in ,

ಜನವರಿ 9, “ಪ್ರವಾಸಿ ಭಾರತೀಯ ದಿವಸ್”

ಪ್ರವಾಸಿ ಭಾರತೀಯ ದಿವಸ್
ಪ್ರವಾಸಿ ಭಾರತೀಯ ದಿವಸ್

ಭಾರತದ ಅಭಿವೃದ್ಧಿಯಲ್ಲಿ ಪ್ರವಾಸಿ ಭಾರತೀಯ ಸಮುದಾಯದ ಕೊಡುಗೆ ಅಪಾರ. ಪ್ರಪಂಚದ ವಿವಿಧ ಮೂಲೆಗಳಲ್ಲಿ ಇದ್ದುಕೊಂಡು ಭಾರತವನ್ನು ಪ್ರತಿನಿಧಿಸುವ ಅವರ ಕೊಡುಗೆಯನ್ನು ಗುರುತಿಸಲು ಹಾಗೂ ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಪ್ರತಿ ವರ್ಷದ ಜನವರಿ 9 ರಂದು ಪ್ರವಾಸಿ ಭಾರತೀಯ ದಿನವನ್ನು ಆಚರಿಸಲಾಗುತ್ತಿದೆ. ಈ ಆಚರಣೆ ವಿದೇಶಿ ಭಾರತೀಯ ಸಮುದಾಯಕ್ಕೆ ಭಾರತ ಸರ್ಕಾರ ಮತ್ತು ಭಾರತೀಯ ಸಮುದಾಯಗಳೊಂದಿಗೆ ಪರಸ್ಪರ ಲಾಭದಾಯಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ವೇದಿಕೆಯನ್ನು ಒದಗಿಸುತ್ತದೆ. ಅಲ್ಲದೇ ವಿದೇಶಗಳಲ್ಲಿರುವ ಇನ್ನಿತರ ಭಾರತೀಯರ ಪರಸ್ಪರ ಭೇಟಿಗೂ ವೇದಿಕೆ ಕಲ್ಪಿಸುತ್ತದೆ. ಇದನ್ನು ಎನ್‌ಆರ್‌ಐ ಭಾರತೀಯರ ದಿನ ಎಂದೂ ಕರೆಯಲಾಗುತ್ತದೆ.

ಪ್ರವಾಸಿ ಭಾರತೀಯ ದಿವಸ್ ಎಂಬುದು ಭಾರತೀಯ ಗಣರಾಜ್ಯದ ಸಮುದಾಯದ ಕೊಡುಗೆಯನ್ನು ಗುರುತಿಸಲು ಜನವರಿ 9 ರಂದು ಆಚರಿಸಲಾಗುವ ಒಂದು ಸಂಭ್ರಮದ ದಿನವಾಗಿದೆ. ಭಾರತದ ಅಭಿವೃದ್ಧಿ. ಈ ದಿನವು 9 ಜನವರಿ 1915 ರಂದು ಮಹಾತ್ಮಾ ಗಾಂಧಿಯವರು ದಕ್ಷಿಣ ಆಫ್ರಿಕಾದಿಂದ ಮುಂಬೈಗೆ ಹಿಂದಿರುಗಿದ ನೆನಪಿಗಾಗಿ ಆಚರಿಸುತ್ತೇವೆ.

ಜನವರಿ 9, "ಪ್ರವಾಸಿ ಭಾರತೀಯ ದಿವಸ್"
2019ರಲ್ಲಿ ನಡೆದ ಪ್ರವಾಸಿ ಭಾರತೀಯ ದಿವಸ್ ಅವಾರ್ಡ್ ಸಮಾರಂಭ

ರಾಷ್ಟ್ರಪತಿ ಶ್ರೀ ಎ.ಪಿ.ಜೆ.ಅಬ್ದುಲ್ ಕಲಾಂ ಅವರು 11 ಜನವರಿ 2004 ರಂದು ನವದೆಹಲಿಯಲ್ಲಿ ನಡೆಯುತ್ತಿರುವ 2 ನೇ ಪ್ರವಾಸಿ ಭಾರತೀಯ ದಿವಸ್ ಸಂದರ್ಭದಲ್ಲಿ ಅವರು ಆಯೋಜಿಸಿದ್ದ ಚಹಾದ ಸಮಯದಲ್ಲಿ ವಲಸೆಗಾರರನ್ನು ಭೇಟಿಯಾದರು

L. M. ಸಿಂಘ್ವಿ ಅವರ ಅಧ್ಯಕ್ಷತೆಯಲ್ಲಿ ಭಾರತ ಸರ್ಕಾರವು ಸ್ಥಾಪಿಸಿದ ಭಾರತೀಯ ವಲಸೆಗಾರರ ಮೇಲಿನ ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳಿಗೆ ಅನುಗುಣವಾಗಿ ಪ್ರವಾಸಿ ಭಾರತೀಯ ದಿವಸ್ ಅನ್ನು ಆಚರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. 8 ಜನವರಿ 2002 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಅಂದಿನ ಭಾರತದ ಪ್ರಧಾನ ಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಸಮಿತಿಯ ವರದಿಯನ್ನು ಸ್ವೀಕರಿಸಿದರು ಮತ್ತು 9 ಜನವರಿ 2002 ರಂದು “ಪ್ರವಾಸಿ ಭಾರತೀಯ ದಿವಸ್” ಘೋಷಿಸಿದರು. 1915 ರಲ್ಲಿ ಮಹಾತ್ಮ ಗಾಂಧಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿದ ದಿನವನ್ನು ಗುರುತಿಸಲು ಈ ದಿನವನ್ನು ಆಯ್ಕೆ ಮಾಡಲಾಯಿತು.

ದೇಶದ ಪ್ರತಿಯೊಂದು ಹಬ್ಬ, ಆಚರಣೆಗೆ ವಿವಿಧ ಹಿನ್ನೆಲೆ ಇರುವಂತೆ ಪ್ರವಾಸಿ ಭಾರತೀಯ ದಿನಕ್ಕೂ ತನ್ನದೇ ಆದ ಇತಿಹಾಸ ಇದೆ. ದಕ್ಷಿಣ ಆಫ್ರಿಕಾದಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಿ, ಕಪ್ಪು ಜನಾಂಗದವರ ಮೇಲೆ ನಡೆಯುತ್ತಿದ್ದ ದೌರ್ಜನ್ಯದ ವಿರುದ್ಧ ಹೋರಾಟ ಮಾಡಿ ಭಾರತಕ್ಕೆ ಮಹಾತ್ಮ ಗಾಂಧಿ ಮರಳಿದ ದಿನವನ್ನೇ ಪ್ರವಾಸಿ ಭಾರತೀಯ ದಿನವನ್ನಾಗಿ ಆಚರಿಸಲಾಗುತ್ತದೆ. 1915 ರ ಜನವರಿ 9 ರಂದು ಮಹಾತ್ಮಾ ಗಾಂಧಿಯವರು ದಕ್ಷಿಣ ಆಫ್ರಿಕಾದಿಂದ ಮುಂಬೈಗೆ ಹಿಂದಿರುಗಿದ್ದರು. ಅವರ ಆ ಐತಿಹಾಸಿಕ ಮರಳುವಿಕೆಯ ನೆನಪಿಗೋಸ್ಕರ ಪ್ರವಾಸಿ ಭಾರತೀಯ ದಿನವನ್ನು ಆಚರಿಸಲಾಗುತ್ತದೆ.

ಜನವರಿ 9, "ಪ್ರವಾಸಿ ಭಾರತೀಯ ದಿವಸ್"
ವಾರಣಾಸಿಯಲ್ಲಿ ಪ್ರಧಾನಿ ೧೫ನೇ “ಪ್ರವಾಸಿ ಭಾರತೀಯ ದಿವಸ್” ಉದ್ಘಾಟಿಸಿದ್ದರು

2003 ರಲ್ಲಿ ಆರಂಭವಾದ ಈ ದಿನಾಚರಣೆಯನ್ನು, ದೇಶದ ಯಾವುದಾದರೊಂದು ಪ್ರಮುಖ ನಗರದಲ್ಲಿ ಸಮಾವೇಶ ನಡೆಸುವ ಮೂಲಕ ಆಚರಿಸಲಾಗುತ್ತದೆ. 2003ರ ಸಮಾವೇಶ ದೆಹಲಿಯಲ್ಲಿ ನಡೆದಿದ್ದರೇ, 2019ರ ಸಮಾವೇಶ ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ನಡೆದಿತ್ತು. 2017ರಲ್ಲಿ ಬೆಂಗೂರಿನಲ್ಲಿ ಸಮಾವೇಶ ಆಯೋಜಿಸಲಾಗಿತ್ತು. ಈ ಬಾರಿ ಕೋವಿಡ್‌ನಿಂದಾಗಿ ವರ್ಚ್ಯುವಲ್‌ ಸಮಾರಂಭ ನಡೆಯಲಿದೆ. ಈವರಗೆ ಒಟ್ಟು 15 ಸಮಾವೇಶಗಳು ನಡೆದಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ‘ಸ್ಥಳೀಯ ಅನಿವಾಸಿ ಭಾರತೀಯರ ದಿನ’ ಎನ್ನುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅಮೆರಿಕ, ಸಿಂಗಾಪುರ, ಬ್ರಿಟನ್‌ ಸೇರಿದಂದತೆ ವಿವಿಧ ದೇಶಗಳಲ್ಲಿ ಒಟ್ಟು 10 ಸಮಾವೇಶಗಳನ್ನು ನಡೆಸಲಾಗಿದೆ.

ಎನ್‌ಆರ್‌ಐ ದಿವಸ್‌ ದೇಶದ ಅಭಿವೃದ್ಧಿಗೆ ಸಹಕರಿಸುತ್ತಿರುವವರನ್ನು ಗೌರವಿಸುವ ದಿನವಾಗಿದೆ. ಅಂಥವರನ್ನು ಕೇಂದ್ರ ಸರಕಾರ ಗುರುತಿಸಿ ಪ್ರವಾಸಿ ಭಾರತೀಯ ಸಮ್ಮಾನ್‌ ಪ್ರಶಸ್ತಿ ನೀಡಲಾಗುತ್ತದೆ. ಎನ್‌ಆರ್‌ಐ ಮತ್ತು ಭಾರತೀಯ ಮೂಲದ ವ್ಯಕ್ತಿ (ಪಿಐಒ)ಗಳ ಕೊಡುಗೆಗಳನ್ನು ಗುರುತಿಸಲು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. 

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ನೈಮಿಶಾರಣ್ಯ

ನೈಮಿಶಾರಣ್ಯ ವಿಷ್ಣುವಿನ ಎಂಟು ದೇವಾಲಯಗಳಲ್ಲಿ ಒಂದು

ಆಲಿವ್ ಎಣ್ಣೆಯ ಉಪಯೋಗ

ದುಬಾರಿ ಆದರೆ, ಇತ್ತೀಚಿನ ಆರೋಗ್ಯದ ದೃಷ್ಟಿಯಲ್ಲಿ ಆಲಿವ್ ಎಣ್ಣೆಯ ಉಪಯೋಗ ಮುಖ್ಯ