in ,

ಮಕ್ಕಳ ಬೆಳವಣಿಗೆಗೆ ಅನುಸರಿಸ ಬೇಕಾದ ಆಹಾರ ಕ್ರಮಗಳು

ಮಕ್ಕಳ ಬೆಳವಣಿಗೆಗೆ ಆಹಾರ ಕ್ರಮ
ಮಕ್ಕಳ ಬೆಳವಣಿಗೆಗೆ ಆಹಾರ ಕ್ರಮ

ಮಕ್ಕಳ ಬೆಳವಣಿಗೆಗೆ ಉತ್ತಮ ಆಹಾರ ಮುಖ್ಯವಾಗಿರುತ್ತೆ. ದಿನದಿಂದ ದಿನಕ್ಕೆ ಬೆಳವಣಿಗೆ ಹೊಂದುವ ಮಕ್ಕಳಿಗೆ ಕೆಲವು ಅಗತ್ಯವಾದ ಪೋಷಕಾಂಶಗಳು ಅಗತ್ಯವಾಗಿರುತ್ತವೆ. ಅವು ಸೂಕ್ತ ಪ್ರಮಾಣದಲ್ಲಿ ದೊರೆಯದೆ ಇದ್ದಾಗ ಮಕ್ಕಳ ಬೆಳವಣಿಗೆಯಲ್ಲಿ ದೋಷ ಹಾಗೂ ಕುಂಟಿತವಾಗುವುದನ್ನು ಕಾಣಬಹುದು. ಕೆಲವು ಅಧ್ಯಯನಗಳ ಪ್ರಕಾರ ಮಕ್ಕಳು ಸೂಕ್ತ ಪೋಷಕಾಂಶಗಳನ್ನು ಹೀರಿಕೊಂಡು ಬೆಳವಣಿಗೆ ಹೊಂದದೆ ಇದ್ದರೆ ಭವಿಷ್ಯದಲ್ಲಿ ಕೆಲವು ರೋಗಗಳು ಕಾಡುತ್ತವೆ.

ಮಕ್ಕಳ ಆಹಾರ ಕ್ರಮದಲ್ಲಿ ಪೋಷಕಾಂಶಗಳು ಇರುವ ಆಹಾರವು ಅತೀ ಅಗತ್ಯವಾಗಿ ಬೇಕೇಬೇಕು. ಯಾಕೆಂದರೆ ಕುಪೋಷಣೆಗೆ ಒಳಗಾಗುವ ಮಕ್ಕಳು ಮುಂದೆ ಹಲವಾರು ರೀತಿಯ ಅನಾರೋಗ್ಯ ಸಮಸ್ಯೆಗಳಿಗೆ ಒಳಗಾಗಬಹುದು. ಆದರೆ ಮಕ್ಕಳ ಪೋಷಣೆಗಳು ನಮ್ಮ ಪೋಷಣೆಗಿಂತ ಭಿನ್ನವಾಗಿರುವುದು. ಹೀಗಾಗಿ ಮಕ್ಕಳಿಗೆ ಆರೋಗ್ಯಕಾರಿ ಜೀವನ ಸಾಗಿಸಲು ಬೇಕಾಗಿರುವ ಪೋಷಕಾಂಶಗಳನ್ನು ಆಹಾರದ ಮೂಲಕ ನೀಡಬೇಕು.

ಹದಿಹರೆಯದವರಲ್ಲಿ ಹೆಚ್ಚಾಗಿ ಕಬ್ಬಿಣ ಮತ್ತು ಕ್ಯಾಲ್ಷಿಯಂಗಳ ಕೊರತೆ ಹೆಚ್ಚಾಗಿರುತ್ತದೆ. ಅದರಲ್ಲೂ ಹುಡುಗಿಯರಲ್ಲಿ ಕಬ್ಬಿಣದ ಕೊರತೆಯು ಹೆಚ್ಚು ಕಾಣಿಸಿಕೊಳ್ಳುತ್ತದೆ. ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗುವ ವಯಸ್ಸಿದು. ಈ ಸಮಯದಲ್ಲಿ ಹಸಿರು ತರಕಾರಿಗಳ ಸೇವನೆ, ಬೇಳೆಕಾಳುಗಳು, ಒಣ ದ್ರಾಕ್ಷಿ, ಗೋಡಂಬಿಯನ್ನು ಸೇವಿಸಬೇಕು. ಆದರೆ ಇವುಗಳ ಅತಿಯಾದ ಸೇವನೆ ಬೇಡ. ನಿಯಮಿತವಾಗಿ ದಿನಕ್ಕೆ ನಾಲ್ಕು ಬಾರಿ ಹೊಟ್ಟೆ ತುಂಬ ಊಟ ಮಾಡಿದರಷ್ಟೆ ಸಾಕು.

ದೇಹದ ಭಾಗಗಳಿಗೆ ಪ್ರೋಟೀನ್ ಅತ್ಯಗತ್ಯ.
ಪ್ರೋಟೀನ್ ಹೊಸ ಜೀವಕೋಶಗಳನ್ನು ರಚಿಸಲು ಮತ್ತು ಅವುಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಇದು ಸ್ನಾಯುಗಳು, ಮೂಳೆಗಳು ಮತ್ತು ದೇಹದ ಇತರ ಅಂಗಗಳಿಗೆ ಬಹಳ ಮುಖ್ಯವಾಗಿದೆ. ಇವು ಮಕ್ಕಳು ಸ್ಟ್ರಾಂಗ್ ಆಗಿ ಬೆಳೆಯಲು ಸಹಾಯ ಮಾಡುತ್ತವೆ.

ಮಕ್ಕಳಿಗೆ ಬೇಕಾಗಿರುವಂತಹ ಪ್ರಮುಖ ಪೋಷಕಾಂಶವೆಂದರೆ ಅದು ಕ್ಯಾಲ್ಸಿಯಂ. ಮಕ್ಕಳಲ್ಲಿ ಆರೋಗ್ಯಕಾರಿ ಮೂಳೆ ಹಾಗೂ ಹಲ್ಲುಗಳು ಬೆಳೆಯಲು ಇದು ಸಹಕಾರಿ. ನರಗಳು, ಸ್ನಾಯುಗಳು ಮತ್ತು ಹೃದಯಕ್ಕೆ ಇದು ತುಂಬಾ ಒಳ್ಳೆಯದು.

ಮಗುವಿಗೆ ಬಲವಾದ ಮೂಳೆಗಳು ಮತ್ತು ಹಲ್ಲುಗಳು, ಆರೋಗ್ಯಕರ ಜೀರ್ಣಕ್ರಿಯೆ, ಆಮ್ಲಜನಕ-ಸಮೃದ್ಧ ರಕ್ತ ಮತ್ತು ಆರೋಗ್ಯಕರ ಪೌಷ್ಠಿಕಾಂಶಗಳನ್ನು ಸೇವಿಸುವ ಅಭ್ಯಾಸಗಳು ಬೇಕಾಗುತ್ತವೆ. ಬಾಲ್ಯದಿಂದಲೇ ಪೌಷ್ಠಿಕಾಂಶದಿಂದ ಕೂಡಿದ ಆಹಾರದಲ್ಲಿ ಹೂಡಿಕೆ ಮಾಡುವುದರಿಂದ ಮುಂದೆ ಮಕ್ಕಳ ಪ್ರಬುದ್ಧತೆಯಲ್ಲಿ ನಂಬಲಾಗದಷ್ಟು ಹೆಚ್ಚಿನ ಆರೋಗ್ಯಕರ ಫಲವಿದೆ.

ಮಕ್ಕಳ ಬೆಳವಣಿಗೆಗೆ ಅನುಸರಿಸ ಬೇಕಾದ ಆಹಾರ ಕ್ರಮಗಳು
ಮಕ್ಕಳಿಗೆ ಪೋಷಕಾಂಶಗಳನ್ನು ಆಹಾರದ ಮೂಲಕ ನೀಡಬೇಕು

ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಅತಿಯಾಗಿ ತಿನ್ನಿಸುವುದನ್ನು ಕಲಿಸಿದರೆ ಬೊಜ್ಜು ತನ್ನಿಂದ ತಾನಾಗಿಯೇ ಬರುತ್ತದೆ. ಅದರಲ್ಲು ಜಂಕ್‌ಫುಡ್‌ನ ಸೇವನೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ.

4 ವರ್ಷದ ನಂತರ ಮಕ್ಕಳು ಸಿಕ್ಕಿದ್ದೆಲ್ಲವನ್ನು ತಿನ್ನಲು ಇಷ್ಟ ಪಡುತ್ತಾರೆ. ಅದರಲ್ಲು ಅಂಗಡಿ ತಿಂಡಿಯನ್ನು ನೋಡಿದರೆ ಬಾಯಲ್ಲಿ ನೀರೂರಿಸುತ್ತಾರೆ. ಈ ರೀತಿ ಸಿಕ್ಕಿದ್ದೆಲ್ಲವನ್ನು ತಿಂದರೆ ಬೊಜ್ಜು ಬರುವುದು ತಪ್ಪುವುದಿಲ್ಲ. ಅದಕ್ಕೆ ಈ ವಯಸ್ಸಿನಲ್ಲಿಯೇ ಎಲ್ಲದಕ್ಕೂ ಕಡಿವಾಣ ಹಾಕಬೇಕು.

ಕೊಬ್ಬುಗಳು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ ಕಾರ್ಬೋಹೈಡ್ರೇಟ್ ಗಳಂತೆ, ಕೊಬ್ಬುಗಳು ಸಹ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ. ಅದೇ ಸಮಯದಲ್ಲಿ, ಇದು ಜೀವಸತ್ವಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಮಕ್ಕಳಿಗೆ ಎನರ್ಜಿ ನೀಡಲು ಸಹಾಯಕವಾಗಿದೆ. ಅದಕ್ಕಾಗಿ ಮಕ್ಕಳಿಗೆ ಡ್ರೈ ಫ್ರುಟ್ಸ್ , ಅವಕಾಡೊ ಮೊದಲಾದ ಆಹಾರಗಳನ್ನು ನೀಡಿ.

ಬೇಕು-ಬೇಡಗಳನ್ನು ಚರ್ಚಿಸಿ ಆಹಾರವನ್ನು ಕೊಡುವ ಪದ್ಧತಿಯನ್ನು ಅಭ್ಯಾಸ ಮಾಡಿಕೊಳ್ಳಿರಿ. ಇದರಿಂದ ಅತಿ ಸ್ಥೂಲಕಾಯವನ್ನು ಕಡಿಮೆ ಮಾಡಬಹುದು. ಈಗಿನಿಂದಲೆ ಪೋಷಕರು ಮಕ್ಕಳಿಗೆ ಈ ಮೇಲಿನ ಆಹಾರ ಪದ್ಧತಿಯನ್ನು ಅನುಕರಿಸಿದರೆ ಆರೋಗ್ಯ ಮತ್ತು ಸುಂದರ ದೇಹವನ್ನು ಹೊಂದಿದ ಮಕ್ಕಳು ನಿಮ್ಮದಾಗುತ್ತಾರೆ.

ಡೈರಿ ಉತ್ಪನ್ನಗಳು, ಮೊಟ್ಟೆ, ಒಣ ಬೀಜಗಳು ಮತ್ತು ಹಸಿ ಧಾನ್ಯಗಳು, ಮಾಂಸ, ಮೀನು, ಏಕದಳ ಮತ್ತು ದ್ವಿದಳ ಧಾನ್ಯಗಳು ಎಲ್ಲವೂ ಪ್ರೋಟೀನ್ ಭರಿತ ಆಹಾರಗಳಾಗಿವೆ. ಉತ್ತಮ ಪ್ರೋಟೀನ್ ಸಂಯೋಜನೆಗಾಗಿ ಎಲ್ಲಾ ಅಮೈನೋ ಆಮ್ಲಗಳನ್ನು ಪಡೆಯಲು ವಿವಿಧ ರೀತಿಯ ಏಕದಳ ಮತ್ತು ದ್ವಿದಳ ಧಾನ್ಯಗಳನ್ನು ಕ್ರಮಬದ್ದವಾಗಿ ಸೇವಿಸಲು ನೀಡಬೇಕು. ಡೈರಿ ಉತ್ಪನ್ನಗಳು, ಒಣ ಬೀಜಗಳು ಮತ್ತು ಹಸಿ ಧಾನ್ಯಗಳು, ವಿಶೇಷವಾಗಿ ಮೊಳಕೆ ಬಂದ ಧಾನ್ಯಗಳು ಪ್ರತಿದಿನದ ಪ್ರಧಾನ ಆಹಾರದ ಭಾಗವಾಗಬೇಕು.

ಕಾರ್ಬೋಹೈಡ್ರೇಟ್‌ಗಳು ಮಕ್ಕಳ ಅರೋಗ್ಯ ಉತ್ತಮವಾಗಿರಲು ಪೋಷಕಾಂಶಯುಕ್ತ ಆಹಾರಗಳನ್ನು ಮಕ್ಕಳಿಗೆ ನೀಡಬೇಕು. ಕಾರ್ಬೋಹೈಡ್ರೇಟ್ ಭರಿತ ಬ್ರೆಡ್, ಧಾನ್ಯಗಳು, ಅಕ್ಕಿ ಮತ್ತು ತರಕಾರಿಗಳನ್ನು ನೀವು ಮಕ್ಕಳ ಆಹಾರದಲ್ಲಿ ಸೇರಿಸಬಹುದು. ಇವು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಾಯಕವಾಗಿದೆ.

ಮಕ್ಕಳ ಬೆಳವಣಿಗೆಗೆ ಅನುಸರಿಸ ಬೇಕಾದ ಆಹಾರ ಕ್ರಮಗಳು
ಕಾರ್ಬೋಹೈಡ್ರೇಟ್‌ಗಳು

ಎಲ್ಲಾ ಬೀಜಗಳಲ್ಲಿಯೂ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇರುತ್ತದೆ. ಹಸಿರು ಎಲೆಗಳ ತರಕಾರಿಗಳನ್ನು ವಾರಕ್ಕೆ 3 ಬಾರಿಯಾದರೂ ಆಹಾರದಲ್ಲಿ ಅಳವಡಿಸಬೇಕು. ಚಿಯಾ, ಎಳ್ಳು ಮತ್ತು ಸೂರ್ಯಕಾಂತಿ ಬೀಜಗಳು ಸಹ ಕ್ಯಾಲ್ಸಿಯಂನಿಂದ ಸಮೃದ್ಧವಾಗಿವೆ.

ಬ್ಯಾಡ್ಮಿಟನ್, ಬಾಸ್ಕೆಟ್ ಬಾಲ್, ಕ್ರಿಕೆಟ್ ಸೇರಿದಂತೆ ಇನ್ನಿತರ ದೈಹಿಕವಾಗಿ ದಣಿಯುವಂತಹ ಆಟದಲ್ಲಿ ತೊಡಗಿಕೊಳ್ಳಲು ಬಿಡಿ. ಆದಷ್ಟು ಟಿ.ವಿ, ಮೊಬೈಲ್ ಸೇರಿದಂತೆ ಇನ್ನಿತರ ಜಡತ್ವದ ಜೀವನ ಕ್ರಮವನ್ನು ತಪ್ಪಿಸಿ. ಅವು ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹದಗೆಡಿಸುವುದು. ಹೊರಾಂಗಣದಲ್ಲಿ ಆಡುವುದರಿಂದ ವಿಟಮಿನ್ ಡಿಯು ಉತ್ತಮ ಪ್ರಮಾಣದಲ್ಲಿ ದೊರೆಯುವುದು. ಜೊತೆಗೆ ಆರೋಗ್ಯಕರ ಬೆಳವಣಿಗೆ ಆಗುವುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

2 Comments

ನಕ್ಷತ್ರಗಳ ಹುಟ್ಟು ಸಾವು

ನಕ್ಷತ್ರಗಳ ಹುಟ್ಟು ಸಾವು

ಬೆಳಗಾವಿ

ಐತಿಹಾಸಿಕ ಮತ್ತು ಧಾರ್ಮಿಕ ಸ್ಮಾರಕಗಳನ್ನು ಹೊಂದಿರುವ ಬೆಳಗಾವಿ ಕೋಟೆ