ನಮಲ್ಲಿ ವೀಳ್ಯದ ಎಲೆಯನ್ನು ಹೆಚ್ಚಾಗಿ ಶುಭ ಸಮಾರಂಭಗಳಲ್ಲಿ, ಪೂಜೆ ಪುನಸ್ಕಾರಕ್ಕೆ, ಸಾಂಪ್ರದಾಯಿಕ ಆಚರಣೆಗಳಲ್ಲಿ ಬಳಸುತ್ತೇವೆ. ಹಿಂದಿನವರು ಬರಿ ಪೂಜೆ ಮತ್ತು ಆಚರಣೆಗಳ ಹೊರತಾಗಿ ಅದನ್ನು ಊಟದ ಬಳಿಕ ತಿನ್ನಲು ಬಳಸುತ್ತಿದ್ದರು. ಈಗಲೂ ಕೆಲವರಿಗೆ ಊಟದ ನಂತರ ಎಲೆ ಜಗಿಯುವ ಹವ್ಯಾಸವಿದೆ. ಬರಿ ಎಲೆ ಅಡಿಕೆಯಲ್ಲದೆ ಹೊರಗೆ ಬೀಡಾದ ರೂಪದಲ್ಲಿ ಹಲವು ರೀತಿಯಲ್ಲಿ ದೊರೆಯುತ್ತದೆ. ಇದರಲ್ಲಿ ಹಲವು ಬಗೆಯ ಔಷಧೀಯ ಗುಣಗಳು ಇವೆ. ಬನ್ನಿ ಇದರಿಂದಾಗುವು ಉಪೋಯೋಗಗಳನ್ನು ತಿಳಿಯೋಣ,
ಗಾಯಗಳ ವಾಸಿಗೆ: ಇದರಲ್ಲಿರುವು ಔಷಧೀಯ ಗುಣಗಳು ಗಾಯಗಳನ್ನು ಬೇಗ ಗುಣಪಡಿಸುತ್ತವೆ ಮತ್ತು ಗಾಯದಿಂದ ಬರುವ ನೋವನ್ನು ಕಡಿಮೆ ಮಾಡುತ್ತದೆ. ಕಡಿತವನ್ನು ಶಮನ ಮಾಡುತ್ತದೆ, ಮೂಗೇಟುಗಳನ್ನು ಗುಣಪಡಿಸಲು, ಅಜೀರ್ಣ, ಒಳಗಿನ ಮತ್ತು ಹೊರಗಿನ ಉರಿಊತ ನಿವಾರಣೆಗೆ ರಾಮಬಾಣ. ಹೊರಗಿನ ಗಾಯಗಳಿಗೆ ಇದರ ಮಿಶ್ರಣವನ್ನು ಹಚ್ಚಬಹುದು.ಆದರೆ ಒಳಗಿನ ಗಾಯಗಳ ಗುಣಮುಖಕ್ಕೆ ಇದರ ರಸವನ್ನು ಸೇವಿಸಬೇಕು.
ಜೀರ್ಣಕ್ರಿಯೆಗೆ: ನಮಲ್ಲಿ ಕೆಲವರಿಗೆ ಊಟದ ನಂತರ ಎಲೆ ಹಾಕುವ ಅಭ್ಯಾಸವಿದೆ. ಸುಮ್ಮನೆ ಅಭ್ಯಾಸವಿದೆ ಹೊರತು ಅದರ ಲಾಭಗಳನ್ನು ಅರಿತು ತಿನ್ನುವವರು ತೀರಾ ಕಡಿಮೆ. ಇದರಲ್ಲಿರುವ ಗ್ಯಾಸ್ಟ್ರೋಪ್ರೊಟೆಕ್ಟಿವ್ ಅಂಶವು ಆಹಾರದ ಜೀರ್ಣಕ್ರಿಯೆಗೆ ಉಪಕಾರಿ. ಅಜೀರ್ಣವಾದರೆ ವೀಳ್ಯದೆಲೆಯ ಜೊತೆಗೆ ಎರಡು ಕಾಳು ಮೆಣಸನ್ನು ನೀರಿನಲ್ಲಿ ಹಾಕಿ ಕುದಿಸಿ ಕುಡಿಸುವುದರಿಂದ ಅಜೀರ್ಣ ಕಡಿಮೆಯಾಗುತ್ತದೆ.
ಬಾಯಿಯ ಆರೋಗ್ಯಕ್ಕೆ: ವೀಳ್ಯದೆಲೆಯ ಸೇವನೆಯಿಂದ ನಮ್ಮ ಉಸಿರನ್ನು ರಿಫ್ರೆಶ್ ಮಾಡುತ್ತದೆ. ಜೆರ್ಮ್ಸ್, ಬ್ಯಾಕ್ಟೀರಿಯಾ ಇವುಗಳಿಂದ ಬರುವ ಕಾಯಿಲೆಯಿಂದ ನಮ್ಮ ಬಾಯಿಯನ್ನು ರಕ್ಷಿಸುತ್ತದೆ. ಎಲೆ ಜಗಿದಾಗ ನಮ್ಮ ಬಾಯಿಯನ್ನು ಶುದ್ಧೀಕರಿಸುತ್ತದೆ, ಹಲ್ಲು ಕೊಳೆಯುವುದನ್ನು ತಡೆಗಟ್ಟುತ್ತದೆ, ವೊಸಡುಗಳನ್ನು ಗಟ್ಟಿಗೊಳಿಸುತ್ತದೆ, ಓರಲ್ ರಕ್ತಸ್ರಾವವನ್ನು ದೂರಮಾಡುತ್ತದೆ.
ಉಸಿರಾಟದ ತೊಂದರೆಗೆ: ವೀಳ್ಯದಎಲೆಯು ಉಸಿರಾಟದ ತೊಂದರೆಗೆ ರಾಮಬಾಣವಾಗಿದೆ. ಇದು ಶೀತ ಮತ್ತು ಕೆಮ್ಮು ಎರಡನ್ನು ಕಡಿಮೆ ಮಾಡುತ್ತದೆ. ಅಸ್ಥಮಾದಿಂದ ಬಳಲುತ್ತಿರುವವರಿಗೆ ಇದರ ಉಪಯೋಗವೇ ಹೆಚ್ಚು. ಎಲೆಯ ಜೊತೆಗೆ ಸ್ವಲ್ಪ ಏಲಕ್ಕಿ, ಲವಂಗ ಮತ್ತು ಚೆಕ್ಕೆಯನ್ನು ಸ್ವಲ್ಪ ನೀರಿನಲ್ಲಿ ಕುದಿಸಿ ಆರಿದ ನಂತರ ಇದನ್ನು ಕಷಾಯದರೀತಿ ಕುಡಿಯುವುದರಿಂದ ಕೆಮ್ಮು ಕಡಿಮೆ ಮಾಡಿಕೊಳ್ಳಬಹುದು.
ತಲೆನೋವಿಗೆ: ಇದರ ಎಲೆಯನ್ನು ಅರೆದು ತಲೆನೋವಿರುವ ಜಾಗಕ್ಕೆ ಹಚ್ಚುವುದರಿಂದ ತಲೆನೋವಿನಿಂದ ಶಮನ ಪಡೆಯಬಹುದು. ವೀಳ್ಯದೆಲೆಯ ಎಣ್ಣೆಯನ್ನು ಕೂಡ ನಾವು ಬಳಸಬಹುದು.
ಹೀಗೆಯೇ ವೀಳ್ಯದೆಲೆಯ ಲಾಭಗಳು ಹಲವು. ಇನ್ನುಮೇಲೆ ಬರಿ ಪೂಜೆಗೆ ಸಮಾರಂಭಗಳಿಗೆ ಬಳಸುವುದರ ಜೊತೆಗೆ ನಮ್ಮ ಆರೋಗ್ಯದ ಕಡೆಗೂ ಇದರ ಬಳಕೆ ಮಾಡಬಹುದು. ಕೆಲವೊಮ್ಮೆ ಊಟದ ನಂತರ ವೀಳ್ಯ ತಿನ್ನುವು ಅಭ್ಯಾಸ ಮಾಡಿಕೊಳ್ಳೋಣ ಇಲ್ಲವೇ ಸರಿಯಾದ ರೀತಿಯಲ್ಲಿ ಸರಿಯಾದ ಪ್ರಮಾಣದಲ್ಲಿ ಬಳಸಿ ಇದರ ಲಾಭಗಳನ್ನು ಪಡೆಯೋಣ..
Стальной двутавр — это фасонный металлопрокат с Н-образным сечением поперечного профиля. Он изготавливается горячекатаным способом из углеродистых или низколегированных сталей при температуре 1200°C по стандарту ГОСТ 8239-89 https://dvutavrmsk.ru
Арматура диаметром 32 мм, изготовленная из стали марки А500С, является одним из самых востребованных видов металлопроката в строительстве. Она применяется при возведении фундаментов, армировании стен и перемычек. https://armatura32.ru