ಎಲ್ಲೋರವು ಭಾರತದ ರಾಜ್ಯ ಮಹಾರಾಷ್ಟ್ರದ ಔರಂಗಾಬಾದ್ ನಗರದಿಂದ 30 km ನಷ್ಟು ದೂರಕ್ಕೆ ಇರುವ ರಾಷ್ಟ್ರಕೂಟ ಅರಸರಿಂದ ನಿರ್ಮಿಸಲ್ಪಟ್ಟ ಒಂದು ಪುರಾತತ್ವಶಾಸ್ತ್ರದ ಪ್ರದೇಶವಾಗಿದೆ. ಸ್ಮಾರಕ ಗುಹೆಗಳಿಗೆ ಜನಪ್ರಿಯವಾಗಿರುವ ಎಲ್ಲೋರವು ಪ್ರಪಂಚದ ಆಸ್ತಿಯ ತಾಣವಾಗಿದೆ. ಎಲ್ಲೋರವು ಭಾರತೀಯ ಕಲ್ಲಿನಿಂದ ಕೆತ್ತಿನ ವಾಸ್ತುಶಿಲ್ಪದ ಸಾಕ್ಷ್ಯರೂಪವಾಗಿದೆ. 34 “ಗುಹೆಗಳು” -ವಾಸ್ತವವಾಗಿ ರಚನೆಗಳನ್ನು ಚರಣಾಂದ್ರಿ ಬೆಟ್ಟಗಳ ಶೃಂಗೀಯ ಪಾರ್ಶ್ವದ ಹೊರಗೆ ಭೂಶೋಧನೆ ಮಾಡಲಾಗಿತ್ತು.
ಕಲ್ಲಿನಿಂದ ಕೆತ್ತಿದ ಬೌದ್ಧ, ಹಿಂದು ಮತ್ತು ಜೈನ ದೇವಸ್ಥಾನ ಮತ್ತು ಸನ್ಯಾಸಿಗಳ ಮಂದಿರಗಳಾಗಿದ್ದು, ಇವನ್ನು 5ನೇ ಮತ್ತು 10ನೇ ಶತಮಾನಗಳ ಮಧ್ಯೆ ನಿರ್ಮಿಸಲಾಗಿದೆ. ಸಾಮಿಪ್ಯದಲ್ಲಿ ರಚಿಸಲಾದ 12 ಬೌದ್ಧ ಗುಹೆಗಳು, 17 ಹಿಂದು ಗುಹೆಗಳು ಮತ್ತು 5 ಜೈನ ಗುಹೆಗಳು, ಭಾರತೀಯ ಇತಿಹಾಸದ ಆ ಸಂದರ್ಭದಲ್ಲಿ ಪ್ರಚಲಿತದಲ್ಲಿದ್ದ ಧಾರ್ಮಿಕ ಸಾಮರಸ್ಯವನ್ನು ತೋರಿಸುತ್ತವೆ.
ಐದನೇ ಮತ್ತು ಎಂಟನೇ ಶತಮಾನದ ಮಧ್ಯದಲ್ಲಿ ರಚಿಸಲಾದ ಮೊದಲ ಹಂತದಲ್ಲಿನ 1-5 ಗುಹೆಗಳು ಮತ್ತು ನಂತರದ ಹಂತದ 6-12 ಗುಹೆಗಳೊಂದಿಗೆ ಬೌದ್ಧ ಗುಹೆಗಳನ್ನು ಬಹುಹಿಂದಿನ ರಚನೆಗಳೆಂದು ಆರಂಭದಲ್ಲಿ ಭಾವಿಸಲಾಗಿತ್ತು. ಆದರೆ ಈಗ ಆಧುನಿಕ ಪಂಡಿತರಿಗೆ ಕೆಲವು ಹಿಂದು ಗುಹೆಗಳು ಈ ಗುಹೆಗಳಿಗಿಂತ ಹಿಂದಿನದಾಗಿವೆ ಎಂಬುದು ಸ್ಪಷ್ಟವಾಗಿದೆ. ಆರಂಭಿಕ ಬೌದ್ಧ ಗುಹೆಯೆಂದರೆ ಗುಹೆ 6, ನಂತರದವು 5,2,3,5 4,7,8,10 ಮತ್ತು 9,11 ಮತ್ತು 12 ಗುಹೆಗಳು ಕೊನೆಯಲ್ಲಿ ಬರುತ್ತವೆ. ಎಲ್ಲಾ ಬೌದ್ಧ ಗುಹೆಗಳನ್ನು 630-700ರ ಮಧ್ಯದಲ್ಲಿ ನಿರ್ಮಿಸಲಾಯಿತು.
ಈ ರಚನೆಗಳು ಹೆಚ್ಚಾಗಿ ವಿಹಾರಗಳು ಅಥವಾ ಸನ್ಯಾಸಿ ಮಂದಿರಗಳನ್ನು ಒಳಗೊಂಡಿವೆ: ವಾಸಿಸುವ ನಿವಾಸಗಳು, ನಿದ್ರಿಸುವ ಬಿಡಾರಗಳು, ಅಡುಗೆ ಕೋಣೆಗಳು ಮತ್ತು ಇತರ ಕೊಠಡಿಗಳನ್ನೂ ಒಳಗೊಂಡಂತೆ ದೊಡ್ಡ, ಬಹು-ಮಹಡಿಗಳ ಕಟ್ಟಡಗಳನ್ನು ಬೆಟ್ಟದ ಪಾರ್ಶ್ವಕ್ಕೆ ಕೆತ್ತಲಾಗಿದೆ. ಕೆಲವು ಸನ್ಯಾಸಿ ಮಂದಿರಗಳ ಗುಹೆಗಳು ಬುದ್ಧ, ಬೋಧಿಸತ್ವ ಮತ್ತು ಸನ್ಯಾಸಿಗಳ ಕೆತ್ತನೆಗಳನ್ನೂ ಒಳಗೊಂಡಂತೆ ದೇವಾಲಯಗಳನ್ನು ಹೊಂದಿವೆ. ಹೆಚ್ಚಿನ ಗುಹೆಗಳಲ್ಲಿ, ಶಿಲ್ಪಿಗಳು ಶಿಲೆಗಳಿಗೆ ಮರದ ರೂಪವನ್ನು ನೀಡಲು ಪ್ರಯತ್ನಿಸಿದ್ದಾರೆ.
ಹೆಚ್ಚು ಪ್ರಸಿದ್ಧ ಬೌದ್ಧ ಗುಹೆಯೆಂದರೆ ಗುಹೆ 10. ಚೈತ್ಯ ಹಜಾರ ,ಚಂದ್ರಶಾಲ ಅಥವಾ ‘ವಿಶ್ವಕರ್ಮ ಗುಹೆ’ಯಾದ ಇದನ್ನು ಜನಪ್ರಿಯವಾಗಿ “ಬಡಗಿಯ ಗುಹೆ” ಎಂದು ಕರೆಯಲಾಗುತ್ತದೆ. ಅದರ ಬಹು-ಅಂತಸ್ತಿನ ಪ್ರವೇಶದ ಆಚೆಗೆ ಕ್ಯಾತಿಡ್ರಲ್-ರೀತಿಯ ಸ್ತೂಪ ಹಜಾರವಿದೆ. ಇದನ್ನು ಚೈತ್ಯವೆಂದೂ ಕರೆಯಲಾಗುತ್ತದೆ. ಇದರ ಚಾವಣಿಯ ಒಳಮೈಯನ್ನು ಮರದ ಅಡ್ಡತೊಲೆಯ ರೂಪವನ್ನು ನೀಡುವಂತೆ ಕೆತ್ತಲಾಗಿದೆ. ಈ ಗುಹೆಯ ಕೇಂದ್ರ-ಭಾಗದಲ್ಲಿ ಧರ್ಮೋಪದೇಶ ನೀಡುವ ಭಂಗಿಯಲ್ಲಿ ಕುಳಿತ ಬುದ್ಧನ 15-ಅಡಿ ಎತ್ತರದ ಪ್ರತಿಮೆಯೊಂದಿದೆ. ಇತರ ಬೌದ್ಧ ಗುಹೆಗಳಲ್ಲಿ ಮೊದಲ ಒಂಬತ್ತು (ಗುಹೆಗಳು 1–9) ಸನ್ಯಾಸಿ ಮಂದಿರಗಳಾಗಿವೆ. ಕೊನೆಯ ಎರಡು ಗುಹೆಗಳಾದ ಡು ಟಾಲ್ (ಗುಹೆ 11) ಮತ್ತು ಟಿನ್ ಟಾಲ್ (ಗುಹೆ 12) ಮೂರು ಕಥೆಗಳನ್ನು ಹೊಂದಿವೆ.
ಗುಹೆ 1 ವಿಹಾರ ವಾಗಿದ್ದು, ಎಂಟು ಕಿರುಕೊಠಡಿಗಳನ್ನು ಹೊಂದಿದೆ, ನಾಲ್ಕು ಹಿಂದಿನ ಪೌಳಿಯಲ್ಲಿವೆ ಮತ್ತು ನಾಲ್ಕು ಬಲ ಪೌಳಿಯಲ್ಲಿವೆ. ಇದು ಕಿರುಕೊಠಡಿಯೊಂದರ ಮುಂಭಾಗದಲ್ಲಿ ಒಂದು ಪೋರ್ಟಿಕೊವನ್ನು ಹೊಂದಿದೆ.ಇದು ಬಹುಶಃ ಇತರ ವಿಹಾರಗಳಿಗೆ ಕಣಜವಾಗಿತ್ತು.
ಬೌದ್ಧ ಗುಹೆಗಳಲ್ಲಿ ವಿಶ್ವಕರ್ಮ ವೊಂದೇ (ಗುಹೆ 10) ಚೈತ್ಯ ಗೃಹವಾಗಿದೆ. ಇದನ್ನು ಸ್ಥಳೀಯವಾಗಿ ವಿಶ್ವಕರ್ಮ ಅಥವಾ ಸುತಾರ್ ಕ ಜೋಪ್ಡ, ಬಡಗಿಯ ಗುಡಿಸಲು ಎಂದು ಕರೆಯಲಾಗುತ್ತದೆ. ಇದು ಅಜಂತದ 19 ಮತ್ತು 26 ಗುಹೆಗಳ ರಚನಾ ಸ್ವರೂಪವನ್ನು ಅನುಸರಿಸುತ್ತದೆ. ಶೈಲಿಯ ಆಧಾರದಲ್ಲಿ, ಈ ಗುಹೆಯ ನಿರ್ಮಾಣದ ದಿನಾಂಕವನ್ನು ಸುಮಾರು 700 ಎಂದು ಸೂಚಿಸಲಾಗಿದೆ. ಈ ಚೈತ್ಯವು ಒಮ್ಮೆ ಎತ್ತರದ ಪರದೆಯ ಗೋಡೆಯನ್ನು ಹೊಂದಿತ್ತು, ಈಗ ಅದು ನಾಶವಾಗಿ ಹೋಗಿದೆ. ಮುಂಭಾಗವು ಕಲ್ಲಿನ-ಕೆತ್ತನೆಯ ಅಂಗಳವಾಗಿದೆ, ಅದು ಹಾರಿಕೆಯ ಮೆಟ್ಟಿಲುಗಳಿಂದ ಪ್ರವೇಶಿಸುವಂತಿದೆ. ಎರಡೂ ಬದಿಯು ಕಂಬಗಳನ್ನು ಹೊಂದಿದ ಹಜಾರವಾಗಿದೆ ಜೊತೆಗೆ ಹಿಂದಿನ ಗೋಡೆಗಳಲ್ಲಿ ಕೋಣೆಗಳಿವೆ. ಇವುಗಳು ಬಹುಶಃ ಸಹಕಾರಿಯಾಗುವಂತಹ ದೇವಾಲಯಗಳಾಗಿದ್ದವು ಆದರೆ ಸಂಪೂರ್ಣವಾಗಲಿಲ್ಲ. ಕಂಬಗಳುಳ್ಳ ಚೈತ್ಯದ ವೆರಾಂಡಾವು ಒಂದು ಚಿಕ್ಕ ಕಲಶವನ್ನು ಎರಡೂ ಬದಿಗಳಲ್ಲಿ ಮತ್ತು ಒಂದೇ ಹಿಂಬದಿಯ ಗೋಡೆಯ ದೂರದ ಮೂಲೆಯಲ್ಲಿ ಹೊಂದಿದೆ. ಮೊಗಶಾಲೆಯಲ್ಲಿರುವ ಸ್ತಂಭಗಳು ಭಾರಿ ಚೌಕಾಕಾರದ ಶೂಲಗಳನ್ನು, ಮತ್ತು ಘಟ-ಪಲ್ಲವ , ಪುಷ್ಪಕುಂಭ ಮತ್ತು ಎಲೆಗಳ ಗೊಂಚಲುಗಳನ್ನು ಹೊಂದಿವೆ. ಪ್ರಮುಖ ಹಾಲ್ ವಿನ್ಯಾಶದಲ್ಲಿ ಅರ್ಧವೃತ್ತಾಕಾರವಾಗಿದೆ ಮತ್ತು ಇದರ ಮದ್ಯಭಾಗ ಮತ್ತು ಪಾರ್ಶ್ವಭಾಗಗಳ ನಡುವೆ ಪ್ಲೇನ್ ಬ್ರಾಕೆಟ್ ಕ್ಯಾಪಿಟಲ್‌ಗಳನ್ನೊಂದಿದ 28 ಅಷ್ಟಭುಜಾಕೃತಿಯ ಸ್ತಂಭಗಳಿಂದ ಬೇರ್ಪಡಿಸಲಾಗಿದೆ. ಚೈತ್ಯ ಹಾಲ್‌ನ ಅರ್ಧವೃತ್ತಾಕಾರದ ತುದಿಯಲ್ಲಿನ ಗೋಮುಟದ ಮುಖಭಾಗದಲ್ಲಿ ಬಹುದೊಡ್ಡದಾದ
3.30 m ಎತ್ತರದಲ್ಲಿ ವ್ಯಾಖ್ಯಾನ ಮುದ್ರ ಭೋದನ ಭಂಗಿಯ ಬುದ್ಧನನ್ನು ಕೆತ್ತಲಾಗಿದೆ. ಬಹು ದೊಡ್ಡದಾದ ನ್ನುಬೋಧಿ ವೃಕ್ಷವನ್ನು ಹಿಂಬದಿಯಲ್ಲಿ ಕೆತ್ತಲಾಗಿದೆ. ಹಾಲ್ ಕಮಾನಿನ ಮೇಲು ಛಾವಣಿಯನ್ನೊಂದಿದೆ, ಇದರಲ್ಲಿನ ರಿಬ್‌ಗಳನ್ನು ಮರವನ್ನೋಲುವಂತೆ ಕಲ್ಲಿನಲ್ಲಿ ಕೊರೆಯಲಾಗಿದೆ.
ಹಿಂದು ಗುಹೆಗಳು ಅರನೇ ಶತಮಾನದ ಮಧ್ಯದಿಂದ ಎಂಟನೇ ಶತಮಾನದ ಕೊನೆಯವರೆಗೆ ನಿರ್ಮಾಣಗೊಂಡವು. ಮೊದಲನೆಯ ಗುಹೆಗಳು (ಗುಹೆಗಳು 17–29) ಕಲಚೂರಿ ಅವಧಿಯ ಸಮಯದಲ್ಲಿ ನಿರ್ಮಾಣಗೊಂಡಿದ್ದವು. ಕೆಲಸವು ಮೊದಲು ಗುಹೆಗಳು 28, 27 ಮತ್ತು 19 ರಲ್ಲಿ ಪ್ರಾರಂಭವಾಯಿತು. ಇವು ಮೊದಲನೆಯ ಹಂತದಲ್ಲಿ ನಿರ್ಮಾಣಗೊಂಡ ಗುಹೆಗಳು 29 ಮತ್ತು 21ರ ನಂತರದಲ್ಲಿ ಪ್ರಾರಂಭವಾದವು. ಇವೆರಡರ ಜೊತೆಯಲ್ಲಿ, ಗುಹೆಗಳು 20 ಮತ್ತು 26 ರಲ್ಲಿ ಕೆಲಸ ನಡೆಯುತ್ತಿತ್ತು, ಮತ್ತು ಸ್ವಲ್ಪ ಸಮಯದ ನಂತರ ಗುಹೆಗಳು 17, 19 ಮತ್ತು 28 ರಲ್ಲಿ ಪ್ರಾರಂಭವಾಯಿತು.
ಗುಹೆಗಳು 14, 15 ಮತ್ತು 16 ಗಳನ್ನು ರಾಷ್ಟ್ರಕೂಟದ ಅವಧಿಯಲ್ಲಿ ನಿರ್ಮಾಣಮಾಡಲಾಗಿದೆ. ಗುಹೆಗಳು 14 ಮತ್ತು 15 ರಲ್ಲಿ ಕೆಲಸ ಪ್ರಾರಂಭವಾಯಿತು ಮತ್ತು ಗುಹೆ 16 ರಲ್ಲಿ ಉಚ್ಚತುದಿಯನ್ನು ತಲುಪಿತ್ತು.ಈ ಎಲ್ಲಾ ವಿನ್ಯಾಸಗಳನ್ನು ಸೃಜನಾತ್ಮಕ ದೃಷ್ಟಿಯ ಮತ್ತು ನಿರ್ವಹಣೆಯ ನೈಪುಣ್ಯತೆಯ ವಿವಿಧ ಪದ್ಧತಿಯಲ್ಲಿ ಪ್ರದರ್ಶಿಸಲಾಗಿದೆ. ಕೆಲವು ತುಂಬ ಸಂಕೀರ್ಣತೆಯಿಂದಕೂಡಿದ್ದವು ಇವನ್ನು ಪೂರ್ಣಗೊಳಿಸಲು ಅನೇಕ ತಲೆಮಾರಿನ ಯೋಜನೆಗಳ ರಚನೆ ಮತ್ತು ಅನೋನ್ಯಸಂಬಂಧಗಳ ಅಗತ್ಯವಿದೆ.
ಗುಹೆ 16, ಇದು ಕೈಲಾಸ ಅಥವಾ ಕೈಲಾಸನಾಥ ಎಂದು ಕೂಡ ಪ್ರಸಿದ್ಧವಾಗಿದೆ, ಇದು ಎಲ್ಲೋರದ ಸಾಟಿಯಿಲ್ಲದ ಆಕರ್ಷಕ ಕೇಂದ್ರಬಿಂದುವಾಗಿದೆ. ಮೌಂಟ್ ಕೈಲಾಶ್‌ರ ನೆನಪಿಗಾಗಿ ಇದನ್ನು ವಿನ್ಯಾಶಿಸಲಾಗಿದೆ, ಶಿವ ದೇವರ ಧಾಮವು – ನೋಡಲು ಸ್ವತಂತ್ರವಾಗಿ ನಿಂತ ಒಂದು ಬಹುಮಹಡಿಯ ದೇವಸ್ಥಾನದ ಕಾಂಪ್ಲೆಕ್ಸಿನಂತಿರುತ್ತದೆ, ಆದರೆ ಇದು ಒಂದೇ ಕಲ್ಲಿನಲ್ಲಿ ಕೆತ್ತಲಾಗಿದೆ, ಮತ್ತು ಅತೆನ್ಸ್ನಲ್ಲಿರುವ ಪಾರ್ತೆನಾನ್‌ನ ಸ್ಥಳದ ವಿಸ್ತಾರಕ್ಕಿಂತಲೂ ಎರಡುರಷ್ಟು ದೊಡ್ಡದಾಗಿದೆ. ಆರಂಭದಲ್ಲಿ ದೇವಸ್ಥಾನವು ಬಿಳಿ ಪ್ಲಾಸ್ಟೆರ್‌ನಿಂದ ಲೇಪಿತವಾಗಿತ್ತು ಇದರಿಂದ ಹಿಮಲೇಪಿತ ಮೌಂಟ್ ಕೈಲಾಶ್‌ನಂತೆ ಕಾಣುವಂತೆ ಮಾಡಲಾಗಿತ್ತು.
ಎಲ್ಲಾ ಶಿಲಾವಿನ್ಯಾಸಗಳನ್ನು ಬಹು ಹಂತಗಳಗಾಗಿ ಮಾಡಲಾಗಿದೆ. ಎರಡು ಮಹಡಿಯ ಹೆಬ್ಬಾಗಿಲು ಯು-ಆಕಾರದ ಆವರಣವನ್ನು ಪ್ರದರ್ಶಿಸುವ ದಕ್ಷಿಣ ಭಾರತದ ಗೋಪುರಮ್ ನ್ನು ಹೋಲುತ್ತದೆ. ಆವರಣವು ಮೂರು ಮಹಡಿಯ ಎತ್ತರದವರೆಗೆ ಕಲಾ ಸ್ತಂಬಗಳಿಂದ ಸುತ್ತುವರಿಯಲ್ಪಟ್ಟಿದೆ. ಚಿತ್ರಶಾಲೆಯು ಬೃಹತ್ ಮಟ್ಟದ ಕೆತ್ತನೆಯವರಿಂದ ಮಾಡಲ್ಪಟ್ಟಿದೆ, ಮತ್ತು ಉದ್ಯಾನಕುಂಜಗಳು ವಿವಿಧ ದೇವತೆಗಳ ಮಹತ್ತರವಾದ ಶಿಲ್ಪಕೆತ್ತನೆಯನ್ನು ಹೊಂದಿವೆ. ಮೂಲತಃ ತೇಲಾಡುವ ಕಲ್ಲಿನ ಸೇತುವೆಗಳು ಈ ಚಿತ್ರಶಾಲೆಯನ್ನು ಮುಖ್ಯ ದೇವಸ್ಥಾನದ ಕಟ್ಟಡಕ್ಕೆ ಸೇರಿಸಿದ್ದವು, ಆದರೆ ಇವು ಬಿದ್ದುಹೋಗಿವೆ.
ಆವರಣದ ಒಳಗೆ ಮೂರು ಕಟ್ಟಡಗಳಿವೆ. ಸಾಂಪ್ರದಾಯಬದ್ಧವಾಗಿ, ಶಿವ ಮಂದಿರಗಳಲ್ಲಿ, ಪ್ರಮುಖ ಮಂದಿರದ ಎದುರಿನಲ್ಲಿ ಪವಿತ್ರ ಬಸವ ನಂದಿಯ ದೊಡ್ಡ ಮೂರ್ತಿಯಿದೆ. ಪ್ರಮುಖ ಮಂದಿರದ ನಂದಿ ಮಂಡಪದಲ್ಲಿ ಲಿಂಗವಿದೆ. ನಂದಿ ಮಂಡಪವು 16 ಸ್ತಂಭಗಳ ಮೇಲಿದೆ ಮತ್ತು 29.3 m ಗಳಷ್ಟು ಎತ್ತರವಿದೆ. ನಂದಿ ಮಂಟಪದ ಅಡಿಪಾಯವು ಸಹಜ ಗಾತ್ರದ ಆನೆಗಳು ಕಟ್ಟಡವನ್ನು ಎತ್ತರಕ್ಕೆ ಹಿಡಿದು ನಿಂತಹಾಗೆ ಸೂಚಿಸುವಂತೆ ಕೆತ್ತಲಾಗಿದೆ. ಹಿಂಬದಿಯಲ್ಲಿರುವ ಕಲ್ಲಿನ ಸೇತುವೆಯು ನಂದಿ ಮಂಟಪವನ್ನು ಶಿವ ಮಂದಿರಕ್ಕೆ ಸೇರಿಸುತ್ತದೆ. ಮಂದಿರವು ದಕ್ಷಿಣ ಭಾರತದ ದೇವಸ್ಥಾನವನ್ನು ಜ್ಞಾಪಿಸುವಂತಹ ಎತ್ತರದ ಗೋಪುರಾಕಾರದ ಕಟ್ಟಡವಾಗಿದೆ. ದೇಗುಲವು ಪುರ್ತಿಯಾಗಿ- ಸ್ತಂಭಗಳಿಂದ ಹಿಡಿದು, ಕಿಟಕಿಗಳು, ಒಳ ಮತ್ತು ಹೊರಗಿನ ಕೊಟಡಿಗಳು, ಸಮಾವೇಶದ ಹಾಲುಗಳು, ಮತ್ತು ಮಧ್ಯ ಭಾಗದಲ್ಲಿರುವ ಪವಿತ್ರ ಲಿಂಗ ಎಲ್ಲವು ಕಲ್ಲಿನಿಂದ ಕೆತ್ತಲ್ಪಟ್ಟಿವೆ, ಅವು ಗೂಡುಗಳಿಂದ, ಗೋಡೆಯೊಂದಿಗೆ ಕೂಡಿರುವ ಚೌಕ ಸ್ತಂಭಗಳಿಂದ, ಕಿಟಕಿಗಳಿಂದ ಹಾಗು ದೇವತೆಯರ ಚಿತ್ರಗಳಿಂದ ಶೃಂಗಾರದ ಹೆಣ್ಣು ಮತ್ತು ಗಂಡು ಚಿತ್ರಗಳು ಮತ್ತು ಇತರ ಚಿತ್ರಗಳಿಂದ ಕೆತ್ತಲ್ಪಟ್ಟಿವೆ. ಮಂದಿರದ ಎಡಭಾಗದಲ್ಲಿರುವುವು ಬಹುತೇಕ ಶೈವೈತೆಯರ, ಶಿವನ ಅನುಚರರ ದೇವತಾ ಶಿಲ್ಪಗಳು, ಬಲಭಾಗದಲ್ಲಿರುವುವು ವೈಷ್ಣವೈತೆಯರ, ವಿಷ್ಣುವಿನ ಅನುಚರರ ದೇವತಾ ಶಿಲ್ಪಗಳು. ಆವರಣದಲ್ಲಿ ಎರಡು ದ್ವಜ ಸ್ತಂಭಗಳಿವೆ. ಕೈಲಾಸ ಪರ್ವತವನ್ನು ಎತ್ತುವ ಪ್ರಯತ್ನದಲ್ಲಿರುವ ರಾವಣನ ಮಹ್ತ್ತರವಾದ ಮೂರ್ತಿ, ಸಂಪೂರ್ಣ ವೈಭವದ ಶಿವನ ಧಾಮಗಳು ಭಾರತದ ಶಿಲ್ಪಕಲೆಯ ಪ್ರತೀಕಗಳಾಗಿವೆ. ಈ ಗುಹೆಯ ನಿರ್ಮಾಣವು ಪ್ರತಿಭಾವಂತ ಮಾನವರ ಸಾಹಸಕಾರ್ಯವಾಗಿದೆ – ಇದರ ನಿರ್ಮಾಣಕಾರ್ಯದಲ್ಲಿ 200,000 ಟನ್ನುಗಳಷ್ಟು ಬಂಡೆಕಲ್ಲುಗಳನ್ನು ಹೊರತೆಗೆಯಲಾಯಿತು, ಮತ್ತು ಇದನ್ನು ನಿರ್ಮಿಸಲು 100 ವರ್ಷಗಳ ಕಾಲ ಬೇಕಾಯಿತು.
ಇನ್ನು ಹಲವರು ಗುಹೆಗಳ ಮಾಹಿತಿ ಇದೆ. ಆದರೆ ಒಂದು ಸಲ ಹೋಗಿ ನೋಡಿಕೊಂಡು ಬಂದರೆ ಮಾತ್ರ ನಮ್ಮ ಇತಿಹಾಸ ನಮಗೆ ಮರುಕಳಿಸದಂತೆ ಅನಿಸುವುದು, ಮೈ ರೋಮಾಂಚನಗೊಳ್ಳುವುದು.
ಧನ್ಯವಾದಗಳು.
GIPHY App Key not set. Please check settings