in

ನೆನಪಿನ ಶಕ್ತಿಯ ಅಭಿವೃದ್ಧಿಗೆ ಅನುಸರಿಸಿ ಸರಳ ಉಪಾಯಗಳನ್ನು

ನೆನಪಿನ ಶಕ್ತಿಯ ಅಭಿವೃದ್ಧಿ
ನೆನಪಿನ ಶಕ್ತಿಯ ಅಭಿವೃದ್ಧಿ

ಮೆರೆವು ಸಾಮಾನ್ಯವಾಗಿ ಎಲ್ಲರಲ್ಲೂ ಕಂಡು ಬರುವ ಸಮಸ್ಯೆಯಾದರೂ ವಿಪರೀತ ಮರೆವು ಅಪಾಯಕಾರಿಯಾದ ಲಕ್ಷಣವಾಗಿದೆ. ಮೆದುಳನ್ನು ಆರೋಗ್ಯಕರವಾಗಿ ಹಾಗೂ ಚುರುಕಾಗಿ ಇಡುವ ಮೂಲಕ ಮರೆವಿನ ಸಮಸ್ಯೆ ಬರದಂತೆ ತಡೆಯಬಹುದು.

ಮನುಷ್ಯನಿಗೆ ವಯಸ್ಸಾಗುತ್ತಾ ಹೋದಂತೆ ಮಿದುಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದಿಲ್ಲ ಎಂಬುದು ಬಹುತೇಕ ಜನರ ಚಿಂತೆಯಾಗಿರುತ್ತದೆ. ವಯಸ್ಸಾಗುವಿಕೆ ನಮ್ಮ ನಿಯಂತ್ರಣದಲ್ಲಿಲ್ಲದಿದ್ದರೂ, ಈ ಪ್ರಮುಖ ಅಂಗವು ಉತ್ತಮವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲು ಸರಿಯಾದ ಪೋಷಣೆಯನ್ನು ಒದಗಿಸುವುದು ತುಂಬಾ ಮುಖ್ಯ. ಹೃದಯ ಮತ್ತು ಶ್ವಾಸಕೋಶದ ಆರೋಗ್ಯಕರ ಕಾರ್ಯಾಚರಣೆ ಸೇರಿದಂತೆ ನಮ್ಮ ದೇಹದಲ್ಲಿನ ಹೆಚ್ಚಿನ ವಿಷಯಗಳಿಗೆ ಮಿದುಳು ಕಾರಣವಾಗಿದೆ. ಇದು ಮೆಮೊರಿ, ಸ್ಪರ್ಶ ಮತ್ತು ಭಾವನೆಗಳಂತಹ ಮೂಲಭೂತ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ.

ನೆನಪಿನ ಶಕ್ತಿಯ ಅಭಿವೃದ್ಧಿಗೆ ಅನುಸರಿಸಿ ಸರಳ ಉಪಾಯಗಳನ್ನು
ಮೆದುಳನ್ನು ಆರೋಗ್ಯಕರವಾಗಿ ಇಡಬೇಕು

ಮೆರೆವು ಎನ್ನುವುದು ಎಲ್ಲಾ ವಯಸ್ಸಿನಲ್ಲಿಯೂ ಕಂಡು ಬರುತ್ತದೆ. ವಿದ್ಯಾರ್ಥಿಗಳು ರಾತ್ರಿ ಪೂರ್ತಿ ನಿದ್ದೆಗೆಟ್ಟು ಓದಿ ಪರೀಕ್ಷೆಗೆ ಬಂದಿರುತ್ತಾರೆ. ಪ್ರಶ್ನೆ ಪತ್ರಿಕೆ ನೋಡಿದ ತಕ್ಷಣ ಉತ್ತರ ಗೊತ್ತಿರುತ್ತದೆ, ಆದರೆ ಬೆರೆಯಲು ಅದರ ಪಾಯಿಂಟ್ಸ್‌ಗಳು ನೆನಪಾಗುವುದೇ ಇಲ್ಲ. ಇನ್ನು ಇಟ್ಟ ವಸ್ತು ತಕ್ಷಣ ನೆನೆಪಿಗೆ ಬಾರದೇ ಹೋಗುವುದು ಹೀಗೆ ಸಣ್ಣ-ಪುಟ್ಟ ಮರೆವಿನ ಸಮಸ್ಯೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಕೆಲವೊಮ್ಮೆ ಅಸಡ್ಡೆಯಿಂದಾಗಿ ಮರೆತು ಹೋಗಿರುತ್ತದೆ. ಚಿಕ್ಕ-ಪುಟ್ಟ ಮರೆವಿನ ಸಮಸ್ಯೆ ಸಾಮಾನ್ಯವಾಗಿ ಎಲ್ಲರಲ್ಲೂ ಕಂಡು ಬರುವುದರಿಂದ ಅಷ್ಟು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ.

ಸಾಮಾನ್ಯವಾಗಿ ಕಾಡುವ ಮರೆವಿನ ಸಮಸ್ಯೆ ಹೋಗಲಾಡಿಸಿ, ಬುದ್ಧಿಶಕ್ತಿ ಚುರುಕುಗೊಳಿಸಲು ಕೆಲವೊಂದು ಮನೆಮದ್ದುಗಳು ತುಂಬಾ ಸಹಕಾರಿಯಾಗಿವೆ.

ಅವಕಾಡೊಗಳನ್ನು ಮಿದುಳಿನ ಆಹಾರವೆಂದೇ ಪರಿಗಣಿಸಲಾಗುತ್ತದೆ. ಏಕೆಂದರೆ, ಅವುಗಳು ನಿರಂತರ ಮಾನಸಿಕ ಆರೋಗ್ಯವನ್ನು ಬೆಂಬಲಿಸುವ ಪ್ರಯೋಜನಕಾರಿ ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿವೆ.

ಅವಕಾಡೊ ನಿರಂತರ ಮಾನಸಿಕ ಆರೋಗ್ಯವನ್ನು ಬೆಂಬಲಿಸುವ ಪ್ರಯೋಜನಕಾರಿ ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿವೆ. ಹೆಚ್ಚುವರಿಯಾಗಿ, ಪೊಟ್ಯಾಸಿಯಮ್ ಮತ್ತು ವಿಟಮಿನ್ ಕೆ ಯನ್ನು ಹೊಂದಿರುತ್ತದೆ. ಇದಲ್ಲದೆ ಮೆದುಳಿನ ಅರಿವಿನ ಪ್ರಕ್ರಿಯೆಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ನೆನಪಿನ ಶಕ್ತಿಯ ಅಭಿವೃದ್ಧಿಗೆ ಅನುಸರಿಸಿ ಸರಳ ಉಪಾಯಗಳನ್ನು
ಅವಕಾಡೊಗಳನ್ನು ಮಿದುಳಿನ ಆಹಾರವೆಂದೇ ಪರಿಗಣಿಸಲಾಗುತ್ತದೆ

ಆಹಾರದ ಜೊತೆಗೆ ನಿಯಮಿತ ವ್ಯಾಯಾಮ ವೃಕ್ಷಾಸನ, ಪ್ರಾಣಯಾಮ ಜ್ಞಾಪಕ ಶಕ್ತಿ, ಏಕಾಗ್ರತೆ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

ಧಾನ್ಯಗಳಲ್ಲಿ ಕಂಡುಬರುವ ಫೈಬರ್ ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆ ಮತ್ತು ಮಿದುಳಿಗೆ ಅತ್ಯಗತ್ಯ. ಇದು ರಕ್ತದೊತ್ತಡ ನಿಯಂತ್ರಿಸುವುದರ ಜೊತೆಗೆ ಮಿದುಳಿನ ಉರಿಯೂತದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಆರೋಗ್ಯಕರ ದೇಹ ಮತ್ತು ಮನಸ್ಸನ್ನು ಕಾಪಾಡಿಕೊಳ್ಳಲು, ಪ್ರತಿದಿನವೂ ಆಹಾರದಲ್ಲಿ ಧಾನ್ಯಗಳನ್ನು ಸೇರಿಸಲು ಯತ್ನಿಸಿ. ಈ ಧಾನ್ಯಗಳು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಚಿಕ್ಕ ಮಕ್ಕಳಿಗೆ ಮನೆಮದ್ದಾಗಿ ಬಜೆ ಕೊಡುವಂತೆ ಅಜ್ಜಿ ಹೇಳುತ್ತಾರೆ. ಬಜೆ ಮೆದುಳಿನ ಸಾಮರ್ಥ್ಯ ಹೆಚ್ಚಿಸುವಲ್ಲಿ ಸಹಕಾರಿ. ಬಜೆಗೆ ನೀರು ಹಾಕಿ ಕಷಾಯ ಮಾಡಿ ಸೇವಿಸುವುದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ.

ದೈನಂದಿನ ಆಹಾರದಲ್ಲಿ ಮೀನುಗಳಾದ ಸಾಲ್ಮನ್, ಟ್ಯೂನ ಮತ್ತು ಕಾಡ್ ಒಮೆಗಾ-3 ಕೊಬ್ಬಿನಾಮ್ಲಗಳ ಉತ್ತಮ ಮೂಲಗಳಾಗಿದೆ. ಬರುವುದಿಲ್ಲ. ಇತರರು ತಮ್ಮ ಸ್ಮರಣೆಯನ್ನು ಸುಧಾರಿಸಲು ಬಯಸುತ್ತಾರೆ. ದೇಹಕ್ಕೆ ಆಹಾರದ ಜೊತೆಗೆ ಮೆದುಳಿಗೆ ಆಹಾರವೂ ಬಹಳ ಮುಖ್ಯ. ಇದಕ್ಕಾಗಿ ಪೌಷ್ಠಿಕಾಂಶಯುಕ್ತ ಆಹಾರವನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ನೆನಪಿನ ಶಕ್ತಿ ಹೆಚ್ಚಿಸಲು ಶಂಖಪುಷ್ಪಿ ಪುಡಿಯನ್ನು ಹಾಲಿನಲ್ಲಿ ಮಿಶ್ರ ಮಾಡಿ ಸೇವಿಸಿದರೆ ಒಳಿತು.

ಬಾದಾಮಿ, ವಾಲ್ನಟ್ಸ್, ಒಣದ್ರಾಕ್ಷಿಗಳು ಕ್ಯಾಲ್ಸಿಯಂ, ವಿಟಮಿನ್ಗಳು ಮತ್ತು ಶಕ್ತಿಯಿಂದ ಸಮೃದ್ಧವಾಗಿವೆ. ಈ ಆಹಾರಗಳನ್ನು ಪ್ರತಿದಿನ ಸೇವಿಸುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಕುಂಬಳಕಾಯಿ ಬೀಜಗಳು ಮತ್ತು ವಿವಿಧ ರೀತಿಯ ಬೀಜಗಳನ್ನು ತಿನ್ನುವುದರಿಂದ ಮೆದುಳು ಚುರುಕುಗೊಳ್ಳುತ್ತದೆ.

ಹಸಿರು ತರಕಾರಿಗಳಾದ ಬ್ರೋಕೋಲಿ, ಕೇಲ್ ಮತ್ತು ಪಾಲಕ್‌ನಲ್ಲಿರುವ ಕಬ್ಬಿಣ, ವಿಟಮಿನ್ ಇ, ವಿಟಮಿನ್ ಕೆ ಮತ್ತು ವಿಟಮಿನ್ ಬಿ 9 ಗಳು ಮಿದುಳಿನ ಕೋಶಗಳ ಬೆಳವಣಿಗೆಗೆ ನಿರ್ಣಾಯಕವಾಗಿವೆ ಮತ್ತು ಮೆಮೊರಿ ಸಂಬಂಧಿತ ಸಮಸ್ಯೆಗಳನ್ನು ತಡೆಯುತ್ತದೆ. ಫೋಲೇಟ್ ಅಧಿಕವಾಗಿರುವ ಆಹಾರಗಳನ್ನು ಸೇವಿಸುವುದರಿಂದ ಮಿದುಳಿನ ನರ ಕೋಶಗಳಿಗೆ ಹಾನಿಯುಂಟುಮಾಡುವ ಹೋಮೋಸಿಸ್ಟೈನ್ ಮಟ್ಟ ಕಡಿಮೆಯಾಗುತ್ತದೆ. ವಿಟಮಿನ್ ಕೆ ಅರಿವಿನ ಸುಧಾರಣೆ ಮತ್ತು ಮಾನಸಿಕ ಜಾಗರೂಕತೆಯನ್ನು ಉತ್ತೇಜಿಸುತ್ತದೆ.

ಅರಿಶಿನವು ಕರ್ಕ್ಯುಮಿನ್​ನ್ನು ಹೊಂದಿರುತ್ತದೆ. ಇದು ಮೆದುಳಿನ ಕೋಶಗಳಿಗೆ ಒಳ್ಳೆಯದು ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಬ್ರಾಹ್ಮೀ ಪುಡಿಯನ್ನು ಹಾಲಿನಲ್ಲಿ ಮಿಶ್ರ ಮಾಡಿ ಪ್ರತಿದಿನ ಬೆಳಗ್ಗೆ ಕುಡಿದರೆ ಮರೆವಿನ ಸಮಸ್ಯೆ ಉಂಟಾಗುವುದಿಲ್ಲ. ಇನ್ನು ಈ ಎಲೆಯನ್ನು ಹಾಲಿನ ಜತೆ ಕುಡಿದರೂ ಒಳ್ಳೆಯದೂ, ಸ್ವಲ್ಪ ಜಾಸ್ತಿ ಎಲೆಯಿದ್ದರೆ ಸಾರಿನಲ್ಲಿಯೂ ಹಾಕಿ ಬಳಸಬಹುದು.

ಬ್ಲೂಬೆರಿಗಳನ್ನು ಸೇವಿಸುವುದರಿಂದ ಅಲ್ಪಾವಧಿಯ ಮೆಮೊರಿ ನಷ್ಟವನ್ನು ತಡೆಯಬಹುದು. ಡಾರ್ಕ್ ಬೆರಿಗಳಲ್ಲಿ ಹೇರಳವಾಗಿರುವ ವಿಟಮಿನ್ ಕೆ ಮತ್ತು ಸಿ ನೆನಪಿನ ಶಕ್ತಿಯನ್ನು ಕಾಪಾಡಿಕೊಳ್ಳಲು ಅವಶ್ಯಕ. ಈ ಹಣ್ಣುಗಳಲ್ಲಿನ ಫ್ಲೇವನಾಯ್ಡ್‌ಗಳು ಉರಿಯೂತ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುತ್ತವೆ. ಇವು ಮಿದುಳಿನ ಕೋಶಗಳಲ್ಲಿ ಉರಿಯೂತದ ಅಪಾಯವನ್ನು ಕಡಿಮೆ ಮಾಡುತ್ತದೆ. ಹೆಚ್ಚುವರಿಯಾಗಿ, ನೆನಪಿನ ಶಕ್ತಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಗಳಿಗೆ ಸಹಾಯ ಮಾಡುತ್ತದೆ.

ನೆನಪಿನ ಶಕ್ತಿ ಹೆಚ್ಚಿಸಲು ಶಂಖಪುಷ್ಪಿ ಪುಡಿಯನ್ನು ಹಾಲಿನಲ್ಲಿ ಮಿಶ್ರ ಮಾಡಿ ಸೇವಿಸಿದರೆ ಸಾಕು.

ಕುಂಬಳಕಾಯಿ ಬೀಜಗಳಲ್ಲಿ ಝಿಂಕ್ ಹೇರಳವಾಗಿದ್ದು, ಜ್ಞಾಪಕ ಶಕ್ತಿ ವೃದ್ಧಿಗೆ ತುಂಬಾ ಸಹಕಾರಿ. ವಾಲ್‌ನಟ್ಸ್ ಕೂಡ ಒಮೆಗಾ-3 ಮತ್ತು ಇತರ ಅಗತ್ಯ ಪೋಷಕಾಂಶಗಳನ್ನು ಹೊಂದಿದ್ದು, ಮೆಮೊರಿ ಮತ್ತು ಮಿದುಳಿನ ಕಾರ್ಯಚಟುವಟಿಕೆಗೆ ಅಗತ್ಯವಾಗಿದೆ. ಸೂರ್ಯಕಾಂತಿ ಬೀಜಗಳು ಸೇರಿದಂತೆ ಇತರೆ ವಿವಿಧ ನಟ್ಸ್ ಮತ್ತು ಸೀಡ್ಸ್‌ಗಳಲ್ಲಿನ ವಿಟಮಿನ್ ಇ ಮಿದುಳಿನ ಆರೋಗ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲು ಅವಶ್ಯಕವಾಗಿದೆ.

ನೆನಪಿನ ಶಕ್ತಿಯ ಅಭಿವೃದ್ಧಿಗೆ ಅನುಸರಿಸಿ ಸರಳ ಉಪಾಯಗಳನ್ನು
ಒಳ್ಳೆಯ ಕೊಲೆಸ್ಟ್ರಾಲ್ ತುಪ್ಪ

ದೇಹಕ್ಕೆ ಒಳ್ಳೆಯ ಕೊಲೆಸ್ಟ್ರಾಲ್ ಅವಶ್ಯಕ. ತುಪ್ಪ ಒಳ್ಳೆಯ ಕೊಲೆಸ್ಟ್ರಾಲ್ ಆಗಿದೆ. ಆದ್ದರಿಂದ ತುಪ್ಪ ಸೇವಿಸಿ. ತುಪ್ಪ ತಿನ್ನುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ನೋಡಬಹುದು. ಪ್ರತಿದಿನ ಶುದ್ಧ ತುಪ್ಪವನ್ನು ಮಿತಿಯಲ್ಲಿ ಸೇವಿಸಿದರೆ ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ನೈಸರ್ಗಿಕವಾಗಿ ಸಿಗುವ ಬೆರ್ರಿ ಹಣ್ಣುಗಳನ್ನು ಸೇವನೆ ಮಾಡುವುದರಿಂದ ನೆನಪಿನ ಶಕ್ತಿಯನ್ನು ಉತ್ತಮಗೊಳಿಸಿಕೊಳ್ಳಬಹುದಾಗಿದೆ. ಬೆರ್ರಿ ಹಣ್ಣುಗಳನ್ನು ಮಿಶ್ರಣ ಮಾಡಿ ಮಿಲ್ಕ್ ಶೇಕ್ ಮಾಡಿ ಸೇವನೆ ಮಾಡುವುದರಿಂದ ನಮ್ಮ ಮಾನಸಿಕ ಆರೋಗ್ಯದ ಜೊತೆಗೆ ನಮ್ಮ ದೈಹಿಕ ಆರೋಗ್ಯ ಕೂಡ ಪ್ರಬಲಗೊಳ್ಳುತ್ತದೆ.

‘ ಟ್ರಿಪ್ಟೊಫಾನ್ ‘ ಎಂಬುವ ಸಂಯುಕ್ತ ಹಾಲಿನಲ್ಲಿ ಅಡಗಿದ್ದು, ಇದು ನಮ್ಮ ಮೆದುಳಿನ ಭಾಗದಿಂದ ‘ ಸೆರಟೋನಿನ್ ‘ ಎಂಬ ಹಾರ್ಮೋನ್ ಬಿಡುಗಡೆ ಆಗುವಂತೆ ಮಾಡುತ್ತದೆ. ಸೆರಟೋನಿನ್ ಹಾರ್ಮೋನ್ ನಮ್ಮ ಮೆದುಳಿನಿಂದ ಬಿಡುಗಡೆ ಆಗುವ ಕಾರಣದಿಂದ ನಮಗೆ ದೇಹದ ಆಯಾಸ ಕಡಿಮೆ ಆಗಿ ಒಳ್ಳೆಯ ನಿದ್ರೆ ಬರುತ್ತದೆ. ಇದರ ಜೊತೆಗೆ ನಮ್ಮ ನರಮಂಡಲ ಶಾಂತವಾಗಿ ಆರೋಗ್ಯಕರವಾದ ಮಾನಸಿಕ ವ್ಯವಸ್ಥೆ ನಮ್ಮದಾಗುತ್ತದೆ.

ಬಾದಾಮಿ, ಕಲ್ಲು ಸಕ್ಕರೆ, ಹಾಲಿನ ಮಿಶ್ರಣ ಒಂದು ಕಪ್ ಹಾಲು ಕುದಿಸಿ, ಅದಕ್ಕೆ ಬಾದಾಮಿ, ಕಲ್ಲು ಸಕ್ಕರೆ ಹಾಕಿ ಕುಡಿಯುವುದರಿಂದ ನೆನಪಿನ ಶಕ್ತಿ ಹೆಚ್ಚುವುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ

ಭಾರತದಲ್ಲಿ ಪ್ರತಿ ವರ್ಷ ಜನವರಿ 24 ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ

ರಾಷ್ಟ್ರೀಯ ಪ್ರವಾಸೋದ್ಯಮ ದಿನ

25 ನೇ ಜನವರಿಯನ್ನು ಭಾರತದ ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನಾಗಿ ಆಚರಿಸಲಾಗುತ್ತದೆ