in

ಭಾರತೀಯ ಚಿಕ್ಕ ರಾಜವಂಶ ರಟ್ಟ ಮನೆತನ

ಚಿಕ್ಕ ರಾಜವಂಶ ರಟ್ಟ ಮನೆತನ
ಚಿಕ್ಕ ರಾಜವಂಶ ರಟ್ಟ ಮನೆತನ

ರಟ್ಟ ರಾಜವಂಶವು ಒಂದು ಚಿಕ್ಕ ಭಾರತೀಯ ರಾಜವಂಶ. ಇವರು ರಾಷ್ಟ್ರಕೂಟರ ಶಾಖೆಯಾಗಿ ಆಳ್ವಿಕೆ ಮಾಡಿದರು. ಆಧುನಿಕ ಕರ್ನಾಟಕದ ಬೆಳಗಾವಿ ಪ್ರದೇಶ ಹಾಗೂ ಐತಿಹಾಸಿಕವಾಗಿ ಸುಗಂದವರ್ತಿ ಎಂದು ಕರೆಯಲ್ಪಡುವ ಸವದತ್ತಿ ಕ್ರಿ.ಶ ೮೭೫ – ೧೨೫೦ ಅವಧಿಯಲ್ಲಿ ರಟ್ಟಾ ರಾಜವಂಶದ ರಾಜಧಾನಿಯಾಗಿತ್ತು. ನಂತರ ಅವರ ರಾಜಧಾನಿ ಐತಿಹಾಸಿಕವಾಗಿ ವೇಣುಗ್ರಾಮ ಎಂದು ಕರೆಯಲ್ಪಡುವ ಬೆಳಗಾವಿಗೆ ಸ್ಥಳಾಂತರ ಗೊಂಡಿತು. ಕ್ರಿ.ಶ.೧೨೧೦ – ೧೨೫೦ರ ಅವಧಿಯಲ್ಲಿ ಬೆಳಗಾವಿಯು ರಟ್ಟರ ರಾಜಧಾನಿಯಾಗಿತ್ತು. ರಾಷ್ಟ್ರೀಯ ಎಂಬುದು ರಟ್ಟ ಪದದ ಸಂಸ್ಕೃತ ರೂಪವಾಗಿದೆ. ಹೂಲಿ ಪಟ್ಟಣವುಸವದತ್ತಿಯ ರಟ್ಟರ ಆಳ್ವಿಕೆಯ ಅಡಿಯಲ್ಲಿ ಇತ್ತು.

ರಟ್ಟರ ಮೂಲ ಸ್ಥಾನ ಲಾತೂರ, ಲಟ್ಟನೂರ ಪುರವರಾಧೀಶ್ವರರೆಂದು ಅವರು ತಮ್ಮನ್ನು ಕರೆದುಕೊಂಡಿದ್ದಾರೆ. ಕೂಹೂಂಡಿ ಮಂಡಳ’ ಎಂದರೆ ಇಂದಿನ ಬೆಳಗಾವಿ ನಾಡು, ೧ ನೇ ಕಾರ್ತವೀರ್ಯ (ಕ್ರಿ.ಶ.೯೮೦ರಲ್ಲಿ) ಅರಸನು ಈ ನಾಡಿನ ಸೀಮೆಗಳನ್ನು ಗೊತ್ತುಪಡಿಸಿದ್ದಾಗಿ ಶಾಸನದಿಂದ ತಿಳಿದು ಬರುತ್ತದೆ. ಇಂದಿನ ಬೆಳಗಾವಿ ಜಿಲ್ಲೆಯಲ್ಲಿ ಅಥಣಿ ಮತ್ತು ಖಾನಾಪುರ ತಾಲೂಕುಗಳನ್ನು ಬಿಟ್ಟರೆ ಉಳಿಯುವ ಪ್ರದೇಶವೇ ಅಂದಿನ ಕೂಹೂಂಡಿ ಮಂಡಳ, ಅದು ಫಲವತ್ತಾದ ನಾಡಾಗಿತ್ತೆಂದು, ಸರ್ವಮತಗಳ ದೇವಾಲಯಗಳ ಬೀಡಾಗಿತ್ತೆಂದು ನೇಸರಗಿ ಮತ್ತು ತೇರದಾಳ ಶಾಸನಗಳು ಹೇಳುತ್ತವೆ.

ಭಾರತೀಯ ಚಿಕ್ಕ ರಾಜವಂಶ ರಟ್ಟ ಮನೆತನ
ಪರಸಗಡ ಕೋಟೆ

ಪರಸಗಡ ಕೋಟೆಯು ಭಾರತದ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಬೆಟ್ಟದ ಮೇಲಿರುವ ಪಾಳುಬಿದ್ದ ಕೋಟೆಯಾಗಿದೆ. ಇದು ೧೦ ನೇ ಶತಮಾನದಷ್ಟು ಹಿಂದಿನದು. ರಟ್ಟಾ ರಾಜವಂಶದ ಪ್ರಸಿದ್ಧ ಆಡಳಿತಗಾರರಿಂದ ನಿರ್ಮಿಸಲ್ಪಟ್ಟ ಪಸರಗಡದ ಭವ್ಯವಾದ ಕೋಟೆಯು ಸವದತ್ತಿ ಗ್ರಾಮದ ದಕ್ಷಿಣಕ್ಕೆ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿದೆ. ನೈರುತ್ಯ ಶ್ರೇಣಿಯ ಬೆಟ್ಟಗಳ ಕಪ್ಪು ಮಣ್ಣಿನ ಬಯಲಿನಲ್ಲಿ ಪಸರಗಡ ಕೋಟೆ ಇದೆ. ಪಸರಗಡದ ಕೋಟೆಯು ಉತ್ತರದಿಂದ ದಕ್ಷಿಣಕ್ಕೆ ಸುಮಾರು ೫೦೦ ಮೀಟರ್ (೧೬೪೦ ಅಡಿ) ಮತ್ತು ಪೂರ್ವದಿಂದ ಪಶ್ಚಿಮಕ್ಕೆ ಸುಮಾರು ೩೦೦ ಮೀಟರ್ (೯೮೪ ಅಡಿ) ವಿಸ್ತೀರ್ಣವನ್ನು ಒಳಗೊಂಡಿದೆ. ಇದರ ಬದಿಗಳು ಕಲ್ಲಿನಿಂದ ಕೂಡಿದ್ದು ಬಹುತೇಕ ಲಂಬವಾಗಿವೆ. ಆಳವಾದ ಕಂದರವು ಈ ಕೋಟೆಯ ಮೂಲಕ ಹಾದುಹೋಗುತ್ತದೆ.

ಬೆಳಗಾವಿ ಕೋಟೆ ೧೨೦೪ ರಲ್ಲಿ ಬಿಜಿರಾಜ ಎಂದು ಕರೆಯಲ್ಪಡುವ ಜಯರಾಜನಿಂದ ನಿರ್ಮಾಣವಾಯಿತು. ನಂತರ ದೇವಗಿರಿಯ ಯಾದವರು ರಟ್ಟರನ್ನು ಸೋಲಿಸಿ ಬೆಳಗಾವಿ ಕೋಟೆಯನ್ನು ವಶಪಡಿಸಿಕೊಂಡರು. ಬೆಳಗಾವಿ ಕೋಟೆಯು ಮೂಲತಃ ರಟ್ಟಾ ರಾಜವಂಶದಿಂದ ನಿರ್ಮಿಸಲ್ಪಟ್ಟಿತು, ನಂತರ ಬಿಜಾಪುರ ಸುಲ್ತಾನರ ಯಾಕೂಬ್ ಅಲಿ ಖಾನ್‌ನಿಂದ ಭದ್ರಪಡಿಸಲ್ಪಟ್ಟಿತು. ಇದು ವಿಶಿಷ್ಟವಾದ ಕಟ್ಟಡ ರಚನಾ ವಿನ್ಯಾಸ ಮತ್ತು ಕೋಟೆಯ ಸುತ್ತಲಿನ ಬೃಹತ್ ಕಂದಕದಿಂದ ಹೆಸರುವಾಸಿಯಾಗಿದೆ, ಇದು ಶತ್ರುಗಳು ಒಳಗೆ ಪ್ರವೇಶಿಸಲಾಗದಂತಿದೆ. ಬೆಳಗಾವಿ ಕೋಟೆಯು ಆಕ್ರಮಣಕಾರಿ ಸೇನೆಗಳ ದಾಳಿಯ ವಿರುದ್ಧ ಭದ್ರಕೋಟೆಯಾಗಿ ಕಾರ್ಯನಿರ್ವಹಿಸಿತು. ಬೆಳಗಾವಿಯು ರಟ್ಟರು, ವಿಜಯನಗರ ಚಕ್ರವರ್ತಿಗಳು, ಬಿಜಾಪುರ ಸುಲ್ತಾನರು, ಮರಾಠರು ಮತ್ತು ಅಂತಿಮವಾಗಿ ಬ್ರಿಟಿಷರನ್ನು ಒಳಗೊಂಡಂತೆ ಬಹುಸಂಖ್ಯೆಯ ರಾಜವಂಶಗಳಿಗೆ ಆಶ್ರಯವನ್ನು ನೀಡಿತು. ಭಾರತದ ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ, ಮಹಾತ್ಮ ಗಾಂಧಿಯವರು ಇಲ್ಲಿ ಜೈಲಿನಲ್ಲಿದ್ದರು. ಕೋಟೆಯ ಒಳಭಾಗವು ಸುಮಾರು ೧೦೦೦ ಗಜಗಳಷ್ಟು ಉದ್ದ ಮತ್ತು ೮೦೦ ಗಜಗಳಷ್ಟು ಅಗಲವನ್ನು ಹೊಂದಿದೆ. ಕೋಟೆಯನ್ನು ಮಿಲಿಟರಿ ಮಳಿಗೆಯಾಗಿ ನಿರ್ಮಿಸಲಾಗಿದೆ. ಕೋಟೆಯೊಳಗೆ ಪುರಾತನ ಜೈನ ದೇವಾಲಯವೂ, ಕಮಲ ಬಸದಿ ಇದೆ.

ಕರ್ನಾಟಕವನ್ನು ಆಳಿದ ರಾಜಮನೆತನದವರಲ್ಲಿ ರಟ್ಟರು ಒಬ್ಬರು. ಮೊದಲು ಮಾಂಡಲೀಕರಾಗಿ, ನಂತರ ಆಳುವ ಅರಸರಾಗಿ, 9 ರಿಂದ 13 ಶತಮಾನಗಳ ಕಾಲ ರಾಜ್ಯವಾಳಿದರು. ಆ ಕಾಲದಲ್ಲಿ ನಿರ್ಮಿಸಲಾದ ಕೋಟೆ, ಇಂದು ಪ್ರವಾಸ ತಾಣದಲ್ಲಿ ಒಂದಾಗಿದೆ.

ಭಾರತೀಯ ಚಿಕ್ಕ ರಾಜವಂಶ ರಟ್ಟ ಮನೆತನ
ಕಮಲ ಬಸದಿ

ಬೆಳಗಾವಿ ಕೋಟೆಯನ್ನು ಕದಂಬರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ರಟ್ಟರು, ಬಹಮನಿಗಳು, ಮರಾಠರು ಮುಂತಾದ ರಾಜವಂಶಗಳು ಆಳಿದ್ದಾರೆ. ೧೭೭೮ ರಲ್ಲಿ ಇದು ಟಿಪ್ಪು ಸುಲ್ತಾನ್ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟಿತ್ತು. ೧೮೧೮ ರಲ್ಲಿ ಜನರಲ್ ಮುನ್ರೋ ಎಂಬ ಬ್ರಿಟಿಷ್ ಅಧಿಕಾರಿ ಬೆಳಗಾವಿ ಕೋಟೆಯನ್ನು ಸ್ವಾಧೀನಪಡಿಸಿಕೊಂಡರು. ನಂತರ ಸೇನಾ ಅಧಿಕಾರಿಗಳ ನಿವಾಸಕ್ಕಾಗಿ ಕೋಟೆಯೊಳಗೆ ಮನೆಗಳನ್ನು ನಿರ್ಮಿಸಿದರು.

ರಟ್ಟರು ಜೈನ ಧರ್ಮದ ಪೋಷಕರಾಗಿದ್ದರು. ರಟ್ಟರ ರಾಜ್ಯ ಸ್ಥಾಪನೆ ಮತ್ತು ಮೂಲ ಪುರುಷರ ಬಗ್ಗೆ ಸಂಪೂರ್ಣ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ದೊರೆತಿರುವ ಮಾಹಿತಿಯ ಪ್ರಕಾರ ಕತ್ತ ಅಥವಾ ಕಾರ್ತಕವೀರ್ಯ ಕ್ರಿ.ಶ. ಸುಮಾರು ೯೬೦-೭೫ ಮೊದಲಿಗೆ ಚಾಳುಕ್ಯರ ಸಾಮಂತನಾಗಿ ಆಳ್ವಿಕೆ ನಡೆಸುತ್ತಿದ್ದನೆಂದು ತಿಳಿದುಬರುತ್ತದೆ. ನಂತರ ಕ್ರಿ.ಶ. ೧೧ನೇ ಶತಮಾನದಲ್ಲಿ ಜೈನ ಸಂತ, ಆಚಾರ್ಯ ಹಾಗೂ ಮುಖ್ಯಸ್ಥನಾದ ಲಕ್ಷ್ಮೀದೇವ, ಕಾರ್ತಿವೀರ್ಯನ ಮಗ ರಾಜ್ಯಭಾರ ಮಾಡಿದನು ಎಂದು ತಿಳಿದುಬರುತ್ತದೆ. ನಂತರ ಎರಗ ಅಥವಾ ಎರೆಯಮ ಸು. ೧೦೩೦-೪೭. ಚಾಳುಕ್ಯರ ಎರಡನೆಯ ಜಯಸಿಂಹನ ಸಾಮಂತನಾಗಿ ರಟ್ಟಮಾರ್ತಾಂಡ, ರಟ್ಟನಾರಾಯಣ, ಸಿಂಗನಗರುಡ ಮುಂತಾದ ಬಿರುದುಗಳನ್ನು ಪಡೆದಿದ್ದನು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಶ್ರೀ ರಾಮ ನವಮಿ

ಶ್ರೀ ರಾಮ ನವಮಿ ಆಚರಣೆ ಮಾಡುವ ಕಾರಣ

ನಕ್ಷತ್ರಗಳ ಹುಟ್ಟು ಸಾವು

ನಕ್ಷತ್ರಗಳ ಹುಟ್ಟು ಸಾವು