in ,

ಮೆದುಳಿನ ರಚನೆ

ಮೆದುಳಿನ ರಚನೆ
ಮೆದುಳಿನ ರಚನೆ

ಮಿದುಳು ಎಲ್ಲ ಕಶೇರುಕ ಮತ್ತು ಬಹುತೇಕ ಅಕಶೇರುಕ ಪ್ರಾಣಿಗಳಲ್ಲಿ, ಸ್ಪಂಜ್‍ಗಳು, ಲೋಳೆ ಮೀನು, ವಯಸ್ಕ ಕಡಲ ಚಿಮ್ಮುಗಗಳು ಹಾಗೂ ನಕ್ಷತ್ರ ಮೀನಿನಂತಹ ಕೆಲವೇ ಕೆಲವು ಅಕಶೇರುಕಗಳು ಮಿದುಳನ್ನು ಹೊಂದಿರುವುದಿಲ್ಲ, ಆದರೆ ವಿಕೀರ್ಣ ನರ ಅಂಗಾಂಗ ಇರುತ್ತದೆ. ನರಮಂಡಲದ ಕೇಂದ್ರವಾಗಿ ಕಾರ್ಯನಿರ್ವಹಿಸುವ ಒಂದು ಅಂಗ. ಅದು ತಲೆಯಲ್ಲಿ ಇರುತ್ತದೆ, ಸಾಮಾನ್ಯವಾಗಿ ಪ್ರಾಥಮಿಕ ಜ್ಞಾನೇಂದ್ರಿಯಗಳ ನಿಕಟ ದೃಷ್ಟಿ, ಶ್ರವಣ, ಸಮತೋಲನ, ರುಚಿ, ವಾಸನೆಯಂತಹ ಇಂದ್ರಿಯಕ್ಕಾಗಿ. ಒಂದು ಕಶೇರುಕದ ಶರೀರದಲ್ಲಿ ಮಿದುಳು ಅತ್ಯಂತ ಸಂಕೀರ್ಣವಾದ ಅಂಗವಾಗಿರುತ್ತದೆ.

ಕಿರಿಮೆದುಳು :
ಲ್ಯಾಟಿನ್‌ ಭಾಷೆಯಲ್ಲಿ ಸೆರೆಬೆಲ್ಲಮ್‌‌ ಎಂದು ಕರೆಯಲ್ಪಡುವ ’ಕಿರಿಮೆದುಳು ’ ಮೆದುಳಿನ ಒಂದು ಅಂಗವಾಗಿದ್ದು ಚಲನೆಯ ನಿಯಂತ್ರಣದಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸುತ್ತದೆ. ಗಮನ ಕೇಂದ್ರೀಕರಿಸುವಿಕೆ ಹಾಗೂ ಭಾಷೆಯಂಥ ಕೆಲವು ಕಾಗ್ನಿಟಿವ್‌ ಕಾರ್ಯಗಳಲ್ಲೂ ಹಾಗೂ ಭಯವನ್ನು ಹದ್ದುಬಸ್ತಿನಲ್ಲಿಡುವ, ಸಂತೋಷದ ಪ್ರತಿಕ್ರಿಯೆಯಂಥ ಭಾವನಾತ್ಮಕ ಕಾರ್ಯದಲ್ಲೂ ಕಿರಿಮೆದಳು ತನ್ನನ್ನು ತಾನು ತೊಡಗಿಸಿಕೊಳ್ಳುತ್ತದೆ. ಆದರೆ ಅದರ ಪ್ರಾಮುಖ್ಯತೆ ನಮ್ಮ ಗಮನಕ್ಕೆ ಬರುವುದು ಮಾತ್ರ ಚಲನೆಯ ಸಂದರ್ಭದಲ್ಲಿ ಅದು ನಿರ್ವಹಿಸುವ ಪಾತ್ರದಿಂದಾಗಿ. ಹಾಗೆಂದು ಕಿರಿಮೆದುಳು ಯಾವುದೇ ಚಲನೆಯನ್ನು ಪ್ರಾರಂಭಿಸುವುದಿಲ್ಲ, ಆದರೆ ಸಹಯೋಗ, ಕರಾರುವಕ್ಕುತನ, ಖಚಿತ ಸಮಯಪ್ರಜ್ಞೆಗೆ ಅದು ದೊಡ್ಡ ಪ್ರಮಾಣದ ಕೊಡುಗೆ ಸಲ್ಲಿಸುತ್ತದೆ. ಸಂವೇದನಾವಾಹಕ ವ್ಯವಸ್ಥೆಗಳಿಂದ ಹಾಗೂ ಮೆದುಳು ಮತ್ತು ಬೆನ್ನುಹುರಿಯಿಂದ ಸೂಚನೆಗಳನ್ನು ಸ್ವೀಕರಿಸುವುದಲ್ಲದೇ, ಆ ಸೂಚನೆಗಳನ್ನು ಸಾಂದ್ರಗೊಳಿಸಿ ಶಿಸ್ತುಬದ್ಧ ಪರಿಚಲನಾ ಚಟುವಟಿಕೆಯನ್ನು ಅದು ಸಾಧ್ಯವಾಗಿಸುತ್ತದೆ. ಈ ಶಿಸ್ತುಬದ್ಧಗೊಳಿಸುವ ಕ್ರಿಯೆಯಿಂದಾಗಿ ಕಿರುಮೆದುಳಿಗಾಗುವ ಯಾವುದೇ ಘಾಸಿ ಲಕ್ವದಂಥ ನಿಷ್ಕ್ರಿಯತೆಗೆ ಕಾರಣವಾಗುವುದಿಲ್ಲವಾದರೂ, ಸುಸಂಬದ್ಧ ಚಲನೆ, ಸಮತೋಲನ ಸ್ಥಿತಿ, ದೈಹಿಕ ಭಂಗಿ ಹಾಗೂ ಚಲನಾ ಕಲಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಮೆದುಳಿನ ರಚನೆ
ಕಿರಿಮೆದುಳು

ಅಂಗರಚನಾಶಾಸ್ತ್ರದ ಪರಿಭಾಷೆಗಳನ್ನೇ ಬಳಸುವುದಾದರೆ, ಸೆರೆಬಲಮ್ ಹೆಮಿಸ್ಪಿಯರ್ ಗಳ ಕೆಳಭಾಗಕ್ಕೆ ಅಂಟಿಕೊಂಡಂತಿರುವ ಕಿರಿಮೆದುಳು ಮೇಲ್ನೋಟಕ್ಕೆ ಮೆದುಳಿನ ಕೆಳಭಾಗದಲ್ಲಿ ಅಂಟಿಕೊಂಡಿರುವ ಪ್ರತ್ಯೇಕ ಅಂಗದಂತೆಯೇ ಗೋಚರಿಸುತ್ತದೆ. ದೊಡ್ಡ ಸುರುಳಿ ಆಕಾರದ ಸೆರೆಬ್ರಲ್ ಕಾರ್ಟೆಕ್ಸ್‌ಗೆ ತದ್ವಿರುದ್ಧವಾಗಿ ಕಿರುಮೆದುಳಿನ ಮೇಲ್ಬಾಗ ಸ್ಥಳಾವಕಾಶ ಹೊಂದಿರುವ ಸಮನಾಂತರ ಜಾಡುಗಳಿಂದ ಆವೃತ್ತವಾಗಿದೆ. ಕಿರುಮೆದುಳು ಎಂಬುದು ಸುರುಳಿ ಅಕಾರ್ಡಿಯನ್‌ ವಾದ್ಯದ ತಂತಿಗಳ ರೂಪದಲ್ಲಿ ಸುತ್ತಿಕೊಂಡ ನರಗಳ ಜೀವಕೋಶಗಳ(ಸೆರೆಬೆಲ್ಲಾರ್ ಕಾರ್ಟೆಕ್ಸ್‌) ಒಂದು ತೆಳುವಾದ ಪದರ ಎಂಬ ಅಂಶವನ್ನು ಹೊರಭಾಗದಲ್ಲಿ ಆವರಿಸಿದ ಈ ಸಮನಾಂತರ ಜಾಡುಗಳು ಮರೆಮಾಚುತ್ತವೆ. ಈ ತೆಳುವಾದ ಪದರದೊಳಗೆ ಹಲವು ಬಗೆಯ ನ್ಯೂರಾನ್‌ಗಳು ಅತ್ಯಂತ ಶಿಸ್ತುಬದ್ಧ ರೀತಿಯಲ್ಲಿ ಒಂದಕ್ಕೊಂದು ಹೊಂದಿಕೊಂಡಿರುತ್ತವೆ. ಇವುಗಳಲ್ಲಿ ಅತ್ಯಂತ ಮುಖ್ಯವಾದುವಗಳೆಂದರೆ ಪರ್ಕಿಂಜೆ ಜೀವಕೋಶಗಳು ಹಾಗೂ ಗ್ರ್ಯಾನ್ಯೂಲ್‌ ಜೀವಕೋಶಗಳು. ಸಂಕೀರ್ಣವಾದ ಈ ನ್ಯೂರಲ್ ಸಂಪರ್ಕಜಾಲ ಸಂಜ್ಞಾ(ಸೂಚನಾ) ಸಾಮರ್ಥ್ಯವನ್ನು ಹೆಚ್ಚಿಸುತ್ತವೆಯಾದರೂ, ಇದು ಹೊರ ಹಾಕುವ ಸೂಚನೆಗಳೆಲ್ಲವೂ ಸಮಗ್ರವಾಗಿ ಕಿರುಮೆದುಳಿನ ಒಳಭಾಗದಲ್ಲಿರುವ ಸೆರೆಬೆಲ್ಲಾರ್ ನ್ಯೂಕ್ಲೀ ಎಡೆಗೆ ನಿರ್ದೇಶಿಸಲ್ಪಡುತ್ತವೆ.

ಚಲನೆಯ ನಿಯಂತ್ರಣದಲ್ಲಿ ಇದು ನಿರ್ವಹಿಸುವ ಪ್ರಮುಖ ಪಾತ್ರದ ಜೊತೆಗೆ ಕಿರುಮೆದುಳು ಹಲವು ಬಗೆಯ ಚಲನೆಯ ತಿಳುವಳಿಕೆಗೆ ಅತ್ಯವಶ್ಯಕವಾಗಿದೆ. ಅವುಗಳಲ್ಲಿ ಸಂವೇದಿಪ್ರೇರಕಗಳ (ಸೆನ್ಸರಿಮೋಟಾರ್) ಸಂಬಂಧದಲ್ಲಾಗುವ ಬದಲಾವಣೆಗಳನ್ನು ಹೊಂದಿಸುವ ಕಾರ್ಯ ಅತ್ಯಂತ ಪ್ರಮುಖವಾದದ್ದು. ಸಿನ್ಯಾಪ್ಟಿಕ್‌ ಪ್ಲಾಸ್ಟಿಸಿಟಿಯ ಪರಿಭಾಷೆಯಲ್ಲಿಯೇ ಕಿರುಮೆದುಳಿನೊಳಗಿನ ಈ ಸಂವೇದಿಪ್ರೇರಕ ಕ್ಯಾಲಿಬ್ರೇಷನ್‌ ಅನ್ನು ವಿವರಿಸಲು ಹಲವಾರು ಸೈದ್ಧಾಂತಿಕ ಮಾದರಿಗಳನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. ಅವುಗಳಲ್ಲಿನ ಹೆಚ್ಚಿನ ಮಾದರಿಗಳನ್ನು ಡೇವಿಡ್ ಮರ್ರ್ ಹಾಗೂ ಜೇಮ್ಸ್‌ ಆಲ್ಬಸ್ ಅವರು ಸಿದ್ಧಪಡಿಸಿದ ಮಾದರಿಗಳಿಂದ ಆಯ್ದುಕೊಳ್ಳಲಾಗಿದೆ. ಆ ಇಬ್ಬರು ಮೇಧಾವಿಗಳ ಮಾದರಿಗಳಿಗೆ ಪ್ರೇರಣೆಯಾಗಿದ್ದು ಸೆರೆಬೆಲ್ಲಾರ್ ಪರ್ಕಿಂಜೆ ಜೀವಕೋಶಗಳು ಎರಡು ಬಗೆಯ ವಿಭಿನ್ನ ಪ್ರಕಾರಗಳ ಸೂಚನೆಗಳನ್ನು ಸ್ವೀಕರಿಸುತ್ತವೆ ಎಂಬ ಅಂಶ. ಒಂದು ಕಡೆ, ಸಮಾನಾಂತರ ಫೈಬರ್ ಗಳಿಂದ ಹೊರ ಹೊಮ್ಮಿದ ಸಾವಿರಾರು ಸೂಚನೆಗಳು, ತೀರಾ ನಿಶ್ಯಕ್ತವಾಗಿರುತ್ತವೆ; ಇನ್ನೊಂದೆಡೆ, ಯಾವುದೋ ಒಂದು ಏಕ ಫೈಬರ್‌ನಿಂದ ಹೊರ ಹೊಮ್ಮಿದ ಸೂಚನೆಗಳು ಎಷ್ಟು ಶಕ್ತಿಯುತವಾಗಿರುತ್ತವೆ ಎಂದರೆ, ಏಕೈಕ ಕ್ಲೈಂಬಿಂಗ್ ಫೈಬರ್‌ನ ಕ್ರಿಯೆಯ ಸಾಮರ್ಥ್ಯ ಟಾರ್ಗೆಟ್ ಪರ್ಕಿಂಜೆ ಜೀವಕೋಶಗಳು ತಮ್ಮೆಲ್ಲಾ ಸಾಮರ್ಥ್ಯದೊಂದಿಗೆ ಕಾರ್ಯಪ್ರವೃತ್ತವಾಗುವಂತೆ ಮಾಡಬಲ್ಲವು. ಮರ್ರ್-ಆಲ್ಬಸ್‌ ಸಿದ್ಧಾಂತದ ಮೂಲ ಪರಿಕಲ್ಪನೆ ಏನೆಂದರೆ, ಕ್ಲೈಂಬಿಂಗ್ ಫೈಬರ್‌ಗಳು ’ಶಿಕ್ಷಿತ ಸಂಜ್ಞೆ’ಗಳಾಗಿ ಕಾರ್ಯನಿರ್ವಹಿಸುತ್ತದೆ. ಇದು ಏಕಕಾಲದಲ್ಲಿ ಕ್ರಿಯಾಶೀಲಗೊಳ್ಳಬಲ್ಲ ಸಮನಾಂತರ ಫೈಬರ್ ಸೂಚನೆಗಳ ಸಾಮರ್ಥ್ಯದಲ್ಲಿ ದೊಡ್ಡ ಪ್ರಮಾಣದ ಹಾಗೂ ದೀರ್ಘಕಾಲೀನ ಬದಲಾವಣೆಯನ್ನು ಹುಟ್ಟು ಹಾಕುತ್ತದೆ. ಸಮನಾಂತರ ಫೈಬರ್ ಸೂಚನೆಗಳಲ್ಲಾಗುವ ದೀರ್ಘಕಾಲೀನ ಒತ್ತಡಗಳನ್ನು ಸೂಕ್ಷ್ಮ ಅಧ್ಯಯನಕ್ಕೆ ಒಳಪಡಿಸಿದಾಗ ಅವುಗಳಿಂದ ದೊರೆತ ಸಾಕ್ಷ್ಯಾಧಾರಗಳು ಈ ಬಗೆಯ ಸಿದ್ಧಾಂತಗಳಿಗೆ ಪೂರಕವಾಗಿದ್ದವಾದರೂ ಅವುಗಳ ಸತ್ಯಾಸತ್ಯತೆ ಇಂದಿಗೂ ಚರ್ಚಾಸ್ಪದವಾಗಿವೆ.

ಮೆದುಳಿನ ರಚನೆ
ಮೆದುಳಿನ ರಚನೆ

ದೊಡ್ಡ ಪ್ರಮಾಣದ ಅಂಗರಚನಾಶಾಸ್ತ್ರದ ಮಟ್ಟಿಗೆ ಹೇಳುವುದಾದರೆ ಕಿರುಮೆದುಳು, ಬಿಗಿಯಾಗಿ ಮಡಿಸಲ್ಪಟ್ಟ ಹಾಗೂ ಮುದುರಾದ, ಕಾರ್ಟೆಕ್ಸ್‌ನ ಪದರಗಳನ್ನು, ಒಳಭಾಗದಲ್ಲಿ ಬಿಳಿಯ ಅಂಶವನ್ನು ಹೊಂದಿದ, ಹಲವಾರು ಕೋಶಕೆಂದ್ರಗಳನ್ನು ಒಳಗೊಂಡ ಬಿಳಿಯ ಅಂಶ ಹಾಗೂ ಅಡಿ ಭಾಗದಲ್ಲಿ ಒಂದು ದ್ರವಭರಿತ ವೆಂಟ್ರಿಕಲ್ ಅನ್ನು ಒಳಗೊಂಡಿರುತ್ತದೆ. ಸೂಕ್ಷ್ಮದರ್ಶಕದ ಮಟ್ಟದಲ್ಲಿ ಸೆರೆಬೆಲ್ಲಾರ್ ಕಾರ್ಟೆಕ್ಸ್‌ನ ಪ್ರತಿಯೊಂದು ಅಂಗವೂ ಏಕಪ್ರಕಾರದ ಜ್ಯಾಮಿತೆಯೊಳಗೆ ಹೊಂದಿಕೊಂಡಿರುವಂಥ ಸಮಾನವಾದ ನ್ಯೂರೊನಲ್‌ ಎಲಿಮೆಂಟ್‌ಗಳ ಚಿಕ್ಕ ಗುಂಪನ್ನು ಹೊಂದಿರುವುದು ಗಮನಕ್ಕೆ ಬರುತ್ತದೆ. ಮಧ್ಯಮ ಮಟ್ಟದಲ್ಲಿ, ಕಿರುಮೆದುಳು ಹಾಗೂ ಇದರ ಸಹಾಯಕ ರಚನೆಗಳು ನೂರಾರು ಅಥವಾ ಸಾವಿರಾರು ಸ್ವಯಂತಂತ್ರ ಘಟಕಗಳಾಗಿ ವಿಭಜನಗೊಳ್ಳಬಹುದು. ಅವುಗಳನ್ನು “ಸೂಕ್ಷ್ಮಪ್ರದೇಶಗಳು” ಅಥವಾ “ಸೂಕ್ಷ್ಮಭಾಗಗಳು‌” ಎಂದು ಕರೆಯಲಾಗುತ್ತದೆ.

ಸೆರೆಬೆಲ್ಲಮ್‌‌ ಎಂದು ಕರೆಯಲಾಗುವ ಈ ಕಿರುಮೆದುಳು ಮೆದುಳಿನ ಕೆಳಭಾಗದಲ್ಲಿರುತ್ತದೆ. ಅದು ತಮ್ಮ ಮೇಲ್ಬಾಗದಲ್ಲಿ ದೊಡ್ಡ ಪ್ರಮಾಣದ ಸೆರೆಬ್ರಲ್‌ ಕಾರ್ಟೆಕ್ಸ್‌ ಅನ್ನೂ, ತನ್ನ ಎದುರು ಭಾಗದಲ್ಲಿ ’ಬ್ರೈನ್‌ಸ್ಟೆಮ್‌’ ಎಂದು ಕರೆಯಲಾಗುವ ಪಾನ್ಸ್‌ ಅನ್ನೂ ಹೊಂದಿರುತ್ತದೆ. ಮೇಲ್ಬಾಗದಲ್ಲಿರುವ ಸೆರೆಬ್ರಮ್‌‌ನಿಂದ ಇದನ್ನು ’ಡ್ಯೂರಾ ಮೆಟರ್’ನ ಪದರ ಬೇರ್ಪಡಿಸುತ್ತದೆ; ಮಾತ್ರವಲ್ಲ ಮೆದುಳಿನ ಪ್ರತಿಯೊಂದು ಭಾಗಕ್ಕೂ ಪಾನ್ಸ್‌ ಮೂಲಕವೇ ಸಂಪರ್ಕ ಸಾಧಿಸಿರುತ್ತದೆ. ಅಂಗರಚನಾಶಾಸ್ತ್ರಜ್ಞರು ಕಿರುಮೆದುಳನ್ನು ಮೆಟೆನ್ಸಿಫಲೋನ್‌ನ ಭಾಗವೆಂದೇ ಪರಿಗಣಿಸುತ್ತಾರೆ. ಅದು ಪಾನ್ಸ್‌ ಅನ್ನೂ ಒಳಗೊಂಡಿರುತ್ತದೆ. ರೋಂಬೆನ್ಸಿಫಲೋನ್‌ ಅಥವಾ “ಹಿಮ್ಮೆದುಳಿ”ನ ಮೇಲ್ಬಾಗವನ್ನೇ ವೈದ್ಯಕೀಯಶಾಸ್ತ್ರದಲ್ಲಿ ’ಮೆಟೆನ್ಸಿಫಲೋನ್‌’ ಎಂದು ಪರಿಗಣಿಸಲಾಗುತ್ತದೆ. ಸೆರೆಬೆಲ್‌ ಕಾರ್ಟೆಕ್ಸ್‌ ನ ರೀತಿಯಲ್ಲಿಯೇ ಕಿರುಮೆದುಳು ಕೂಡ ಎರಡು ಗೋಳಾರ್ಧಗಳಾಗಿ ವಿಭಜನೆ ಹೊಂದಿರುತ್ತವೆ. ಇದು ’ವರ್ಮಿಸ್‌ ’ ಎಂದು ಕರೆಯಲಾಗುವ ಚಿಕ್ಕದಾದ ಮಿಡ್‌ಲೈನ್‌ ವಲಯವನ್ನೂ ಒಳಗೊಂಡಿರುತ್ತದೆ. ಸಾಂಪ್ರದಾಯಿಕವಾಗಿ, ದೊಡ್ಡ ಮಡಿಕೆಗಳ ಗುಂಪು ಸಾಮಾನ್ಯವಾಗಿ ಸಮಗ್ರ ರಚನೆಯನ್ನು 10 ಚಿಕ್ಕ-ಚಿಕ್ಕ “ಲೊಬ್ಯೂಲ್‌”ಗಳನ್ನಾಗಿ ವಿಂಗಡಿಸುತ್ತದೆ. ಇದರ ದೊಡ್ಡ ಪ್ರಮಾಣದ ಚಿಕ್ಕ ಗ್ರ್ಯಾನ್ಯೂಲ್‌ ಜೀವಕೋಶಗಳ ದೆಸೆಯಿಂದಾಗಿ, ಕಿರುಮೆದುಳು ಇನ್ನುಳಿದ ಮೆದುಳಿಗಿಂತ ಹೆಚ್ಚು ಪ್ರಮಾಣದ ನ್ಯೂರಾನ್‌ಗಳನ್ನು ತನ್ನೊಡಲಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಆದರೆ, ಇದು ಮೆದುಳಿನ ಕೇವಲ ಶೇ.10 ರಷ್ಟು ಸ್ಥಳಾವಕಾಶವನ್ನು ಮಾತ್ರ ಒಳಗೊಂಡಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಬೃಹದೀಶ್ವರ ದೇವಾಲಯ

ಅತ್ಯಮೌಲ್ಯವಾದ ವಾಸ್ತುಶಿಲ್ಪದ ಕಲಾತಾಣವಾಗಿದೆ ಬೃಹದೀಶ್ವರ ದೇವಾಲಯ

ವಂದೇ ಭಾರತ್‌ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ವಂದೇ ಭಾರತ್‌ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು