in

ಬಾಯಿ ದುರ್ವಾಸನೆ ಬರುತ್ತಿದ್ದರೆ ಕಾರಣ ಏನು? ಪರಿಹಾರ ಏನಿದೆ?

ಬಾಯಿ ದುರ್ವಾಸನೆ ಬರುತ್ತಿದ್ದರೆ ಕಾರಣ ಏನು
ಬಾಯಿ ದುರ್ವಾಸನೆ ಬರುತ್ತಿದ್ದರೆ ಕಾರಣ ಏನು

ಯಾವುದೇ ಆಹಾರ ನಮ್ಮ ಹೊಟ್ಟೆ ಸೇರಬೇಕಾದರೆ ಬೇಕಾಗುವ ಮುಖ್ಯ ಅಂಗ ಬಾಯಿ.ಮುಖದ ಸೌಂದರ್ಯ ಕೂಡ ಬಾಯಿ, ತುಟಿಯಲ್ಲಿದೆ.ಕೆಲವೊಂದು ಸಲ ಬಾಯಿ ದುರ್ವಾಸನೆ ಸಮಸ್ಯೆ ಎದುರಾಗುತ್ತದೆ.ಆದರೆ ಹೇಗೆ ಎನ್ನುವುದು ಪ್ರಶ್ನೆ? ಏನು ಪರಿಹಾರ ಮಾಡುವುದು?

ಒಂದು ದಿನ ಸರಿಯಾಗಿ ಹಲ್ಲುಜ್ಜದೇ ಇದ್ದರೆ, ನಮ್ಮ ಬಾಯಿಯ ವಾಸನೆಯನ್ನು ನಾವೇ ಸಹಿಸಿಕೊಳ್ಳಲು ಸಾಧ್ಯವಿರುವುದಿಲ್ಲ. ಇನ್ನು ಅಕ್ಕಪಕ್ಕದವರು ಅದು ಹೇಗೆ ತಡೆದುಕೊಳ್ಳುತ್ತಾರೆ ದೇವರೇ ಬಲ್ಲ. ವೈದ್ಯರ ಪ್ರಕಾರ ನಾವು ಒಂದು ದಿನಕ್ಕೆ ಎರಡು ಬಾರಿ ಹಲ್ಲುಜ್ಜಬೇಕು.

ಈರುಳ್ಳಿ, ಬೆಳ್ಳುಳ್ಳಿ, ಕ್ಯಾಬೇಜ್, ಹೂಕೋಸು ಈ ರೀತಿಯ ಆಹಾರ ಸೇವಿಸಿದಾಗಲೂ ಸಹ ಬಾಯಿ ವಾಸನೆಯುಂಟಾಗುತ್ತದೆ. ಸಮಯಕ್ಕೆ ಸರಿಯಾಗಿ ಯಥೇಚ್ಚವಾಗಿ ನೀರು ಕುಡಿಯಬೇಕು, 15 ನಿಮಿಷಕ್ಕೊಮ್ಮೆ ಬಾಯಿ ತೆರೆದು ಮಾತನಾಡಬೇಕು. ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರಿಗೂ ಬಾಯಿ ದುರ್ವಾಸನೆ ಸಮಸ್ಯೆ ತಪ್ಪಿದ್ದಲ್ಲ.

ಬಾಯಿ ದುರ್ವಾಸನೆ ಬರುತ್ತಿದ್ದರೆ ಕಾರಣ ಏನು? ಪರಿಹಾರ ಏನಿದೆ?
ಬಾಯಿ ದುರ್ವಾಸನೆ ಬರುತ್ತಿದ್ದರೆ ಕಾರಣ ಏನು

ಇದರಿಂದ ಹಲ್ಲುಗಳ ಮೇಲೆ ಕಲೆಗಳು ಉಂಟಾಗುವ ಸಾಧ್ಯತೆ ಇರುವುದಿಲ್ಲ. ಇದರ ಜೊತೆಗೆ ಬಾಯಿಯ ದುರ್ವಾಸನೆ ಅಥವಾ ಹಲ್ಲುಗಳ ಸಂದುಗಳಲ್ಲಿ ಹಾಗೂ ವಸಡಿನ ಭಾಗದಲ್ಲಿ ಬ್ಯಾಕ್ಟೀರಿಯಾಗಳ ಸೋಂಕು ಕಂಡು ಬರುವ ಸಾಧ್ಯತೆ ಕೂಡ ಇರುವುದಿಲ್ಲ. ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುವ ಕೆಲವು ಪರಿಹಾರಗಳು ಇವೆ.

ರಾತ್ರಿ ಮಲಗಿಕೊಳ್ಳುವ ಮುಂಚೆ ಒಮ್ಮೆ ಬಾಯಿಯನ್ನು ಸ್ವಚ್ಛ ಮಾಡಿಕೊಳ್ಳಲು ಮೌತ್ ವಾಶ್ ಉಪಯೋಗಿಸಿ. ಇದರಿಂದ ನಿಮ್ಮ ಹಲ್ಲುಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಆಹಾರದ ಪಳೆಯುಳಿಕೆಗಳು ದೂರವಾಗುತ್ತವೆ.

ಸೈನಸ್, ಗಂಟಲು ಇನ್ಫೆಕ್ಷನ್ ಮತ್ತು ಶ್ವಾಸಕೋಶದ ಸಮಸ್ಯೆಗಳಿಂದಲೂ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಜೀರ್ಣಕ್ರಿಯೆ ಕೊರತೆ, ದೈಹಿಕ ವ್ಯಾಯಾಮದ ಶಿಸ್ತು ಪರಿಪಾಲಿಸದಿರುವುದು, ನೀರು ಕುಡಿಯದಿರುವುದು ಈ ಎಲ್ಲಾ ಸಮಸ್ಯೆಗಳು ಸಹ ಬಾಯಿ ವಾಸನೆಯ ಕಾರಣದ ಮೂಲವಾಗಿರುತ್ತದೆ.

ನೀರಿಗೆ ಒಂದು ಚಮಚ ಮೆಂತೆ ಕಾಳುಗಳನ್ನು ಹಾಕಿ. ಇದನ್ನು ಸೋಸಿಕೊಂಡ ಬಳಿಕ ನೀರನ್ನು ದಿನದಲ್ಲಿ ಒಂದು ಸಲ ಕುಡಿಯಿರಿ.

ಲವಂಗ ಬಳಸುವುದರಿಂದ ಹಲವಾರು ಉಪಯೋಗಗಳಿವೆ. ಬಾಯಿಯಲ್ಲಿ ತುಂಬಿಕೊಂಡಿರುವ ಕೀಟಾಣುಗಳಿಂದ ಮುಕ್ತಿ ಪಡೆಯಬೇಕು ಎಂದರೆ ಲವಂಗ ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಆಂಟಿ ಬ್ಯಾಕ್ಟೀರಿಯಲ್ ಗುಣ ಲವಂಗದಲ್ಲಿ ಇರುವ ಕಾರಣ ಇದು ಹಲವಾರು ರೋಗಾಣುಗಳನ್ನು ನಾಶ ಮಾಡುತ್ತದೆ. ಜೊತೆಗೆ ಬಾಯಿಗೆ ಸಂಬಂಧಿಸಿದ ಸಮಸ್ಯೆಯನ್ನು ದೂರ ಮಾಡುತ್ತದೆ. ಉದಾಹರಣೆಗೆ ಹಲ್ಲಿನಲ್ಲಿ ರಕ್ತಸ್ರಾವವಾಗುವುದು, ಆಗಾಗ ಹಲ್ಲು ನೋವು ಕಾಣಿಸಿಕೊಳ್ಳುವುದು- ಹೀಗೆ ಇನ್ನು ಕೆಲವು ಹಲ್ಲಿನ ಸಮಸ್ಯೆಯನ್ನು ಲವಂಗ ನಿವಾರಣೆ ಮಾಡುತ್ತದೆ.

ಬೆಳಗಿನ ಉಪಹಾರ ಸೇವನೆ ಮಾಡಿದ ನಂತರ ಅಥವಾ ಮಧ್ಯಾಹ್ನ ಊಟ ಮಾಡಿದ ನಂತರ ಚಹ ಕುಡಿಯುವುದು ಅಥವಾ ಬೇರೆ ಬೇರೆ ಬಗೆಯ ಸ್ನ್ಯಾಕ್ಸ್ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡಿರುತ್ತೇವೆ.
ಹೀಗಾಗಿ ನಾವು ಸೇವನೆ ಮಾಡುವ ಆಹಾರ ಪದಾರ್ಥಗಳ ಪಳೆಯುಳಿಕೆಗಳು ನಮ್ಮ ಹಲ್ಲುಗಳ ಸಂದುಗಳಲ್ಲಿ ಹಾಗೂ ವಸಡಿನ ಭಾಗದಲ್ಲಿ ಹಾಗೇ ಉಳಿಯುತ್ತವೆ.
ಇವುಗಳಿಂದ ಮುಕ್ತಿ ಪಡೆಯಲು ಆಗಾಗ ಸ್ವಚ್ಛವಾದ ನೀರಿನಿಂದ ಬಾಯಿ ಮುಕ್ಕಳಿಸುವ ಅಭ್ಯಾಸವನ್ನು ಇಟ್ಟುಕೊಳ್ಳಬೇಕು. ಇದರಿಂದಲೂ ಸಹ ಬಾಯಿಯ ದುರ್ವಾಸನೆ ದೂರವಾಗುತ್ತದೆ ಎಂದು ಹೇಳಬಹುದು.

ಬಾಯಿ ದುರ್ವಾಸನೆ ಬರುತ್ತಿದ್ದರೆ ಕಾರಣ ಏನು? ಪರಿಹಾರ ಏನಿದೆ?
ಲವಂಗ

ಲವಂಗ ಬಾಯಿಯ ದುರ್ವಾಸನೆಯನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ಆಗಾಗ್ಗೆ 3 ರಿಂದ 4 ಲವಂಗವನ್ನು ನಿಧಾನವಾಗಿ ಜಗಿಯಿರಿ. ಬಾಯಿಯ ದುರ್ವಾಸನೆ, ಹಲ್ಲು ನೋವು ಹಾಗೂ ಬಾಯಿಯಲ್ಲಿರುವ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುತ್ತದೆ.

ಬಾಯಿಯ ಅನಾರೋಗ್ಯಕ್ಕೆ ಕಾರಣವಾಗುವ ಹೆಚ್ಚು ಜಿಡ್ಡಿನ ಅಂಶಗಳನ್ನು ಒಳಗೊಂಡ ಆಹಾರ ಪದಾರ್ಥಗಳನ್ನು ಸೇವನೆ ಮಾಡಿದ ನಂತರ ಬಾಯಿಯನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು.

ಕೊತ್ತಂಬರಿ ಸೊಪ್ಪು ಬಾಯಿಯ ದುರ್ವಾಸನೆ ಹೋಗಲಾಡಿಸುವ ಪರಿಣಾಮಕಾರಿ ಮಾರ್ಗ. ಇದನ್ನು ತಿಂದರೆ ಬಾಯಿ ದುರ್ವಾಸನೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎನ್ನುತ್ತಾರೆ ತಜ್ಞರು. ಹಸಿ ಕೊತ್ತಂಬರಿ ಸೊಪ್ಪನ್ನು ತಿನ್ನಬೇಕೆಂದರೆ ಅದರ ಎಲೆಗಳನ್ನು ಸ್ವಲ್ಪ ತೆಗೆದುಕೊಂಡು ತೊಳೆದು ಸ್ವಲ್ಪ ಹೊತ್ತು ಜಗಿಯಿರಿ.

ಜೇನುತುಪ್ಪ ಮತ್ತು ದಾಲ್ಚಿನ್ನಿ ಮಿಶ್ರಣವನ್ನು ಬಾಯಿಯ ದುರ್ವಾಸನೆ ಹೋಗಲಾಡಿಸಲು ಮೌತ್ ಫ್ರೆಶ್ನರ್ ಆಗಿ ಬಳಸಬಹುದು. ಎರಡರಲ್ಲೂ ಸಾಕಷ್ಟು ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ದಾಲ್ಚಿನ್ನಿ ಪುಡಿಯೊಂದಿಗೆ ಜೇನುತುಪ್ಪವನ್ನು ಮಿಶ್ರಣ ಮಾಡಿ ಮತ್ತು ಪೇಸ್ಟ್ ಅನ್ನು ಹಲ್ಲು ಮತ್ತು ವಸಡುಗಳಿಗೆ ಹಚ್ಚಿ ಮಸಾಜ್ ಮಾಡಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ಹಲ್ಲಿನ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಊಟದ ಬಳಿಕ ಒಂದು ಚಮಚ ಜೀರಿಗೆ ಸೇವನೆ ಮಾಡಿದರೆ ಅದರಿಂದ ಬಾಯಿ ವಾಸನೆ ಕಡಿಮೆಯಾಗುತ್ತದೆ.

ದುರ್ಗಂಧ ಬೀರುವ ರೋಗಾಣುಗಳನ್ನು ದಾಲ್ಚಿನ್ನಿ ಸಂಪೂರ್ಣ ನಿವಾರಣೆ ಮಾಡುತ್ತದೆ. ಇದಕ್ಕಾಗಿ ನೀವು ಬಹಳ ಸರಳ ಕೆಲಸ ಮಾಡಬೇಕು. ದಾಲ್ಚಿನ್ನಿಯ ಸಣ್ಣ ತುಂಡೊಂದನ್ನು ಬಾಯಿಯಲ್ಲಿ ಸ್ವಲ್ಪ ಸಮಯದ ಕಾಲ ಇಟ್ಟುಕೊಳ್ಳಿ, ನಂತರ ಇದನ್ನು ಉಗಿಯಿರಿ. ಅಷ್ಟೇ, ಅಲ್ಲಿಗೆ ಸಮಸ್ಯೆ ಪರಿಹಾರವಾಗುತ್ತದೆ.

ಬಾಯಿ ದುರ್ವಾಸನೆ ಬರುತ್ತಿದ್ದರೆ ಕಾರಣ ಏನು? ಪರಿಹಾರ ಏನಿದೆ?
ನೀರು ಕುಡಿಯುವ ಅಭ್ಯಾಸ

ಯಾವುದೇ ಸಂದರ್ಭದಲ್ಲೂ ಕೂಡ ಅದು ಚಳಿಗಾಲ ಆಗಿರಲಿ ಅಥವಾ ಮಳೆಗಾಲ ಆಗಿರಲಿ ಇಲ್ಲ ಬೇಸಿಗೆಕಾಲ ಆಗಿರಲಿ, ನೀರು ಕುಡಿಯುವ ಅಭ್ಯಾಸದಿಂದ ಮಾತ್ರ ದೂರ ಉಳಿಯಬಾರದು. ಬಾಯಿಯ ದುರ್ವಾಸನೆಯನ್ನು ದೂರ ಮಾಡುವಲ್ಲಿ ಕೂಡ ಇದು ಪ್ರಮುಖ ಪಾತ್ರವಹಿಸುತ್ತದೆ. ಬೇಕಾದ ಪ್ರಮಾಣದಲ್ಲಿ ನಾವು ನೀರು ಕುಡಿಯುವುದರಿಂದ ಹೊಟ್ಟೆಯ ಭಾಗದಲ್ಲಿ ಅಥವಾ ನಮ್ಮ ದೇಹದ ಇತರ ಅಂಗಾಂಗಗಳ ಸ್ಥಳಗಳಲ್ಲಿ ಶೇಖರಣೆಯಾಗಿರುವ ಕೆಟ್ಟ ವಿಷಕಾರಿ ಅಂಶಗಳು ದೂರವಾಗುತ್ತದೆ.

ಸಮತೋಲನವಾದ ಆಹಾರ ಪದ್ಧತಿಯನ್ನು ಅನುಸರಿಸಲು ಮುಂದಾಗಬೇಕು. ನಾವು ತಿನ್ನುವ ಆಹಾರದಲ್ಲಿ ಪೌಷ್ಟಿಕ ಸತ್ವಗಳು ತುಂಬಿರಬೇಕು.
ಕೃತಕ ಸಕ್ಕರೆ ಅಂಶ ಅಥವಾ ಆಲ್ಕೋಹಾಲ್ ಅಂಶ ಅದರಲ್ಲಿ ಇರಬಾರದು. ಹೆಚ್ಚು ಗಾಢವಾದ ವಾಸನೆ ಬೀರುವ ಮಸಾಲೆ ಪದಾರ್ಥಗಳನ್ನು ಸೇವನೆ ಮಾಡುವಾಗ ಮಿತಿ ಇರಲಿ.

ಒಂದು ಗ್ಲಾಸ್ ನೀರಿನಲ್ಲಿ ನಿಂಬೆ ಹಣ್ಣಿನ ರಸ, ಸಕ್ಕರೆ, ಉಪ್ಪನ್ನು ಮಿಶ್ರಣ ಮಾಡಿ ಸೇವನೆ ಮಾಡಿ.
ಜೇನುತುಪ್ಪ ಮತ್ತು ದಾಲ್ಚಿನ್ನಿಯ ಮಿಶ್ರಣವು ನಿಮ್ಮ ಬಾಯಿಯ ದುರ್ವಾಸನೆಯನ್ನು ಸಂಪೂರ್ಣವಾಗಿ ಹೋಗಲಾಡಿಸುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

ರತಿ ಮನ್ಮಥ

ರತಿ ಮನ್ಮಥ ಹುಟ್ಟಿನ ಕಥೆ

ಜೂನ್ 7 ಮಂಗಳವಾರ ಹೇಳು ರಾಶಿಯವರಿಗೆ ರಾಜಯೋಗ ಶುರು ಬಾರಿ ಅದೃಷ್ಟ.

ಜೂನ್ 7 ಮಂಗಳವಾರ ಹೇಳು ರಾಶಿಯವರಿಗೆ ರಾಜಯೋಗ ಶುರು ಬಾರಿ ಅದೃಷ್ಟ.