in

ಫುಡ್ ಪಾಯಿಸನ್ ಆಗುವುದು ಯಾವಾಗ? ಮನೆಯಲ್ಲಿ ಯಾವ ಪರಿಹಾರ ಇದೆ?

ಫುಡ್ ಪಾಯಿಸನ್ ಆಗುವುದು ಯಾವಾಗ?
ಫುಡ್ ಪಾಯಿಸನ್ ಆಗುವುದು ಯಾವಾಗ?

ಫುಡ್ ಪಾಯಿಸನ್

ಫುಡ್ ಪಾಯಿಸನ್ ವಾಂತಿ, ಅತಿಸಾರ ಮತ್ತು ಸ್ಟಮಕ್ ಅಪ್ಸೆಟ್ ಮೊದಲಾದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹೊಟ್ಟೆಯನ್ನು ಸಡಿಲಗೊಳಿಸಿ ಕೆಲವು ಗಂಟೆಗಳ ಕಾಲ ಸಂಪೂರ್ಣವಾಗಿ ಊಟ ಮತ್ತು ಮದ್ಯಪಾನವನ್ನು ಬಿಟ್ಟು ಬಿಡುವ ಪ್ರಯತ್ನ ಮಾಡಬೇಕು.

ವ್ಯಕ್ತಿಯು ಹಾಳಾದ ಅಥವಾ ಸೋಂಕಿತ ಆಹಾರವನ್ನು ಸೇವಿಸಿದಾಗ, ಅದು ಫುಡ್ ಪಾಯಿಸನ್​ಗೆ ಕಾರಣವಾಗುತ್ತದೆ. ಫುಡ್ ಪಾಯಿಸನ್ ಆಗಲು ಮುಖ್ಯ ಕಾರಣವೆಂದರೆ ಹಾನಿಕಾರಕ ಸೂಕ್ಷ್ಮಜೀವಿಗಳು. ಸಾಂಕ್ರಾಮಿಕ ಜೀವಿಗಳಾದ ಬ್ಯಾಕ್ಟೀರಿಯಾ, ವೈರಸ್‌ಗಳು ಇತ್ಯಾದಿಗಳ ಸೇವನೆಯಿಂದ ಅಥವಾ ಅವುಗಳಿಂದ ಕಲುಷಿತಗೊಂಡ ಆಹಾರದಿಂದ ಇದು ಸಂಭವಿಸಬಹುದು. ಫುಡ್ ಪಾಯಿಸನ್ ಆದಾಗ ಅತಿಸಾರ, ವಾಕರಿಕೆ, ಹೊಟ್ಟೆ ನೋವು ಮತ್ತು ವಾಂತಿ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ.

ರೋಗ ನಿರೋಧಕ ಗುಣಲಕ್ಷಣಗಳನ್ನು ಹೊಂದಿರುವ ಬೆಳ್ಳುಳ್ಳಿ ಕೂಡ ಫುಡ್​ ಪಾಯಿಸನ್​ಗೆ ಉತ್ತಮ ಮನೆಮದ್ದು. ಇದು ಅತಿಸಾರಕ್ಕೆ ಪರಿಹಾರ ನೀಡುತ್ತದೆ. ಬೆಳ್ಳುಳ್ಳಿಯ ಹಸಿ ಮೊಗ್ಗುಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿನಿಂದ ಸೇವಿಸಿದರೆ, ಶೀಘ್ರದಲ್ಲೇ ಪರಿಹಾರ ಕಾಣಬಹುದು.

ಫುಡ್ ಪಾಯಿಸನ್ ಆದಾಗ ಶುಂಠಿ ಚಹಾ ಕುಡಿಯುವುದು ಕೂಡ ಉತ್ತಮ. ಶುಂಠಿಯಲ್ಲಿರುವ ಆಂಟಿಮೈಕ್ರೊಬಿಯಲ್ ಏಜೆಂಟ್‌ಗಳು ಆಹಾರದಿಂದ ಹರಡುವ ರೋಗಕಾರಕಗಳ ವಿರುದ್ಧ ಹೋರಾಡಲು ಮತ್ತು ಚೇತರಿಕೆ ಪ್ರಕ್ರಿಯೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಉತ್ತಮ ಫಲಿತಾಂಶಕ್ಕಾಗಿ ದಿನದಲ್ಲಿ 2-3 ಬಾರಿ ಶುಂಠಿ ಕುಡಿಯಬಹುದು.

ಫುಡ್ ಪಾಯಿಸನ್ ಆಗುವುದು ಯಾವಾಗ? ಮನೆಯಲ್ಲಿ ಯಾವ ಪರಿಹಾರ ಇದೆ?
ಶುಂಠಿ ಚಹಾ

ಒಂದು ಲೋಟ ನೀರಿಗೆ ಒಂದೆರಡು ತುಂಡು ಜಜ್ಜಿದ ಶುಂಠಿಯನ್ನು ಹಾಕಿ ಕುಸಿದಿ. ತದನಂತರ ಶುದ್ಧವಾಗಿ ತೊಳೆದ ಪುದೀನಾ ಎಲೆಗಳನ್ನು ಹಾಕಿ ಮತ್ತೆರಡು ನಿಮಿಷ ಕುದಿಸಿ. ರುಚಿಗೆ ಜೇನುತುಪ್ಪ ಕಲಸಿ ಸೇವಿಸಿ.

ಜೀರ್ಣಕ್ರಿಯೆಯನ್ನು ಸುಧಾರಿಸುವ ಏಲಕ್ಕಿಯು ವಾಕರಿಕೆ, ವಾಂತಿ ಮೊದಲಾದ ಫುಡ್ ಪಾಯಿಸಿನ್ ರೋಗ ಲಕ್ಷಣಗಳನ್ನು ಹೋಗಲಾಡಿಸುತ್ತದೆ. ಈ ಪಟ್ಟಿಯಲ್ಲಿರುವ ಇತರ ಮನೆಮದ್ದುಗಳಂತೆಯೇ ಏಲಕ್ಕಿ ಕೂಡ ರೋಗನಿರೋಧಕ ಸಾಮರ್ಥ್ಯವನ್ನು ಪಡೆದುಕೊಂಡಿದೆ. ನಿಮ್ಮ ದೈನಂದಿನ ಆಹಾರದಲ್ಲಿ ಏಲಕ್ಕಿಯನ್ನು ಬಳಸಬಹುದಾಗಿದೆ.

ಮೊಸರು ಒಂದು ರೀತಿಯ ಪ್ರತಿಜೀವಕವಾಗಿದೆ, ಆದ್ದರಿಂದ ಇದನ್ನು ಫುಡ್ ಪಾಯಿಸನ್​ಗೆ ಮನೆಮದ್ದಾಗಿ ಸೇರಿಸಿಕೊಳ್ಳಬೇಕು. ಇದಕ್ಕೆ ಸ್ವಲ್ಪ ಕಪ್ಪು ಉಪ್ಪು ಸೇರಿಸಿ ಸೇವಿಸಿದರೆ ಇನ್ನೂ ಉತ್ತಮ. ಇದಲ್ಲದೆ ಮೊಸರಿಗೆ ನೀರು ಮತ್ತು ಸಕ್ಕರೆಯನ್ನು ಸೇರಿಸಿ ಲಸ್ಸಿಯಂತೆ ಕುಡಿಯಬಹುದು.

ಫುಡ್ ಪಾಯಿಸನ್ ಲಕ್ಷಣಗಳನ್ನು ಹೊಂದಿರುವವರು ಲಘುವಾದ ಆಹಾರಗಳನ್ನು ಸೇವಿಸುವುದು ಉತ್ತಮ. ಉದಾಹರಣೆಗೆ ಬಾಳೆಹಣ್ಣುಗಳು, ಅನ್ನ, ಸೇಬು, ಹಾಲು, ಬ್ರೆಡ್, ಚಪಾತಿ ತಿನ್ನಬಹುದು. ಏಕೆಂದರೆ ಇಂತಹ ಆಹಾರಗಳು ನಿಮ್ಮ ಮಲವನ್ನು ಗಟ್ಟಿಯಾಗಿಸಲು ಸಹಾಯ ಮಾಡುತ್ತದೆ. ಈ ಆಹಾರಗಳಿಂದ ಖಾಲಿಯಾಗಿರುವ ಹೊಟ್ಟೆಯನ್ನು ಪೋಷಕಾಂಶದಿಂದ ಮತ್ತೆ ತುಂಬಿಸಬಹುದು.

ಫುಡ್ ಪಾಯಿಸನ್​ ಆದಾಗ, ಬಾಳೆಹಣ್ಣು ತಿನ್ನಲು ವೈದ್ಯರು ಸೂಚಿಸುತ್ತಾರೆ. ಇದರಿಂದ ಆಹಾರ ವಿಷದಿಂದ ಉಂಟಾಗುವ ವಾಕರಿಕೆ, ವಾಂತಿ, ಅತಿಸಾರ, ಹೊಟ್ಟೆ ಸೆಳೆತ ಇತ್ಯಾದಿಗಳ ಸಮಸ್ಯೆಯನ್ನು ತಡೆಯುತ್ತದೆ

ಮೆಂತ್ಯ ಬೀಜಗಳಲ್ಲಿ ನಾರಿನ ಅಂಶವಿರುತ್ತದೆ. ಮೆಂತ್ಯ ಬೀಜಗಳು ಹೊಟ್ಟೆ ನೋವಿಗೆ ಉತ್ತಮ ಪರಿಹಾರವಾಗಿರುತ್ತದೆ.

ಫುಡ್ ಪಾಯಿಸನ್ ಆದಾಗ ಸಾಮಾನ್ಯವಾಗಿ ಬಳಸುವ ಮನೆ ಮದ್ದು ಎಂದರೆ ಜೀರಿಗೆ. ಇದು ನಿಮ್ಮ ದೇಹದಲ್ಲಿ ಜೀರ್ಣಕಾರಿ ಕಿಣ್ವಗಳ ಚಟುವಟಿಕೆಯನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ. ಒಂದು ಕಪ್ ನೀರಿನಲ್ಲಿ ಜೀರಿಗೆಯನ್ನು ಕುದಿಸಿ, ಕೊತ್ತಂಬರಿ ಸೊಪ್ಪಿನ ರಸವನ್ನು ಮಿಶ್ರಣ ಮಾಡಿ ಮತ್ತು ದಿನಕ್ಕೆ ಎರಡು ಬಾರಿ ಕುಡಿಯಿರಿ. ಉಪ್ಪು, ಜೀರಿಗೆ ಮತ್ತು ಹಿಂಗ್ ಮಿಶ್ರಣವನ್ನು ಸಹ ಬಳಸಬಹುದು.

ಫುಡ್ ಪಾಯಿಸನ್ ಆಗುವುದು ಯಾವಾಗ? ಮನೆಯಲ್ಲಿ ಯಾವ ಪರಿಹಾರ ಇದೆ?
ಜೇನುತುಪ್ಪ

ಜೇನುತುಪ್ಪದ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಲಕ್ಷಣಗಳಿಂದಾಗಿ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ. ಶುದ್ಧಜೇನುತುಪ್ಪವನ್ನು ದಿನಕ್ಕೆ ಮೂರು ಬಾರಿ ಸೇವಿಸಬೇಕು. ಬೇಕಾದರೆ, ಚಹಾ ಅಥವಾ ನಿಂಬೆ ಪಾನಕದೊಂದಿಗೆ ಜೇನು ತುಪ್ಪ ಸೇವಿಸಬಹುದು.

ಬ್ಯಾಕ್ಟೀರಿಯಾವನ್ನು ಕೊಲ್ಲುವಲ್ಲಿ ಕೊತ್ತಂಬರಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದೆ. ಫುಡ್ ಪಾಯಿಸಿನ್ ಉಂಟುಮಾಡುವ ಯಾವುದೇ ತೊಂದರೆಗಳನ್ನು ಇದು ಹೋಗಲಾಡಿಸುತ್ತದೆ. ಕೊತ್ತಂಬರಿ ಎಲೆಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಬಳಸುವುದು ಉತ್ತಮ ಉಪಾಯವಾಗಿದೆ. ಇದನ್ನು ಎಣ್ಣೆಯ ರೂಪದಲ್ಲಿ ಕೂಡ ನಿಮ್ಮ ಖಾದ್ಯ ತಯಾರಿಯಲ್ಲಿ ಬಳಸಬಹುದಾಗಿದೆ.

ತುಳಸಿಯಲ್ಲಿ ಅನೇಕ ಜೈವಿಕವಾಗಿ ಸಕ್ರಿಯವಾಗಿರುವ ಸಂಯುಕ್ತಗಳಿವೆ. ತುಳಸಿಯಲ್ಲಿರುವ ಆಂಟಿಮೈಕ್ರೊಬಿಯಲ್ ಏಜೆಂಟ್‌ಗಳು ಸ್ಟ್ಯಾಫಿಲೋಕೊಕಸ್ ಬೆಳವಣಿಗೆಯನ್ನು ತಡೆಯುತ್ತದೆ. ಇದು ಬ್ಯಾಕ್ಟೀರಿಯಂ ಆಗಿದ್ದು ಅದು ಸಾಮಾನ್ಯವಾಗಿ ಫುಡ್ ಪಾಯಿಸನ್ ಉಂಟುಮಾಡುತ್ತದೆ. ತುಳಸಿ ಎಲೆಗಳು ಆಹಾರದಿಂದ ಹರಡುವ ಸೂಕ್ಷ್ಮಜೀವಿಗಳಿಗೆ ಸಂಬಂಧಿಸಿದ ಹೊಟ್ಟೆ ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತುಳಸಿ ರಸವನ್ನು ಕುಡಿಯುವುದು ತುಂಬಾ ಪ್ರಯೋಜನಕಾರಿ.

ಫುಡ್ ಪಾಯಿಸನ್‌ನಿಂದ ಉಂಟಾಗುವ ಯಾವುದೇ ಅಪಾಯಗಳನ್ನು ಲಿಂಬೆಯು ನಿವಾರಿಸುತ್ತದೆ. ಇದು ಆಂಟಿವೈರಲ್ ಮತ್ತು ಆಂಟಿಬ್ಯಾಕ್ಟೀರಿಯಲ್ ಪರಿಣಾಮಗಳನ್ನು ಒಳಗೊಂಡಿದೆ. ಇದು ವೈರಸ್‌ಗಳನ್ನು ಕೊಲ್ಲುತ್ತದೆ. ಇದನ್ನು ನಿತ್ಯವೂ ಜ್ಯೂಸ್ ರೂಪದಲ್ಲಿ ಸೇವಿಸಿ.

ಸೌಂಫ್ ಅಥವಾ ಫೆನ್ನೆಲ್ ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಅಂಶವನ್ನು ಫೆನ್ನೆಲ್ ಪಡೆದುಕೊಂಡಿದೆ. ದಿನದಲ್ಲಿ ಎಷ್ಟು ಬಾರಿ ಕೂಡ ಇದನ್ನು ಸೇವಿಸಬಹುದು. ಹೊಟ್ಟೆಯಲ್ಲಿರುವ ಯಾವುದೇ ನೋವನ್ನು ಇದು ಉಪಶಮನ ಮಾಡುತ್ತದೆ.

ವಾಂತಿ ಹಾಗು ಮಲದಲ್ಲಿ ರಕ್ರಸ್ತಾವವಾದಾಗ
ಮೂರು ದಿನಗಳಿಗಿಂತ ಹೆಚ್ಚು ದಿನ ಅತಿಸಾರವಾಗುತ್ತಿದ್ದಾಗ, ತೀವ್ರವಾದ ಹೊಟ್ಟೆ ನೋವು ಅನುಭವಿಸುತ್ತಿದ್ದಾಗ, ತೀವ್ರ ನಿರ್ಜಲೀಕರಣವನ್ನು ಹೊಂದುತ್ತಿರುವಾಗ, ಕೈಕಾಲುಗಳು ಜುಮ್ಮ್ ಎನ್ನುವ ಲಕ್ಷಣಗಳು ಕಂಡು ಬಂದಾಗ, ಕೂಡಲೇ ವೈದ್ಯರನ್ನು ಸಂಪರ್ಕಿಸಿ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕರ್ಬೂಜ

ಬೇಸಿಗೆಗೆ ತಂಪು ನೀಡುವ ಹಣ್ಣು ಕರ್ಬೂಜ

ಇಂದಿ ನಿಂದ ಮುಂದಿನ 5 ವರ್ಷಗಳ ಕಾಲ ಲಕ್ಷ್ಮೀ ದೇವಿ ಕೃಪೆ. ರಾಜಯೋಗ ಶುರು 8 ರಾಶಿಯವರಿಗೆ ಗಜಕೇಸರಿ ಯೋಗ ಮುತ್ತಿದೇಲ್ಲ ಚಿನ್ನ.

ಇಂದಿ ನಿಂದ ಮುಂದಿನ 5 ವರ್ಷಗಳ ಕಾಲ ಲಕ್ಷ್ಮೀ ದೇವಿ ಕೃಪೆ. ರಾಜಯೋಗ ಶುರು 8 ರಾಶಿಯವರಿಗೆ ಗಜಕೇಸರಿ ಯೋಗ ಮುತ್ತಿದೇಲ್ಲ ಚಿನ್ನ.