“ಯಶಸ್ಸು ಸಾಧಿಸುವ ನನ್ನ ಸಂಕಲ್ಪ ಸಾಕಷ್ಟು ಬಲವಾಗಿದ್ದರೆ ಸೋಲು ಎಂದಿಗೂ ನನ್ನನ್ನು ಹಿಂದಿಕ್ಕುವುದಿಲ್ಲ”
ಅಬ್ದುಲ್ ಕಲಾಂರವರು ಒಬ್ಬ ಭಾರತೀಯ ವಿಜ್ಞಾನಿ ಹಾಗೂ ಭಾರತದ 11ನೆಯ ರಾಷ್ಟ್ರಪತಿಯಾಗಿ ಸೇವೆಸಲಿಸಿದವರು. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಪೂರ್ಣ ಹೆಸರು ಅವುಲ್ ಪಕೀರ್ ಜೈನುಲಾಬ್ದಿನ್ ಅಬ್ದುಲ್ ಕಲಾಂ.ಪ್ರತಿ ವರ್ಷ ಅಕ್ಟೋಬರ್ 15 ಬಂದರೆ ವಿಶ್ವ ವಿದ್ಯಾರ್ಥಿಗಳ ದಿನ ಜೊತೆಗೆ ಎಪಿಜೆ ಅಬ್ದುಲ್ ಕಲಾಂ ರವರ ಜನ್ಮದಿನವೂ ಕೂಡ. ಕಲಾಂ ಅವರು ಒಬ್ಬ ಅಸಾಮಾನ್ಯ ವ್ಯಕ್ತಿಯಾಗಿದ್ದವರು, ಅವರ ಕೊಡುಗೆಗಳು ಅಪಾರ ಮತ್ತು ಅವರಿಗೆ ಸಂದ ಗೌರವ ಮತ್ತು ಪ್ರಶಸ್ತಿಗಳು ಕೂಡ ಹೆಚ್ಚು ಮೌಲ್ಯಯುತವಾದವು. ಈ ದಿನ ಅವರನ್ನು ಎಷ್ಟು ನೆನೆದರೂ ಕೂಡ ಅವರು ನಮ್ಮೊಂದಿಗಿಲ್ಲ ಆದರೆ ಅವರ ಆವಿಷ್ಕಾರಗಳು, ಸಾಧನೆಗಳು ಮತ್ತು ನುಡಿಗಳು ನಮ್ಮೊಂದಿಗೆ ಸದಾ ಜನಜನಿತವಾಗಿರುತ್ತದೆ.
ಅಬ್ದುಲ್ ಕಲಾಂ ಅವರು ದೇಶ ಕಂಡ ಶ್ರೇಷ್ಠ ವಿಜ್ಞಾನಿ, ನೆಚ್ಚಿನ ಶಿಕ್ಷಕ, ಮೇಧಾವಿ, ರಾಜಕಾರಣಿಯೂ ಹೌದು. ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಹಾಗೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ ಈ ಧೀಮಂತ ನಾಯಕನಿಗೆ ಗೌರವ ಸಲ್ಲಿಸುವ ಸಲುವಾಗಿ ವಿಶ್ವಸಂಸ್ಥೆಯು 2010ರಲ್ಲಿ ಅಕ್ಟೋಬರ್ 15ನ್ನು ವಿಶ್ವ ವಿದ್ಯಾರ್ಥಿಗಳ ದಿನವನ್ನಾಗಿ ಘೋಷಿಸಿತು. ಅಂದಿನಿಂದ ಪ್ರತೀ ವರ್ಷ ಅಕ್ಟೋಬರ್ 15ನ್ನು ವಿಶ್ವ ವಿದ್ಯಾರ್ಥಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಜೊತೆಗೆ ಕಲಾಂ ಅವರನ್ನು ಸ್ಮರಿಸಲಾಗುತ್ತದೆ.
ಇವರು ಹುಟ್ಟಿ ಬೆಳೆದದ್ದು ತಮಿಳುನಾಡಿನ ರಾಮೇಶ್ವರಂನಲ್ಲಿ. ಇವರು ಭೌತಶಾಸ್ತ್ರ ಮತ್ತು ಅಂತರಿಕ್ಷಯಾನ ಇಂಜಿನಿಯರಿಂಗ್ ಅಧ್ಯಯನ ಮಾಡಿದ್ದರು. ಅಧ್ಯಯನ ನಂತರ ನಾಲ್ಕು ದಶಕಗಳ ಕಾಲ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಅರ್.ಡಿ.ಓ) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದಲ್ಲಿ ವಿಜ್ಞಾನಿ ಮತ್ತು ವಿಜ್ಞಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದರು.ಭಾರತದ ನಾಗರಿಕ ಬಾಹ್ಯಾಕಾಶ ಕಾರ್ಯಕ್ರಮ ಮತ್ತು ಕ್ಷಿಪಣಿ ಅಭಿವೃದ್ಧಿ ಪ್ರಯತ್ನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕ್ಷಿಪಣಿ ಮತ್ತು ಉಡಾವಣಾ ತಂತ್ರಜ್ಞಾನದ ಅಭಿವೃದ್ಧಿಯ ಅಧ್ಯಯನದಿಂದ, ಇವರು ಭಾರತದ ಕ್ಷಿಪಣಿ ಮಾನವ ಎಂಬ ಹೆಸರಿನಿಂದ ಚಿರಪರಿಚಿತರಾಗಿದ್ದರು. ೧೯೯೮ರಲ್ಲಿ ನೆಡೆದ ಭಾರತದ ಪೋಖ್ರಾನ್-೨ ಪರಮಾಣು ಪರೀಕ್ಷೆಯಲ್ಲಿ ಸಾಂಸ್ಥಿಕವಾಗಿ, ತಾಂತ್ರಿಕವಾಗಿ ಮತ್ತು ರಾಜಕೀಯವಾಗಿ ಒಂದು ಪ್ರಮುಖ ಪಾತ್ರ ವಹಿಸಿದರು. ಅವರು ಸ್ಇಎಕ್ಸ್ದು ಮಾದು ೯೭೪ರಲ್ಲಿ ನಡೆದ ಮೂಲ ಪರಮಾಣು ಪರೀಕ್ಷೆಯ ನಂತರ ನೆಡೆದ ಮೊದಲ ಪರಮಾಣು ಮಾಡುಯತಿದ ಎಮ್ದ್ದ 51 ನ್ನು xಗಿದೆ. ಕಲಾಂ ಅವರು ೨೦೦೨ ರಲ್ಲಿ, ಆಡಳಿತ ಪಕ್ಷ ಭಾರತೀಯ ಜನತಾ ಪಕ್ಷ ಮತ್ತು ವಿರೋಧ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಎರಡು ಪಕ್ಷಗಳ ಬೆಂಬಲದೊಂದಿಗೆ ರಾಷ್ಟ್ರಪತಿಯಾಗಿ ಆಯ್ಕೆಯಾದರು.ಐದು ವರುಷಗಳ ಅವಧಿ ಪೂರೈಸಿದ ನಂತರ, ಅವರು ಶಿಕ್ಷಣ, ಬರವಣಿಗೆ ಮತ್ತು ಸಾರ್ವಜನಿಕ ಸೇವೆಯ ಜೀವನಕ್ಕೆ ಮರಳಿದರು. ಅವರು ಭಾರತದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರು ಅವಿವಾಹಿತರಾಗಿದ್ದರು. ಅಬ್ದುಲ್ ಕಲಾಂ ಅವರನ್ನ ಭಾರತದ ಮಿಸೈಲ್ ಮ್ಯಾನ್ ಆಫ್ ಇಂಡಿಯ ಎಂದು ಕರೆಯುತ್ತಾರೆ.
ಅವರು ತಮ್ಮ ಜೀವಿತಾವಧಿಯಲ್ಲಿ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ, ಕೆಲವು ಪ್ರಸಿದ್ಧವಾದವುಗಳೆಂದರೆ,
ಅಗ್ನಿ ಕಿ ಉಡಾನ್ (1999),
ಇಂಡಿಯಾ 2020 (1998),
ಇಗ್ನೈಟೆಡ್ ಮೈಂಡ್ಸ್ (2002),
ನಾ ಜೀವನ ಗಮನಮ್ (2013),
ಟರ್ನಿಂಗ್ ಪಾಯಿಂಟ್ಸ್: ಎ ಜರ್ನಿ ಥ್ರೂ ಚಾಲೆಂಜ್ಸ್ (2012) ,
ಇಂಡೊಮಿನೇಟ್ ಸ್ಪಿರಿಟ್ (2006),
ಯು ಆರ್ ಬಾರ್ನ್ ಟು ಬ್ಲಾಸಮ್ (2008).
ಪ್ರಶಸ್ತಿಗಳು ಮತ್ತು ಸಾಧನೆಗಳು
ಕಲಾಂ ಅವರ ಇಡೀ ಜೀವಿತಾವಧಿಯಲ್ಲಿ ಅನೇಕ ಪ್ರಶಸ್ತಿಗಳನ್ನು ನೀಡಲಾಯಿತು. 1981 ರಲ್ಲಿ, ಅವರಿಗೆ “ಪದ್ಮ ಭೂಷಣ” ನೀಡಲಾಯಿತು, ಇದು ಭಾರತ ಗಣರಾಜ್ಯದಲ್ಲಿ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ನಂತರ 1990 ರಲ್ಲಿ, ಅವರಿಗೆ ಪದ್ಮ ವಿಭೂಷಣ ನೀಡಲಾಯಿತು, ಇದು ಭಾರತ ಗಣರಾಜ್ಯದಲ್ಲಿ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.
1997 ರಲ್ಲಿ ಭಾರತ ಸರ್ಕಾರವು ಅಬ್ದುಲ್ ಕಲಾಂ ಅವರಿಗೆ ಭಾರತ ಗಣರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ “ಭಾರತ ರತ್ನ” ಪ್ರಶಸ್ತಿಯನ್ನು ನೀಡಿತು ಮತ್ತು ಅದೇ ವರ್ಷದಲ್ಲಿ ಅವರು “ಭಾರತೀಯ ರಾಷ್ಟ್ರೀಯ ಕಾಂಗ್ರೆಸ್” ನಿಂದ “ರಾಷ್ಟ್ರೀಯ ಏಕೀಕರಣಕ್ಕಾಗಿ ಇಂದಿರಾ ಗಾಂಧಿ ಪ್ರಶಸ್ತಿ” ಯನ್ನು ಪಡೆದರು.
ಮಾಜಿ ರಾಷ್ಟ್ರಪತಿ ಇಂದಿರಾ ಗಾಂಧಿಯವರ ಹೆಸರಿನ ನಂತರ ನೀಡಲಾಗಿದೆ. ಮುಂದಿನ ವರ್ಷ 1998 ರಲ್ಲಿ, ಅವರು “ವೀರ್ ಸಾವರ್ಕರ್ ಪ್ರಶಸ್ತಿ” ಪಡೆದರು.
ನಂತರ 2000 ರಲ್ಲಿ, ಅವರು ಶಾಸ್ತ್ರ (ಷಣ್ಮುಘ ಕಲೆ, ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನಾ ಅಕಾಡೆಮಿ) “ರಾಮಾನುಜನ್ ಪ್ರಶಸ್ತಿ” ಪ್ರಶಸ್ತಿಯನ್ನು ಗೆದ್ದರು.
ಭಾರತದಲ್ಲಿ ವೈಜ್ಞಾನಿಕ ಪ್ರಗತಿಗೆ ನೀಡಿದ ಕೊಡುಗೆಗಾಗಿ ಅವರು 2007 ರಲ್ಲಿ ಬ್ರಿಟಿಷ್ ಪ್ರಶಸ್ತಿ “ಕಿಂಗ್ ಚಾರ್ಲ್ಸ್ II ಪದಕ” ಪಡೆದರು.
2009 ರಲ್ಲಿ ಅವರಿಗೆ “ಹೂವರ್ ಮೆಡಲ್” ನೀಡಲಾಯಿತು, ಇದು ಹೆಚ್ಚುವರಿ ವೃತ್ತಿ ಸೇವೆಗಳೊಂದಿಗೆ ಅತ್ಯುತ್ತಮ ವ್ಯಕ್ತಿಗಳಿಗೆ ನೀಡಲಾದ ಅಮೇರಿಕನ್ ಪ್ರಶಸ್ತಿಯಾಗಿದೆ.
ಎಪಿಜೆ ಅಬ್ದುಲ್ ಕಲಾಂ ಅವರು ತಮ್ಮ ಜೀವನದಲ್ಲಿ ಅನೇಕ ದೊಡ್ಡ ವಿಸ್ಮಯಗಳಿಗೆ ಹೆಸರುವಾಸಿಯಾಗಿದ್ದರು. ಪೋಖ್ರಾನ್ II ಪರಮಾಣು ಪರೀಕ್ಷೆಗಳಲ್ಲಿ ಅವರು ಪ್ರಮುಖ ವಾಸ್ತುಶಿಲ್ಪಿ ಮತ್ತು ಅದರ ಹಿಂದೆ ಮೆದುಳು ಆಗಿದ್ದರಿಂದ ಅವರನ್ನು ಭಾರತದ ಕ್ಷಿಪಣಿ ಮನುಷ್ಯ ಎಂದು ಕರೆಯಲಾಗುತ್ತಿತ್ತು.
ಅವರನ್ನು ಭಾರತದ 11ನೇ ರಾಷ್ಟ್ರಪತಿ ಎಂದು ಕರೆಯಲಾಗುತ್ತಿತ್ತು. ಬ್ಯಾಲಿಸ್ಟಿಕ್ ಮತ್ತು ಇತರ ಕ್ಷಿಪಣಿಗಳ ಅಭಿವೃದ್ಧಿಯಲ್ಲಿ ಅವರು ಮಾಡಿದ ಕೆಲಸಕ್ಕಾಗಿ ಅವರು ಹೆಸರುವಾಸಿಯಾಗಿದ್ದರು.
ರಾಷ್ಟ್ರಪತಿಯಾಗಿ ಕಲಾಂರವರು ಭಾರತದ 11ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. 2002ರ ರಾಷ್ತ್ರಪತಿ ಚುನಾವಣೆಯಲ್ಲಿ ಲಕ್ಷ್ಮೀ ಸೆಹೆಗಲ್ ವಿರುದ್ಧ ೧೦೭,೩೬೬ ಮತಗಳ ಮುನ್ನಡೆಯಲ್ಲಿ ಗೆದ್ದರು. 25 ಜುಲೈ 2002ರಿಂದ 25 ಜುಲೈ 2007ರವರೆಗೆ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ಅ ಸರಳತೆ, ಪ್ರಾಮಾಣಿಕತೆ, ಮತ್ತು ಮೇಧಾವಿತನದ ಸಾಕಾರದಂತಿರುವ ಕಲಾಂ ಅವರು ರಾಷ್ಟ್ರಪತಿ ಹುದ್ದೆಯ ಘನತೆಯನ್ನು ಹೆಚ್ಚಿಸಿದರು. ಜನಸಾಮಾನ್ಯರ ರಾಷ್ಟ್ರಪತಿ ಎಂಬ ಕೀರ್ತಿಗೆ ಪಾತ್ರರಾದರು. ಸ್ವತಃ ಬ್ರಹ್ಮಚಾರಿ ಆದ ಇವರಿಗೆ ಮಕ್ಕಳೆಂದರೆ ಬಹು ಪ್ರೀತಿ. ಮಕ್ಕಳೊಂದಿಗೆ ಬೆರೆತು ಉಪಯುಕ್ತ ಸಲಹೆ ಸೂಚನೆ ನೀಡುವುದು ಇವರ ಪ್ರಿಯ ಹವ್ಯಾಸ.
ಲೇಖಕರಾಗಿ :
ರಾಷ್ಟ್ರಪತಿ ಹುದ್ದೆಯಿಂದ ವಿರಮಿಸಿದ ಅನಂತರವೂ ಇವರು ಜನಪ್ರಿಯ ಧುರೀಣರು ಮತ್ತು ವಿಜ್ಞಾನಿಯಾಗಿ ಕಂಗೊಳಿಸುತ್ತಿದ್ದಾರೆ. ಇವರು ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಹತ್ತಾರು ಗ್ರಂಥಗಳನ್ನು ರಚಿಸಿದ್ದಾರೆ. ‘ವಿಂಗ್ಸ್ ಆಫ್ ಫೈರ್’ ಎಂಬುದು ಇವರ ಆತ್ಮಕಥೆ. ಇವರು ತಮ್ಮ ‘ಇಂಡಿಯಾ ಮೈ ಡ್ರೀಮ್’, ‘ಇಂಡಿಯಾ ೨೦೨೦’ ಎಂಬ ಗ್ರಂಥಗಳಲ್ಲಿ ಭವ್ಯ ಭಾರತ ನಿರ್ಮಾಣದ ಬಗ್ಗೆ ರೂಪುರೇಷೆಗಳನ್ನು ಹಾಕಿಕೊಟ್ಟಿದ್ದಾರೆ. ‘ಮೈ ಜರ್ನಿ’, ‘ಟಾರ್ಗೆಟ್ ತ್ರಿ ಬಿಲಿಯನ್’- ಇವು ಇವರ ಇತ್ತೀಚಿನ ಕೃತಿಗಳು. ಅಪ್ರತಿಮ ದೇಶಭಕ್ತರೂ ಉತ್ತಮ ವಾಗ್ಮಿಯೂ ಆಗಿರುವ ಕಲಾಂ ಅವರು ದೇಶ ವಿದೇಶಗಳಲ್ಲಿ ಸಂಚರಿಸುತ್ತ ಜ್ಞಾನ-ವಿಜ್ಞಾನ ಪ್ರಸಾರದಲ್ಲಿ ತಮ್ಮ ಸಹಾಯಹಸ್ತ ನೀಡುತ್ತಿದ್ದಾರೆ.
ಮರಣ :
ಕಲಾಂ ಅವರು 2015ರ ಜುಲೈ 27ರಂದು ಶಿಲ್ಲಾಂಗ್ನಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುವಾಗ ವೇದಿಕೆ ಮೇಲೆ ಕುಸಿದು ಬಿದ್ದು, ನಿಧನರಾದರು.
“ಯಶಸ್ಸು ಸಾಧಿಸುವ ನನ್ನ ಸಂಕಲ್ಪ ಸಾಕಷ್ಟು ಬಲವಾಗಿದ್ದರೆ ಸೋಲು ಎಂದಿಗೂ ನನ್ನನ್ನು ಹಿಂದಿಕ್ಕುವುದಿಲ್ಲ”
GIPHY App Key not set. Please check settings