in ,

ಕೆಸುವಿನ ಸೊಪ್ಪಿನ ಉಪಯೋಗಗಳು

ಕೆಸುವಿನ ಸೊಪ್ಪಿನ ಉಪಯೋಗ
ಕೆಸುವಿನ ಸೊಪ್ಪಿನ ಉಪಯೋಗ

ಕೆಸು ಜವುಗು ಹಾಗೂ ನೆರಳಿನಲ್ಲಿ ಬೆಳೆಯುವ ಒಂದು ಸಸ್ಯ. ದಕ್ಷ್ಶಿಣ ಏಷಿಯಾದ ಮೂಲದ ಸಸ್ಯ. ಅಲಂಕಾರಿಕ ಸಸ್ಯವಾಗಿಯೂ ಬಳಕೆಯಲ್ಲಿದೆ.

ಮಳೆಗಾಲ ಬಂತೆಂದರೆ ಕೊಡಗು, ಮಲೆನಾಡು, ಕರಾವಳಿ ಕಡೆ ಕೆಸುವಿನ ಎಲೆಗೆ ಭಾರೀ ಡಿಮ್ಯಾಂಡ್‌. ಇಂಗ್ಲಿಷ್‌ನಲ್ಲಿ ಇದಕ್ಕೆ ಎಲಿಫೆಂಟ್ ಇಯರ್‌ ಎಂದು ಕರೆಯಲಾಗುವುದು. ಈ ಕೆಸುವಿನ ಎಲೆ ತಂದು ಅದರಿಂದ ನಾನಾ ಬಗೆಯ ಅಡುಗೆ ತಯಾರಿಸುತ್ತಾರೆ. ಕೆಸುವಿನ ದಂಟಿನಿಂದ ಸಾರು, ಎಲೆಯಿಂದ ಗೊಜ್ಜು ಮಾಡುತ್ತಾರೆ. ಇನ್ನು ಕೆಸುವಿನ ಎಲೆಯ ಸಾರು, ಪತ್ರೊಡೆ ಸವಿಯುವಾಗ ವಿಶಿಷ್ಟ ರುಚಿಯ ಜೊತೆಗೆ ಈ ಪ್ರಮುಖ ಪ್ರಯೋಜನಗಳು ದೊರೆಯುತ್ತವೆ.

ಕೆಸವೆ ದಂಟಿನ ಎಲೆಗಳು ವಿಟಮಿನ್ ಎ ಅಂಶವನ್ನು ಒಳಗೊಂಡಿದ್ದು, ಅತ್ಯುತ್ತಮವಾದ ಕಣ್ಣುಗಳ ಆರೋಗ್ಯವನ್ನು ಇದರಿಂದ ಪಡೆಯಬಹುದು.

ಅಗಲವಾದ ಎಲೆಗಳನ್ನು ಹೊಂದಿದೆ. ಇದರಲ್ಲಿ ಹಲವಾರು ಪ್ರಭೇದಗಳಿದ್ದು, ಎಲೆ ಕಾಂಡಗಳಲ್ಲಿ ನೀರು ನಿಲ್ಲುವುದಿಲ್ಲ. ಎರಡು ಅಥವಾ ಮೂರು ಅಡಿ ಎತ್ತರ ಬೆಳೆಯುತ್ತದೆ.

ಇದು ಆಹಾರ ಪದಾರ್ಥವಾಗಿ ಬಳಕೆಯಲ್ಲಿದೆ. ಇದರ ಎಲೆ, ಕಾಂಡ ಹಾಗೂ ಗೆಡ್ಡೆ ಎಲ್ಲವೂ ಆಹಾರವಾಗಿ ಉಪಯೋಗಿಸಲ್ಪಡುತ್ತದೆ. ಪ್ರಪಂಚದಾದ್ಯಂತ ಉಪಯೋಗದಲ್ಲಿರುವ ಇದರಿಂದ ನೂರಾರು ಖಾದ್ಯಗಳನ್ನು ತಯಾರಿಸುತ್ತಾರೆ. ದಕ್ಷಿಣ ಕನ್ನಡ ಹಾಗೂ ಮಲೆನಾಡಿ ನಲ್ಲಿ ತಯಾರಿಸಲ್ಪಡುವ ಪತ್ರೋಡೆ ಎಂಬ ಖಾದ್ಯ ಅತ್ಯಂತ ಜನಪ್ರಿಯ.

ಮಳೆಗಾಲದಲ್ಲಿ ಇದನ್ನು ತಿಂದರೆ ಒಳ್ಳೆಯದು, ಮೈ ಬೆಚ್ಚಗಿರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಆದರೆ ಕೆಸುವಿನ ಎಲೆ ಮೈ ಬೆಚ್ಚಗಿಡುವುದು ಮಾತ್ರವಲ್ಲ ಇನ್ನೂ ಅನೇಕ ಆರೋಗ್ಯಕರ ಪ್ರಯೋಜನಗಳಿವೆ.

ಕೆಸುವೆ ದಂಟಿನ ಗಿಡದಲ್ಲಿ ಬೀಜಗಳು ಉತ್ಪತ್ತಿಯಾಗುವುದಿಲ್ಲ, ಬದಲಾಗಿ ಹೂ ಬಿಟ್ಟ ನಂತರ ಸಸ್ಯವು ಬಾಡಿ ಹೋಗಿ, ಉದುರಿ ಭೂಮಿಯ ಒಳಗೆ ಗೆಡ್ಡೆಯನ್ನು ಉಳಿಸಿರುತ್ತದೆ. ನಂತರ, ಮಳೆ ಬಿದ್ದಾಗ ಈ ಗೆಡ್ಡೆಯಿಂದ ಒಂದಕ್ಕಿಂತ ಹೆಚ್ಚು ಸಸಿಗಳು ಮೊಳಕೆಯೊಡೆದು ಚಿಗುರಿ ಕೆಸುವಿನ ಗಿಡಗಳು ಗುಂಪು ಗುಂಪಾಗಿ ಹಸಿರಾಗಿ ಸೊಂಪಾಗಿ ಬೆಳೆದು ನಿಲ್ಲುತ್ತವೆ. ಈ ಕೆಸುವಿನ ಗೆಡ್ಡೆಯನ್ನು ಆಯುರ್ವೇದಿಕ್ ಔಷಧೀಯ ತಯಾರಿಕೆಯಲ್ಲಿ ಸಹ ಬಳಸುತ್ತಾರೆ ಎಂಬುದಾಗಿ ಹೇಳಲಾಗುತ್ತದೆ. ಈ ರೀತಿಯಾಗಿ ಕೆಸುವಿನ ಗಿಡವು ಹಲವು ವಿಶೇಶತೆಗಳಿಂದ ಕೂಡಿದ ಗಿಡವಾಗಿದೆ.

ದೇಹದಲ್ಲಿ ಕಬ್ಬಿಣದ ಅಂಶದ ಕೊರತೆಯನ್ನು ನಿವಾರಣೆ ಮಾಡಿ ಅನಿಮಿಯ ಸಮಸ್ಯೆಯನ್ನು ದೂರ ಮಾಡುವಲ್ಲಿ ಕೆಸವೆ ದಂಟಿನ ಮಹತ್ತರ ಪಾತ್ರವನ್ನು ಮರೆಯುವಂತಿಲ್ಲ.

ಕೆಸುವಿನ ಸೊಪ್ಪಿನ ಉಪಯೋಗಗಳು
ಕೆಸುವೆ ದಂಟಿನ ಗಿಡ

ಚರ್ಮದ ಮೇಲೆ ಕಂಡುಬರುವ ಸುಕ್ಕುಗಳನ್ನು ನಿವಾರಣೆ ಮಾಡುವಲ್ಲಿ ಸಹ ಕೆಸವೆ ದಂಟು ಹೆಚ್ಚು ಪ್ರಯೋಜನಕಾರಿ.

ಆಯುರ್ವೇದ ಪಂಡಿತರು ಕಿಡ್ನಿ ಕಲ್ಲುಗಳ ನಿವಾರಣೆಗೆ ಕೆಸವೆ ದಂಟು ತುಂಬಾ ಪ್ರಯೋಜನಕಾರಿ ಎಂದು ಹೇಳಿರುತ್ತಾರೆ. ಇದನ್ನು ಹೊರತುಪಡಿಸಿದರೆ ಕೆಸವೆ ದಂಟಿನಲ್ಲಿ ವಿಟಮಿನ್ ಸಿ ಅಂಶದ ಪ್ರಮಾಣ ತುಂಬಾ ಹೆಚ್ಚಾಗಿ ಕಂಡುಬರುತ್ತದೆ.

ಆಂಟಿಆಕ್ಸಿಡೆಂಟ್ ಅಂಶಗಳ ಪ್ರಮಾಣ ಕೂಡ ಇದರಲ್ಲಿ ಹೆಚ್ಚಿದ್ದು, ಅನೇಕ ಬಗೆಯ ಆರೋಗ್ಯ ಪ್ರಯೋಜನಗಳನ್ನು ಸಹ ಇದು ಒಳಗೊಂಡಿದೆ. ಕೆಸುವಿನ ದಂಟಿನ ಎಲೆಗಳು ಮತ್ತು ಕಾಂಡ ಪೌಷ್ಟಿಕಾಂಶಗಳ ತವರಾಗಿದ್ದು, ಆರೋಗ್ಯದಲ್ಲಿ ಪ್ರಯೋಜನಗಳನ್ನು ಉಂಟುಮಾಡುವ ಗುಣಲಕ್ಷಣವನ್ನು ಹೊಂದಿದೆ.
​ಆರ್ಥ್ರೈಟಿಸ್, ಅಸ್ತಮಾ, ನರಮಂಡಲದ ಸಮಸ್ಯೆಗಳಿಗೆ ಬಹಳ ಒಳ್ಳೆಯದು.

ರೋಗನಿರೋಧಕ ವ್ಯವಸ್ಥೆಯನ್ನು ಬಲಗೊಳಿಸುವಲ್ಲೂ ಇದರ ಪಾತ್ರ ಅಗಾಧ. ಈ ಮೂಲಕ ಕಾಯಿಲೆಗಳು ಬರದಂತೆ ತಡೆಗಟ್ಟಬಹುದು. ಚರ್ಮದ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲೂ ಕೆಸುವಿನ ದಂಟಿನ ಪಾತ್ರ ದೊಡ್ಡದು. ಚರ್ಮದ ಮೇಲೆ ಕಂಡುಬರುವ ಸುಕ್ಕುಗಳನ್ನು ನಿವಾರಣೆ ಮಾಡುವಲ್ಲಿ ಸಹ ಕೆಸವೆ ದಂಟು ಹೆಚ್ಚು ಪ್ರಯೋಜನಕಾರಿ.

ಜೊತೆಗೆ ಗರ್ಭಿಣಿ ಮಹಿಳೆಯರಿಗೆ ಕೆಸವೆ ದಂಟು ಹೆಚ್ಚು ಪ್ರಯೋಜನಕಾರಿಯಾಗಿ ಕೆಲಸ ಮಾಡುತ್ತದೆ. ಏಕೆಂದರೆ ಇದರಲ್ಲಿ ಅಪಾರ ಪ್ರಮಾಣದ ಪೌಷ್ಟಿಕ ಸತ್ವಗಳು ಕಂಡುಬರುತ್ತವೆ.

ಕೆಸವೆ ದಂಟಿನ ಬೇರುಗಳಲ್ಲಿ ನಾರಿನ ಅಂಶದ ಪ್ರಮಾಣ ಹೆಚ್ಚಾಗಿ ಕಂಡುಬರುತ್ತದೆ. ಬಹಳಷ್ಟು ಹಿಂದಿನ ಕಾಲದಿಂದಲೂ ಸಹ ಕೆಸವೆ ದಂಟು ಆರ್ಥ್ರೈಟಿಸ್, ಅಸ್ತಮಾ, ನರಮಂಡಲದ ಸಮಸ್ಯೆಗಳು, ಚರ್ಮದ ತೊಂದರೆಗಳು ಇತ್ಯಾದಿಗಳನ್ನು ಪರಿಹಾರ ಮಾಡುವ ಗುಣಲಕ್ಷಣವನ್ನು ಒಳಗೊಂಡಿದೆ.

ಕೆಸುವಿನ ಸೊಪ್ಪಿನ ಉಪಯೋಗಗಳು
ಕೆಸವೆ ದಂಟು ಗೊಜ್ಜು

ಕ್ಯಾನ್ಸರ್ ನಿರೋಧಕವಾಗಿ ಮತ್ತು ದೇಹದ ಉರಿಯೂತದ ಸಮಸ್ಯೆಯನ್ನು ಪರಿಹಾರ ಮಾಡುವ ಸಲುವಾಗಿ ಕೆಸವೆ ದಂಟನ್ನು ಜನರು ಬಳಕೆ ಮಾಡುತ್ತಾರೆ.
ಅಸ್ತಮಾ ಸಮಸ್ಯೆ ಇದ್ದವರು ದಿನಾ ತಿನ್ನುವ ಅಭ್ಯಾಸಗಳನ್ನು ಮಾಡಬೇಕು.

ಉರಿಯೂತದಿಂದ ಬಳಲುತ್ತಿರುವ ದೇಹದ ಗ್ರಂಥಿಗಳನ್ನು ಶಾಂತಗೊಳಿಸುವ ಸಲುವಾಗಿ ಕೆಸವೆ ದಂಟನ್ನು ಉಪ್ಪಿನ ಜೊತೆಗೆ ಸೇವನೆ ಮಾಡಬಹುದು.

ಕೆಸವೆ ದಂಟು ದೇಹದಲ್ಲಿ ಜೀರ್ಣ ಆಗುವ ಕಾರಣದಿಂದ ಇದರಲ್ಲಿ ನಾರಿನ ಅಂಶದ ಪ್ರಮಾಣ ಹೆಚ್ಚಾಗಿದ್ದು ಆರೋಗ್ಯಕರವಾದ ಜೀರ್ಣಾಂಗ ವ್ಯವಸ್ಥೆಯನ್ನು ಹೊಂದಲು ಅನುಕೂಲ.

ಆಗಾಗ ಕೆಸವೆ ದಂಟಿನ ಪಲ್ಯ, ಸಾರು ತಯಾರು ಮಾಡಿ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳುವುದರಿಂದ ಮುಂಬರುವ ದಿನಗಳಲ್ಲಿ ಕಣ್ಣುಗಳ ಸಮಸ್ಯೆ ಮತ್ತು ವಯಸ್ಸಾದ ಮೇಲೆ ಕಣ್ಣು ಮಂಜಾಗುವುದು, ಕಣ್ಣಿನ ಪೊರೆ ಇಂತಹ ಯಾವುದೇ ಸಮಸ್ಯೆ ಇರುವುದಿಲ್ಲ.

ತುಂಬಾ ಕಡಿಮೆ ಪ್ರಮಾಣದಲ್ಲಿ ಕೊಬ್ಬಿನ ಅಂಶವನ್ನು ಒಳಗೊಂಡಿದ್ದು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್ ಅಂಶ ಇರುವ ಕಾರಣ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಭಾರತದ ಕೆಲವು ಶ್ರೀಮಂತ ದೇವಸ್ಥಾನಗಳು

ಭಾರತದ ಕೆಲವು ಶ್ರೀಮಂತ ದೇವಸ್ಥಾನಗಳು

ಭಗವತಿ ಚರಣ್ ವೋಹ್ರಾ

ಭಾರತೀಯ ಮಾರ್ಕ್ಸ್‌ವಾದಿ ಕ್ರಾಂತಿಕಾರಿ : ಭಗವತಿ ಚರಣ್ ವೋಹ್ರಾ