಟೋಮೀಟರ್ ತಂತ್ರ ಅಭಿವೃದ್ಧಿಯಿಂದ ಅನೇಕ ತರಂಗಾಂತರ ಅಂತರಮಾಪನದಲ್ಲಿ ತಾರೆಗಳ ನಿಖರವಾದ ಗಾತ್ರ /ಪ್ರಮಾಣದ ಮಾಪನಕ್ಕೆ ಕಾರಣವಾಯಿತು. 1921 ರಲ್ಲಿ ಆಲ್ಬರ್ಟ್ ಎ ಮೈಕೆಲ್ಸನ್ ಮೌಂಟ್ ವಿಲ್ಸನ್ ವೀಕ್ಷಣಾಲಯದ ಹೂಕರ್ ದೂರದರ್ಶಕದ ಮೂಲಕ ವಿದ್ಯುತ್ತರಂಗದ ಆಧಾರದ ಮೇಲೆ ಪ್ರದರ್ಶಿಸಿದರು. ದ್ಯುತಿವಿದ್ಯುತ್ ಫೋಟೋಮೀಟರ್ ತಂತ್ರ ಅಭಿವೃದ್ಧಿಯಿಂದ ಅನೇಕ ತರಂಗಾಂತರ ಅಂತರಮಾಪನ ತಾರೆಗಳ ನಿಖರವಾದ ಗಾತ್ರ/ಪ್ರಮಾಣದ ಮಾಪನಕ್ಕೆ ಕಾರಣವಾಯಿತು. 1921 ರಲ್ಲಿ ಆಲ್ಬರ್ಟ್ ಎ ಮೈಕೆಲ್ಸನ್ ಮೌಂಟ್ ವಿಲ್ಸನ್ ವೀಕ್ಷಣಾಲಯದ ಹೂಕರ್ ದೂರದರ್ಶಕದ ಮೂಲಕ ವಿದ್ಯುತ್ತರಂಗದ ಆಧಾರದ ಮೇಲೆ ಬಳಸಿಕೊಂಡು ಒಂದು ನಾಕ್ಷತ್ರಿಕ ವ್ಯಾಸವನ್ನು ಮೊದಲಬಾರಿಗೆ ಅಳತೆ ಮಾಡಿದ.

ನಕ್ಷತ್ರಗಳ ಹುಟ್ಟು ಸಾವು
ನಕ್ಷತ್ರ ಪುಂಜ

ಸೂಪರ್ನೋವಾ ಹೊರತುಪಡಿಸಿ ಸ್ಥಳೀಯ ಗುಂಪಿನ ಪ್ರತ್ಯೇಕ ನಕ್ಷತ್ರಗಳನ್ನು ಪ್ರಾಥಮಿಕವಾಗಿ ಪರಿಶೀಲಿಸಲಾಯಿತು, ಇದು ವಿಶೇಷವಾಗಿ ಕ್ಷೀರಪಥದ ಗೋಚರ ಭಾಗಕ್ಕೆ ಸೀಮಿತವಗಿದೆ. ಆದರೆ ಭೂಮಿಯಿಂದ, ಕನ್ಯಾರಾಶಿ ನಕ್ಷತ್ರ ಸಮೂಹದಲ್ಲಿರುವ ಎಂ 100 ನಕ್ಷತ್ರಲೋಕದ(ಬ್ರಹ್ಮಾಂಡದ)ಲ್ಲಿ 100 ದಶಲಕ್ಷ ಬೆಳಕಿನ ವರ್ಷಗಳ ದೂರದಲ್ಲಿ ಕೆಲವು ನಕ್ಷತ್ರಗಳು ಕಂಡಿವೆ. ಸ್ಥಳೀಯ ಸ್ಟಾರ್ ಸಮೂಹಗಳಲ್ಲಿ ನಕ್ಷತ್ರ ಪುಂಜಗಳನ್ನು ನೋಡಲು ಸಾಧ್ಯ, ಪ್ರಸ್ತುತ ದೂರದರ್ಶಕಗಳು ಸ್ಥಳೀಯ ಗುಂಪಿನಲ್ಲಿ ಮಸುಕಾದ ಪ್ರತ್ಯೇಕ ನಕ್ಷತ್ರಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ ಆದಾಗ್ಯೂ, ಕ್ಷೀರಪಥದ ಸ್ಥಳೀಯ ನಕ್ಷತ್ರ ಸಮೂಹದ ಹೊರಗೆ, ಪ್ರತ್ಯೇಕ ನಕ್ಷತ್ರಗಳ ಅಥವಾ ನಕ್ಷತ್ರಗಳ ಸಮೂಹಗಳು ಪತ್ತೆಯಾಗಿಲ. ಏಕ ಮಾತ್ರ ಅಪವಾದವೆಂದರೆ ಒಂದು ಮಸುಕಾದ ಅತ್ಯಂತ ದೂರದ ತಾರಾ ಪುಂಜವನ್ನು ಗಮನಿಸಿದಾಗ ಒಂದು ಶತಕೋಟಿ ಬೆಳಕಿನ ವರ್ಷಗಳ ದೂರದಲ್ಲಿರುವ ಅದರಲ್ಲಿ, ಅನೇಕ ಸಾವಿರಾರು ನಕ್ಷತ್ರಗಳನ್ನು ಒಳಗೊಂಡ ಒಂದು ದೊಡ್ಡ ತಾರಾ ಪುಂಜವು ಗೊಚರಿಸಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಚಿಕ್ಕ ರಾಜವಂಶ ರಟ್ಟ ಮನೆತನ

ಭಾರತೀಯ ಚಿಕ್ಕ ರಾಜವಂಶ ರಟ್ಟ ಮನೆತನ

ಮಕ್ಕಳ ಬೆಳವಣಿಗೆಗೆ ಆಹಾರ ಕ್ರಮ

ಮಕ್ಕಳ ಬೆಳವಣಿಗೆಗೆ ಅನುಸರಿಸ ಬೇಕಾದ ಆಹಾರ ಕ್ರಮಗಳು