ತುಂಬಾ ಜನರು ಇರುವಾಗ ಹೂಸು ಬಿಟ್ಟರೆ ಆಗುವ ಮುಜುಗರ ಅಷ್ಟಿಷ್ಟಲ್ಲ. ಈ ಪರಿಸ್ಥಿತಿ ಯಾರಿಗೂ ಹಾಗೂ ಯಾವುದೇ ಸಂದರ್ಭದಲ್ಲಿ ಉಂಟಾಗಬಹುದು. ಅತೀ ಪ್ರಾಮುಖ್ಯವಾದ ಕಚೇರಿಯ ಮೀಟಿಂಗ್ ಅಥವಾ ಗರ್ಲ್ ಫ್ರೆಂಡ್ ಜತೆಗೆ ಡೇಟಿಂಗ್ ನಲ್ಲಿ ಇರುವಾಗ ಆಗಬಹುದು. ಸಾರ್ವಜನಿಕ ಸ್ಥಳದಲ್ಲಿ ಹೂಸು ಬಿಡುವುದು ತುಂಬಾ ಮುಜುಗರವನ್ನುಂಟು ಮಾಡುತ್ತದೆ. ಜನರ ಮುಖ ಸಣ್ಣದಾದಾಗ ಮತ್ತು ಹೂಸು ಬಿಟ್ಟ ವಾಸನೆಯಿಂದ ತಿಳಿಯಾಗಲು ಹೊಸ ಗಾಳಿ ಬಯಸಿದಾಗ ತುಂಬಾ ಕೆಟ್ಟ ಭಾವನೆಯಾಗುತ್ತದೆ.
ವೈದ್ಯಕೀಯ ಸಾಹಿತ್ಯದಲ್ಲಿ ಹೂಸು ಬಿಡುವುದು ಎಂದರೆ “ಗುದದ ಮೂಲಕ ಅಪಾನವಾಯುವನ್ನು ಹೊರಹಾಕುವುದು” ಅಥವಾ “ವಾಯುತುಂಬಿದ ಲಕ್ಷಣ ಅಥವಾ ಸ್ಥಿತಿ”, ಇದನ್ನು ಪ್ರತಿಯಾಗಿ “ಕರುಳು ಅಥವಾ ಉದರದಲ್ಲಿ ಉತ್ಪಾದನೆಯಾದ ಅನಿಲಗಳಿಂದ ಗುರುತಿಸಲ್ಪಟ್ಟಿರುವುದು ಅಥವಾ ಪ್ರಭಾವಿತವಾಗಿರುವುದು ; ಸಂಭಾವ್ಯವಾಗಿ ಜೀರ್ಣಕಾರಿ ವಾಯು ತುಂಬಿರುವಿಕೆಯನ್ನು ಉಂಟುಮಾಡುವಂಥದ್ದು” ಎಂದು ವ್ಯಾಖ್ಯಾನಿಸಲಾಗುತ್ತದೆ. ಉದರವಾಯು ಶಬ್ದವು ಹೊಟ್ಟೆ ಅಥವಾ ಕರುಳುಗಳಲ್ಲಿ ಉತ್ಪತ್ತಿಯಾದ ಅನಿಲವನ್ನು ಸೂಚಿಸುವ ವೈದ್ಯಕೀಯ ಶಬ್ದವೂ ಆಗಿದೆ. ಈ ಪ್ರಮಾಣಿತ ವ್ಯಾಖ್ಯಾನಗಳ ಹೊರತಾಗಿಯೂ, ಕರುಳು ಅನಿಲದ ಸ್ವಲ್ಪ ಪ್ರಮಾಣವು ಸೇವಿಸಿದ ಪರಿಸರ ಅನಿಲವಾಗಿರಬಹುದು, ಮತ್ತು ಹಾಗಾಗಿ ಉದರವಾಯುವು ಸಂಪೂರ್ಣವಾಗಿ ಹೊಟ್ಟೆ ಅಥವಾ ಕರುಳುಗಳಲ್ಲಿ ಉತ್ಪತ್ತಿಯಾಗಿರುವುದಿಲ್ಲ.

ಸರಿಯಾಗಿ ಅಜೀರ್ಣವಾಗದ ಆಹಾರ, ಅನಾರೋಗ್ಯಕರವಾಗಿ ತಿನ್ನುವುದು ಮತ್ತು ಸರಿಯಾದ ಸಮಯದಲ್ಲಿ ತಿನ್ನದೇ ಇರುವುದು ಹೂಸಿಗೆ ಪ್ರಮುಖ ಕಾರಣವಾಗಬಹುದು. ಹೂಸು ಬಿಡುವುದು ತುಂಬಾ ಕೆಟ್ಟದಾದರೂ ಇದನ್ನು ಉದ್ದೇಶಪೂರ್ವಕವಾಗಿ ಯಾರೂ ಮಾಡುವುದಿಲ್ಲ. ಇದು ನೈಸರ್ಗಿಕ ಪ್ರಕ್ರಿಯೆಯಾಗಿರುವ ಕಾರಣ ಇದನ್ನು ನಿಯಂತ್ರಿಸುವುದು ತುಂಬಾ ಕಷ್ಟ.
ಗ್ಯಾಸ್ ಸಮಸ್ಯೆ ಅಥವಾ ಹೊಟ್ಟೆ ಉಬ್ಬರದ ಸಮಸ್ಯೆ ಹೊಂದಿರುವ ವ್ಯಕ್ತಿಗಳು ಶುಂಠಿಯ ಪರಿಹಾರ ಕಂಡುಕೊಳ್ಳಬಹುದು. ತಾಜಾ ಶುಂಠಿಯ ತುರಿಯನ್ನು ನಿಂಬೆ ರಸದೊಂದಿಗೆ ಸೇರಿಸಿ, ಸೇವಿಸಬೇಕು. ಈ ಕ್ರಮವನ್ನು ಊಟದ ನಂತರ ಸೇವಿಸಿದರೆ ಉತ್ತಮ ಪರಿಹಾರ ನೀಡುವುದು. ಊಟದ ನಂತರ ಬೆಚ್ಚಗಿನ ಶುಂಠಿ ಚಹಾ ಸೇವಿಸುವುದರಿಂದಲೂ ಹೊಟ್ಟೆ ಉಬ್ಬರ ಗುಣಮುಖವಾಗುವುದು. ಶುಂಠಿ ನೈಸರ್ಗಿಕ ಕಾರ್ಮಿನೇಟಿವ್ ಆಗಿ ಕಾರ್ಯನಿರ್ವಹಿಸುತ್ತದೆ.
ಸಕ್ಕರೆಯುಕ್ತ ಆಹಾರಗಳು
ಕೆಲವೊಂದು ಅನಿರೀಕ್ಷಿತ ಸಂದರ್ಭಗಳಲ್ಲಿ ಹೊರಬರುವಂತಹ ಹೂಸಿಗೆ ಸಕ್ಕರೆಯುಕ್ತ ಆಹಾರಗಳು ಕಾರಣವಾಗುತ್ತದೆ. ಜೋರಾಗಿ ಹೂಸು ಬಿಡುವುದನ್ನು ಅದರಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಇದನ್ನು ನಿಯಂತ್ರಿಸಲು ಸಕ್ಕರೆ ಕಡಿಮೆ ತಿನ್ನಿ. ಸಕ್ಕತೆಯನ್ನು ಬ್ಯಾಕ್ಟೀರಿಯಾ ಸುಲಭವಾಗಿ ವಿಭಜಿಸುತ್ತದೆ ಮತ್ತು ಅದರಿಂದ ಕೆಟ್ಟ ವಾಸನೆಯ ಅನಿಲ ಬಿಡುಗಡೆಯಾಗುತ್ತದೆ. ಸಕ್ಕರೆಯುಳ್ಳ ಆಹಾರವನ್ನು ಕಡಿಮೆ ಮಾಡುವುದು ಹೂಸು ತಡೆಯಲು ಒಳ್ಳೆಯ ವಿಧಾನ.
ಗ್ಯಾಸ್ ಸಮಸ್ಯೆಯಿಂದ ಬಳಲುವವರು ಅರ್ಧ ಟೀ ಚಮಚ ಇಂಗ್ ಅನ್ನು ಒಂದು ಲೋಟ ಮಜ್ಜಿಗೆಗೆ ಅಥವಾ ಉಗುರು ಬೆಚ್ಚಗಿನ ನೀರಿನಲ್ಲಿ ಸೇರಿಸಿ ಕುಡಿಯಬಹುದು. ಈ ವಿಧಾನದಿಂದ ಬಹುಬೇಗ ಗ್ಯಾಸ್ ಸಮಸ್ಯೆಯನ್ನು ನೀವು ನಿವಾರಿಸಿಕೊಳ್ಳಬಹುದು. ಇಂಗು ನಿಮ್ಮ ಹೊಟ್ಟೆಯಲ್ಲಿ ಹೆಚ್ಚುವರಿ ಅನಿಲವನ್ನು ಉತ್ಪಾದಿಸುವ ಕರುಳಿನ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ. ಇಂಗು ವಾಯು ವಿರೋಧಿ ಆಗಿ ಕಾರ್ಯನಿರ್ವಹಿಸುತ್ತದೆ. ಆಯುರ್ವೇದದ ಪ್ರಕಾರ ದೇಹದ ವಾತ ದೋಶವನ್ನು ಸಮತೋಲನಗೊಳಿಸಲು ಇಂಗು ಸಹಾಯ ಮಾಡುತ್ತದೆ.
ಕಾರ್ಬ್ರೋಹೈಡ್ರೆಟ್ಸ್ ಗಳ ಸೇವನೆ ಕಡಿಮೆ ಮಾಡಿ. ಕೆಟ್ಟ ಹೂಸಿಗೆ ಕಾರಣವಾಗುವ ಮುಖ್ಯ ಕಾರ್ಬ್ರೋಹೈಡ್ರೆಟ್ಸ್ ಎಂದರೆ ಅದು ಸೋಡಾ. ಸೋಡಾ ಮತ್ತು ಕಾರ್ಬ್ರೋಹೈಡ್ರೆಟ್ಸ್ ಇರುವ ಪಾನೀಯಗಳನ್ನು ಕಡೆಗಣಿಸಿ.

ಎರಡು ಕಪ್ ನೀರಿಗೆ ಒಂದು ಟೀ ಚಮಚ ಜೀರಿಗೆ ಸೇರಿಸಿ, 10-15 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ನಂತರ ಸ್ವಲ್ಪ ಕಾಲ ತಣಿಯಲು ಬಿಡಿ. ಊಟ ಆದ ನಂತರ ಈ ಜೀರಿಗೆ ನೀರನ್ನು ಸೇವಿಸಿ. ಆಗ ನಿಮ್ಮ ಹೊಟ್ಟೆಯಲ್ಲಿ ಗ್ಯಾಸ್ ತುಂಬುವ ಪ್ರಕ್ರಿಯೆಯನ್ನು ಸುಲಭವಾಗಿ ತಡೆಯಬಹುದು.
ಪಿಷ್ಟ ತುಂಬಿರುವ ಆಹಾರಗಳಾದ ಬಟಾಟೆ, ಧಾನ್ಯಗಳು ಮತ್ತಿತ್ತರ ಆಹಾರಗಳು ಉತ್ತಮ ಮಟ್ಟದ ಗ್ಯಾಸ್ ನ್ನು ಉಂಟು ಮಾಡಿ ಹಲವಾರು ಸಲ ಹೂಸು ಬಿಡಬೇಕಾಗಿ ಬರಬೇಕಾಗುತ್ತದೆ. ಯಾವುದೇ ಸಮಾರಂಭದಲ್ಲಿ ಭಾಗವಹಿಸುವ ಮೊದಲು ಇಂತಹ ಆಹಾರಗಳನ್ನು ತಿನ್ನುವುದನ್ನು ಕಡೆಗಣಿಸಿದರೆ ಸಾರ್ವಜನಿಕವಾಗಿ ಹೂಸು ಹೋಗಿ ನಿಮಗೆ ಮುಜುಗರವಾಗುವುದು ತಪ್ಪುತ್ತದೆ.
ಹೊಟ್ಟೆಯಲ್ಲಿ ಉಂಟಾಗುವ ಗ್ಯಾಸ್ ಸಮಸ್ಯೆಯನ್ನು ನಿವಾರಿಸಲು ಓಂಕಾಳು ಅಥವಾ ಕ್ಯಾರಮ್ ಬೀಜವನ್ನು ಸೇವಿಸಬೇಕು. ನಿತ್ಯವೂ ಒಂದು ಬಾರಿ ಅರ್ಧಟೀ ಚಮಚ ಓಂಕಾಳನ್ನು ಜಗೆದು ನೀರನ್ನು ಕುಡಿಯಬಹುದು. ಇಲ್ಲವೇ ನೀರಿಗೆ ಸೇರಿಸಿ, ಕಷಾಯವನ್ನು ತಯಾರಿಸಿಯೂ ಕುಡಿಯಬಹುದು. ಈ ವಿಧಾನವು ಬಹುಬೇಗ ಆರೈಕೆಯನ್ನು ಮಾಡುವುದು.
ಧೂಮಪಾನ ಸಂಪೂರ್ಣವಾಗಿ ತ್ಯಜಿಸುವುದು ಒಂದು ಆರೋಗ್ಯಕರ ನಿರ್ಧಾರ. ಧೂಮಪಾನವು ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಹೆಚ್ಚಿನ ಗ್ಯಾಸ್ ಉಂಟುಮಾಡಿ ಅದನ್ನು ಕೆಟ್ಟ ಹೂಸಾಗಿ ಪರಿವರ್ತಿಸಬಹುದು. ಇದರಿಂದ ಆದಷ್ಟು ಮಟ್ಟಿಗೆ ಧೂಮಪಾನ ಮಾಡುವುದನ್ನು ಕಡೆಗಣಿಸಿ.
ಧನ್ಯವಾದಗಳು.
GIPHY App Key not set. Please check settings