ಲಲಿತ ಮಹಲ್ ಮೈಸೂರಿನ ಅರಮನೆಗಳಲ್ಲಿ ಒಂದು. ಇದು ಮೈಸೂರಿನ ಎರಡನೇ ಅತಿದೊಡ್ಡ ಅರಮನೆ. ಇದು ಭಾರತ ದೇಶದ ಕರ್ನಾಟಕ ರಾಜ್ಯದಲ್ಲಿನ ಮೈಸೂರು ಎಂಬ ನಗರದ ಪೂರ್ವ ದಿಕ್ಕಿನಲ್ಲಿ ಈ ಮಹಲ್ ಕಂಡು ಬರುತ್ತದೆ. ಇದು ಚಾಮುಂಡಿ ಬೆಟ್ಟಕ್ಕೆ ಹೋಗುವ ದಾರಿಯ ಎಡ ಭಾಗದಲ್ಲಿ ಗೋಚರಿಸುತ್ತದೆ.
ಲಲಿತ ಮಹಲ್ ಮೈಸೂರು ನಗರದಿಂದ ೧೧ ಕಿ.ಮೀ. ದೂರದಲ್ಲಿ ನೆಲೆಗೊಂಡಿದೆ. ಈ ಅರಮನೆಯು ನಾಲ್ವಡಿ ಕೃಷ್ಣರಾಜ ಒಡೆಯರ್ ಆದೇಶದಂತೆ ೧೯೨೧ರಲ್ಲಿ ನಿರ್ಮಿಸಲಾಯಿತು. ಇದನ್ನು ಮೈಸೂರಿನ ಮಹಾರಾಜರು ಆಗಿನ ಭಾರತದ ವೈಸ್ರಾಯ್’ಗಳಿಗೆ ಉಳಿಯಲಿಕ್ಕೆಂದೇ ನಿರ್ಮಿತವಾಯಿತು. ಈ ಅರಮನೆಯನ್ನು ಎತ್ತರದ ಪ್ರದೇಶದ ಮೇಲೆ ಕಟ್ಟಲಾಗಿದ್ದು, ಲಂಡನ್’ನ ‘ಸಂತ ಪಾಲ್ಸ್ ಆರಾಧನ ಮಂದಿರ’ನಲ್ಲಿ ರಚನೆಗೊಂಡ ಸಾಲುಗಳ ವಿನ್ಯಾಸವನ್ನು ಈ ಲಲಿತ ಮಹಲ್ ಅರಮನೆಗೆ ರೂಪಿಸಿದ್ದಾರೆ.
ಈ ಅರಮನೆಯನ್ನು ಶುದ್ಧ ಬಿಳಿ ಬಣ್ಣದಿಂದ ಅಲಂಕೃತ ಮಾಡಿದ್ದಾರೆ. ಇದನ್ನು ೧೯೭೪ರಲ್ಲಿ ಪಾರಂಪರಿಕ ಹೋಟೆಲ್ ಆಗಿ ಪರಿವರ್ತಿಸಲಾಯಿತು. ಇದು ಇದೀಗ ಭಾರತ ಸರ್ಕಾರದ ಅಡಿಯಲ್ಲಿ ‘ಭಾರತದ ಅಶೋಕ ಗ್ರೂಪ್’ನ ಪ್ರವಾಸೋಧ್ಯಮ ಅಭಿವೃದ್ಧಿ ನಿಗಮ’ದವರು ಗಣ್ಯ(ಎಲೈಟ್) ಹೋಟೆಲ್’ನ್ನಾಗಿ ನಡೆಸುತ್ತಿದ್ದಾರೆ. ಆದಾಗ್ಯೂ, ಅರಮನೆಯ ಮೂಲ ರಾಜರ ಮೆರುಗಿನ ಪರಿಸರದಲ್ಲಿ ನಿರ್ವಹಿಸುತ್ತಿದ್ದಾರೆ. ಈ ಲಲಿತ ಮಹಲನ್ನು ಮೈಸೂರು ಮಹಾರಾಜರು ತಮ್ಮ ಮುಖ್ಯ ಅತಿಥಿಗಳಿಗೆ ಹಾಗೂ ಅವರ ಆತಿಥ್ಯಕ್ಕೆ ನಿರ್ಮಿಸಿದರು.
ಅರಮನೆಯನ್ನು 20 ನೇ ಶತಮಾನದ ಬ್ರಿಟಿಷ್ ಆಡಳಿತದ ಅಡಿಯಲ್ಲಿ ಮೈಸೂರು ರಾಜ ಸಂಸ್ಥಾನವು ನಿರ್ಮಿಸಲಾಯಿತು. ಮೈಸೂರು ಸಂಸ್ಥಾನ ನಿರ್ವಾಹಕರನ್ನು ಒಂದು “ಮಾದರಿ ರಾಜ್ಯ” ಎಂದು ಬ್ರಿಟಿಷರು ಪತ್ತಿಮಾದಿದ್ದರು. ಮೈಸೂರು ಮಹಾರಾಜರು ಹೈದರಾಬಾದ್ನ ನಿಜಾಮರ ನಂತರ ಅತ್ಯಂತ ಶ್ರೀಮಂತರೆನಿಸಿಕೊಂಡಿದ್ದರು. ಅರಮನೆಯನ್ನು ಒಂದು ಸುಸಂಗತವಾದ ಅತ್ಯಂತ ಪ್ರಭಾವಶಾಲಿ ವಾಸ್ತುಶಿಲ್ಪ ಮಂದಿರವನ್ನಾಗಿ,ಕಡಿಮೆ ಹಣದಲ್ಲಿ ನಿರ್ಮಿಸಲಾಗಿತ್ತು ಮತ್ತು ಅವರ ವಾರ್ಷಿಕ ಆದಾಯದ ಎರಡು ಮಿಲಿಯನ್ ಪೌಂಡ್ ಒಳಗೆ ಮುಗಿದಿತ್ತು .

ಮುಂಚಿನ ಭಾರತ, ಬ್ರಿಟಿಷ್ ಆಡಳಿತದಿಂದ ಕೂಡಿತ್ತು, ಸ್ವತಂತ್ರಗೊಂಡ ನಂತರ ಭಾರತದ ಕರ್ನಾಟಕ ರಾಜ್ಯವು ಒಂದು ಅಸ್ಥಿತ್ವವನ್ನು ಕಂಡಿತು. ನಂತರ ಮೈಸೂರು ಮಹಾರಾಜ, ನಾಲ್ವಡಿ ಕೃಷ್ಣರಾಜ ಒಡೆಯರ್ ಜೂನ್ ೪, ೧೮೮೪ – ಆಗಸ್ಟ್ ೩, ೧೯೪೦, ರಾಜ್ಯವನ್ನು ಆಳಲು ಶುರು ಮಾಡಿದರು. ಅವರ ಆಡಳಿತದಲ್ಲಿ ಮೈಸೂರು ನಗರವನ್ನು ರಾಜಧಾನಿಯನ್ನಾಗಿ ಮಾಡಿ, ಒಡೆಯರ್ ಎಂಬ ಶೀರ್ಷಿಕೆಯ ಅಡಿಯಲ್ಲಿ ರಾಜ್ಯವನ್ನು ಆಳಲು ಆರಂಭಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಇಪತ್ನಾಲ್ಕನೇ ರಾಜನಾಗಿ ಒಡೆಯರ್ ವಂಶವನ್ನು ಆಳಿದರು. ಮೈಸೂರು ರಾಜರನ್ನು, ಕಲೆ ಮತ್ತು ವಾಸ್ತುಶಿಲ್ಪದ ಮಹಾನ್ ಪಂಡಿತರೆಂದು ಪರಿಗಣಿಸಲಾಗಿತ್ತು. ಅವರು ತಮ್ಮ ಆಡಳಿತದ ಶೈಲಿಯನ್ನು ಆಡಂಬರದಿಂದ ಮಾಡುತ್ತಿದ್ದರು. ಅವರು ತಮ್ಮ ರಾಜ್ಯದ ವಾಸ್ತುಶಿಲ್ಪದ ಪರಂಪರೆಯನ್ನು ಹೆಚ್ಚಿಸಲು ನಿರ್ಮಿಸಿದ ಸುಂದರ ಸ್ಮಾರಕಗಳಾದ ಅರಮನೆಗಳು, ದೇವಾಲಯಗಳು, ಚರ್ಚ್’ಗಳು, ತೋಟಗಳು ಮತ್ತು ಇತರೆ ಸ್ಮಾರಕಗಳು ಸಾಕ್ಷಿಗಳಾಗಿವೆ. ಲಲಿತ ಮಹಲ್ ಅರಮನೆಯನ್ನು ಆಗಿನ ಭಾರತದ ವೈಸ್ರಾಯ್ ಹಾಗೂ ಮಹಾರಾಜರ ಯುರೋಪಿಯನ್ ಅತಿಥಿಗಳಿಗೆ ಉಳಿಯಲು ಅತಿಥಿ ಗೃಹವೆಂದು ೧೯೨೧ರಲ್ಲಿ ನಿರ್ಮಿಸಲಾಯಿತು.
ಲಲಿತ ಮಹಲ್ ಚಾಮುಂಡಿ ಬೆಟ್ಟದ ಅಡಿಯಲ್ಲಿ ನೆಲೆಸಿದೆ. ಲಲಿತ ಮಹಲ್ ಗೃಹಪಂಕ್ತಿಯುಳ್ಳ ವಿಸ್ತಾರವಾದ ತೋಟಗಳ ಮಧ್ಯದಲ್ಲಿದೆ. ಬಾಂಬೆಯಿಂದ ಈಗ ಮುಂಬಯಿ ಎಂದು ಕರೆಯಲಾಗಿದೆ ಬಂದಿರುವ ಇ.ಡಬ್ಯೂ. ಫ಼್ರಿಚ್ಲೀಯು ಲಲಿತ ಮಹಲ್ ಅರಮನೆಯ ಯೋಜನೆಯನ್ನು ಲಂಡನಿನ ಸಂತ ಪಾಲ್ಸ್ ಆರಾಧನಾ ಮಂದಿರ(ಸಂತ ಪಾಲ್ಸ್ ಕ್ಯಾಥೆಡ್ರಲ್)ನಿನ ವಾಸ್ತುಶಿಲ್ಪದ ಶೈಲಿಯ ತರಹ ರೂಪಿಸಲಾಗಿದೆ. ಇದನ್ನು ಬಿ.ಮುನಿವೆಂಕಟಪ್ಪನವರು ಈ ಅರಮನೆಯನ್ನು ನಿರ್ಮಾಣ ಮಾಡಿದರು. ಲಂಡನಿನ ಸಂತ ಪಾಲ್ಸ್ ಕ್ಯಾಥೆಡ್ರಲ್’ನಲ್ಲಿರುವ ಕೇಂದ್ರ ಗುಮ್ಮಟವನ್ನು ವಿಶೇಷವಾಗಿ ಲಲಿತ ಮಹಲ್ ಅರಮನೆಯಲ್ಲಿ ಪ್ರತಿಬಿಂಬಿಸಿದ್ದಾರೆ. ಈ ಅರಮನೆಯ ವಾಸ್ತುಶಿಲ್ಪವು ಇಂಗ್ಲೀಷ್ ಮೇನರ್ ಮನೆ ದೇಶದ ಒಂದು ದೊಡ್ಡ ಮನೆ ಎಂದರ್ಥ. ಐತಿಹಾಸಿಕವಾಗಿ ಇದು ಮೇನರ್’ನ ವಾಸದ ಮನೆಯಾಗಿರುತ್ತದೆ ಮತ್ತು ಇಟಾಲಿಯನ್ ಪಲಾಜ಼ೋವನ್ನು ಪ್ರತಿಬಿಂಬಿಸುತ್ತಿದೆ. ಇಟಾಲಿಯನ್ ಪಲಾಜ಼ೋ – ಪಲಾಜ಼ೋ ಶೈಲಿಯು, ಪಲಾಜ಼ಿ(ಅರಮನೆಗಳು) ಎಂಬ ವಾಸ್ತುಶಿಲ್ಪದ ಆಧಾರಿತವಾಗಿ ೧೯ ಮತ್ತು ೨೦ನೇ ಶತಮಾನದಲ್ಲಿ ನವೋದಯದ ಇಟಾಲಿಯನ್ ಶ್ರೀಮಂತ ಕುಟುಂಬಗಳು ಈ ಶೈಲಿಯ ಮನೆ ಅಥವಾ ಅರಮನೆಗಳನ್ನು ನಿರ್ಮಿಸುತ್ತಿದ್ದರು) ಲಲಿತ ಮಹಲ್ ಅರಮನೆಯು ಎರಡು ಅಂತಸ್ತಿನ ಅರಮನೆಯಾಗಿದೆ. ಈ ಅರಮನೆಗೆ ಅಯಾನಿನ ಜೋಡಿ ಕಂಬಗಳು ಐಯೋನಿಕ್ ಡಬಲ್ ಕಾಲಂ ಆಧಾರ ಸ್ತಂಭವಾಗಿದೆ. ಅರಮನೆಯು ನೆಲಮಟ್ಟದಿಂದ ವಿಸ್ತಾರವಾಗಿರುವ ದ್ವಾರಮಂಟಪವನ್ನು ಹೊಂದಿದೆ. ಗೋಳಾಕಾರದ ಗುಮ್ಮಟಗಳು ಅರಮನೆಗೆ ಹೆಚ್ಚಿನ ಮೆರುಗನ್ನು ಕೊಡುತ್ತವೆ ಮತ್ತು ಗುಮ್ಮಟಗಳ ಮಧ್ಯದಲ್ಲಿ ತೂಗುದೀಪಗಳನ್ನು ಅಳವಡಿಸಿದ್ದಾರೆ. ಕೇಂದ್ರ ಗುಮ್ಮಟವು ಎತ್ತರವಾಗಿ ಮತ್ತು ಪ್ರಧಾನವಾಗಿದೆ. ಅರಮನೆಯ ಮುಂಭಾಗದ ನೋಟಗಳು ಹಾಗೂ ಒಳಾಂಗಣದ ಬಾಗಿಲುಗಳು, ಕಿಟಕಿಗಳು ಮತ್ತು ಮೇಲ್ಚಾವಣಿಗಳನ್ನು, ಅದಕ್ಕೆ ಒಪ್ಪುವಂತಹ ಬಣ್ಣದ ಗಾಜಿನಿಂದ ಅಲಂಕೃತಗೊಳಿಸಿದ್ದಾರೆ. ಚಾಮುಂಡಿ ಬೆಟ್ಟವು ಅರಮನೆಯ ಎಡಭಾಗದಲ್ಲಿ ಕಣ್ಣು ಸೆಳೆಯುತ್ತವೆ. ಅರಮನೆಯ ವರಂಡಾದಲ್ಲಿ ನಿಂತು ಎದುರಿಗೆ ನೋಡಿದಾಗ ಮೈಸೂರಿನ ನಗರವು ಕಂಡು ಬರುತ್ತದೆ.

ಈ ಅರಮನೆಯಲ್ಲಿ ವೈಸ್ರಾಯ್ ಕೊಠಡಿ, ಔತಣಂಗಣ ಹಾಗೂ ನೃತ್ಯ ಮಂಟಪವನ್ನು ಕಾಣಬಹುದಾಗಿದೆ. ಮೆಟ್ಟಿಲುಗಳನ್ನು ಇಟಾಲಿಯನ್ ಶೈಲಿಯ ಅಮೃತಶಿಲೆ ಕಲ್ಲಿನ ಬಳಿಕೆಯಿಂದ ಕಟ್ಟಲಾಗಿದೆ. ಈ ಮೆಟ್ಟಿಲು ತಿರುವು ರೀತಿಯಲ್ಲಿದೆ. ಅರಮನೆಯ ಸಣ್ಣ ಅಲಂಕಾರಿಕ ಸಾಮಗ್ರಿಗಳು ಬ್ರಿಟನಿನ ವಿವಿಧ ಅರಮನೆಗಳಿಂದ ಪ್ರತಿಕೃತಿಯಾಗಿದೆ. ಒಡೆಯರ್ ಪರಂಪರೆಯ ಪೂರ್ಣ ಭಾವಚಿತ್ರಗಳು, ಬ್ರಿಟಿಷರೊಂದಿಗೆ ಟಿಪ್ಪು ಸುಲ್ತಾನಿನ ಕದನಗಳ ಶಿಲಾಮುದ್ರಣಗಳು, ಅರಮನೆಯ ಗೋಡೆಗಳಲ್ಲಿ ಹಾಗೂ ಛಾವಣಿಗಳಲ್ಲಿ ತುಂಬಿದ ಚಿತ್ರ ಕಲೆಗಳು, ಇಟಾಲಿಯನ್ ಅಮೃತಶಿಲೆಯ ಮಹಡಿಗಳು, ಬೆಲ್ಜಿಯನ್ ಹರಳಿನ ತೂಗುದೀಪಗಳು, ಗಾಜಿನ ದೀಪಗಳು, ವಿಧ ವಿಧದ ಪೀಠೋಪಕರಣಗಳು ಹಾಗೂ ಬೀಟೆ ಮರದ ಪೀಠೋಪಕರಣಗಳು, ಕೆತ್ತಿದ ಮರದ ಕಪಾಟುಗಳು ಹಾಗೂ ಗೋಡೆಯ ಫಲಕಗಳು, ಮೊಸೈಕ್ ಟೈಲ್ಸ್’ಗಳು ವಿವಿಧ ಬಣ್ಣದ ಸಣ್ಣ ಗಾಜಿರುವ ಕಲ್ಲಿನ ಚೂರಗಳನ್ನು ಜೋಡಿಸಿ ಮಾಡಿದ ಟೈಲ್ಸ್, ಆಕರ್ಷಕವಾದ ಪರ್ಶಿಯನ್ ರತ್ನಗಂಬಳಿಗಳು, ಇವೆಲ್ಲವೂ ಅರಮನೆಗೆ ರಾಜವೈಭವದ ಕಳೆಯನ್ನು ಕೊಡುತ್ತದೆ. ಅರಮನೆಯು ಪಾರಂಪರಿಕ ಹೋಟೆಲಾಗಿ ಪರಿವರ್ತನೆಗೊಂಡ ನಂತರ, ಅರಮನೆಯ ಕೆಲವು ಭಾಗಗಳನ್ನು ಅನುಕೂಲಕ್ಕೆ ತಕ್ಕಂತೆ ಬದಾಲಾವಣೆಯನ್ನು ಮಾಡಲಾಗಿತ್ತು. ಆದರೆ ಸುಮಾರು ಭಾಗಗಳನ್ನು, ಬದಲಾಯಿಸದೇ ಮೊದಲಿನ ಹಾಗೆಯೇ ಬಿಟ್ಟಿದ್ದಾರೆ. ಅವುಗಳಲ್ಲಿ, ನೃತ್ಯಮಂಟಪ ಹಾಗೂ ಔತಣಂಗಣವನ್ನು ಸಭೆ ಮತ್ತು ಸಮಾರಂಭಗಳನ್ನು ನಡೆಸುವುದಕ್ಕೆ ಅವನ್ನು ಬಳಸುತ್ತಿದ್ದಾರೆ. ಅರಮನೆಯಲ್ಲಿರುವ ನೆಲಕ್ಕೆ ನಯಗೊಳಿಸಿದ(ಪಾಲಿಶ್) ಮರ/ಕಟ್ಟಿಗೆಯನ್ನು ಬಳಿಕೆ ಮಾಡಿದ್ದಾರೆ ಮತ್ತು ಗುಮ್ಮಟದ ಒಳಮಾಳಿಗೆ(ಒಳಪದರ)ವನ್ನು ಮೂರು ಬಣ್ಣದ ಗಾಜಿನಿಂದ ಅಲಂಕೃತಗೊಳಿಸಿದ್ದಾರೆ. ವೃತ್ತಾಕಾರದ ಕೊಠಡಿಯನ್ನು ಈಗಿನ ಹೋಟೆಲಿನ ಭೋಜನ ಗೃಹವನ್ನಾಗಿ ಪರಿವರ್ತನೆ ಮಾಡಿದ್ದಾರೆ. ಆ ವೃತ್ತಾಕಾರದ ಕೊಠಡಿಯು ಬರೋಕ್ ಹಾಲ್ ಎಂಬುದಾಗಿತ್ತು, ಬೆಲ್ಜಿಯನ್ ಗಾಜಿನಿಂದ ಮಾಡಿದ ಆಕಾಶದೀಪವನ್ನು ಗುಮ್ಮಟದ ಒಳಮಾಳಿಗೆಗೆ ವೈಭವದಿಂದ ಕಾಣುವ ಹಾಗೆ ಅಲಂಕೃತಗೊಳಿಸಿದ್ಧಾರೆ.
ಧನ್ಯವಾದಗಳು.
GIPHY App Key not set. Please check settings