in ,

ಜಂಬು ನೇರಳೆ ಹಣ್ಣಿನಲ್ಲಿರುವ ಆರೋಗ್ಯಕರ ಪ್ರಯೋಜನ

ಜಂಬು ನೇರಳೆ
ಜಂಬು ನೇರಳೆ

ಜಂಬು ನೇರಳೆಯನ್ನು ಕನ್ನಡದಲ್ಲಿ “ಜಂಬುನೇರಲು” ಎಂದು ಸಹ ಕರೆಯುತ್ತಾರೆ. ಇದು ಪಶ್ಚಿಮ ಘಟ್ಟದ ಕಾಡು ಹಣ್ಣುಗಳಲ್ಲೊಂದು. ಇದು ಔಷಧೀಯ ಗುಣಗಳನ್ನು ಹೊಂದಿದೆ. ಇದು ಹಣ್ಣಾಗುವ ಕಾಲ ಮಾರ್ಚ್- ಮೇ- ಅಕ್ಟೋಬರ್- ನವೆಂಬರ್. ಈ ಹಣ್ಣು ಸಸಾರಜನಕ, ಕೊಬ್ಬು, ನಾರು, ಸುಣ್ಣ, ರಂಜಕ, ಥಿಯಾಮಿನ್, ರಿಬೋಫ್ಲಾವಿನ್.

ಈ ಸಸ್ಯವು ೧೨-೧೫ ಮೀಟರ್ ಎತ್ತರ ಬೆಳೆದು ದಟ್ಟವಾದ ವಿಶಾಲ ಹಂದರ ಹೊಂದುವ ನಿತ್ಯಹರಿದ್ವರ್ಣಿ. ಇದು ಚೂಪಾದ ಉದ್ದನೆಯ ಹಸಿರೆಲೆಗಳನ್ನು ಹೊಂದಿರುತ್ತದೆ. ಮರದ ಕಾಂಡ ಮತ್ತು ಬೆಳೆದ ರೆಂಬೆಗಳಿಗೆ ಅಂಟಿಕೊಂಡು ಅರಳುವ ಗುಲಾಬಿ-ನೇರಳೆ ವರ್ಣ. ಗುಲಾಬಿ, ಕೆಂಪು ಅಥವಾ ಬಿಳಿ ಬಣ್ಣದ ನುಣುಪಾದ ಗಂಟೆಯಾಕಾರದ ಹಣ್ಣಿನಲ್ಲಿ ಮೆದುವಾದ ಬಿಳಿ ತಿರುಳು. ಒಂದೆರದು ಬೀಜಗಳು, ಕೆಲವೊಮ್ಮೆ ಬೀಜರಹಿತ ಕೂಡ ಕಂಡು ಬರುತ್ತದೆ.

ಜಂಬು ನೇರಳೆ ಹಣ್ಣಿನಲ್ಲಿರುವ ಆರೋಗ್ಯಕರ ಪ್ರಯೋಜನ
ಜಂಬು ನೇರಳೆ

ಹೆಚ್ಚಾಗಿ ಉತ್ತರ ಕನ್ನಡ ಜಿಲ್ಲೆಯ ಅಡಿಕೆ ತೋಟಗಳಲ್ಲಿ ಕಂಡು ಬರುತ್ತದೆ. ಸೂಕ್ತ ವಾತಾವರಣದಲ್ಲಿ ವೇಗವಾಗಿ ಬೆಳೆಯುತ್ತದೆ. ಇದು ಉಷ್ಣವಲಯದ ಸಸ್ಯವಾಗಿದ್ದು ಹೆಚ್ಚು ಮಳೆ ಮತ್ತು ತೇವಾಂಶವನ್ನು ಬಯಸುತ್ತದೆ. ಮರಳು ಮಿಶ್ರಿತ ಗೋಡುಮಣ್ಣು ಉತ್ತಮ. ಬೀಜಗಳಿಂದ, ಮೊಗ್ಗು ಕಸಿ ವಿಧಾನದಿಂದ ಸಸ್ಯಭಿವೃದ್ಧಿ ಮಾಡಬಹುದು.

ಮೃದು ಹಾಗೂ ನೀರಿನಂಶದಿಂದ ಕೂಡಿರುವ ಈ ಹಣ್ಣನ್ನು ಸವಿಯಲು ಹೆಚ್ಚು ಆಹ್ಲಾದವು ದೊರೆಯುವುದು. ಕಚ್ಚಾ ಹಣ್ಣನ್ನು ಸವಿಯುವುದರ ಮೂಲಕ ನಿರ್ಜಲೀಕರಣ ಮತ್ತು ಜೀರ್ಣಕ್ರಿಯೆಯ ಸಮಸ್ಯೆನ್ನು ಸುಲಭವಾಗಿ ನಿವಾರಿಸಬಹುದು.

ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ
ತೂಕದ ನಿರ್ವಹಣೆಗೆ ಸಹಾಯಕವಾಗಿದ್ದು, ಬಿಳಿ ಜಂಬೂವಿನಲ್ಲಿರುವ ಫೈಬರ್ ಅಂಶ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ. ಅಲ್ಲದೆ ಈ ಹಣ್ಣಿನಲ್ಲಿ ನೀರಿನ ಅಂಶ ಹೆಚ್ಚಾಗಿರುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಅತಿಸಾರದಂತಹ ಸಮಸ್ಯೆಯನ್ನು ದೂರ ಮಾಡುತ್ತದೆ.

ಉಷ್ಣತೆಯನ್ನು ಕಡಿಮೆ ಮಾಡುತ್ತದೆ
ಶೇಕಡಾ 93 ರಷ್ಟು ನೀರಿನ ಅಂಶವನ್ನು ಹೊಂದಿರುವ ಬಿಳಿ ಜಂಬೂ ಹಣ್ಣು ಬೇಸಿಗೆಯಲ್ಲಿ ದೇಹವನ್ನು ದೂರವಿರಿಸುತ್ತದೆ ಮತ್ತು ದೇಹವನ್ನು ತಂಪಾಗಿಡುತ್ತದೆ. ಹೀಗಾಗಿ ಇದು ದೇಹದಲ್ಲಿ ನೀರಿನಾಂಶವನ್ನು ಹೆಚ್ಚಿಸುತ್ತದೆ ಮತ್ತು ಡಿಹೈಡ್ರೇಷನ್ ಸಮಸ್ಯೆಯನ್ನು ದೂರ ಮಾಡುತ್ತದೆ.

ಪಿತ್ತಜನಕಾಂಗ ಮತ್ತು ಮೂತ್ರಪಿಂಡವನ್ನು ಶುದ್ಧೀಕರಿಸುತ್ತದೆ.ಜಂಬೂ ಹಣ್ಣಿನ ಕಷಾಯ ಮತ್ತು ರಸವು ಯಕೃತ್ತು ಮತ್ತು ಮೂತ್ರಪಿಂಡಗಳನ್ನು ವಿಷಕಾರಿ ವಸ್ತುಗಳಿಂದ ಶುದ್ಧೀಕರಿಸಲು ಉಪಯುಕ್ತವಾಗಿದೆ. ಈ ಮೂಲಕ ಪಿತ್ತಜನಕಾಂಗ ಮತ್ತು ಮೂತ್ರಪಿಂಡದ ಆರೋಗ್ಯವನ್ನು ಸುಧಾರಿಸುತ್ತದೆ. ಮೆದುಳು ಹಾಗೂ ಲಿವರ್ ಆರೋಗ್ಯಕ್ಕೆ ಅತ್ಯುತ್ತಮವಾದದ್ದು.

ಬೀಜದಲ್ಲಿ ಕ್ಯಾಲ್ಸಿಯಮ್ ಪ್ರಮಾಣವು ಸಮೃದ್ಧವಾಗಿ ಇರುತ್ತದೆ. ನಿಯಮಿತವಾಗಿ ಇದನ್ನು ಸೇವಿಸುವುದರ ಮೂಲಕ ಕ್ಯಾಲ್ಸಿಯಮ್ ಸಮಸ್ಯೆಯನ್ನು ನಿವಾರಿಸಬಹುದು. ಇದು ಗಂಟಲಿನ ಸೋಂಕನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೊಟ್ಟೆಯುಬ್ಬರ ಅಥವಾ ವಾಯು ಸಮಸ್ಯೆ ಗಳನ್ನು ಸುಲಭವಾಗಿ ನಿವಾರಿಸುವುದು.

ಬಂಧಕ ಗುಣವುಳ್ಳ ತೊಗಟೇಯಿಂದ ಗಾಯ ಗುಣವಾಗುತ್ತದೆ.

ಬಾಯಿಹುಣ್ಣಿಗೆ ತೊಗಟೆ ಕಷಾಯ ಪರಿಣಾಮಕಾರಿ.
ಅಧಿಕ ರಕ್ತದೊತ್ತಡ, ಉಸಿರಾಟದ ತೊಂದರೆ,

ಮಧುಮೇಹ, ಮಲಬದ್ಧತೆ, ಜ್ವರ, ಕೆಮ್ಮು, ತಲೆನೋವು ಇತ್ಯಾದಿಗಳ ನಿವಾರಣೆಗೆ ಸಸ್ಯಭಾಗಗಳ ಬಳಕೆ.
ಜಾಂಬು ಹಣ್ಣಿನಲ್ಲಿ ನಾರಿನಾಂಶ ಹೆಚ್ಚಾಗಿರುವುದರಿಂದ, ಜೀರ್ಣ ಕ್ರಿಯೆಯನ್ನು ಸುಧಾರಿಸಿ, ಮಲಬದ್ಡತೆ ಸಮಸ್ಯೆಯನ್ನು ಬೇಗ ತಡೆಯುತ್ತದೆ.

ದೇಹದಲ್ಲಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರಿಂದ ಹೃದಯದ ಆರೋಗ್ಯವು ಸಹ ಉತ್ತಮವಾಗಿರುತ್ತದೆ.

ಜಂಬು ಹಣ್ಣು ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ. ಏಂಕೆದರೆ ಇದರಲ್ಲಿ ವಿಟಮಿನ್ ಸಿ ಅಂಶವು ಹೆಚ್ಚಾಗಿರುತ್ತದೆ.
ಜಾಂಬು ಹಣ್ಣು ತಿನ್ನುವುದರಿಂದ ದೇಹದ ಉಷ್ಣಾಂಶವು ಕಡಿಮೆಯಾಗುವುದರ ಜೊತೆಗೆ ಕೆಲವು ಅಪಾಯಕಾರಿಯಾದ ಕ್ಯಾನ್ಸರ್ ರೋಗವನ್ನು ಕಡಿಮೆ ಮಾಡುವ ಅಂಶಗಳನ್ನು ಹೊಂದಿದೆ.
ದೇಹದ ತೂಕವನ್ನು ಕಡಿಮೆ ಮಾಡುವುದರ ಜೊತೆಗೆ ಬೇಡವಾದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

ಜಂಬು ನೇರಳೆ ಹಣ್ಣಿನಲ್ಲಿರುವ ಆರೋಗ್ಯಕರ ಪ್ರಯೋಜನ
ಜಂಬು ನೇರಳೆ

ಜಂಬು ಹಣ್ಣು ತಿನ್ನುವುದರಿಂದ ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾಗಳ ಸೋಂಕನ್ನು ಬಹಳ ಬೇಗ ನಿವಾರಿಸುತ್ತದೆ.

ದೇಹದಲ್ಲಿರುವ ವಿಷತ್ವವನ್ನು ಕಡಿಮೆ ಮಾಡುವ ಗುಣವನ್ನು ಜಾಂಬು ಹಣ್ಣು ಹೊಂದಿದೆ. ಜಾಂಬು ಹಣ್ಣು ಅನೇಕ ರೀತಿಯ ಔಷಧೀಯ ಗುಣವನ್ನು ಹೊಂದಿದೆ.

ಹೃದಯದ ಆರೋಗ್ಯವನ್ನು ಕಾಪಾಡುತ್ತದೆ
ಬಿಳಿ ಜಂಬೂವಿನಲ್ಲಿರುವ ಫೈಬರ್ ಅಂಶವು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ. ಇದರಿಂದ ಹೃದಯಾಘಾತ ಅಥವಾ ಪಾರ್ಶ್ವವಾಯು ಮುಂತಾದ ಹೃದಯ ಸಂಬಂಧಿ ಕಾಯಿಲೆಗಳು ದೂರವಾಗುತ್ತದೆ.

ಮನ್ನೇರಳೆ ಎಲೆಯ ರಸ ಹಚ್ಚಿದರೆ ಕಣ್ಣು ಬೇನೆ ಗುಣವಾಗುತ್ತದೆ.ಪನ್ನೇರಳೆ ಬೀಜವು ಅತಿಸಾರ, ಆಮಶಂಕೆಗಳನ್ನು ತಡೆಯುತ್ತದೆ.ಪನ್ನೇರಳೆ ಬೇರನ್ನು ಫಿಡ್ಸ್ ತಡೆಗೆ ಬಳಸುತ್ತಾರೆ.

ಅಧಿಕ ನೀರಿನಂಶದಿಂದ ಕೂಡಿರುತ್ತದೆ. ಹಾಗಾಗಿ ಇದನ್ನು ಕಚ್ಚಾ ರೂಪದಲ್ಲಿಯೇ ಸವಿಯಬಹುದು. ಸಿಹಿ ರುಚಿಯನ್ನು ಹೊಂದಿರುವ ಈ ಹಣ್ಣನ್ನು ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಇತರ ಹಣ್ಣುಗಳ ಸಂಯೋಜನೆಯಲ್ಲಿ, ಸಲಾಡ್‍ಗಳ ರೂಪದಲ್ಲಿ ಸವಿಯಬಹುದು. ಬೇಸಿಗೆಯಲ್ಲಿ ಕಾಡುವಂತಹ ಕೆಲವು ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುವುದು.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಬಿಳಿ ಜಂಬೂ ಹಣ್ಣಿನಲ್ಲಿರುವ ವಿಟಮಿನ್ ಸಿ ಅಂಶವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಚರ್ಮದ ಹೊಳಪನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.

ಸೋಂಕನ್ನು ತಡೆಯುತ್ತದೆ
ಈ ಹಣ್ಣಿನಲ್ಲಿ ಆ್ಯಂಟಿಮೈಕ್ರೊಬಿಯಲ್ ಗುಣಗಳಿವೆ. ಇದು ಸೋಂಕು ನಿಯಂತ್ರಣ ಶಕ್ತಿ ಹೊಂದಿದ್ದು, ಕೊವಿಡ್ನಂತಹ ಈ ಸಮಯದಲ್ಲಿ ಹೆಚ್ಚು ಉಪಯುಕ್ತಕಾರಿಯಾಗಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಒಂದು ಕಾಡಿನಲ್ಲಿ ಒಂದು ಕಿಲೋಮೀಟರ್ ನಡೆದು ಶಾಲೆಗೆ ಹೋಗುತ್ತಿರುವ ಹುಡುಗಿ.

ಒಂದು ಕಾಡಿನಲ್ಲಿ ಒಂದು ಕಿಲೋಮೀಟರ್ ನಡೆದು ಶಾಲೆಗೆ ಹೋಗುತ್ತಿರುವ ಹುಡುಗಿ.

ಇಂದು ಮೇ 29 ಭಯಂಕರವಾದ ಭಾನುವಾರ ಈ 6 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಗಜಕೇಸರಿ ಯೋಗ ಆರಂಭ ಸೂರ್ಯದೇವನ ಕೃಪೆಯಿಂದ

ಇಂದು ಮೇ 29 ಭಯಂಕರವಾದ ಭಾನುವಾರ ಈ 6 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಗಜಕೇಸರಿ ಯೋಗ ಆರಂಭ ಸೂರ್ಯದೇವನ ಕೃಪೆಯಿಂದ