in

ಬಾಲ್ಯ ವಿವಾಹ ಪದ್ಧತಿ ಇನ್ನೂ ನಮ್ಮಲ್ಲಿ ಇದೆ

ಬಾಲ್ಯ ವಿವಾಹ
ಬಾಲ್ಯ ವಿವಾಹ

ಬಾಲ್ಯ ವಿವಾಹ ಎಂದರೆ ಚಿಕ್ಕ ವಯಸ್ಸಿನಲ್ಲಿ ಹುಡುಗ-ಹುಡುಗಿಯನ್ನು ಎರಡು ಕುಟುಂಬಗಳು ಒಪ್ಪಿ ಮದುವೆ ಮಾಡುವುದು. ದೇಶದಲ್ಲಿ ಬಾಲ್ಯ ವಿವಾಹವನ್ನು ನಿಷೇಧಿಸಲಾಗಿದ್ದರೂ ಸಂಪೂರ್ಣ ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ. ಹುಡುಗಿಯರಿಗೆ 18 ಹಾಗೂ ಹುಡುಗರಿಗೆ 21 ವರ್ಷವೆಂದು ವಿವಾಹಕ್ಕೆ ವಯಸ್ಸನ್ನು ನಿಗದಿಪಡಿಸಲಾಗಿದ್ದರೂ ಬಾಲ್ಯ ವಿವಾಹಗಳು ನಡೆಯುತ್ತಿರುವ ಬಗ್ಗೆ ವರದಿಯಾಗುತ್ತಲೇ ಇದೆ.

ಕೆಲವು ಸಮಾಜಗಳಲ್ಲಿ ರೂಢಿಯಲ್ಲಿರುವ ಬಾಲ್ಯ ವಿವಾಹ ಸಾಧಾರಣವಾಗಿ ಎರಡು ಪ್ರತ್ಯೇಕ ಸಾಮಾಜಿಕ ತತ್ವಗಳನ್ನು ಉಲ್ಲೇಖಿಸುತ್ತದೆ. ಮೊದಲ ಮತ್ತು ವ್ಯಾಪಕವಾಗಿ ಹರಡಿರುವ ರೂಢಿ ಅಂದರೆ ಅದು ಒಬ್ಬ ವಯಸ್ಕ ಪುರುಷ ಚಿಕ್ಕ ಹುಡುಗಿಯನ್ನು ಮದುವೆಯಾಗುವುದು. ರೂಢಿಯಲ್ಲಿ, ಯಾವಾಗಲೂ ಚಿಕ್ಕ ಹುಡುಗಿ ಒಂದು ಗಂಡಸನ್ನು ಮದುವೆಯಾಗುವುದಾಗಿದೆ.

ಎರಡನೆಯ ರೂಢಿಯೆಂದರೆ ವ್ಯವಸ್ಥಿತ ಮದುವೆ, ಇದರಲ್ಲಿ ಎರಡೂ ಮಕ್ಕಳ ತಂದೆ-ತಾಯಿಗಳು ಮುಂದೆಂದೋ ಭವಿಷ್ಯದಲ್ಲಿ ನಡೆವ ಮದುವೆಯನ್ನು ಯೋಜಿಸುವುದು. ಈ ರೂಢಿಯಲ್ಲಿ, ಮದುವೆಗೆ ನಿಶ್ಚಿತಾರ್ಥವಾದ ಹುಡುಗ ಹುಡುಗಿಯನ್ನು ಮದುವೆ ಸಮಾರಂಭದವರೆಗೂ ಒಬ್ಬರಿಗೊಬ್ಬರು ಭೇಟಿ ಆಗುವ ಹಾಗಿಲ್ಲ, ಮದುವೆ ವಯಸ್ಸಿಗೆ ಅವರಿಬ್ಬರೂ ಮುಟ್ಟಿದ ಮೇಲೆ ಆಗ ಮದುವೆ ಸಮಾರಂಭ ನಡೆಯುತ್ತದೆ.
ಮಹಿಳಾ ಹಕ್ಕುಗಳು ಅಥವಾ ಮಕ್ಕಳ ಹಕ್ಕುಗಳ ಹೋರಾಟದಂತೆ ಮಾನವ ಹಕ್ಕುಗಳ ಹೋರಾಟವು ಹೆಚ್ಚಿದಂತೆಲ್ಲಾ ಬಾಲ್ಯ ವಿವಾಹಗಳ ಸಂಪ್ರದಾಯವು ಸಾಕಷ್ಟು ಕಡಿಮೆ ಆಗಿದೆ ಕಾರಣ ಬಾಲ್ಯ ವಿವಾಹವು ಸರಿಯಾದುದಲ್ಲವೆಂದು ಮತ್ತು ಅಪಾಯಕಾರಿ ಎಂದು ಪರಿಗಣಿಸಲಾಗಿದೆ.

ಬಾಲ್ಯ ವಿವಾಹಗಳಿಗೆ ಅನೇಕ ಉದ್ದೇಶಗಳಿರಬಹುದು. ಕೆಲವು ಸಂಸ್ಕೃತಿಗಳಲ್ಲಿನ ಶ್ರೀಮಂತ ಪ್ರಭುತ್ವ-ಗುಣ ವರ್ಗದ ಜನ, ಅನ್ಯ ವರ್ಗಕ್ಕೆ ಸೇರಿದ ಬಾಲಕ ಬಾಲಕರಲ್ಲಿ ಬಾಲ್ಯ ವಿವಾಹಗಳನ್ನು ತಮ್ಮ ತಮ್ಮ ರಾಜಕೀಯ ಭವಿಷ್ಯಗಳಿಗಾಗಿ ಎರಡು ವರ್ಗದ ಸಂಬಂಧಗಳನ್ನು ಭದ್ರ ಮಾಡಿಕೊಳ್ಳಲು ಏಪರ್ಡಿಸಿರುವುದೂ ಇದೆ. ಉದಾಹರಣೆಗೆ, ಅಷ್ಟೇನೂ ಬಲಾಢ್ಯವಲ್ಲದ ವರ್ಗದ ಉನ್ನತ ಕುಟುಂಬದ ಮಗ ಅಥವಾ ಮಗಳನ್ನು ಬಲಾಢ್ಯ ವರ್ಗದ ಕುಟುಂಬದವರಲ್ಲಿ ಮದುವೆ ಏರ್ಪಡಿಸಿ ತಮ್ಮ ಕುಲ ಅಂತರ್ಗತವಾಗುವುದನ್ನು ತಪ್ಪಿಸಲು ಬಾಲ್ಯ ವಿವಾಹಗಳನ್ನು ಏರ್ಪಡಿಸಿರುವುದಿದೆ.

ಬಾಲ್ಯ ವಿವಾಹ ಪದ್ಧತಿ ಇನ್ನೂ ನಮ್ಮಲ್ಲಿ ಇದೆ

ಕೆಳವರ್ಗದವರೇನಾದರು ಅದೃಷ್ಟವಂತರಾಗಿದ್ದಲ್ಲಿ, ವಾರಸುದಾರಿಕೆಯನ್ನು ದೃಢಪಡಿಸಿಕೊಂಡು ಅವರ ಮಕ್ಕಳನ್ನು ಶ್ರೀಮಂತ ವರ್ಗದವರಿಗೆ ಕೊಟ್ಟು ಮದುವೆ ಮಾಡಿಸುತ್ತಿದ್ದರು.

ಈ ಮುಖಾಂತರ ತಮ್ಮ ಆರ್ಥಿಕ ಅಭಿವೃದ್ಧಿಯನ್ನು ಕಂಡುಕೊಳ್ಳುತ್ತಿದ್ದರು. ಮಗುವಿನ ನಿಶ್ಚಿತಾರ್ಥದ ವಿಚಾರದಲ್ಲಿ ಮಗುವಿನ ತಂದೆ-ತಾಯಿಗಳು ಇನ್ನೊಂದು ಮಗುವಿನ ತಂದೆ ತಾಯಿಗಳ ಸಾಮಾಜಿಕ ಸ್ಥಾನಮಾನ, ಆರ್ಥಿಕ ಸ್ಥಿತಿಗತಿ ಮತ್ತು ವಿದ್ಯಾಭ್ಯಾಸದ ಮಟ್ಟ ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ತಮ್ಮ ಮಗುವಿನ ಭವಿಷ್ಯವನ್ನು ಚಿಕ್ಕ ವಯಸ್ಸಿನಲ್ಲೇ ಏಕಪಕ್ಷೀಯವಾಗಿ ನಿರ್ಧರಿಸಿ ಬಿಡುತ್ತಿದ್ದರು.

ಬಾಲ್ಯ ವಿವಾಹಗಳನ್ನು ಆಯೋಜಿಸುವವರು ಭೌತಿಕ ಆಕರ್ಷಣೆಯು ಮದುವೆ ಮತ್ತು ಕುಟುಂಬದ ವಿಚಾರದಲ್ಲಿ ಅಷ್ಟೇನು ಮುಖ್ಯವಲ್ಲ ಎಂದು ಆಲೋಚಿಸುತ್ತಾರೆ. ನಿಶ್ಚಿತಾರ್ಥಕ್ಕೂ ಮದುವೆಗೂ ಎಷ್ಟು ಸಮಯದ ಅಂತರವಿರಬೇಕೆಂಬುದು ವಿಶೇಷವಾಗಿ ಗಣನೆಗೆ ತೆಗೆದುಕೊಳ್ಳುವ ವಿಚಾರ. ಅಂತರ ವರ್ಗದ ವಿವಾಹದಿಂದ ಕುಟುಂಬಗಳು ರಾಜಕೀಯ ಮತ್ತು/ಅಥವಾ ಆರ್ಥಿಕ ಸಬಲತೆಯನ್ನು ಗಟ್ಟಿ ಮಾಡಿಕೊಳ್ಳುತ್ತಾರೆ. ನಿಶ್ಚಿತಾರ್ಥವನ್ನು ಕುಂಟುಂಬ ಮತ್ತು ಮಕ್ಕಳ ಮೇಲಿನ ಒಪ್ಪಂದ ಎಂದು ಪರಿಗಣಿಸಲಾಗುತ್ತದೆ. ಈ ನಿಶ್ಚಿತಾರ್ಥವು ಏನಾದರೂ ಮುರಿದು ಬಿದ್ದ ಪಕ್ಷದಲ್ಲಿ ಕುಟುಂಬಗಳ ಮೇಲೆ ಮತ್ತು ಮಧು ಮಕ್ಕಳ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ.

ಅಕ್ಟೋಬರ್ 30, 2008ರಲ್ಲಿ ಪಾಕಿಸ್ತಾನದ ಪೊಲೀಸರು ಬಾಲ್ಯವಿವಾಹ ನಡೆಯುತ್ತಿದ್ದ ಸ್ಥಳಕ್ಕೆ ದಾಳಿ ಇಟ್ಟು ಇಬ್ಬರು ಸಂಘಟಕರನ್ನು ಬಂಧಿಸಿದರು ಮತ್ತು ಅವರ ಜಹಗೀರನ್ನು ಕೊನೆಗಾಣಿಸಿದರು. ಜೊತೆಗೆ ಕರಾಚಿ ಬಳಿಯ ನಜೀಮಾಬಾದ್ ಬಳಿಯಲ್ಲಿ ನಾಲ್ಕು ವರ್ಷದ ಹೆಣ್ಣು ಮಗುವನ್ನು ಏಳು ವರ್ಷದ ಗಂಡು ಹುಡುಗನಿಗೆ ಮದುವೆಯನ್ನು ಕಾನೂನು ಬಾಹಿರವಾಗಿ ಮಾಡಲಾಗಿತ್ತು ಎಂದು ಹೇಳಿದ್ದಾರೆ.

ಬಾಲ್ಯವಿವಾಹ ನಿಷೇಧ ಕಾಯ್ದೆ-2006ನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಬಂಧ ಕರ್ನಾಟಕ ಉಚ್ಚ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ: 1154/2006ರಲ್ಲಿ ನೀಡಿದ ನಿರ್ದೇಶನದಂತೆ ಕ್ರಿಯಾ ಯೋಜನೆಯನ್ನು ತಯಾರಿಸಲು ಸರ್ಕಾರವು ಭಾರತದ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟೀಸ್ ಶಿವರಾಜ್.ವಿ.ಪಾಟೀಲ್ ಇವರ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿಯನ್ನು ರಚಿಸಿದ್ದು, ಸದರಿ ಕೋರ್ ಕಮಿಟಿಯು ದಿನಾಂಕ: 30.06.2011ರಂದು ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತದೆ.

ಬಾಲ್ಯ ವಿವಾಹ ಪದ್ಧತಿ ಇನ್ನೂ ನಮ್ಮಲ್ಲಿ ಇದೆ
ಬಾಲ್ಯವಿವಾಹ ನಿಷೇಧ

ವರದಿಯಲ್ಲಿ ಮಾಡಲಾಗಿರುವ ಶಿಫಾರಸ್ಸುಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸರ್ಕಾರದ ಆದೇಶ ಸಂಖ್ಯೆ: ಮಮಇ 501 ಎಸ್.ಜೆ.ಡಿ 2011, ದಿನಾಂಕ: 16.11.2011ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯದಲ್ಲಿ 1 ಉಪ ನಿರ್ದೇಶಕರು, 1 ಸಹಾಯಕ ನಿರ್ದೇಶಕರು, 02 ಪ್ರಥಮ ದರ್ಜೆ ಸಹಾಯಕರು, 02 ಗಣಕ ಯಂತ್ರ ಸಹಾಯಕರರು ಮತ್ತು 1 ಸೇವಕರನ್ನೊಳಗೊಂಡಂತೆ ಉಸ್ತುವಾರಿ ಕೋಶವನ್ನು ಸ್ಥಾಪಿಸಲಾಗಿದೆ.

1955ರ ಹಿಂದೂ ವಿವಾಹ ಕಾಯ್ದೆೆ ಪ್ರಕಾರ ಮದುವೆಗೆ ಹೆಣ್ಣಿಗೆ 18 ವರ್ಷ ಗಂಡಿಗೆ 21 ವರ್ಷ ವಯಸ್ಸಾಗಿರಬೇಕು. ಈ ಕಾನೂನು ಉಲ್ಲಂಘನೆ ಮಾಡಿದಲ್ಲಿ ಅಂತವರ ವಿರುದ್ಧ ಸೆಕ್ಷನ್ 11 ಹಾಗೂ 12 ಅಡಿ ಕೇಸ್ ದಾಖಲಿಸಬಹುದು. ಹಾಗು ಸೆಕ್ಷನ್ 13ರ ಅಡಿ ವಿಚ್ಛೇದನ ಪಡೆಯಲು ಅವಕಾಶ ಇದೆ ಎಂದು ಹೇಳಿದೆ.
2012-13ನೇ ಸಾಲಿನಲ್ಲಿ ಬಾಲ್ಯ ವಿವಾಹಗಳನ್ನು ತಡೆಗಟ್ಟಲಾಗಿದೆ. ಎಲ್ಲಾ ಮಕ್ಕಳು ಆರೈಕೆ ಹಾಗೂ ರಕ್ಷಣೆಯ ಮೂಲಕ ಅಭಿವೃದ್ಧಿ ಯೊಂದಲು ಹಾಗೂ ಪರಿಪೂರ್ಣ ವ್ಯಕ್ತಿಯಾಗಿ ಬೆಳೆಯುವ ಹಕ್ಕನ್ನು ಹೊಂದಿರುತ್ತಾರೆ. ಬಾಲ್ಯ ವಿವಾಹವು ಈ ಎಲ್ಲಾ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಬಾಲ್ಯ ವಿವಾಹದಿಂದ ಉಂಟಾಗುವ ಅಪ್ರಾಪ್ತ ವಯಸ್ಸಿನ ತಾಯ್ತನವು ತಾಯಿ ಹಾಗೂ ಮಗುವನ್ನು ಅಪಾಯದ ಅಂಚಿನಲ್ಲಿ ತಳ್ಳುವಂತಾಗುತ್ತದೆ. ಇದರಿಂದಾಗಿ ಶಿಶು ಮರಣ ಹಾಗೂ ತಾಯಂದಿರ ಮರಣ ಹೆಚ್ಚಾಗಲು ಕಾರಣವಾಗುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಹುರಿಗಡಲೆ

ಹುರಿಗಡಲೆಯಲ್ಲಿ ಕೂಡ ಆರೋಗ್ಯ ಅಡಗಿದೆ

ಕುದುರೆ ಹಳ್ಳಿ ಈಗ ಕುದ್ರೋಳಿ

ಹಿಂದೆ ಕುದುರೆ ಹಳ್ಳಿ ಈಗ ಕುದ್ರೋಳಿ