in ,

ಕಪ್ಪು ದಾರ ಕೈ ಅಥವಾ ಕಾಲಿಗೆ ಕಟ್ಟುವ ವೈಜ್ಞಾನಿಕ ಮತ್ತು ಧಾರ್ಮಿಕ ಕಾರಣಗಳು

ಕಪ್ಪು ದಾರ ಕೈ ಅಥವಾ ಕಾಲಿಗೆ ಕಟ್ಟುವ ವೈಜ್ಞಾನಿಕ ಮತ್ತು ಧಾರ್ಮಿಕ ಕಾರಣಗಳು
ಕಪ್ಪು ದಾರ ಕೈ ಅಥವಾ ಕಾಲಿಗೆ ಕಟ್ಟುವ ವೈಜ್ಞಾನಿಕ ಮತ್ತು ಧಾರ್ಮಿಕ ಕಾರಣಗಳು

ಕಪ್ಪು ದಾರವನ್ನು ಧರಿಸುವುದರಿಂದ ಕೆಟ್ಟ ದೃಷ್ಟಿಗಳಿಂದ ರಕ್ಷಣೆ ಸಿಗುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ ತಾಯಂದಿರು ಪುಟ್ಟ ಮಕ್ಕಳ ಕೈಗೆ ಕಪ್ಪು ದಾರ, ಕಪ್ಪು ಮಣಿಗಳ ಬಳೆಯನ್ನು ಹಾಕುತ್ತಾರೆ. ಕೆಟ್ಟದೃಷ್ಟಿಯಿಂದ ರಕ್ಷಿಸಿಕೊಳ್ಳಲು ಈ ದಾರವನ್ನು ಕೈ, ಕಾಲು, ಕತ್ತಿನಲ್ಲಿಯೂ ಧರಿಸಲಾಗುತ್ತದೆ. ಕೆಟ್ಟ ಶಕ್ತಿಯು ವ್ಯಕ್ತಿಯ ಮೇಲೆ ಪರಿಣಾಮ ಬೀರದಂತೆ ಬದಲಾಗಿ  ಎಲ್ಲಾ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಕಪ್ಪು ದಾರ ಹೊಂದಿದೆ ಎಂಬ ನಂಬಿಕೆಯಿದೆ. ಹೀಗಾಗಿ ದೃಷ್ಟಿಯಿಂದ ಕೆಡುಕಾಗುತ್ತದೆ ಎಂದುಕೊಳ್ಳುವವರು ಕಪ್ಪು ದಾರವನ್ನು ಧರಿಸುವುದು ಒಳ್ಳೆಯದು.

ಹಿಂದೂ ಧರ್ಮದಲ್ಲಿ, ಕಪ್ಪು ಬಣ್ಣವು ನ್ಯಾಯ ಮತ್ತು ಶಿಕ್ಷೆಯ ದೇವರಾದ ಶನಿಯೊಂದಿಗೆ ಸಂಬಂಧ ಹೊಂದಿದೆ ಎಂದು ಹೇಳಲಾಗುತ್ತದೆ. ಶನಿ ಎಲ್ಲಾ ನಕಾರಾತ್ಮಕ ಕಂಪನಗಳನ್ನು ನಿವಾರಿಸುತ್ತಾರೆ ಮತ್ತು ಭರವಸೆ, ಉತ್ಸಾಹ ಮತ್ತು ಸಕಾರಾತ್ಮಕ ಶಕ್ತಿಯನ್ನು ಆಶೀರ್ವದಿಸುತ್ತಾರೆ. ಆದ್ದರಿಂದ ಪಾದದ ಸುತ್ತಲೂ, ಕುತ್ತಿಗೆ, ಸೊಂಟ ಅಥವಾ ತೋಳುಗಳಲ್ಲಿ ಕಪ್ಪುದಾರವನ್ನು ಧರಿಸಿದವರು ನಕಾರಾತ್ಮಕ ಮತ್ತು ದುಷ್ಟ ಶಕ್ತಿಯಿಂದ ದೂರವಿರುತ್ತಾನೆ.

ಅನೇಕ ಧರ್ಮಗಳಲ್ಲಿ, ಸಮುದಾಯಗಳಲ್ಲಿ ಶುಭ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕಪ್ಪು ಬಣ್ಣವನ್ನು ಧರಿಸುವುದು ಅಥವಾ ಕಪ್ಪು ಬಣ್ಣದ ವಸ್ತುಗಳನ್ನು ಇಡುವುದನ್ನು ಕೂಡ ನಿಷೇಧಿಸಲಾಗಿದೆ. ಕಪ್ಪು ಬಣ್ಣವು ನಕಾರಾತ್ಮಕತೆಯನ್ನು ಸೃಷ್ಟಿಸುತ್ತದೆ ಎನ್ನುವ ನಂಬಿಕೆಯಿಂದ ಕಪ್ಪು ಬಣ್ಣವನ್ನು ಹೆಚ್ಚಾಗಿ ಬಳಸಲಾಗುವುದಿಲ್ಲ. ಹಿಂದೂ ಧರ್ಮದಲ್ಲೂ ಕೂಡ ಧಾರ್ಮಿಕ ಚಟುವಟಿಕೆಗಳ ಸಂದರ್ಭಗಳಲ್ಲಿ ಕಪ್ಪು ಬಣ್ಣದ ಬಟ್ಟೆಯನ್ನಾಗಲಿ, ಕಪ್ಪು ಬಣ್ಣದ ವಸ್ತುಗಳನ್ನಾಗಲಿ ಬಳಸುವುದಿಲ್ಲ. ಆದರೆ ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಕಂಪು ಬಣ್ಣವು ಬಹಳ ಶ್ರೇಷ್ಟವೆಂದು ಪರಿಗಣಿಸಲಾಗುತ್ತದೆ.

ಕಪ್ಪು ದಾರ ಕೈ ಅಥವಾ ಕಾಲಿಗೆ ಕಟ್ಟುವ ವೈಜ್ಞಾನಿಕ ಮತ್ತು ಧಾರ್ಮಿಕ ಕಾರಣಗಳು
ನಕಾರಾತ್ಮಕ ಕಂಪನಗಳನ್ನು ನಿವಾರಿಸುತ್ತದೆ

ಭಗವಾನ್‌ ಹನುಮಂತನಿಂದ ಆಶೀರ್ವಾದವನ್ನು ಪಡೆದುಕೊಂಡ ನಂತರ ಕಪ್ಪು ದಾರವನ್ನು ಧರಿಸಿದರೆ ವ್ಯಕ್ತಿಯ ಕಾಯಿಲೆಗಳನ್ನು ಮತ್ತು ರೋಗಗಳನ್ನು ನಿಯಂತ್ರಿಸುತ್ತದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳು ಕಪ್ಪು ದಾರವನ್ನು ಧರಿಸಬೇಕು.

ನಮ್ಮ ಸೊಂಟಕ್ಕಿರಬಹುದು, ಕಾಲಿಗಿರಬಹುದು ಅಥವಾ ದೇಹದ ಇನ್ನಿತರ ಭಾಗಗಳಿಗೆ ಕಪ್ಪು ದಾರವನ್ನು ಸುತ್ತುವುದರಿಂದ ಅಥವಾ ಕಟ್ಟುವುದರಿಂದ ಸಾಕಷ್ಟು ಅನುಕೂಲಗಳಿವೆ. ಜ್ಯೋತಿಷ್ಯ ಗ್ರಂಥಗಳಲ್ಲಿ ಕಪ್ಪು ದಾರದ ಮಹತ್ವವನ್ನು ವಿವರಿಸಲಾಗಿದೆ. ಕಪ್ಪು ದಾರವು ಧಾರ್ಮಿಕ ಹಾಗೂ ಜ್ಯೋತಿಷ್ಯ ದೃಷ್ಟಿಕೋನದಿಂದ ಮಾತ್ರವಲ್ಲ, ವೈಜ್ಞಾನಿಕವಾಗಿಯೂ ಸಾಕಷ್ಟು ಪ್ರಯೋಜನಕಾರಿಯಾಗಿದೆ.

ಕಪ್ಪುದಾರವು ಸೊಂಟದ ಬೆನ್ನುಮೂಳೆಗೆ ಬೆಂಬಲ ನೀಡುವ ಮೂಲಕ ಬೆನ್ನುಮೂಳೆಯ ಆರೋಗ್ಯವನ್ನು ಸುಧಾರಿಸುತ್ತದೆ. ಅಲ್ಲದೆ, ಕಪ್ಪುದಾರವು ಬೆನ್ನುಮೂಳೆಯ ದ್ರವವನ್ನು ಉಳಿಸಿಕೊಳ್ಳುವ ಮೂಲಕ ಕಡಿಮೆ ಬೆನ್ನುನೋವು, ಬೆನ್ನುಮೂಳೆ ತೊಂದರೆಗಳು, ಸ್ಲಿಪ್ ಡಿಸ್ಕ್ ಮುಂತಾದ ಸಮಸ್ಯೆಗಳನ್ನು ತಡೆಯುತ್ತದೆ.

ಕಪ್ಪು ದಾರವನ್ನು ಧರಿಸುವುದರಿಂದ ನಮ್ಮೊಳಗಿನ ನಕಾರಾತ್ಮಕ ಶಕ್ತಿಯನ್ನು ಅಥವಾ ಹೊರಗಿನ ನಕಾರಾತ್ಮಕ ಶಕ್ತಿಯು ನಮ್ಮ ಮೇಲೆ ಕೆಟ್ಟ ಪರಿಣಾಮ ಬೀರುವುದನ್ನು ತಡೆಯುತ್ತದೆ.

ಸೊಂಟದ ಮೇಲಿನ ಕಪ್ಪು ದಾರವು ಫಲವತ್ತತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಸೊಂಟದ ಹತ್ತಿರ ಮತ್ತು ಸಂತಾನೋತ್ಪತ್ತಿ ಅಂಗಗಳನ್ನು ತಂಪಾಗಿರಿಸಲು ಸಹ ಸಹಕಾರಿಯಾಗಿದೆ.

ಕಪ್ಪು ದಾರವು ಮನುಷ್ಯರನ್ನು ದುಷ್ಟ ಶಕ್ತಿಗಳಿಂದ ರಕ್ಷಿಸುತ್ತದೆ. ಅಷ್ಟು ಮಾತ್ರವಲ್ಲ, ದುಷ್ಟ ಕಣ್ಣುಗಳಿಂದ ಮತ್ತು ದೃಷ್ಟಿಯಿಂದ ಕಾಪಾಡುತ್ತದೆ.

ಕಪ್ಪುದಾರ ಕಟ್ಟುವುದರಿಂದ ದೇಹದಲ್ಲಿ ರಕ್ತಸಂಚಾರವನ್ನು ಸುಗಮ ನಡೆಸಲು ನೆರವಾಗುತ್ತದೆ, ಅಲ್ಲದೇ ರಕ್ತದೊತ್ತಡ ಉಂಟಾಗದಂತೆ ಸಹ ತಡೆಯುತ್ತದೆ.

ದೇಹದ ಯಾವುದೇ ಭಾಗದಲ್ಲಿ ಕಪ್ಪುದಾರವನ್ನು ಕಟ್ಟುವುದರಿಂದ ಚಯಾಪಚಯ ಕ್ರಿಯೆ ಚೆನ್ನಾಗಿ ಆಗುತ್ತದೆ. ಸಮತೋಲದಚಯಾಪಚಯಕ್ಕೆ ಕಪ್ಪು ದಾರ ಸಹಕಾರಿ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.

ಕಪ್ಪು ದಾರ ಕೈ ಅಥವಾ ಕಾಲಿಗೆ ಕಟ್ಟುವ ವೈಜ್ಞಾನಿಕ ಮತ್ತು ಧಾರ್ಮಿಕ ಕಾರಣಗಳು
ಕಪ್ಪುದಾರವನ್ನು ಕಟ್ಟುವುದರಿಂದ ಚಯಾಪಚಯ ಕ್ರಿಯೆ ಚೆನ್ನಾಗಿ ಆಗುತ್ತದೆ

ಶನಿವಾರದಂದು ಕಪ್ಪು ದಾರವನ್ನು ಧರಿಸಿದರೆ ಉತ್ತಮ. ಶನಿವಾರ ಶನಿಯ ದೇವರು. ಅವನು ಕಪ್ಪು ಇಷ್ಟಪಡುತ್ತಾನೆ. ಕಪ್ಪು ದಾರವನ್ನು ಧರಿಸಿ ರುದ್ರ ಗಾಯತ್ರಿ ಮಂತ್ರವನ್ನು ಹೇಳಿ. ಇದರಿಂದ ಕಪ್ಪು ದಾರದ ಬಲ ಮತ್ತಷ್ಟು ಹೆಚ್ಚುತ್ತದೆ ಎನ್ನುತ್ತಾರೆ.

ಸೊಂಟದ ಸುತ್ತಲಿ ಕಪ್ಪುದಾರ ತೂಕ ಮತ್ತು ಸೊಂಟದ ಗಾತ್ರವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಅಲ್ಲದೇ ಜೀರ್ಣಕ್ರಿಯೆಗೂ ಈ ದಾರ ಅನುಕೂಕರವಾಗಿದೆ. ನಾವು ಸೊಂಟದ ಮೇಲೆ ದಾರವನ್ನು ಧರಿಸಿದಾಗ ಮತ್ತು ಆ ದಾರವು ಸಡಿಲವಾದರೆ ಇದರರ್ಥ ನಾವು ತೂಕವನ್ನು ಕಳೆದುಕೊಂಡಿದ್ದೇವೆ ಮತ್ತು ಅದು ಬಿಗಿಯಾದರೆ ನಾವು ತೂಕವನ್ನು ಹೊಂದಿರಬೇಕು ಎಂದರ್ಥ.

ಶನಿಯ ಆಶೀರ್ವಾದ ಪಡೆಯಲು ಮತ್ತು ನಿಮಗೆ ತೊಂದರೆ ನೀಡಬಯಸುವ ವ್ಯಕ್ತಿಯಿಂದ ದೂರವಿರಲು ಬಯಸಿದರೆ, 9 ಗಂಟುಗಳನ್ನು ಕಟ್ಟಿದ ಕಪ್ಪುದಾರವನ್ನು ಶನಿವಾರದಂದು ಧರಿಸಬೇಕು.

ಸೊಂಟದ ಸುತ್ತಲಿನ ಚಯಾಪಚಯವನ್ನು ಹೆಚ್ಚಿಸುವ ಮೂಲಕ ಬೆಲ್ಲಿಯನ್ನು ಕರಗಿಸಲು ಅಥವಾ ಬರದಂತೆ ತಡೆಯಲು ಇದು ಸಹಾಯ ಮಾಡುತ್ತದೆ. ಆದ್ದರಿಂದ ಇತರೆ ಬೆಲ್ಲಿ ಕರಗಿಸುವ ಇತರ ಪ್ರಾಡಕ್ಟ್‌ಗಳಿಗಿಂತ ಇದು ಉತ್ತಮ ಮತ್ತು ಅಗ್ಗವಾಗಿದೆ. ನಮ್ಮ ಆರೋಗ್ಯದ ಮೇಲೆ ಸ್ವಲ್ಪ ವ್ಯತಿರಿಕ್ತ ಪರಿಣಾಮ ಬೀರಬಹುದು. ಚಯಾಪಚಯ ಕ್ರಿಯೆಯ ಹೆಚ್ಚಳದಿಂದಾಗಿ ನಾವು ವಾತಾ, ಪಿತ್ತ ಮತ್ತು ಕಫ ನಿವಾರಣೆಯಾಗುತ್ತದೆ.

ರಾಹು ಮತ್ತು ಕೇತುಗಳನ್ನು ನೆರಳು ಗ್ರಹ ಎಂದು ಕರೆಯಲಾಗುತ್ತದೆ. ಅಲ್ಲದೆ, ರಾಹುವು ನ್ಯಾಯ ಮತ್ತು ಕರ್ಮದ ಗ್ರಹವಾಗಿದೆ. ಇವುಗಳಲ್ಲಿ ಯಾವುದಾದರೂ ಗ್ರಹಗಳು ದುರ್ಬಲವಾಗಿದ್ದರೆ ಅಥವಾ ಅವರು ಶತ್ರು ಗ್ರಹದ ಮನೆಗೆ ಪ್ರವೇಶಿಸಿದರೆ, ವ್ಯಕ್ತಿಯು ಹಣವನ್ನು ಕಳೆದುಕೊಳ್ಳುತ್ತಾನೆ ಮತ್ತು ಮನೆಯ ಜೀವನವೂ ಅಸ್ತವ್ಯಸ್ತವಾಗುತ್ತದೆ. ಇಂತಹ ಸಂದರ್ಭದಲ್ಲಿ ಎಡಗಾಲಿನಲ್ಲಿ ಕಪ್ಪು ದಾರವನ್ನು ಧರಿಸುವುದರಿಂದ ವ್ಯಕ್ತಿಯು ಈ ಛಾಯಾಗ್ರಹಗಳ ಭೀತಿಯ ನೆರಳಿನಿಂದ ಮುಕ್ತನಾಗುತ್ತಾನೆಂದು ಹೇಳಲಾಗುತ್ತದೆ.

ಮುಖ್ಯವಾಗಿ ಕಪ್ಪು ದಾರಕ್ಕೆ ಶಾಖ ಹೀರುವ ಗುಣವಿದೆ. ಈ ಕಾರಣಕ್ಕೂ ದಾರ ಕಟ್ಟಿಕೊಳ್ಳುತ್ತಾರೆ. ಕೆಲ ಗಾಯಗಳು ತಕ್ಷಣ ಮಾಸುವುದಿಲ್ಲ. ಬೇಗ ವಾಸಿಯಾಗಲು ಕಪ್ಪು ದಾರ ಕಟ್ಟಿ ಅಂತಾರೆ. ಇನ್ನು ಹೆಚ್ಚು ನಡೆಯುವುದರಿಂದ ಕಾಲಿನ ಪಾದ ನೋವಾಗುತ್ತದೆ. ನೋವು ನಿವಾರಣೆ ಮಾಡಲು ಕಾಲಿಗೆ ದಾರ ಕಟ್ಟುವ ನಂಬಿಕೆಯಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

48 Comments

ವಾಲ್‍ನಟ್ಸ್ ಪ್ರತಿ ಆರೋಗ್ಯದ ಸುಧಾರಣೆಗೆ

ಮೆದುಳಿನ ಆಕಾರವನ್ನು ಹೋಲುತ್ತದೆ ವಾಲ್‍ನಟ್ಸ್, ಆದರೆ ಪ್ರತಿ ಆರೋಗ್ಯದ ಸುಧಾರಣೆಗೆ ಸಹಾಯ ಮಾಡುತ್ತದೆ

ಅಂತಾರಾಷ್ಟ್ರೀಯ ಮಾನವ ಒಗ್ಗಟ್ಟಿನ ದಿನ

ಡಿಸೆಂಬರ್ ೨೦, ಅಂತಾರಾಷ್ಟ್ರೀಯ ಮಾನವ ಒಗ್ಗಟ್ಟಿನ ದಿನ