ಸಾಗುವಾನಿ ವರ್ಬೆನಾಸಿಯೆ ಕುಟುಂಬದ ಒಂದು ಪರ್ಣಪಾತಿ ವೃಕ್ಷ. ಇದು ಮುಖ್ಯವಾಗಿ ಮಾನ್ಸೂನ್ ಕಾಡುಗಳಲ್ಲಿ, ಅಂದರೆ ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ದೇಶಗಳಲ್ಲಿ ಬೆಳೆಯುತ್ತದೆ. ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ ಬೆಳೆಯುತ್ತದೆ. ಕರ್ನಾಟಕದ ದಾಂಡೇಲಿ, ಯಲ್ಲಾಪುರ, ಕಾಕನಕೋಟೆ, ಹುಣಸೂರು ಮುಂತಾದ ಪ್ರದೇಶಗಳು ಸಾಗುವಾನಿ ತೋಪುಗಳಿಗೆ ಪ್ರಖ್ಯಾತ.
ಸಾಗುವಾನಿ ಮರಗಳ ರಾಜ. ಉಳಿದ ಮರಗಳನ್ನು ಸಾಗುವಾನಿಯ ಗುಣಗಳಿಗೆ ಹೋಲಿಸುವುದು ವಾಡಿಕೆಯಾಗಿದೆ. ಇದಕ್ಕೆ ಗೆದ್ದಲು ಹಿಡಿಯುವುದಿಲ್ಲ, ಅಲಂಕಾರಿಕವಾಗಿದ್ದು ಹೊಳಪು ಬರುತ್ತದೆ. ಕೆತ್ತನೆಗೆ ಸುಲಭವಾಗಿದೆ. ಸಾಧಾರಣ ಗಡಸು ಸುರುಟುವುದಿಲ್ಲ.
ಉಪಯೋಗಗಳು
ಇದರ ದಾರುನ ಉಪಯೋಗ ಹಲವಾರು. ಮುಖ್ಯವಾಗಿ ಗೃಹ ನಿರ್ಮಾಣಕ್ಕೆ, ಪೀಠೋಪಕರಣಗಳಿಗೆ, ಹಡಗು ಕಟ್ಟಲು, ಒಳಾಂಗಣ ಅಲಂಕಾರಕ್ಕೆ, ರೈಲ್ವೇ ಕೋಚುಗಳ ನಿರ್ಮಾಣಕ್ಕೆ ಬಹುವಾಗಿ ಉಪಯೋಗವಾಗುತ್ತಿದೆ. ಇದರ ಪದರ ಹಲಗೆ ಅತ್ಯುತ್ತಮ ಅಲಂಕಾರಿಕವಾಗಿದ್ದು ಪ್ರಪಂಚದಾದ್ಯಂತ ಬಹು ಬೇಡಿಕೆ ಇದೆ. ಇದರ ದಾರುವಿನ ಎಣ್ಣೆ, ಬೀಜದ ಎಣ್ಣೆ ಚರ್ಮರೋಗದ ಚಿಕಿತ್ಸೆಯಲ್ಲಿ ಉಪಯೋಗದಲ್ಲಿದೆ. ಇದರ ಎಲೆಯನ್ನು ಕರಾವಳಿ ಪ್ರದೇಶದಲ್ಲಿ ಹಲಸಿನ ಕಡಬು ಮಾಡಲು ಉಪಯೋಗಿಸುತ್ತಾರೆ.
ಗುಣಪಡಿಸುವ ಗುಣಲಕ್ಷಣಗಳಲ್ಲಿ ಹೆಚ್ಚಿನ ಸಂಖ್ಯೆಯು ಈ ಮರದ ಎಲೆಗಳು. ಅವುಗಳನ್ನು ಇದಕ್ಕಾಗಿ ಬಳಸಲಾಗುತ್ತದೆ:
ಚರ್ಮದ ಹುಣ್ಣುಗಳ ಚಿಕಿತ್ಸೆ, ಹಾಗೆಯೇ ಶಿಲೀಂಧ್ರ ರೋಗಗಳು. ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿವೆ, ಆದ್ದರಿಂದ ಅವುಗಳನ್ನು ಹೆಚ್ಚಾಗಿ ಚರ್ಮದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.
ಋತುಚಕ್ರವನ್ನು ಸ್ಥಿರಗೊಳಿಸಲು. ಒಣಗಿದ ಎಲೆಗಳನ್ನು ಚಹಾದಂತೆ ಕುದಿಸಲಾಗುತ್ತದೆ ಮತ್ತು ಋತುಚಕ್ರಕ್ಕೆ ತೊಂದರೆಯಾದಾಗ ಬಳಸಲಾಗುತ್ತದೆ.
ರಕ್ತಸ್ರಾವದ ಚಿಕಿತ್ಸೆ. ಚಹಾ ಎಲೆಗಳ ರೂಪದಲ್ಲಿ ಎಲೆಗಳಿಂದ ಒಣಗಿದ ಪುಡಿಯ ರೂಪದಲ್ಲಿ ಬಳಸಲಾಗುತ್ತದೆ.
ಗಲಗ್ರಂಥಿಯ ಉರಿಯುತದ ಚಿಕಿತ್ಸೆ (ಚಹಾದಂತೆ ಬ್ರೂ).
ಮರದ ಎಲೆಗಳ ಜೊತೆಗೆ, ಮರವನ್ನು ಸಹ ಷಧದಲ್ಲಿ ಸಕ್ರಿಯವಾಗಿ ಬಳಸಲಾಗುತ್ತದೆ. ಇದನ್ನು ಉತ್ತಮ ಪುಡಿಯಾಗಿ ನೆಲಕ್ಕೆ ಹಾಕಲಾಗುತ್ತದೆ. ಅದರ ಅಪ್ಲಿಕೇಶನ್‌ನ ವ್ಯಾಪ್ತಿ ಸಾಕಷ್ಟು ವಿಸ್ತಾರವಾಗಿದೆ. ಈ ಪುಡಿಯನ್ನು ಹೀಗೆ ಬಳಸಲಾಗುತ್ತದೆ.
ಕರುಳಿನ ಪರಾವಲಂಬಿಗಳ ವಿರುದ್ಧ ದಳ್ಳಾಲಿ.
ಭೇದಿ ಗುಣಪಡಿಸುವುದು.
ಲ್ಯುಕೋಡರ್ಮಾ ಚಿಕಿತ್ಸೆಗಾಗಿ.
ಸ್ತ್ರೀ ಸಂತಾನೋತ್ಪತ್ತಿ ವ್ಯವಸ್ಥೆಯ ಕೆಲವು ರೋಗಗಳ ಚಿಕಿತ್ಸೆಗಾಗಿ.

ವರ್ಷವೂ ಮಳೆ ಬೀಳುವ ಮೊದಲ ದಿನಗಳಲ್ಲಿ ತೇಗದ ಸಸಿಗಳನ್ನು ನಾಟಿ ಮಾಡುವ ಮೂಲಕ ಸುಲಭವಾಗಿ ಬೆಳೆಸಬಹುದು. ತೇಗವು ೫೦೦ ಮಿ.ಮೀನಿಂದ ೫೦೦೦ ಮಿ.ಮೀವರೆಗಿನ ಪ್ರದೇಶದ ವೈವಿಧ್ಯತೆಯ ವಾತಾವರಣದಲ್ಲೂ ತೇಗವು ಸೊಗಸಾಗಿ ಬೆಳೆಯುತ್ತದೆ.
ಹೂ ಬಿಡುವ ಸಸ್ಯವಾದ ತೇಗವು ಪ್ರತೀ ವರ್ಷವೂ ಎಲೆಗಳನ್ನು ಉದುರಿಸಿ ಎತ್ತರಕ್ಕೆ ಬೆಳೆಯುತ್ತದೆ. ಸಾಮಾನ್ಯವಾಗಿ ತೇಗದ ಮರವು ತನ್ನ ೨೫ – ೩೦ ವರ್ಷಗಳ ಪ್ರಾಯವಿದ್ದಾಗ ಅದರ ಒಳ ಮೈಯ ಮರದ ರಾಚನಿಕ ವಿನ್ಯಾಸವು ಆಕರ್ಷಕವಾಗಿದ್ದು, ಬಣ್ಣವೂ ಮೆರುಗಿನಿಂದ ಕೂಡಿ ತುಂಬು ಚೆಲುವನ್ನು ನೀಡುತ್ತದೆ. ಈ ಚೆಲುವಿಗಾಗಿಯೇ ಈ ಮರವು ತುಂಬು ಹೆಸರುವಾಸಿ, ಮರದ “ಗ್ರಾನ್ಯೂಲ್ಸ್” ಎಂದೇ ಕರೆಯುವ ಮರದ ಈ ಒಳಮೈಯ ಚೆಲುವಿನಿಂದಲೇ ಇಷ್ಟ ಪಟ್ಟು ಈ ಮರದ ಫರ್ನೀಚರ್ ಇತ್ಯಾದಿಗಳನ್ನು ತಯಾರಿಸುವುದನ್ನು ಮಾನವ ಸಮುದಾಯವು ಬಳಸಿಕೊಂಡಿದೆ. ಹೃದಯ ಭಾಗದ ಮರದ ಈ ಚೆಲುವು ಹಳದಿ ಮಿಶ್ರವಾದ ಕಂದು ಬಣ್ಣದಾಗಿದ್ದು, ಆಗ ತಾನೆ ಕೊರೆದು ತೆರೆದಾಗ ಚರ್ಮದ ವಾಸನೆಯನ್ನು ಹೋಲುವ ಪರಿಮಳವನ್ನು ಹೊಂದಿರುತ್ತದೆ. “ಗ್ರಾಂಡಿಸ್” ಪ್ರಭೇದದ ಹೆಸರೂ ಗ್ರಾಂಡ್ ಎಂದರೆ ತುಂಬಾ ವಿಫುಲವಾದ ಎಂಬರ್ಥದಲ್ಲಿ ಅದರ ಸಾಕಷ್ಟು ಎತ್ತರ ಹಾಗೂ ವಿಫುಲವಾದ ನಾಟ ಅಥವಾ ಚೌಬೀನೆಯ ಹಿತದಿಂದ ಕರೆಯಲಾಗಿದೆ. ಸರಿ ಸುಮಾರು ೪೦ ಮೀಟರ್ ಗಳಷ್ಟು ಎತ್ತರಕ್ಕೆ ಬೆಳೆಯುವ ತೇಗವು, ಅದರ ಹೊರ ಮೈಯ ತೊಗಟೆಯು ಕಂದು ಮಿಶ್ರಿತ ಬೂದು ಬಣ್ಣದಿಂದ ಕೂಡಿರುತ್ತದೆ.
ಈ ಮರದಿಂದ ತಯಾರಿಸಿದ ಪೀಠೋಪಕರಣವು ಬಹು ದೀರ್ಘಕಾಲ ಬಾಳಿಕೆ ಬರುತ್ತದೆ. ಮನೆ ಕಟ್ಟುವಾಗ ಇದರಿಂದ ತಯಾರಿಸಿದ ನಾಟಾವನ್ನು ಬಳಸಿದರೆ ಬಹುಕಾಲ ಬಾಳುತ್ತದೆ. ಹಾಗೂ ಹಲವಾರು ಔಷಧವಾಗಿ ಕೂಡ ಉಪಯೋಗವಾಗುತ್ತದೆ.

ಇದರ ಬೀಜದಿಂದ ತಯಾರಿಸಿದ ಎಣ್ಣೆಯನ್ನು ಲೇಪಿಸಿದರೆ ಮೈನೋವು ನಿವಾರಣೆಯಾಗುತ್ತದೆ.
ಸಾಗುವಾನಿ ಬೀಜ ಮತ್ತು ಎಳ್ಳೆಣ್ಣೆ ಸೇರಿಸಿ ತಯಾರಿಸಿದ ತೈಲವನ್ನು ತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲು ಬಲಗೊಳ್ಳುತ್ತದೆ ಹಾಗೂ ಹುಲುಸಾಗಿ ಬೆಳೆಯುತ್ತದೆ. ಇದರ ಬೀಜವನ್ನು ತೇಯ್ದು ಗಂಧ ಮಾಡಿಕೊಂಡು ಹೊಟ್ಟೆಗೆ ಸ್ವಲ್ಪ ಕುಡಿದು ಮತ್ತೆ ಹೊಕ್ಕಳ ಸುತ್ತ ಸ್ವಲ್ಪ ಹಚ್ಚುವುದರಿಂದ ಮೂತ್ರಕೋಶದ ಕಲ್ಲು ಕರಗುತ್ತದೆ. ಈ ಚಿಕಿತ್ಸೆಯನ್ನು ೪೫ ದಿನಗಳವರೆಗೆ ಮಾಡಬೇಕು. ಸಾಗುವಾನಿಯ ಎಲೆಯ ರಸವನ್ನು ಪಾಕಮಾಡಿ ವಿಸರ್ಪವಾದಲ್ಲಿ ಲೇಪಿಸಿದರೆ ವಾಸಿಯಾಗುತ್ತದೆ.
ಮರದ ಬೇರನ್ನು ಮೇಕೆ ಹಾಲಿನಲ್ಲಿ ಕುದಿಸಿ ಬೇರನ್ನು ತೆಗೆದು ಹಾಲನ್ನು ಕುಡಿಯುವುದರಿಂದ ಮೂತ್ರ ಕಟ್ಟು ನಿವಾರಣೆಯಾಗುತ್ತದೆ ಹಾಗೂ ನಿರಾಳವಾಗಿ ಮೂತ್ರ ವಿಸರ್ಜನೆಯಾಗುತ್ತದೆ.
ಈ ಮರದ ತೊಗಟೆಯ ಹುಡಿಯನ್ನು ಗೇರುಹುಣ್ಣಿನ ಮೇಲೆ ಹಾಕಿಕೊಂಡರೆ ಗೇರು ಹುಣ್ಣುವಾಸಿಯಾಗುತ್ತದೆ.
ಇದರ ಎಲೆಗಳನ್ನು ಸಣ್ಣ ಚೂರಾಗಿ ಮಾಡಿ ಕೊಬ್ಬರಿ ಎಣ್ಣೆಯಲ್ಲಿ ಕುದಿಸಿ ಮಾಡಿದ ತೈಲವನ್ನು ಆಗಾಗ ಸವರುತ್ತಿದ್ದರೆ ಹಾಸಿಗೆ ಹುಣ್ಣು ಬರದಂತೆ ತಡೆಯಬಹುದು ಹಾಗೂ ಆಗಿರುವ ಹಾಸಿಗೆ ಹುಣ್ಣು ವಾಸಿಯಾಗುತ್ತದೆ.
ಧನ್ಯವಾದಗಳು.
GIPHY App Key not set. Please check settings