in ,

ಭಾರತದ ರಾಷ್ಟ್ರೀಯ ಗ್ರಂಥಾಲಯ

ಗ್ರಂಥಾಲಯ
ಗ್ರಂಥಾಲಯ

ಭಾರತದ ರಾಷ್ಟ್ರೀಯ ಗ್ರಂಥಾಲಯವು ಕೊಲ್ಕತ್ತಾದ ಆಲಿಪೋರ್ ನ ಬೆಲ್ವೆಡೆರೆ ಎಸ್ಟೇಟ್ ನಲ್ಲಿದೆ. ಇದು ಭಾರತದ ಅತೀ ದೊಡ್ಡ ಗ್ರಂಥಾಲಯವಾಗಿದ್ದು, ದೊಡ್ಡ ಗ್ರಂಥಾಲಯಗಳ ಪಟ್ಟಿಯಲ್ಲಿ ೧೪ ನೇ ಗಂಥಾಲಯ ಮತ್ತು ಭಾರತದ ಸಾರ್ವಜನಿಕ ದಾಖಲೆಯ ಗ್ರಂಥಾಲಯವಾಗಿದೆ. ಇದು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿದೆ. ಗ್ರಂಥಾಲಯವನ್ನು ಭಾರತದಲ್ಲಿ ಉತ್ಪಾದಿಸಿದ ಮುದ್ರಣ ವಸ್ತುಗಳನ್ನು ಸಂಗ್ರಹಿಸಲು, ಪ್ರಸಾರ ಮಾಡಲು ಮತ್ತು ಸಂರಕ್ಷಿಸಲು ರೂಪಿಸಲಾಗಿದೆ. ಬೆಲ್ವೆಡೆರೆ ಎಸ್ಟೇಟ್ ನಲ್ಲಿ ಇದು ೩೦ ಎಕರೆ (೧೨ ಹೆಕ್ಟೇರ್) ವಿಸ್ತೀರ್ಣದಲ್ಲಿದೆ. ೨.೨ ಮಿಲಿಯನ್ ಪುಸ್ತಕಗಳ ಸಂಗ್ರಹದೊಂದಿಗೆ ಇದು ಭಾರತದಲ್ಲಿ ಅತಿ ದೊಡ್ಡ ಗ್ರಂಥಾಲಯವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ, ಇದು ಬಂಗಾಳದ ಲೆಫ್ಟಿನೆಂಟ್ ಗವರ್ನರ್ ನ ಅಧಿಕೃತ ನಿವಾಸವಾಗಿತ್ತು.

ಭಾರತದ ರಾಷ್ಟ್ರೀಯ ಗ್ರಂಥಾಲಯವು ಭಾರತದಲ್ಲಿಯೇ ಅತಿದೊಡ್ಡ ಗ್ರಂಥಾಲಯ ಮತ್ತು ಸಾರ್ವಜನಿಕ ದಾಖಲೆಯ ಗ್ರಂಥಾಲಯವಾಗಿದೆ. ಈ ಗ್ರಂಥಾಲಯವು “ರಾಷ್ಟ್ರೀಯ ಸರ್ಕಾರದ ಸಾಂಸ್ಕೃತಿಕ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಭಾರತದಲ್ಲಿ ಉಂಟಾಗುವ ಎಲ್ಲಾ ಮುದ್ರಿತ ವಸ್ತುಗಳನ್ನು ಸಂಗ್ರಹಿಸಲು, ಪ್ರಸಾರ ಮಾಡಲು ಮತ್ತು ಸಂರಕ್ಷಿಸಲು ಗೊತ್ತುಪಡಿಸಲಾಗಿರುತ್ತದೆ ಮತ್ತು ದೇಶದ ಬಗ್ಗೆ ಪ್ರಕಟವಾದ ಎಲ್ಲಾ ವಿದೇಶಿ ಕೃತಿಗಳನ್ನು-‘ಭಾರತದ ಬಗ್ಗೆ ಇರುವ ಪ್ರತೀ ಕೃತಿಗಳನ್ನು… ಕಾಣಬಹುದು ಮತ್ತು ಓದಬಹುದು’. ರಾಷ್ಟ್ರೀಯ ಗ್ರಂಥಾಲಯವು, ಸಾರ್ವಜನಿಕ ಗ್ರಂಥಾಲಯವನ್ನು ಇಂಪೀರಿಯಲ್ ಲೈಬ್ರರಿ-ಹಲವಾರು ಸರ್ಕಾರಿ ಗ್ರಂಥಾಲಯಗಳನ್ನು ವಿಲೀನಗೊಳಿಸಿದ ಫ಼ಲಿತಾಂಶವಾಗಿದೆ. ರಾಷ್ಟ್ರೀಯ ಗ್ರಂಥಾಲಯ (೧೯೫೩), ನಂತರ ಇಂಪೀರಿಯಲ್ ಲೈಬ್ರರಿ ಹಲವಾರು ವಿದೇಶಿ (ಬ್ರಿಟಿಷ್) ಮತ್ತು ಭಾರತೀಯ ಶೀರ್ಷಿಕೆಗಳನ್ನು ಹೊಂದಿದೆ ಮತ್ತು ಸಾರ್ವಜನಿಕರಿಗೆ ಮುಕ್ತವಾಗಿದೆ. ಮತ್ತಷ್ಟು ಗಮನಿಸಬೇಕಾದರೆ, ಭಾರತೀಯ ಗ್ರಂಥಾಲಯವು ಪುಸ್ತಕ, ನಿಯತಕಾಲಿಕಗಳು, ಮತ್ತು ಪ್ರಶಸ್ತಿಗಳನ್ನು “ಬಹುತೇಕ ಭಾರತೀಯ ಭಾಷೆಗಳಲ್ಲಿ ಹಿಂದಿ, ಕಾಶ್ಮೀರಿ, ಪಂಜಾಬ್, ಸಿಂಧಿ, ತೆಲುಗು ಮತ್ತು ಉರ್ದುಗಳೊಂದಿಗೆ” ಹೆಚ್ಚಿನ ಸಂಗ್ರಹವನ್ನು ಹೊಂದಿದೆ (ಮುರ್ರೇ, ೨೦೦೯). ಭಾರತದ ರಾಷ್ಟ್ರೀಯ ಗ್ರಂಥಾಲಯದಲ್ಲಿ “ಅಸ್ಸಾಮಿ, ಬಂಗಾಳಿ, ಗುಜರಾತಿ ….. ಮತ್ತು ತಮಿಳು ಸೇರಿದಂತೆ ಕನಿಷ್ಟ ಹದಿನೈದು ಭಾಷೆಗಳ ಹಲವು ಅಪರೂಪದ ಕೃತಿಗಳ ವಿಶೇಷ ಸಂಗ್ರಹಗಳಿವೆ (ಮುರ್ರೇ, ೨೦೦೯). ಹಿಂದಿ ಇಲಾಖೆಯು ಹತ್ತೊಂಬತ್ತನೇ ಶತಮಾನಕ್ಕೂ ಮುಂಚಿನ ಪುಸ್ತಕಗಳನ್ನು ಮತ್ತು ಆ ಭಾಷೆಯಲ್ಲಿ ಮೊದಲ ಬಾರಿಗೆ ಮುದ್ರಿತವಾದ ಪುಸ್ತಕಗಳ ಸಂಗ್ರಹಣೆಯನ್ನೂ ಹೊಂದಿದೆ. ಇಲ್ಲಿನ ಸಂಗ್ರಹವು ೮೬,೦೦೦ ನಕ್ಷೆಗಳು ಮತ್ತು ೩,೨೦೦ ಹಸ್ತಪ್ರತಿಗಳನ್ನು ಹೊಂದಿರುತ್ತದೆ.

ಭಾರತದ ರಾಷ್ಟ್ರೀಯ ಗ್ರಂಥಾಲಯ
ಭಾರತದ ರಾಷ್ಟ್ರೀಯ ಗ್ರಂಥಾಲಯ

೧೮೩೬ ರಲ್ಲಿ ಕಲ್ಕತ್ತಾ ಸಾರ್ವಜನಿಕ ಗ್ರಂಥಾಲಯದ ರಚನೆಯೊಂದಿಗೆ ರಾಷ್ಟ್ರೀಯ ಗ್ರಂಥಾಲಯದ ಇತಿಹಾಸ ಪ್ರಾರಂಭವಾಯಿತು. ಇದು ಒಂದು ಸರ್ಕಾರೇತರ ಸಂಸ್ಥೆಯಾಗಿದ್ದು, ಸ್ವಾಮ್ಯದ ಆಧಾರದ ಮೇಲೆ ನಡೆಯುತ್ತಿತ್ತು. ಚಂದಾದಾರಿಕೆಯಲ್ಲಿ ಜನರು ₹ ೩೦೦ ಕೊಡುಗೆಯನ್ನು ನೀಡಿ ಮಾಲೀಕರಾಗಬಹುದಿತ್ತು. ಪ್ರಿನ್ಸ್ ದ್ವಾರಕಾನಾಥ್ ಟಾಗೋರ್ ಆ ಲೈಬ್ರರಿಯ ಮೊದಲ ಮಾಲೀಕರಾಗಿದ್ದರು. ಆ ಸಮಯದಲ್ಲಿ ₹ ೩೦೦ ಗಮನಾರ್ಹ ಪ್ರಮಾಣವಾಗಿತ್ತು, ಆದ್ದರಿಂದ ಬಡ ವಿದ್ಯಾರ್ಥಿಗಳಿಗೆ ಮತ್ತು ಇತರರಿಗೆ ಕೆಲವು ಸಮಯದವರೆಗೆ ಗ್ರಂಥಾಲಯದ ಉಚಿತ ಬಳಕೆಯನ್ನು ಅನುಮತಿಸಲಾಯಿತು.

ಆ ಸಮಯದಲ್ಲಿನ ಗವರ್ನರ್ ಜನರಲ್ ಲಾರ್ಡ್ ಮೆಟ್ಕಾಲ್ಫ್, ೪,೬೭೫ ಸಂಪುಟಗಳನ್ನು ಕೊಲ್ಕತ್ತಾದ ಫೋರ್ಟ್ ವಿಲಿಯಂನ ಗ್ರಂಥಾಲಯದಿಂದ ಕಲ್ಕತ್ತಾ ಸಾರ್ವಜನಿಕ ಗ್ರಂಥಾಲಯಕ್ಕೆ ವರ್ಗಾಯಿಸಿದರು. ಇದು ಮತ್ತು ಕೆಲವು ವ್ಯಕ್ತಿಗಳ ಪುಸ್ತಕಗಳ ದೇಣಿಗೆಯಿಂದ ಗ್ರಂಥಾಲಯವನ್ನು ವಿಶಿಷ್ಟ ರೀತಿಯಲ್ಲಿ ರೂಪುಗೊಳಿಸಿತು.

ಭಾರತೀಯ ಮತ್ತು ವಿದೇಶಿ ಪುಸ್ತಕಗಳು, ವಿಶೇಷವಾಗಿ ಬ್ರಿಟಿಷ್, ಗ್ರಂಥಾಲಯಕ್ಕಾಗಿ ಖರೀದಿಸಲ್ಪಟ್ಟವು. ದೇಣಿಗೆಗಳನ್ನು ನಿಯಮಿತವಾಗಿ ವ್ಯಕ್ತಿಗಳು ಮತ್ತು ಸರ್ಕಾರದ ಮೂಲಕ ಮಾಡಲಾಯಿತು. ಕಲ್ಕತ್ತಾ ಸಾರ್ವಜನಿಕ ಗ್ರಂಥಾಲಯವು ಪ್ರಪಂಚದ ಈ ಭಾಗದಲ್ಲಿ ಮೊದಲ ಸಾರ್ವಜನಿಕ ಗ್ರಂಥಾಲಯವಾಗಿ ಒಂದು ವಿಶಿಷ್ಟ ಸ್ಥಾನವನ್ನು ಹೊಂದಿತ್ತು. ೧೯ ನೆಯ ಶತಮಾನದ ಮೊದಲಾರ್ಧದಲ್ಲಿ ಇಂತಹ ಸುಸಂಘಟಿತ ಮತ್ತು ಪರಿಣಾಮಕಾರಿಯಾಗಿ ನಡೆಸುತ್ತಿದ್ದ ಗ್ರಂಥಾಲಯವು ಯುರೋಪ್ ನಲ್ಲಿಯೇ ಅಪರೂಪವಾಗಿತ್ತು.

ಭಾರತದ ರಾಷ್ಟ್ರೀಯ ಗ್ರಂಥಾಲಯ
ಕಲ್ಕತ್ತಾ ಸಾರ್ವಜನಿಕ ಗ್ರಂಥಾಲಯ

ಕಲ್ಕತ್ತಾ ಸಾರ್ವಜನಿಕ ಗ್ರಂಥಾಲಯದ ಪ್ರಯತ್ನದಿಂದಾಗಿ, ಪ್ರಸ್ತುತ ರಾಷ್ಟ್ರೀಯ ಗ್ರಂಥಾಲಯವು ಅದರ ಸಂಗ್ರಹಣೆಯಲ್ಲಿ ಹಲವು ಅಪರೂಪದ ಪುಸ್ತಕಗಳು ಮತ್ತು ನಿಯತಕಾಲಿಕಗಳನ್ನು ಹೊಂದಿದೆ.

೧೮೯೧ ರಲ್ಲಿ ಕಲ್ಕತ್ತಾದಲ್ಲಿ ಹಲವಾರು ಸಚಿವಾಲಯ ಗ್ರಂಥಾಲಯಗಳನ್ನು ಸಂಯೋಜಿಸುವ ಮೂಲಕ ಇಂಪೀರಿಯಲ್ ಲೈಬ್ರರಿಯನ್ನು ರಚಿಸಲಾಯಿತು. ಇವುಗಳಲ್ಲಿ, ಅತ್ಯಂತ ಪ್ರಮುಖ ಮತ್ತು ಆಸಕ್ತಿದಾಯಕವೆಂದರೆ ಗೃಹ ಇಲಾಖೆಯ ಗ್ರಂಥಾಲಯವಾಗಿದ್ದು, ಈಸ್ಟ್ ಇಂಡಿಯಾ ಕಾಲೇಜಿನ ಗ್ರಂಥಾಲಯ, ಫೋರ್ಟ್ ವಿಲಿಯಂ ಮತ್ತು ಲಂಡನ್ ನಲ್ಲಿರುವ ಈಸ್ಟ್ ಇಂಡಿಯಾ ಬೋರ್ಡ್ ಗ್ರಂಥಾಲಯಕ್ಕೆ ಸೇರಿದ ಅನೇಕ ಪುಸ್ತಕಗಳನ್ನು ಒಳಗೊಂಡಿತ್ತು. ಆದರೆ ಗ್ರಂಥಾಲಯದ ಬಳಕೆಯನ್ನು ಸರ್ಕಾರದ ಉನ್ನತ ಅಧಿಕಾರಿಗಳಿಗೆ ನಿರ್ಬಂಧಿಸಲಾಗಿತ್ತು. ಸರ್ ಅಶುತೋಷ್ ಮುಖರ್ಜಿ ಅವರನ್ನು ಇಂಪೀರಿಯಲ್ ಲೈಬ್ರರಿ ಕೌನ್ಸಿಲ್ನ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು, ಇದಕ್ಕಾಗಿ ಅವರು ಪ್ರತ್ಯೇಕ ವಿಭಾಗದಲ್ಲಿ ೮೦,೦೦೦ ಪುಸ್ತಕಗಳ ವೈಯಕ್ತಿಕ ಸಂಗ್ರಹವನ್ನು ದೇಣಿಗೆ ನೀಡಿದರು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಬೆಕ್ಕು

ಪರಭಕ್ಷಕ ಮತ್ತು ಮಾಂಸಾಹಾರಿ ಸಸ್ತನಿ ಬೆಕ್ಕು

ಬೆಂಡೆಕಾಯಿ ಆರೋಗ್ಯ ಲಾಭ

ಬೆಂಡೆಕಾಯಿ ಕೃಷಿ ಮತ್ತು ಆರೋಗ್ಯ ಲಾಭ