ಯಾವಾಗಲೂ 90’s ಮಕ್ಕಳೇ ಅದೃಷ್ಟವಂತರು. ಆದರೆ ಯಾವಾಗ ಮೊಬೈಲ್,ಕೇಬಲ್,ಇಂಟರ್ನೆಟ್ ಮುಂತಾದ ಟೆಕ್ನಾಲಜಿ ಶುರುವಾಯಿತೋ ಅಲ್ಲಿಂದ ಮಕ್ಕಳೇ ಅಲ್ಲ,ಎಲ್ಲಾ ವರ್ಗದವರ ದೈಹಿಕ ಚಟುವಟಿಕೆಗಳು ಕಮ್ಮಿಯಾಗತೊಡಗಿತು.
ಅದರಲ್ಲೂ ಮಕ್ಕಳು ಇವಾಗ ಹುಟ್ಟಿ ಸ್ವಲ್ಪ ದಿನವಾದ ಕೂಡಲೇ ಶುರು ಮೊಬೈಲ್ ಚಟ. ಊಟ ಮಾಡಿಸಬೇಕಾದರೂ ಮೊಬೈಲ್,ನಿದ್ದೆ ಮಾಡಿಸಬೇಕಾದರೂ ಮೊಬೈಲ್,ಸುಮ್ಮನೇ ಕುಳಿತುಕೊಳ್ಳಬೇಕು ಅಂದರೂ ಮೊಬೈಲ್.
ಹೆತ್ತವರೂ ಅಷ್ಟೇ ಈಗ ಮಕ್ಕಳು ಸ್ವಲ್ಪ ಸುಮ್ಮನೇ ಇರಲಿ ಅಂತ ಮೊಬೈಲ್ ಕೈ ಯಲ್ಲಿ ಕೊಟ್ಟು ಅವರ ಕೆಲಸ ನೋಡಿಕೊಳ್ಳುತ್ತಾರೆ. ಆದರೆ ಮೊಬೈಲ್ ಬಳಕೆ ಚಿಕ್ಕ ಮಕ್ಕಳಲ್ಲಿ ಒಳ್ಳೆಯದಲ್ಲ. ಆರೋಗ್ಯಕ್ಕೂ ,ಅವರ ಜೀವನಕ್ಕೂ. ಅದರಲ್ಲೂ ಮಕ್ಕಳಿಗೆ ಊಟ ಮಾಡಿಸುವಾಗ ಮೊಬೈಲ್ ತೋರಿಸುವುದು ತುಂಬಾ ದೊಡ್ಡ ತಪ್ಪು. ಒಂದೆರಡು ದಿವಸ ತಿನ್ನಲ್ಲ ,ಆಮೇಲೆ ಖಂಡಿತಾ ತಿನ್ನುತ್ತವೆ.
ಕೆಲವೊಂದು ಉಪಾಯಗಳನ್ನು ಪ್ರಯತ್ನಿಸಿ ಮೊಬೈಲ್ ನಿಂದ ಮಕ್ಕಳನ್ನು ದೂರವಿಡಲು.
ಮಕ್ಕಳು ಯಾವಾಗಲೂ ದೊಡ್ಡವರನ್ನು ನೋಡಿ ಕಲಿಯುವರು ಮತ್ತು ಪೋಷಕರು ಯಾವತ್ತಿಗೂ ಅವರಿಗೆ ಪ್ರೇರಣೆ ಆಗಿರುವರು. ನಿಮ್ಮ ಪ್ರತಿಯೊಂದು ಚಟುವಟಿಕೆ ಹಾಗೂ ದಿನಚರಿಯ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು. ನೀವು ಯಾವಾಗಲೂ ಮೊಬೈಲ್ ನಲ್ಲೇ ನೇತಾಡುತ್ತಿದ್ದರೆ, ಮಕ್ಕಳು ಅದರಿಂದ ದೂರವಿರಬೇಕು ಎಂದು ಯಾವತ್ತಿಗೂ ನಿರೀಕ್ಷೆ ಮಾಡಬೇಡಿ. ನೀವು ಅವರಿಗೆ ಯಾವತ್ತಿಗೂ ಮಾದರಿಯಾಗಬೇಕು.
ಮನೆಯಿಂದ ಹೊರಗೆ ಆಟ ,ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡೂ ಒಳ್ಳೆಯದು. ಅದಕ್ಕಾಗಿ ಮಕ್ಕಳಿಗೆ ಮನೆಯಿಂದ ಹೊರಗೆ ಹೋಗಿ ಆಡುವಂತೆ ಸಲಹೆ ನೀಡಿ. ಸಾಧ್ಯವಾದ್ರೆ ಅವರ ಸ್ನೇಹಿತರನ್ನು ಆಟವಾಡಲು ಕರೆತನ್ನಿ. ಮಕ್ಕಳು ಒಮ್ಮೆ ಔಟ್ ಡೋರ್ ಗೇಮ್ಸ್ ರುಚಿ ನೋಡಿದ್ರೆ ಫೋನ್ ಮಿಸ್ ಮಾಡುವುದಿಲ್ಲ. ನಿಧಾನವಾಗಿ ಮೊಬೈಲ್ ಚಟ ಬಿಡುತ್ತದೆ.
ಪ್ರಕೃತಿ ಮೇಲೆ ಆಸಕ್ತಿ ,ಮಕ್ಕಳ ಮೊಬೈಲ್, ಲ್ಯಾಪ್ ಟಾಪ್ ಆಸಕ್ತಿ ಕಡಿಮೆಯಾಗ್ಬೇಕೆಂದ್ರೆ ಮಕ್ಕಳನ್ನು ಪ್ರಕೃತಿ ಜೊತೆ ಬೆರೆಸುವ ಪ್ರಯತ್ನ ಮಾಡಿ. ಮಕ್ಕಳಿಗೆ ಪಕ್ಷಿ, ಪ್ರಾಣಿ, ಗಿಡ – ಮರಗಳ ಬಗ್ಗೆ ಹೇಳ್ತಿರಿ. ಹತ್ತಿರದ ಪಾರ್ಕ್ ಗೆ ಕರೆದುಕೊಂಡು ಹೋಗಿ ಅಲ್ಲಿನ ಪರಿಸರದ ಬಗ್ಗೆ ಮಾಹಿತಿ ನೀಡಿ. ಮಕ್ಕಳು ಅದ್ರಲ್ಲಿ ಆಸಕ್ತಿ ಬೆಳೆಸಿಕೊಳ್ತಿದ್ದಂತೆ ಮೊಬೈಲ್, ಟಿವಿಯಿಂದ ಸ್ವಲ್ಪ ದೂರವಾಗ್ತಾರೆ. ನಿಧಾನವಾಗಿ ಅದ್ರಲ್ಲಿ ಆಸಕ್ತಿ ಕಳೆದುಕೊಳ್ತಾರೆ.
ಪುಸ್ತಕ ಓದುವ ಹವ್ಯಾಸ ಬೆಳೆಸಿ. ಮೊಬೈಲ್ ಮನಸ್ಸನ್ನು ಹಾಳು ಮಾಡುತ್ತದೆ. ಅದೇ ಪುಸ್ತಕ ಮನಸ್ಥಿತಿಯನ್ನು ಸುಧಾರಿಸುತ್ತದೆ. ರಜೆಯಲ್ಲಂತೂ ಮಕ್ಕಳು ಪುಸ್ತಕ ಓದುವುದಿಲ್ಲ. ಮಕ್ಕಳಿಗೆ ಆಸಕ್ತಿದಾಯಕ ಪುಸ್ತಕಗಳನ್ನು ನೀಡಿ. ಅದನ್ನು ನೀವೂ ಓದಿ. ಅವರಿಗೂ ಓದಲು ಕೊಡಿ. ಪಾಲಕರು ಪುಸ್ತಕ ಓದುತ್ತಿದ್ದರೆ ಅದನ್ನು ನೋಡಿ ಮಕ್ಕಳು ಓದಲು ಕಲಿಯುತ್ತಾರೆ.
ಮನೆಯ ಕೆಲಸದಲ್ಲಿ ಸಹಾಯ,ಮಕ್ಕಳನ್ನು ಮೊಬೈಲ್ ನಿಂದ ದೂರವಿಡಬೇಕೆಂದ್ರೆ ಅವರನ್ನು ಸದಾ ಒಂದಿಲ್ಲೊಂದು ಕೆಲಸದಲ್ಲಿ ಬ್ಯುಸಿ ಮಾಡ್ಬೇಕು. ಮಕ್ಕಳನ್ನು ನಿಮ್ಮ ಜೊತೆ ಸೇರಿಸಿಕೊಳ್ಳಿ. ಸಣ್ಣಪುಟ್ಟ ಮನೆ ಕೆಲಸಗಳನ್ನು ಮಕ್ಕಳಿಗೆ ನೀಡಿ. ಮಕ್ಕಳಿಗೆ ಕೆಲಸ ಮಾಡುವಾಗ ಬೋರ್ ಆಗ್ಬಹುದು. ಹಾಗಾಗಿ ಕೆಲಸ ಮಾಡ್ತಲೆ ಮಕ್ಕಳ ಜೊತೆ ಮೋಜು – ಮಸ್ತಿ ಮಾಡಿ. ಇದ್ರಿಂದ ಮಕ್ಕಳು ಮನೆ ಕೆಲಸವನ್ನು ಕಲಿಯುವ ಜೊತೆಗೆ ಮೊಬೈಲ್ ನಿಂದ ದೂರವಿರಲು ಬಯಸ್ತಾರೆ.
ಫೋನ್ ಗೆ ಲಾಕ್ ,ನಿಮ್ಮ ಒಪ್ಪಿಗೆ ಇಲ್ಲದೆ ಮಕ್ಕಳು ಮೊಬೈಲ್ ತೆಗೆದುಕೊಳ್ತಾರೆ. ಕದ್ದು ಮುಚ್ಚಿ ಮೊಬೈಲ್ ನೋಡ್ತಾರೆ. ಅದನ್ನು ತಪ್ಪಿಸಬೇಕೆಂದ್ರೆ ಫೋನ್ ಗೆ ಲಾಕ್ ಹಾಕಿ. ಆಗ ಮಕ್ಕಳನ್ನು ನಿಯಂತ್ರಿಸಬಹುದು. ಮಕ್ಕಳು ಮೊಬೈಲ್ ನೋಡುವ ಸಮಯವನ್ನು ನೀವು ನಿಗದಿ ಮಾಡ್ಬಹುದು. ಆ ಸಮಯದಲ್ಲಿ ಮಾತ್ರ ನೀವು ಲಾಕ್ ತೆಗೆದುಕೊಡಬಹುದು.
ಇತರ ಹವ್ಯಾಸಕ್ಕೆ ಪ್ರೋತ್ಸಾಹ, ಮಕ್ಕಳನ್ನು ಬೇರೆ ಬೇರೆ ಹವ್ಯಾಸದಲ್ಲಿ ತೊಡಗಿಸಿ. ಅವರನ್ನು ಸಂಗೀತ, ಡಾನ್ಸ್ ಸೇರಿದಂತೆ ಬೇರೆ ಕ್ಲಾಸ್ ಗೆ ಸೇರಿಸಿ. ಸದಾ ಬ್ಯುಸಿಯಾಗಿರುವ ಮಕ್ಕಳು ನಿಧಾನವಾಗಿ ಫೋನ್ ಮರೆಯುತ್ತಾರೆ.
ಆಡುವುದು, ಈಜುವುದು, ಸೈಕ್ಲಿಂಗ್ ಮತ್ತು ಓಟ ಇತ್ಯಾದಿ ಹೊರಾಂಡದ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ ಮತ್ತು ಮಕ್ಕಳಿಗೂ ಇದನ್ನು ಕಲಿಸಿ. ಮಕ್ಕಳು ಹೊರಾಂಡದ ಆಟವಾಡಿದರೆ ಅದರಿಂದ ದೈಹಿಕವಾಗಿಯೂ ಅವರಿಗೆ ಹೆಚ್ಚು ವ್ಯಾಯಾಮ ಸಿಗುವುದು.
ಇಂತಹ ಆಟಗಳಲ್ಲಿ ಅವರಿಗೆ ಆಸಕ್ತಿ ಮೂಡುವುದು ಮತ್ತು ಅವರು ಮೊಬೈಲ್ ನ್ನು ಮರೆಯುವರು. ಅವರು ಪ್ರತಿಯೊಂದು ಆಟವನ್ನು ಆನಂದಿಸುವಂತಹ ವಾತಾವರಣದಲ್ಲಿ ಅವರನ್ನು ಬೆಳೆಸುವುದು ಅತೀ ಅಗತ್ಯವಾಗಿರುವುದು.
ಮಕ್ಕಳಿಗೆ ಮೊಬೈಲ್ ಅಥವಾ ಟಿವಿ ತೋರಿಸುವ ಬದಲು ನೀವು ಅವರನ್ನು ಬೇರೆ ಚಟುವಟಿಕೆಗಳಲ್ಲಿ ವ್ಯಸ್ತರಾಗಿಟ್ಟರೆ ತುಂಬಾ ಒಳ್ಳೆಯದು. ಇಂತಹ ಗ್ಯಾಜೆಟ್ಸ್ ಕೆಟ್ಟ ಪರಿಣಾಮ ಬೀರುವುದು. ಈ ರೀತಿಯಾಗಿ ನೀವು ಮಕ್ಕಳನ್ನು ಗ್ಯಾಜೆಟ್ಸ್ ಚಟದಿಂದ ದೂರವಿಡಬಹುದು.
ಮಕ್ಕಳೊಂದಿಗೆ ತುಂಬಾ ಶಾಂತ ರೀತಿಯಲ್ಲಿ ಮಾತನಾಡಿ ಮತ್ತು ಅವರಿಗೆ ಇದರಿಂದ ಆಗುವಂತಹ ಕೆಟ್ಟ ಪರಿಣಾಮಗಳ ಬಗ್ಗೆ ತಿಳಿಸಿ. ಈ ವಿಧಾನಗಳು ಕೆಲಸ ಮಾಡದೆ ಇದ್ದರೆ ಆಗ ನೀವು ಮಕ್ಕಳಿಗೆ ಕೌನ್ಸಿಲಿಂಗ್ ಕೊಡಿಸಿ.
ಪೋಷಕರು ಮಕ್ಕಳ ಮುಂದೆ ಮೊಬೈಲ್ ಬದಿಗಿಟ್ಟು, ಪುಸ್ತಕ ಓದಲು ಆರಂಭಿಸಿದರೆ, ಮಕ್ಕಳಿಗೂ ಪುಸ್ತಕದ ಮೇಲೆ ಪ್ರೀತಿ ಬೆಳೆಯುತ್ತದೆ. ಅಲ್ಲದೆ, ಮಕ್ಕಳ ಜೊತೆ ಕುಳಿತು ಹೆತ್ತವರು ಪುಸ್ತಕದ ಬಗ್ಗೆ ಮಾತುಕತೆ ನಡೆಸಲು ಆರಂಭಿಸಿದರೆ, ಮಕ್ಕಳಿಗೂ ಪುಸ್ತಕ ಓದುವ ಬಗ್ಗೆ ಆಸಕ್ತಿ ಮೂಡುತ್ತದೆ.
ಮಕ್ಕಳನ್ನು ನಿಸರ್ಗಕ್ಕೆ ಹತ್ತಿರ ತಂದಷ್ಟೂ ಅವರು ಮೊಬೈಲ್ ನಿಂದ ದೂರ ಹೋಗುವುದು ಸಾಧ್ಯವಾಗುತ್ತದೆ. ನೈಸರ್ಗಿಕ ವಸ್ತುಗಳ ಪ್ರಾಮುಖ್ಯತೆಯನ್ನು ಮಕ್ಕಳಿಗೆ ತಿಳಿಸಿ ಹೇಳುವುದು ಅಗತ್ಯ. ಒಂದು ಸಲ ಮಕ್ಕಳು ಪ್ರಕೃತಿಗೆ ಹತ್ತಿರವಾದರೆ ನಂತರ ಮೊಬೈಲ್ ನತ್ತ ಮನಸ್ಸು ನೆಡುವುದಿಲ್ಲ.
ಧನ್ಯವಾದಗಳು.
Как не попасть впросак при покупке диплома колледжа или ПТУ в России
Как оказалось, купить диплом кандидата наук не так уж и сложно