in

ಈ ಸಲದ ರಾಜ್ಯೋತ್ಸವ ಪ್ರಶಸ್ತಿಯ ಪಟ್ಟಿ

ಈ ಸಲದ ರಾಜ್ಯೋತ್ಸವ ಪ್ರಶಸ್ತಿ
ಈ ಸಲದ ರಾಜ್ಯೋತ್ಸವ ಪ್ರಶಸ್ತಿ

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ತುಂಬಿರುವ ಸಂದರ್ಭದಲ್ಲಿ 10 ಸಂಸ್ಥೆಗಳಿಗೆ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿ-2022 ನೀಡಿ ಗೌರವಿಸಲಾಗುತ್ತಿದೆ. ಮೈಸೂರಿನ ‘ಶ್ರೀ ರಾಮಕೃಷ್ಣ ಆಶ್ರಮ’, ಬೆಂಗಳೂರಿನ ‘ನೆಲೆ ಫೌಂಡೇಷನ್‌’, ಹಾವೇರಿಯ ‘ಅಗಡಿ ತೋಟ’ ಸೇರಿದಂತೆ ಹತ್ತು ಸಂಸ್ಥೆಗಳನ್ನು ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುವ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. ವಿವಿಧ ಕ್ಷೇತ್ರಗಳ ಗಣ್ಯರನ್ನು ಆಯ್ದು ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ. ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರತಿ ವರ್ಷ ನವೆಂಬರ್ ೧ರಂದು ಬೆಂಗಳೂರಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಪ್ರದಾನ ಮಾಡುತ್ತಾರೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿಯ ಗೌರವಧನ, ೨೫ ಗ್ರಾಂ ಚಿನ್ನದ ಪದಕ, ಶಾಲು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಇದಲ್ಲದೆ ಅರ್ಹ ಪುರಸ್ಕೃತರಿಗೆ ಸರಕಾರದ ವತಿಯಿಂದ ನಿವೇಶನಗಳನ್ನು ನೀಡುವ ಕ್ರಮವೂ ಜಾರಿಯಲ್ಲಿದೆ.

ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಸಾಮಾನ್ಯವಾಗಿ ಅಕ್ಟೋಬರ್ ೩೧ರ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಪ್ರಕಟಿಸುತ್ತಾರೆ. ರಾಜ್ಯೋತ್ಸವ ಪ್ರಶಸ್ತಿಯನ್ನು ೧೯೬೬ರಿಂದ ಕೊಡಲು ಪ್ರಾರಂಭಿಸಲಾಯಿತು. ಸಾಮಾನ್ಯವಾಗಿ ಪ್ರಶಸ್ತಿಯನ್ನು ಕರ್ನಾಟಕದ ಮುಖ್ಯಮಂತ್ರಿಗಳು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡುತ್ತಾರೆ.

ಪ್ರಶಸ್ತಿಯನ್ನು ಈ ಕೆಳಗಿನ ವಿಭಾಗಗಳಲ್ಲಿ ಸಾಧನೆಗೈದ ಸಾಧಕರಿಗೆ ಕೊಡಲಾಗುತ್ತದೆ :

ಕಲೆ, ಸಾಹಿತ್ಯ, ರಂಗಭೂಮಿ, ಸಿನಿಮಾ, ಸಂಗೀತ, ನೃತ್ಯ, ಜಾನಪದ, ಯಕ್ಷಗಾನ, ಬಯಲಾಟ, ಶಿಲ್ಪಕಲೆ, ಚಿತ್ರಕಲೆ, ಸಮಾಜಸೇವೆ, ಸಂಕೀರ್ಣ, ಪತ್ರಿಕೋದ್ಯಮ / ಮಾಧ್ಯಮ, ಕ್ರೀಡೆ, ವೈದ್ಯಕೀಯ, ಶಿಕ್ಷಣ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ.

ಈ ಸಲದ ರಾಜ್ಯೋತ್ಸವ ಪ್ರಶಸ್ತಿಯ ಪಟ್ಟಿ
2019ರ ಪ್ರಶಸ್ತಿ ಪ್ರಧಾನ ಸಮಾರಂಭ

ಆದರೆ, ೨೦೦೭ನೇ ವರ್ಷದ ಪ್ರಶಸ್ತಿಯನ್ನು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಇದ್ದ ಕಾರಣ ಅಂದಿನ ಕರ್ನಾಟಕದ ರಾಜ್ಯಪಾಲರಾಗಿದ್ದ ಶ್ರೀ ರಾಮೇಶ್ವರ್ ಥಾಕೂರ್ ಪ್ರಧಾನ ಮಾಡಿದ್ದರು.ಹಲವಾರು ಕಾರಣಗಳಿಂದಾಗಿ ರಾಜ್ಯೋತ್ಸವ ಪ್ರಶಸ್ತಿಯನ್ನು ಕೆಲವು ವರ್ಷಗಳಲ್ಲಿ ಪ್ರದಾನ ಮಾಡಲಿಲ್ಲ. ೧೯೮೫ರ ವರ್ಷ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಮೈಸೂರಿನಲ್ಲಿ ಮತ್ತು ೨೦೦೮ರಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭಗಳು ನಡೆದಿವೆ.

ಈ ವರ್ಷ ರಾಜ್ಯೋತ್ಸವ ಪ್ರಶಸ್ತಿ ಪಡೆಯುವವರ ಹೆಸರುಗಳು : ಮಾಜಿ ಅಧ್ಯಕ್ಷ ಕೆ.ಶಿವನ್‌, ಸಿನಿಮಾ ಕ್ಷೇತ್ರದಲ್ಲಿ ದತ್ತಣ್ಣ, ಅವಿನಾಶ್‌ ಹಾಗೂ ಕಿರುತೆರೆ ವಿಭಾಗದಲ್ಲಿ ಸಿಹಿ ಕಹಿ ಚಂದ್ರು ಅವರನ್ನು ಆಯ್ಕೆ ಮಾಡಲಾಗಿದೆ. ಸೋಲಿಗರ ಮಾದಮ್ಮ, ವಿದ್ವಾನ್‌ ಗೋಪಾಲ ಕೃಷ್ಣ ಶರ್ಮ, ಸಾಲುಮರದ ನಿಂಗಣ್ಣ, ಸಾಹಿತ್ಯ ಕ್ಷೇತ್ರದಲ್ಲಿ ಪ್ರೊ.ಅ.ರಾ.ಮಿತ್ರ, ಪ್ರೊ.ಕೃಷ್ಣೇಗೌಡ ಹಾಗೂ ನ್ಯಾಯಾಂಗದಲ್ಲಿ ವೆಂಕಟಾಚಲಪತಿ ಸೇರಿ 67 ಜನರಿಗೆ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.

ರಾಜ್ಯೋತ್ಸವ ಪ್ರಶಸ್ತಿಯು 5 ಲಕ್ಷ ರೂಪಾಯಿ ನಗದು ಹಾಗೂ 25 ಗ್ರಾಂ ಚಿನ್ನ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿರಲಿದೆ.

ಸಿಎಂ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಪ್ರಶಸ್ತಿ ಆಯ್ಕೆ ಕುರಿತಂತೆ ಅಂತಿಮ ಸಭೆ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯ್ಕೆ ಸಲಹಾ ಸಮಿತಿ ನಾನಾ ಕ್ಷೇತ್ರಗಳ ಗಣ್ಯರನ್ನು 1:2 ಅನುಪಾತದಲ್ಲಿ 134 ಜನರ ಪಟ್ಟಿ ಸಿದ್ಧಪಡಿಸಿ, ಅದನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿತ್ತು. ಸಿಎಂ ಗೃಹ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ ಕುಮಾರ್‌, ಸಚಿವರಾದ ಆರ್‌.ಅಶೋಕ್‌, ಶಿವರಾಮ್‌ ಹೆಬ್ಬಾರ್‌ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.

ಈ ಸಲದ ರಾಜ್ಯೋತ್ಸವ ಪ್ರಶಸ್ತಿಯ ಪಟ್ಟಿ
ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ

ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲೂಕಿನ ಹೊನ್ನೇಮರದ ಹಳ್ಳಿಯ ಡಾ.ಎಂ. ಬಸವಂತಪ್ಪ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ. ಕಳೆದ 32 ವರ್ಷಗಳಿಂದ ಚನ್ನಗಿರಿ ತಾಲೂಕು ಸಂತೆಬೆನ್ನೂರು ಗ್ರಾಮದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ, 2 ರೂಪಾಯಿ ಡಾಕ್ಟರ್ ಎಂದೇ ಖ್ಯಾತರಾಗಿರುವವರು ಡಾ.ಎಂ. ಬಸವಂತಪ್ಪ.

2022ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪಡೆದವರ ಪಟ್ಟಿ :

ಸಂಕೀರ್ಣ ಕ್ಷೇತ್ರ *ಸುಬ್ಬರಾಮ ಶೆಟ್ಡಿ (ಬೆಂಗಳೂರು),*ವಿದ್ವಾನ್ ಗೋಪಾಲ ಕೃಷ್ಣ ಶರ್ಮಾ(ಬೆಂಗಳೂರು),*ಶ್ರೀಮತಿ ಸೋಲಿಗರ ಮಾದಮ್ಮ(ಚಾಮರಾಜನಗರ).

ಸೈನಿಕ *ಸುಬೇದಾರ್ ಬಿಕೆ ಕುಮಾರಸ್ವಾಮಿ(ಬೆಂಗಳೂರು).

ಪತ್ರಿಕೋದ್ಯಮ *ಹೆಚ್‌.ಆರ್‌.ಶ್ರೀಶಾ(ಬೆಂಗಳೂರು),*ಜಿ.ಎಂ.ಶಿರಹಟ್ಟಿ(ಗದಗ).

ಕೃಷಿ *ಗಣೇಶ್ ತಿಮ್ಮಯ್ಯ(ಕೊಡಗು),*ಚಂದ್ರಶೇಖರ್ ನಾರಾಯಣಪುರ(ಚಿಕ್ಕಮಗಳೂರು).

ವಿಜ್ಞಾನ ಮತ್ತು ತಂತ್ರಜ್ಞಾನ *ಕೆ.ಶಿವನ್‌(ಬೆಂಗಳೂರು), *ಡಿ.ಆರ್‌.ಬಳೂರಗಿ(ರಾಯಚೂರು).

ಪರಿಸರ *ಸಾಲುಮರದ ನಿಂಗಣ್ಣ(ರಾಮನಗರ).

ಪೌರಕಾರ್ಮಿಕ ಕ್ಷೇತ್ರ *ಮಲ್ಲಮ್ಮಹೂವಿನಹಡಗಲಿ(ವಿಜಯನಗರ).

ಆಡಳಿತ *ಎಲ್‌.ಹೆಚ್‌.ಮಂಜುನಾಥ್‌(ಶಿವಮೊಗ್ಗ), *ಮದನ್ ಗೋಪಾಲ್‌(ಬೆಂಗಳೂರು), ಹೊರನಾಡು ದೇವಿದಾಸ ಶೆಟ್ಟಿ(ಮುಂಬೈ), *ಅರವಿಂದ್ ಪಾಟೀಲ್‌(ಹೊರನಾಡು), *ಕೃಷ್ಣಮೂರ್ತಿ ಮಾಂಜಾ(ತೆಲಂಗಾಣ).

ಹೊರದೇಶ *ಗಲ್ಫ್‌ ದೇಶದ ರಾಜ್‌ಕುಮಾರ್‌(ಗಲ್ಫ್ ರಾಷ್ಟ್ರ).

ವೈದ್ಯಕೀಯ*ಡಾ.ಹೆಚ್‌.ಎಸ್‌.ಮೋಹನ್‌(ಶಿವಮೊಗ್ಗ), *ಡಾ.ಬಸವಂತಪ್ಪ(ದಾವಣಗೆರೆ).

ಸಮಾಜ ಸೇವೆ *ರವಿಶೆಟ್ಟಿ(ದಕ್ಷಿಣ ಕನ್ನಡ)* ಕರಿಯಪ್ಪ(ಬೆಂಗಳೂರು ಗ್ರಾಮಾಂತರ), *ಎಂಎಸ್‌ ಕೋರಿ ಶೆಟ್ಟರ್‌(ಹಾವೇರಿ), *ಡಿ.ಮಾದೇಗೌಡ(ಮೈಸೂರು), *ಬಲ್‌ಬೀರ್ ಸಿಂಗ್( ಬೀದರ್‌).

ವಾಣಿಜ್ಯೋಧ್ಯಮ *ಬಿ ವಿನಾಯ್ಡು(ಬೆಂಗಳೂರು) *ಜಯರಾಮ್‌ ಬನಾನ್‌(ಉಡುಪಿ) *ಶ್ರೀನಿವಾಸ್(ಕೋಲಾರ).

ರಂಗಭೂಮಿ”ತಿಪ್ಪಣ್ಣ ಹೆಳವರ್‌(ಯಾದಗಿರಿ), *ಲಲಿತಾಬಾಯಿ ಚನ್ನದಾಸರ್‌(ವಿಜಯಪುರ), *ಗುರುನಾಥ್ ಹೂಗಾರ್‌(ಕಲಬುರಗಿ), *ಪ್ರಭಾಕರ್ ಜೋಶಿ(ಉಡುಪಿ), *ಶ್ರೀಶೈಲ ಹುದ್ದಾರ್‌(ಹಾವೇರಿ), ಸಂಗೀತ”ನಾರಾಯಣ.ಎಂ(ದಕ್ಷಿಣ ಕನ್ನಡ), *ಅನಂತಚಾರ್ಯ ಬಾಳಾಚಾರ್ಯ(ಧಾರವಾಡ), *ಅಂಜಿನಪ್ಪ ಸತ್ಪಾಡಿ(ಚಿಕ್ಕಬಳ್ಳಾಪುರ), *ಅನಂತ ಕುಲಕರ್ಣಿ( ಬಾಗಲಕೋಟೆ).

ಜಾನಪದ *ಸಹಮದೇವಪ್ಪ ಈರಪ್ಪ ನಡಿಗೇರ್‌(ಉತ್ತರ ಕನ್ನಡ) *ಗುಡ್ಡ ಪಾಣಾರ-ದೈವ ನರ್ತಕ(ಉಡುಪಿ), ಕಮಲಮ್ಮ ಸೂಲಗಿತ್ತಿ(ರಾಯಚೂರು), *ಸಾವಿತ್ರಿ ಪೂಜಾರ್‌(ಧಾರವಾಡ), *ರಾಚಯ್ಯ ಸಾಲಿಮಠ(ಬಾಲಕೋಟೆ), *ಮಹದೇಶ್ವರಗೌಡ ಲಿಂಗದಹಳ್ಳಿ, ವೀರಗಾಸೆ(ಹಾವೇರಿ).

ಈ ಸಲದ ರಾಜ್ಯೋತ್ಸವ ಪ್ರಶಸ್ತಿಯ ಪಟ್ಟಿ
ಗುಡ್ಡ ಪಾಣಾರ-ದೈವ ನರ್ತಕ

ಶಿಲ್ಪಕಲೆ *ಪರುಶುರಾಮ್ ಪವಾರ್(ಬಾಗಲಕೋಟೆ), *ಹನುಮಂತಪ್ಪ ಬಾಳಪ್ಪ ಹುಕ್ಕೇರಿ(ಬೆಳಗಾವಿ).

ಚಿತ್ರಕಲೆ *ಸಣ್ಣರಂಗಪ್ಪ ಚಿತ್ರಕಾರ್-ಕಿನ್ನಾಳ ಕಲೆ(ಕೊಪ್ಪಳ).

ಚಲನಚಿತ್ರ *ದತ್ತಣ್ಣ(ಚಿತ್ರದುರ್ಗ), ಅವಿನಾಶ್(ಬೆಂಗಳೂರು).

ಕಿರುತೆರೆ *ಸಿಹಿಕಹಿ ಚಂದ್ರು(ಬೆಂಗಳೂರು).

ಯಕ್ಷಗಾನ *ಎಂಎ ನಾಯಕ್(ಉಡುಪಿ), *ಸುಬ್ರಹ್ಮಣ್ಯ ಧಾರೇಶ್ವರ್( ಉತ್ತರಕನ್ನಡ), *ಸರಪಾಡಿ ಅಶೋಕ್‌ ಶೆಟ್ಟಿ(ದಕ್ಷಿಣ ಕನ್ನಡ).

ಬಯಲಾಟ *ಅಡವಯ್ಯ ಚ ಹಿರೇಮಠ್-ದೊಡ್ಡಾಟ ( ಧಾರವಾಡ), *ಶಂಕರಪ್ಪ ಮಲ್ಲಪ್ಪ ಹೊರಪೇಟೆ(ಕೊಪ್ಪಳ), *ಎಚ್‌. ಪಾಂಡುರಂಗಪ್ಪ(ಬಳ್ಳಾರಿ)

ಸಾಹಿತ್ಯ *ಶಂಕರ ಚಚಡಿ(ಬೆಳಗಾವಿ), *ಕೃಷ್ಣೇಗೌಡ(ಮೈಸೂರು), *ಅಶೋಕಬಾಬು ನೀಲಗಾರ್(ಬೆಳಗಾವಿ), *ಅ.ರಾ ಮಿತ್ರ(ಹಾಸನ), *ರಾಮಕೃಷ್ಣ ಮರಾಠೆ(ಕಲಬುರಗಿ).

ಶಿಕ್ಷಣ *ಕೋಟಿ ರಂಗಪ್ಪ(ತುಮಕೂರು), *ಎಂಜಿ ನಾಗರಾಜ್ -ಸಂಶೋಧಕರು( ಬೆಂಗಳೂರು).

ಕ್ರೀಡೆ *ದತ್ತಾತ್ರೇಯ ಗೋವಿಂದ ಕುಲಕರ್ಣಿ(ಧಾರವಾಡ), ರಾಘವೇಂದ್ರ ಅಣ್ಣೇಕರ್(ಬೆಳಗಾವಿ).

ನ್ಯಾಯಾಂಗ *ವೆಂಕಟಾಚಲಪತಿ(ಬೆಂಗಳೂರು), *ನಂಜುಂಡರೆಡ್ಡಿ(ಬೆಂಗಳೂರು).

ನೃತ್ಯ *ಕಮಲಾಕ್ಷಾಚಾರ್ಯ(ದಕ್ಷಿಣ ಕನ್ನಡ).

ಸ್ವಾತಂತ್ರ್ಯದ ಅಮೃತ ಮಹೋತ್ಸವ ರಾಜ್ಯೋತ್ಸವ ಪ್ರಶಸ್ತಿ-2022

*ರಾಮಕೃಷ್ಣ ಆಶ್ರಮ(ಮೈಸೂರು), *ಲಿಂಗಾಯತ ಪ್ರಗತಿಶೀಲ ಸಂಸ್ಥೆ(ಗದಗ), *ಅಗಡಿ ತೋಟ(ಹಾವೇರಿ), *ತಲಸೇಮಿಯಾ ಮತ್ತು ಹೀಮೋಫೀಲಿಯಾ ಸೊಸೈಟಿ(ಬಾಗಲಕೋಟೆ), *ಅಮೃತ ಶಿಶು ನಿವಾಸ(ಬೆಂಗಳೂರು), *ಸುಮನಾ ಫೌಂಡೇಷನ್(ಬೆಂಗಳೂರು), *ಯುವ ವಾಹಿನಿ ಸಂಸ್ಥೆ(ದಕ್ಷಿಣ ಕನ್ನಡ), *ನೆಲೆ ಫೌಂಡೇಶನ್‌-ಅನಾಥ ಮಕ್ಕಳ ಪುನರ್ವಸತಿ ಕೇಂದ್ರ(ಬೆಂಗಳೂರು), *ನಮ್ಮನೆ ಸುಮ್ಮನೆ-ನಿರಾಶ್ರಿತ ಆಶ್ರಮ, (ಮಂಗಳಮುಖಿ ಸಂಸ್ಥೆ(ಬೆಂಗಳೂರು), *ಉಮಾ ಮಹೇಶ್ವರಿ ಹಿಂದುಳಿದ ವರ್ಗ ಅಭಿವೃದ್ಧಿ ಟ್ರಸ್ಟ್‌(ಮಂಡ್ಯ).

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಚನ್ನರಾಯಪಟ್ಟಣ

ನಗರವನ್ನು ಆಳುತಿದ್ದ ರಾಜನ ಹೆಸರಿನಿಂದ ಬಂದಿದ್ದು ಚನ್ನರಾಯಪಟ್ಟಣ

ಕನ್ನಡ ರಾಜ್ಯೋತ್ಸವ

ಕನ್ನಡ ರಾಜ್ಯೋತ್ಸವವನ್ನು ಯಾಕೆ ಆಚರಿಸುವುದು?