in

ಶಿವಕಾಶಿ ಇತಿಹಾಸ ಹಾಗೂ ಪಟಾಕಿ ತಯಾರಿಸುವ ಪ್ರದೇಶ

ಪಟಾಕಿ ತಯಾರಿಸುವ ಪ್ರದೇಶ
ಪಟಾಕಿ ತಯಾರಿಸುವ ಪ್ರದೇಶ

ಮೊದಲಿನಿಂದಲೂ ಹಿಂದುಗಳು ಬೆಳಕಿನ ಹಬ್ಬವನ್ನು ಬದುಕಿನಲ್ಲಿ ಅಂಧಕಾರವನ್ನು ಬಿಟ್ಟು ಬೆಳಕಿನೆಡೆ ನಡೆಯುವುದರ ದ್ಯೋತಕವಾಗಿ ಆಚರಿಸುತ್ತ ಬಂದಿದ್ದಾರೆ. ಹೇಗೆ ಹಣತೆಯನ್ನು ಬೆಳಗಿದಾಗ ಅದು ಸುತ್ತಲೂ ಇರುವ ಅಂಧಕಾರವನ್ನು ಮಾಯ ಮಾಡುವುದೊ ಅದೇ ರೀತಿಯಲ್ಲಿ ಬೆಳಕು ನಮ್ಮ ಜೀವನದ ಕತ್ತಲೆಯನ್ನು ಕಳೆಯಬೇಕೆಂಬುದೆ ದೀಪಾವಳಿಯ ಮುಖ್ಯ ಉದ್ದೇಶವಾಗಿದೆ.

ಪಟಾಕಿಯು ಮುಖ್ಯವಾಗಿ ದೊಡ್ಡ ಪ್ರಮಾಣದಲ್ಲಿ ಶಬ್ದವನ್ನು, ವಿಶೇಷವಾಗಿ ಜೋರಾದ ಸದ್ದಿನ ರೂಪದಲ್ಲಿ, ಉತ್ಪತ್ತಿ ಮಾಡಲು ವಿನ್ಯಾಸಗೊಳಿಸಲಾದ ಸಣ್ಣ ಸ್ಫೋಟಕ ಸಾಧನ; ಯಾವುದೇ ದೃಶ್ಯ ಪರಿಣಾಮವು ಈ ಗುರಿಗೆ ಆಕಸ್ಮಿಕವಾಗಿದೆ. ಇವು ಬತ್ತಿಗಳನ್ನು ಹೊಂದಿರುತ್ತವೆ, ಮತ್ತು ಸ್ಫೋಟಕ ಮಿಶ್ರಣವನ್ನು ಹೊಂದಿರಲು ದಪ್ಪ ಕಾಗದದ ಕವಚದಲ್ಲಿ ಸುತ್ತಿರಲಾಗುತ್ತದೆ. ಸುಡುಮದ್ದುಗಳ ಜೊತೆಗೆ ಪಟಾಕಿಗಳು ಚೀನಾದಲ್ಲಿ ಹುಟ್ಟಿಕೊಂಡವು.

ಪಟಾಕಿಗಳನ್ನು ಸಾಮಾನ್ಯವಾಗಿ ರಟ್ಟು ಕಾಗದ ಅಥವಾ ಪ್ಲಾಸ್ಟಿಕ್‍ನಿಂದ ತಯಾರಿಸಲಾಗುತ್ತದೆ. ನೋದಕವಾಗಿ ಮಿಂಚು ಪುಡಿ, ಕಾರ್ಡೈಟ್, ಧೂಮರಹಿತ ಪುಡಿ, ಅಥವಾ ಕಪ್ಪುಪುಡಿಯನ್ನು ಹೊಂದಿರುತ್ತವೆ. ಆದರೆ ಯಾವಾಗಲೂ ಹೀಗೇ ಇರಬೇಕೆಂದೇನಿಲ್ಲ. ಬೆಂಕಿ ಕಡ್ಡಿಯ ವಸ್ತು, ಸೀಮೆಎಣ್ಣೆ, ಹಗುರವಾದ ದ್ರವ ಸೇರಿದಂತೆ ಎಲ್ಲವನ್ನೂ ಪಟಾಕಿಗಳನ್ನು ತಯಾರಿಸಲು ಯಶಸ್ವಿಯಾಗಿ ಬಳಸಲಾಗಿದೆ. ಭಾಗಶಃ ನೋದಕ ವಸ್ತುವು ಕಾರಣವಾದರೂ, ಸದ್ದುಮಾಡುವ ಪಟಾಕಿಗಳಿಗೆ ಒತ್ತಡವು ಅತ್ಯಂತ ಮುಖ್ಯವಾಗಿದೆ.

ಶಿವಕಾಶಿ ಇತಿಹಾಸ ಹಾಗೂ ಪಟಾಕಿ ತಯಾರಿಸುವ ಪ್ರದೇಶ
ಶೀವಕಾಶಿ ನದಿ

ಭಾರತದಲ್ಲಿ ಉತ್ಪಾದಿಸಲಾಗುವ ಪಟಾಕಿ ಹಾಗೂ ಬೆಂಕಿಕಡ್ಡಿಗಳ ಒಟ್ಟು ಪ್ರಮಾಣದಲ್ಲಿ 70% ರಷ್ಟು ತಯಾರಾಗುವುದೆ ಶಿವಕಾಶಿ ಪಟ್ಟಣದಲ್ಲಿ. ಹಾಗಾಗಿ ಶಿವಕಾಶಿಯನ್ನು ಪಟಾಕಿಗಳ ರಾಜಧಾನಿ ಎಂದರೆ ತಪ್ಪಾಗಲಿಕ್ಕಿಲ್ಲ. ಸಾಕಷ್ಟು ಪಟಾಕಿ ತಯಾರಿಸುವ ಕಾರ್ಖಾನೆಗಳು ಇಲ್ಲಿದ್ದು ಇಲ್ಲಿ ತಯಾರಿಸಲಾದ ಪಟಾಕಿಗಳು ಕರ್ನಾಟಕ, ಕೇರಳ, ಆಂಧ್ರ ಸೇರಿದಂತೆ ಹಲವು ರಾಜ್ಯಗಳಿಗೆ ರಫ್ತಾಗುತ್ತವೆ. ಭಾರತದಲ್ಲಿ ಬೆಳಕಿನ ಹಬ್ಬ ದೀಪಾವಳಿಯಾಗಲಿ ಅಥವಾ ಗಣೇಶ ಚತುರ್ಥಿಯಾಗಲಿ ಹತ್ತಿರ ಬರುತ್ತಿದ್ದಂತೆ ಸಾಕಷ್ಟು ಮಕ್ಕಳಿಗೆ ಹಾಗೂ ಹದಿಹರೆಯದವರಿಗೂ ಸಹ ಒಂದು ರೀತಿಯ ರೋಮಾಂಚವಾಗುತ್ತದೆ, ಕಾರಣ ವಿವಿಧ ರೀತಿಯ ಪಟಾಕಿಗಳನ್ನು ಈ ಸಂದರ್ಭದಲ್ಲಿ ಹೊಡೆಯಬಹುದೆಂದು.

ಬೆಳಕನ್ನೆ ಆಚರಿಸುವ, ಬೆಳಕಿಗೆ ಪ್ರಾಮುಖ್ಯತೆಯಿರುವ ಈ ಹಬ್ಬದಲ್ಲಿ ವಿವಿಧ ರೀತಿಯ ಪಟಾಕಿಗಳು, ಬಾಣ ಬಿರುಸುಗಳು, ಹೀಗೆ ವೈವಿಧ್ಯಮಯ ಬಣ್ಣ ಬಣ್ಣದ ಪ್ರಕಾಶಗಳಿಂದ ಸಿಡಿಯುವ ಪಟಾಕಿಗಳು ಮೊದಲಿನಿಂದಲೂ ಹಬ್ಬದ ಭಾಗವಾಗಿ ಸೇರಿಕೊಂಡಿವೆ. ಹೀಗೆ ಮಕ್ಕಳ ಸಂತಸವನ್ನು ಹೆಚ್ಚು ಮಾಡುವ ಪಟಾಕಿಗಳು ಉತ್ಪಾದನೆಯಾಗುವ ಅದ್ಭುತ ತಾಣವೆ ಶಿವಕಾಶಿ.

ಶಿವಕಾಶಿ ಎಂದರೆ ಕೇವಲ ಪಟಾಕಿಗಳು ಮಾತ್ರವೆ? ಖಂಡಿತವಾಗಿಯೂ ಇಲ್ಲ. ಪ್ರವಾಸಿ ದೃಷ್ಟಿಯಿಂದ ನೋಡಿದಾಗ ಇದೊಂದು ಸುಂದರ ಸ್ಥಳವಾಗಿಯೂ ಕಂಡುಬರುತ್ತದೆ. ಅದರಲ್ಲೂ ವಿಶೇಷವಾಗಿ ಧಾರ್ಮಿಕ ಪ್ರವಾಸಕ್ಕೆ ಸಾಕಷ್ಟು ಹೆಸರುವಾಸಿಯಾಗಿದೆ ಶಿವಕಾಶಿ. ತಮಿಳುನಾಡಿನ ವಿರುದುನಗರ ಜಿಲ್ಲೆಯಲ್ಲಿರುವ ಶಿವಕಾಶಿ ಎಷ್ಟು ಪ್ರಸಿದ್ಧವಾಗಿದೆ ಎಂದರೆ ದಕ್ಷಿಣ ಭಾರತದ ಯಾವ ರಾಜ್ಯಗಳಲ್ಲೆ ಆಗಲಿ ಯಾರಿಗಾದರೂ ಪಟಾಕಿಗಳು ಎಲ್ಲಿ ತಯಾರಾಗುತ್ತವೆ ಎಂದು ಕೇಳಿದರೆ ಸಾಕು ಬಹುತೇಕರು ಶಿವಕಾಶಿ ಎಂತಲೆ ಉತರಿಸುತ್ತಾರೆ. ಆ ರೀತಿಯಾಗಿ ಪಟಾಕಿ ದೃಷ್ಟಿಯಿಂದ ಎಲ್ಲರ ಬಾಯಲ್ಲಿ ಬರುವ ಊರು ಇದಾಗಿದೆ. ಶಿವಕಾಶಿ ಪಟ್ಟಣಕ್ಕೆ ಸಂಬಂಧಿಸಿದಂತೆ ಇಲ್ಲಿ ಹೆಚ್ಚು ಹೆಚ್ಚು ರಾಸಾಯನಿಕ ಕಾರ್ಖಾನೆಗಳು, ಪಟಾಕಿ ಕಾರ್ಖಾನೆಗಳು, ಸೋಡಾ ತಯಾರಿಸುವ ಕಾರ್ಖಾನೆಗಳು ಹಾಗೂ ಹೆಚ್ಚಿನ ಸಂಖ್ಯೆಯ ಮುದ್ರಣಾಲಯಗಳನ್ನು ಕಾಣಬಹುದು. ಪಟಾಕಿಗೆ ಬಳಸಲಾಗುವ ಕಾಗದಗಳ ಮುದ್ರಣವೂ ಸಹ ಇಲ್ಲೆ ಆಗುತ್ತದೆ. ಅಲ್ಲದೆ ಭಾರತದಲ್ಲಿ ಉತ್ಪಾದಿಸಲಾಗುವ ಒಟ್ಟು ಡೈರಿ ಬುಕ್ಕುಗಳಲ್ಲಿ 30% ರಷ್ಟು ಶಿವಕಾಶಿಯಲ್ಲೆ ಉತ್ಪಾದಿಸಲಾಗುತ್ತದೆ.

ಪಟ್ಟಣದ ಹೆಸರೆ ಸೂಚಿಸುವ ಹಾಗೆ ಇದು ಕಾಶಿಯ ಶಿವನು ನೆಲೆಸಿರುವ ತಾಣವೆ ಆಗಿದೆ ಎಂತಲೂ ಹೇಳಬಹುದು. ಈ ಹೆಸರು ಬರಲೂ ಸಹ ರೋಚಕ ಕಥೆಯೊಂದಿದೆ. ಆ ಕಥೆಗೂ ಮೊದಲು ಇಲ್ಲಿರುವ ಕಾಶಿ ವಿಶ್ವನಾಥರ ದೇವಾಲಯವನ್ನು ಪಾಂಡ್ಯರ ದೊರೆಯಾದ ಹರಿಕೇಸರಿ ಪರಕ್ಕಿರಮ ಪಾಂಡಿಯನ್ ನಿರ್ಮಿಸಿದ್ದಾನೆ ಎಂದು ಇತಿಹಾಸದಿಂದ ತಿಳಿದುಬರುತ್ತದೆ.

ಶಿವಕಾಶಿ ಇತಿಹಾಸ ಹಾಗೂ ಪಟಾಕಿ ತಯಾರಿಸುವ ಪ್ರದೇಶ
ಶಿವ ದೇವಾಲಯ ಶಿವಕಾಶಿ

ತೆನ್ಕಾಶಿ ರಾಜನು ಹದಿನೈದನೇಯ ಶತಮಾನದ ಸಂದರ್ಭದಲ್ಲಿ ಮದುರೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಆಳುತ್ತಿದ್ದನು. ಸುತ್ತಮುತ್ತಲಿನ ಪ್ರದೇಶಗಳು ಇಂದಿನ ಶಿವಕಾಶಿಯನ್ನೂ ಒಳಗೊಂಡಿತ್ತು. ಇನ್ನೂ ಕಥೆಗೆ ಬರುವುದಾದರೆ ಪಾಂಡ್ಯ ರಾಜನಿಗೆ ತಿರುನೆಲ್ವೇಲಿಯಲ್ಲಿರುವ ತೆನ್ಕಾಶಿ (ದಕ್ಷಿಣದ ಕಾಶಿ)ಯಲ್ಲಿ ಶಿವನಿಗೆ ಮುಡಿಪಾದ ದೇವಾಲಯ ನಿರ್ಮಿಸುವ ಕುರಿತು ಆಸೆಯಿತ್ತು. ಶಿವಲಿಂಗ ತಂದಿದ್ದ ಅದಕ್ಕಾಗಿ ಅವನು ಸ್ವತಃ ಕಾಶಿಗೆ ತೆರಳಿ ಅಲ್ಲಿಂದಲೆ ಶಿವಲಿಂಗವೊಂದನ್ನು ಇಲ್ಲಿಗೆ ತಂದು ತೆನ್ಕಾಶಿಯಲ್ಲಿ ಪ್ರತಿಷ್ಠಾಪಿಸಲು ಬಯಸಿದ್ದ. ಅದರಂತೆ ಒಂದು ದಿನ ಕಾಶಿಗೆ ತೆರಳಿ ಅಲ್ಲಿ ಒಂದು ಸುಂದರವಾದ ಶಿವಲಿಂಗ ಖರೀದಿಸಿ ಅದನ್ನು ಅರಚಕ್ರಾದಿಗಳಿಂದ ಶುದ್ಧಗೊಳಿಸಿಕೊಂಡು ತನ್ನ ಬಳಿಯಿದ್ದ ಆಕಳ ಡುಬ್ಬದ ಮೇಲಿಟ್ಟು ತನ್ನ ರಾಜ್ಯಕ್ಕೆ ತೆರಳಿದ. ಹೀಗೆ ಕ್ರಮಿಸುತ್ತ ಬಂದ ರಾಜನು ಇಂದಿನ ಶಿವಕಾಶಿಯಿರುವ ಸ್ಥಳಕ್ಕೆ ಬಂದಾಗ ಅವನಿಗೆ ಆಯಾಸವಾಗಿ ಅಲ್ಲೆ ಇದ್ದ ಬಿಲ್ವ ಮರದ ಕೆಳಗೆ ಅಲ್ಪ ವಿರಾಮ ಪಡೆದ. ತದನಂತರ ಮತ್ತೆ ತನ್ನ ಸ್ಥಳಕ್ಕೆ ಮುಂದುವರೆಯಲೆಂದು ಪ್ರಯಾಣಿಸಲು ಆರಂಭಿಸುತ್ತಿದ್ದಂತೆ ಶಿವಲಿಂಗ ಹೊತ್ತಿದ್ದ ಆಕಳು ಮುಂದೆ ನಡೆಯಲೆ ಇಲ್ಲ. ಎಷ್ಟೆ ಪ್ರಯತ್ನಿಸಿದರೂ ಅದು ಅಲ್ಲೆ ನಿಂತುಬಿಟ್ಟಿತು. ಶಿವನ ಭಕ್ತನಾಗಿದ್ದ ರಾಜನಿಗೆ ಸ್ವಲ್ಪ ಸಮಯದ ನಂತರ, ಬಹುಶಃ ಶಿವನು ಇಲ್ಲಿಯೆ ನೆಲೆಸಬೇಕೆಂದು ಅಪೇಕ್ಷಿಸಿರಬಹುದೆಂದು ಬಲವಾಗಿ ಅನಿಸಿತು. ಆದ್ದರಿಂದ ತಡ ಮಾಡದೆ ಅಲ್ಲಿಯೆ ತಾನು ತಂದ ಶಿವಲಿಂಗ ಪ್ರತಿಷ್ಠಾಪಿಸಿ ದೇವಾಲಯ ನಿರ್ಮಿಸಿದ. ಅಂದಿನಿಂದ ಈ ಸ್ಥಳವು ಶಿವಕಾಶಿ ಎಂಬ ಹೆಸರಿನಿಂದಲೆ ಪ್ರಸಿದ್ಧವಾಯಿತು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ದೆಹಲಿ

ದೆಹಲಿಯ ಇತಿಹಾಸ ಹೀಗಿದೆ

ಅರಸೀಕೆರೆ ಶಿವಾಲಯ

ಹಾಸನ ಜಿಲ್ಲೆಯ ಅರಸೀಕೆರೆ ಶಿವಾಲಯ