in ,

ಮೆದುಳಿನ ಆಕಾರವನ್ನು ಹೋಲುತ್ತದೆ ವಾಲ್‍ನಟ್ಸ್, ಆದರೆ ಪ್ರತಿ ಆರೋಗ್ಯದ ಸುಧಾರಣೆಗೆ ಸಹಾಯ ಮಾಡುತ್ತದೆ

ವಾಲ್‍ನಟ್ಸ್ ಪ್ರತಿ ಆರೋಗ್ಯದ ಸುಧಾರಣೆಗೆ
ವಾಲ್‍ನಟ್ಸ್ ಪ್ರತಿ ಆರೋಗ್ಯದ ಸುಧಾರಣೆಗೆ

ವಾಲ್‍ನಟ್ಸ್  ಮರಗಳು ಪೂರ್ವ ಉತ್ತರ ಅಮೇರಿಕಾದಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಆದರೆ ಈಗ ಇದನ್ನು ಚೀನಾ, ಇರಾನ್ ಮುಂತಾದ ದೇಶಗಳಲ್ಲೂ ಹೆಚ್ಚಾಗಿ ಬೆಳೆಯಲಾಗುತ್ತಿದೆ. 

ವಾಲ್ನಟ್‌ ಅನ್ನು ಒಂದು ಅದ್ಭುತವಾದ ಆಹಾರವೆಂದು ಕರೆಯಬಹುದು. ಇದರಲ್ಲಿ ಕಾರ್ಬೋಹೈಡ್ರೇಟ್ಸ್, ಪ್ರೋಟೀನ್, ಒಳ್ಳೆಯ ಕೊಬ್ಬು, ನಾರಿನಾಂಶ, ವಿಟಮಿನ್ ಗಳು, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಪೊಟಾಶಿಯಂ ಇದೆ.

ಇದು ಒಳ್ಳೆಯ ಕೊಲೆಸ್ಟ್ರಾಲ್ ನ್ನು ಸುಧಾರಿಸುವ ಜತೆಗೆ ಹೃದಯದ ಆರೋಗ್ಯವನ್ನು ಕೂಡ ಕಾಪಾಡುವುದು. ಮಧುಮೇಹವಿರುವಂತಹ ಜನರಿಗೆ ವಾಲ್ನಟ್ ತುಂಬಾ ಒಳ್ಳೆಯದು.

ವಾಲ್‌ನಟ್ಸ್‌ ವಿಟಮಿನ್ಗಳು, ಖನಿಜಗಳು, ಉತ್ತಮ ಕೊಬ್ಬುಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಚರ್ಮ, ಹೃದಯ, ಮೆದುಳು, ಕೊಲೆಸ್ಟ್ರಾಲ್ ಮತ್ತು ಇತರ ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸಲು ಸಹಾಯ ಮಾಡುತ್ತದೆ.

ವಾಲ್ನಟ್ಸ್ ಪೌಷ್ಠಿಕಾಂಶದ ವಿಷಯದಲ್ಲಿ ಸಮೃದ್ಧವಾಗಿದ್ದು ಹಲವಾರು ಜೀವಸತ್ವಗಳು, ಕಬ್ಬಿಣ, ಮೇಗ್ನಿಶಿಯಂ, ಸತು ಮುಂತಾದ ಖನಿಜಾಂಶಗಳಿಂದ ಸಮೃದ್ಧವಾಗಿದೆ. ಕೊಲೆಸ್ಟ್ರಾಲ್ ಮುಕ್ತವಾಗಿರುವ ವಾಲ್‍ನಟ್ಸ್ ಉತ್ತಮ ಒಮೆಗಾ-3 ಕೊಬ್ಬಿನಾಮ್ಲಗಳಿಂದ ಕೂಡಿದೆ.

ಮೆದುಳಿನ ಆಕಾರವನ್ನು ಹೋಲುತ್ತದೆ ವಾಲ್‍ನಟ್ಸ್, ಆದರೆ ಪ್ರತಿ ಆರೋಗ್ಯದ ಸುಧಾರಣೆಗೆ ಸಹಾಯ ಮಾಡುತ್ತದೆ
ವಾಲ್ನಟ್ಸ್ ಆಕಾರದಲ್ಲಿ ನಮ್ಮ ಮೆದುಳನ್ನು ಹೋಲುತ್ತದೆ

ದಿನಕ್ಕೆ ಸ್ವಲ್ಪ ವಾಲ್ನಟ್ಸ್ ಸೇವಿಸುವುದರಿಂದ ಕೊಲೆಸ್ಟ್ರಾಲ್ ಮತ್ತು ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ವಾಲ್ನಟ್ಸ್ ಆಕಾರದಲ್ಲಿ ನಮ್ಮ ಮೆದುಳನ್ನು ಹೋಲುವ ಕಾರಣ ಅದು ಮೆದುಳಿನ ಆಹಾರ ಎಂದು ಕರೆಯಲಾಗುತ್ತದೆ. ವಾಲ್‍ನಟ್ಸ್ ನ್ನು ನಿಯಮಿತವಾಗಿ ಸೇವಿಸುವುದರಿಂದ ನಮ್ಮ ಮೆದುಳಿನ ಕಾರ್ಯ ಸುಧಾರಿಸುತ್ತದೆ.

ವಾಲ್​ನಟ್ಸ್  ಉತ್ತಮ ಕೊಬ್ಬುಗಳು, ಪಾಲಿಫಿನಾಲ್ಗಳು ಮತ್ತು ವಿಟಮಿನ್ ಇ ಮೆದುಳಿನ ಹಾನಿಯನ್ನು ಸರಿಪಡಿಸಲು ಸಹಾಯ ಮಾಡುತದೆ. ವಯಸ್ಸಾದಂತೆ ಮನಸ್ಸನ್ನು ಕ್ರಿಯಾಶೀಲವಾಗಿಡಲು ಸಹ ಇದು ಸಹಾಯ ಮಾಡುತ್ತದೆ.

ವಾಲ್ನಟ್ಸ್ ಫೈಬರ್ನ ಅತ್ಯುತ್ತಮ ಮೂಲಗಳಾಗಿವೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡಬಹುದು. ಆದರೆ ಅವುಗಳು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತವೆ.

ವಾಲ್‍ನಟ್ಸ್ ವಿಟಮಿನ್ ಬಿ ಸತ್ವವನ್ನು ಹೊಂದಿದ್ದು ಇದು ನಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ತೂಕದ ನಿರ್ವಹಣೆಗೆ ಒಳ್ಳೆಯ ಆಹಾರವೂ ಆಗಿದೆ. ಆಯಾಸ ಮತ್ತು ನಿಶಕ್ತಿಯನ್ನು ದೂರಮಾಡುತ್ತದೆ. 

ವಾಲ್‍ನಟ್ಸ್ ಸೇವಿಸುವುದರಿಂದ ಮೆದುಳಿನ ಕಾರ್ಯಚಟುವಟಿಕೆಗಳನ್ನು ಸಮತೋಲನದಲ್ಲಿ ನಿರ್ವಹಿಸಲು ಸಹಕಾರಿಯಾಗಿದೆ. ವಾಲ್ನಟ್ಸ್ ಆಲ್ಫಾ-ಲಿನೋಲೆನಿಕ್ ಆಮ್ಲ ಮತ್ತು ಒಮೆಗಾ -3 ಕೊಬ್ಬಿನಾಮ್ಲದಲ್ಲಿ ಸಮೃದ್ಧವಾಗಿದೆ. ಜೊತೆಗೆ ಹೆಚ್ಚು ಪಾಲಿಫಿನೋಲಿಕ್ ಸಂಯುಕ್ತಗಳನ್ನು ಹೊಂದಿರುತ್ತದೆ.

ವಾಲ್ನಟ್ಸ್ ಸೇವಿಸುವುದರಿಂದ ಖಿನ್ನತೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಮೆದುಳಿನ ಸಮಗ್ರ ಚಟುವಟಿಕೆಗೆ ಇದು ಒಳ್ಳೆಯ ಆಹಾರವಾಗಿದೆ. ಆದರೆ ಮಿತವಾಗಿ ಸೇವಿಸಬೇಕು.

ಮೆದುಳಿನ ಆಕಾರವನ್ನು ಹೋಲುತ್ತದೆ ವಾಲ್‍ನಟ್ಸ್, ಆದರೆ ಪ್ರತಿ ಆರೋಗ್ಯದ ಸುಧಾರಣೆಗೆ ಸಹಾಯ ಮಾಡುತ್ತದೆ
ವಾಲ್ನಟ್ಸ್ ಮರ

ವಾಲ್ನಟ್ಸ್ ಕೂದಲು ಮತ್ತು ಉಗುರುಗಳು ಬಲವಾಗಿ ಮತ್ತು ಉದ್ದವಾಗಿ ಬೆಳೆಯಲು ಸಹಾಯ ಮಾಡುತ್ತದೆ. ವಾಲ್ನಟ್ಸ್ನಲ್ಲಿ ಹೆಚ್ಚಿನ ಪ್ರಮಾಣದ ಬಯೋಟಿನ್, ವಿಟಮಿನ್ ಬಿ 7 ಇರುವುದರಿಂದ ಕೂದಲು ಉದುರುವುದನ್ನು ತಡೆಯಲು ಸಹಾಯ ಮಾಡುತ್ತದೆ. ವಾಲ್ನಟ್ಸ್ನಲ್ಲಿರುವ ವಿಟಮಿನ್ ಇ ಕೂದಲು ಮತ್ತು ಉಗುರುಗಳಿಗೆ ಆರೋಗ್ಯಕರ ಹೊಳಪನ್ನು ನೀಡಲು ಸಹಾಯ ಮಾಡುತ್ತದೆ.

ವಾಲ್ನಟ್ಸ್ ಆ್ಯಂಟಿ ಆಕ್ಸಿಡೆಂಟ್‍ಗಳನ್ನು ಹೊಂದಿದೆ. ಇದನ್ನು ಸೇವಿಸುವುದರಿಂದ ಚರ್ಮ ಒಣಗುವುದನ್ನು ತಡೆಯುತ್ತದೆ. ಆಖ್ರೋಟ್ ಎಣ್ಣೆಯನ್ನು ಹಚ್ಚುವುದರಿಂದ ಚರ್ಮ ಮೃದುವಾಗುತ್ತದೆ. ಶುಷ್ಕ, ಸುಕ್ಕು ಮುಂತಾದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

ವಾಲ್ನಟ್ ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾವನ್ನು ಪೋಷಿಸಲು ಕೆಲಸ ಮಾಡುತ್ತದೆ. ಇದು ನಿಮ್ಮ ಹೊಟ್ಟೆಯ ಸಮಸ್ಯೆಗಳನ್ನು ದೂರವಿಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ವಾಲ್ನಟ್ಸ್ ಅಗತ್ಯವಾದ ಕೊಬ್ಬಿನಾಮ್ಲಗಳಿಂದ ಕೂಡಿದೆ, ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಬೆರಳೆಣಿಕೆಯಷ್ಟು ವಾಲ್ನಟ್ಸ್ ಗಳನ್ನು ಸೇವಿಸುವುದರಿಂದ ಮಂದಗತಿಯ ಚಯಾಪಚಯ ಕ್ರಿಯೆಗೆ ಉತ್ತೇಜನ ನೀಡುತ್ತದೆ, ಜೀರ್ಣಕ್ರಿಯೆ, ಬೆಳವಣಿಗೆ ಪ್ರಕ್ರಿಯೆಗಳಿಗೆ ಸಹಾಯ ಮಾಡುತ್ತದೆ.

ದೀರ್ಘಕಾಲ ಆರೋಗ್ಯವಾಗಿರಲು, ಉತ್ತಮ ಜೀವನಶೈಲಿಯನ್ನು ಅನುಸರಿಸಲು ಮತ್ತು ಆರೋಗ್ಯಕರವಾದವುಗಳನ್ನು ಆಹಾರದಲ್ಲಿ ಸೇರಿಸಲು ಸಲಹೆ ನೀಡಲಾಗುತ್ತದೆ. ಆಹಾರದಲ್ಲಿ ವಾಲ್‌ನಟ್ಸ್‌ ನ್ನು ಸೇರಿಸಿದರೆ, ಅದು ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ ಆರೋಗ್ಯವಾಗಿರಿಸುತ್ತದೆ. ವಾಲ್‌ನಟ್ಸ್‌ ವಿಟಮಿನ್​ ಗಳು, ಖನಿಜಗಳು, ಉತ್ತಮ ಕೊಬ್ಬುಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ.

ವಾಲ್ನಟ್ಸ್ ಆರೋಗ್ಯಕರ ಲಿಪಿಡ್ ಪೂರೈಕೆಯನ್ನು ಪ್ರೋತ್ಸಾಹಿಸುತ್ತದೆ ಏಕೆಂದರೆ ಅವು ಒಮೆಗಾ -3 ಕೊಬ್ಬುಗಳಲ್ಲಿ ಆಲ್ಫಾ-ಲಿನೋಲೆನಿಕ್ ಆಮ್ಲ ಮತ್ತು ಲಿನೋಲೆನಿಕ್ ಆಮ್ಲವನ್ನು ಹೊಂದಿರುತ್ತವೆ.

ಪ್ರತಿದಿನ ವಾಲ್ ನಟ್ಸ್ ಸೇವಿಸಿದರೆ ಹೊಟ್ಟೆ ತುಂಬಾ ಹೊತ್ತು ತುಂಬಿರುತ್ತದೆ. ಆದಾಗ್ಯೂ, ಇದರ ಸೇವನೆಯು ಕೊಬ್ಬನ್ನು ಹೆಚ್ಚಿಸುವುದಿಲ್ಲ. ಈ ರೀತಿಯಾಗಿ, ತೂಕವನ್ನು ನಿಯಂತ್ರಿಸಲು ಸಹ ತಿನ್ನಬಹುದು.

ವಾಲ್ನಟ್ಸ್ ಆ್ಯಂಟಿ ಆಕ್ಸಿಡೆಂಟ್‍ಗಳನ್ನು ಹೊಂದಿದೆ. ಇದು ಕ್ಯಾನ್ಸರ್ ಉಂಟುಮಾಡುವ ರಾಸಾಯನಿಕಗಳನ್ನು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ. ಪ್ರಾಸ್ಟೇಟ್, ಸ್ತನ ಕ್ಯಾನ್ಸರ್ ಸೇರಿದಂತೆ ಅನೇಕ ಕ್ಯಾನ್ಸರ್ ಗಳ ಬೆಳವಣಿಗೆಯನ್ನು ನಿಧಾನಗೊಳಿಸಲು ಅವು ಸಹಾಯ ಮಾಡುತ್ತವೆ.

ವಾಲ್​ನಟ್ಸ್ ಟೈಪ್ 2 ಮಧುಮೇಹವನ್ನು ನಿಯಂತ್ರಿಸಬಹುದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ದೀರ್ಘಕಾಲದ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಪ್ರತಿದಿನ 28 ಗ್ರಾಂ ವಾಲ್ ನಟ್ ತಿಂದರೆ ಅದು  ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.  ಹೃದಯವೂ ಸಹ ಆರೋಗ್ಯಕರವಾಗಿದೆ ಎಂದು ಹೇಳಬಹುದು.

ಮೆದುಳಿನ ಆಕಾರವನ್ನು ಹೋಲುತ್ತದೆ ವಾಲ್‍ನಟ್ಸ್, ಆದರೆ ಪ್ರತಿ ಆರೋಗ್ಯದ ಸುಧಾರಣೆಗೆ ಸಹಾಯ ಮಾಡುತ್ತದೆ
ವಾಲ್ನಟ್‌ ಅನ್ನು ಒಂದು ಅದ್ಭುತವಾದ ಆಹಾರವೆಂದು ಕರೆಯಬಹುದು

ವಾಲ್ನಟ್‌ ನಲ್ಲಿ ಅದ್ಭುತವಾದ ಕಬ್ಬಿಣ, ಕ್ಯಾಲ್ಸಿಯಂ, ಪೊಟಾಶಿಯಂ ಮತ್ತು ಸತುವಿನ ಅಂಶವಿದ್ದು, ಇದು ಚಯಾಪಚಯ ವೃದ್ಧಿಸಲು ನೆರವಾಗುವುದು. ಇದು ತೂಕ ಇಳಿಸಲು ತುಂಬಾ ಪರಿಣಾಮಕಾರಿ ಆಗಿರುವುದು.

ವಾಲ್ನಟ್‌ನಲ್ಲಿ ಒಳ್ಳೆಯ ಕೊಬ್ಬು ಇದ್ದು, ಇದು ತೂಕ ಹೆಚ್ಚಿಸಲು ಅಥವಾ ಕ್ಯಾಲರಿಯನ್ನು ಏರಿಸದು. ಇದರಲ್ಲಿನ ನಾರಿನಾಂಶವು ಹೊಟ್ಟೆಯನ್ನು ದೀರ್ಘಕಾಲ ತನಕ ತುಂಬಿದಂತೆ ಇಡುವುದು ಮತ್ತು ಪದೇ ಪದೇ ಹಸಿವಾಗುವುದನ್ನು ತಡೆಯುವುದು.

ವಾಲ್ನಟ್ಸ್ ಸೇವಿಸುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ವಾಲ್ನಟ್ಸ್ ವೀರ್ಯಾಣುಗಳ ಉತ್ಪತ್ತಿ ಮತ್ತು ಚಲನಶೀಲತೆಗೆ ಸಹಾಯ ಮಾಡುತ್ತದೆ. ವೀರ್ಯಾಣುಗಳ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು  ಅಸಹಜ ವೀರ್ಯಾಣು ಬೆಳವಣಿಗೆಯನ್ನು ತಡೆಯುತ್ತದೆ.

ವಾಲ್ನಟ್ ಎಣ್ಣೆಯು ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲವಾಗಿದೆ, ಅವುಗಳಲ್ಲಿ ಕೆಲವು ನಿಮ್ಮ ಸ್ಮರಣೆ ಮತ್ತು ಏಕಾಗ್ರತೆಯನ್ನು ಸುಧಾರಿಸಬಹುದು. ಆಕ್ರೋಡು ಎಣ್ಣೆಯ ಹೆಚ್ಚಿನ ಕೊಬ್ಬಿನಂಶವು ಆಲ್ಫಾ–ಲಿನೋಲೆನಿಕ್ ಆಮ್ಲ ಎಂದು ಕರೆಯಲ್ಪಡುವ ಒಮೆಗಾ -3 ಕೊಬ್ಬಿನಾಮ್ಲವನ್ನು ಹೊಂದಿರುತ್ತದೆ. ಈ “ಉತ್ತಮ ಕೊಬ್ಬು” ನಿಮ್ಮ ದೈನಂದಿನ ಆಹಾರದ ಭಾಗವಾಗಿರುವಾಗ ಹೃದ್ರೋಗವನ್ನು ಅಭಿವೃದ್ಧಿಪಡಿಸುವ ಅಪಾಯವನ್ನು 10% ರಷ್ಟು ಕಡಿಮೆ ಮಾಡುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಗೋವಾ ವಿಮೋಚನಾ ದಿನ

ಗೋವಾ ವಿಮೋಚನಾ ದಿನ

ಕಪ್ಪು ದಾರ ಕೈ ಅಥವಾ ಕಾಲಿಗೆ ಕಟ್ಟುವ ವೈಜ್ಞಾನಿಕ ಮತ್ತು ಧಾರ್ಮಿಕ ಕಾರಣಗಳು

ಕಪ್ಪು ದಾರ ಕೈ ಅಥವಾ ಕಾಲಿಗೆ ಕಟ್ಟುವ ವೈಜ್ಞಾನಿಕ ಮತ್ತು ಧಾರ್ಮಿಕ ಕಾರಣಗಳು