in

ಬಾಲ್ಯದ ಸ್ಥೂಲಕಾಯ

ಬಾಲ್ಯದ ಸ್ಥೂಲಕಾಯ
ಬಾಲ್ಯದ ಸ್ಥೂಲಕಾಯ

ದೇಹದ ಕೊಬ್ಬಿನಂಶವನ್ನು ನಿರ್ಧರಿಸುವ ವಿಧಾನವನ್ನ ನಿಖರವಾಗಿ ತಿಳಿಯುವುದು ಕಷ್ಟಸಾಧ್ಯ. ಕೆಲವೊಮ್ಮೆ ಸ್ಥೂಲಕಾಯ ಬಿಎಂಐ ಮೇಲೆ ಆಧಾರಿತವಾಗಿರುತ್ತದೆ. ಮಕ್ಕಳಲ್ಲಿ ಹೆಚ್ಚುತ್ತಿರುವ ಸ್ಥೂಲಕಾಯ ಮತ್ತು ಅದು ಆರೋಗ್ಯದ ಮೇಲೆ ಬೀರುತ್ತಿರುವ ಹಲವಾರು ಪರಿಣಾಮಗಳು ಗಂಭೀರವಾದ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಷಯವಾಗುತ್ತಿದೆ.

ವಿಪರೀತವಾಗಿ ಹೆಚ್ಚಾದ ದೇಹದ ಕೊಬ್ಬಿನಂಶವು ಮಕ್ಕಳ ಆರೋಗ್ಯ ಅಥವಾ ಆರೋಗ್ಯಕರ ಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸ್ಥಿತಿಯನ್ನು ಬಾಲ್ಯದ ಸ್ಥೂಲಕಾಯತೆ ಎಂದು ಕರೆಯುತ್ತಾರೆ. ಮಕ್ಕಳಲ್ಲಿರುವ ಈ ಸಮಸ್ಯೆಗೆ ಸ್ಥೂಲ ಕಾಯತೆ ಅನ್ನುವುದಕ್ಕಿಂತ ಹೆಚ್ಚಾಗಿ ’ಹೆಚ್ಚಿನ ತೂಕ’ ಎನ್ನುವುದನ್ನು ಬಳಸುತ್ತಿದ್ದಾರೆ. ಮಕ್ಕಳ ವ್ಯಕ್ತಿತ್ವದ ಮೇಲೆ ಸ್ಥೂಲ ಕಾಯತೆ ಅನ್ನುವ ಶಬ್ಧ ಪ್ರಭಾವ ಬೀರುವುದನ್ನು ತಪ್ಪಿಸಲು ಇದನ್ನು ಬಳಸಲಾಗುತ್ತದೆ.

ಎರಡು ವರ್ಷ ಮತ್ತು ಅದಕ್ಕಿಂತ ದೊಡ್ಡವರಲ್ಲಿ ಸ್ಥೂಲಕಾಯ ಅಳೆಯಲುಬಾಡಿ ಮಾಸ್ ಇಂಡೆಕ್ಸ್ ಅನ್ನು ಅಂಗೀಕರೀಸ ಲಾಗಿದೆ.

ಮಕ್ಕಳಲ್ಲಿ ಸಾಮಾನ್ಯವಾಗಿ ವಯಸ್ಸು ಮತ್ತು ಲಿಂಗಕ್ಕನುಗುಣವಾಗಿ ಬಿಎಂಐ ಬದಲಾಗುತ್ತಿರುತ್ತದೆ. ಸ್ಥೂಲಕಾಯದಲ್ಲಿ ೯೫ನೇ ಪರ್ಸೆಂಟೈಲ್‌ಗಿಂತ ಬಿಎಂಐ ಹೆಚ್ಚಾಗಿರುತ್ತದೆ ಎಂದು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ವ್ಯಾಖ್ಯಾನಿಸುತ್ತದೆ. ಇದನ್ನು ಸ್ಥೂಲಕಾಯದ ಮಕ್ಕಳನ್ನು ನಿರ್ಧರಿಸಲು ಪ್ರಕಟಿಸಿರುವ ಕೋಷ್ಠಕವಾಗಿದೆ.

ಆರೋಗ್ಯದ ಮೇಲುಂಟಾಗುವ ಪರಿಣಾಮಗಳು

ಸ್ಥೂಲಕಾಯ ಹೊಂದಿರುವ ಮಕ್ಕಳಲ್ಲಿ ಮೊದಲಿಗೆ ಭಾವನಾತ್ಮಕ ಅಥವಾ ಮಾನಸಿಕ ಸಮಸ್ಯೆ ಕಂಡುಬರುತ್ತದೆ.
ಬಾಲ್ಯಾವಸ್ಥೆಯಲ್ಲಿ ಕಂಡು ಬರುವ ಸ್ಥೂಲಕಾಯವು ಜೀವಕ್ಕೆ ಅಪಾಯ ತರುವ ಸ್ಥಿತಿಗಳಾದ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ, ನಿದ್ರೆಗೆ ಸಂಬಂಧ ಪಟ್ಟ ಸಮಸ್ಯೆಗಳು, ಅರ್ಬುದ ಮತ್ತು ಇತರೆ ಹಲವಾರು ಖಾಯಿಲೆಗಳಿಗೆ ಕಾರಣವಾಗಬಹುದು.

ಇನ್ನೂ ಇತರೆ ಖಾಯಿಲೆಗಳಾದ ಯಕೃತ್ತಿನ ಖಾಯಿಲೆ, ತುಂಬಾ ಚಿಕ್ಕ ವಯಸ್ಸಿಗೆ ಫ್ರೌಢಾವಸ್ಥೆಗೆ ತಲುಪುವುದು ಅಥವಾ ರಜಸ್ವಲೆಯಾಗುವುದು, ತಿನ್ನುವುದಕ್ಕೆ ಸಂಬಂಧಿಸಿದ ಕಾಯಿಲೆಗಳಾದ ಅಗ್ನಿಮಾಂದ್ಯ ಹಸಿವಿಲ್ಲದಿರುವಿಕೆ ಮತ್ತು ಹಸಿವು ಹೆಚ್ಚಿರುವುದು, ಚರ್ಮದ ಸೋಂಕು, ಮತ್ತು ಉಬ್ಬಸ ಮತ್ತು ಇತರೆ ಉಸಿರಾಟದ ತೊಂದರೆಗಳು ಕಂಡು ಬರುತ್ತದೆ.

ಸ್ಥೂಲದೇಹಿ ಮಕ್ಕಳು ಮುಂದೆಯು ಸ್ಥೂಲ ದೇಹಿಗಳಾಗಿಯೇ ಬೆಳೆಯುತ್ತಾರೆಂದು ಅಧ್ಯಯನಗಳು ತೋರಿಸಿಕೊಟ್ಟಿವೆ. ಬಾಲ್ಯಾವಸ್ಥೆಯಲ್ಲಿಯೇ ಸ್ಥೂಲಕಾಯ ಕಂಡು ಬಂದರೆ ಅಂತವರು ವಯಸ್ಕರಾದಾಗ ಅವರಲ್ಲಿ ಸಾವಿನ ಪ್ರಮಾಣ ಹೆಚ್ಚು.

ಬಾಲ್ಯದ ಸ್ಥೂಲಕಾಯ
ಮಕ್ಕಳು ತಮ್ಮ ಸಹವರ್ತಿಗಳಿಂದ ಟೀಕೆಗೆ ಗುರಿಯಾಗುತ್ತಾರೆ

ಸ್ಥೂಲದೇಹಿ ಮಕ್ಕಳು ತಮ್ಮ ಸಹವರ್ತಿಗಳಿಂದ ಟೀಕೆಗೆ ಗುರಿಯಾಗುತ್ತಾರೆ. ಕೆಲವರು ತಮ್ಮ ಕುಟುಂಬದಿಂದಲೇ ಕಿರುಕುಳಕ್ಕೆ ಅಥವಾ ತಾರತಮ್ಯಕ್ಕೊಳಗಾಗುತ್ತಾರೆ. ಸ್ಟೆರಿಯೋಟೈಪ್ಸ್ ಹೆಚ್ಚಾಗಿರುತ್ತದೆ ಮತ್ತು ಆತ್ಮವಿಶ್ವಾಸದ ಕೊರತೆ ಮತ್ತು ಖಿನ್ನತೆಗೆ ದಾರಿ ಮಾಡಿಕೊಡುತ್ತದೆ.

ಹಲವು ಸ್ಥಿತಿಗಳಲ್ಲಿ ಬಾಲ್ಯದ ಸ್ಥೂಲಕಾಯವು ಹಲವಾರು ಸಂಯುಕ್ತ ಅಂಶಗಳ ಮೂಲಕ ಬರುತ್ತದೆ.

ತಿನ್ನುವ ಅಭ್ಯಾಸವು ಬಾಲ್ಯದ ಸ್ಥೂಲಕಾಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ನಿರ್ಧರಿಸುವುದು ಕಷ್ಟ. ಮೂರನೇಯ ದರ್ಜೆಯ ಸುಮಾರು ೧,೭೦೪ ಮಕ್ಕಳನ್ನು ಮೂರು ವರ್ಷಗಳ ಕಾಲ ಅಧ್ಯಯನಕ್ಕೊಳಪಡಿಸಲಾಗಿತ್ತು. ಅವರಿಗೆ ಒಂದು ದಿನಕ್ಕೆ ಎರಡು ವಿಧವಾದ ಆರೋಗ್ಯಕರ ವಾದ ಆಹಾರವನ್ನು ವ್ಯಾಯಾಮದ ಕಾರ್ಯಕ್ರಮದ ಮೂಲಕ ನೀಡಲಾಗಿತ್ತು ಮತ್ತು ನಿಯಂತ್ರಿತ ಆಹಾರ ಪಡೆಯುವ ಗುಂಪಿಗೆ ಹೋಲಿಸಿದಾಗ ಪಥ್ಯದ ಮೂಲಕ ನೀಡಲಾದ ಆಹಾರವು ದೇಹದ ಕೊಬ್ಬಿನಂಶವನ್ನು ಗಣನೀಯವಾಗಿ ಕಡಿಮೆ ಮಾಡಿರುವುದನ್ನು ತೋರಿಸುವಲ್ಲಿ ವಿಫಲವಾಯಿತು.

ಮಕ್ಕಳು ತಾವು ಕಡಿಮೆ ಪ್ರಮಾಣದಲ್ಲಿ ತಿನ್ನುತ್ತಿದ್ದೇವೆ ಎಂದು ಕೊಂಡರೂ ಕೂಡ ಅವರು ತೆಗೆದುಕೊಳ್ಳುವ ಕ್ಯಾಲೊರಿಯ ಪ್ರಮಾಣವು ಮಧ್ಯಂತರದ ಸಮಯದಲ್ಲಿ ಕಡಿಮೆಯಾಗು ವುದಿಲ್ಲ. ಇದೇ ಸಮಯದಲ್ಲಿ ಈ ಗುಂಪುಗಳ ನಡುವೆ ಒಂದೇ ಪ್ರಮಾಣದಲ್ಲಿ ಶಕ್ತಿಯು ವ್ಯಯವಾಗುವುದನ್ನು ಗಮನಿಸಲಾಯಿತು. ಪಥ್ಯದಲ್ಲಿ ಕೊಬ್ಬನ್ನು ತೆಗೆದುಕೊಳ್ಳುವುದು ೩೪% ರಿಂದ ೨೭%ನಷ್ಟು ಕಡಿಮೆಯಾಗಿರುವುದನ್ನು ಗಮನಿಸಲಾಯಿತು. ೫,೧೦೬ ಮಕ್ಕಳ ಮೇಲೆ ನಡೆದಂತ ಎರಡನೇಯ ಅಧ್ಯಯನವು ಇದೇ ರೀತಿಯಾದ ಫಲಿಲಾಂಶವನ್ನು ನೀಡಿತು. ಮಕ್ಕಳು ಸುಧಾರಿತವಾದ ಪಧ್ಯವನ್ನು ಸೇವಿಸಿದಾಗಲು ಅವರ ಬಿಎಂಐ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.

ಮಕ್ಕಳಿಗೆ ಸಮೃದ್ಧವಾಗಿ ಕ್ಯಾಲೋರಿ ಹೊಂದಿರುವ ಪಾನೀಯಗಳು ಮತ್ತು ಆಹಾರಗಳು ಸಿದ್ಧವಾಗಿಯೇ ದೊರೆಯುತ್ತವೆ. ಸಕ್ಕರೆಯಂಶ ಹೊಂದಿರುವ ಲಘು ಪಾನೀಯಗಳ ಬಳಕೆಯು ಬಾಲ್ಯದ ಸ್ಥೂಲಕಾಯಕ್ಕೆ ಅವಕಾಶ ನೀಡಬಹುದು. ಲಘು ಪಾನೀಯಗಳನ್ನು ಹೆಚ್ಚುವರಿಯಾಗಿ ದಿನ ನಿತ್ಯವು ಬಳಸುತ್ತಿರುವ ೫೪೮ ಮಕ್ಕಳಲ್ಲಿ ೧.೬ ಪಟ್ಟು ಸ್ಥೂಲಕಾಯ ಹೆಚ್ಚಾಗುವ ಸಂಭವವಿದೆ. ಇದಕ್ಕಾಗಿ ೧೯ ತಿಂಗಳಿಗಿಂತ ಹೆಚ್ಚು ಕಾಲ ಮಕ್ಕಳನ್ನು ಅಧ್ಯಯನ ಮಾಡಲಾಗಿದೆ.

ಮಕ್ಕಳಿಗೆ ಕ್ಯಾಲೋರಿ ಹೆಚ್ಚಾಗಿರುವ ಸಿದ್ಧ ಸ್ನ್ಯಾಕ್ಸ್‌ಗಳು ಸುಲಭವಾಗಿ ದೊರೆಯುತ್ತವೆ. ಬಾಲ್ಯಾವಸ್ಥೆಯ ಸ್ಥೂಲಕಾಯವು ವ್ಯಾಪಕವಾಗಿ ಹರಡುತ್ತಿದ್ದು, ಶಾಲೆಗಳು ಇರುವಂತಹ ಸ್ಥಳಗಳಲ್ಲಿ ಸ್ನ್ಯಾಕ್ಸ್ ಮಾರುವಂತಹ ಮಷಿನುಗಳನ್ನು ಇಡುವುದನ್ನು ಕಾನೂನಿನ ಮೂಲಕ ಕಡಿಮೆ ಮಾಡಬೇಕು. ಫಾಸ್ಟ್ ಫುಡ್ ದರ್ಶಿನಿಗಳಲ್ಲಿ ೭ ರಿಂದ ೧೨ನೆಯ ದರ್ಜೆಯ ೭೫% ರಷ್ಟು ವಿದ್ಯಾರ್ಥಿಗಳು ವಾರದಲ್ಲಿ ತಿನ್ನುವುದು ಸಾಮಾನ್ಯ.

ಕೆಲವೊಂದು ಸಾಹಿತ್ಯಗಳು ಕೂಡ ಫಾಸ್ಟ್ ಫುಡ್ ಸೇವಿಸುವಿಕೆ ಮತ್ತು ಸ್ಥೂಲಕಾಯದ ನಡುವೆ ಸಂಬಂಧವನ್ನು ಸ್ಥಾಪಿಸಿವೆ. ಒಂದು ಅಧ್ಯಯನದ ಪ್ರಕಾರ ಶಾಲೆಗೆ ಸಮೀಪವಿರುವ ಫಾಸ್ಟ್ ಫುಡ್ ಕೇಂದ್ರಗಳು ವಿದ್ಯಾರ್ಥಿಗಳಲ್ಲಿ ಸ್ಥೂಲಕಾಯದ ಸಾಧ್ಯತೆಯನ್ನು ಹೆಚ್ಚಿಸಿವೆ.

ಒಂದರಿಂದ ಎರಡು ವರ್ಷ ವಯಸ್ಸಿನ ಮಕ್ಕಳು ಸಂಪೂರ್ಣವಾಗಿ ಹಾಲನ್ನು ಸೇವಿಸುವುದು ಮತ್ತು ೨% ಹಾಲು ಸೇವನೆ ಮಾಡುವುದು ಅವರ ತೂಕ, ಎತ್ತರ, ಅಥವಾ ದೇಹದ ಕೊಬ್ಬಿನಂಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದಾಗ್ಯೂ, ಈ ವಯಸ್ಸಿನ ಮಕ್ಕಳಿಗೆ ಸಂಪೂರ್ಣ ಹಾಲು ಸೇವನೆ ಮಾಡುವಂತೆ ಶಿಫಾರಸ್ಸು ಮಾಡ ಲಾಗಿದೆ. ಹೀಗಿದ್ದರೂ ಹಾಲನ್ನು ಸಿಹಿ ಉಂಟು ಮಾಡಲು ಬೆರೆಸುವ ಸಿಹಿ ಪಾನೀಯವು ಹೆಚ್ಚುವರಿ ತೂಕ ಉಂಟು ಮಾಡುತ್ತದೆ.

ಮಕ್ಕಳು ದೈಹಿಕ ಚಟುವಟಿಕೆಗಳನ್ನು ನಡೆಸದೆ ಇರುವುದು ಒಂದು ಗಂಭೀರವಾದ ಕಾರಣವಾಗಿದೆ ಮತ್ತು ನಿಯಮಿತವಾಗಿ ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸದಿರುವುದು ಸ್ಥೂಲ ಕಾಯ ಬರುವ ಒಂದು ದೊಡ್ಡ ಅಪಾಯಕಾರಿ ಅಂಶವಾಗಿದೆ. ವಯಸ್ಕರ ಮೇಲೆ ನಡೆದಂತಹ ಫಿಟ್‌ನೆಸ್ ಸಮೀಕ್ಷೆಯ ಪ್ರಕಾರ ೧೪ ರಿಂದ ೧೯ ವರ್ಷ ವಯಸ್ಸಿನಲ್ಲಿ ಚಟುವಟಿಕೆ ಹೊಂದಿರದ ೨% ಮಕ್ಕಳಿಗೆ ಹೋಲಿಸಿದಾಗ ಈ ವಯಸ್ಸಿನಲ್ಲಿ ಚಟುವಟಿಕೆಯಿಂದ ಕೂಡಿದ್ದರೆ ವಯಸ್ಕರಾದಾಗಲೂ ಚಟುವಟಿಕೆಯಿಂದ ಕೂಡಿರುತ್ತಾರೆ. ಇವರನ್ನೆ ಈಗಿನ ಕ್ರಿಯಾಶೀಲ ಯುವಜನಾಂಗ ಎಂಬುದನ್ನು ಅಧ್ಯಯನಕಾರರು ಕಂಡು ಕೊಂಡಿದ್ದಾರೆ.

ಬಾಲ್ಯದ ಸ್ಥೂಲಕಾಯ
ಫಾಸ್ಟ್ ಫುಡ್ ಕೇಂದ್ರಗಳು ವಿದ್ಯಾರ್ಥಿಗಳಲ್ಲಿ ಸ್ಥೂಲಕಾಯದ ಸಾಧ್ಯತೆಯನ್ನು ಹೆಚ್ಚಿಸಿವೆ

ಹಲವಾರು ಮಕ್ಕಳು ಗಣಕಯಂತ್ರದ ಬಳಕೆ, ವಿಡಿಯೋ ಗೇಮ್‌ಗಳು ಅಥವಾ ಟಿವಿ ನೋಡುವುದರಲ್ಲಿ ಸಮಯ ಕಳೆಯುವುದರಿಂದ ವ್ಯಾಯಮ ಮಾಡಲು ವಿಫಲರಾಗುತ್ತಾರೆ. ಟಿವಿ ಅಥವಾ ತಂತ್ರಜ್ಞಾನವು ಮಕ್ಕಳು ದೈಹಿಕ ಚಟುವಟಿಕೆ ನಡೆಸದಂತಿರಲು ಪ್ರಮುಖ ಕಾರಣವಾಗಿದೆ.

ಒಂದು ದಿನಕ್ಕೆ ೪ ತಾಸಿಗಿಂತ ಹೆಚ್ಚು ಟಿವಿ ನೋಡಿದಾಗ ೨೧.೫% , ಒಂದು ಅಥವಾ ಹೆಚ್ಚು ತಾಸು ಗಣಕಯಂತ್ರ ಬಳಸಿದಾಗ ೪.೫% ತೂಕ ಅಧಿಕವಾಗಬಹುದು ಮತ್ತು ವಿಡಿಯೋ ಗೇಮ್‌ಗಳ ಆಟವು ತೂಕ ಹೆಚ್ಚಾಗುವ ಸಂಭವನೀಯತೆ ಮೇಲೆ ಯಾವುದೆ ಪರಿಣಾಮ ಬೀರಿಲ್ಲ.

ಟಿವಿ ನೋಡುವುದು ಮತ್ತು ಗಣಕಯಂತ್ರ ಬಳಕೆ ಕಡಿಮೆ ಮಾಡುವುದು ವಯಸ್ಸಿಗನುಗುಣವಾಗಿ ಬಿಎಂಐ ಕಡಿಮೆ ಮಾಡಿಕೊಳ್ಳಬಹುದು..

ಸ್ಥೂಲಕಾಯ ಹೊಂದಿರುವ ಪೀಳಿಗೆಯ ಎರಡು ತಂದೆ ತಾಯಿಯರು ೮೦% ಸ್ಥೂಲಕಾಯ ಹೊಂದಿದ್ದು ಇದಕ್ಕೆ ಭಿನ್ನವಾಗಿ ಸಾಮಾನ್ಯವಾದ ತೂಕವನ್ನು ಹೊಂದಿರುವ ಎರಡು ಪೀಳಿಗೆಯ ಪೋಷಕರು ೧೦% ಕ್ಕಿಂತ ಕಡಿಮೆ ಸ್ಥೂಲಕಾಯ ಹೊಂದಿರುತ್ತಾರೆ ಎಂದು ಅಧ್ಯಯನ ಕಂಡು ಹಿಡಿದಿದೆ. ಪರೀಕ್ಷೆಗೊಳಪಡಿಸಿದ ಜನಸಂಖ್ಯೆಗೆ ಅನುಗುಣವಾಗಿ ೬% ರಿಂದ ೮೫% ಸ್ಥೂಲಕಾಯವು ಅನುವಂಶೀಯತೆಯ ಲಕ್ಷಣವಾಗಿದೆ.

ಕುಟುಂಬದ ಊಟ ಕೂಡ ಮಕ್ಕಳ ಆಹಾರದ ಆಯ್ಕೆಯ ಮೇಲೆ ಪರಿಣಾಮ ಬೀರುತ್ತದೆ. ಸಂಶೋಧಕರು ೧೧–೨೧ ವರ್ಷ ವಯೋಮಾನದ ೧೮,೧೭೭ ಮಕ್ಕಳಿಗೆ ಮನೆಯಲ್ಲಿ ತಿನ್ನುವ ಆಹಾರದ ಪ್ರಶ್ನಾವಳಿಗಳನ್ನು ನೀಡಿದ್ದರು. ಇದರಲ್ಲಿ ಐವರ ನಾಲ್ಕು ತಂದೆ ತಾಯಿಯರು ಮಕ್ಕಳು ತಮ್ಮ ಆಹಾರವನ್ನು ತಾವೆ ಆರಿಸಿಕೊಳ್ಳಲು ಬಿಟ್ಟಿದ್ದನ್ನು ಕಂಡು ಕೊಂಡರು. ಹದಿವಯಸ್ಕ ಮಕ್ಕಳು ಮನೆಯಲ್ಲಿ ವಾರಕ್ಕೆ ಮೂರು ಅಥವಾ ಅದಕ್ಕಿಂತ ಕಡಿಮೆ ದಿನ ಊಟ ಮಾಡುವ ಮಕ್ಕಳಿಗೆ ಹೋಲಿಸಿದಾಗ ವಾರಕ್ಕೆ ನಾಲ್ಕರಿಂದ ಐದು ಸಲ ಮನೆಯಲ್ಲಿ ಊಟ ಮಾಡುವ ಮಕ್ಕಳು ೧೯%ಕ್ಕಿಂತ ಕಡಿಮೆ ತರಕಾರಿ ಸೇವನೆ, ೨೨% ಕ್ಕಿಂತ ಕಡಿಮೆ ಹಣ್ಣುಗಳ ಸೇವನೆ, ಮತ್ತು ೧೯% ಕ್ಕಿಂತ ಕಡಿಮೆ ಹಾಲಿನ ಉತ್ಪನ್ನಗಳನ್ನು ಸೇವನೆ ಮಾಡುವುದು ಕಂಡು ಬಂದಿದೆ.

ಎಲ್ಲಾ ನವಜಾತ ಶಿಶುಗಳಿಗೆ ಅವರ ಪೋಷಣೆ ಮತ್ತು ಇತರ ಲಾಭಕಾರಿ ಪರಿಣಾಮಗಳಿಗಾಗಿ ಸ್ತನ್ಯ ಪಾನದ ಸಲಹೆಯನ್ನು ನೀಡಲಾಗುತ್ತದೆ. ಇದು ನಂತರದ ದಿನಗಳಲ್ಲಿ ಸ್ಥೂಲಕಾಯ ತೆಯ ವಿರುದ್ಧ ರಕ್ಷಣೆಯನ್ನೂ ನೀಡುತ್ತದೆ.

ಮಕ್ಕಳಲ್ಲಿನ ಸ್ಥೂಲಕಾಯತೆಗೆ ಯಾವುದೇ ಬಗೆಯ ಚಿಕಿತ್ಸೆಗೆ ಸದ್ಯದಲ್ಲಿ ಅನುಮೋದನೆ ನೀಡಲಾಗಿಲ್ಲ. ಕಿಶೋರರಲ್ಲಿನ ಸ್ಥೂಲ ಕಾಯಕ್ಕೆ ಆರ್ಲಿಸ್ಟಂಟ್ ಮತ್ತು ಸಿಬುಟ್ರಮೈನ್ ಸಿಬುಟ್ರಮೈನ್ ಅನ್ನು೧೬ ವರ್ಷಕ್ಕೂ ಮೇಲ್ಪಟ್ಟ ಮಕ್ಕಳಿಗೆ ಅನುಮೋದಿಸಲಾಗಿದೆ. ಇದು ತಲೆಯ ರಸಾಯನ ಶಾಸ್ತ್ರದಲ್ಲಿ ಪುನರ್ವ್ಯವಸ್ಥೆ ಮಾಡುವ ಮೂಲಕ ಹಾಗೂ ಹಸಿವನ್ನು ಕಡಿಮೆ ಮಾಡುವ ಮೂಲಕ ಕಾರ್ಯ ನಿರ್ವಹಿಸುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಚಿನ್ನ ಮಹಿಳೆಯರ ಅಚ್ಚುಮೆಚ್ಚು

ಹಳದಿ ಲೋಹ ಚಿನ್ನ ಮಹಿಳೆಯರ ಅಚ್ಚುಮೆಚ್ಚು

ಅನ್ನನಾಳದ ರೋಗ

ಅನ್ನನಾಳದ ರೋಗಗಳು