in ,

ಗೋಡಂಬಿ ಯಾರಿಗೆ ತಾನೆ ಇಷ್ಟ ಇಲ್ಲ?

ಗೋಡಂಬಿ
ಗೋಡಂಬಿ

ಗೋಡಂಬಿಯು ಅನಾಕಾರ್ಡಿಯೇಸಿ ಎಂಬ ಹೂಬಿಡುವ ಸಸ್ಯ ವಂಶದಲ್ಲಿನ ಒಂದು ದ್ವಿದಳ ಧಾನ್ಯ ಸಸ್ಯದ ಬೀಜಕೋಶವಾಗಿದೆ. ಇದರ ಸಸ್ಯವು ಈಶಾನ್ಯ ಬ್ರೆಜಿಲ್ಗೆ ಸ್ಥಳೀಕವಾಗಿದೆ. ಗೋಡಂಬಿ ಮರದ ಹಣ್ಣಿಗಾಗಿರುವ ಪೋರ್ಚುಗೀಸ್‌ ಹೆಸರಾಗಿರುವ ಕಾಜು ಎಂಬುದರಿಂದ ಇದರ ಇಂಗ್ಲಿಷ್‌ ಹೆಸರು ಜನ್ಯವಾಗಿದೆ. ಕಾಜು ಎಂಬ ಹೆಸರು ಸ್ಥಳೀಯ ಟೂಪಿ ಭಾಷೆಯಲ್ಲಿನ ಹೆಸರಾದ ಅಕಾಜು ಎಂಬುದರಿಂದ ಹುಟ್ಟಿಕೊಂಡಿದೆ.

ಇದರ ಮರವು ಚಿಕ್ಕದಾಗಿರುತ್ತದೆ ಮತ್ತು ನಿತ್ಯ ಹರಿದ್ವರ್ಣವಾಗಿರುತ್ತದೆ. ೧೦-೧೨ ಮೀ ಎತ್ತರದವರೆಗೆ ಬೆಳೆಯುವ ಇದು ಒಂದು ಕುಳ್ಳಗಿನ, ಅನೇಕವೇಳೆ ಅಡ್ಡಾದಿಡ್ಡಿ ಆಕಾರದಲ್ಲಿರುವ ಕಾಂಡವನ್ನು ಹೊಂದಿರುತ್ತದೆ. ಎಲೆಗಳು ಸುರುಳಿಯಾಕಾರದಲ್ಲಿ ಜೋಡಿಸಲ್ಪಟ್ಟಿದ್ದು ತೊಗಲಿನಂತಿರುವ ವಿನ್ಯಾಸವನ್ನು ಅವುಹೊಂದಿರುತ್ತವೆ. ಅಂಡಾಕಾರದದಿಂದ ಮೊದಲ್ಗೊಂಡು ತಳಭಾಗದ ತುದಿ ಚೂಪಾಗಿದ್ದು ಅಂಡಾಕಾರದಲ್ಲಿರುವ ವಿಶಿಷ್ಟತೆಯವರೆಗೆ ಇವುಗಳ ಆಕಾರವಿರುತ್ತದೆ. ೪ ರಿಂದ ೨೨ ಸೆಂ.ಮೀ. ವರೆಗಿನ ಉದ್ದ, ೨ ರಿಂದ ೧೫ ಸೆಂ.ಮೀ.ವರೆಗಿನ ಅಗಲವನ್ನು ಹೊಂದಿರುವ ಇವುಗಳ ಎಲೆಗಳು, ಒಂದು ನವಿರಾದ ಅಂಚನ್ನು ಹೊಂದಿರುತ್ತವೆ. ೨೬ ಸೆಂ.ಮೀ.ವರೆಗೆ ಉದ್ದವಿರುವ ಒಂದು ಸಂಕೀರ್ಣ ಪುಷ್ಪಗುಚ್ಛ ಅಥವಾ ಸಮಗುಚ್ಛದಲ್ಲಿ ಹೂವುಗಳು ರೂಪುಗೊಳ್ಳುತ್ತವೆ. ಪ್ರತಿ ಹೂವೂ ಸಹ ಚಿಕ್ಕದಾಗಿದ್ದು, ಪ್ರಾರಂಭದಲ್ಲಿ ನಸು ಹಸಿರು ಬಣ್ಣದಲ್ಲಿರುತ್ತದೆ ಮತ್ತು ನಂತರದಲ್ಲಿ ಕೆಂಪುಛಾಯೆಗೆ ತಿರುಗುತ್ತದೆ ಹಾಗೂ ೭ ರಿಂದ ೧೫ ಮಿ.ಮೀ.ವರೆಗೆ ಉದ್ದವಿರುವ ಸಣಕಲಾಗಿರುವ, ಮೊನಚಾದ ಐದು ದಳಗಳನ್ನು ಅದು ಹೊಂದಿರುತ್ತದೆ.

ಗೋಡಂಬಿ ಯಾರಿಗೆ ತಾನೆ ಇಷ್ಟ ಇಲ್ಲ?
ಗೋಡಂಬಿ ಮರದ ಹಣ್ಣಿನ ರೀತಿ

ಗೋಡಂಬಿ ಮರದ ಹಣ್ಣಿನ ರೀತಿಯಲ್ಲಿ ಕಾಣಿಸಿಕೊಳ್ಳುವ ರಚನೆಯು ಒಂದು ಅಂಡಾಕಾರದ ಅಥವಾ ಪೇರುಹಣ್ಣಿನ-ಆಕಾರದ ಅಪ್ರಧಾನ ಹಣ್ಣು ಆಗಿದ್ದು ಗೋಡಂಬಿ ಹೂವಿನ ಪುಷ್ಪಪಾತ್ರೆಯಿಂದ ಅದು ಬೆಳೆಯುತ್ತದೆ. ಮಧ್ಯ ಅಮೆರಿಕಾದಲ್ಲಿ “ಮ್ಯಾರನಾನ್‌‌ ” ಎಂದು ಚಿರಪರಿಚಿತವಾಗಿರುವ ಹಾಗೂ ಗೇರುಹಣ್ಣು ಎಂದು ಕರೆಯಲ್ಪಡುವ ಇದು ಪಕ್ವವಾಗಿ ಸುಮಾರು ೫-೧೧ ಸೆಂ.ಮೀ. ಉದ್ದದ ಒಂದು ಹಳದಿ ಮತ್ತು/ಅಥವಾ ಕೆಂಪು ರಚನೆಯ ಸ್ವರೂಪವನ್ನು ತಳೆಯುತ್ತದೆ. ಇದು ತಿನ್ನಲು ಯೋಗ್ಯವಾದ ಹಣ್ಣಾಗಿದ್ದು, ಒಂದು ಗಾಢವಾದ “ಸಿಹಿ” ವಾಸನೆ ಮತ್ತು ಒಂದು ಸಿಹಿ ರುಚಿಯನ್ನು ಹೊಂದಿರುತ್ತದೆ. ಗೇರು ಹಣ್ಣಿನ ತಿರುಳು ಅತ್ಯಂತ ರಸಭರಿತವಾಗಿರುತ್ತದೆಯಾದರೂ, ಅದರ ಸಿಪ್ಪೆಯು ನವಿರಾಗಿರುತ್ತದೆ; ಆದ್ದರಿಂದ ಇದು ಸಾಗಣೆಗಾಗಿ ಯೋಗ್ಯವಲ್ಲದ ಒಂದು ಹಣ್ಣೆನಿಸಿದೆ.

ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುವಂತಹ ಗುಣವಿದ್ದು, ಆರೋಗ್ಯಕಾರಿ ಆಹಾರ ಕ್ರಮಕ್ಕೆ ಪರಿಣಾಮಕಾರಿ ಮತ್ತು ಆಕ್ಸಿಡೇಟಿವ್ ಒತ್ತಡ, ಉರಿಯೂತ ಮತ್ತು ನಾಳೀಯ ಪ್ರತಿಕ್ರಿಯಾತ್ಮಕತೆ ಮೇಲೆ ಪರಿಣಾಮ ಬೀರುವುದು. ಗೋಡಂಬಿಯು ಉತ್ತಮ ಕೊಲೆಸ್ಟ್ರಾಲ್ ನ್ನು ಹೆಚ್ಚಿಸುವುದು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು.

ಗೋಡಂಬಿ ಮರದ ನಿಜವಾದ ಹಣ್ಣೆಂಬುದು ಒಂದು ಮೂತ್ರಪಿಂಡದ ಅಥವಾ ಮುಷ್ಟಿಯುದ್ಧದ-ಕೈಗವುಸಿನ ಆಕಾರದ ಓಟೆಯ ಹಣ್ಣು ಆಗಿದ್ದು, ಅಪ್ರಧಾನ ಹಣ್ಣಿನ ತುದಿಯಲ್ಲಿ ಅದು ಬೆಳೆಯುತ್ತದೆ. ಓಟೆಯ ಹಣ್ಣು ಮರದ ಮೇಲೆ ಮೊದಲು ಬೆಳೆಯುತ್ತದೆ ಮತ್ತು ನಂತರದಲ್ಲಿ ಮುಖ್ಯ ದಂಟು ಗೇರುಹಣ್ಣಾಗಿ ವಿಸ್ತರಿಸಲ್ಪಡುತ್ತದೆ. ನಿಜವಾದ ಹಣ್ಣಿನ ಒಳಗಡೆ ಒಂದು ಏಕೈಕ ಬೀಜವಿದ್ದು, ಅದೇ ಗೋಡಂಬಿ ಬೀಜ ವೆನಿಸಿಕೊಳ್ಳುತ್ತದೆ. ಪಾಕಶಾಲೆಯ ಅರ್ಥದಲ್ಲಿ ಇದೊಂದು ಕರಟಕಾಯಿಯಾಗಿದ್ದರೂ, ಸಸ್ಯಶಾಸ್ತ್ರೀಯ ಅರ್ಥದಲ್ಲಿ ಗೋಡಂಬಿಯ ಕರಟಕಾಯಿಯು ಒಂದು ಬೀಜವಾಗಿದೆ. ಬೀಜವು ಒಂದು ಜೋಡಿ ಚಿಪ್ಪಿನಿಂದ ಸುತ್ತುವರೆಯಲ್ಪಟ್ಟಿದ್ದು, ಅದು ಅಹಿತ ಪ್ರತಿಕ್ರಿಯೆಯನ್ನುಂಟುಮಾಡುವ ಒಂದು ಫೀನಾಲ್‌ ರಾಸಾಯನಿಕ ಸ್ವರೂಪದ ರಾಳವಾಗಿರುವ ಅನಾಕಾರ್ಡಿಕ್‌ ಆಮ್ಲವನ್ನು ಒಳಗೊಂಡಿದೆ. ಈ ಆಮ್ಲವು ಒಂದು ಪ್ರಬಲವಾದ ಚರ್ಮ ಉದ್ರೇಕಕಾರಿಯಾಗಿದ್ದು, ಹೆಚ್ಚಿನ ರೀತಿಯಲ್ಲಿ ಅಹಿತ ಪ್ರತಿಕ್ರಿಯೆಯನ್ನುಂಟುಮಾಡುತ್ತದೆ ಎಂಬುದಾಗಿ ಚಿರಪರಿಚಿತವಾಗಿರುವ ಉರುಷಿಯೋಲ್‌‌ ತೈಲದೊಂದಿಗೆ ರಾಸಾಯನಿಕವಾಗಿ ಸಂಬಂಧವನ್ನು ಹೊಂದಿದೆ. ಉರುಷಿಯೋಲ್‌‌ ತೈಲವೂ ಸಹ ಒಂದು ವಿಷವಾಗಿದ್ದು, ಸಂಬಂಧಿಸಿದ ನಂಜು ಐವಿಯಲ್ಲಿ ಅದು ಕಂಡುಬರುತ್ತದೆ. ಕೆಲವೊಂದು ಜನರು ಗೋಡಂಬಿ ಬೀಜಗಳೊಂದಿಗೆ ಅಸಹಿಷ್ಣುತೆಯನ್ನು ಹೊಂದಿದ್ದಾರೆ, ಆದರೆ ಕರಟಕಾಯಿಗಳು ಅಥವಾ ಕಡಲೆಕಾಯಿಗಳಿಗಿಂತ ಅಪರೂಪವಾಗಿ ಅಹಿತ ಪ್ರತಿಕ್ರಿಯೆಯನ್ನು ಉಂಟುಮಾಡುವ ಗುಣವನ್ನು ಗೋಡಂಬಿಗಳು ಹೊಂದಿವೆ ಅನ್ನಬಹುದೇನೋ.

ಗೋಡಂಬಿ ಯಾರಿಗೆ ತಾನೆ ಇಷ್ಟ ಇಲ್ಲ?
ಗೋಡಂಬಿ

ಗೋಡಂಬಿಯಲ್ಲಿ ಪ್ರಬಲವಾದ ಆಂಟಿಆಕ್ಸಿಡೆಂಟ್ ವರ್ಣ ದ್ರವ್ಯಗಳು ಇವೆ. ಇದನ್ನು ಜಿಯಾ ಕ್ಸಂಥಿನ್ ಎಂದು ಕರೆಯಲಾಗುತ್ತದೆ. ಈ ವರ್ಣದ್ರವ್ಯವನ್ನು ನಮ್ಮ ರೆಟಿನಾವು ನಿಯಮಿತವಾಗಿ ಮತ್ತು ನೇರವಾಗಿ ಹೀರಿಕೊಳ್ಳುತ್ತದೆ ಎಂದು ಪೋಷಕಾಂಶ ತಜ್ಞೆ ಅಂಜು ಸೂಡ್ ಅವರು ಹೇಳುತ್ತಾರೆ. ಇದು ಒಂದು ಪದರವಾಗಿ ನಿರ್ಮಾಣಗೊಂಡು ಹಾನಿಕಾರ ಯುವಿ ಕಿರಣಗಳಿಂದ ರಕ್ಷಣೆ ನೀಡುವುದು.

ಸಸ್ಯದ ಅನೇಕ ಭಾಗಗಳನ್ನು ಗಯಾನಾದ ಪಟಮೋನಾ ಜನರು ಔಷಧೀಯವಾಗಿ ಬಳಸುತ್ತಾರೆ. ತೊಗಟೆಯನ್ನು ಹೆರೆಯಲಾಗುತ್ತದೆ ಮತ್ತು ಒಂದು ರಾತ್ರಿಯ ಅವಧಿಗೆ ನೆನೆಹಾಕಲಾಗುತ್ತದೆ ಅಥವಾ ಕುದಿಸಲಾಗುತ್ತದೆ. ಇದರ ಫಲವಾಗಿ ರೂಪುಗೊಳ್ಳುವ ಕಷಾಯವು ಒಂದು ಅತಿಸಾರ-ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ವಾರ್ನಿಷ್‌ನಲ್ಲಿ ಬಳಸಲ್ಪಡುವ ಒಂದು ಅಂಟನ್ನೂ ಸಹ ಇದು ನೀಡುತ್ತದೆ. ಬೀಜಗಳನ್ನು ಬೀಸಿ ಪುಡಿಮಾಡಿ ಹಾವಿನ ಕಡಿತಗಳಿಗೆ ಸಂಬಂಧಿಸಿದಂತೆ ನಂಜು-ನಿರೋಧಕವಾಗಿ ಬಳಸಲಾಗುತ್ತದೆ.

ಕರಟಕಾಯಿಯ ತೈಲವನ್ನು ಶರೀರದ ಒಂದು ಭಾಗಕ್ಕೆ ಸಂಬಂಧಿಸಿದಂತೆ ಒಂದು ಶಿಲೀಂಧ್ರ-ನಿರೋಧಕವಾಗಿ ಬಳಸಲಾಗುತ್ತದೆ. ಅಷ್ಟೇ ಅಲ್ಲ, ಬಿರುಕುಬಿಟ್ಟ ಹಿಮ್ಮಡಿಗಳನ್ನು ವಾಸಿಮಾಡಲೂ ಸಹ ಇದು ಬಳಸಲ್ಪಡುತ್ತದೆ.

ಗೋಡಂಬಿ ಬೀಜವು ಒಂದು ಜನಪ್ರಿಯ ಕುರುಕಲು ತಿಂಡಿಯಾಗಿದೆ, ಮತ್ತು ಇದರ ಸಮೃದ್ಧ ಪರಿಮಳದ ಕಾರಣದಿಂದಾಗಿ ಇದನ್ನು ಹಾಗೆಯೇ ಇಡಿಯಾಗಿ ತಿನ್ನಬಹುದಾಗಿದೆ. ಲಘುವಾಗಿ ಉಪ್ಪುಹಚ್ಚಿದ ಅಥವಾ ಸಕ್ಕರೆ ಲೇಪಿಸಿದ ಗೋಡಂಬಿ ಬೀಜವು ಎಲ್ಲರಿಗೂ ಪ್ರಿಯವಾದ ಕುರುಕಲು ತಿಂಡಿ ಎಂಬುದಿಲ್ಲಿ ಗಮನಾರ್ಹ. ಚಾಕೊಲೇಟ್ನಲ್ಲಿ ಹುದುಗಿಸಿದ ರೂಪದಲ್ಲಿ ಗೋಡಂಬಿ ಬೀಜಗಳು ಮಾರಲ್ಪಡುತ್ತವೆಯಾದರೂ, ಅಗ್ಗದ ಕಡಲೆಕಾಯಿಗಳು ಮತ್ತು ಬಾದಾಮಿಗಳಿಗೆ ಹೋಲಿಸಿದಾಗ ಇದು ಅಪರೂಪವೆಂದೇ ಹೇಳಬೇಕು.

ಗೋಡಂಬಿಯಲ್ಲಿ ಮೆಗ್ನೇಶಿಯಂ ಮತ್ತು ಕ್ಯಾಲ್ಸಿಯಂ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ಇದು ಮೂಳೆಗಳ ಬೆಳವಣಿಗೆ ಮತ್ತು ಶಕ್ತಿ ವರ್ಧನೆಗೆ ನೆರವಾಗುತ್ತದೆ.

ಗೋಡಂಬಿ ಬೀಜಗಳು ಥಾಯ್‌‌ ಪಾಕಪದ್ಧತಿ ಮತ್ತು ಚೀನಿಯರ ಪಾಕಪದ್ಧತಿಯ ಭಾಗವಾಗಿಯೂ ಪಾತ್ರವನ್ನು ವಹಿಸುತ್ತವೆ ಮತ್ತು ಸಾಮಾನ್ಯವಾಗಿ ಇದು ಇಡಿದಾದ ಸ್ವರೂಪದಲ್ಲಿರುತ್ತದೆ. ಭಾರತೀಯ ಪಾಕಪದ್ಧತಿಯಲ್ಲಿ ಅನೇಕ ವೇಳೆ ಇದನ್ನು ಶಾಹಿ ಕೂರ್ಮದಂಥ ಮಸಾಲೆಗಳ ರೂಪಕ್ಕೆ ರುಬ್ಬಲಾಗುತ್ತದೆ ಮತ್ತು ಭಾರತೀಯ ಸಿಹಿತಿನಿಸುಗಳು ಹಾಗೂ ಹಣ್ಣು-ಐಸ್‌ಕ್ರೀಂ ಮಿಶ್ರಣಗಳಲ್ಲಿ ಅಲಂಕರಣದ ಸಾಮಗ್ರಿಗಳಾಗಿ ಗೋಡಂಬಿ ಬೀಜವಗಳು ಬಳಸಲ್ಪಡುತ್ತವೆ.

ಗೋಡಂಬಿ ಬೀಜವು ತನ್ನ ಎಳಸು ಸ್ವರೂಪದಲ್ಲಿದ್ದಾಗ ಅದನ್ನು ಬಳಸುವ ವಿಧಾನವು ಅಷ್ಟಾಗಿ-ಪರಿಚಯವಿಲ್ಲದಿದ್ದರೂ ಸಹ ಅದು ಸ್ವಾದಿಷ್ಟಕರವಾಗಿದೆ. ಈ ಹಂತದಲ್ಲಿ ಗೋಡಂಬಿ ಬೀಜದ ಚಿಪ್ಪು ಇನ್ನೂ ಗಡುಸಾಗಿರುವುದಿಲ್ಲ ಮತ್ತು ಅದರ ಬಣ್ಣವು ಹಸಿರಾಗಿರುತ್ತದೆ. ಈ ಹಂತದಲ್ಲಿ ಚಿಪ್ಪು ಮೃದುವಾಗಿರುತ್ತದೆ, ಮತ್ತು ಒಂದು ಚಾಕುವನ್ನು ಬಳಸಿ ಅದನ್ನು ಎರಡು ತುಂಡುಗಳಾಗಿ ಕತ್ತರಿಸಬಹುದಾಗಿರುತ್ತದೆ. ತಿರುಳಿನ ಸಾರತೆಗೆಯಲಾಗುತ್ತದೆ ಮತ್ತು ಬಳಕೆಗೆ ಮುಂಚಿತವಾಗಿ ಅದರಲ್ಲಿನ ನಾಶಕಾರಿ ಸಾಮಗ್ರಿಯನ್ನು ತೆಗೆದುಹಾಕಲು ಅದನ್ನು ಅರಿಶಿನದ ನೀರಿನಲ್ಲಿ ನೆನೆಹಾಕಲಾಗುತ್ತದೆ. ಕೇರಳ ಪಾಕಪದ್ಧತಿಯಲ್ಲಿ, ಅದರಲ್ಲೂ ವಿಶಿಷ್ಟವೆಂಬಂತೆ ಅವಿಯಲ್‌ ಭಕ್ಷ್ಯದಲ್ಲಿ ಇದು ಬಹುತೇಕವಾಗಿ ಕಂಡುಬರುತ್ತದೆ. ಅವಿಯಲ್ ಎಂಬುದು ಒಂದು ವಿಶಿಷ್ಟವಾದ ಆಹಾರಭಕ್ಷ್ಯವಾಗಿದ್ದು, ಅದು ಹಲವಾರು ತರಕಾರಿಗಳು, ತುರಿದ ತೆಂಗಿನಕಾಯಿ, ಅರಿಶಿನ ಮತ್ತು ಹಸಿರು ಮೆಣಸಿನಕಾಯಿಗಳನ್ನು ಒಳಗೊಂಡಿರುತ್ತದೆ.

ಗೋಡಂಬಿ ಯಾರಿಗೆ ತಾನೆ ಇಷ್ಟ ಇಲ್ಲ?
ಗೋಡಂಬಿ ಗರ್ಭಿಣಿಯರಿಗೆ ಹೆಚ್ಚು ಹಿತಕಾರಿ

ಗೋಡಂಬಿಯಲ್ಲಿ ಸಿಗುವ ಪೋಷಕಾಂಶಗಳು ಗರ್ಭಿಣಿಯರಿಗೆ ಹೆಚ್ಚು ಹಿತಕಾರಿ. ಗೋಡಂಬಿಯಲ್ಲಿರುವ ಮೆಗ್ನೇಶಿಯಂ ಗರ್ಭಿಣಿಯರ ಆರೋಗ್ಯಕ್ಕೆ ಒಳ್ಳೆಯದು.

ಮಲೇಷಿಯಾದಲ್ಲಿ, ಎಳೆಯ ಎಲೆಗಳನ್ನು ಪಚ್ಚಡಿಯಾಗಿ ಅಥವಾ ಸಾಂಬಾಲ್‌‌ ಬೆಲಾಕಾನ್‌ ಜೊತೆಯಲ್ಲಿ ಕಚ್ಚಾಸ್ವರೂಪದಲ್ಲಿ ಅನೇಕವೇಳೆ ತಿನ್ನಲಾಗುತ್ತದೆ.

ಬ್ರೆಜಿಲ್‌‌ನಲ್ಲಿ, ಗೋಡಂಬಿ ಹಣ್ಣಿನ ರಸವು ದೇಶದಾದ್ಯಂತ ಜನಪ್ರಿಯವಾಗಿದೆ. ಮೇಲಾಗಿ, ಕಚ್ಚಾ ಗೋಡಂಬಿ ಬೀಜಗಳ ಖರೀದಿಯ ನಂತರ ಅವಕ್ಕೆ ಉಪ್ಪುಹಚ್ಚಿ ಪ್ಲಾಸ್ಟಿಕ್‌‌ ಚೀಲವೊಂದರಲ್ಲಿ ತುಂಬಿಸಿ ಕಡಿಮೆ ಬೆಲೆಗೆ ಬೀಜಗಳನ್ನು ಮಾರಾಟ ಮಾಡುವ ಗೋಡಂಬಿ ಬೀಜದ ಮಾರಾಟಗಾರರನ್ನು ಫೋರ್ಟಲೆಜಾದಂಥ ಈಶಾನ್ಯ ಪ್ರದೇಶಗಳಿಗೆ ಭೇಟಿನೀಡುವ ಸಂದರ್ಶಕರು ಅನೇಕವೇಳೆ ಕಾಣಲು ಸಾಧ್ಯವಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಟೊಮೋಟೊ

ಟೊಮೋಟೊ ಇಲ್ಲದ ಅಡುಗೆ ಕಮ್ಮಿ

ಇಂದಿನಿಂದ 33ಕೋಟಿ ದೇವರುಗಳ ಆಶೀರ್ವಾದದಿಂದ 6 ರಾಶಿಯವರಿಗೆ ಬಾರಿ ಅದೃಷ್ಟವೋ ಅದೃಷ್ಟ.

ಇಂದಿನಿಂದ 33ಕೋಟಿ ದೇವರುಗಳ ಆಶೀರ್ವಾದದಿಂದ 6 ರಾಶಿಯವರಿಗೆ ಬಾರಿ ಅದೃಷ್ಟವೋ ಅದೃಷ್ಟ.