in

ಹಣ್ಣುಗಳು ಮತ್ತು ತರಕಾರಿಗಳ ಸಿಪ್ಪೆಯಲ್ಲಿ ಕೂಡ ಆರೋಗ್ಯ ಅಡಗಿದೆ

ಹಣ್ಣುಗಳು ಮತ್ತು ತರಕಾರಿಗಳ ಸಿಪ್ಪೆಯಲ್ಲಿ ಕೂಡ ಆರೋಗ್ಯ
ಹಣ್ಣುಗಳು ಮತ್ತು ತರಕಾರಿಗಳ ಸಿಪ್ಪೆಯಲ್ಲಿ ಕೂಡ ಆರೋಗ್ಯ

ತರಕಾರಿ ಕತ್ತರಿಸಿದ ನಂತರ ನೇರವಾಗಿ ಅದರ ಸಿಪ್ಪೆಗಳು ಕಸದ ಬುಟ್ಟಿ ಸೇರಿರುತ್ತೆ. ಆಲೂಗಡ್ಡೆ, ನಿಂಬೆಹಣ್ಣು ಮತ್ತು ಇನ್ನಿತರ ತರಕಾರಿಯ ಬಹು ಉಪಯೋಗಕ್ಕೆ ಬರುವ ಸಿಪ್ಪೆಗಳು ನಮ್ಮ ಅಜ್ಞಾನದಿಂದ ಸುಮ್ಮನೆ ವ್ಯರ್ಥವಾಗಿಹೋಗುತ್ತೆ. ಆದರೆ ಅದರಲ್ಲಿರುವ ಅಂಶಗಳ ಬಗ್ಗೆ ತಿಳಿದುಕೊಂಡರೆ ಅವುಗಳ ಉಪಯೋಗವನ್ನು ಸಂಪೂರ್ಣವಾಗಿ ಪಡೆಯಬಹುದು. 

ತರಕಾರಿ ಸಿಪ್ಪೆಯಲ್ಲಿ ಕೊಳೆ ಧೂಳು ಹೆಚ್ಚಿರುತ್ತದೆ, ಆದ್ದರಿಂದ ಸಿಪ್ಪೆ ಸೇವಿಸುವುದು ಎಷ್ಟು ಸರಿ ಎನ್ನುವವರು ತರಕಾರಿಯನ್ನು ಚೆನ್ನಾಗಿ ತೊಳೆದು ಅಡುಗೆಗೆ ಉಪಯೋಗಿಸಿದರೆ ನಿಮ್ಮ ಆಹಾರದಿಂದ ನಿರೀಕ್ಷಿಸುವ ಪೋಷಕಾಂಶ ದ್ವಿಗುಣಗೊಳ್ಳುತ್ತದೆ.

ಹಣ್ಣುಗಳ ಸೇವನೆ ವೇಳೆ ಕೂಡ ಸಿಪ್ಪೆಯನ್ನು ನಾವು ಬಿಸಾಕುತ್ತೇವೆ. ಆದರೆ ಸಿಪ್ಪೆಯಲ್ಲಿರುವಂತಹ ಪೋಷಕಾಂಶಗಳನ್ನು ನಾವು ಕಡೆಗಣಿಸುತ್ತೇವೆ.

ಯಾಕೆಂದರೆ ಹಣ್ಣುಗಳಂತೆ ಸಿಪ್ಪೆಗಳಲ್ಲಿ ಕೂಡ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಇವುಗಳನ್ನು ಸೇವನೆ ಮಾಡಿದರೆ ಅದು ತುಂಬಾ ಪರಿಣಾಮಕಾರಿ ಆಗಿರುವುದು. ಇದಕ್ಕಾಗಿ ಕೆಲವು ಹಣ್ಣುಗಳನ್ನು ತೊಳೆದುಕೊಂಡು ಸಿಪ್ಪೆ ತೆಗೆಯದೆ ಸೇವನೆ ಮಾಡಿದರೆ ಇನ್ನೂ ಹೆಚ್ಚಿನ ಲಾಭ ಸಿಗುವುದು.

ಹಣ್ಣುಗಳು ಮತ್ತು ತರಕಾರಿಗಳ ಸಿಪ್ಪೆಯಲ್ಲಿ ಕೂಡ ಆರೋಗ್ಯ ಅಡಗಿದೆ
ಚಿಕ್ಕು

ಚಿಕ್ಕುವಿನ ಸಿಪ್ಪೆಯಲ್ಲಿ ಸೇಬಿನ ಸಿಪ್ಪೆಯಂತೆ ಆಂಟಿಆಕ್ಸಿಡೆಂಟ್ ಅಂಶಗಳು ಸಮೃದ್ಧವಾಗಿ ಇದೆ. ಇದು ಪ್ರತಿರೋಧಕ ಶಕ್ತಿ ವೃದ್ಧಿಸುವ ಜತೆ ಫ್ರೀ ರ್ಯಾಡಿಕಲ್ ನಿಂದ ದೇಹಕ್ಕೆ ಆಗುವ ಹಾನಿ ತಡೆಯುವುದು ಮತ್ತು ಆರೋಗ್ಯ ಕೂಡ ಕಾಪಾಡುವುದು.

ಬದನೆಕಾಯಿ ಸಿಪ್ಪೆಯಲ್ಲಿ ನಸುನಿನ ಎನ್ನುವ ಆಂಟಿಆಕ್ಸಿಡೆಂಟ್ ಇದ್ದು, ಇದು ಕ್ಯಾನ್ಸರ್ ನಂತಹ ಕಾಯಿಲೆಯನ್ನು ತಡೆಯಲು ತುಂಬಾ ಸಹಕಾರಿ ಆಗಿರುವುದು ಎಂದು ಕೆಲವೊಂದು ಅಧ್ಯಯನಗಳು ಕಂಡುಕೊಂಡಿದೆ.

ಕಿತ್ತಳೆ ಸಿಪ್ಪೆ ಮತ್ತು ನಿಂಬೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿಕೊಳ್ಳಿ. ಈ ಪುಡಿಗೆ ಸ್ವಲ್ಪ ಜೇನುತುಪ್ಪ ಸೇರಿಸಿ, ಸ್ನಾನ ಮಾಡುವಾಗ ಸ್ಕ್ರಬ್ ರೀತಿ ಇದನ್ನು ಬಳಸಬಹುದು. ಇದು ಟ್ಯಾನ್ ತೊಡೆದು ಹಾಕಲು ಸಹಾಯ ಮಾಡುತ್ತದೆ.

ಹಣ್ಣುಗಳು ಮತ್ತು ತರಕಾರಿಗಳ ಸಿಪ್ಪೆಯಲ್ಲಿ ಕೂಡ ಆರೋಗ್ಯ ಅಡಗಿದೆ
ಸೇಬಿನ ಸಿಪ್ಪೆಯಲ್ಲಿ ಅತ್ಯಧಿಕ ಪ್ರಮಾಣದ ಆಂಟಿಆಕ್ಸಿಡೆಂಟ್ ಇವೆ

ಸೇಬಿನ ಸಿಪ್ಪೆಯಲ್ಲಿ ಅತ್ಯಧಿಕ ಪ್ರಮಾಣದ ಆಂಟಿಆಕ್ಸಿಡೆಂಟ್, ಕ್ಯಾನ್ಸರ್ ವಿರೋಧಿ ಅಂಶಗಳು ಇವೆ. ಸೇಬಿನ ಸಿಪ್ಪೆಯು ಹಲವಾರು ರೀತಿಯ ಕ್ಯಾನ್ಸರ್ ಬರದಂತೆ ತಡೆಯುವುದು ಮತ್ತು ಇದನ್ನು ಹಾಗೆ ಬಿಸಾಕಬಾರದು.

 ದ್ರಾಕ್ಷಿ ಸಿಪ್ಪೆಯಲ್ಲಿ ಆಂಥೋಸಿಯಾನಿನ್ ಅಂಶಗಳಿದ್ದು, ಇದು ಅದಕ್ಕೆ ಬಣ್ಣ ನೀಡುವುದು. ಈ ಅಂಶಗಳು ಹೃದಯವನ್ನು ರಕ್ಷಣೆ ಮಾಡುವುದು ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ಕಡಿಮೆ ಮಾಡುವುದು ಎಂದು ಅಧ್ಯಯನಗಳು ಕೂಡ ಕಂಡುಕೊಂಡಿವೆ.

ಆಲೂಗಡ್ಡೆ ಸಿಪ್ಪೆಯಲ್ಲಿ ಕೂಡ ಆಂಟಿಆಕ್ಸಿಡೆಂಟ್ ಮತ್ತು ಕ್ಲೋರೊರೊಜೆನಿಕ್ ಆಮ್ಲವು ಸಮೃದ್ಧವಾಗಿದೆ. ಇದು ಕ್ಯಾನ್ಸರ್ ಕಾರಕಗಳನ್ನು ದೇಹದಿಂದ ದೂರ ಮಾಡುವುದು. ಇದರಲ್ಲಿ ವಿಟಮಿನ್ ಸಿ, ಬಿ ಸಂಕೀರ್ಣ ವಿಟಮಿನ್ ಗಳು ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದು ದೇಹದಲ್ಲಿ ಪ್ರತಿರೋಧಕ ಶಕ್ತಿ ವೃದ್ಧಿ ಮಾಡುವುದು. ಮುಂದಿ ಸಲ ನೀವು ಬಟಾಟೆ ಸಿಪ್ಪೆ ತೆಗೆಯದೆ ಸರಿಯಾಗಿ ತೊಳೆದು ಬಳಕೆ ಮಾಡಿ.

ಲಿಂಬೆಯ ಸಿಪ್ಪೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ ಮತ್ತು ಕ್ಯಾನ್ಸರ್ ವಿರೋಧಿ ಅಂಶಗಳು ಕೂಡ ಇದರಲ್ಲಿದೆ.

ಲಿಂಬೆಯ ಸಿಪ್ಪೆಯಲ್ಲಿ ಇರುವಂತಹ ಅಂಶಗಳು ದೇಹದಲ್ಲಿ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುವುದು. ಇದರಿಂದ ಇದರ ಸಿಪ್ಪೆಯನ್ನು ಬಿಸಾಕದೆ ಉಪ್ಪಿನಕಾಯಿ ಮಾಡಿಕೊಂಡು ಬಳಸಬಹುದು.

ಬಾಳೆಹಣ್ಣಿನ ಸಿಪ್ಪೆಯಲ್ಲಿ ಪಾಲಿಫೆನಾಲ್, ಕ್ಯಾರೊಟಿನಾಯ್ಡ್ ಮತ್ತು ಆಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ. ಇದರಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಆಕ್ಸಿಡೇಟಿವ್ ಒತ್ತಡದ ವಿರುದ್ಧ ಹೋರಾಡುವುದು ಮತ್ತು ಅಂಗಾಂಶಗಳಿಗೆ ಆಗುವ ಹಾನಿ ತಡೆಯುವುದು. ಉರಿಯೂತ ಶಮನಕಾರಿ ಗುಣ ಹೊಂದಿರುವ ಇದನ್ನು ಉರಿಯೂತ ಶಮನಕಾರಿ ಆಗಿಯೂ ಬಳಕೆ ಮಾಡಬಹುದು.

ಮನೆಯಲ್ಲಿ ನೊಣ ಹಾಗೂ ಕೀಟಗಳಿಂದ ಮುಕ್ತಿ ಬೇಕು ಎಂದರೆ ಕಿತ್ತಳೆ ಹಾಗೂ ನಿಂಬೆಯ ಸಿಪ್ಪೆಯನ್ನು ಮನೆಯ ಮೂಲೆಗಳಲ್ಲಿ ಇಡುವುದು ಸಹಾಯ ಮಾಡುತ್ತದೆ. ಸಿಟ್ರಸ್​ ವಾಸನೆಗೆ ಕೀಟಗಳು ಮನೆಯ ಒಳಗೆ ಬರುವುದಿಲ್ಲ.

ಹಣ್ಣುಗಳು ಮತ್ತು ತರಕಾರಿಗಳ ಸಿಪ್ಪೆಯಲ್ಲಿ ಕೂಡ ಆರೋಗ್ಯ ಅಡಗಿದೆ
ಕಿತ್ತಳೆ ಹಾಗೂ ನಿಂಬೆಯ ಸಿಪ್ಪೆಯನ್ನು ಮನೆಯ ಮೂಲೆಗಳಲ್ಲಿ ಇಡುವುದು

ತರಕಾರಿಗಳಾದ ಹೀರೇಕಾಯಿ, ಹಾಗಲಕಾಯಿ, ಸೋರೇ ಕಾಯಿ ಮತ್ತು ಶುಂಠಿ, ಇವುಗಳೂ ಕೂಡ ತಮ್ಮ ಸಿಪ್ಪೆಯಲ್ಲಿ ಬಹು ಉಪಯುಕ್ತ ಅಂಶವನ್ನು ಹೊಂದಿದೆ. ಇದನ್ನು ಬಿಸಾಡದೆ ಉಪಯೋಗಿಸಿದರೆ ತರಕಾರಿಯನ್ನು ತಿಂದಷ್ಟೇ ಹೆಚ್ಚಿನ ಪೌಷ್ಟಿಕಾಂಶವನ್ನು ಹೊಂದಬಹುದು.

ನಿಂಬೆಹಣ್ಣ ಸಿಪ್ಪೆಯಿಂದ ಪಾತ್ರೆಗಳಲ್ಲಿನ ಹಳೆಯ ಕಲೆಯನ್ನು ಹೋಗಲಾಡಿಸಬಹುದು.

ಉಪ್ಪು ಮತ್ತು ನಿಂಬೆ ಹಣ್ಣಿನ ಸಿಪ್ಪೆಯಿಂದ ಹಲ್ಲಿನಲ್ಲಿನ ಹಳದಿ ಅಂಶವನ್ನು ಹೋಗಿಸಬಹುದು ನಾಲಿಗೆಯ ಕೊಳೆಯನ್ನೂ ಹೋಗಲಾಡಿಸಬಹುದು.

ಪೇರಳೆಯ ಸಿಪ್ಪೆಯಲ್ಲಿ ಅತ್ಯಧಿಕ ಪ್ರಮಾಣದ ನಾರಿನಾಂಶ ಹಾಗೂ ಆಂಟಿಆಕ್ಸಿಡೆಂಟ್ ಇದೆ. ಇದರಲ್ಲಿ ಪೆಕ್ಟಿನಸ್ ಎನ್ನುವ ಕಿಣ್ವವು ಅಧಿಕವಾಗಿದ್ದು, ಜೀರ್ಣಕ್ರಿಯೆಗೆ ಸಹಕಾರಿ. ಪೆಕ್ಟಿನಸ್ ಹೊಟ್ಟೆಯ ಬ್ಯಾಕ್ಟೀರಿಯಾವನ್ನು ಸಮತೋಲನದಲ್ಲಿ ಇಡುತ್ತದೆ.

ಹಸಿ ಪೇರಳೆಯ ಸಿಪ್ಪೆಯಲ್ಲಿ ಮಧುಮೇಹ ವಿರೋಧಿ ಮತ್ತು ಗ್ಲೈಸೆಮಿಕ್ ವಿರೋಧಿ ಅಂಶಗಳು ಇವೆ. ಇದು ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಕಾಪಾಡಲು ಸಹಕಾರಿ ಆಗಿರುವುದು.

ನಿಂಬೆಹಣ್ಣಿನ ಸಿಪ್ಪೆಗಳನ್ನು ಚರ್ಮಕ್ಕೆ ಲೇಪಿಸಿಕೊಳ್ಳುವುದರಿಂದ ಕಾಂತಿಯನ್ನು ಹೆಚ್ಚಿಸಬಹುದು.

ಹಣ್ಣುಗಳು ಮತ್ತು ತರಕಾರಿಗಳ ಸಿಪ್ಪೆಯಲ್ಲಿ ಕೂಡ ಆರೋಗ್ಯ ಅಡಗಿದೆ
ಈರುಳ್ಳಿ ಸಿಪ್ಪೆಯಲ್ಲಿ ಆಂಟಿಆಕ್ಸಿಡೆಂಟ್ ಇದೆ

ಬಾಳೆಹಣ್ಣಿನ ಸಿಪ್ಪೆಯನ್ನು ಕಣ್ಣಿನ ಕೆಳಭಾಗದಲ್ಲಿ ಲೇಪಿಸಿಕೊಳ್ಳುವುದರಿಂದ ಕಪ್ಪು ವರ್ತುಲಗಳ ಕಲೆ ಹೋಗಲಾಡಿಸಬಹುದು.

ಹಣ್ಣುಗಳ ಸಿಪ್ಪೆಯ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದಲ್ಲಿ ಕಾಂತಿ ಹೆಚ್ಚಿಸಿಕೊಳ್ಳಬಹುದು.

ಈರುಳ್ಳಿ ಸಿಪ್ಪೆಯಲ್ಲಿ ಕ್ವೆರ್ಸೆಟಿನ್ ಎನ್ನುವ ಫ್ಲಾವನಾಯ್ಡ್ ಇದ್ದು, ಇದು ಆಂಟಿಆಕ್ಸಿಡೆಂಟ್, ಉರಿಯೂತ ಶಮನಕಾರಿ, ಬೊಜ್ಜು ವಿರೋಧಿ ಮತ್ತು ಲಿಪಿಡ್ ನ್ನು ನಿಯಂತ್ರಿಸುವ ಗುಣ ಹೊಂದಿದೆ. ಈರುಳ್ಳಿ ಸಿಪ್ಪೆಯು ಹೈಪರ್ ಗ್ಲೈಸೆಮಿಕ್ ಮತ್ತು ಇನ್ಸುಲಿನ್ ಪ್ರತಿರೋಧಕವನ್ನು ಸುಧಾರಣೆ ಮಾಡುವುದು. ಈರುಳ್ಳಿ ಸಿಪ್ಪೆ ತಿನ್ನಲು ಆಗದು. ಆದರೆ ಕೆಲವೊಂದು ಸಂದರ್ಭದಲ್ಲಿ ಇದನ್ನು ಬೇಯಿಸುವ ವೇಳೆ ಬಳಕೆ ಮಾಡಬಹುದು. ದಿನಕ್ಕೊಂದು ಸಣ್ಣ ಹಸಿ ಈರುಳ್ಳಿ ಕಟ್ ಮಾಡಿ ತಿಂದ್ರೆ, ಆರೋಗ್ಯಕ್ಕೆ ಒಳ್ಳೆಯದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಜಿ.ಪಿ. ರಾಜರತ್ನಂ ಅವರು ಹುಟ್ಟಿದ ದಿನ

ಡಿಸೆಂಬರ್ 5 ಕನ್ನಡಕ್ಕಾಗಿ ಅಪಾರವಾಗಿ ದುಡಿದ ಜಿ.ಪಿ. ರಾಜರತ್ನಂ ಅವರು ಹುಟ್ಟಿದ ದಿನ

ಪುರಂದರ ದಾಸರು

ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸರು