in

ಫೆಬ್ರವರಿ ೧೨, ದಯಾನಂದ ಸರಸ್ವತಿ ಜನ್ಮದಿನ

ದಯಾನಂದ ಸರಸ್ವತಿ ಜನ್ಮದಿನ
ದಯಾನಂದ ಸರಸ್ವತಿ ಜನ್ಮದಿನ

ದಯಾನಂದ ಸರಸ್ವತಿ ಭಾರತೀಯ ಧಾರ್ಮಿಕ ಮುಖಂಡ ಮತ್ತು ವೇದ ಧರ್ಮದ ಹಿಂದೂ ಸುಧಾರಣಾ ಚಳವಳಿಯ ಆರ್ಯ ಸಮಾಜದ ಸ್ಥಾಪಕ. ಅವರು ವೈದಿಕ ಸಿದ್ಧಾಂತ ಮತ್ತು ಸಂಸ್ಕೃತ ಭಾಷೆಯ ಪ್ರಖ್ಯಾತ ವಿದ್ವಾಂಸರಾಗಿದ್ದರು. ೧೮೭೬ ​​ರಲ್ಲಿ ಅವರು ಸ್ವರಾಜ್ಯಕ್ಕಾಗಿ “ಇಂಡಿಯ ಫಾರ್ ಇಂಡಿಯನ್ಸ್” ಎಂಬ ಕರೆ ಕೊಟ್ಟರು. ಆ ಕರೆಯನ್ನು ಲೋಕಮಾನ್ಯ ಬಾಲ ಗಂಗಾಧರ ತಿಲಕ್ ಅವರು ಉಪಯೋಗಿಸಿಕೊಂಡು ಸ್ವರಾಜ್ಯದ ಕರೆ ಕೊಟ್ಟರು. ಆ ಸಮಯದಲ್ಲಿ ಹಿಂದೂ ಧರ್ಮದಲ್ಲಿ ಧಾರ್ಮಿಕ ಕ್ರಿಯೆಗಳು ಮೂರ್ತಿಪೂಜೆ, ಅಥವಾ ಮೂರ್ತಿ ಆರಾಧನೆಯನ್ನು ನಿರಾಕರಿಸಿ ತೆಗಳಿದ ಅವರು ವೈದಿಕ ಸಿದ್ಧಾಂತಗಳನ್ನು ಪುನರುಜ್ಜೀವನಗೊಳಿಸುವ ಕಡೆಗೆ ಕೆಲಸ ಮಾಡಿದರು.

ಬಾಲ್ಯದಿಂದ ಸಂನ್ಯಾಸ ಭಾವದವರು ಮತ್ತು ವಿದ್ವಾಂಸರಾಗಿದ್ದರು. ಅವರು ವೇದಗಳ ದೋಷಾತೀತ ಅಧಿಕಾರವನ್ನು ನಂಬಿದ್ದರು. ಮಹರ್ಷಿ ದಯಾನಂದರು ಕರ್ಮ ಮತ್ತು ಪುನರ್ಜನ್ಮದ ಸಿದ್ಧಾಂತವನ್ನು ಪ್ರತಿಪಾದಿಸಿದರು. ಬ್ರಹ್ಮಾಚರ್ಯದ ವೈದಿಕ ಆದರ್ಶಗಳು, ಬ್ರಹ್ಮಚರ್ಯ ಮತ್ತು ದೈವಭಕ್ತಿ ಇವುಗಳಿಗೆ ಅವರು ಒತ್ತು ನೀಡಿದರು.

ಫೆಬ್ರವರಿ ೧೨, ದಯಾನಂದ ಸರಸ್ವತಿ ಜನ್ಮದಿನ
ದಯಾನಂದ ಸರಸ್ವತಿ

ದಯಾನಂದ ಸರಸ್ವತಿ ೧೨ ಫೆಬ್ರವರಿ ೧೮೨೪ ರಂದು ಜನಿಸಿದರು. ಮೂಲ ಹೆಸರು ‘ಮೂಲಾ ಶಂಕರ್’, ಅವರು ಧನು ರಾಶಿ ಮತ್ತು ಮೂಲಾ ನಕ್ಷತ್ರದಲ್ಲಿ ಜನಿಸಿದ ಕಾರಣ ಆ ಹೆಸರು ಇಟ್ಟರು. ಜನನ ಸ್ಥಳ ಜೀವಾಪರ್ ತಂಕಾರ, ಕತಿಯಾವಾಡ್ ಪ್ರದೇಶ. ಅವರ ತಂದೆ ಕರ್ಶನ್‍ಜಿ ಲಾಲ್ಜಿ ತಿವಾರಿ, ಶ್ರೀಮಂತ ತೆರಿಗೆ ಸಂಗ್ರಾಹಕರಾಗಿದ್ದರು ಮತ್ತು ಅವರ ತಾಯಿ ಅಮೃತಬಾಯಿಯವರು. ಅವರ ತಂದೆ ಗ್ರಾಮದ ಹಿಂದು ಕುಟುಂಬದ ಪದ್ದತಿಯಂತೆ ಕುಟುಂಬದ ಮುಖ್ಯಸ್ಥರಾಗಿದ್ದರು. ದಯಾನಂದರು ಸಂಸ್ಕೃತವನ್ನು ಕಲಿಯಲು ಮತ್ತು ವೇದಗಳನ್ನು ಮತ್ತು ಇತರ ಧಾರ್ಮಿಕ ಪಠ್ಯಗಳನ್ನು ಅಧ್ಯಯನ ಮಾಡುವ ಮೂಲಕ ಸಹಜ ಸುಖಕರ ವಿದ್ಯಾರ್ಥಿಜೀವನವನ್ನು ನಡೆಸಿದರು.

ದಯಾನಂದ ಸರಸ್ವತಿ – ವೇದಗಳ ಅಧಾರದ ಮೇಲೆ ಹಿಂದು ಸಮಾಜವನ್ನು ಶುದ್ಧೀಕರಿಸಲು ಪ್ರಯತ್ನಿಸಿದ ಮೊದಲ ತತ್ವಜ್ಞಾನಿ. ತಮ್ಮ ಪ್ರಸಿದ್ದ ಕೃತಿಯಾದ ಸತ್ಯಾರ್ಥ ಪ್ರಕಾಶ ದಲ್ಲಿ ವೇದಗಳಿಗೆ ಹಿಂತಿರುಗಿ ಎಂದು ಕರೆಕೊಟ್ಟರು. ಸ್ವರಾಜ್ಯ ಎಂಬ ಪದವನ್ನು ಮೊದಲ ಬಾರಿಗೆ ಬಳಸಿದರು. ಹಿಂದೂ ಧರ್ಮದಿಂದ ಬೇರೆ ಧರ್ಮಕ್ಕೆ ಮತಾಂತರ ಹೊಂದಿದ್ದ ಹಿಂದುಗಳನ್ನು ಮತ್ತೆ ಹಿಂದೂ ಧರ್ಮಕ್ಕೆ ಕರೆತರಲು ಶುದ್ಧಿ ಚಳುವಳಿಯನ್ನು ಆರಂಭಿಸಿದರು, ಇವರು ವೈದಿಕ ಧರ್ಮದ ರಕ್ಷಣೆ ಮತ್ತು ಪ್ರಚಾರ ಮಾಡಿದ್ದರಿಂದ ಇವರನ್ನು ಆಧುನಿಕ ಭಾರತದ ಹಿಂದೂ ಧರ್ಮದ ಪ್ರಥಮ ಸುಧಾರಕ ಎಂದು ಕರೆಯುತ್ತಾರೆ.

ವೈದಿಕ ಸಿದ್ಧಾಂತಗಳನ್ನು ಪುನರುಜ್ಜೀವನಗೊಳಿಸುವ ದಿಕ್ಕಿನಲ್ಲಿ ಕೆಲಸ ಮಾಡಿದ ಅವರನ್ನು, ಭಾರತದ ತತ್ವಜ್ಞಾನಿ ಮತ್ತು ರಾಷ್ಟ್ರಾಧ್ಯಕ್ಷ ಎಸ್. ರಾಧಾಕೃಷ್ಣನ್, ಶ್ರೀ ಅರಬಿಂದೋ ಅವರಂತೆ, ದಯಾನಂದ ಸರಸ್ವತಿಯವರು ಆಧುನಿಕ ಭಾರತದ ನಿರ್ಮಾಪಕರು ಎಂದು ಕರೆದರು. 

ಮಹರ್ಷಿ ದಯಾನಂದ ಅವರ ಕೊಡುಗೆಗಳಲ್ಲಿ ಅವರು ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಉತ್ತೇಜಿಸುತ್ತಿದ್ದರು, ಉದಾಹರಣೆಗೆ ಮಹಿಳೆಯರ ಶಿಕ್ಷಣಕ್ಕೆ ವೇಬ್ಯಾಕ್ ಮೆಷಿನ್ ನಲ್ಲಿ. ಮತ್ತು ಭಾರತೀಯ ಧಾರ್ಮಿಕ ಗ್ರಂಥಗಳನ್ನು ಓದುವ ಹಕ್ಕನ್ನು ಪ್ರತಿಪಾದಿಸಿದರು. ಸಂಸ್ಕೃತದಲ್ಲಿ ಮತ್ತು ಹಿಂದಿಯಲ್ಲಿ ಅವರು ಬರೆದ ವೇದಗಳ ಮೇಲಿನ ಅವನ ವ್ಯಾಖ್ಯಾನ,ವೇದ ಸಂಸ್ಕೃತಗಳನ್ನು ಸ್ತ್ರೀಯರೂ ಓದಬೇಕೆಂದು ಹೇಳಿದರು.

ಫೆಬ್ರವರಿ ೧೨, ದಯಾನಂದ ಸರಸ್ವತಿ ಜನ್ಮದಿನ
ದಯಾನಂದ ಸರಸ್ವತಿ

ಅವರು ಎಂಟು ವರ್ಷದವರಾಗಿದ್ದಾಗ ನಿಯಮಬದ್ಧ ಶಿಕ್ಷಣದ ಪ್ರವೇಶಕ್ಕಾಗಿ ಅವರ ಯಜ್ನೋಪವಿತ್ ಸಂಸ್ಕಾರ ಸಮಾರಂಭವನ್ನು ನಡೆಸಲಾಯಿತು. ಅವರ ತಂದೆಯು ಶಿವನ ಅನುಯಾಯಿಯಾಗಿದ್ದರು. ಶಿವನನ್ನು ಒಲಿಸುವ ಮಾರ್ಗವನ್ನು ಅವರಿಗೆ ಕಲಿಸಿದರು. ಉಪವಾಸಗಳನ್ನು ಮಾಡುವ ಪ್ರಾಮುಖ್ಯತೆಯನ್ನು ಅವರು ತಿಳಿಸಿದರು. ಶಿವರಾತ್ರಿ ಸಂದರ್ಭದಲ್ಲಿ, ದಯಾನಂದನು ಶಿವನಿಗೆ ವಿಧೇಯ ಭಕ್ತನಾಗಿ ರಾತ್ರಿಯಲ್ಲಾ ಎಚ್ಚರವಾಗಿದ್ದನು. ಈ ಉಪವಾಸಗಳ ಸಂದರ್ಭ ಒಂದರಲ್ಲಿ, ಅವರು ಇಲಿಯು ಶಿವನಿಗೆ ಅರ್ಪಿಸಲು ಇಟ್ಟ ನೈವೇದ್ಯವನ್ನು ತಿನ್ನುತ್ತಿದ್ದುದ್ದನ್ನೂ, ಮತ್ತು ಶಿವಲಿಂಗದ ಮೇಲೆ ಓಡಾಡುತ್ತಿದುದನ್ನೂ ನೋಡಿದರು. ಇದನ್ನು ನೋಡಿದ ನಂತರ, ಶಿವನಿಗೆ ಇಲಿಯಿಂದ ತನ್ನನ್ನು ರಕ್ಷಿಸಲು ಸಾಧ್ಯವಾಗದಿದ್ದರೆ, ಅವನು ಹೇಗೆ ಬೃಹತ್ ಪ್ರಪಂಚದ ರಕ್ಷಕರಾಗಬಹುದು ಎಂದು ಪ್ರಶ್ನಿಸಿದರು. ಇದರಿಂದ ಮೂರ್ತಿ ಪೂಜೆಯ ನಂಬುಗೆ ಹೋಯಿತು.

ಅವರ ಕಿರಿಯ ಸಹೋದರಿ ಮತ್ತು ಅವರ ಚಿಕ್ಕಪ್ಪನು ಕಾಲರಾದಿಂದ ಸಾವಿಗೀಡಾದರು. ಈ ಸಾವು ದಯಾನಂದರಿಗೆ ಜೀವನ ಮತ್ತು ಮರಣದ ಅರ್ಥವನ್ನು ವಿಚಾರಮಾಡಲು ಕಾರಣವಾಯಿತು. ಅವರು ತನ್ನ ಹೆತ್ತವರನ್ನು ಚಿಂತೆಗೆ ಈಡುಮಾಡುವ ಪ್ರಶ್ನೆಗಳನ್ನು ಕೇಳಲಾರಂಭಿಸಿದರು. ಅವರ ತಂದೆ ದಯಾನಂದರ ಹದಿಹರೆಯದ ವಯಸ್ಸಿನಲ್ಲಿ ಅವರಿಗೆ ವಿವಾಹ ಮಾಡಲು ತೊಡಗಿದ್ದರು, ಆದರೆ ಮದುವೆಯು ತಮ್ಮ ಜೀವನದ ಗುರಿಗೆ ಸರಿ ಎಂದು ಅವರಿಗೆ ತೋರಲಿಲ್ಲ. ಅದರಿಂದ ಅವರು 1846 ರಲ್ಲಿ ಮನೆಯಿಂದ ದೂರ ಓಡಿಹೋದರು.

ದಯಾನಂದ ಸರಸ್ವತಿ 1845 ರಿಂದ 1869 ರ ವರೆಗೆ ಧಾರ್ಮಿಕ ಸತ್ಯವನ್ನು ಹುಡುಕಲು ಸುಮಾರು ಇಪ್ಪತ್ತೈದು ವರ್ಷಗಳನ್ನು ಸಾಧಕ ಮತ್ತು ಸಂನ್ಯಾಸಿಯಾಗಿ ಕಳೆದರು. ಅವರು ಪ್ರಾಪಂಚಿಕ ವಸ್ತು ಸಾಮಗ್ರಿಗಳನ್ನು ತ್ಯಜಿಸಿದರು. ಮತ್ತು ಸ್ವಯಂ ನಿರಾಕರಣೆ ಮಾಡಿದ ವಿರಕ್ತ ಜೀವನವನ್ನು ಅನುಸರಿಸಿದರು., ಆಧ್ಯಾತ್ಮಿಕ ಚಟುವಟಿಕೆಗಳಿಗೆ ಅರಣ್ಯಗಳಲ್ಲಿ, ಹಿಮಾಲಯ ಪರ್ವತಗಳ ತಪ್ಪಲ ಏಕಾಂತದಲ್ಲಿ ಕಳೆದರು. ಅವರು ಉತ್ತರ ಭಾರತದ ಯಾತ್ರಾ ಸ್ಥಳಗಳನ್ನು ಸಂದರ್ಶಿಸುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕರ್ನಾಟಕದ ಪ್ರಮುಖ ರಾಜವಂಶಗಳು

ಕರ್ನಾಟಕದ ಪ್ರಮುಖ ರಾಜವಂಶಗಳು

ಈಜುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ

ಈಜುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ