in

ಮಹಾವಿಷ್ಣು ವರಾಹ ರೂಪ ಯಾಕೆ ತಾಳಿದ್ದು?

ಮಹಾವಿಷ್ಣು ವರಾಹ ರೂಪ
ಮಹಾವಿಷ್ಣು ವರಾಹ ರೂಪ

ಲೋಕ ರಕ್ಷಣೆಗಾಗಿ ಮಹಾವಿಷ್ಣು ದಶಾವತಾರಗಳನ್ನು ತಾಳಿದ್ದಾನೆ, ಧರ್ಮ ಸಂಸ್ಥಾಪನೆಗಾಗಿ ಶ್ರೀಮನ್ನಾರಾಯಣ ದಶಾವತಾರಗಳಲ್ಲಿ ಮೂರನೇ ಅವತಾರವೇ ವರಾಹ ಅವತಾರ. ಚೈತ್ರ ಬಹುಳ ತ್ರಯೋದಶಿಯ ಮಧ್ಯಾಹ್ನದ ಸಮಯದಲ್ಲಿ ವಿಷ್ಣು ವರಾಹ ಅವತಾರ ತಾಳಿದ್ದಾನೆ ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ ವರಾಹ ಅವತಾರದಲ್ಲಿ ಮಹಾವಿಷ್ಣುವು ಹಂದಿಯ ತಲೆ, ಮಾನವನ ದೇಹವುಳ್ಳ ರೂಪದಲ್ಲಿ ಅವತರಿಸಿದ ಎಂದು ಹೇಳಲಾಗುತ್ತೆ.

ವರಾಹ ಅವತಾರದಲ್ಲಿ ಮಹಾವಿಷ್ಣುವು ಹಂದಿಯ ತಲೆ, ಮಾನವನ ದೇಹವುಳ್ಳ ರೂಪದಲ್ಲಿ ಅವತರಿಸಿದ ಎಂದು ಹೇಳಲಾಗುತ್ತೆ. ಅಷ್ಟಕ್ಕೂ, ಮಹಾವಿಷ್ಣು ಹಂದಿಯ ರೂಪದಲ್ಲಿ ಅವತರಿಸಿದ್ದಾದ್ರೂ ಏಕೆ ?

ಮಹಾವಿಷ್ಣು ವರಾಹ ರೂಪ ಯಾಕೆ ತಾಳಿದ್ದು?
ಮಹಾವಿಷ್ಣು

ವರಾಹಾವತಾರದಲ್ಲಿ ವಿಷ್ಣುವು ಹಿರಣ್ಯಾಕ್ಷನನ್ನು ಸಂಹರಿಸಿದನು:

ಹಿಂದೂ ಧರ್ಮದಲ್ಲಿ, ಹಿರಣ್ಯಾಕ್ಷನು ಒಬ್ಬ ಅಸುರನಾಗಿದ್ದನು ಮತ್ತು ದಿತಿ ಹಾಗೂ ಕಶ್ಯಪರ ಪುತ್ರ.

ಕಶ್ಯಪ ಒಬ್ಬ ಪ್ರಾಚೀನ ಋಷಿಯಾಗಿದ್ದನು. ಪ್ರಸ್ತುತ ಮನ್ವಂತರದಲ್ಲಿ ಸಪ್ತರ್ಷಿಗಳಲ್ಲಿ ಒಬ್ಬನು; ಅತ್ರಿ, ವಶಿಷ್ಠ, ವಿಶ್ವಾಮಿತ್ರ, ಗೌತಮ, ಜಮದಗ್ನಿ, ಭಾರದ್ವಾಜರು ಉಳಿದವರು.

ಅವನು ದೇವತೆಗಳು, ಅಸುರರು, ನಾಗರು ಮತ್ತು ಸಮಸ್ತ ಮಾನವಕುಲದ ತಂದೆ. ಅವನು ಅದಿತಿಯನ್ನು ಮದುವೆಯಾಗಿ ಆದಿತ್ಯನಾದ ಅಗ್ನಿಗೆ ಜನ್ಮವಿತ್ತನು. ಅವನ ಎರಡನೇ ಹೆಂಡತಿ ದಿತಿಯಿಂದ ದೈತ್ಯರು ಜನ್ಮತಾಳಿದರು. ದಿತಿ ಹಾಗೂ ಅದಿತಿಯರು ರಾಜ ದಕ್ಷ ಪ್ರತಾಪತಿಯ ಮಕ್ಕಳು. ಇವರಿಬ್ಬರು ಶಿವನ ಪತ್ನಿ ಸತಿಯ ಸೋದರಿಯರು.

ದಿತಿಯು ಸಂಜೆ ವೇಳೆಯಲ್ಲಿ ಗರ್ಭಧರಿಸಿದಳು, ಮತ್ತು ತನ್ನ ಗರ್ಭದಲ್ಲಿ ಆ ಮಗುವನ್ನು ನೂರು ವರ್ಷ ಹೊತ್ತಳು. ಈ ಮಗುವೇ ಹಿರಣ್ಯಾಕ್ಷ.

ಕಾಲ ಮತು ಸೃಷ್ಟಿಯ ತುಂಬಾ ಮೊದಲು, ಹಿಂದೂ ದೇವತೆ ವಿಷ್ಣು ಒಂದು ಬೃಹತ್ ಸಮುದ್ರದ ತೀರದಲ್ಲಿ ಇರುತ್ತಿದ್ದನು. ಅದೇ ತೀರದಲ್ಲಿ ಎರಡು ಬೆಳ್ಳಕ್ಕಿಗಳೂ ಗೂಡು ಕಟ್ಟಿಕೊಂಡಿದ್ದವು. ಪ್ರತಿ ವರ್ಷ ಹೆಣ್ಣು ಬೆಳ್ಳಕ್ಕಿ ಸಮುದ್ರದ ತೀರದಲ್ಲಿ ಮೊಟ್ಟೆಗಳನ್ನು ಇಡುತ್ತಿತ್ತು. ಆದರೆ ಸಮುದ್ರದ ನೀರು ರಭಸದಿಂದ ಒಳನುಗ್ಗಿ ಮೊಟ್ಟೆಗಳನ್ನು ಕೊಚ್ಚಿಕೊಂಡು ಹೋಗುತ್ತಿತ್ತು. ಹೆಣ್ಣು ಬೆಳ್ಳಕ್ಕಿಯು ಪ್ರತಿ ವರ್ಷ ತನ್ನ ಮೊಟ್ಟೆಗಳನ್ನು ಮತ್ತಷ್ಟು ದೂರ ಇಡುತ್ತಿತ್ತು ಆದರೆ ಸಮುದ್ರದ ನೀರು ಪ್ರತಿ ಬಾರಿಯೂ ಮೊಟ್ಟೆಗಳನ್ನು ಕೊಚ್ಚಿಕೊಂಡು ಹೋಗುತ್ತಿತ್ತು.

ಮಹಾವಿಷ್ಣು ವರಾಹ ರೂಪ ಯಾಕೆ ತಾಳಿದ್ದು?
ಹೊಯ್ಸಳೇಶ್ವರ ದೇವಾಲಯ, ಹಳೇಬೀಡು. ವರಾಹ ದೇವಾಲಯ ಕೆಳಗೆ ಬಿದ್ದ ರಾಕ್ಷಸ ಮತ್ತು ಭುಜದ ಮೇಲೆ ಭೂದೇವಿ

ತಮ್ಮ ನಷ್ಟದಿಂದ ಬೆಳ್ಳಕ್ಕಿಗಳು ದುಃಖಿತಗೊಂಡವು. ಹತಾಶೆಯಲ್ಲಿ, ತಮ್ಮ ನೆರವಿಗೆ ಬರುವಂತೆ, ಮಹಾ ಸಂರಕ್ಷಕ ವಿಷ್ಣುವಿಗೆ ಮೊರೆಯಿಟ್ಟವು. ಅವುಗಳ ದುರದೃಷ್ಟದ ಪರಿಸ್ಥಿತಿ ಬಗ್ಗೆ ವಿಷ್ಣುಗೆ ಕರುಣೆ ಸಹಾನುಭೂತಿ ಅನಿಸಿತು. ಅವನು ತನ್ನ ಬಾಯಿ ತೆರೆದು ಬೃಹತ್ ಗುಟುಕಿನಲ್ಲಿ ಸಮುದ್ರವನ್ನು ನುಂಗಿದನು. ಎಲ್ಲಿ ಸಮುದ್ರವಿತ್ತೊ, ಈಗ ಹೊಸದಾಗಿ ಸೃಷ್ಟಿಗೊಂಡ ತಾಯಿಯಿತ್ತು . ಅಷ್ಟು ಬೃಹತ್ ಸಮುದ್ರವನ್ನು ನುಂಗಿದ ಸಾಹಸದಿಂದ ವಿಷ್ಣು ಬಹಳ ಆಯಾಸಗೊಂಡಿದ್ದನು. ಅವನು ವಿಶ್ರಮಿಸಲು ಅಡ್ಡಾದನು ಮತ್ತು ಶೀಘ್ರದಲ್ಲೇ ಗಾಢ ನಿದ್ರೆಗೆ ಹೋದನು. ಅಸುರ ಹಿರಣ್ಯಾಕ್ಷನು ಹತ್ತಿರದಲ್ಲೆ ಅವಿತಿದ್ದನು. ವಿಷ್ಣು ಮಲಗಿದ್ದನ್ನು ನೋಡಿ, ಅವನು ಅವಕಾಶ ಬಳಸಿಕೊಂಡು ರಕ್ಷಣಾರಹಿತ ಭೂದೇವಿಯ ಮೇಲೆ ಕ್ರೂರವಾಗಿ ದಾಳಿ ಮಾಡಿದನು. ಅವನ ಕ್ರೌರ್ಯ ಎಷ್ಟು ಭಾರಿ ಪರಿಮಾಣದಲ್ಲಿತ್ತೆಂದರೆ ಅವಳ ಅವಯವಗಳು ಮುರಿದು ಮೇಲೆ ನೂಕಲ್ಪಟ್ಟವು. ಆಕಾಶದ ಕಡೆ ಚಾಚಿಕೊಂಡ ಈ ಮುರಿದ ಅವಯವಗಳು ಹಿಮಾಲಯವನ್ನು ರಚಿಸಿದವು.

ಹಿರಣ್ಯಾಕ್ಷನು ಭೂಮಿಯನ್ನು ಸಾಗರದ ತಳಕ್ಕೆ ತೆಗೆದುಕೊಂಡು ಹೋದಾಗ ವಿಷ್ಣುವು ಅವನನ್ನು ಸಂಹರಿಸಿದನು.

ವರಾಹ ಅವತಾರದ ಕತೆ:

ಮಹಾವಿಷ್ಣು ವರಾಹ ರೂಪ ಯಾಕೆ ತಾಳಿದ್ದು?
ಮಹಾವಿಷ್ಣುವಿನ ವರಾಹ ಅವತಾರ

ವೈಕುಂಠದ ದ್ವಾರಪಾಲಕರಾದ ಜಯ ವಿಜಯರೊಂದಿಗೆ ವರಾಹ ಅವತಾರದ ಕತೆ ಆರಂಭವಾಗುತ್ತದೆ. ಒಮ್ಮೆ ಮಹಾವಿಷ್ಣುವನ್ನು ಭೇಟಿ ಮಾಡಲು ನಾಲ್ವರು ಋಷಿ ಕುಮಾರರು ವೈಕುಂಠಕ್ಕೆ ಬರುತ್ತಾರೆ, ವೈಕುಂಠದ ಏಳನೇ ದ್ವಾರದಲ್ಲಿ ಋಷಿ ಕುಮಾರರನ್ನು ದ್ವಾರಪಾಲಕರಾದ ಜಯ ವಿಜಯರು ತಡೆಯುತ್ತಾರೆ. ಅವರ ಮಧ್ಯೆ ವಾಗ್ವಾದವೂ ನಡೆಯುತ್ತದೆ. ಅವರು ಬ್ರಹ್ಮನ ಮಾನಸ ಪುತ್ರರು ಎಂಬುದನ್ನೂ ತಿಳಿಯದೆ ದ್ವಾರ ಪಾಲಕರಾದ ಜಯ ವಿಜಯರು ಅವರೊಂದಿಗೆ ಜಗಳವಾಡುತ್ತಾರೆ, ಕೋಪಗೊಂಡ ಋಷಿ ಕುಮಾರರು ನಿಮ್ಮಲ್ಲಿನ ದೈವತ್ವವು ಮಾಯವಾಗಲಿ, ನೀವು ಸಾಮಾನ್ಯರಂತೆ ಭೂಮಿಯ ಮೇಲೆ ಜನಿಸಿರೆಂದು ಶಾಪವನ್ನ ನೀಡುತ್ತಾರೆ.

ಕೊನೆಗೆ ದ್ವಾರ ಪಾಲಕರಾದ ಜಯ ವಿಜಯರಿಗೆ ತಮ್ಮ ತಪ್ಪಿನ ಅರಿವಾಗುತ್ತೆ. ಅಹಂಕಾರದಿಂದ ಋಷಿ ಕುಮಾರರ ಶಾಪಕ್ಕೆ ಗುರಿಯಾದ ಜಯ ವಿಜಯರಿಗೆ ಲಕ್ಷ್ಮೀ ನಾರಾಯಣರು ಒಂದು ಸಲಹೆ ನೀಡುತ್ತಾರೆ. ಹಾಗೆ ನೀಡುವ ಸಲಹೆಯೇ ಭೂ ಲೋಕದಲ್ಲಿ ನನ್ನ ಭಕ್ತರಾಗಿ ಏಳು ಜನ್ಮಗಳನ್ನೆತ್ತಿ ಮತ್ತೆ ವೈಕುಂಠಕ್ಕೆ ಬರುತ್ತಿರೋ ಅಥವಾ ಶತ್ರುಗಳಾಗಿ ಮೂರು ಜನ್ಮಗಳನ್ನೆತ್ತಿ ಮತ್ತೆ ವೈಕುಂಠಕ್ಕೆ ಬರುತ್ತಿರೋ ಎಂಬ ಸಲಹೆ ನೀಡುತ್ತಾರೆ. ಆಗ ದ್ವಾರಪಾಲಕರು ನಾವು ಹೆಚ್ಚು ಕಾಲ ನಿಮ್ಮಿಂದ ದೂರವಿರಲು ಸಾಧ್ಯವಿಲ್ಲ, ಶತ್ರುಗಳಾಗಿ ಮೂರು ಜನ್ಮವನ್ನ ಎತ್ತಿ ನಾವು ಶೀಘ್ರವಾಗಿ ನಿಮ್ಮಲ್ಲಿಗೆ ಸೇರುತ್ತೆೇವೆಂದು ಎಂದು ಹೇಳುತ್ತಾರೆ, ನಂತರ ಜಯ ವಿಜಯರು ಹಿರಣ್ಯಾಕ್ಷ, ಹಿರಣ್ಯಕಶಿಪುವಾಗಿ ಭೂ ಲೋಕದಲ್ಲಿದ್ದ ಋಷಿ ಕಶ್ಯಪ ಮತ್ತು ದಿತಿ ದಂಪತಿಗಳ ಮಕ್ಕಳಾಗಿ ಜನಿಸುತ್ತಾರೆ.

ಇವರ ದುಷ್ಟತನದಿಂದ ಬ್ರಹ್ಮಾಂಡದಲ್ಲಿ ಅನಾಹುತವನ್ನು ಸೃಷ್ಟಿಸ್ತಾರೆ. ಅದ್ರಲ್ಲೂ ಹಿರಿಯ ಸಹೋದರ ಹಿರಣ್ಯಾಕ್ಷ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ವರಗಳ್ಳನ್ನು ಪಡೆಯುತ್ತಾನೆ. ತನಗೆ ಯಾವುದೇ ಪ್ರಾಣಿ ಅಥವಾ ಮನುಷ್ಯನಿಂದ ಸಾವು ಬಾರದಂತೆ ವರ ಪಡೆಯುತ್ತಾನೆ. ಬ್ರಹ್ಮನಿಂದ ವರ ಪಡೆದು ಅಹಂಕಾರದಿಂದ ಮೆರೆಯುತ್ತಿದ್ದ ಹಿರಣ್ಯಾಕ್ಷ ಭೂಮಿಯ ಮೇಲಿದ್ದ ಜನರನ್ನೂ, ದೇವತೆಗಳನ್ನೂ ಹಿಂಸಿಸ್ತಾನೆ. ಕಾರಣ ಹಿರಣ್ಯಾಕ್ಷನಿಗೆ ಇಡೀ ಭೂಮಿಯನ್ನು ತನ್ನ ವಶದಲ್ಲಿ ಇಟ್ಟುಕೊಳ್ಳಬೇಕೆಂಬ ದುರಾಸೆ ಇತ್ತು. ಭೂಮಿಯನ್ನು ಕದ್ದು ಮಹಾಸಾಗರಕ್ಕೆ ಎಸೆದಿದ್ದು. ಸಾಗರದಲ್ಲಿದ್ದ ಭೂದೇವಿಯನ್ನು ರಕ್ಷಿಸುವ ಸಲುವಾಗಿ, ಮಹಾವಿಷ್ಣು ವರಾಹ ಅವತಾರ ತಾಳುತ್ತಾನೆ.

ಬ್ರಹ್ಮನಿಂದ ವರವನ್ನು ಪಡೆಯುವಾಗ ಹಿರಣ್ಯಾಕ್ಷನು ತನ್ನ ನಾಶಕ್ಕೆ ಹೆಸರಿಸಿದ ಪ್ರಾಣಿಗಳ ಪಟ್ಟಿಯಲ್ಲಿ ಹಂದಿಯನ್ನು ಸೇರಿಸಿರೋದಿಲ್ಲ. ಈ ಕಾರಣದಿಂದಾಗಿ, ಮಹಾವಿಷ್ಣುವು ದೊಡ್ಡ ದಂತಗಳನ್ನು ಹೊಂದಿದ ವರಾಹ ರೂಪವನ್ನು ತಾಳಿ ಘರ್ಜಿಸುತ್ತಾ ಜಲ ಪ್ರವೇಶಿಸಿದ. ಸಾಗರದೊಳಗಿದ್ದ ಭೂಮಿಯನ್ನು ತನ್ನ ಕೋರೆ ಹಲ್ಲುಗಳ ಮಧ್ಯೆ ಹಿಡಿದಿಟ್ಟುಕೊಂಡ. ಕೋರೆಗಳ ಮಧ್ಯೆ ಇರಿಸಿಕೊಂಡೇ ಪೃಥ್ವಿಯನ್ನು ಮೇಲಕ್ಕೆ ತಂದ. ನಂತರ ಹಿರಣ್ಯಾಕ್ಷನನ್ನು ಸಂಹರಿಸಿದ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಹಿಪ್ಪಲಿ ಔಷಧೀಯ ಗುಣಗಳು

ಪಿಪ್ಪಲಿ ಅಥವಾ ಹಿಪ್ಪಲಿ ಔಷಧೀಯ ಗುಣಗಳು

ಭಾರತವು ಗಣರಾಜ್ಯವಾದ ದಿನ

ಜನವರಿ 26 ರಂದು, ಭಾರತೀಯ ಸಂವಿಧಾನ ಜಾರಿಗೆ ಬಂದು ಭಾರತವು ಗಣರಾಜ್ಯವಾದ ದಿನ