in

ನೈಮಿಶಾರಣ್ಯ ವಿಷ್ಣುವಿನ ಎಂಟು ದೇವಾಲಯಗಳಲ್ಲಿ ಒಂದು

ನೈಮಿಶಾರಣ್ಯ
ನೈಮಿಶಾರಣ್ಯ

ನೈಮಿಸಾರಣ್ಯಮ್, ನೀಮ್ಸರ್, ನಿಮ್ಸರ್ ಅಥವಾ ನಿಮ್ಖರ್, ಮತ್ತು ನೈಮಿಷ್ನಾಥ ದೇವರಾಜ ದೇವಸ್ಥಾನ, ಉತ್ತರ ಭಾರತದ ಉತ್ತರ ಪ್ರದೇಶದಲ್ಲಿರುವ ವಿಷ್ಣುವಿಗೆ ಸಮರ್ಪಿತವಾದ ಹಿಂದೂ ದೇವಾಲಯವಾಗಿದೆ.

ನೈಮಿಶಾರಣ್ಯ, ಉತ್ತರ ಪ್ರದೇಶದ ‘ಗೋಮತಿ’ ನದಿಯ ದಡದಲ್ಲಿದೆ. ನೈಮಿಶಾರಣ್ಯವನ್ನು ಸ್ಥಳೀಯವಾಗಿ ನಿಮ್ಸಾರ್ ಎಂದೂ ಸಹ ಕರೆಯಲಾಗುತ್ತದೆ. ಸೀತಾಪುರ ಹಾಗೂ ಖೈರಾಬಾದ್ ನಿಂದ ಬರುವ ರಸ್ತೆಗಳು ಒಂದಕ್ಕೊಂದು ಜೋಡುವ ಸ್ಥಳದಲ್ಲಿ ನೈಮಿಶಾರಣ್ಯವಿದೆ.

ಸೀತಾಪುರದಿಂದ 32 ಕಿ.ಮೀ ಹಾಗೂ ಸಾಂದಿಲ ರೈಲು ನಿಲ್ದಾಣದಿಂದ 42 ಕಿ.ಮೀ ಗಳಷ್ಟು ದೂರದಲ್ಲಿ ನೈಮಿಶಾರಣ್ಯವಿದೆ. ಉತ್ತರ ಪ್ರದೆಷದ ದೊಡ್ಡ ನಗರವಾದ ಲಖನೌದಿಂದ 90 ಕಿ.ಮೀ ಗಳಷ್ಟು ದೂರದಲ್ಲಿದೆ. ಇಲ್ಲಿರುವ ವಿಷ್ಣುವಿನ ದೇವಾಲಯವು ಸ್ವಯಂಭೂ ವಿಷ್ಣುವಿನ ವಿಗ್ರಹ ಹೊಂದಿದ್ದು ಸ್ವಯಂವ್ಯಕ್ತ ಕ್ಷೇತ್ರವೆಂದೆ ಪ್ರಸಿದ್ಧಿ ಪಡೆದಿದೆ.

ನೈಮಿಶಾರಣ್ಯ ವಿಷ್ಣುವಿನ ಎಂಟು ದೇವಾಲಯಗಳಲ್ಲಿ ಒಂದು
ಸ್ವಯಂವ್ಯಕ್ತ ಕ್ಷೇತ್ರ

ಇದು ದಿವ್ಯ ದೇಶಗಳಲ್ಲಿ ಒಂದಾಗಿದೆ, ಆಳ್ವಾರರು ಎಂದು ಕರೆಯಲ್ಪಡುವ 12 ಕವಿ ಸಂತರಿಂದ ನಾಲಯೈರ ದಿವ್ಯ ಪ್ರಬಂಧದಲ್ಲಿ ಪೂಜಿಸಲ್ಪಟ್ಟ ವಿಷ್ಣುವಿನ 108 ದೇವಾಲಯಗಳು. ಈ ದೇವಾಲಯವು ಗಮನಾರ್ಹವಾದ ಪ್ರಾಚೀನತೆಯನ್ನು ಹೊಂದಿದೆ ಎಂದು ನಂಬಲಾಗಿದೆ ಮತ್ತು ಆಳುವ ರಾಜರಿಂದ ವಿವಿಧ ಸಮಯಗಳಲ್ಲಿ ಕೊಡುಗೆಗಳಿವೆ. ಈ ದೇವಾಲಯವು ಸ್ವಯಂ-ವ್ಯಕ್ತವಾದ ವಿಷ್ಣುವಿನ ಎಂಟು ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಸ್ವಯಂವ್ಯಕ್ತ ಕ್ಷೇತ್ರ ಎಂದು ವರ್ಗೀಕರಿಸಲಾಗಿದೆ.. ಪವಿತ್ರ ತೊಟ್ಟಿಯಾದ ಚಂಕ್ರ ಕುಂಡವು ದೇವಾಲಯಕ್ಕೆ ಸಂಬಂಧಿಸಿದೆ ಮತ್ತು ಇದು ಯಾತ್ರಾ ಕೇಂದ್ರವಾಗಿದ್ದು, ಜನರು ಹಬ್ಬದ ಸಂದರ್ಭಗಳಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ.

ತಮಿಳಿನಲ್ಲಿ ಜನಪ್ರೀಯವಾಗಿ ಕರೆಯಲಾಗುವ ಅಳ್ವರರು ಎಂದರೆ ತಮಿಳು ವೈಷ್ಣವ ಸಂತರು. ವಿಷ್ಣುವಿನ ಪರಮ ಭಕ್ತರಾದ ಹನ್ನೆರಡು ಸಂತರ ಸಮೂಹವನ್ನು ಅಳ್ವರ್ ಎಂದು ಕರೆಯುತ್ತಾರೆ. ಇವರು ದೇಶ ಸಂಚಾರ ಮಾಡಿ ವಿಷ್ಣುವಿನನ್ನು ಕೊಂಡಾಡುತ್ತ ಭಜಿಸುತ್ತ ಅವನಿಗೆ ಮುಡಿಪಾದ 108 ಕ್ಷೇತ್ರಗಳನ್ನು ಪಟ್ಟಿ ಮಾಡಿದ್ದಾರೆ.

ಹಾಗೆ ಅವರು ಪಟ್ಟಿ ಮಾಡಿದ 108 ಸ್ಥಳಗಳನ್ನು ದಿವ್ಯ ದೇಸಂ ಎಂದು ಕರೆಯಲಾಗಿದೆ. ಅದರ ಪ್ರಕಾರವಾಗಿ ವಿಷ್ಣು ಈ ಕ್ಷೇತ್ರಗಳಲ್ಲಿ ಸದಾ ಜಾಗೃತನಾಗಿದ್ದು ಬೇಡಿಕೊಂಡು ಬರುವ ಭಕ್ತಾದಿಗಳ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂಬ ನಂಬಿಕೆಯಿದೆ. ಅಲ್ಲದೆ ಈ ಎಲ್ಲ ಕ್ಷೇತ್ರಗಳ ದರ್ಶನ ಮಾಡುವವರು ವಿಷ್ಣುವಿನಲ್ಲಿ ಮೋಕ್ಷ ಹೊಂದುತ್ತಾರೆ ಎಂಬ ನಂಬಿಕೆಯಿದೆ.

ಶೌನಕ ಮುನಿ. ವಿಶ್ವಶಾಂತಿಗೆ ಯಾಗ,ಮಾಡಲು ಸೂತ ಮುನಿಗೆ ಉಪದೇಶಮಾಡಿ ಕಥೆಹೇಳುವ ಉಗ್ರಸ್ರವ ಸೌತಿ ಮಹಾಭಾರತ ಕಥೆಯನ್ನು ವಿವರಿಸಿದನು. ಭರತನ ವಂಶದ ಶೌನಕನಿಗೆ ಕೌರವ, ಪಾಂಡವರ ಕಥೆ ಕುರುಕ್ಷೇತ್ರದಲ್ಲಿ ಯುದ್ಧವಾದ ಬಗೆಯನ್ನು ವಿವರಿಸಿ ಹೇಳಿದನು. ಸಂತರು, ಋಷಿಗಳು ಮತ್ತು ತಪಸ್ವಿಗಳು ಕಲಿಯುಗದ ಆಗಮನದಲ್ಲಿ ವಿಶ್ವಕ್ಕೆ ಹಿತವನ್ನು ಆಶಿಸಿ, ಬ್ರಹ್ಮನ ಹತ್ತಿರಬಂದರು. ಕಲಿಯಿಂದ ಪಾರಾಗಿರಲು, ಸ್ಥಳವೊಂದನ್ನು ಅರಸುತ್ತಿರುವಾಗ, ಬ್ರಹ್ಮ ತನ್ನ ಚಕ್ರವನ್ನು ಭೂಮಿಯಮೇಲೆ ಉರುಳು ಬಿಡುತ್ತಾನೆ. ಅದು ಉರುಳುತ್ತಾ ಸಾಗುತ್ತದೆ. ಕೊನೆಗೆ ಅದು ನಿಂತ ಸ್ಥಳವೇ ನೈಮಿಶಾರಣ್ಯ ಕಾನನ. ಅಲ್ಲಿ ತಪಸ್ಸು, ಧ್ಯಾನಗಳನ್ನು ಮಾಡಲು ಅತ್ಯತ್ತುಮ ಸ್ಥಳವೆಂದು ಋಷಿಮುನಿಗಳು ಅಭಿಪ್ರಾಯಪಟ್ಟರು. ರಾಮಾಯಣದಲ್ಲೂ ಇದರ ಉಲ್ಲೇಖವಿದೆ. ಯುದ್ಧಕಾಂಡ ೬ ರಲ್ಲಿ, ಶ್ರೀರಾಮಚಂದ್ರನ ಪುತ್ರರಾದ ಲವ ಕುಶರಿಗೆ, ವಾಲ್ಮಿಕಿ ಮಹರ್ಷಿಗಳು ಕಥೆ ಹೆಳುತ್ತಾರೆ. ನೈಮಿಶಾರಣ್ಯದಲ್ಲಿ ‘ಅಶ್ವಮೇಧ ಯಜ್ಞ’ ಜರುಗುತ್ತದೆ. ಹೀಗೆ, ಹಲವು ಪುರಾವೆಗಳಿಂದ ನೈಮಿಶಾರಣ್ಯವು, ಉತ್ತರ ಪ್ರದೇಶದ ಸೀತಾಪುರದ ಹತ್ತಿರದ ಅರಣ್ಯವೆಂದು ತಿಳಿದುಬರುತ್ತದೆ. ಆ ಸ್ಥಳದಲ್ಲಿ ಸುಮಾರು ೮೮ ಸಹಸ್ರ ವೈದಿಕರು ತಪಸ್ಸನ್ನು ಆಚರಿಸುತ್ತಿದ್ದರು. ಮರ್ಯಾದಾ ಪುರುಷೋತ್ತಮ, ಶ್ರೀರಾಮ ಒಮ್ಮೆ ಅಲ್ಲಿ ತನ್ನ ಅಶ್ವಮೇಧ ಯಾಗವನ್ನು ಮಾಡಿದನು. ಆಗ ಲವ, ಮತ್ತು ಕುಶರೂ, ಇದ್ದರು. ಮಹಾಭಾರತದ ಸಮಯದಲ್ಲಿ ಈ ಪುಣ್ಯಭೂಮಿಯನ್ನು ಯುಧಿಷ್ಟಿರ ಮತ್ತು ಅರ್ಜುನರಿದ್ದರು. ‘ನೈಮಿಶಾರಣ್ಯ,’ ಒಂದು ದೊಡ್ಡ ಅರಣ್ಯಪ್ರದೇಶ. ಪ್ರಶಾಂತವಾದ ಜಾಗ ಯಾವ ಸದ್ದುಗದ್ದಲವೂ ಇಲ್ಲದ ನದಿತೀರ ಹುಲ್ಲು ಪ್ರದೇಶ ಮರಗಿಡ ಬಳ್ಳಿ, ಪಶುಪಕ್ಷಿಗಳಿಂದ ಪ್ರದೇಶವಾಗಿತ್ತು. ಹೆದರಿಕೆಯ ಇರಲಿಲ್ಲ. ವಿದ್ಯಾಭ್ಯಾಸ, ತಪಸ್ಸು, ಧ್ಯಾನ, ಮುಂತಾದವುಗಳಿಗೆ ಪ್ರಶಸ್ಥ್ಯವಾದ ಸ್ಥಳವೆಂದು ಅಭಿಪ್ರಾಯವಾಗಿತ್ತು. ಕೂರ್ಮ ಪುರಾಣದಲ್ಲೂ ಇದರ ಉಲ್ಲೇಖವಿದೆ. ‘ಬದ್ರಿನಾಥ್’ ಮತ್ತು ‘ಕೇದಾರ್ನಾಥ್’ ಪುಣ್ಯಸ್ಥಳಗಳ ಯಾತ್ರೆಗೆ ಮೊದಲು ‘ನೈಮಿಶಾರಣ್ಯದ ಯಾತ್ರೆ’ ಅತಿಮುಖ್ಯವಾದದ್ದು.

ನೈಮಿಶಾರಣ್ಯ ವಿಷ್ಣುವಿನ ಎಂಟು ದೇವಾಲಯಗಳಲ್ಲಿ ಒಂದು
ಅರಣ್ಯದಲ್ಲಿ ಋಷಿಮುನಿಗಳು ಇದ್ದ ಇತಿಹಾಸ ಕಲ್ಪನೆ

ದಿವ್ಯ ದೇಸಂ ಕ್ಷೇತ್ರಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ತಮಿಳುನಾಡು ರಾಜ್ಯದಲ್ಲೆ ಕಂಡುಬರುತ್ತವೆ. ಮಿಕ್ಕಂತೆ ಕೆಲ ಕ್ಷೇತ್ರಗಳು ಉತ್ತರ ಭಾರತ ಹಾಗೂ ಆಂಧ್ರಪ್ರದೇಶಗಳಲ್ಲಿ ಕಾಣಸಿಗುತ್ತವೆ. ಪ್ರಸ್ತುತ ಲೇಖನದಲ್ಲಿ ತಿಳಿಸಲಾದ ದಿವ್ಯ ದೇಸಂನ ಈ ಕ್ಷೇತ್ರವು ಉತ್ತರ ಭಾರತದ ಉತ್ತರ ಪ್ರದೇಶದಲ್ಲಿರುವ ವಿಷ್ಣುವಿನ ಪ್ರಭಾವಶಾಲಿ ಸ್ಥಳವಾಗಿ ಗುರುತಿಸಲ್ಪಡುತ್ತದೆ.

ಸಾಕಷ್ಟು ಪ್ರಭಾವಶಾಲಿ ವಿಷ್ಣುವಿನ ದೇವಾಲಯವಾಗಿ ಭಕ್ತರನ್ನು ಆಕರ್ಷಿಸುತ್ತದೆ. ಈ ದೇವಾಲಯಕ್ಕೆ ಭೇಟಿ ನೀಡಲು ಬಯಸಿದ್ದರೆ ಸಂಜೆ ಆರು ಘಂಟೆಯ ಮುಂಚೆಯೆ ಇಲ್ಲಿಗೆ ಭೇಟಿ ನೀಡಬೇಕು. ಆರರ ನಂತರ ದೇವಾಲಯವನ್ನು ಮುಚ್ಚಲಾಗುತ್ತದೆ. ದೇವಾಲಯಕ್ಕೆ ಹೊಂದಿಕೊಂಡಂತೆ ಕಲ್ಯಾಣಿಯಿದ್ದು ಅದನ್ನು ಚಕ್ರ ಕುಂಡ ಎಂದು ಕರೆಯಲಾಗುತ್ತದೆ.

ಕಥೆಯಂತೆ, ದಧೀಚಿ ಮಹರ್ಷಿಗಳು ತಮ್ಮ ಎಲುಬುಗಳಿಂದ ಹೊಸ ಆಯುಧ ನಿರ್ಮಿಸಲು ಇಂದ್ರನಿಗೆ ಅವನ ಪ್ರಾರ್ಥನೆಯ ಮೆರೆಗೆ ತಮ್ಮ ಪ್ರಾಣ ತ್ಯಜಿಸುವ ಸಂದರ್ಭ ಬಂದಾಗ ಅವರು ಇಂದ್ರನನ್ನು ಕುರಿತು ದೇಹ ತ್ಯಜಿಸುವುದಕ್ಕೆ ಮುಂಚೆ ತಾವು ಎಲ್ಲ ಪವಿತ್ರ ನದಿಗಳ ದರ್ಶನ ಪಡೆಯುವ ಬಯಕೆಯನ್ನು ವ್ಯಕ್ತಪಡಿಸಿದರು.

ಅದನ್ನೊಪ್ಪಿದ ದೇವೇಂದ್ರನು ಸಕಲ ಪವಿತ್ರ ನದಿಗಳ ನೀರನ್ನು ಈ ನಿಮಿಶಾರಣ್ಯದ ಚಕ್ರ ಕುಂಡದಲ್ಲಿ ಬರುವಂತೆ ಮಾಡಿದನು. ಹಾಗಾಗಿ ಚಕ್ರ ಕುಂಡವು ಸಾಕಷ್ಟು ಪಾವಿತ್ರ್ಯತೆಯನ್ನು ಪಡೆದಿದೆ ಎನ್ನಲಾಗುತ್ತದೆ. ಅಲ್ಲದೆ ಒಮ್ಮೆ ನಾರದ ಮಹರ್ಷಿಗಳು ಪವಿತ್ರ ಕೊಳಗಳ ಅನ್ವೇಷಣೆ ಮಾಡುತ್ತಿದ್ದಾಗ ಚಕ್ರ ಕುಂಡಕ್ಕೂ ಭೇಟಿ ನೀಡಿದ್ದರು ಎಂಬ ಕಥೆಯಿದೆ.

ವಿಷ್ಣುವಿನ ಸುದರ್ಶನ ಚಕ್ರದಿಂದಲೆ ಈ ಕಲ್ಯಾಣಿಯ ನಿರ್ಮಾಣವಾಗಿದ್ದೆಂದು ನಂಬಲಾಗಿದ್ದು ಅತ್ಯಂತ ಪವಿತ್ರ ಕೊಳ ಎನ್ನಲಾಗುತ್ತದೆ. ಉತ್ಸವಗಳ ಸಂದರ್ಭದಲ್ಲಿ ಭಕ್ತರು ಇದರಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಇದರಿಂದ ಪಾಪ ಕರ್ಮಗಳು ವಿಮೋಚನೆಗೊಳ್ಳುತ್ತವೆ ಎಂದು ನಂಬಲಾಗಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ತರಕಾರಿಗಳನ್ನು ಸೇವಿಸುವುದರಿಂದ ಏನೇನು ಲಾಭ

ತರಕಾರಿಗಳನ್ನು ಸೇವಿಸುವುದರಿಂದ ಏನೇನು ಲಾಭಗಳಿವೆ?

ಪ್ರವಾಸಿ ಭಾರತೀಯ ದಿವಸ್

ಜನವರಿ 9, “ಪ್ರವಾಸಿ ಭಾರತೀಯ ದಿವಸ್”