in ,

ನೇರಳೆ ಹಣ್ಣು ಈಡೀ ದೇಹದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ

ನೇರಳೆ ಹಣ್ಣು
ನೇರಳೆ ಹಣ್ಣು

ಬೇಸಿಗೆಯ ಹಣ್ಣುಗಳಲ್ಲಿ ಜಾಮೂನ್ ಅಥವಾ ನೇರಳೆ ಹಣ್ಣು ತುಂಬಾ ಫೇಮಸ್. ಕರಿಮೆಣಸಿನ ಪುಡಿ ಮತ್ತು ಉಪ್ಪಿನೊಂದಿಗೆ ಇದನ್ನು ತಿನ್ನಲು ಜನ ತುಂಬಾ ಇಷ್ಟಪಡುತ್ತಾರೆ. ಆದರೆ, ನೇರಳೆ ಹಣ್ಣು ಕೇವಲ ರುಚಿಯಾಗಿರುವುದು ಮಾತ್ರವಲ್ಲದೆ, ಆರೋಗ್ಯವನ್ನು ಸಹ ಕಾಪಾಡುವ ಹಲವು ಅಂಶಗಳನ್ನು ಒಳಗೊಂಡಿದೆ ಎಂಬುದು ಕೆಲವೇ ಜನರಿಗೆ ತಿಳಿದಿದೆ. ಜಾಮೂನ್ ಅಥವಾ ನೇರಳೆ ಹಣ್ಣುಗಳು ಹಲವು ಔಷಧಿಯ ಗುಣಗಳನ್ನು ಹೊಂದಿವೆ. ಇದು ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ.

ನೇರಳೆ ಹಣ್ಣು ಔಷಧೀಯ ಗುಣವುಳ್ಳ ಹಣ್ಣಾಗಿದೆ. ಇದು ಭಾರತದ ಮೂಲವಾದ್ದರಿಂದ ಭಾರತವನ್ನು ಜಂಬೂದ್ವೀಪ ಎಂದು ಕರೆಯಲಾಗುತ್ತದೆ. ಹಣ್ಣುಗಳ ಆಕಾರದಲ್ಲಿ ಎರಡು ರೀತಿಯ ಹಣ್ಣುಗಳಿವೆ. ಗೋರಿಯಾಕಾರದ ಹಣ್ಣುಗಳನ್ನು ಬಿಡುವ ಪ್ರಬೇದಕ್ಕೆ ”ನಾಯಿ ನೇರಳೆ” ಎನ್ನುವರು. ಈ ಮರವನ್ನು ವೈಜ್ಞಾನಿಕವಾಗಿ ”ಸೈಸಿಜಿಯ ಪ್ರುಟಕೋಸು” ಎಂದು ಕರೆಯಲಾಗುತ್ತದೆ.

ಜಂಬುನೇರಳೆ ಹಣ್ಣಿನಲ್ಲಿ ಹಲವಾರು ಪೋಷಕಾಂಶಗಳು ಅಡಗಿವೆ. ವಿಟಮಿನ್ ಸಿ, ಥಯಾಮಿನ್, ರಿಜೋಪ್ಲಾವಿನ್ ಹಾಗೂ ನಿಯಾಸಿನ್ ಸೇರಿದಂತೆ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. 

ನೇರಳೆ ಹಣ್ಣು ಈಡೀ ದೇಹದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ
ನೇರಳೆ ಹಣ್ಣುಗಳು

ಆಯುರ್ವೇದದ ಪ್ರಕಾರ, ಅಧಿಕ ರಕ್ತದೊತ್ತಡ ರೋಗಿಗಳಿಗೆ ಜಾಮೂನ್ ಸೇವನೆಯು ತುಂಬಾ ಪ್ರಯೋಜನಕಾರಿಯಾಗಿದೆ. ಜಾಮೂನ್ ಹಣ್ಣು ಆಹಾರದಲ್ಲಿ ಸೇರಿಸುವುದರಿಂದ ಇದನ್ನು ಸುಲಭವಾಗಿ ನಿಯಂತ್ರಿಸಬಹುದು. ಆದರೆ ಅನೇಕ ಜನರು ಅದನ್ನು ನಿಯಂತ್ರಿಸಲು ಹೆಚ್ಚು ತಿನ್ನಲು ಪ್ರಾರಂಭಿಸುತ್ತಾರೆ, ಇದರಿಂದಾಗಿ ಕಡಿಮೆ ರಕ್ತದೊತ್ತಡದ ಸಮಸ್ಯೆ ಬರಬಹುದು.

ನೇರಳೆ ಹಣ್ಣನ್ನು ಮಾತ್ರವಲ್ಲದೆ ಅದರ ಬೀಜಗಳು, ತೊಗಟೆ ಮತ್ತು ಎಲೆಗಳನ್ನು ವಿವಿಧ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇಡೀ ದೇಹದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರುವ ಫ್ಲೇವನಾಯ್ಡ್‌ಗಳ ಜೊತೆಗೆ ಜಾಮೂನ್ ಉತ್ಕರ್ಷಣ ನಿರೋಧಕಗಳ ಶ್ರೀಮಂತ ಮೂಲವಾಗಿದೆ.

ಜಾಮೂನಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಹಾಗಂತ ಸಿಕ್ಕಾಪಟ್ಟೆ ತಿಂದರೆ ಮಲಬದ್ಧತೆ ಸಮಸ್ಯೆ ಕಾಡಬಹುದು. ಹಾಗಾಗಿ ಸ್ವಲ್ಪ ಪ್ರಮಾಣದಲ್ಲಿ ತಿನ್ನುವುದು ಆರೋಗ್ಯದ ದೃಷ್ಠಿಯಿಂದ ಒಳ್ಳೆಯದು.

ಔಷಧೀಯ ಗುಣವುಳ್ಳ ಮತ್ತೊಂದು ಪ್ರಬೇದ ಹೆಸರು ”ಸೈಸೀಜಿಯಂ ಕ್ಯೂಲಿನಿ”. ಇದರಲ್ಲಿ ಬಿಡುವ ನೇರಳೆ ಹಣ್ಣುಗಳು ಉದ್ದಕ್ಕಿರುತ್ತವೆ. ಈ ಹಣ್ಣಿನ ಬೀಜ ಮಧುಮೇಹವನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿವೆ. ಅಲ್ಲದೆ ಈ ಮರದ ಚಿಗುರನ್ನು ಕಷಾಯದ ರೀತಿ ಮಾಡಿ ಸೇವಿಸುತ್ತಾರೆ.

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಎಲಾಜಿಕ್ ಹೆಸರಿನ ಆಮ್ಲವು ನೇರಳೆ ಹಣ್ಣಿನ ಬೀಜಗಳಲ್ಲಿ ಕಂಡುಬರುತ್ತದೆ, ಇದು ಅತ್ಯಂತ ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದೆ. ಇದು ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನೇರಳೆ ಹಣ್ಣು ಈಡೀ ದೇಹದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ
ನೇರಳೆ ಹಣ್ಣಿನ ಜ್ಯೂಸು

ಇದರಲ್ಲಿನ ನಾರಿನಾಂಶ ಜೀರ್ಣಕ್ರಿಯೆಯಲ್ಲಿನ ಸಮಸ್ಯೆಯನ್ನು ದೂರ ಮಾಡಿದರೆ. ವಿಟಮಿನ್ ಎ ಕಣ್ಣಿನ ಆರೋಗ್ಯ ಸುಧಾರಿಸುತ್ತದೆ. ನಿಯಾಸಿನ್, ಪಿರಿಡಾಕ್ಸಿನ್, ರಿಬೋಪ್ಲಾವಿನ್ ಮತ್ತು ಪೋಲಿಕ್ ಆಮ್ಲವಿದೆ. ವಿಟಮಿನ್ ಸಿ ಕೂಡ ಇದ್ದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಹಿಮೋಗ್ಲೋಬಿನ್ ಹೆಚ್ಚಿಸುವಲ್ಲಿ ಪರಿಣಾಮಕಾರಿ

ನೇರಳೆ ಹಣ್ಣು ಕಬ್ಬಿಣ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಇದು ರಕ್ತದ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಅದನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ನೇರಳೆ ಎಲೆಯನ್ನು ಚೆನ್ನಾಗಿ ನುಣ್ಣಗೆ ಅರೆದು ಆ ಲೇಹವನ್ನು ಸುಟ್ಟ ಗಾಯದ ಮೇಲೆ ಕ್ರಮವಾಗಿ ಲೇಪಿಸುತ್ತಾ ಬಂದರೆ ಸುಟ್ಟ ಗಾಯ ಬೇಗ ಮಾಯವಾಗುವುದಲ್ಲದೆ ಕಲೆಯೂ ಸಹ ಮರೆಯಾಗುತ್ತದೆ.

ಹಲ್ಲುಗಳ ಆರೋಗ್ಯಕ್ಕೆ ಉತ್ತಮ

ನೇರಳೆ ಹಣ್ಣುಗಳು ಬ್ಯಾಕ್ಟೀರಿಯಾ ವಿರೋಧಿ ಅಂಶಗಳನ್ನು ಹೊಂದಿವೆ. ಇದರಿಂದ ಹಲ್ಲುಗಳು ಗಟ್ಟಿಗೊಳ್ಳುತ್ತವೆ.

ಮೂತ್ರ ವಿಸರ್ಜನೆ ಮಾಡುವಾಗ ಮೂತ್ರ ದ್ವಾರದಲ್ಲಿ ಉರಿಯಾಗುತ್ತಿದ್ದರೆ ಹಾಗು ಅಂಗಾಲು ಮತ್ತು ಅಂಗೈಯಲ್ಲಿಯ ಉರಿಗೆ ನೇರಳೆ ಶರಬತ್ ಉತ್ತಮ ಔಷಧವಾಗಿದೆ. ಅಲ್ಲದೆ ದಾಹವನ್ನು ಇಂಗಿಸುತ್ತದೆ. ಪಿತ್ತ ಶಮನ ಮಾಡುತ್ತದೆ.

ಉತ್ತಮ ಮೊಡವೆ ನಿವಾರಕ ಕೂಡ ಹೌದು

ನೇರಳೆ ಹಣ್ಣು ಚರ್ಮದ ಆರೋಗ್ಯಕ್ಕೆ ತುಂಬಾ ಹಿತಕಾರಿ ಎಂದು ಪರಿಗಣಿಸಲಾಗಿದೆ. ಇದರ ಬೀಜಗಳು ಮೊಡವೆಗಳನ್ನು ತೆಗೆದುಹಾಕುವಲ್ಲಿ ತುಂಬಾ ಪರಿಣಾಮಕಾರಿಯಾಗಿವೆ. ಇದರಿಂದ ನಿಮ್ಮ ಮುಖದ ಚರ್ಮವು ನೈಸರ್ಗಿಕ ರೀತಿಯಲ್ಲಿ ಪ್ರಯೋಜನಗಳನ್ನು ಪಡೆಯುತ್ತದೆ.

ತೂಕ ಇಳಿಕೆಗೆ ಸಹಾಯಕ. ನೇರಳೆ ಹಣ್ಣಿನ ತಿರುಳು ಮತ್ತು ಬೀಜಗಳಲ್ಲಿ ಉತ್ತಮ ಪ್ರಮಾಣದ ನಾರಿನಂಶ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಇದು ತೂಕ ಇಳಿಕೆಗೆ ಇದು ತುಂಬಾ ಪರಿಣಾಮಕಾರಿಯಾಗಿದೆ. ಇದಲ್ಲದೆ ಬೆರ್ರಿ ಹಣ್ಣುಗಳು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತವೆ. ಇದಲ್ಲದೇ ಅಲ್ಸರ್ ಸಮಸ್ಯೆ ನಿವಾರಣೆಗೂ ಕೂಡ ಈ ಹಣ್ಣು ತುಂಬಾ ಸಹಕಾರಿಯಾಗಿದೆ.

ನೇರಳೆ ಹಣ್ಣು ಈಡೀ ದೇಹದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ
ನೇರಳೆ ಬೀಜಗಳು

ವಸಡುಗಳಿಂದ ರಕ್ತ ಸ್ರಾವವಾಗುತ್ತಿದ್ದರೆ ನೇರಳೆಯ ಚಿಗುರು ಎಲೆಗಳನ್ನು ಅಗಿಯುವುದರಿಂದ ರಕ್ತಸ್ರಾವ ನಿಲ್ಲುತ್ತದೆ. ಮತ್ತು ಹಲ್ಲುಗಳು ಗಟ್ಟಿಯಾಗುತ್ತದೆ.

ಜಾಮೂನ್ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಇದಲ್ಲದೆ, ಈ ಹಣ್ಣನ್ನು ತಿಂದ ನಂತರ ಮತ್ತು ಮೊದಲು ಕನಿಷ್ಠ ಒಂದು ಗಂಟೆಯವರೆಗೆ ಹಾಲನ್ನು ಕುಡಿಯಬಾರದು. ಒಂದು ವೇಳೆ ಹಾಗೆ ಮಾಡಿದರೆ ಪ್ರಯೋಜನಗಳ ಬದಲಿಗೆ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.

ಹೊಟ್ಟೆನೋವಿನಿಂದ ಮಲದಲ್ಲಿ ರಕ್ತವು ಹೋಗುತ್ತಿದ್ದಾಗ ಈ ಎಲೆಯನ್ನು ಕಷಾಯ ಮಾಡಿ ಕುಡಿಯುವುದರಿಂದ ನಿವಾರಣೆಯಾಗುತ್ತದೆ.

ಬೆರ್ರಿ ಹಣ್ಣುಗಳನ್ನು ತಿನ್ನುವುದು ಮಧುಮೇಹದ ಸಮಸ್ಯೆಯಲ್ಲಿ ಲಾಭದಾಯಕವಾಗಿದೆ ಎಂದು ಅಧ್ಯಯನಗಳು ಹೇಳುತ್ತವೆ. ನೇರಳೆ ಹಣ್ಣು ಎರಡು ಪ್ರಮುಖ ಜೈವಿಕ ಸಕ್ರೀಯ ಸಂಯುಕ್ತಗಳಾದ ಜಾಂಬೋಲಿನ್ ಮತ್ತು ಜಾಂಬೋಸಿನ್ ಅನ್ನು ಹೊಂದಿರುತ್ತವೆ, ಇವು ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುತ್ತವೆ ಮತ್ತು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುತ್ತವೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ರಾಷ್ಟ್ರೀಯ ಗಣಿತ ದಿನ

ರಾಷ್ಟ್ರೀಯ ಗಣಿತ ದಿನ

ಬೌದ್ಧ ಧರ್ಮದ ಸ್ಥಾಪಕ

ಬುದ್ಧನು ‘ಬೌದ್ಧ ಧರ್ಮದ ಸ್ಥಾಪಕ’ ಎಂದು ಹೇಳಲಾಗುತ್ತದೆ