in

ರಕ್ತದೊತ್ತಡದ ಸಮಸ್ಯೆಯ ಲಕ್ಷಣಗಳು ಮತ್ತು ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳು

ರಕ್ತದೊತ್ತಡದ ಸಮಸ್ಯೆ
ರಕ್ತದೊತ್ತಡದ ಸಮಸ್ಯೆ

ಅಪಧಮನಿಗಳಲ್ಲಿ ರಕ್ತದ ಒತ್ತಡ ಹೆಚ್ಚಾದಾಗ, ಹೃದಯವು ಸಾಮಾನ್ಯಕ್ಕಿಂತ ಹೆಚ್ಚು ಕೆಲಸ ಮಾಡಬೇಕಾಗುತ್ತದೆ, ಈ ಅಧಿಕ ಒತ್ತಡವನ್ನು ಅಧಿಕ ರಕ್ತದೊತ್ತಡ ಎಂದು ಕರೆಯಲಾಗುತ್ತದೆ. ಸರಳವಾಗಿ ಹೇಳುವುದಾದರೆ, ಸಾಮಾನ್ಯ ರಕ್ತದೊತ್ತಡದ ಮಟ್ಟ 120/80 ಮಟ್ಟವು ಇದಕ್ಕಿಂತ ಹೆಚ್ಚಿದ್ದಾಗ, ಈ ಸ್ಥಿತಿಯನ್ನು ಅಧಿಕ ರಕ್ತದೊತ್ತಡ ಎಂದು ಕರೆಯಲಾಗುತ್ತದೆ.

ಅಧಿಕ ರಕ್ತದೊತ್ತಡವು ಹೃದಯಾಘಾತ, ಪಾರ್ಶ್ವವಾಯು, ರೆಟಿನಾಗೆ ಹಾನಿ ಮತ್ತು ಸಾವಿಗೆ ಕಾರಣವಾಗುತ್ತದೆ.

ಡೆಸ್ಕ್‌ ಕೆಲಸ, ವ್ಯಾಯಾಮ ಮಾಡದಿರುವುದು, ಉಪ್ಪು ಹೆಚ್ಚಿರುವ ಆಹಾರ ಸೇವನೆಯು ಈ ಸಮಸ್ಯೆಗೆ ತಮ್ಮದೇ ಆದ ಕಾಣಿಕೆ ನೀಡುತ್ತವೆ. ಆಶ್ಚರ್ಯ ಎಂದರೆ, ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಅಧಿಕ ರಕ್ತದೊತ್ತಡ ಹೆಚ್ಚಾಗುತ್ತಿದೆ. 

ರಕ್ತದೊತ್ತಡದ ಸಮಸ್ಯೆಯ ಲಕ್ಷಣಗಳು ಮತ್ತು ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳು
ತಲೆತಿರುಗುವಿಕೆ ರಕ್ತದೊತ್ತಡದ ಲಕ್ಷಣಗಳಾಗಿರಬಹುದು

ತಲೆತಿರುಗುವಿಕೆ, ಹೆದರಿಕೆ, ಬೆವರುವುದು ಮತ್ತು ನಿದ್ರೆಯ ತೊಂದರೆ ಅಧಿಕ ರಕ್ತದೊತ್ತಡದ ಲಕ್ಷಣಗಳಾಗಿರಬಹುದು. ಆದರೆ ಈ ರೋಗಲಕ್ಷಣಗಳು ತುಂಬಾ ಸಾಮಾನ್ಯವಾಗಿದ್ದು ಇದಕ್ಕೆ ಹಲವು ಇತರ ಕಾರಣಗಳು ಕೂಡ ಇವೆ. ಒಂದು ಸಂಶೋಧನೆಯ ಪ್ರಕಾರ, ಸಬ್ ಕಾಂಜಂಕ್ಟಿವಲ್ ಹೆಮರೇಜ್ ಎಂದು ಕರೆಯಲ್ಪಡುವ ಕಣ್ಣುಗಳಲ್ಲಿನ ರಕ್ತದ ಕಲೆಗಳು ಅಧಿಕ ರಕ್ತದೊತ್ತಡದ ಎಚ್ಚರಿಕೆಯ ಸಂಕೇತವಾಗಬಹುದು.

ಬದಲಾಗುತ್ತಿರುವ ಜೀವನಶೈಲಿ, ಒತ್ತಡ, ಆಯಾಸ ಮತ್ತು ಕಳಪೆ ಆಹಾರಕ್ರಮವು ರಕ್ತದೊತ್ತಡದ ಹೆಚ್ಚಳಕ್ಕೆ ಮುಖ್ಯ ಕಾರಣವೆಂದು ಪರಿಗಣಿಸಲಾಗಿದೆ. ನೀವು ಹೆಚ್ಚು ಉಪ್ಪನ್ನು ಸೇವಿಸಿದರೂ, ಅಧಿಕ ರಕ್ತದೊತ್ತಡದ ಅಪಾಯ ಹೆಚ್ಚಾಗುತ್ತದೆ. ಈಗಾಗಲೇ ಬಿಪಿ ರೋಗಿಗಳಾಗಿರುವ ಜನರಲ್ಲಿ, ಕೆಲವು ವರದಿಗಳಲ್ಲಿ ದೈಹಿಕವಾಗಿ ನಿಷ್ಕ್ರಿಯವಾಗಿರುವುದು, ಧೂಮಪಾನ ಅಥವಾ ಅತಿಯಾದ ಆಲ್ಕೊಹಾಲ್ ಸೇವನೆಯು ಬಿಪಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.

ಅಧಿಕ ರಕ್ತದೊತ್ತಡ ಸಮಸ್ಯೆಗೆ ಜೀವನ ಕ್ರಮಗಳು ಮತ್ತು ಸೇವಿಸಬೇಕಾದ ಆಹಾರಗಳು :

*ಒಂದು ವೇಳೆ ವ್ಯಕ್ತಿಯ ರಕ್ತದೊತ್ತಡದಲ್ಲಿ ಏನಾದರೂ ಏರುಪೇರಿದ್ದರೆ ಅದು ಕೂಡಲೇ ಅವರ ನಡಿಗೆಯಲ್ಲೇ ತಿಳಿಯುತ್ತದೆ. ಮೆಟ್ಟಿಲು ಹತ್ತುವಾಗ ಅವರು ಬಹಳ ಪ್ರಯಾಸಪಡುತ್ತಾರೆ. ನಡೆಯುವಾಗ, ಭಾರದ ವಸ್ತುಗಳನ್ನು ಎತ್ತುವಾಗಲೂ ಬಹಳ ಕಷ್ಟಪಡುತ್ತಾರೆ. ಆತಂಕ, ತಲೆನೋವು, ಕಣ್ಣುಕತ್ತಲೆ ಬಂದಂತೆ ಆಗುವುದು ಇವರಿಗೆ ಸಹಜ ಲಕ್ಷಣಗಳು.

* ಸಿಟ್ರಸ್ ಹಣ್ಣುಗಳು ಮತ್ತು ಬಾಳೆಹಣ್ಣುಗಳು- ಅಧಿಕ ರಕ್ತದೊತ್ತಡ ರೋಗಿಗಳ ಆಹಾರದಲ್ಲಿ ಕಡ್ಡಾಯವಾಗಿ ಇರಬೇಕು. ಸಿಟ್ರಸ್ ಹಣ್ಣುಗಳು ಸಹ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ಸಿಟ್ರಸ್ ಹಣ್ಣುಗಳು ಜೀವಸತ್ವಗಳು, ಖನಿಜಗಳು ಮತ್ತು ಅನೇಕ ಪೋಷಕಾಂಶಗಳನ್ನು ಹೊಂದಿರುತ್ತವೆ. ಈ ಕಾರಣದಿಂದಾಗಿ ನಿಮ್ಮ ಹೃದಯವು ಆರೋಗ್ಯಕರವಾಗಿ ಉಳಿಯುತ್ತದೆ ಮತ್ತು ಅಧಿಕ ರಕ್ತದೊತ್ತಡವನ್ನು ಸಹ ನಿಯಂತ್ರಿಸಲಾಗುತ್ತದೆ. ದ್ರಾಕ್ಷಿ, ಕಿತ್ತಳೆ, ನಿಂಬೆಹಣ್ಣನ್ನು ಹೊರತುಪಡಿಸಿ, ನೀವು ಬಾಳೆಹಣ್ಣನ್ನು ಆಹಾರದಲ್ಲಿಯೂ ಸೇವಿಸಬಹುದು. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ, ಇದು ಸೋಡಿಯಂ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಈ ಕಾರಣದಿಂದಾಗಿ, ರಕ್ತ ಕಣಗಳಲ್ಲಿನ ಒತ್ತಡ ಕಡಿಮೆಯಾಗುತ್ತದೆ ಮತ್ತು ಅಧಿಕ ರಕ್ತದೊತ್ತಡವನ್ನು ಸಹ ನಿಯಂತ್ರಿಸುತ್ತದೆ.

ರಕ್ತದೊತ್ತಡದ ಸಮಸ್ಯೆಯ ಲಕ್ಷಣಗಳು ಮತ್ತು ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳು
ಜಾಗಿಂಗ್‌ ಮಾಡುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ

*ಜಾಗಿಂಗ್‌ ಮಾಡುವುದರಿಂದ ಅನೇಕ ಉಪಯೋಗಗಳಿವೆ. ಉಸಿರಾಟ ಹೆಚ್ಚುವುದು, ರಕ್ತದೊತ್ತಡ ಕಡಿಮೆಯಾಗುವುದು ಸೇರಿದಂತೆ ಇನ್ನಿತರೆ ಉಪಯೋಗಗಳಾಗುತ್ತವೆ. ಯಾವುದೇ ರೀತಿ ದೈಹಿಕ ಕಸರತ್ತು ಮಾಡುವುದರಿಂದ ಸಹಜವಾಗಿಯೇ ರಕ್ತದೊತ್ತಡ ಕಡಿಮೆಯಾಗಿ, ಹೃದಯದ ಆರೋಗ್ಯ ಹೆಚ್ಚಾಗುತ್ತದೆ. ಇದರಿಂದಾಗಿ ನರಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಪವರ್‌ ವಾಕಿಂಗ್‌ ಕೂಡ ಇದಕ್ಕೆ ಮದ್ದು ಆಗಬಲ್ಲದು.

*ಕುಂಬಳಕಾಯಿ ಬೀಜಗಳಲ್ಲಿ ಅನೇಕ ಪೋಷಕಾಂಶಗಳಿವೆ. ಅವುಗಳನ್ನು ತಿನ್ನುವುದರಿಂದ ರಕ್ತದೊತ್ತಡವನ್ನು ಸಹ ನಿಯಂತ್ರನದಲ್ಲಿರುತ್ತದೆ. ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಅರ್ಜಿನೈನ್ ಇದರಲ್ಲಿ ಕಂಡುಬರುತ್ತವೆ, ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ನೀವು ಕುಂಬಳಕಾಯಿ ಬೀಜಗಳನ್ನು ಅಥವಾ ಕುಂಬಳಕಾಯಿ ಎಣ್ಣೆಯನ್ನು ಆಹಾರದಲ್ಲಿ ಬಳಸಬಹುದು.

*ಪ್ರತಿ ದಿನ ಒಂದು ಕಪ್‌ ಮೊಸರು ಸೇವಿಸುವುದರಿಂದಲೂ ರಕ್ತದೊತ್ತಡ ನಿವಾರಿಸಬಹುದು. ನೈಸರ್ಗಿಕವಾಗಿ ದೊರೆಯುವ ಕ್ಯಾಲ್ಸಿಯಮ್‌ನಿಂದ ರಕ್ತನಾಳಗಳಲ್ಲಿ ಸುಲಭವಾಗಿ ರಕ್ತ ಪರಿಚಲನೆಗೆ ನಾಳಗಳು ತುಸು ವಿಸ್ತಾರಗೊಳ್ಳಲು ಮತ್ತು ಒತ್ತಡವನ್ನು ತಗ್ಗಿಸಲು ಸಾಧ್ಯವಾಗುತ್ತದೆ ಎಂದು ವಿಜ್ಞಾನಿಗಳು ಭಾವಿಸುತ್ತಾರೆ. 15 ವರ್ಷಗಳಲ್ಲಿ ಯಾರು ಪ್ರತಿ ದಿನ 120 ಗ್ರಾಂ ಕುಡಿಕೆ ಮೊಸರನ್ನು ಸೇವಿಸುತ್ತಾರೋ ಅವರಲ್ಲಿ ಶೇ.31ರಷ್ಟು ರಕ್ತದೊತ್ತಡ ಕಡಿಮೆ ಇರುತ್ತದೆ.

*ಉತ್ತಮ ದೈಹಿಕ ಆರೋಗ್ಯ ಇರುವವರಿಗೆ ಅಧಿಕ ರಕ್ತದೊತ್ತಡವನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಸುಲಭ. ಹೆಚ್ಚು ತೂಕ ಇಲ್ಲದಂತೆ ನೋಡಿಕೊಳ್ಳುವುದು, ಸರಿಯಾದ ಸಮಯಕ್ಕೆ ಉತ್ತಮ ಆಹಾರ ಸೇವನೆ ಮಾಡುವುದು, ದೈಹಿಕ ವ್ಯಾಯಾಮ, ನೆಮ್ಮದಿಯ ಬದುಕು ಇವೆಲ್ಲವುದರ ಜೊತೆಗೆ ಹೆಚ್ಚು ಸಕ್ಕರೆ, ಉಪ್ಪು ಇರದ ಆಹಾರ ಸೇವನೆ ಕೂಡಾ ರಕ್ತದೊತ್ತಡವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಸಹಕಾರಿ.

*ಮೀನಿನಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳಿದ್ದು ಅದು ನಮ್ಮ ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಮೀನಿನಲ್ಲಿ ಕಂಡುಬರುವ ಕೊಬ್ಬು ರಕ್ತನಾಳಗಳನ್ನು ಸಂಕುಚಿತಗೊಳಿಸುವ ಮತ್ತು ಉರಿಯೂತವನ್ನು ಕಡಿಮೆ ಮಾಡುವ ಸಂಯುಕ್ತಗಳನ್ನು ಹೊಂದಿರುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ಅದಕ್ಕಾಗಿಯೇ ನೀವು ಕೊಬ್ಬಿನ ಮೀನುಗಳನ್ನು  ಆಹಾರದಲ್ಲಿ ಸೇವಿಸಿ.

*ರಕ್ತದೊತ್ತಡ ನಿವಾರಣೆಗೆ ಬೀಟ್‌ರೂಟ್‌ ಕೂಡ ಉತ್ತಮ ಪರಿಹಾರವಾಗಬಲ್ಲದು. 250 ಎಂಎಲ್‌ ಜ್ಯೂಸ್‌ ಸೇವಿಸುವ ವ್ಯಕ್ತಿಯ ಬಿಪಿಯ ಪ್ರಮಾಣ, ಅಧಿಕ ರಕ್ತದೊತ್ತಡವಿರುವ ವ್ಯಕ್ತಿಗಿಂತಲೂ ಶೇ.7ರಷ್ಟು ಕಡಿಮೆ ಇರುತ್ತದೆ. ಬೀಟ್‌ರೂಟ್‌ನಲ್ಲಿ ನೈಸರ್ಗಿಕವಾಗಿ ದೊರೆಯುವ ನೈಟ್ರೇಟ್‌ ಇದಕ್ಕೆಲ್ಲ ಕಾರಣ ಎಂದು ಹೈಪರ್‌ಟೆನ್ಶನ್‌ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯೊಂದರಲ್ಲಿ ತಿಳಿಸಲಾಗಿದೆ. ಅದೇ ರೀತಿ, ಎಲೆಕೋಸು ಮತ್ತು ಪಾಲಕ್‌ ತರಕಾರಿಯನ್ನು ಸೇವಿಸುವುದರಿಂದ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರಬಹುದು.

*ಜೋರಾಗಿ ಹಾಗೂ ನಿರಂತರವಾಗಿ ಗೊರಕೆ ಹೊಡೆಯುತ್ತಿದ್ದರೆ ಅದು ನಿದ್ರೆಯಲ್ಲಿ ಉಸಿರಾಟದ ತೊಂದರೆಯ ಲಕ್ಷಣವಾಗಿರಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಗೊರಕೆ ಹೊಡೆಯುವವರ ಪೈಕಿ ಅರ್ಧದಷ್ಟು ಜನರಿಗೆ ಖಂಡಿತವಾಗಿಯೂ ಅವರ ವಯಸ್ಸು ಮತ್ತು ಆರೋಗ್ಯವನ್ನು ಮೀರಿದ ರಕ್ತದೊತ್ತಡ ಇದ್ದೇ ಇರುತ್ತದೆ. ಇದರಿಂದ ಹೊರ ಬರಲು ಧೂಮಪಾನ ಮತ್ತು ಮದ್ಯಪಾನ ವರ್ಜಿಸಬೇಕು. ಜತೆಗೆ ತೂಕ ಕೂಡ ಕಡಿಮೆ ಮಾಡಿಕೊಳ್ಳಬೇಕು.

ರಕ್ತದೊತ್ತಡದ ಸಮಸ್ಯೆಯ ಲಕ್ಷಣಗಳು ಮತ್ತು ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳು
ದ್ವಿದಳ ಧಾನ್ಯಗಳು ಧನಾತ್ಮಕ ಪರಿಣಾಮ ಬೀರುತ್ತದೆ

*ದ್ವಿದಳ ಧಾನ್ಯಗಳು ಫೈಬರ್, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ನ ಉಗ್ರಾಣವಾಗಿದೆ. ಹಲವಾರು ಸಂಶೋಧನಾ ಅಧ್ಯಯನಗಳು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುವಲ್ಲಿ ಬೀನ್ಸ್ ಮತ್ತು ಬೆಳೆಯನ್ನು ಸೇವಿಸುವುದರಿಂದ ಧನಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ, ನಿಮ್ಮ ಆಹಾರದಲ್ಲಿ ನೀವು ದ್ವಿದಳ ಧಾನ್ಯಗಳನ್ನು ಸೇವಿಸಿ.

*500 ಮಿಲಿಗ್ರಾಂ ಅಥವಾ ಅಂದಾಜು ಮೂರು ಕಪ್‌ ಕೆಫೀನ್‌ ಕುಡಿಯುವುದರಿಂದ ಮೂರು ಪಾಯಿಂಟ್‌ಗಳಷ್ಟು ರಕ್ತದೊತ್ತಡ ಹೆಚ್ಚಳವಾಗುತ್ತದೆ ಎನ್ನುತ್ತಾರೆ ಅಮೆರಿಕದ ನಾರ್ಥ್‌ ಕ್ಯಾರೊಲಿನಾ ಡ್ಯೂಕ್‌ ಯುನಿವರ್ಸಿಟಿ ಆಫ್‌ ಮೆಡಿಕಲ್‌ ಸೆಂಟರ್‌ ಸಂಶೋಧಕರು. ಈ ಕಾಫಿಯ ಪರಿಣಾಮ ಮಲಗುವವರೆಗೂ ಇರುತ್ತದೆ. ವಿಜ್ಞಾನಿಗಳು ಹೇಳುವ ಪ್ರಕಾರ, ಕೆಫೀನ್‌ನಿಂದ ರಕ್ತನಾಳಗಳು ಕಿರಿದಾಗುವುದರಿಂದ ಬಿಪಿ ಹೆಚ್ಚಾಗಲು ಕಾರಣವಾಗುತ್ತದೆ.

*ಉತ್ಕರ್ಷಣ ನಿರೋಧಕಗಳು  ಹಣ್ಣುಗಳಲ್ಲಿ ಹೇರಳವಾಗಿ ಕಂಡುಬರುತ್ತವೆ. ನೇರಳೆ ಹಣ್ಣಿನಲ್ಲಿರುವ ಆಂಥೋಸಯಾನಿನ್ ಉತ್ಕರ್ಷಣ ನಿರೋಧಕಗಳು ರಕ್ತದಲ್ಲಿನ ನೈಟ್ರಿಕ್ ಆಕ್ಸೈಡ್ ಮಟ್ಟವನ್ನು ಹೆಚ್ಚಿಸುತ್ತವೆ. ಹಣ್ಣುಗಳನ್ನು ತಿನ್ನುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ.

*ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಕೂಡ ರಕ್ತದೊತ್ತಡ ನಿಯಂತ್ರಿಸಲು ನೆರವಾಗುತ್ತದೆ. ಕೇವಲ ಕೆಲವೇ ಕೆಜಿಯಷ್ಟು ತೂಕ ಕಡಿಮೆಯಾದರೂ ರಕ್ತದೊತ್ತಡವನ್ನು ಸಾಕಷ್ಟು ನಿಯಂತ್ರಿಸಿಕೊಳ್ಳಬಹುದು. ಅತಿಯಾದ ತೂಕದಿಂದಾಗಿ ನಿಮ್ಮ ಹೃದಯದ ಕೆಲಸ ಹೆಚ್ಚಾಗುತ್ತದೆ ಮತ್ತು ಇದರಿಂದಾಗಿ ಸಹಜವಾಗಿಯೇ ರಕ್ತದೊತ್ತಡ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ವರ್ಷದ ಮೊದಲ ಅಂಗಾರಕ ಸಂಕಷ್ಟಿ

ಜನವರಿ 10, 2023 ರಂದು, ಈ ವರ್ಷದ ಮೊದಲ “ಅಂಗಾರಕ ಸಂಕಷ್ಟಿ” 

ದಧೀಚಿಯು ಒಬ್ಬ ಮಹಾನ್ ಋಷಿ

ದಧೀಚಿಯು ಒಬ್ಬ ಮಹಾನ್ ಋಷಿಯಾಗಿದ್ದರು