in

ಚಳಿಗಾಲದಲ್ಲಿ ತುಟಿಗಳು ಒಡೆಯುವುದು, ಕಪ್ಪಾಗುವುದು ಸಾಮಾನ್ಯ ಸಮಸ್ಯೆ

ಚಳಿಗಾಲದಲ್ಲಿ ತುಟಿಗಳು ಒಡೆಯುವುದು
ಚಳಿಗಾಲದಲ್ಲಿ ತುಟಿಗಳು ಒಡೆಯುವುದು

ಚಳಿಗಾಲ ಬಂದಾಯ್ತಲ್ಲಾ, ಈಗ ಕೈ, ಕಾಲು, ಮತ್ತೆ ತುಟಿಯೂ ಒಡೆಯಲು ಶುರು ಆಗುತ್ತೆ, ರಾಸಾಯನಿಕಗಳನ್ನು ಬೆರೆಸಿದ ಲಿಪ್ ಬಾಮ್ ಗಳನ್ನು ಹಚ್ಚುವ ಬದಲು ಮನೆಯಲ್ಲೇ ಇರುವ ಕೆಲವು ವಸ್ತುಗಳನ್ನು ಬಳಸುವ ಮೂಲಕ ಆಕರ್ಷಕ ತುಟಿಗಳನ್ನು ನಮ್ಮದಾಗಿಸಿಕೊಳ್ಳಬಹುದು.

ಹಿಮ್ಮಡಿ ಒಡೆತ, ಚರ್ಮ ಬಿರುಕು ಬಿಡುವುದು, ಒಣ ಚರ್ಮ, ತುಟಿಯ ಚರ್ಮ ಒಣಗಿ ರಕ್ತ ಬರುವುದು ಸೇರಿದಂತೆ ಅನೇಕ ಸಮಸ್ಯೆಗಳು ಕಾಡಲಾರಂಭಿಸುತ್ತವೆ.

 ಅಲ್ಲದೆ ತುಟಿಗಳು ಒಣಗಿ, ಕಪ್ಪಾಗುವ ಸಂಭವವಿರುತ್ತದೆ.

ತುಟಿಗಳಲ್ಲಿ ಸಿಪ್ಪೆ ಸುಲಿದು, ಒಣ ತುಟಿಗಳಿಂದ ಕೆಲವೊಮ್ಮೆ ರಕ್ತವು ಬರುತ್ತದೆ. ಇದಕ್ಕೆ ಪರಿಹಾರ ಮನೆಯಲ್ಲಿಯೇ ಇದೆ, ತುಟಿಗಳು ಒಣಗಿದಾಗ ಈ ಮನೆಮದ್ದುಗಳನ್ನ ಬಳಕೆ ಮಾಡುವುದು ಉತ್ತಮ.

ತುಟಿಗಳು ಅತ್ಯಂತ ಸೂಕ್ಷ್ಮವಾದ ಚರ್ಮವನ್ನು ಹೊಂದಿರುತ್ತದೆ. ಹಾಗಾಗಿಯೇ ಚಳಿಗಾಲದಲ್ಲಿ ತುಟಿಯು ಬಹು ಬೇಗನೆ ಒಣಗುತ್ತದೆ. ತುಟಿಯು ನಿರ್ಜಲೀಕರಣಗೊಂಡಾಗ, ಅವು ಕ್ರಮೇಣ ಒಣಗಲು ಪ್ರಾರಂಭವಾಗುತ್ತದೆ.

ಚಳಿಗಾಲದಲ್ಲಿ ತುಟಿಗಳು ಒಡೆಯುವುದು, ಕಪ್ಪಾಗುವುದು ಸಾಮಾನ್ಯ ಸಮಸ್ಯೆ
ಅಲೋವೆರಾ ತುಟಿಗಳನ್ನು ಹೈಡ್ರೇಟ್ ಮಾಡುತ್ತದೆ

ಅಲೋವೆರಾ ಬಳಸುವುದರಿಂದ ಚರ್ಮವನ್ನು ತೇವಾಂಶಗೊಳಿಸುವುದಲ್ಲದೇ, ತುಟಿಗಳನ್ನು ಹೈಡ್ರೇಟ್ ಮಾಡುತ್ತದೆ. ಇದು ಬಿರುಕು ಬಿಟ್ಟ ತುಟಿಗಳಿಗೆ ಪರಿಹಾರ ನೀಡುತ್ತದೆ.

ಹಾಲಿನ ಉತ್ಪನ್ನಗಳಾದ ಬೆಣ್ಣೆ ಹಾಗೂ ತುಪ್ಪವನ್ನು ತುಟಿಗೆ ಹಚ್ಚಿಕೊಳ್ಳುವುದರಿಂದ ನಿಮ್ಮ ತುಟಿ ಒಡೆಯುವುದಿಲ್ಲ.

ತುಟಿಗಳು ಕಪ್ಪಾಗಿದ್ದರೆ ಎರಡು ಅಥವಾ ಮೂರು ದಿನಗಳ ಕಾಲ ನಿಮ್ಮ ತುಟಿಗಳನ್ನು ಸ್ಕ್ರಬ್ ಮಾಡುತ್ತಿರಿ. ಕಾಫಿ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಸ್ಕ್ರಬ್ಬರ್ ಆಗಿ ಬಳಸಬಹುದು. ಸಕ್ಕರೆ ಮತ್ತು ನಿಂಬೆ ರಸದೊಂದಿಗೂ ಸ್ಕ್ರಬ್ ಮಾಡಬಹುದು.

ಮಲಗುವ ಮುನ್ನ ಕೊಬ್ಬರಿ ಎಣ್ಣೆಯನ್ನು ತುಟಿಗೆ ಹಚ್ಚಿ ಮಸಾಜ್ ಮಾಡುವುದರಿಂದ ತುಟಿ ಒಣಗುವ ಸಮಸ್ಯೆ ದೂರವಾಗುತ್ತದೆ. ತುಟಿ ಮೃದುವಾಗುತ್ತದೆ. ನಿತ್ಯ ಜೇನನ್ನು ತುಟಿಗೆ ಹಚ್ಚುವುದರಿಂದ ತುಟಿಯ ಅಂದ ಹೆಚ್ಚುತ್ತದೆ. ತೆಂಗಿನ ಎಣ್ಣೆಯನ್ನು ಎಮೋಲಿಯಂಟ್  ಎಂದು ಕರೆಯಲಾಗುತ್ತದೆ. ಇದರಲ್ಲಿನ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ನಿಮ್ಮ ತುಟಿಗಳ ಸೂಕ್ಷ್ಮಾಣುಗಳಿಂದ ಮುಕ್ತವಾಗಿಡಲು ಸಹಾಯ ಮಾಡುತ್ತದೆ.

ಒಡೆದ ತುಟಿ, ಒಣ ಚರ್ಮದ ತುಟಿಯ ಸಮಸ್ಯೆಗಳಿಗೆ ಸಕ್ಕರೆ ಉತ್ತಮ ಮದ್ದಾಗಿದೆ. ಸಕ್ಕರೆಯನ್ನು ತುಟಿಗೆ ಹಚ್ಚಿಕೊಂಡು ಒಂದೈದು ನಿಮಿಷ ಹಾಗೆಯೇ ಬಿಡಿ. ನಂತರ ನಿಧಾನವಾಗಿ ಉಜ್ಜಿಕೊಳ್ಳಿ. ಇದರಿಂದ ತುಟಿಯ ಮೇಲಿನ ಒಣ ಚರ್ಮ ಕಿತ್ತು ಬರುತ್ತದೆ. ನಂತರ ತೊಳೆದುಕೊಂಡು ಕೊಬ್ಬರಿ ಎಣ್ಣೆ ಅಥವಾ ಅಲೋವೆರಾ ಜೆಲ್ಲ ಹಚ್ಚಿ. ಇದರಿಂದ ತುಟಿಗೆ ನೈಸರ್ಗಿಕ ಸ್ಕೃಬ್‌ ಆದಂತಾಗುತ್ತದೆ.

ಚಳಿಗಾಲದಲ್ಲಿ ತುಟಿಗಳು ಒಡೆಯುವುದು, ಕಪ್ಪಾಗುವುದು ಸಾಮಾನ್ಯ ಸಮಸ್ಯೆ
ಕೊಬ್ಬರಿ ಎಣ್ಣೆಯನ್ನು ತುಟಿಗೆ ಹಚ್ಚಿ

ಒಣ ತುಟಿ ಇರುವವರು ಯಾವಾಗಲೂ ಲಿಪ್ ಬಾಮ್ ಹಚ್ಚಬೇಕು. ಇದನ್ನು ಪುರುಷರು ಕೂಡಾ ಮಾಡಬಹುದು. ಇದರ ಬದಲಿಗೆ ಜೇನುತುಪ್ಪವನ್ನು ಕೂಡಾ ಪ್ರಯತ್ನಿಸಬಹುದು. ಪೆಟ್ರೋಲಿಯಂ ಜೆಲ್ಲಿ, ತೆಂಗಿನ ಎಣ್ಣೆ ಕೂಡಾ ಹಚ್ಚಬಹುದು. ಚಳಿಗಾಲದಲ್ಲಿ ಆದಷ್ಟು ಮ್ಯಾಟ್ ಲಿಪ್ಸ್‌ಟಿಕ್‌ ಹಚ್ಚುವುದನ್ನು ಕಡಿಮೆ ಮಾಡಿ. ಒಂದು ವೇಳೆ ಅದನ್ನೇ ಹಚ್ಚಬೇಕು ಎಂದುಕೊಂಡಿದ್ದರೆ, ಅದಕ್ಕೂ ಮೊದಲು ನಿಮ್ಮ ತುಟಿಗಳನ್ನು ಚೆನ್ನಾಗಿ ತೇವಗೊಳಿಸಿ ಸಿದ್ಧಮಾಡಿ.

ದೇಹಕ್ಕೆ ಉಷ್ಣವಾದರೂ ತುಟಿಯ ಸಿಪ್ಪೆ ಏಳುತ್ತದೆ. ಇದರ ನಿವಾರಣೆಗೆ ಸಾಕಷ್ಟು ನೀರು ಕುಡಿಯಬೇಕು. ಚಳಿಗಾಲದಲ್ಲಿ ಬಾಯಾರಿಕೆ ಆಗುವುದು ಕಡಿಮೆಯಾದರೂ ಮರೆಯದೆ ನೀರು ಕುಡಿಯುತ್ತಿರಿ. ಇದರಿಂದ ತುಟಿ ಒಣಗುವ ಸಮಸ್ಯೆ ಕಡಿಮೆಯಾಗುತ್ತದೆ.

ಒಡೆದ ತುಟಿಗಳನ್ನು ಮೃದುವಾಗಿಸಲು ಜೇನುತುಪ್ಪದ ಬಳಕೆ ಸೂಕ್ತ. ಜೇನುತುಪ್ಪವನ್ನು ನಿಮ್ಮ ಒಡೆದ ತುಟಿಗಳಿಗೆ ಹಚ್ಚಿ, 20 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯುವುದು ಉತ್ತಮ ಪ್ರಯೋಜನ ನೀಡುತ್ತದೆ.

ಪೆಟ್ರೋಲಿಯಂ ಉತ್ಪನ್ನಗಳಾದ ವ್ಯಾಸಲಿನ್, ಬಯೊಲಿನ್ ನಂಥ ಉತ್ಪನ್ನಗಳನ್ನು ಬಳಸಿ. ಇದು ತುಟಿಗೆ ತೇವಾಂಶವನ್ನು ಒದಗಿಸುತ್ತದೆ.

ಸೌತೆಕಾಯಿ ರಸವನ್ನು ತುಟಿಗಳ ಮೇಲೆ ಹಚ್ಚುವುದರಿಂದ ಕಪ್ಪು ಕಲೆಗಳು ನಿವಾರಣೆಯಾಗುತ್ತವೆ. ನಿಂಬೆ-ಜೇನು ಮಿಶ್ರಣವನ್ನು ಸಹ ಬಳಸಬಹುದು. ಇದರೊಂದಿಗೆ ನಿಂಬೆ, ಆಲೂಗಡ್ಡೆ ಮತ್ತು ಬೀಟ್ರೂಟ್ ರಸವನ್ನು ರಾತ್ರಿ ವೇಳೆ ತುಟಿಗಳಿಗೆ ಹಚ್ಚಿ, ಬೆಳಗ್ಗೆ ತೊಳೆಯಬಹುದು. ಈ ಮೂಲಕ ನೀವು ತುಟಿಯ ಕಪ್ಪು ಕಲೆಗಳನ್ನು ಹೋಗಲಾಡಿಸಬಹುದು. ವಾರಕ್ಕೊಮ್ಮೆ ಈ ಮನೆಮದ್ದನ್ನು ಬಳಸಿದರೆ ಕೆಲವೇ ದಿನಗಳಲ್ಲಿ ಬದಲಾವಣೆ ಕಾಣುವಿರಿ.

ಚಳಿಗಾಲದಲ್ಲಿ ತುಟಿಗಳು ಒಡೆಯುವುದು, ಕಪ್ಪಾಗುವುದು ಸಾಮಾನ್ಯ ಸಮಸ್ಯೆ
ತುಟಿಗಳನ್ನು ಮೃದುವಾಗಿಸಲು ಜೇನುತುಪ್ಪ

ರಾತ್ರಿ ಮಲಗುವಾಗ ತುಟಿಗೆ ಹಾಲಿನ ಕೆನೆಯನ್ನು ಹಚ್ಚಿ ಒಂದೆರಡು ಸೆಕೆಂಡ್‌ ಮಸಾಜ್‌ ಮಾಡಿ. ಇದರಿಂದ ಕೆನೆಯಲ್ಲಿ ಎಣ್ಣೆಯ ಅಂಶ ತುಟಿಗೆ ಹೀರಿಕೊಂಡು ಶುಷ್ಕತೆಯನ್ನು ನಿವಾರಿಸುತ್ತದೆ.

ಚಳಿಗಾಲದಲ್ಲಿ ತುಟಿಗಳ ಮೇಲೆ ಸತ್ತ ಜೀವಕೋಶಗಳು ಹೆಚ್ಚು ಸಂಗ್ರಹಗೊಳ್ಳುತ್ತವೆ. ಆದ್ದರಿಂದ ಎರಡು ಅಥವಾ ಮೂರು ದಿನಗಳ ಕಾಲ ನಿಮ್ಮ ತುಟಿಗಳನ್ನು ಸ್ಕ್ರಬ್ ಮಾಡುತ್ತಿರಿ. ಕಾಫಿ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಸ್ಕ್ರಬ್ಬರ್ ಆಗಿ ಬಳಸಬಹುದು. ಸಕ್ಕರೆ ಮತ್ತು ನಿಂಬೆ ರಸದೊಂದಿಗೂ ಸ್ಕ್ರಬ್ ಮಾಡಬಹುದು.

ಚರ್ಮಕ್ಕೆ ಹೊಂದಿಕೆಯಾಗದ ಲಿಪ್ಸ್ಟಿಕ್ ಅಥವಾ ಲಿಪ್ ಬಾಮ್ ನ ಬಳಕೆ ಮಾಡುವುದರಿಂದ ಹಾಗು ಧೂಮಪಾನ ಮತ್ತು ಮದ್ಯ ಸೇವನೆಯ ಪರಿಣಾಮ ಸಹ ತುಟಿಗಳು ಹೆಚ್ಚು ಒಣಗುವ ಸಾಧ್ಯತೆ ಇರುತ್ತದೆ.

ತುಟಿಗಳಿಗೆ ಸಕ್ಕರೆ ಮತ್ತು ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿ ಹಚ್ಚಿ ಮಸಾಜ್ ಮಾಡುವುದು ಉತ್ತಮ ಪ್ರಯೋಜನ ನೀಡುತ್ತದೆ.

ನಿಂಬೆ, ಆಲೂಗಡ್ಡೆ ಮತ್ತು ಬೀಟ್ರೂಟ್ ರಸವನ್ನು ರಾತ್ರಿ ವೇಳೆ ತುಟಿಗಳಿಗೆ ಹಚ್ಚಿ, ಬೆಳಗ್ಗೆ ತೊಳೆಯಬಹುದು. ಈ ಮೂಲಕ ನೀವು ತುಟಿಯ ಕಪ್ಪು ಕಲೆಗಳನ್ನು ಹೋಗಲಾಡಿಸಬಹುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

57 Comments

ಹನ್ನೆರಡು ಜ್ಯೋತಿರ್ಲಿಂಗಗಳು

ದೇಶದ ಹನ್ನೆರಡು ಜ್ಯೋತಿರ್ಲಿಂಗಗಳು – ಭಾಗ 1

ಕುವೆಂಪು ಜನ್ಮದಿನ

ಕುವೆಂಪು ಜನ್ಮದಿನವಾದ ಡಿಸೆಂಬರ್‌ ೨೯ ಅನ್ನು “ವಿಶ್ವ ಮಾನವ” ದಿನವನ್ನಾಗಿ ಆಚರಿಸುತ್ತೇವೆ