ಕಿಬ್ಬೊಟ್ಟೆಯ ನೋವು , ಹೊಟ್ಟೆ ನೋವು ಎಂದೂ ಕರೆಯಲ್ಪಡುತ್ತದೆ , ಇದು ಗಂಭೀರವಲ್ಲದ ಮತ್ತು ಗಂಭೀರವಾದ ವೈದ್ಯಕೀಯ ಸಮಸ್ಯೆಗಳಿಗೆ ಸಂಬಂಧಿಸಿದ ರೋಗಲಕ್ಷಣವಾಗಿದೆ.
ಹೊಟ್ಟೆ ನೋವು ಎಂಬುದು ಲಿಂಗ ಅಥವಾ ವಯಸ್ಸಿನ ಭೇದವಿಲ್ಲದೆ, ಬಹುತೇಕ ಪ್ರತಿಯೊಬ್ಬ ವ್ಯಕ್ತಿಗೂ ಸಂಭವಿಸುವ ಒಂದು ಆರೋಗ್ಯ ಸಮಸ್ಯೆ. ಇದು ವಯಸ್ಕರು ಮತ್ತು ಮಕ್ಕಳಲ್ಲಿ ಆಗಾಗ್ಗೆ ಕಂಡುಬರುತ್ತದೆ. ಹೊಟ್ಟೆ ನೋವು ಒಂದು ಸರಳ ಶೀತ, ಜೊತೆಗೆ ಫುಡ್ ವಿಷಪೂರಿತ ಅಥವಾ ಗಂಭೀರ ಕಾಯಿಲೆಗಳಿಂದ ಉಂಟಾಗಬಹುದು. ಆದ್ದರಿಂದ, ಕಿಬ್ಬೊಟ್ಟೆನೋವಿನ ತೀವ್ರತೆ ಮತ್ತು ನಿರಂತರತೆ ಬಹಳ ಮುಖ್ಯ.
ಹೊಟ್ಟೆ ನೋವು ಅನೇಕ ಕಾರಣಗಳಿಂದ ನಮಗೆ ಎದುರಾಗುತ್ತದೆ. ಕೆಲವರಿಗೆ ಹಸಿವೆ ತಡೆಯಲಾಗದೆ ಊಟ ಹೆಚ್ಚಾಗಿ ಮಾಡಿ ಹೊಟ್ಟೆ ನೋವು ಬಂದರೆ, ಇನ್ನೂ ಕೆಲವರಿಗೆ ಹೊಟ್ಟೆ ಹಸಿದು ಹಸಿದು ನೋವು ಬರುತ್ತದೆ. ಇದರ ಜೊತೆಯಲ್ಲಿ ಇನ್ನೂ ಅನೇಕ ಪ್ರಮುಖ ಕಾರಣಗಳಾದ ಮಲಬದ್ಧತೆ, ಅಜೀರ್ಣತೆ, ಎದೆಯುರಿ, ಗ್ಯಾಸ್ಟ್ರಿಕ್, ಹೊಟ್ಟೆಯ ಸೋಂಕು, ವಿಪರೀತ ಉಷ್ಣ ಇತ್ಯಾದಿ ಗಳಿಂದ ಹೊಟ್ಟೆ ನೋವು ಉಂಟಾಗುತ್ತದೆ. ನಾವೆಲ್ಲರೂ ನಮ್ಮ ಜೀವನದಲ್ಲಿ ಇಂತಹ ಯಾವುದಾದರೂ ಒಂದು ಸಮಸ್ಯೆಯನ್ನು ಅನುಭವಿಸಿಯೇ ಇರುತ್ತೇವೆ. ಇದಲ್ಲದೆ ಕೆಲವು ಗಂಭೀರ ಸ್ವರೂಪದ ಲಕ್ಷಣಗಳು ಹೊಟ್ಟೆ ನೋವನ್ನು ವಾಸಿಯಾಗದಂತೆ ಮಾಡುತ್ತವೆ. ಅದರಲ್ಲಿ ಪ್ರಮುಖವಾದವು ಹೊಟ್ಟೆಯಲ್ಲಿ ಹುಣ್ಣು, ಅಪೆಂಡಿಸೈಟಿಸ್ ಮತ್ತು ಕಿಡ್ನಿಯಲ್ಲಿ ಕಲ್ಲುಗಳ ರಚನೆಯಿಂದ ಬರುವ ಹೊಟ್ಟೆ ನೋವಿಗೆ ಪ್ರಾಣ ಹೋದಂತೆ ಭಾಸವಾಗುತ್ತದೆ.
ಸಾಮಾನ್ಯವಾಗಿ ಎಲ್ಲಾ ವಯಸ್ಸಿನವರಲ್ಲೂ ಈ ಹೊಟ್ಟೆ ನೋವಿನ ಸಮಸ್ಯೆ ಕಂಡು ಬರುತ್ತದೆ. ಕೆಲವರಿಗೆ ಮಲಬದ್ದತೆಯಿಂದ ಹೊಟ್ಟೆ ಕಾಣಿಸಿದ್ರೆ, ಮತ್ತೆ ಕೆಲವರಲ್ಲಿ ಗ್ಯಾಸ್, ಅಲ್ಸರ್ ಕಾರಣದಿಂದ ಹೊಟ್ಟೆ ನೋವು ಕಾಣಿಸಕೊಳ್ಳುತ್ತದೆ. ಇನ್ನು ಸಾಮಾನ್ಯವಾಗಿ ಅಜೀರ್ಣ ಸಮಸ್ಯೆಯಿಂದಲೂ ಈ ತೊಂದರೆ ಉಂಟಾಗಬಹುದು.

ಹಸಿ ಶುಂಠಿಯನ್ನು ತುಂಡು ತುಂಡುಗಳನ್ನಾಗಿಸಿ ನೀರಿನಲ್ಲಿ ಕುದಿಸಿ ಆ ನೀರನ್ನು ಕುಡಿಯುತ್ತಿರುವುದರಿಂದ ಹೊಟ್ಟೆಗೆ ಸಂಬಂಧಿಸಿ ಸಮಸ್ಯೆಗಳಿಂದ ಪರಿಹಾರ ಕಾಣಬಹುದು.
ಪ್ರತಿದಿನ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಜೇನುತುಪ್ಪ ಮಿಶ್ರ ಮಾಡಿದ ಬಿಸಿ ನೀರು ಕುಡಿಯುವುದರಿಂದ ಸಹ ಹೊಟ್ಟೆ ಸಮಸ್ಯೆಗಳಿಗೆ ಪರಿಹಾರ ಕಾಣಬಹುದು.
ನಿಂಬೆ ಹಣ್ಣಿನಲ್ಲಿ ವಿಟಮಿನ್ ‘ ಸಿ ‘ ಅಂಶ ಬಹಳ ಹೆಚ್ಚಾಗಿದೆ. ಸಾಧಾರಣವಾಗಿ ಹೇಳಬೇಕೆಂದರೆ ವಿಟಮಿನ್ ‘ ಸಿ ‘ ಅಂಶ ಒಂದು ಪ್ರಬಲವಾದ ಆಂಟಿ – ಆಕ್ಸಿಡೆಂಟ್ ಆಗಿದ್ದು, ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ಹೊರ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೆಚ್ಚಾಗಿ ಊಟ ಮಾಡಿ ಜೀರ್ಣ ಆಗದೆ ಹೊಟ್ಟೆ ನೋವಿನಿಂದ ಬಳಲುತ್ತಿರುವವರು ಈ ತಂತ್ರವನ್ನು ತಕ್ಷಣದಲ್ಲಿ ಉಪಯೋಗಿಸಬಹುದು. ಆ ಸಂದರ್ಭದಲ್ಲಿ ನಿಂಬೆ ಹಣ್ಣಿನ ರಸ ನಮ್ಮ ಹೊಟ್ಟೆ ಸೇರಿದಾಗ ಅದರಲ್ಲಿರುವ ಆಮ್ಲದ ಅಂಶ, ನಮ್ಮ ಹೊಟ್ಟೆಯಲ್ಲಿ ಜೀರ್ಣ ಕ್ರಿಯೆಗೆ ಎಂದು ಉತ್ಪತ್ತಿಯಾಗುವ ಆಮ್ಲವನ್ನು ಇನ್ನಷ್ಟು ಉತ್ಪತ್ತಿಯಾಗುವಂತೆ ಉತ್ತೇಜಿಸಿ ನಾವು ಸೇವಿಸಿರುವ ಆಹಾರವನ್ನು ಚೆನ್ನಾಗಿ ಮತ್ತು ಬಹು ಬೇಗನೆ ಜೀರ್ಣವಾಗುವಂತೆ ಮಾಡಿ ಯಾವುದೇ ರೀತಿಯ ಹೊಟ್ಟೆಗೆ ಸಂಬಂಧಿತ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳುತ್ತದೆ.
ಸೋಂಪು ಕಾಳುಗಳಲ್ಲಿ ಮೂತ್ರವರ್ಧಕ, ನೋವು ಶಮನ ಮಾಡುವ, ಕಾರ್ಮಿನೇಟೀವ್ ಲಕ್ಷಣಗಳು ಜೊತೆಗೆ ಆಂಟಿ ಮೈಕ್ರೋಬಿಯಲ್ ಗುಣ ಲಕ್ಷಣಗಳು ಇರುವ ಕಾರಣದಿಂದ ಯಾವುದೇ ಬಗೆಯ ಹೊಟ್ಟೆ ನೋವನ್ನು ಕಡಿಮೆ ಮಾಡುತ್ತವೆ. ಹಲವಾರು ಶತಮಾನಗಳಿಂದ ಚೀನಾ ದೇಶದಲ್ಲಿ, ಈಜಿಪ್ಟ್ ಪ್ರಾಂತ್ಯಗಳಲ್ಲಿ, ಗ್ರೀಕ್ ಸಮುದಾಯದಲ್ಲಿ ಮತ್ತು ಅಷ್ಟೇ ಏಕೆ ನಮ್ಮ ಭಾರತೀಯ ಆಯುರ್ವೇದ ಪದ್ಧತಿಯಲ್ಲಿ ಕೂಡ ಸೋಂಪು ಕಾಳುಗಳನ್ನು ಒಂದು ಬಗೆಯ ಔಷಧವನ್ನಾಗಿ ಉಪಯೋಗಿಸುತ್ತಿದ್ದಾರೆ. ಯಾವುದೇ ಬಗೆಯ ಆಹಾರ ಪದಾರ್ಥಗಳು ಸಿಗುವ ಅಂಗಡಿಗಳಲ್ಲಿ ಸುಲಭವಾಗಿ ಲಭ್ಯವಿರುವ ಈ ಸೋಂಪು ಕಾಳುಗಳನ್ನು ತೆಗೆದುಕೊಂಡು ಹೊಟ್ಟೆ ನೋವು ಬಂದ ಸಂದರ್ಭದಲ್ಲಿ ಸೇವಿಸಿದರೆ ಬಹಳ ಬೇಗನೆ ಪರಿಹಾರ ಕಂಡುಕೊಳ್ಳಬಹುದು.
ಬೇಕಿಂಗ್ ಸೋಡಾ ಅಥವಾ ಅಡುಗೆ ಸೋಡಾ ಮೂಲಕ ಕೂಡ ಹೊಟ್ಟೆ ನೋವಿಗೆ ಪರಿಹಾರ ಕಂಡುಕೊಳ್ಳಬಹುದು. ಇದಕ್ಕಾಗಿ ನೀವು ಮಾಡಬೇಕಿರುವುದು ಒಂದು ಗ್ಲಾಸ್ನಲ್ಲಿ ಬಿಸಿ ನೀರು ತೆಗೆದು ಅದಕ್ಕೆ ಒಂದು ಚಮಚ ನಿಂಬೆ ರಸ, ಒಣಶುಂಠಿ ಪುಡಿ ಮತ್ತು ಒಂದು ಚಮಚ ಅಡುಗೆ ಸೋಡಾ ಮಿಶ್ರ ಮಾಡಿ ಕುಡಿಯಿರಿ. ಇದರಿಂದ ಅಜೀರ್ಣ ಸಮಸ್ಯೆ ದೂರವಾಗುತ್ತದೆ. ಅಲ್ಲದೆ ತಕ್ಷಣ ಹೊಟ್ಟೆ ನೋವಿನಿಂದ ಮುಕ್ತಿ ಪಡೆಯಬಹುದು.

ಪುದಿನ ಸಹ ಅಜೀರ್ಣತೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅಜೀರ್ಣತೆಯ ಸಮಯದಲ್ಲಿ ಔಷಧಿಯಾಗಿ ಉಪಯೋಗಕ್ಕೆ ಬರುತ್ತದೆ. ಕೆಲವೊಮ್ಮೆ ನಮ್ಮ ಜೀರ್ಣಾಂಗದಲ್ಲಿ ಮಾಂಸ ಖಂಡಗಳ ಭಾಗದಲ್ಲಿ ಗ್ಯಾಸ್ಟ್ರಿಕ್ ನ ಸಮಸ್ಯೆಯಿಂದ ವಿಪರೀತ ನೋವು ಉಂಟಾಗುತ್ತದೆ. ಅದು ನಮಗೆ ಎದೆಯುರಿಯ ತರಹ ಭಾಸವಾಗುತ್ತದೆ ಮತ್ತು ವಿಪರೀತ ತೇಗುಗಳು ಬರಲು ಪ್ರಾರಂಭಿಸುತ್ತವೆ. ಇಂತಹ ಸಮಯದಲ್ಲಿ ಪುದಿನ ನಮ್ಮ ಸಹಾಯಕ್ಕೆ ಖಂಡಿತವಾಗಿಯೂ ಬರುತ್ತದೆ. ಪುದಿನ ಎಲೆಗಳಲ್ಲಿ ಆಂಟಿ – ಸ್ಪಸ್ಮೊಡಿಕ್ ಗುಣ ಲಕ್ಷಣಗಳು ಹೇರಳವಾಗಿದ್ದು, ಈ ರೀತಿಯ ಸಮಸ್ಯೆಗಳಿಗೆ ಬಹು ಬೇಗನೆ ಮುಕ್ತಿ ಕೊಡುತ್ತವೆ. ಪುದೀನ ಎಲೆಗಳನ್ನು ಸದಾ ತಾಜಾ ಆಗಿರುವಂತೆ ನೋಡಿಕೊಳ್ಳುವ ಮತ್ತು ಅವುಗಳಿಗೆ ಘಮಘಮಿಸುವ ಪರಿಮಳ ತುಂಬುವ ಸಂಯುಕ್ತಗಳು ನೈಸರ್ಗಿಕವಾಗಿ ನಮ್ಮ ಹೊಟ್ಟೆ ನೋವನ್ನು ಕೂಡ ಶಮನ ಮಾಡುವ ಗುಣಗಳನ್ನು ಹೊಂದಿರುತ್ತವೆ.
ಸೌಂದರ್ಯವರ್ಧಕವಾಗಿ ಬಳಸುವ ಅಲೋವೆರಾದಲ್ಲಿ ಹಲವಾರು ಆರೋಗ್ಯಕಾರಿ ಗುಣಗಳಿವೆ. ಹಾಗೆಯೇ ಇದನ್ನು ಜ್ಯೂಸ್ ಮಾಡಿ ಕುಡಿಯುವುದರಿಂದ ಕೂಡ ಹೊಟ್ಟೆ ನೋವಿಗೆ ಪರಿಹಾರ ಕಾಣಬಹುದು. ಅಲೋವೆರಾದ ಒಳಗಿನ ಭಾಗವನ್ನು ತೆಗೆದು ಅರ್ಧ ಕಪ್ ಜ್ಯೂಸ್ ಮಾಡಿ ಕುಡಿಯಿರಿ. ಇದನ್ನು ಕುಡಿಯುವುದರಿಂದ ಕರುಳಿನ ಸಮಸ್ಯೆಗಳು ದೂರವಾಗುತ್ತದೆ. ಹಾಗೆಯೇ ಮಲಬದ್ಧತೆ, ಗ್ಯಾಸ್ ಮತ್ತು ಹೊಟ್ಟೆ ಉಬ್ಬುವ ಸಮಸ್ಯೆಗಳಿಗೆ ಈ ಮೂಲಕ ಪರಿಹಾರ ಕಾಣಬಹುದು.
ಮಲಬದ್ಧತೆಯಿಂದ ಹೊಟ್ಟೆ ನೋವು ಕಾಣಿಸಿಕೊಂಡಾಗ ಅಗಸೆ ಬೀಜಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಅಗಸೆ ಬೀಜವು ತುಂಬಾ ಉಪಯುಕ್ತವಾಗಿದೆ ಏಕೆಂದರೆ ಇದರಲ್ಲಿ ದಟ್ಟವಾದ ನಾರಿನಾಂಶವಿದೆ ಮತ್ತು ಇದರಲ್ಲಿ ವಿವಿಧ ವಿಟಮಿನ್ ಗಳು, ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶಗಳು ಇವೆ. ಅಗಸೆ ಬೀಜವನ್ನು ಒಂದು ಲೋಟ ನೀರಿನಲ್ಲಿ ನೆನೆಸಿ2 ಅಥವಾ 3 ಗಂಟೆಗಳ ನಂತರ ಕುಡಿದರೆ ಒಳ್ಳೆಯದು.
ಸಾಮಾನ್ಯವಾಗಿ ನಾವು ಅನ್ನ ಮಾಡಿದ ಮೇಲೆ ಆ ನೀರನ್ನು ಅಥವಾ ಗಂಜಿಯನ್ನು ಹೊರಗೆ ಚೆಲ್ಲಿ ಬಿಡುತ್ತೇವೆ. ಆದರೆ ಇದರಿಂದ ಅಕ್ಕಿ ಗಂಜಿಯಲ್ಲಿ ಇರುವ ಅನೇಕ ರೀತಿಯ ಆರೋಗ್ಯಕ್ಕೆ ಸದ್ಬಳಕೆ ಆಗುವ ಗುಣಗಳು ನಮ್ಮ ದೇಹಕ್ಕೆ ಸೇರುವುದು ತಪ್ಪಿ ಹೋಗುತ್ತದೆ. ಅದರಲ್ಲೂ ಕೆಂಪಕ್ಕಿ ಎಂದು ಪ್ರಸಿದ್ಧವಾಗಿರುವ ಅಕ್ಕಿಯ ಗಂಜಿ ನಮ್ಮ ದೇಹದ ಸಂಪೂರ್ಣ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಹೊಟ್ಟೆ ನೋವು ಬಂದ ಸಂದರ್ಭದಲ್ಲಿ ಬಸಿದ ಅಕ್ಕಿ ಗಂಜಿಯನ್ನು ಕುಡಿಯುವುದರಿಂದ ಬೆಂದಿರುವ ಅಕ್ಕಿ ಅಥವಾ ಅನ್ನದಿಂದ ಬಿಡುಗಡೆ ಆಗಿರುವ ವಿವಿಧ ಬಗೆಯ ಅಂಶಗಳು ನಮ್ಮ ಹೊಟ್ಟೆಯನ್ನು ಸೇರಿ ಅಲ್ಲಿ ಗ್ಯಾಸ್ಟ್ರಿಕ್ ನಿಂದ ಉಂಟಾಗಿರುವ ಹೊಟ್ಟೆ ಹುಣ್ಣುಗಳನ್ನು ನಿವಾರಣೆ ಮಾಡುತ್ತದೆ. ನೀವು ಅತಿಯಾದ ಆಮಶಂಕೆ ಅಥವಾ ಅತಿಸಾರ ಭೇಧಿಗಳಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ, ಈ ಉಪಾಯ ನಿಮ್ಮ ದೇಹಕ್ಕೆ ಚೆನ್ನಾಗಿ ಕೆಲಸ ಮಾಡುತ್ತದೆ. ಸಾಧಾರಣ ಅಕ್ಕಿ ಗಂಜಿಯನ್ನು ಕುಡಿಯಲು ನಿಮಗೆ ಬೇಸರ ಎನಿಸಿದರೆ, ನೀವು ಅದಕ್ಕೆ ಸ್ವಲ್ಪ ತಾಜಾ ನಿಂಬೆ ಹಣ್ಣಿನ ರಸ ಅಥವಾ ಸ್ವಲ್ಪ ಜೇನು ತುಪ್ಪವನ್ನು ಬೆರೆಸಿ ಕಲಸಿ ಕುಡಿಯಬಹುದು.
ಹೊಟ್ಟೆ ನೋವು ಅಜೀರ್ಣತೆಯ ಸಮಸ್ಯೆಯಿಂದ ಉಂಟಾಗಿದೆ ಎಂದು ತಿಳಿದಿದ್ದರೆ ದಯವಿಟ್ಟು ಮೊದಲು ಈ ಚಾಮೋ ಮೈಲ್ ಚಹಾವನ್ನು ಸೇವಿಸುವ ಪ್ರಯತ್ನ ಮಾಡಿ. ಚಾಮೋ ಮೈಲ್ ಚಹಾ ಸಂಪೂರ್ಣ ದೇಹದ ಒತ್ತಡವನ್ನು ಕಡಿಮೆ ಮಾಡಿ ಹೊಟ್ಟೆಯಲ್ಲಿನ ಉರಿಯೂತದ ಸಮಸ್ಯೆಯನ್ನು ಇಲ್ಲವಾಗಿಸುತ್ತದೆ. ಇದರಿಂದ ಹೊಟ್ಟೆ ನೋವು ಸಹ ನಿಯಂತ್ರಣಕ್ಕೆ ಬರುತ್ತದೆ. ಚಾಮೋ ಮೈಲ್ ಚಹಾದಲ್ಲಿ ಇರುವ ಆಂಟಿ – ಆಕ್ಸಿಡೆಂಟ್ ಗುಣಗಳು ಹೊಟ್ಟೆಯ ಮಾಂಸ ಖಂಡಗಳಲ್ಲಿ ಸೇರಿಕೊಂಡಿರುವ ನರ ನಾಡಿಗಳನ್ನು ಶಾಂತಗೊಳಿಸುತ್ತವೆ. ಈ ಚಹಾ ನಿದ್ರಾ ಹೀನತೆಯಿಂದ ಬಳಲಿ ವಿಶ್ರಾಂತಿ ರಹಿತವಾಗಿರುವ ದೇಹಕ್ಕೆ ಅದ್ಭುತ ಪ್ರಯೋಜನಗಳನ್ನು ನೀಡಿ ರಾತ್ರಿಯ ಸಮಯದಲ್ಲಿ ಚೆನ್ನಾಗಿ ನಿದ್ರಿಸುವಂತೆ ಪ್ರೇರೇಪಿಸುತ್ತದೆ. ನಿಮಗೆ ಇದು ಅಷ್ಟು ಪರಿಚಿತವಲ್ಲದ ಕಾರಣ ಯಾವುದೇ ಗ್ರಂಥಿಗೆ ಅಂಗಡಿ ಅಥವಾ ಗಿಡಮೂಲಿಕೆ ಅಂಗಡಿಗಳಲ್ಲಿ ಸುಲಭವಾಗಿ ಚಾಮೋ ಮೈಲ್ ನ ಒಣಗಿರುವ ಹೂವನ್ನು ಸುಲಭವಾಗಿ ಪಡೆಯಬಹುದು ಮತ್ತು ಅದರಿಂದ ಸುಲಭವಾಗಿ ಚಹಾವನ್ನು ತಯಾರು ಮಾಡಿ ಕುಡಿಯಬಹುದು.

ಕೆಲವರಿಗೆ ಆಪಲ್ ಸೈಡರ್ ವಿನೆಗರ್ ನ ರುಚಿ ಅಷ್ಟಾಗಿ ಹಿಡಿಸುವುದಿಲ್ಲ. ಆದರೆ ಅವರಿಗೆ ಗೊತ್ತಿಲ್ಲದೆ ಅನೇಕ ರೀತಿಯ ವಿಶೇಷವಾಗಿ ಹೊಟ್ಟೆ ನೋವಿಗೆ ಸಂಬಂಧಿಸಿದ ಆರೋಗ್ಯಕರ ಗುಣ ಲಕ್ಷಣಗಳು ಆಪಲ್ ಸೈಡರ್ ವಿನೆಗರ್ ನಲ್ಲಿವೆ. ನಿಮಗೆ ಒಂದು ವೇಳೆ ಬ್ಯಾಕ್ಟೀರಿಯಾದಿಂದ ಸೋಂಕು ಉಂಟಾಗಿ ಹೊಟ್ಟೆ ನೋವು ಪ್ರಾರಂಭವಾಗಿದ್ದರೆ, ಅಂತಹ ಸಮಯದಲ್ಲಿ ಆಪಲ್ ಸೈಡರ್ ವಿನೆಗರ್ ಅನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದರೆ ಹೊಟ್ಟೆಯಲ್ಲಿ ಯಾವುದೇ ಬಗೆಯ ಆಸಿಡ್ ರಿಫ್ಲೆಕ್ಸ್ ಸಮಸ್ಯೆಗಳು ತಲೆದೋರುವುದಿಲ್ಲ ಮತ್ತು ಹೊಟ್ಟೆಯಲ್ಲಿನ ಆಮ್ಲದ ಅಂಶವನ್ನು ಸಮತೋಲನದಲ್ಲಿರಿಸಿ ಹೊಟ್ಟೆ ನೋವನ್ನು ಕಡಿಮೆ ಮಾಡುತ್ತದೆ. ಆದರೆ ನೆನಪಿರಲಿ, ಆಪಲ್ ಸೈಡರ್ ವಿನೆಗರ್ ಬಹಳ ಪ್ರಬಲವಾದ ದ್ರವವಾಗಿದ್ದು, ಇದನ್ನು ಹೆಚ್ಚಾಗಿ ಸೇವಿಸುವ ಪ್ರಯತ್ನ ಮಾಡಬೇಡಿ. ಇದರಿಂದ ನೇರವಾಗಿ ನಿಮ್ಮ ಹಲ್ಲುಗಳು ಮತ್ತು ವಸಡುಗಳು ಹಾಳಾಗುವ ಸಂಭವ ಹೆಚ್ಚಿರುತ್ತದೆ.
ಒಂದು ವೇಳೆ ಮುಟ್ಟಿನ ಸ್ಥಿತಿಯಿಂದ ಕಿಬ್ಬೊಟ್ಟೆನೋವು ಉಂಟಾದರೆ, ಋತುಚಕ್ರಕ್ಕೆ ಸರಿಸುಮಾರು ಒಂದು ವಾರ ಮೊದಲು ವಿವಿಧ ವ್ಯಾಯಾಮಗಳು ಮತ್ತು ಯೋಗಭಂಗಿಗಳನ್ನು ಪ್ರಾರಂಭಿಸುವುದರಿಂದ ಹೊಟ್ಟೆನೋವು ಕಾಣಿಸಿಕೊಳ್ಳದಂತೆ ತಡೆಯಬಹುದು ಅಥವಾ ನೋವು ಕಡಿಮೆಯಾಗಬಹುದು.
ಹೊಟ್ಟೆ ನೋವು ನಿವಾರಣೆಗೆ ವಿವಿಧ ಗಿಡಮೂಲಿಕೆ ಚಹಾಗಳನ್ನು ಬಳಸಲಾಗುತ್ತದೆ.
ಹೊಟ್ಟೆ ನೋವು ಗ್ಯಾಸ್ ನೋವಿನಿಂದ ಉಂಟಾದರೆ; ಮೆಲಿಸ್ಸಾ ಚಹಾ ಮತ್ತು ಕ್ಯಾಮೋಮೈಲ್ ಚಹಾವನ್ನು ಅವುಗಳ ನಿರ್ಜಲಗುಣದ ಕಾರಣದಿಂದಾಗಿ ಸೇವಿಸಬೇಕು.
ಜೀರ್ಣಕ್ರಿಯೆಗೆ ಸಹಕಾರಿಯಾಗಿರುವ ಕಾರಣ ಮೊಸರನ್ನು ನಿತ್ಯ ಜೀವನದಲ್ಲಿ ಆಗಾಗ್ಗೆ ಸೇವಿಸಬೇಕು.
ಮಿಂಟ್ ಟೀ, ಕರುಳು ಮತ್ತು ಹೊಟ್ಟೆಯ ಸೆಳೆತದ ಸಂದರ್ಭಗಳಲ್ಲಿ, ಇದು ಕರುಳು ಮತ್ತು ಹೊಟ್ಟೆಯನ್ನು ಶಮನಗೊಳಿಸಲು ಸೇವೆ ಮಾಡುತ್ತದೆ.
ಧನ್ಯವಾದಗಳು.
GIPHY App Key not set. Please check settings