in

ವಾಹನ ವಿಮೆಯಲ್ಲಿ ಅನುಸರಿಸಬೇಕಾದ ಕೆಲವೊಂದು ಪ್ರಮುಖ ಅಂಶಗಳು

ವಾಹನ ವಿಮೆ
ವಾಹನ ವಿಮೆ

ವಾಹನವನ್ನು ಖರೀದಿಸಲು ಯೋಜಿಸುತ್ತಿದ್ದರೆ ಅಥವಾ ಈಗಾಗಲೇ ಖರೀದಿಸಿದ್ದರೆ, ಅದಕ್ಕಾಗಿ ವಾಹನ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವುದು ಅವಶ್ಯಕ. ಯಾವುದೇ ರೀತಿಯ ಅಪಘಾತ, ಕಳ್ಳತನಕ್ಕೆ ಸಂಬಂಧಿಸಿದ ವೆಚ್ಚಗಳನ್ನು ಭರಿಸಲು ಇದು ನಿಮಗೆ ಆರ್ಥಿಕ ಭದ್ರತೆಯನ್ನು ನೀಡುತ್ತದೆ. ವಾಹನ ವಿಮಾ ಪಾಲಿಸಿಯನ್ನು ಖರೀದಿಸುವಾಗ ಅನೇಕ ಬಾರಿ ಕ್ಲೈಮ್ ತಿರಸ್ಕೃತಗೊಳ್ಳುತ್ತದೆ. ಪಾಲಿಸಿಯನ್ನು ಖರೀದಿಸುವಾಗ ಅಗತ್ಯ ನಿಯಮಗಳು ಮತ್ತು ಷರತ್ತುಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಪಾಲಿಸಿಯ ನಿಯಮಗಳು ಗೊತ್ತಿಲ್ಲದಿದ್ದರೆ, ಹಲವು ಬಾರಿ ಅನಾಹುತಗಳಿಗೆ ಕಾರಣವಾಗಬಹುದು. ವಿಮಾ ಕಂಪನಿಗಳು ನಿಮ್ಮ ಕ್ಲೈಮ್ ಅನ್ನೇ ತಿರಸ್ಕರಿಸಬಹುದು.

ಕಾರು ವಿಮೆ ಮನುಷ್ಯನ ವಹಿವಾಟುಗಳಲ್ಲಿ ಮುಖ್ಯವಾದುದು. ಕಾರು ವಿಮಾ ಕಂಪೆನಿಗಳನ್ನು ಬದಲಾಯಿಸುವಾಗ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಕಾರು ವಿಮೆ ಬದಲಾಯಿಸಿಕೊಳ್ಳುವಾಗ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯ.

ಎಲ್ಲಾ ಕಾರು ಮಾಲೀಕರು ಮಾನ್ಯವಾದ ಥರ್ಡ್​ ಪಾರ್ಟಿ ವಿಮಾ ಪಾಲಿಸಿಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಕಾರು ವಿಮಾ ಪಾಲಿಸಿಯು ಹಲವಾರು ಪ್ರಯೋಜನಗಳನ್ನು ಹೊಂದಿದೆ. ಅಪಘಾತದ ಕಾರಣದಿಂದಾಗಿ ನಿಮ್ಮ ವಾಹನವು ಹಾನಿಗೊಳಗಾದರೆ, ನಿಮ್ಮ ವಾಹನದ ವೆಚ್ಚವನ್ನು ಪಾಲಿಸಿಯು ಭರಿಸುತ್ತದೆ. ವಿಮಾ ಪಾಲಿಸಿಯು ಕಳ್ಳತನದಿಂದಾಗಿ ಕಾರು ಮಾಲೀಕರು ಅನುಭವಿಸಬಹುದಾದ ನಷ್ಟವನ್ನು ಸಹ ಒಳಗೊಂಡಿದೆ.

ವಾಹನ ವಿಮೆಯಲ್ಲಿ ಅನುಸರಿಸಬೇಕಾದ ಕೆಲವೊಂದು ಪ್ರಮುಖ ಅಂಶಗಳು
ಅಪಘಾತ ಭದ್ರತೆಯನ್ನು ನೀಡುತ್ತದೆ

ಯಾವುದೇ ಯೋಚನೆಯಿಲ್ಲದೆ, ಸೂಕ್ತ ಕಾರಣಗಳಿಲ್ಲದೆ ವಿಮಾಗಾರರನ್ನು ಬದಲಾಯಿಸುತ್ತೇವೆ. ವಿಮಾ ಕಂಪೆನಿಗಳನ್ನು ಬದಲಾಯಿಸುವಾಗ ಸೂಕ್ತ ಕಾರಣಗಳು ನಮ್ಮಲ್ಲಿರಬೇಕು. ಕಳಪೆ ಗ್ರಾಹಕ ಸೇವೆಗಳನ್ನು ವಿಮಾ ಕಂಪೆನಿಗಳು ಹೊಂದಿವೆಯೇ? ಆಡ್ ಆನ್ ಗಳ ಕೊರತೆಯಿದೆಯೇ? ಅಥವಾ ಆನ್ ಲೈನ್ ಕಾರು ಇನ್ಶೂರೆನ್ಸ್ ಗೆ ಪ್ರಯತ್ನಿಸುವಾಗ ವೆಬ್ ಸೈಟ್ ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲವೇ? ಹೀಗೆ ವಿಮಾ ಕಂಪೆನಿಗಳನ್ನು ಬದಲಾಯಿಸುವಾಗ ಸೂಕ್ತ ಕಾರಣಗಳಿರಬೇಕು.

ಕಾರು ವಿಮಾ ಪಾಲಿಸಿಯು ಮಾನ್ಯವಾಗಿ ಉಳಿಯಲು, ಅದನ್ನು ಸಮಯಕ್ಕೆ ನವೀಕರಿಸಬೇಕು. ಪ್ರತಿ ಪಾಲಿಸಿಯು ಮುಕ್ತಾಯ ದಿನಾಂಕವನ್ನು ಹೊಂದಿರುತ್ತದೆ ಮತ್ತು ವಿಮಾ ಪಾಲಿಸಿಯು ಅವಧಿ ಮುಗಿದಾಗ, ನೀವು ಇನ್ನು ಮುಂದೆ ಯಾವುದೇ ಅನಿಶ್ಚಿತ ವೆಚ್ಚಗಳಿಂದ ರಕ್ಷಿಸಲ್ಪಡುವುದಿಲ್ಲ. ಆದ್ದರಿಂದ ನಿಮ್ಮ ಕಾರು ವಿಮಾ ಪಾಲಿಸಿಯ ಮುಕ್ತಾಯ ದಿನಾಂಕದ ಬಗ್ಗೆ ತಿಳಿದಿರುವುದು ಬಹಳ ಮುಖ್ಯ.

ವಿಮಾ ಕಂಪನಿಗಳು ನಿಮ್ಮ ವಿಮಾ ಕ್ಲೈಮ್  ಅನ್ನು ತಕ್ಷಣವೇ ಇತ್ಯರ್ಥಪಡಿಸಬಹುದು. ಒಂದು ವೇಳೆ ವಿಮಾ ಕಂಪನಿಗಳು ಕ್ಲೈಮ್ ಅನ್ನು ಅನುಮೋದಿಸದಿದ್ದರೆ, ಹಾನಿಗೊಳಗಾದ ಕಾರನ್ನು ಸರಿಪಡಿಸಲು ನಿಮ್ಮ ಸ್ವಂತ ಹಣವನ್ನು ಖರ್ಚು ಮಾಡಬೇಕಾಗಿ ಬರುತ್ತದೆ. 

ವಿಮಾ ಮಾಹಿತಿ ಬ್ಯೂರೋ ಆಫ್ ಇಂಡಿಯಾ ಡೇಟಾ ರೆಪೊಸಿಟರಿಯಾಗಿದೆ, ಇದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಬರುತ್ತದೆ. ವಾಹನ ವಿಮಾ ಪಾಲಿಸಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ವಿಮಾ ಮಾಹಿತಿ ಬ್ಯೂರೋ ವೆಬ್‌ಸೈಟ್‌ನಲ್ಲಿ ಕಾಣಬಹುದು.

ವಿಮೆಯ ಅತ್ಯಂತ ಪ್ರಮುಖ ಅಂಶ ಕ್ಲೈಮ್ ಸೆಟಲ್ಮೆಂಟ್ ಆಗಿರುತ್ತದೆ. ವಿಮಾ ಕಂಪೆನಿಗಳು ನಿಮ್ಮ ಕ್ಲೈಮ್ ಗಳನ್ನು ಸ್ವೀಕರಿಸದಿದ್ದರೆ ನೀವು ಪಾವತಿಸುವ ಪ್ರೀಮಿಯಂಗಳಿಗೆ ಅರ್ಥವಿರುವುದಿಲ್ಲ. ಆದುದರಿಂದ ನೀವು ಬೇರೆ ವಿಮಾ ಕಂಪೆನಿಗಳನ್ನು ಹುಡುಕುವಾಗ ಅವರ ಕ್ಲೈಮ್ ಸೆಟಲ್ಮೆಂಟ್ ಪ್ರಮಾಣವನ್ನು ನೋಡಿಕೊಳ್ಳಿ. ಕ್ಲೈಮ್ ಸೆಟಲ್ಮೆಂಟ್ ಪ್ರಮಾಣ ಹೆಚ್ಚಾದಂತೆ ಅವು ಒಪ್ಪಂದ ಮಾಡಿಕೊಂಡ ಕ್ಲೈಮ್ ಗಳು ಹೆಚ್ಚಾಗಿರುತ್ತವೆ. ನಿರೀಕ್ಷಿತ ಗ್ರಾಹಕರಿಗೆ ಇದು ಒಳ್ಳೆಯ ಸೂಚಕವಾಗಿರುತ್ತದೆ.

ಪಾಲಿಸಿ ಅವಧಿಯಲ್ಲಿ ನೀವು ನಿಮ್ಮ ಕಾರಿನಲ್ಲಿ ಬಿಡಿಭಾಗಗಳನ್ನು ಮಾರ್ಪಡಿಸಿದ್ದಲ್ಲಿ ಅಥವಾ ಹಾಕಿದ್ದರೆ, ಪಾಲಿಸಿಯನ್ನು ನವೀಕರಿಸುವಾಗ ವಿಮಾದಾರರಿಗೆ ಈ ಬಗ್ಗೆ ಮಾಹಿತಿ ನೀಡಬೇಕು. ಇಲ್ಲವಾದರೆ, ವಿಮಾ ಕಂಪನಿಯು ಅದನ್ನು ಪರಿಶೀಲಿಸಿದ ನಂತರ  ಹೆಚ್ಚುವರಿ ಪರಿಕರಗಳನ್ನು ಒಳಗೊಂಡಿರುವುದರಿಂದ ನೀವು ಕಾರ್ ವಿಮೆಯ ಲಾಭವನ್ನು ಪಡೆಯದೇ ಇರಬಹುದು. ಹಾಗಾಗಿ ವಿಮೆ ಮಾಡಿಸುವ ಸಂದರ್ಭದಲ್ಲಿ ಈ ಬಗ್ಗೆ  ಮಾಹಿತಿ ಇರಲಿ.

ಪ್ರತಿ ಹಣಕಾಸು ವರ್ಷದ ಕೊನೆಗೆ ನಿಮ್ಮ ಕಾರನ್ನು ಮರು ವಿಮೆ ಮಾಡಿಕೊಳ್ಳಲು ನೀವು ಪ್ರೀಮಿಯಂ ಪಾವತಿಸುತ್ತೀರಿ. ಕೆಲವು ಸಂದರ್ಭದಲ್ಲಿ ಉದ್ಯೋಗ ಕಳೆದುಕೊಳ್ಳುವ ಅಥವಾ ವೈದ್ಯಕೀಯ ಚಿಕಿತ್ಸೆಯ ತುರ್ತು ಸಂದರ್ಭ ಬರಬಹುದು. ಅಂತಹ ಸಂದರ್ಭಗಳಲ್ಲಿ ನಿಮಗೆ ಪ್ರೀಮಿಯಂ ಪಾವತಿಸಲು ಕಷ್ಟವಾಗಬಹುದು. ಈ ಬಗ್ಗೆ ಮೊದಲೇ ವಿಮಾ ಕಂಪೆನಿಗಳಲ್ಲಿ ಮಾತುಕತೆ ನಡೆಸಬೇಕು ಮತ್ತು ಇದಕ್ಕೆ ಯಾವುದೇ ಪರಿಹಾರವಿಲ್ಲವೆಂದಾಗ ಬೇರೆ ವಿಮಾ ಕಂಪೆನಿಗಳಿಗೆ ನಿಮ್ಮ ನಿರೀಕ್ಷೆಗೆ ತಕ್ಕಂತಹ ಸೇವೆ ಒದಗಿಸುವ ಕಂಪೆನಿಗಳನ್ನು ಹುಡುಕಬೇಕು.

ಸ್ಥಳೀಯ ಮೆಕ್ಯಾನಿಕ್‌ನಿಂದ ವಾಹನವನ್ನು ದುರಸ್ತಿ ಮಾಡಿಸಲು ಹೋಗಬೇಡಿ. ಅಪಘಾತ ಅಥವಾ ಇತರ ಯಾವುದೇ ಕಾರಣದಿಂದ ಕಾರು ಹಾಳಾಗಿದ್ದರೆ, ಅದನ್ನು ನೀವೇ ದುರಸ್ತಿ ಮಾಡಬೇಡಿ ಅಥವಾ ಸ್ಥಳೀಯ ಮೆಕ್ಯಾನಿಕ್ ಸಹಾಯವನ್ನು ಪಡೆಯಬೇಡಿ. ಇದನ್ನು ಮಾಡುವುದರಿಂದ ವಿಮಾ ಕಂಪನಿಗಳು ನಿಮ್ಮ ಕ್ಲೈಮ್ ಅನ್ನು ತಿರಸ್ಕರಿಸಬಹುದು.

ವಾಹನ ವಿಮೆಯಲ್ಲಿ ಅನುಸರಿಸಬೇಕಾದ ಕೆಲವೊಂದು ಪ್ರಮುಖ ಅಂಶಗಳು
ಸಮಯಕ್ಕೆ ಸರಿಯಾಗಿ ಪ್ರೀಮಿಯಂ ಪಾವತಿಸಿ ಒಳ್ಳೆಯದು

ಕಾರುಗಳಿಗೆ ಹೊಸ ಇನ್ಶೂರೆನ್ಸ್ ಯೋಜನೆಗಳನ್ನು ಹುಡುಕುವಾಗ ವಿಮೆ ಒದಗಿಸುವವರು ನೀಡುವ ಆಡ್ ಆನ್ಸ್ ಗಳ ಬಗ್ಗೆ ಗಮನ ನೀಡಿ. ಪ್ರೀಮಿಯಂ ಮೊತ್ತ ನಿಷ್ಪ್ರಯೋಜಕವಾಗದಂತೆ ಹೆಚ್ಚು ಹಣ ದುಂದುವೆಚ್ಚವಾಗದಂತೆ ಅತ್ಯಂತ ವಿವೇಚನೆಯಿಂದ ವಿಮಾ ಕಂಪೆನಿಗಳನ್ನು ಆಯ್ಕೆಮಾಡಿಕೊಳ್ಳಿ. 

ಮೋಟಾರು ವಾಹನ ಕಾಯಿದೆಯಡಿ, ವಾಣಿಜ್ಯ ವಾಹನಗಳಿಗೆ ವಿಮಾ ರಕ್ಷಣೆ ಮತ್ತು ಕಾನೂನುಗಳು ಭಿನ್ನವಾಗಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ವೈಯಕ್ತಿಕ ಕಾರನ್ನು ವಾಣಿಜ್ಯ ಕಾರಣಗಳಿಗೆ ಬಳಸಿದರೆ, ಅಪಘಾತದ ಸಂದರ್ಭದಲ್ಲಿ, ವಿಮಾ ಕಂಪನಿಗಳು ಕ್ಲೈಮ್ ಅನ್ನು ತಿರಸ್ಕರಿಸಬಹುದು.

ಸಮಯಕ್ಕೆ ಸರಿಯಾಗಿ ಪ್ರೀಮಿಯಂ ಪಾವತಿಸದಿದ್ದರೆ, ನಿಮ್ಮ ಪಾಲಿಸಿ  ಅಮಾನ್ಯವಾಗುತ್ತದೆ. ಆದಾಗ್ಯೂ, ಭಾರತದ ಹೆಚ್ಚಿನ ಕಂಪನಿಗಳು 90 ದಿನಗಳ ಕಾಲಾವಕಾಶವನ್ನು ನೀಡುತ್ತವೆ. ಈ ಅವಧಿಯಲ್ಲಿ ಪಾಲಿಸಿಯನ್ನು ನವೀಕರಿಸದಿದ್ದರೆ, ನೀವು ಕಾರು ವಿಮೆಯ ಎಲ್ಲಾ ಪ್ರಯೋಜನಗಳನ್ನು ಕಳೆದುಕೊಳ್ಳುತ್ತೀರಿ.

ಚಾಲನಾ ಪರವಾನಗಿ ಇಲ್ಲದೆ ಕಾರನ್ನು ಚಾಲನೆ ಮಾಡುವುದು ಕಾನೂನಿನ ಪ್ರಕಾರ ಅಪರಾಧವಾಗಿರುತ್ತದೆ. ಇದರ ಹೊರತಾಗಿಯೂ, ಇಂದಿಗೂ ಸಹ, ಸಾವಿರಾರು ಜನರು ದೇಶದಲ್ಲಿ ಪರವಾನಗಿ ಇಲ್ಲದೆ ಕಾರುಗಳನ್ನು ಓಡಿಸುತ್ತಾರೆ. ನೀವು ಡ್ರೈವಿಂಗ್ ಲೈಸೆನ್ಸ್  ಇಲ್ಲದೆ ಕಾರನ್ನು ಚಲಾಯಿಸುತ್ತಿದ್ದು, ನಿಮ್ಮ ಕಾರು ಅಪಘಾತಕ್ಕೀಡಾದರೆ ವಿಮಾ ಕಂಪನಿ ನಿಮ್ಮ ಕ್ಲೈಮ್ ಅನ್ನು ತಿರಸ್ಕರಿಸುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

13 Comments

ಒಂಟೆಯ ಹಾಲು ತಾಯಿಯ ಹಾಲಿನಷ್ಟೇ ಪವಿತ್ರ

ಒಂಟೆಯ ಹಾಲು ತಾಯಿಯ ಹಾಲಿನಷ್ಟೇ ಪವಿತ್ರವಂತೆ

ಅಭಿಷೇಕ್ ಬಚ್ಚನ್ ಪ್ರಸಿದ್ಧ ಭಾರತೀಯ ನಟನ ಜನ್ಮದಿನ

ಫೆಬ್ರವರಿ 5, ಅಭಿಷೇಕ್ ಬಚ್ಚನ್ ಪ್ರಸಿದ್ಧ ಭಾರತೀಯ ನಟನ ಜನ್ಮದಿನ