in ,

ಜೇನು ತುಪ್ಪದ ಉಪಯೋಗಗಳು

ಜೇನು ತುಪ್ಪದ ಉಪಯೋಗ
ಜೇನು ತುಪ್ಪದ ಉಪಯೋಗ

ಜೇನುತುಪ್ಪ ಜೇನ್ನೊಣಗಳು ಉತ್ಪಾದಿಸುವ ಒಂದು ಸಿಹಿಯಾದ ಅತಿಮಂದ ದ್ರವ. ಜೇನಿನ ಮೂಲವಸ್ತು ಹೂವುಗಳ ಮಕರಂದ. ನೀರೂ ಸೇರಿದಂತೆ ಇತರ ಯಾವುದೇ ವಸ್ತುವೂ ಸೇರಿಸಲ್ಪಡದೆ ಇರುವ ಜೇನು ಶುದ್ಧ ಜೇನೆನಿಸಿಕೊಳ್ಳುತ್ತದೆ. ಜೇನ್ನೊಣಗಳು ಹೊರತಾಗಿ ಇತರ ಕೆಲವು ಜಾತಿಯ ಕೀಟಗಳು ಸಹ ಜೇನನ್ನು ಉತ್ಪಾದಿಸುತ್ತವೆ. ಪ್ರತಿ ಕೀಟದ ಜೇನು ವಿಭಿನ್ನ ಗುಣಗಳನ್ನು ಹೊಂದಿರುತ್ತದೆ. ಜೇನು ಸಾಮಾನ್ಯ ಸಕ್ಕರೆಗಿಂತ ಹೆಚ್ಚು ಸಿಹಿಯಾಗಿರುವುದು. ಅಲ್ಲದೆ ಜೇನು ಕೆಲ ವಿಶಿಷ್ಟ ರಾಸಾಯನಿಕ ಗುಣಗಳನ್ನು ಹೊಂದಿದ್ದು ಬೇಕರಿ ಉತ್ಪನ್ನಗಳಲ್ಲಿ ಜನಪ್ರಿಯವಾಗಿದೆ. ಜೇನು ಅತಿ ಮಂದದ್ರವವಾಗಿದ್ದು ನೀರಿನಂಶ ಬಲು ಕಡಿಮೆಯಿರುವುದರಿಂದ ಇದರಲ್ಲಿ ಹೆಚ್ಚಿನ ಸೂಕ್ಷ್ಮಜೀವಿಗಳು ಉತ್ಪತ್ತಿಯಾಗಲಾರವು. ಇದರಿಂದ ಜೇನು ಬಲು ದೀರ್ಘಕಾಲ ಕೆಡದೆ ಉಳಿಯಬಲ್ಲುದು. ಆದರೆ ಅತಿ ಹಳೆಯ ಜೇನಿನಲ್ಲಿ ಜಡಾವಸ್ಥೆಯಲ್ಲಿರುವ ಎಂಡೋಸ್ಪೋರ್ ಎಂಬ ಸೂಕ್ಷ್ಮಜೀವಿಗಳಿರುವ ಸಾಧ್ಯತೆಯಿದ್ದು ಶಿಶುಗಳಿಗೆ ಇವು ಅಪಾಯವನ್ನುಂಟುಮಾಡಬಲ್ಲವಾಗಿವೆ.

ಜೇನು ತುಪ್ಪದ ಉಪಯೋಗಗಳು
ಜೇನುಗೂಡು

ಜೇನನ್ನು ನೀವು ಎಷ್ಟೋ ವರ್ಷಗಳ ಕಾಲ ಕೆಡದಂತೆ ಜೋಪಾನವಾಗಿಟ್ಟುಕೊಂಡು ನಮ್ಮ ಅಗತ್ಯಗಳಿಗೆ ಬಳಸಬಹುದು. ಆದರೆ ಈ ಜೇನಿನಲ್ಲಿ ನೂರಾರು ರೀತಿಯ ಆರೋಗ್ಯಕರವಾದ ವಿಷಯಗಳಿವೆ.

ವೈದ್ಯಕೀಯ ಮೌಲ್ಯದ ಜೊತೆಗೆ ಗುರುತಿಸಿಕೊಂಡ ಜೇನುತುಪ್ಪ ಅಂದಿನ ಕಾಲದ ಆಯುರ್ವೇದದ ಪ್ರಮುಖ ಭಾಗವಾಗಿದ್ದಷ್ಟೇ ಅಲ್ಲದೇ ಇಂದಿನ ಆಧುನಿಕ ಕಾಲದ ಕಾಯಿಲೆ ದೂರ ಮಾಡುವ ಕೆಲಸದಲ್ಲಿ ನಿರತನಾಗಿರುವ ಪ್ರಾಮಾಣಿಕ ವ್ಯಕ್ತಿ ಎಂದರೆ ತಪ್ಪಾಗುವುದಿಲ್ಲ.

ಜೇನುತುಪ್ಪವು ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಏಕೆಂದರೆ ವಿಟಮಿನ್ ಎ, ಬಿ, ಸಿ ಇದರಲ್ಲಿದೆ. ಕಬ್ಬಿಣ, ಕ್ಯಾಲ್ಸಿಯಂ ಮತ್ತು ಅಯೋಡಿನ್ ನಂತಹ ಪೌಷ್ಟಿಕಾಂಶಗಳು ಜೇನುತುಪ್ಪದಲ್ಲಿ ಕಂಡುಬರುತ್ತವೆ, ಇದು ನಮಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಪರಿಹಾರವನ್ನು ನೀಡುತ್ತದೆ, ಇದು ನಮ್ಮ ದೇಹದ ಮೇಲೆ ಬ್ಯಾಕ್ಟೀರಿಯಾ ಬೆಳೆಯಲು ಬಿಡುವುದಿಲ್ಲ ಏಕೆಂದರೆ ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಸೂಕ್ಷ್ಮಜೀವಿ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ, ಗಾಯಗೊಂಡಾಗ ಅದನ್ನು ಸ್ವಚ್ಛಗೊಳಿಸಲು ಸಹ ಬಳಸಲಾಗುತ್ತದೆ.

ದಿನಕ್ಕೆ ಕೇವಲ ಒಂದರಿಂದ ಎರಡು ಚಮಚದಷ್ಟು ಮಾತ್ರ ಹಣ್ಣಿನೊಂದಿಗೆ ಅಥವಾ ನೇರವಾಗಿ ಈ ತುಪ್ಪವನ್ನು ಸೇವಿಸಬೇಕು.ಮುಖ್ಯವಾದ ವಿಚಾರ ಏನೆಂದರೆ ಈ ಜೇನುತುಪ್ಪ ವನ್ನು ಬೇಸಿಗೆ ಕಾಲದಲ್ಲಿ ತೆಗೆದುಕೊಂಡರೆ ದೇಹದ ಉಷ್ಣತೆ ಯು ಹೆಚ್ಚಿ ಪ್ರತಿಕೂಲ ಪರಿಣಾಮವನ್ನು ಬೀರಬಹುದು.

ಕೂದಲಿನ ಬೆಳವಣಿಗೆಗೆ ಪೂರಕವಾಗಿದೆ ಹಾಗೂ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.

ಜೊತೆಗೆ ನಮ್ಮ ಚರ್ಮವನ್ನು ಸಂರಕ್ಷಿಸುವುದರ ಜೊತೆಗೆ ಚರ್ಮಕ್ಕೆ ಕಾಂತಿಯನ್ನು ಒದಗಿಸುತ್ತದೆ.

ಇನ್ನೂ ಕೆಲವರು ಬಾಯಿಹುಣ್ಣಿನಿಂದ ನರಳುತ್ತಿರುತ್ತಾರೆ. ಅಂತವರಿಗೆ ಈ ಜೇನುತುಪ್ಪವು ರಾಮಬಾಣವಾಗಿ ಸಹಕರಿಸುತ್ತದೆ.

ಜೇನು ತುಪ್ಪದ ಉಪಯೋಗಗಳು
ಶುಂಠಿ ಮತ್ತು ಜೇನು ಶೀತ ಕಫಕ್ಕೆ ಒಳ್ಳೆಯದು

ಜೇನುತುಪ್ಪವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ರಕ್ತಕಣಗಳ ಮೇಲೆ ಪ್ರಯೋಜನಕಾರಿ ಪರಿಣಾಮ ಬೀರುತ್ತದೆ ಮತ್ತು ರಕ್ತದ ಹಿಮೋಗ್ಲೋಬಿನ್ ಮಟ್ಟವು ಹೆಚ್ಚಾಗುತ್ತದೆ. ಆ ಮೂಲಕ ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ. ಯೋಗಾಭ್ಯಾಸ ಮಾಡುವ ಮೊದಲು ನೀರಿನಲ್ಲಿ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ದೈಹಿಕ ಸ್ಥಿತಿ ಉತ್ತಮಗೊಳ್ಳುತ್ತದೆ. ಇದರ ಜೊತೆಗೆ ದೇಹದ ತೂಕ ನಿರ್ವಹಣೆಗೆ ಅನುಕೂಲವಾಗಿದೆ.

ನೆಲ್ಲಿಕಾಯಿ ಪುಡಿಯನ್ನು ಈ ಜೇನುತುಪ್ಪ ದೊಂದಿಗೆ ಸೇರಿಸಿ ಲೇಪದಂತೆ ಹಚ್ಚಿಕೊಂಡರೆ ಬಾಯಿ ಹುಣ್ಣು ತಕ್ಷಣವೇ ವಾಸಿಯಾಗುತ್ತದೆ.

ಸೂರ್ಯನ ಬೆಳಕಿನಿಂದಾಗಿ, ಚರ್ಮದ ಮೇಲೆ ಕಪ್ಪು ಕಲೆ ಉಂಟಾಗಿದ್ದರೆ, ಈ ಸಮಸ್ಯೆಯನ್ನು ನಿವಾರಿಸಲು, ಚರ್ಮದ ಮೇಲೆ ಜೇನುತುಪ್ಪವನ್ನು ಹಚ್ಚಿ, ಇದು ತುಂಬಾ ಪ್ರಯೋಜನಕಾರಿ ಮತ್ತು ಕಪ್ಪುಬಣ್ಣವನ್ನು ತೆಗೆದುಹಾಕುತ್ತದೆ.

ಶುಂಠಿಯನ್ನು ಜೇನುತುಪ್ಪದೊಂದಿಗೆ ಜಜ್ಜಿ ಸೇವಿಸಿದರೆ ಪದೇ ಪದೇ ಉಂಟಾಗುವ ಕಫ, ಕೆಮ್ಮು, ಹಾಗೂ ಉರಿ ಶೀತದಿಂದ ಪಾರಾಗಬಹುದು. ಯಾಕೆಂದರೆ ಜೇನುತುಪ್ಪ ದಲ್ಲಿ ರೋಗ ನಿರೋಧಕ ಶಕ್ತಿ ಇರುವುದರಿಂದ ಅಮೃತದಂತೆ ದೇಹಕ್ಕೆ ಸಹಕರಿಸುತ್ತದೆ.

ಶೀತ ಮತ್ತು ಕೆಮ್ಮಿನ ಚಿಕಿತ್ಸೆ ಅಥವಾ ಚರ್ಮದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ನಾವು ಮನೆಮದ್ದುಗಳ ಬಗ್ಗೆ ಮಾತನಾಡಬೇಕಾದರೆ ಅದರಲ್ಲಿ ಜೇನು ತುಪ್ಪ ಮೊದಲ ಸ್ಥಾನದಲ್ಲಿ ಇರುತ್ತದೆ. ಇದರ ಪ್ರಯೋಜನಗಳನ್ನು ಆಯುರ್ವೇದದಲ್ಲಿ ಗುರುತಿಸಲಾಗಿದೆ ಮತ್ತು ಇದು ಪ್ರತಿ ಹಂತದಲ್ಲಿಯೂ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

ಜೇನು ತುಪ್ಪದ ಉಪಯೋಗಗಳು
ಖಾಲಿ ಹೊಟ್ಟೆಯಲ್ಲಿ ಜೇನು ಸೇವಿಸುವುದು ಉತ್ತಮ

ಜೇನುತುಪ್ಪದಲ್ಲಿರುವ ಉರಿಯೂತ ವಿರೋಧಿ ಅಂಶದಿಂದಾಗಿ ಹೊಟ್ಟೆ ಉಬ್ಬುವುದನ್ನು ಕಡಿಮೆ ಮಾಡುತ್ತದೆ.

ದೇಹದ ಚಯಾಪಚಯ ಕ್ರಿಯೆಗೂ ಈ ಜೇನು ತುಂಬ ಸಹಾಯವಾಗುತ್ತದೆ. ಹೀಗಾಗಿ ಮಾರ್ಕೆಟ್ ನಿಂದ ಜೇನನ್ನು ತೆಗೆದುಕೊಳ್ಳುವ ವೇಳೆ ಆದಷ್ಟು ಕಲಬೆರಕೆ ಇಲ್ಲದ ತುಪ್ಪವನ್ನು ತೆಗೆದುಕೊಳ್ಳಿ.

ಚರ್ಮದ ಸಮಸ್ಯೆಗೆ ಮತ್ತು ತಲೆಯಲ್ಲಿ ಉಂಟಾಗುವ ಹೊಟ್ಟಿನ ನಿವಾರಣೆಗೆ ಜೇನುತುಪ್ಪವನ್ನು ಹಚ್ಚಿ ಮಸಾಜ್ ಮಾಡಿಕೊಳ್ಳುವುದರಿಂದ ತಲೆತುರಿಕೆ ಕಡಿಮೆಯಾಗುತ್ತದೆ. ಜೇನುತುಪ್ಪವನ್ನು ಮುಖಕ್ಕೆ ಹಚ್ಚುವುದರಿಂದ ಕಪ್ಪು ಕಲೆಗಳು ಕೂಡ ದೂರವಾಗುತ್ತದೆ ಮತ್ತು ಮುಖದ ಹೊಳಪು ಹೆಚ್ಚುತ್ತದೆ. ಚಿಕ್ಕ ಮಕ್ಕಳಿಗೂ ಕೂಡ ಜೇನುತುಪ್ಪವನ್ನು ತಿನಿಸಲಾಗುತ್ತದೆ, ಆ ಮೂಲಕ ಮಕ್ಕಳು ಕೆಮ್ಮು ಇಂತಹ ಸಮಸ್ಯೆಗಳಿಲ್ಲದೆ ಚೆನ್ನಾಗಿ ನಿದ್ರೆ ಮಾಡಲು ಸಹಕಾರಿಯಾಗುತ್ತದೆ.

ಒಣ ಖರ್ಜೂರದಲ್ಲಿ ನಾರಿನಂಶ, ಕಾರ್ಬೋಹೈಡ್ರೇಟ್‌ಗಳು, ಕ್ಯಾಲ್ಸಿಯಂ ಮುಂತಾದ ಹಲವು ವಿಧದ ಪೋಷಕಾಂಶಗಳು ಕಂಡುಬರುತ್ತವೆ. ಆದ್ದರಿಂದ ಇವುಗಳನ್ನು ಜೇನುತುಪ್ಪದೊಂದಿಗೆ ಸೇರಿಸಿದಾಗ ಇವೆರಡರ ಗುಣಗಳು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಇದು ಮುಖ್ಯವಾಗಿ ನೆನಪಿನ ಶಕ್ತಿ, ದೈಹಿಕ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ಹಸಿವನ್ನು ಹೆಚ್ಚಿಸುತ್ತದೆ.

ಜೇನು ತುಪ್ಪದ ಉಪಯೋಗಗಳು
ಮುಖದ ಕಾಂತಿಗೆ ಜೇನುತುಪ್ಪ

ದಿನಕ್ಕೆರಡು ಬಾರಿ ಜೇನುತುಪ್ಪ ಮತ್ತು ತಾಜಾ ನಿಂಬೆಯ ರಸವನ್ನು ಮುಖಕ್ಕೆ ಹಚ್ಚಿ 20 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯುವುದರಿಂದ ಮುಖದ ಮೇಲಿರುವ ಕಪ್ಪು ಕಲೆಗಳನ್ನು ತೆಗೆದುಹಾಕಬಹುದು.

ಚರ್ಮದ ಮೇಲೆ ಕಂಡುಬರುವ ಅನಗತ್ಯ ಕೂದಲನ್ನು ತೆಗೆದುಹಾಕಲು, ನಿಂಬೆ ರಸದೊಂದಿಗೆ ಜೇನುತುಪ್ಪವನ್ನು ಮಿಶ್ರಣ ಮಾಡಿ ಮತ್ತು ಚರ್ಮದ ಮೇಲೆ ಲೇಪಿಸಿ,ಇದು ಅನಗತ್ಯ ಕೂದಲನ್ನು ತೆಗೆದುಹಾಕುತ್ತದೆ ಮತ್ತು ಚರ್ಮದ ಕೂದಲನ್ನು ಮೃದುಗೊಳಿಸುತ್ತದೆ.

ಜೇನುತುಪ್ಪವು ಇಷ್ಟೆಲ್ಲಾ ಆರೋಗ್ಯಕರ ಗುಣಗಳನ್ನು ಹೊಂದಿದ್ದರೂ ಸಹ 12 ತಿಂಗಳು ಆಗುವವರಿಗೂ ಮಕ್ಕಳಿಗೆ ತಿನ್ನಲು ಕೊಡಬೇಡಿ. ಇದು ಶಿಶುಗಳ ಬೊಟುಲಿಸಂ ಎಂಬ ಖಾಯಿಲೆಗೆ ದಾರಿಮಾಡಿಕೊಡುವುದಲ್ಲದೇ ಇದರಲ್ಲಿ ಉತ್ಪತ್ತಿಯಾಗುವ ವಿಷಾಣುಗಳು ಸ್ನಾಯುಗಳ ದೌರ್ಬಲ್ಯ ಮತ್ತು ಉಸಿರಾಟದ ತೊಂದರೆಗೆ ದಾರಿ ಮಾಡಿಕೊಡುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಬಾಲಾಜಿ ಬಾಜಿ ರಾವ್

ಬಾಲಾಜಿ ಬಾಜಿ ರಾವ್, 8 ಡಿಸೆಂಬರ್ 1720 ರಂದು ಜನಿಸಿದ್ದು

ಅಲೋಪತಿ ಮತ್ತು ಹೋಮಿಯೋಪತಿ

ಅಲೋಪತಿ ಮತ್ತು ಹೋಮಿಯೋಪತಿ ನಡುವಿನ  ವ್ಯತ್ಯಾಸಗಳು