in

ಮಕ್ಕಳಲ್ಲಿ, ದೊಡ್ಡವರಲ್ಲಿ ಕೂಡ ಕಂಡುಬರುವ ಜಂತುಹುಳು

ದೊಡ್ಡವರಲ್ಲಿ ಕೂಡ ಕಂಡುಬರುವ ಜಂತುಹುಳು
ದೊಡ್ಡವರಲ್ಲಿ ಕೂಡ ಕಂಡುಬರುವ ಜಂತುಹುಳು

ಜಂತುಹುಳು ಮಾನವರ ಕರುಳಿನಲ್ಲಿರುವ ಒಂದು ಪರೋಪಜೀವಿ. ಇದು ನೆಮಟೋಡ ವಂಶದ ಆಸ್ಕಾರಿಸ್ ಜಾತಿಯ ದುಂಡು ಹುಳು. ಮನುಷ್ಯ ಮತ್ತು ಇತರ ಸ್ತನಿಗಳಿರುವಲ್ಲೆಲ್ಲ ಜಂತುಹುಳದ ವ್ಯಾಪ್ತಿ ಉಂಟು. ಆದರೆ ಒಂದೊಂದು ಪ್ರಾಣಿಯಲ್ಲಿ ಒಂದೊಂದು ಪ್ರಭೇದ ಇರುವುದು ಸಾಮಾನ್ಯ. ಉದಾಹರಣೆಗೆ, ಮಾನವನಲ್ಲಿ ಆ.ಸ್ಕಾರಿಸ್‍ಲುಂಬ್ರಿಕಾಯ್ಡಿಸ್ ಪ್ರಭೇದವು ಕುದುರೆಯಲ್ಲಿ ಆ.ಮೆಗಾಲೊಕಿಫಾಲ ಪ್ರಭೇದವೂ ಹಂದಿಯಲ್ಲಿ ಆ.ಸುಯಿಲ ಪ್ರಭೇದವೂ ಇವೆ. ಆ. ಲುಂಬ್ರಿಕಾಯ್ಡಿಸ್ ಪ್ರಭೇದದಲ್ಲಿ ಆ.ಲುಂ.ಯೂನಿವೇಲೆನ್ಸ್ ಮತ್ತು ಆ.ಲುಂ ಬೈಮೇಲೆನ್ಸ್ ಎಂಬ ಎರಡು ಬಗೆಗಳಿವೆ. ಈ ಬಗೆಗಳಲ್ಲಿ ಅನುಕ್ರಮವಾಗಿ 2 ಮತ್ತು 4 ಕ್ರೋಮಸೋಮುಗಳು ಮಾತ್ರ ಇರುವುದರಿಂದ ಕ್ರೋಮೋಸೋಮಗಳ ವಿನ್ಯಾಸ, ಅನುವಂಶಿಕತೆಯಲ್ಲಿ ಅವುಗಳ ಪಾತ್ರ ಇವೇ ಮುಂತಾದವನ್ನು ಅಧ್ಯಯಿಸಲು ಇವನ್ನು ಪ್ರಯೋಗಗಳಲ್ಲಿ ಬಳಸುತ್ತಾರೆ.

ತತ್ತಿಗಳ ಸೋಂಕಿರುವ ಆಹಾರ, ನೀರುಗಳ ಮೂಲಕ ಮಾನವನಿಂದ ಮಾನವನಿಗೆ ಸೋಂಕು ಹರಡುವುದು. ನೇರವಾಗಿ ವಿಸರ್ಜಿತವಾದ ತತ್ತಿಗಳಲ್ಲಿ ಭ್ರೂಣ ನೆರಳಿರುವ ಕಡೆ, ಹಸಿಯಾದ ಆದರೆ ಬೆಚ್ಚಗಿರುವ ಮಣ್ಣಿನಲ್ಲಿ 2-3 ವಾರ ಬೆಳೆಯುತ್ತದೆ. ಆದರೂ ತತ್ತಿ ಒಡೆಯುವುದಿಲ್ಲ. ಅಪರೂಪವಾಗಿ ತತ್ತಿಗಳು ಒಡೆದು ಮರಿಗಳು ಹೊರಬಿದ್ದು ಇವು ಆತಿಥೇಯ ಜೀವಿಯ ಚರ್ಮವನ್ನು ಕೊರೆದುಕೊಂಡು ರಕ್ತಗತವಾಗುವುದೂ ಕಂಡುಬಂದಿದೆ. ಹುಳುವಿರುವ ವ್ಯಕ್ತಿ ವಾಸಿಸುತ್ತಿರುವ ಕಡೆ ಸ್ವಾಭಾವಿಕವಾಗಿಯೇ ಮಲವಿಸರ್ಜನಾ ಸ್ಥಳದ ಮಣ್ಣಿನಲ್ಲಿ ಲಕ್ಷಾಂತರ ತತ್ತಿಗಳು ಇರುತ್ತವೆ. ಇಂಥ ಮಣ್ಣು ಬೆರೆತ ನೀರು ತರಕಾರಿಗಳ ಸೇವನೆಯಿಂದ ಇತರ ವ್ಯಕ್ತಿಯೊಳಗೆ ಹುಳುವಿನ ಪ್ರವೇಶವಾಗುತ್ತದೆ. ಆದರೆ ತತ್ತಿಯಿಂದ ಜಂತುಹುಳು ನೇರವಾಗಿ ಬೆಳೆದು ಬರದೆ ತತ್ತಿಯ ಕರುಳಿನಲ್ಲಿ ಒಡೆದು ಮರಿಯಾಗಿ, ಈ ಮರಿಗಳು ಕರುಳಿನ ರಕ್ತನಾಳ ದುಗ್ಧರಸನಾಳಗಳ ಮೂಲಕ ಪುಪ್ಪುಸಗಳನ್ನು ಸೇರಿ ಅಲ್ಲಿ ಕೆಲದಿವಸಗಳ ಕಾಲ ಬೆಳೆಯುತ್ತವೆ. ಅನಂತರ ಶ್ವಾಸನಾಳಗಳ ಮೂಲಕ ಗಂಟಲಿಗೆ ಬಂದು ಉಗುಳಿನೊಡನೆ ನುಂಗಲ್ಪಟ್ಟು ಪುನಃ ಜಠರ ಕರುಳುಗಳನ್ನು ಸೇರುತ್ತವೆ. ಶ್ವಾಸಕೋಶವನ್ನು ತಲುಪಿ ಅಲ್ಲಿ ಕೆಲದಿವಸಗಳ ಕಾಲ ಬೆಳೆಯಬೇಕಾದ್ದು ಅಗತ್ಯ. ತತ್ತಿಯ ಸೇವನೆಯಿಂದ ಪೂರ್ಣವಾಗಿ ಬೆಳೆದ ಹುಳುವಾಗುವುದಕ್ಕೆ ಮಾನವರಲ್ಲಿ ಸುಮಾರು ಹತ್ತು ದಿವಸಗಳು ಬೇಕು. ಕರುಳನ್ನು ಸೇರಿದ ಮೇಲೆ ಅಲ್ಲಿ ನೆಲೆನಿಲ್ಲುವುದು ಮಾನವರಲ್ಲಿರುವ ಜಂತುಹುಳುವಿನ ಪ್ರಭೇದ ಮಾತ್ರ. ಬೇರೆ ಪ್ರಾಣಿಗಳಲ್ಲಿರುವ ಪ್ರಭೇದಗಳು ಅಕಸ್ಮಾತ್ ಮಾನವ ದೇಹದೊಳಹೊಕ್ಕರೆ ಅವು ಹೀಗೆ ನೆಲೆವಿಲ್ಲಲಾರದೆ ಮಲದೊಂದಿಗೆ ವಿಸರ್ಜಿತವಾಗುತ್ತವೆ.

ಮಕ್ಕಳಲ್ಲಿ, ದೊಡ್ಡವರಲ್ಲಿ ಕೂಡ ಕಂಡುಬರುವ ಜಂತುಹುಳು
ದೊಡ್ಡವರಲ್ಲಿ ಕೂಡ ಕಂಡುಬರುವ ಜಂತುಹುಳು

ಜಂತುಹುಳುವಿನ ಸಾಮಾನ್ಯ ವಾಸ ಕರುಳಿನಲ್ಲೇ. 3ರಿಂದ 5 ವರ್ಷದ ಮಕ್ಕಳಲ್ಲಿ ಇದರ ಹಾವಳಿ ಬಹಳ, ಹುಳು ಕರುಳುಭಿತ್ತಿಯನ್ನು ಕಚ್ಚಿಕೊಂಡಿರುವುದಿಲ್ಲ, ಅಲ್ಲದೆ ಅದಕ್ಕೆ ಚಲನಶೀಲತೆ ಉಂಟು. ಹೀಗಾಗಿ ಅದು ಜೀರ್ಣನಾಳದಲ್ಲಿ ಅಲ್ಲಿಂದಿಲ್ಲಿಗೆ ಚಲಿಸುತ್ತ ಗುದದ್ವಾರದಿಂದಲೋ ಕೆಲವು ಸಮಯ ಬಾಯಿಯಿಂದಲೋ ಹೊರಬಂದು ಬಿಡಬಹುದು. ಮಲವಿಸರ್ಜನೆ ಮಾಡುವಾಗ ಮತ್ತು ವಾಂತಿಯಾದಾಗ ಹೀಗೆ ಹೊರಬರುವುದು ಸಾಮಾನ್ಯ. ಅನೇಕ ವೇಳೆ ವ್ಯಕ್ತಿಯಲ್ಲಿ ಹುಳುಗಳಿರುವ ವಿಷಯ ಗೊತ್ತಾಗುವುದು ಒಂದು ಹುಳು ಹೀಗೆ ಹೊರಬಂದ ಮೇಲೆಯೇ. ಮಲ ಪರೀಕ್ಷೆಯಿಂದ ತತ್ತಿಗಳನ್ನು ಗುರುತಿಸಿ ವ್ಯಕ್ತಿಯಲ್ಲಿ ಹುಳು ಇರುವ ವಿಷಯ ಪತ್ತೆ ಹಚ್ಚಬಹುದು. ಒಬ್ಬ ವ್ಯಕ್ತಿಯಲ್ಲಿ ಕೇವಲ ನಾಲ್ಕಾರು ಹುಳುಗಳು ಇರಬಹುದು. ಇನ್ನೂ ಹೆಚ್ಚಾಗಿದ್ದರು ಇವು ಯಾವ ಗಣನೀಯವಾದ ತೊಂದರೆಯನ್ನೂ ಮಾಡದೆ ಪತ್ತೆಯಾಗದೇ ಹೋಗಬಹುದು. ಅಪರೂಪವಾಗಿ ಇವು ನೂರಾರು ಇದ್ದು ಗಂಟು ಕಟ್ಟಿಕೊಂಡು ಕರುಳಿನಲ್ಲಿ ಆಹಾರ ಸಾಗಾಣಿಕೆಗೆ ಅಡಚಣೆಯನ್ನು ಉಂಟುಮಾಡಿ ಹೊಟ್ಟೆನೋವು, ಉಬ್ಬರ, ವಮನಗಳನ್ನು ಉಂಟು ಮಾಡಬಹುದು. ಕೆಲವು ಸಲ ಸ್ವಲ್ಪವೇ ಹುಳುಗಳಿದ್ದರೂ ನಾನಾ ತೊಂದರೆಗಳ ಅನುಭವವಾಗಬಹುದು. ಹುಳುಗಳು ಒಸರಿಸುವ ಆಸ್ಕರಾನ್ ಅಥವಾ ಆಸ್ಕರೇಸ್ ಎಂಬ ವಿಶಿಷ್ಟವಾದ ವಿಷಪದಾರ್ಥದಿಂದ ನರೋದ್ರೇಕಜ, ಅಲರ್ಜಿ ಮುಂತಾದ ತೊಂದರೆಗಳು ಸಂಭವಿಸಬಹುದು ಎಂಬ ಅಭಿಪ್ರ್ರಾಯ ಉಂಟು. ಅಲ್ಲದೆ ಅಲಸ್ಯ, ನಿಶ್ಯಕ್ತಿ, ತಲೆಸುತ್ತು, ಮಾನಸಿಕ ಉದ್ರೇಕ, ನಿದ್ರಾನಾಶ ಮುಂತಾದವು ಕಂಡುಬರುತ್ತವೆ. ಜ್ವರ, ಕೆಮ್ಮು, ಉಬ್ಬಸ, ಮೈಕಡಿತ ಇವೂ ಉಂಟಾಗಬಹುದು. ಮಕ್ಕಳು ನಿದ್ರೆಯ ವೇಳೆಯಲ್ಲಿ ಕಟಕಟನೆ ಹಲ್ಲು ಕಡಿಯುತ್ತಿದ್ದರೆ ಉದರಲ್ಲಿ ಜಂತುಹುಳು ಇರುವುದೆಂಬ ನಂಬಿಕೆ. ಆದರೆ ಇದಕ್ಕೆ ವೈಜ್ಞಾನಿಕ ಆಧಾರವಿಲ್ಲ. ಹುಳುವಿಗೆ ಚಲನಸಾಮಾಥ್ರ್ಯ ಇರುವುದರಿಂದ ಅದು ಪಿತ್ತಕೋಶ, ಪಿತ್ತನಾಳಗಳನ್ನೂ ಆಕ್ರಮಿಸಿ ಪಿತ್ತರಸದ ಹರಿಯುವಿಕೆಗೆ ಅಡಚಣೆ ಮಾಡಿ ಕಾಮಾಲೆಯನ್ನು ಉಂಟು ಮಾಡಬಹುದು, ಸೋಂಕು ಅಂಟಿದಾಗ ಅಸಂಖ್ಯಾತ ಮರಿಗಳು ಏಕಕಾಲಿಕವಾಗಿ ಪುಪ್ಪಸವನ್ನು ತಲುಪಿದರೆ ನ್ಯೂಮೋನಿಯಾವನ್ನು ಹೋಲುವ ರೋಗಸ್ಥಿತಿ ಉಂಟಾಗಬಹುದು. ಮರಿಗಳು ರಕ್ತನಾಳಗಳ ಮೂಲಕ ಪುಪ್ಪಸವನ್ನು ಸೇರುವುದಲ್ಲದೆ ಅಕಸ್ಮಾತ್ ಮಿದುಳನ್ನು ತಲುಪಿದರೆ ಅಲ್ಲಿ ನೇರಕೇಂದ್ರಗಳು ಉದ್ರೇಕಗೊಂಡು ಅನೇಕ ಮಕ್ಕಳಲ್ಲಿ ನರಸಂಬಂಧ ಅವ್ಯವಸ್ಥೆಗಳು ಕೂಡ ಕಂಡುಬರುವುದು.

ಹುಳು ಇರುವ ವ್ಯಕ್ತಿಗೆ ಕೆಲವು ವರ್ಷಗಳ ಹಿಂದೆ ಸ್ಯಾನ್ ಟೋನಿನ್ ಎಂಬ ಮದ್ದನ್ನು ಕೊಡಲಾಗುತ್ತಿತ್ತು. ಈಚೆಗೆ ಪೈಪರಿಸಿನ್ ಸಂಯುಕ್ತಗಳನ್ನು ಕೊಡಲಾಗುತ್ತದೆ. ಬೆಫೀನಿಯಮ್ ಹೈಡ್ರಾಕ್ಸಿನ್ಯಾಫ್ತೊಯೇಟ್, ಡೈಈಥೈಲ್ ಕಾರ್ಬಮಸೀನ್, ಥೈಯಬೆಂಡಸೋಲ್‍ಗಳನ್ನೂ ಜಂತುಹುಳು ನಿರ್ಮೂಲನಕ್ಕಾಗಿ ಬಳಸಬಹುದು. ಮೇಲಿಂದ ಮೇಲೆ ಸೋಂಕು ಉಂಟಾಗಿ ಜನತೆಯಲ್ಲಿ ಜಂತುಹುಳುವಿನ ಇರುವಿಕೆ ಸ್ಥಳೀಯ ಪಿಡುಗಾಗಬಹುದಾದ್ದರಿಂದ ಇದನ್ನು ನಿವಾರಿಸಲು ವ್ಯಕ್ತಿ ಚಿಕಿತ್ಸೆ ಮಾತ್ರವಲ್ಲದೆ ಸಾರ್ವಜನಿಕ ಕ್ರಮಗಳನ್ನೂ ಕೈಗೊಳ್ಳಬೇಕು. ವಿಸರ್ಜಿತ ಮಲವನ್ನು ಸರಿಯಾದ ರೀತಿಯಲ್ಲಿ ನಿರುಪಾಧಿಕವಾಗಿ ವಿತರಣೆ ಮಾಡಬೇಕು.

ಮಕ್ಕಳಲ್ಲಿ ಅಥವಾ ನಿಮ್ಮಲ್ಲಿ ಹೆಚ್ಚಾಗಿ ಜಂತು ಹುಳುಗಳು ಕಂಡು ಬಂದರೆ ನಿಮ್ಮ ರೋಗ – ನಿರೋಧಕ ಶಕ್ತಿ ದಿನ ಕಳೆದಂತೆ ಕುಂಠಿತಗೊಳ್ಳುತ್ತದೆ. ದೇಹದ ರಕ್ತದಲ್ಲಿ ಕಬ್ಬಿಣದ ಅಂಶದ ಕೊರತೆ ಉಂಟಾಗುವುದರ ಜೊತೆಗೆ ಕರುಳಿನ ಭಾಗದಲ್ಲಿ ವಿಪರೀತ ಹಾನಿಯಾಗುತ್ತದೆ.

ಮಕ್ಕಳಲ್ಲಿ, ದೊಡ್ಡವರಲ್ಲಿ ಕೂಡ ಕಂಡುಬರುವ ಜಂತುಹುಳು
ಕೈಗಳನ್ನು ಚೆನ್ನಾಗಿ ತೊಳಿಯಬೇಕು

ಹಾಗಾಗಿ ನೀವು ಆಹಾರ ಸೇವಿಸುವ ಮುಂಚೆ ನಿಮ್ಮ ಕೈಗಳನ್ನು ಚೆನ್ನಾಗಿ ಬಿಸಿ ನೀರು ಮತ್ತು ಸೋಪಿನ ಸಹಾಯದಿಂದ ತೊಳೆದುಕೊಂಡು ನಂತರ ಆಹಾರ ಸೇವನೆ ಮಾಡಲು ಮುಂದಾಗಬೇಕು.ಇದರ ಜೊತೆಗೆ ಈ ಕೆಳಗಿನ ನಿಮ್ಮ ದೇಹಕ್ಕೆ ಸರಿ ಹೊಂದುವಂತಹ ಮನೆ ಮದ್ದುಗಳನ್ನು ಪ್ರಯತ್ನ ಮಾಡಿ ಜಂತು ಹುಳುಗಳಿಂದ ಪರಿಹಾರ ಕಂಡುಕೊಳ್ಳಬಹುದು.

ಅಶುದ್ಧವಾದ ಆಹಾರವನ್ನು ಸೇವಿಸುವುದರಿಂದಲು ಕೂಡ ಈ ಹುಳುಗಳು ಆಗುತ್ತವೆ ಆದ್ದರಿಂದ ಶುದ್ಧವಾದ ಆಹಾರವನ್ನೇ ಸೇವಿಸಿ ಹಾಗೇನೇ ಹೊರಗಡೆ ಹೋಗಿ ಬಂದ ತಕ್ಷಣ ಕೈ ಕಾಲು ಮುಖವನ್ನು ಚೆನ್ನಾಗಿ ತೊಳೆಯಿರಿ ಉಗುರುಗಳನ್ನು ಕತ್ತರಿಸಿರಿ ಬಿಸಿ ಮಾಡಿ ಆರಿಸಿದ ನೀರನ್ನು ಮಕ್ಕಳಿಗೂ ಸಹ ಕುಡಿಸಿರಿ ಜೊತೆಗೆ ಸಿಹಿ ಪಧಾರ್ಥವನ್ನು ತಿನ್ನುವುದನ್ನು ಕಡಿಮೆ ಮಾಡಿ ಮಕ್ಕಳಿಗೂ ಕಡಿಮೆ ಮಾಡಿಸಿ.

ಜಂತುಹುಳುಗಳ ನಿವಾರಣೆಗೆ ಮನೆಮದ್ದು ಹೇಗೆ ತಯಾರಿಸಬೇಕು :

ಮನೆಮದ್ದನ್ನು ದೊಡ್ಡವರು ಹಾಗೂ ಮಕ್ಕಳು ಸಹ ಬಳಸಬಹುದು.

ಮಕ್ಕಳಲ್ಲಿ, ದೊಡ್ಡವರಲ್ಲಿ ಕೂಡ ಕಂಡುಬರುವ ಜಂತುಹುಳು
ಅಜೀವಾನ, ಬೆಲ್ಲ

ಸ್ವಲ್ಪ ಓಂಕಾಳನ್ನು ಅಥವಾ ಅಜೀವಾನ ತೆಗೆದುಕೊಂಡು ಈ ಅಜೀವಾನವನ್ನು ಕುಟ್ಟಿ ಪುಡಿ ಮಾಡಿಕೊಂಡು ಈ ಪುಡಿಗೆ ಸ್ವಲ್ಪ ಬೆಲ್ಲವನ್ನು ಸೇರಿಸಬೇಕು. ಈ ಬೆಲ್ಲವನ್ನು ಏಕೆ ಸೇರಿಸಬೇಕು ಎಂದರೆ ಸಿಹಿ ಪಧಾರ್ಥ ಹೊಟ್ಟೆಗೆ ಹೋದ ತಕ್ಷಣ ಎಲ್ಲ ಜಂತುಹುಳುಗಳು ಇದನ್ನು ತಿನ್ನಲು ಬರುತ್ತವೆ ಆಗ ಈ ಅಜೀವಾನ ಆ ಜಂತುಹುಳುಗಳನ್ನು ನಾಶಪಡಿಸುತ್ತದೆ ಐದಾರು ವರ್ಷದ ಮಕ್ಕಳಾದರೆ ಅವರು ಸುಲಭವಾಗಿ ಓಂಕಾಳನ್ನು ತಿನ್ನುವುದಿಲ್ಲ, ಈ ಬೆಲ್ಲವನ್ನು ಸೇರಿಸಿ ಉಂಡೆರೀತಿ ಮಾಡಿಕೊಟ್ಟಾಗ ಅವರು ತಿನ್ನುತ್ತಾರೆ. ಇದು ತುಂಬಾ ಪರಿಣಾಮಕಾರಿಯಾಗಿದೆ. ಇದನ್ನು ನೀವು ಸಹ ಬಳಸಬಹುದು ಇದೊಂದು ಒಳ್ಳೆಯ ಮನೆಮದ್ದು ಇದನ್ನು ಬೆಳಿಗ್ಗೆ ಖಾಲಿಹೋಟ್ಟೆಯಲ್ಲಿ ತಿನ್ನಲು ಕೊಡಬೇಕು ಈ ಮನೆಮದ್ದನ್ನು ತಿಂದ ನಂತರ ಅರ್ಧ ಗಂಟೆ ಏನನ್ನು ತಿನ್ನಬಾರದು ಮತ್ತು ಕುಡಿಯಬಾರದು ಈ ಮನೆಮದ್ದನ್ನು ನೀವು ನಿರಂತರವಾಗಿ 7 ದಿನ ಬೆಳಿಗ್ಗೆ ಖಾಲಿಹೊಟ್ಟೆಗೆ ತಿಂದರೆ ಇದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ. ಅದೇ ರೀತಿ ದೊಡ್ಡವರಾದರೆ ಮೊದಲು ಸ್ವಲ್ಪ ಬೆಲ್ಲವನ್ನು ತಿಂದು ನಂತರ ಸ್ವಲ್ಪ ಸಮಯ ಬಿಟ್ಟು ನೀವು ಓಂಕಾಳನ್ನು ತಿನ್ನಬಹುದು ಅಥವಾ ನಿಮಗೆ ಹಾಗೇ ತಿನ್ನಲು ಆಗದಿದ್ದರೆ ನೀವು ಕೂಡ ಬೆಲ್ಲದಲ್ಲಿ ಸೇರಿಸಿ ತಿನ್ನಬಹುದು.

ಇನ್ನು ಎರಡನೇ ಮನೆಮದ್ದು ಒಂದು ಲೋಟದಲ್ಲಿ ಕುದಿಸಿದ ನೀರನ್ನು ತೆಗೆದುಕೊಂಡು ಇದರಲ್ಲಿ 10 ರಿಂದ 15 ಲವಂಗ ಹಾಕಿ ಈ ನೀರನ್ನು 10 ನಿಮಿಷ ಹಾಗೆ ಮುಚ್ಚಿಡಿ ನಂತರ ನೀವು ಇದನ್ನು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೆವಿಸಬೇಕು. ಇದನ್ನು ಸಹ 7 ದಿನಗಳ ವರೆಗೆ ಮಾಡುವುದರಿಂದ ಜಂತುಹುಳುಗಳು ಸಾಯುತ್ತವೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ತುಳಸಿದಾಸ್

ತುಳಸಿದಾಸ್

ಉಣ್ಣೆ

ಉಣ್ಣೆ : ಜವಳಿ ವರ್ಗದ ಫೈಬರ್ ಎಳೆಗಳು