in

ಕಾಮಾಲೆ ರೋಗಲಕ್ಷಣಗಳು

ಕಾಮಾಲೆ ರೋಗಲಕ್ಷಣ
ಕಾಮಾಲೆ ರೋಗಲಕ್ಷಣ

ಕಾಮಾಲೆ ಒಂದು ತೀವ್ರವಾದ ವೈರಲ್ ಹೆಮೋರಾಜಿಕ್ ಕಾಯಿಲೆಯಾಗಿದೆ. ಫ್ಲಾವಿವೈರಡೆ ತಳಿಯ ಗುಣಾತ್ಮಕ ಪ್ರಜ್ಞೆಯ ಹಾಗೂ RNA ರೋಗಾಣುಗಳಿಂದ ಸುತ್ತುಗೊಂಡಿರುವ ೪೦ರಿಂದ ೫೦ mmರಷ್ಟು ಗಾತ್ರ ಹೊಂದಿರುವ ರೋಗಾಣು ಇದಾಗಿದೆ.

ಕಾಮಾಲೆ ತರುವ ವೈರಸ್, ಕಾಮಾಲೆ ಸೊಳ್ಳೆ, ಏಡೀಸ್ ಎಜಿಪ್ಟಿ ಹಾಗೂ ಇನ್ನಿತರ ಪ್ರಭೇಧಗಳ, ಹೆಣ್ಣು ಸೊಳ್ಳೆಯು ಕಚ್ಚುವುದರಿಂದ ಹರಡುತ್ತದೆ. ಇದು ದಕ್ಷಿಣ ಅಮೇರಿಕಾಹಾಗೂ ಆಫ್ರಿಕಾದ ಉಷ್ಣವಲಯ ಹಾಗೂ ಉಪ ಉಷ್ಣವಲಯ ಪ್ರದೇಶಗಳಲ್ಲಿ ಮೊದಲು ಪತ್ತೆಯಾಗಿತ್ತು. ಆದರೆ ಏಷ್ಯಾದಲ್ಲಿ ಕಂಡುಬಂದಿರಲಿಲ್ಲ. ಈ ವೈರಸ್‌ ಹರಡುವಿಕೆಯು ಕೇವಲ ವಾನರ ಪ್ರಭೇದ ಹಾಗೂ ಸೊಳ್ಳೆಗಳ ಹಲವಾರು ಪ್ರಭೇದಗಳಿಂದ ಮಾತ್ರ ಹರಡುತ್ತದೆ. ಈ ಖಾಯಿಲೆಯ ಮೂಲವು ಹೆಚ್ಚಾಗಿ ಆಫ್ರಿಕಾ ಆಗಿರಬಹುದೆಂದು ನಂಬಲಾಗಿದೆ. ಇಲ್ಲಿಂದ ಇದು ೧೬ ನೇ ಶತಮಾನದಲ್ಲಿ ನಡೆಯುತ್ತಿದ್ದ ಗುಲಾಮರ ವ್ಯಾಪಾರದ ಸಮಯದಲ್ಲಿ ದಕ್ಷಿಣ ಅಮೇರಿಕಾಕ್ಕೆ ಪರಿಚಯಗೊಂಡಿತು ಎನ್ನಲಾಗಿದೆ. ೧೭ ನೇ ಶತಮಾನದ ನಂತರದಲ್ಲಿ ಈ ಕಾಯಿಲೆಯ ಅನೇಕ ಸಾಂಕ್ರಾಮಿಕ ಹರಡುವಿಕೆಯ ಪ್ರಕರಣಗಳು ಅಮೇರಿಕಾ, ಆಫ್ರಿಕಾ ಹಾಗೂ ಯುರೋಪ್‌ನಲ್ಲಿ ದಾಖಲಾದವು. ೧೯ ನೇ ಶತಮಾನದಲ್ಲಿ ಕಾಮಾಲೆಯು ಅತಿ ಅಪಾಯಕಾರಿ ಸಾಂಕ್ರಾಮಿಕ ಖಾಯಿಲೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿತ್ತು.

ಕಾಮಾಲೆ ರೋಗಲಕ್ಷಣಗಳು
ಜ್ವರ ರೋಗಲಕ್ಷಣ

ಕಾಮಾಲೆಯು ಹೆಚ್ಚಿನ ಸಂದರ್ಭಗಳಲ್ಲಿ ಜ್ವರ, ವಾಕರಿಕೆ ಮತ್ತು ನೋವುಳ್ಳ ರೋಗಲಕ್ಷಣವನ್ನು ಹೊಂದಿರುತ್ತದೆ ಹಾಗೂ ಸಾಮಾನ್ಯವಾಗಿ ಸ್ವಲ್ಪ ದಿನಗಳ ನಂತರ ಕಡಿಮೆಯಾಗುತ್ತದೆ. ಕೆಲವು ರೋಗಿಗಳಲ್ಲಿ ನಂಜಿನ ಹಂತಗಳೂ ಕಂಡುಬರುತ್ತಿದ್ದು, ಇದರಿಂದಾಗಿ ಜಾಂಡೀಸ್ಗೆ ತುತ್ತಾಗಿ ಪಿತ್ತಜನಕಾಂಗವು ಹಾನಿಗೊಂಡು ರೋಗಿಯು ಸಾವನ್ನಪ್ಪಬಹುದಾಗಿದೆ. ರಕ್ತಸ್ರಾವವು ಹೆಚ್ಚುವ ಕಾರಣದಿಂದಾಗಿ ಕಾಮಾಲೆಯನ್ನು ಹೆಮೋರೇಜಿಕ್ ಜ್ವರಗಳ ಗುಂಪಿಗೆ ಸೇರಿಸಲಾಗಿದೆ. WHOದ ಅಂದಾಜಿನಂತೆ ಪ್ರತಿ ವರ್ಷ ಚುಚ್ಚುಮದ್ದು ಹಾಕದ ಜನಸಂಖ್ಯೆಯಲ್ಲಿ ೩೦,೦೦೦ ಜನರು ಕಾಮಾಲೆಯಿಂದಾಗಿ ಸಾವನ್ನಪ್ಪುತ್ತಿದ್ದು, ೨೦೦,೦೦೦ ಜನರು ರೋಗಪೀಡಿತರಾಗುತ್ತಿದ್ದಾರೆ. ಇದರಲ್ಲಿ ಶೇ ೯೦ ರಷ್ಟು ಸೋಂಕು ಆಫ್ರಿಕಾವೊಂದರಲ್ಲೇ ಕಂಡುಬರುತ್ತಿದೆ.

೨೦ನೇ ಶತಮಾನದಲ್ಲಿ ಕಾಮಾಲೆಗೆ ಸುರಕ್ಷಿತ ಹಾಗೂ ಪರಿಣಾಮಕಾರಿ ಚುಚ್ಚುಮದ್ದು ಕಂಡುಹಿಡಿಯಲಾಯಿತು. ಕೆಲವು ರಾಷ್ಟ್ರಗಳು ಪ್ರವಾಸಿಗರಿಗೆ ಕಾಮಾಲೆ ಚುಚ್ಚುಮದ್ದನ್ನು ಅಗತ್ಯವಾಗಿಸಿವೆ. ಕಾಮಾಲೆಗೆ ನಿರ್ದಿಷ್ಟ ಔಷಧಿಯಿಲ್ಲವಾದರೂ, ರೋಗ ಹರಡುವ ಸೊಳ್ಳೆಗಳ ಪ್ರಮಾಣವನ್ನು ಇಳಿಸುವುದೂ ಸೇರಿದಂತೆ ಚುಚ್ಚುಮದ್ದು ಕಾರ್ಯಕ್ರಮಗಳು ಅತ್ಯಂತ ಮಹತ್ವದ್ದಾಗಿವೆ. ೧೯೮೦ರಿಂದ ಈಚೆಗೆ ಈ ಕಾಮಾಲೆಯ ಹಲವಾರು ಪ್ರಕರಣಗಳು ಕಂಡುಬರುತ್ತಿದ್ದು ಇದನ್ನು ಮರುಹುಟ್ಟು ಪಡೆದ ಕಾಯಿಲೆಯೆಂದು ಪರಿಗಣಿಸಲಾಗಿದೆ.

ಕಾಮಾಲೆ ರೋಗಲಕ್ಷಣಗಳು
ಹಸುಗೂಸಿನಲ್ಲಿ ಸಾಮಾನ್ಯ

ಐದಾರು ದಿನಗಳು ದೇಹದೊಳಗೆ ಚಟುವಟಿಕೆಯಾಗಿದ್ದು ಒಮ್ಮೆಲೆ ಕಾಮಾಲೆಯು ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಕೇವಲ ಇದು ಜ್ವರ, ತಲೆನೋವು, ಬೆನ್ನು ನೋವು, ಚಳಿ, ಹಸಿವಿಲ್ಲದಿರುವಿಕೆ, ವಾಕರಿಕೆ ಮತ್ತು ವಾಂತಿಯನ್ನು ಉಂಟುಮಾಡುತ್ತದೆ. ಈ ಸನ್ನಿವೇಶಗಳಲ್ಲಿ ಸೋಂಕು ಕೇವಲ ಮೂರು ಅಥವಾ ನಾಲ್ಕು ದಿನಗಳವರೆಗೆ ಇರುತ್ತದೆ. ೧೫% ರೋಗಿಗಳು ಪುನರಾವರ್ತಿತ ಜ್ವರದೊಂದಿಗೆ ರೋಗದ ನಂಜಿನ ಎರಡನೇ ಘಟ್ಟವನ್ನು ತಲುಪುತ್ತಾರೆ. ಇದರಿಂದಾಗಿ ಪಿತ್ತಜನಕಾಂಗ ಹಾನಿಗೊಂಡು ಕಿಬ್ಬೊಟ್ಟೆಯ ನೋವಿನೊಂದಿಗ ಕಾಮಾಲೆಗೆ ಕಾರಣವಾಗುತ್ತದೆ. ಬಾಯಿ, ಕಣ್ಣು ಹಾಗೂ ಜಠರ ಕರುಳು ವ್ಯೂಹದಲ್ಲಿನ ರಕ್ತಸ್ರಾವವು ರಕ್ತವಾಂತಿಗೆ ಕಾರಣವಾಗುತ್ತದೆ.

ಈ ನಂಜಿನ ಘಟ್ಟವು ಶೇಕಡಾ ೨೦ ಸಂದರ್ಭಗಳಲ್ಲಿ ಮಾರಕವಾಗಿದೆ.

ಈ ಸೋಂಕಿನಿಂದ ಬದುಕುಳಿದವರು ಜೀವನಪರ್ಯಂತ ಇದರಿಂದ ರಕ್ಷಿತರಾಗಿರಬೇಕು ಮತ್ತು ಇದರಿಂದ ಯಾವುದೇ ಇನ್ನುಳಿದ ಅಂಗಗಳು ಹಾನಿಗೊಳಗಾಗಿರುವುದಿಲ್ಲ.

ಕಾಮಾಲೆಯ ವೈಯುಕ್ತಿಕ ನಿಯಂತ್ರಣದಲ್ಲಿ ಲಸಿಕೆಗಳ ಪಡೆಯುವಿಕೆ ಅಲ್ಲದೆ ಕಾಮಾಲೆಯ ಇರುವ ವ್ಯಾಧಿ ಪ್ರದೇಶದಲ್ಲಿ ಸೊಳ್ಳೆಗಳ ಕಡಿತದಿಂದ ತಪ್ಪಿಸಿಕೊಳ್ಳುವುದು ಮುಖ್ಯ. ಕಾಮಾಲೆಯ ನಿಯಂತ್ರಣಕ್ಕೆ ಸಂಸ್ಥೆಗಳು ಕೈಗೊಂಡಿರುವ ಕ್ರಮಗಳೆಂದರೆ ಲಸಿಕೆಗಳ ಕಾರ್ಯಕ್ರಮ ಹಾಗೂ ಸೊಳ್ಳೆಗಳನ್ನು ತಡೆಗಟ್ಟುವ ಕ್ರಮಗಳು.

ರೋಗ ಹರಡಿರುವ ಪ್ರದೇಶಗಳಲ್ಲಿ ಪ್ರವಾಸ ಮಾಡ ಬೇಕಾದರೆ, ಲಸಿಕೆಯನ್ನು ಮುಖ್ಯವಾಗಿ ಶಿಫಾರಸು ಮಾಡಲಾಗುತ್ತೆ ಕಾರಣ ಸ್ಥಳೀಯವಲ್ಲದ ಜನರು ತೀವ್ರವಾದ ಪ್ರಸಂಗಗಳಲ್ಲಿ ಕಾಮಾಲೆಯ ಗುರಿಯಾಗುತ್ತಾರೆ. ೯೫% ಲಸಿಕೆ ಪಡೆದ ಜನರಲ್ಲಿ ಸುರಕ್ಷತೆಯ ಪರಿಣಾಮ ಲಸಿಕೆಯ ೧೦ ದಿನಗಳ ನಂತರ ಸ್ಥಾಪಿತವಾಗುತ್ತದೆ ಹಾಗೂ ಕನಿಷ್ಟವಾಗಿ ೧೦ ವರುಷಗಳವರೆಗೆ ಇದರ ಪ್ರಭಾವ ಇರುತ್ತದೆ (ಕೆಲವು ಸಲ ೩೦ ವರುಷಗಳ ನಂತರವೂ ಕೂಡ, ೮೧% ರೋಗಿಗಳು ರೋಗ ನಿರೋಧಕತೆಯನ್ನು ಉಳಿಸಿಕೊಂಡಿರುತ್ತಾರೆ). ತಿಳಿಗೊಂಡಿಸಿದ ನೇರ ಲಸಿಕೆಯನ್ನು ೧೯೩೭ರಲ್ಲಿ ಮ್ಯಾಕ್ಸ್ ಥೈಲರ್ ಅವರು ಘಾನಾದ ಒಬ್ಬ ರೋಗ ಪೀಡಿತನಿಂದ ವೃದ್ಧಿಪಡಿಸಿದರು ಹಾಗೂ ಇದು ಕೋಳಿಯ ಮೊಟ್ಟೆಗಳಲ್ಲಿ ಉತ್ಪನ್ನವಾಗುತ್ತದೆ. ವ್ಯಾಧಿ ಪ್ರದೇಶಗಳಲ್ಲಿನ ಜನರು ಶಿಶುಗಳ ಜನನದ ನಂತರ ೯ ಹಾಗೂ ೧೨ನೇಯ ತಿಂಗಳ ಮಧ್ಯದಲ್ಲಿ ಲಸಿಕೆಗಳನ್ನು WHO ಶಿಫಾರಸ್ಸು ಮಾಡುತ್ತದೆ.

ಸುಮಾರು ೨೦% ಪ್ರಸಂಗಗಳಲ್ಲಿ, ತೀವ್ರವಲ್ಲದ ನೆಗಡಿ ಮತ್ತು ಜ್ವರದಂತಹ ಲಕ್ಷಣಗಳು ಬೆಳೆದುಕೊಳ್ಳಬಹುದು. ಅಪರೂಪದ ಸಂದರ್ಭದಲ್ಲಿ ೨೦೦,೦೦೦ಯಿಂದ ೩೦೦,೦೦೦ಗಳಲ್ಲಿ ಒಂದರಗಿಂತ ಕಡಿಮೆ ಸಲ ಲಸಿಕೆಯು YEL-AVD ಗೆ ಕಾರಣವಾಗಬಹುದು ಮತ್ತು ಇದು ೬೦% ಎಲ್ಲ ಸಂದರ್ಭಗಳಲ್ಲಿ ಮಾರಕವಾಗಿರುತ್ತದೆ. ಇದು ಸಾಮಾನ್ಯವಾಗಿ ರೋಗ ನಿರೋಧಕ ಪದ್ಧತಿಯಲ್ಲಿ ಒಂದು ಆನುವಂಶಿಕ ದೋಷದ ಕಾರಣವಿರಬಹುದು. ಆದರೆ ಕೆಲವು ಲಸಿಕೆಗಳ ಕಾರ್ಯಾಚರಣೆಯಲ್ಲಿ, ೨೦ ಪಟ್ಟು ಹೆಚ್ಚು ಪುನರಾವರ್ತನೆಯ ಮಟ್ಟ ವರದಿಯಾಗಿದೆ. ವಯಸ್ಸು ಒಂದು ಮುಖ್ಯವಾದ ಅಪಾಯಕಾರಿ ಕಾರಣವಾಗಿರಬಹುದು. ಮಕ್ಕಳಲ್ಲಿ ಪ್ರತಿ ೧೦ ಮಿಲಿಯನ್ ಲಸಿಕೆಗಳಲ್ಲಿ ಒಂದರಗಿಂತ ಕಡಿಮೆ ಸಂಕೀರ್ಣಗೊಂಡ ಪ್ರಸಂಗವಿರುತ್ತದೆ. ಇನ್ನೊಂದು ಸಾಧ್ಯವಾದ ಪಾರ್ಶ್ವ ಪರಿಣಾಮ ಎಂದರೆ ನರಗಳ ವ್ಯೂಹದಲ್ಲಿ ಆಗಬಹುದಾದ ಸೋಂಕು, ಇದು ೨೦೦,೦೦೦ರಿಂದ ೩೦೦,೦೦೦ರಷ್ಟು ಜನರಲ್ಲಿ ಒಬ್ಬರಿಗಾಗಬಹುದು. ಈ ಸೋಂಕಿಂದ YEL-AND (ಕಾಮಾಲೆಯ ಲಸಿಕೆಗೆ ಸಂಬಂಧಿಸಿದ ನರಗಳ ಜೀವಕೋಶಕದ ರೋಗ ) ಉಂಟಾಗಬಹುದು, ಮುಂದೆ ಇದು ಮೆನಿಂಗೊಯೆನ್ಸೆಪ್‌ಲೈಟಿಸ್‌ಗೆ ದಾರಿಯಾಗಬಹುದು ಹಾಗೂ ೫%ನಷ್ಟು ಎಲ್ಲ ಸಂಧರ್ಭಗಳಲ್ಲಿ ಇದು ಮಾರಣವಾಗಿರುತ್ತದೆ.

ಕಾಮಾಲೆ ರೋಗಲಕ್ಷಣಗಳು
ಲಸಿಕೆ

೨೦೦೯ರಲ್ಲಿ ಕಾಮಾಲೆಯ ವಿರುದ್ಧ ಅತಿ ಬೃಹತ್ತಾದ ಲಸಿಕೆಯ ಕಾರ್ಯಕ್ರಮ ಪಶ್ಚಿಮ ಆಫ್ರಿಕಾದಲ್ಲಿ ಆರಂಭಗೊಂಡಿತು, ವಿಶೇಷವಾಗಿ ಬೆನಿನ್, ಲಿಬೇರಿಯ ಹಾಗೂ ಸೈರಿಯ ಲಿಯೊನ್‌ಗಳಲ್ಲಿ. ಇದು ೨೦೧೫ರಲ್ಲಿ ಪೂರ್ಣಗೊಂಡಾಗ, ೧೨ ಮಿಲಿಯನ್‌ಗಿಂತ ಹೆಚ್ಚು ಜನರು ಈ ಕಾಯಿಲೆಯ ವಿರುದ್ಧ ಲಸಿಕೆಯನ್ನು ಪಡೆದಿರುತ್ತಾರೆ. ವಲ್ಡ್ ಹೆಲ್ತ್ ಒರ್ಗನೈಸೇಷನ್ ಅವರ ಅನುಸಾರ, ಈ ಸಮೂಹ ಲಸಿಕೆಯ ಕಾರ್ಯಕ್ರಮ ಕಾಮಾಲೆಯನ್ನು ಸಂಪೂರ್ಣವಾಗಿ ತೊಲಗಿಸುವುದಿಲ್ಲ ಕಾರಣ ಈಗಾಗಲೆ ಹಲವು ದೇಶಗಳ ನಗರ ಪ್ರದೇಶಗಳಲ್ಲಿನ ಸೊಳ್ಳೆಗಳು ಹೆಚ್ಚು ಸಂಖ್ಯೆಗಳಲ್ಲಿ ಸೋಂಕಿತಗೊಂಡಿವೆ. ಆದರೆ ನಿಶ್ಚಿತವಾಗಿ ಇದು ಸೋಂಕಿತಗೊಂಡ ಜನರ ಸಂಖ್ಯೆಯನ್ನು ಕಡಿಮೆಗೊಳಿಸುತ್ತದೆ. ಅದೇನೇ ಇದ್ದರೂ, WHO ತಮ್ಮ ಲಸಿಕೆಯ ಕಾರ್ಯಾಚರಣೆಯನ್ನು ಇನ್ನು ಐದು ಆಫ್ರಿಕನ್ ದೇಶಗಳಲ್ಲಿ ಮುಂದುವರಿಸಲು ಯೋಜಿಸಿದೆ – ಮಧ್ಯ ಆಫ್ರಿಕನ್ ಗಣರಾಜ್ಯ, ಘಾನಾ, ಗಿನಿಯ, ಐವರಿ ಸಮುದ್ರತೀರ ಹಾಗೂ ನೈಜಿರೀಯ – ಮತ್ತು ಸಂಸ್ಥೆಗೆ ಇನ್ನಷ್ಟು ಹಣಸಹಾಯ ದೊರಕಿಲ್ಲದಿದ್ದಲ್ಲಿ ಸುಮಾರು ೧೬೦ ಮಿಲಿಯನ್ ಖಂಡದಲ್ಲಿನ ಜನರು ಅಪಾಯದಲ್ಲಿದ್ದಾರೆ ಎಂದು ಹೇಳಿದೆ.

ಏಷ್ಯಾದ ಕೆಲವು ದೇಶಗಳು ಕಾಮಾಲೆ ಸಾಂಕ್ರಾಮಿಕ ರೋಗದ ಅಪಾಯದಲ್ಲಿದೆ (ಕಾಮಾಲೆಯನ್ನು ಹರಡುವ ಸಾಮಾರ್ಥ್ಯವಿರುವ ಸೊಳ್ಳೆಗಳು ಮತ್ತು ಸಂವೇದನಾಶೀಲ ಮಂಗಗಳಿವೆ), ಆದರೂ ಸಹ ಇದುವರೆಗೆ ಅಲ್ಲಿ ಈ ರೋಗ ಉಂಟಾಗಲಿಲ್ಲ. ಕೆಲವು ದೇಶಗಳು ವೈರಸ್‍ನ್ನು ತಡೆಗಟ್ಟಲು ಕಾಮಾಲೆಯಿರುವ ಪ್ರದೇಶದಿಂದ ಬರುವ ಜನರಿಗೆ ಮೊದಲೇ ಚುಚುಮದ್ದನ್ನು ತೆಗೆದುಕೊಳ್ಳುವಂತೆ ಆದೇಶ ನೀಡುತ್ತವೆ. ಇದು ಚುಚುಮದ್ದು ಹಾಕಿಸಿಕೊಂಡ ಹತ್ತು ದಿನಗಳ ನಂತರ ಮತ್ತು ಹತ್ತು ವರ್ಷಗಳವರೆಗೆ ಉಪಯುಕ್ತವಾಗಿದೆ ಎಂದು ಚುಚ್ಚುಮದ್ದಿನ ಪ್ರಮಾಣಪತ್ರದಲ್ಲಿ ಸಾಬೀತುಪಡಿಸಿದೆ. ಕಾಮಾಲೆ ರೋಗದ ಚುಚ್ಚುಮದ್ದಿನ ಅವಶ್ಯಕತೆಯಿರುವ ದೇಶಗಳ ಪಟ್ಟಿಯನ್ನು ಡಬ್ಲುಎಚ್‍ಒ ಪ್ರಕಟಗೊಳಿಸಿದೆ. ಕೆಲವು ಕಾರಣಗಳಿಂದ ಚುಚ್ಚುಮದ್ದು ಹಾಕುವುದು ಸಾಧ್ಯವಾಗದೆ ಹೋದರೆ, ವಿತರಣೆ ಸಾಧ್ಯವಿದೆ. ಇಂತಹ ಸಂದರ್ಭಗಳಲ್ಲಿ ಡಬ್ಲುಎಚ್‍ಒದಿಂದ ಮಾನ್ಯತೆ ಪಡೆದ ಚುಚ್ಚುಮದ್ದು ಕೇಂದ್ರದ ವಿನಾಯಿತಿ ಪತ್ರದ ಅವಶ್ಯಕತೆಯಿದೆ.

ಆದಾಗ್ಯೂ ಸಾಂಕ್ರಾಮಿಕವಾಗಿ ಕಾಮಾಲೆ ಉಂಟಾಗುವ ೪೪ ರಲ್ಲಿ ೩೨ ದೇಶಗಳು ಚುಚ್ಚುಮದ್ದು ಹಾಕಿಸುವ ಕಾರ್ಯಕ್ರಮಗಳನ್ನು ಹೊಂದಿವೆ, ಇಂತಹ ಬಹಳ ದೇಶಗಳಲ್ಲಿ ಜನಸಂಖ್ಯೆಯ ೫೦% ಕ್ಕಿಂತ ಕಡಿಮೆ ಜನ ಚುಚ್ಚುಮದ್ದು ಹಾಕಿಸಿಕೊಂಡವರಾಗಿದ್ದಾರೆ.

ಫ್ಲೆವಿವೈರಸ್ ಕಾರಣದಿಂದ ಉಂಟಾಗುವ ಎಲ್ಲಾ ರೋಗಗಳಂತೆ ಕಾಮಾಲೆಗೆ ಯಾವುದೇ ಕಾಸೆಟಿವ್ ಚಿಕಿತ್ಸೆ ಇಲ್ಲ. ಆಸ್ಪತ್ರೆಗೆ ಹೋಗುವುದು ತುಂಬಾ ಒಳ್ಳೆಯದು ಮತ್ತು ತೀವ್ರವಾದ ಎಚ್ಚರಿಕೆ ಅವಶ್ಯಕವಾಗಿರಬಹುದು ಏಕೆಂದರೆ ಕೆಲವು ಜನರಲ್ಲಿ ತ್ವರಿತವಾಗಿ ಉಲ್ಬಣಿಸುತ್ತದೆ. ರೋಗದ ಚಿಕಿತ್ಸೆಗಳ ವಿವಿಧ ವಿಧಾನಗಳು ಹೆಚ್ಚು ಯಶಸ್ಸನ್ನು ಕಂಡಿಲ್ಲ; ನೇರವಲ್ಲದ ರೊಗನಿರೋಧಕವನ್ನು ರೋಗ ಲಕ್ಷಣಗಳು ಕಂಡುಬಂದ ನಂತರ ಕೊಟ್ಟರೆ ಬಹುಶಃ ಯಾವುದೇ ಪರಿಣಾಮಗಳಿಲ್ಲದೆ ರೋಗವನ್ನು ತಡೆಯಬಹುದಾಗಿದೆ. ರಿಬವರಿನ್ ಮತ್ತು ಇತರ ಎಂಟಿವೈರಲ್ ಔಷಧಿಗಳು ಮತ್ತು ಪ್ರತಿಬಂಧಕ ಪ್ರೋಟೀನಿನ ಜೊತೆಗಿನ ಚಿಕಿತ್ಸೆ ಸಹ ರೋಗಿಗಳಲ್ಲಿ ಸಕಾರಾತ್ಮಕ ಪರಿಣಾಮ ಬೀರಲಿಲ್ಲ. ಪುನರ್ಜಲೀಕರಣ ಮತ್ತು ಪೆರಸಿತಮೊಲ್ ನಂತಹ ನೋವು ನಿವಾರಕ ಔಷಧಿಗಳನ್ನು ಲಕ್ಷಣಸೂಚಕ ಚಿಕಿತ್ಸೆ ಒಳಗೊಂಡಿದೆ. ಅಸೆತಿಲ್ಸೆಲಿಸಿಲಿಕ್ ಎಸಿಡ್ ಕೊಡಲೇಬಾರದು ಏಕೆಂದರೆ ಇದರ ಹ್ಯುಮೊಡಿಲೇಟಿಂಗ್ ಪರಿಣಾಮದಿಂದ ಇದು ಕಾಮಾಲೆಯ ಕಾರಣದಿಂದ ಉಂಟಾಗುವ ಆಂತರಿಕ ರಕ್ತಸ್ರಾವದ ಸಂದರ್ಭದಲ್ಲಿ ತುಂಬಾ ಹಾನಿಕಾರಕ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಮಧುರೈ

ಮಧುರೈ ನಾಯಕ್ ರಾಜವಂಶ

ಅಯೋಧ್ಯೆಯ ರಾಮಮಂದಿರ

ಅಯೋಧ್ಯೆಯ ರಾಮಮಂದಿರ ಸಂಕ್ರಾಂತಿಗೆ ಪೂರ್ಣಗೊಳ್ಳಲಿದೆ