in ,

ಹುರಿಗಡಲೆಯಲ್ಲಿ ಕೂಡ ಆರೋಗ್ಯ ಅಡಗಿದೆ

ಹುರಿಗಡಲೆ
ಹುರಿಗಡಲೆ

ಹುರಿಗಡಲೆಯನ್ನು ನಾವು ಪುಟಾಣಿ ಅಂತ ಕರೆಯುತ್ತೇವೆ. ಇದನ್ನು ಹುರಿದು ತಿನ್ನಬಹುದು, ಅಡಿಗೆಯಲ್ಲಿ ಕೂಡ ಬಳಸಬಹುದು, ಚಟ್ನಿಯಲ್ಲಿ ತೆಂಗಿನ ಕಾಯಿ ಕಮ್ಮಿ ಉಪಯೋಗಿಸಬೇಕು ಎಂದವರು ಇದನ್ನು ಬಳಸಬಹುದು. ಆದರೆ ಬರೀ ಅಡಿಗೆಗೆ ಮಾತ್ರ ಸೀಮಿತ ಅಲ್ಲ. ಹಾಗೆಯೇ ಕೂಡ ತಿನ್ನಬಹುದು. ಇದರಲ್ಲಿ ಕೂಡ ಆರೋಗ್ಯಕ್ಕೆ ಬೇಕಾದ ಅಂಶಗಳು ಇದೆ.

ಕಾರ್ಬೋಹೈಡ್ರೇಟ್, ಪ್ರೊಟೀನ್, ಕ್ಯಾಲ್ಸಿಯಂ, ಕಬ್ಬಿಣದ ಅಂಶ ಮತ್ತು ವಿಟಮಿನ್ ಸಿ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತದೆ. ಹುರಿಗಡಲೆಯಲ್ಲಿ ಫೈಬರ್ ಕೂಡಾ ಸಾಕಷ್ಟು ಸಿಗುತ್ತದೆ. ಪ್ರೊಟೀನ್ ಮತ್ತು ಕಬ್ಬಿಣದಾಂಶ ಸಾಕಷ್ಟು ಸಿಗುವ ಕಾರಣ ಫಟಾಫಟ್ ಎನರ್ಜಿ ಸಿಗುತ್ತದೆ.

ಮಹಿಳೆಯರಿಗೆ ರಕ್ತಹೀನತೆ ಇರುವುದು ಕಂಡುಬರುತ್ತದೆ. ಇದನ್ನು ತಪ್ಪಿಸಲು, ಆಹಾರದಲ್ಲಿ ಹುರಿದ ಕಡಲೆಕಾಳು ಸೇರಿಸಿ. ಚನಾ ರಕ್ತಹೀನತೆ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದನ್ನು ಸೇವಿಸುವುದರಿಂದ ದೇಹದಲ್ಲಿ ರಕ್ತದ ಕೊರತೆ ಇರುವುದಿಲ್ಲ. ಹುರಿದ ಕಡಲೆಕಾಳು ದೇಹದಲ್ಲಿನ ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದು ದೇಹದಲ್ಲಿನ ರಕ್ತದ ಕೊರತೆಯನ್ನು ತೆಗೆದುಹಾಕುತ್ತದೆ.

ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹುರಿಗಡಲೆಯನ್ನು ತಿನ್ನುವುದರಿಂದ ದೇಹದಲ್ಲಿ ಸಂಗ್ರಹವಾಗಿರುವ ಎಲ್ಲಾ ವಿಷಗಳು ಸುಲಭವಾಗಿ ಹೊರಹಾಕಲ್ಪಡುತ್ತವೆ. ಹುರಿಗಡಲೆ ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದು ಚರ್ಮದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.

ಹುರಿಗಡಲೆಯಲ್ಲಿ ಕೂಡ ಆರೋಗ್ಯ ಅಡಗಿದೆ
ಹುರಿಗಡಲೆ

ಹಾರ್ಮೊನ್ ಮಟ್ಟವನ್ನು ನಿಯಂತ್ರಿಸುತ್ತದೆ.
ಇದರಲ್ಲಿ ಫೈಟೋ-ಅಸ್ಟ್ರೋಜೆನ್ ಮತ್ತು ಆಂಟಿ ಆಕ್ಸಿಡೆಂಟ್ಸ್ ಇತ್ಯಾದಿ ಸಾಕಷ್ಟು ಇರುತ್ತದೆ. ಇದು ರಕ್ತದಲ್ಲಿ ಎಸ್ಟ್ರೋಜನ್ ಮಟ್ಟವನ್ನು ನಿಯಂತ್ರಿಸುತ್ತದೆ. ಇದರಿಂದಾಗಿ ಮುಖ್ಯವಾಗಿ ಮಹಿಳೆಯರಲ್ಲಿ ಹಾರ್ಮೊನ್ ಅಸಮಾತೋಲವನ್ನು ತಡೆಯುತ್ತದೆ. ಸ್ತನ ಕ್ಯಾನ್ಸರ್ ಅಪಾಯವನ್ನೂ ಕಡಿಮೆ ಮಾಡುತ್ತದೆ.

ಮಲಬದ್ಧತೆ ಹೋಗಲಾಡಿಸಲು ಹುರಿಗಡಲೆ ಪ್ರಯೋಜನಕಾರಿಯಾಗಿದೆ. ನೀವು ಕೆಲವು ಹುರಿಗಡಲೆಯನ್ನು ಹುರಿದು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದು ಮಲಬದ್ಧತೆಯ ಸಮಸ್ಯೆಗೆ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರವನ್ನು ನೀಡುತ್ತದೆ. ನಿಮಗೆ ಮಲಬದ್ಧತೆ ಇದ್ದರೆ, ನೀವು ಕೆಲವು ದಿನಗಳವರೆಗೆ ನಿರಂತರವಾಗಿ ಹುರಿಗಡಲೆಯನ್ನು ತಿನ್ನಬಹುದು.

ಗರ್ಭಿಣಿ ಮಹಿಳೆಯರಿಗೆ ಹುರಿದ ಕಡಲೆಕಾಳು ತುಂಬಾ ಪ್ರಯೋಜನಕಾರಿ. ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ವಾಂತಿ ಸಮಸ್ಯೆ ಇರುತ್ತದೆ. ವಾಂತಿ ಹೆಚ್ಚಾಗಿದ್ದರೆ, ಅದು ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಏಕೆಂದರೆ ದೇಹವು ಒತ್ತಡಕ್ಕೊಳಗಾಗುತ್ತದೆ. ಅಂತಹ ಮಹಿಳೆಗೆ ಇದು ತುಂಬಾ ಪ್ರಯೋಜನಕಾರಿ.

ಬೆಲ್ಲ ಹಾಗೂ ಕಡಲೆಕಾಳಿನಲ್ಲಿ ಉನ್ನತ ಮಟ್ಟದ ಸತುವಿನಂಶವಿದ್ದು, ಇದು ದೇಹದಲ್ಲಿ 300 ಕಿಣ್ವಗಳನ್ನು ಕ್ರಿಯಾಶೀಲವಾಗಿಸುವುದು ಮತ್ತು ಪ್ರತಿರೋಧಕ ಶಕ್ತಿವ ವೃದ್ಧಿಸುವುದು.

ಬಲವಾದ ರೋಗನಿರೋಧಕ ಶಕ್ತಿಯು ದೇಹಕ್ಕೆ ವಿವಿಧ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಪ್ರತಿದಿನ ಒಂದು ಹಿಡಿ ಹುರಿಗಡಲೆಯನ್ನು ಸೇವಿಸಿದರೆ, ನೀವು ಋತುಮಾನದ ಕಾಯಿಲೆಗಳಿಂದ ರಕ್ಷಿಸಿಕೊಳ್ಳಬಹುದು.

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಹಿಡಿ ಹುರಿಗಡಲೆಯನ್ನು ತಿನ್ನುವ ಮೂಲಕ ತೂಕವನ್ನು ಸಹ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಹುರಿಗಡಲೆಯಲ್ಲಿ ಕ್ಯಾಲೋರಿ ಕಡಿಮೆ ಇದೆ ಫೈಬರ್ ಹಾಗೂ ಪ್ರೋಟಿನ್ ಅಧಿಕ ಪ್ರಮಾಣದಲ್ಲಿರುತ್ತದೆ. ಸ್ಥೂಲಕಾಯತೆಯಿಂದ ನೀವು ತೊಂದರೆಗೊಳಗಾಗಿದ್ದರೆ, ಬೆಳಗಿನ ಉಪಾಹಾರಕ್ಕಾಗಿ ನೀವು ಹುರಿಗಡಲೆಯನ್ನು ತಿನ್ನಬಹುದು. ಹುರಿಗಡಲೆ ತಿನ್ನುವುದರಿಂದ ಹೊಟ್ಟೆ ತುಂಬಾ ಹೊತ್ತು ತುಂಬಿರುತ್ತದೆ, ಬೇಗನೇ ಹಸಿವಾಗುವುದಿಲ್ಲ. ಹಾಗಾಗಿ ತೂಕವು ನಿಯಂತ್ರಣದಲ್ಲಿರುತ್ತದೆ.

ಹುರಿಗಡಲೆಯಲ್ಲಿ ಕೂಡ ಆರೋಗ್ಯ ಅಡಗಿದೆ
ಬೆಲ್ಲ ಹಾಗೂ ಕಡಲೆ

ಬೆಲ್ಲ ಹಾಗೂ ಕಡಲೆಕಾಳನ್ನು ತಿನ್ನುವ ಎರಡು ಸಮಯ ಇದಾಗಿದೆ. ನೀವು ರಾತ್ರಿ ವೇಳೆ ಕಡಲೆಕಾಳನ್ನು ಹಾಗೆ ನೀರಿನಲ್ಲಿ ನೆನೆಸಲು ಹಾಕಿ ಮತ್ತು ಬೆಳಗ್ಗೆ ಅದರಿಂದ ಲಡ್ಡು ಅಥವಾ ಚಿಕ್ಕಿ ಮಾಡಿ ಸೇವಿಸಬಹುದು.

ಹಾಲು ಮೊಸರಿನಲ್ಲಿ ಯಾವ ಪ್ರಮಾಣದ ಕ್ಯಾಲ್ಸಿಯಂ ಸಿಗುತ್ತದೆಯೋ ಅದೇ ಪ್ರಮಾಣದ ಕ್ಯಾಲ್ಸಿಯಂ ಹುರಿಗಡಲೆಯಲ್ಲಿ ಸಿಗುತ್ತದೆ. ಪ್ರತಿದಿನ ಒಂದು ಮುಷ್ಟಿ ಹುರಿಗಡಲೆ ತಿಂದರೆ ಮೂಳೆ ಬಲವಾಗುತ್ತದೆ.

ಶ್ವಾಸಕೋಶದ ಸಮಸ್ಯೆಯಿಂದಾಗಿ ಬಳಲುತ್ತಿರುವವರಿಗೆ ಈ ಆಹಾರವು ಅದ್ಭುತವಾದ ಲಾಭ ನೀಡುವುದು. ಹುರಿದ ಕಡಲೆಕಾಳು ಮತ್ತು ಬೆಲ್ಲವನ್ನು ಹಾಲಿನ ಜತೆಗೆ ರಾತ್ರಿ ವೇಳೆ ಮಲಗುವ ಮೊದಲು ಸೇವಿಸಿದರೆ ತುಂಬಾ ಲಾಭವಾಗುವುದು.

ಪ್ರತಿದಿನ ಬೆಳಗ್ಗೆ ಹುರಿಗಡಲೆ ತಿನ್ನುವುದರಿಂದ ಪುರುಷರಿಗೆ ಸಂಬಂಧಿಸಿದ ವೈಯಕ್ತಿಕ ಸಮಸ್ಯೆಗಳು ದೂರವಾಗುತ್ತವೆ. ಇದರಿಂದ ವೀರ್ಯದ ಸಂಖ್ಯೆ ಹೆಚ್ಚಾಗುವುದರ ಜೊತೆಗೆ ವೀರ್ಯದ ಗುಣಮಟ್ಟವೂ ಸುಧಾರಿಸುತ್ತದೆ. ಲೈಂಗಿಕ ಸಮಸ್ಯೆ ದೂರವಾಗುತ್ತದೆ. ಹುರಿಗಡಲೆಯು ಪುರುಷತ್ವವನ್ನು ಹೆಚ್ಚಿಸುತ್ತದೆ.

ಯಕೃತ್ ನ್ನು ಸ್ವಚ್ಛಗೊಳಿಸುವುದು ಮತ್ತು ಮಾಲಿನ್ಯದಿಂದ ಬಂದಿರುವಂತಹ ಸಮಸ್ಯೆಯನ್ನು ಇದು ವೇಗವಾಗಿ ನಿವಾರಣೆ ಮಾಡುವುದು.

ಹುರಿಗಡಲೆ ಜೀರ್ಣ ಶಕ್ತಿಯನ್ನು ಸಮತೋಲನಗೊಳಿಸುದಲ್ಲದೆ ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ.

ಬೆಲ್ಲ ಮತ್ತು ಹುರಿಕಡಲೆಯಲ್ಲಿ ಪೊಟಾಶಿಯಂ ಅಂಶವು ಹೃದಯದ ಸಮಸ್ಯೆಯನ್ನು ಕಡಿಮೆ ಮಾಡುವುದು. ಇದರಿಂದ ಹೃದಯಾಘಾತ ಮತ್ತು ಹೃದಯದ ಸಮಸ್ಯೆ ಕಡಿಮೆ ಮಾಡುವುದು.

ಧನ್ಯವಾದಗಳು.


What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

9 Comments

ಕೃಷ್ಣ ಜನ್ಮಾಷ್ಟಮಿ ಆಚರಣೆ

ಕೃಷ್ಣ ಜನ್ಮಾಷ್ಟಮಿ ಆಚರಣೆ

ಬಾಲ್ಯ ವಿವಾಹ

ಬಾಲ್ಯ ವಿವಾಹ ಪದ್ಧತಿ ಇನ್ನೂ ನಮ್ಮಲ್ಲಿ ಇದೆ