in ,

ರುಚಿ ರಚಿಯಾದ ಅಡುಗೆ ಖಾದ್ಯಗಳನ್ನು ತಯಾರಿಸಬಹುದು ಆಲೂಗಡ್ಡೆಯಲ್ಲಿ

ಆಲೂಗಡ್ಡೆ
ಆಲೂಗಡ್ಡೆ

ಆಲೂಗಡ್ಡೆಯಲ್ಲಿ ರುಚಿಯಾದ ಖಾದ್ಯವನ್ನು ತಯಾರಿಸಬಹುದು, ಆದರೆ ಆಲೂಗಡ್ಡೆ ಎಂದ ತಕ್ಷಣ ಆಲೂಗಡ್ಡೆ ಅಸಿಡಿಟಿ,ಕೊಬ್ಬು…ಮುಂತಾದ ನೇವನಗಳು ಹೆಚ್ಚು. ಬಡವರಿಗೂ, ಬಳಲ್ಲಿದರಿಗೂ ಆಲೂಗಡ್ಡೆ ರುಚಿ ಅಂಟಿಕೊಂಡಿದೆ. ಆದ್ದರಿಂದ ಬಿ.ಜಿ.ಎಲ್.ಸ್ವಾಮಿಯವರು ಇದಕ್ಕೆ ‘ಕಲ್ಪಕಂದ’ ಎಂದು ಹೆಸರಿಸಿದ್ದಾರೆ. ಈ ಕಲ್ಪಕಂದವು ವಿದೇಶೀಯರ ದೈನಂದಿನ ಆಹಾರಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಕರ್ನಾಟಕದ ಹಲವು ಪ್ರದೇಶಗಲ್ಲಿ ಬಟಾಟೆ ಎಂದು ಕರೆಯಲ್ಪಡುವ ಈ ಹೆಸರು ಮೂಲದ ಪೊಟಾಟೋದಿಂದಲೇ ಬಂದದ್ದು. ನಾವು ಅಕ್ಕಿಯನ್ನೂ, ಉತ್ತರ ಭಾರತೀಯರು ಗೋಧಿಯನ್ನು ಬಳಸುವಂತೆ, ಬೇಯಿಸಿದ, ಬಾಡಿಸಿದ, ಹುರಿದ ಆಲೂ ಪಾಶ್ಚಾತ್ಯರಿಗೆ ಅನ್ನದಂತೆ.

ರುಚಿ ರಚಿಯಾದ ಅಡುಗೆ ಖಾದ್ಯಗಳನ್ನು ತಯಾರಿಸಬಹುದು ಆಲೂಗಡ್ಡೆಯಲ್ಲಿ
ಆಲೂಗಡ್ಡೆ

ಆಲೂಗಡ್ಡೆಯು ಸೊಲ್ಯಾನೇಸೀ ಕುಟುಂಬದ ಬಹುವಾರ್ಷಿಕ ಸಲೇನಮ್ ಟ್ಯೂಬರೋಸಮ್‌ನ ಒಂದು ಪಿಷ್ಟವುಳ್ಳ, ಗೆಡ್ಡೆ ಬೆಳೆ. ಆಲೂಗಡ್ಡೆ ಶಬ್ದ ಆ ಸಸ್ಯವನ್ನೂ ನಿರ್ದೇಶಿಸಬಹುದು. ಆಂಡೀಸ್‌ನ ಪ್ರದೇಶದಲ್ಲಿ, ಕೆಲವು ಇತರ ನಿಕಟವಾಗಿ ಸಂಬಂಧಿತ ಸಾಗುವಳಿ ಮಾಡಲಾದ ಆಲೂಗಡ್ಡೆ ಜಾತಿಗಳಿವೆ. ಆಲೂಗಡ್ಡೆಗಳು, ಅಕ್ಕಿ, ಗೋಧಿ, ಮತ್ತು ಮೆಕ್ಕೆ ಜೋಳದ ನಂತರ, ವಿಶ್ವದ ನಾಲ್ಕನೇ ಅತಿ ದೊಡ್ಡ ಆಹಾರ ಬೆಳೆಯಾಗಿವೆ.

ಆಲೂಗಡ್ಡೆ ನಮಗೆ ಗೊತ್ತಿರುವ ಹಾಗೆ ಎಲ್ಲ ತರಕಾರಿಗಳಲ್ಲಿ ಆಲೂಗಡ್ಡೆ ಅಂದ್ರೆ ಕೆಲವರಿಗೆ ಪಂಚಪ್ರಾಣ ಆಗಿರುತ್ತದೆ. ಈ ಆಲೂಗಡ್ಡೆಯನ್ನು ಉಪಯೋಗಿಸಿಕೊಂಡು ವಿವಿಧ ರೀತಿಯ ತಿಂಡಿ, ತಿನಿಸುಗಳನ್ನು ಮಾಡುತ್ತಾರೆ ಲೆಕ್ಕವೇ ಇಲ್ಲ. ಆಲೂಗಡ್ಡೆಯನ್ನು ಅಗತ್ಯವಾದ ಪೋಷಕಾಂಶಗಳು ಪೌಷ್ಟಿಕಾಂಶಗಳು ಹೊಂದಿರುವ ಜೊತೆಗೆ ಅಮೈನೋ ಆಮ್ಲಗಳು ಹೊಂದಿರುತ್ತದೆ. ಮತ್ತು ರುಚಿಯಲ್ಲಿ ತುಂಬಾ ಅದ್ಭುತವಾದ ಸ್ಥಾನ ಪಡೆದಿದ್ದು ತಿಂಡಿ ತಿನಿಸುಗಳಲ್ಲಿ ಬಳಸಬಹುದಾದ ತರಕಾರಿಯಾಗಿದೆ

ನಾವು ಸಾಮಾನ್ಯವಾಗಿ ಆಲೂಗಡ್ಡೆಯನ್ನು ಆರೋಗ್ಯಕರ ಆಹಾರವೆಂದು ಪರಿಗಣಿಸುವುದಿಲ್ಲ, ಆದರೆ ಫೈಬರ್, ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್ ಸೇರಿದಂತೆ ಹಣ್ಣುಗಳು ಮತ್ತು ತರಕಾರಿಗಳಿಂದ ನೀವು ಪಡೆಯುವ ಅದೇ ಪೋಷಕಾಂಶಗಳಲ್ಲಿ ಆಲೂಗಡ್ಡೆ ನಿಜವಾಗಿಯೂ ಸಮೃದ್ಧವಾಗಿವೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ಮತ್ತು ಕ್ಯಾನ್ಸರ್-ಉಂಟುಮಾಡುವ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಈ ಪೋಷಕಾಂಶಗಳಲ್ಲದೆ ಅವಶ್ಯಕ ಅಮೈನೋ ಆಮ್ಲಗಳು ಕೂಡ ಇರುವುದರಿಂದ ರುಚಿ ಹಿತರಕವಾಗಿದ್ದು ಎಲ್ಲಾ ತಿಂಡಿತಿನಿಸುಗಳಲ್ಲಿ ಬಳಸಬಹುದಾದ, ಸುಲಭವಾಗಿ ದೊರೆಯುವ, ಪ್ರಪಂಚದಾದ್ಯಂತ ಬಳಕೆಯಲ್ಲಿರುವ ಗೆಡ್ಡೆ ತರಕಾರಿ.

ಆಲೂಗಡ್ಡೆಯನ್ನು ೩ ಭಾಗಗಳಾಗಿ ವಿಂಗಡಿಸಬಹುದು.

ಮೊದಲನೆಯದು,ಮೇಲ್ಭಾಗದ ಸಿಪ್ಪೆ,ಎರಡನೆಯದು,ಸಿಪ್ಪೆಯ ಮೇಲ್ಬಾಗದಲ್ಲಿರುವ ತೆಳುವಾದ ಪೊರೆ,ಮೂರನೆಯದು, ಒಳ ಪಿಷ್ಟ ಭಾಗ.
ಮೊದಲನೆಯ ಭಾಗದಲ್ಲಿ ಖನಿಜಾಂಶಾ ಮತ್ತು ಜೀವಸತ್ವಗಳಿರುತ್ತವೆ.

ಎರಡನೆಯ ಪದರದಲ್ಲಿ ಸಸಾರಜನಕ ಮತ್ತು ವರ್ಣದ್ರವ್ಯ ಇರುತ್ತವೆ.
ಈ ವರ್ಣದ್ರವ್ಯ ನಾವು ಆಲೂಗಡ್ಡೆಯನ್ನು ಕತ್ತರಿಸಿದಾಗ ಗಾಳಿಯ ಸಂಪರ್ಕಕ್ಕೆ ಬಂದು ಆಲೂಗಡ್ಡೆಯ ಬಣ್ಣವನ್ನು ಬದಲಾಯಿಸುತ್ತದೆ.

ಮೂರನೇಯ ಭಾಗವು ಪಿಷ್ಟ ಮತ್ತು ನೀರಿನಿಂದ ಕೂಡಿರುತ್ತದೆ.
ಆದುದರಿಂದಲೇ ಆಲೂಗಡ್ಡೆಯ ಸಿಪ್ಪೆಯನ್ನು ತೆಗೆಯುದರಿಂದ ಅಥವಾ ತೊಳೆಯುದರಿಂದ ಪೋಷಕಾಂಶಗಳು ನಷ್ಟವಾಗಿ ಕೇವಲ ಪಿಷ್ಟ ಪದಾರ್ಥ ಮಾತ್ರ ಉಳಿಯುತ್ತದೆ.

ಆಲೂ ಪಾಯಸ:ಬೇಯಿಸಿದ ಆಲೂಗಡ್ಡೆಯನ್ನು ರುಬ್ಬಿ ಹಾಲಿಗೆ ಸೇರಿಸಿ ಕುದಿಸಿ, ರುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಬೇಕು.ಹುರಿದ ಗೋಡಂಬಿ ಮತ್ತು ದ್ರಾಕ್ಷಿ ಸೇರಿಸಬಹುದು. ಹೆಚ್ಚಿನ ರುಚಿ ಬೇಕಾದರೆ ಹಾಲಿನೊಂದಿಗೆ ಖೋವಾ ಸೇರಿಸಿದರೆ ವಿಶೇಷ ರುಚಿ ಬರುತ್ತದೆ.

ಆಲೂ ಹಲ್ವ : ಆಲೂಗಡ್ಡೆಯನ್ನು ಶುಚಿಮಾಡಿ ಬೇಯಿಸಿ ಚೆನ್ನಾಗಿ ಮಸೆದು ಸಕ್ಕರೆ ಬೆರೆಸಿ ಬಾಣಲೆಯಲ್ಲಿ ಹಾಕಿ ಒಲೆಯ ಮೇಲಿಟ್ಟು ಮಗಚುತ್ತಾ ತುಪ್ಪ ಸೇರಿಸಿದರೆ ಒಳ್ಳೆಯ ವಾಸನೆ ಬಂದು ಪಾತ್ರೆ ಬಿಡುವಾಗ ತುಪ್ಪ ಸವರಿದ ತಟ್ಟೆಗೆ ಹರಡಿ ಇಡಬೇಕು.ಆರಿದ ಮೇಲೆ ಬೇಕಾದ ಆಕಾರಕ್ಕೆ ಕತ್ತರಿಸಿ ಉಪಯೋಗಿಸಬವುದು.

ರುಚಿ ರಚಿಯಾದ ಅಡುಗೆ ಖಾದ್ಯಗಳನ್ನು ತಯಾರಿಸಬಹುದು ಆಲೂಗಡ್ಡೆಯಲ್ಲಿ
ಆಲೂ ಹಲ್ವ

ಆದರೂ ಆಲೂವನ್ನು ಸೇವಿಸುವುದರ ಬಗ್ಗೆ ಅನೇಕರು ಅಸಡ್ಡೆ ತೋರುತ್ತಾರೆ. ಕೆಲವರು ಆಲೂಗಡ್ಡೆಯನ್ನು ತಿಂದರೆ ವಾತ ಹೆಚ್ಚಾಗುತ್ತದೆ ಎಂದರೆ, ಮತ್ತೆ ಕೆಲವರು ಇದರಲ್ಲಿ ಕಾರ್ಬ್ ಪ್ರಮಾಣ ಹೆಚ್ಚಾಗಿದ್ದು, ಇದರಿಂದ ಬೊಜ್ಜು ಹೆಚ್ಚಾಗುತ್ತದೆ ಎಂದು ವಾದಿಸುತ್ತಾರೆ. ಆದರೆ ಅದೇ ಆಲೂಗೆಡ್ಡೆಯಲ್ಲಿ ಮನುಷ್ಯನಿಗೆ ಬೇಕಾಗಿರುವ ಅನೇಕ ಜೀವಸತ್ವಗಳು ಅಡಗಿವೆ ಎಂಬುದನ್ನು ನಂಬಬೇಕು.

ಆಲೂಗಡ್ಡೆಯ ಔಷಧೀಯ ಉಪಯೋಗಗಳು

ಆಲೂಗಡ್ಡೆ ಬೆಳೆಯಲು ನೀವು ಆಸಕ್ತಿ ಹೊಂದಿದ್ದರೆ ಜನವರಿ 26 ರಂದು ರಾಷ್ಟ್ರೀಯ ಆಲೂಗಡ್ಡೆ ದಿನ ಬರುತ್ತದೆ ಎಂದು ನಿಮಗೆ ತಿಳಿದಿರಬಹುದು. ನೀವು ತೋಟಗಾರಿಕೆ ಕ್ಲಬ್‌ನ ಸದಸ್ಯರಾಗಿದ್ದರೆ, ನೀವು ಸ್ಥಳೀಯ ಆಲೂಗೆಡ್ಡೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿರಬಹುದು, ಇವುಗಳಲ್ಲಿ ಹೆಚ್ಚಿನವು ಬ್ರಿಟನ್‌ನಲ್ಲಿ ಲಭ್ಯವಿರುವ ವಿವಿಧ ಆಲೂಗಡ್ಡೆಗಳನ್ನು ಆಚರಿಸಲು ಮತ್ತು ತಮ್ಮದೇ ತರಕಾರಿಗಳನ್ನು ಬೆಳೆಯಲು ಜನರನ್ನು ಪ್ರೋತ್ಸಾಹಿಸಲು ವಿನ್ಯಾಸಗೊಳಿಸಲಾಗಿದೆ.

ಆರೋಗ್ಯಕ್ಕೆ ಉಪಯುಕ್ತವಾದ ಆಲೂಗಡ್ಡೆಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಏನ್ನೆಲ್ಲ ಉಪಯೋಗಗಳು ಇವೆ ಎಂದು ತಿಳಿದುಕೊಳ್ಳೋಣ ಬನ್ನಿ. ವಿಟಮಿನ್ ಸಿ ಆಲೂಗಡ್ಡೆ ಸಿಪ್ಪೆಯಲ್ಲಿ ಹೆಚ್ಚಾಗಿ ಇರುವ ಕಾರಣ ಜೀವಸತ್ವದ ಕೊರತೆಯಿಂದ ಬಳಲುತ್ತಿದ್ದರೆ ಆಲೂಗಡ್ಡೆಯನ್ನು ಸಿಪ್ಪೆ ಸಹಿತ ತಿನ್ನುವುದು ಒಳ್ಳೆಯದು. ವಿಟಮಿನ್ ಡಿ ಕಾಂಪ್ಲೆಕ್ಸ್ ಹಾಗೂ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗಿರುತ್ತಿದೆ. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮತ್ತು ಆಲೂಗಡ್ಡೆಯನ್ನು ಫೈಬರ್ ಅಂಶ ಹೆಚ್ಚಾಗಿ ಇರುವುದರಿಂದ ಮಲಬದ್ಧತೆಯನ್ನು ನಿವಾರಿಸುತ್ತದೆ. ಹಾಗೂ ಜೀರ್ಣಕ್ರಿಯೇ ಸರಾಗವಾಗಿ ಆಗಲು ಸಹಾಯ ಮಾಡುತ್ತದೆ. ಮತ್ತು ಆಲೂಗಡ್ಡೆಯಲ್ಲಿ ವಿಟಮಿನ್ ಬಿ6 ಜೀವಸತ್ವವು ಮೆದುಳಿನ ಕ್ಷಮತೆಯನ್ನುಹೆಚ್ಚಿಸಿ ನೆನಪಿನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮುಖದ ಸೌಂದರ್ಯವನ್ನೂ ಹೆಚ್ಚಿಸಲು ಆಲೂಗಡ್ಡೆಯ ಫೇಸ್ ಪ್ಯಾಕ್ ಅನ್ನು ಬಳಸಲಾಗಿದೆ.

ರುಚಿ ರಚಿಯಾದ ಅಡುಗೆ ಖಾದ್ಯಗಳನ್ನು ತಯಾರಿಸಬಹುದು ಆಲೂಗಡ್ಡೆಯಲ್ಲಿ
ಆಲೂ ಮತ್ತು ಹಳದಿ ಫೇಸ್ ಪ್ಯಾಕ್

ಆಲೂ ಮತ್ತು ಹಳದಿ ಫೇಸ್ ಪ್ಯಾಕ್ ನಿಂದ ತ್ವಚೆಯ ಬಣ್ಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ಆಲೂಗಡ್ಡೆಯನ್ನು ಚಿಕ್ಕದಾಗಿ ತುಂಡು ಮಾಡಿಕೊಂಡು ಅದಕ್ಕೆ ಚಿಟಿಕೆ ಅರಿಶಿನ ಪುಡಿಯನ್ನು ಸೇರಿಸಿ ಮುಖಕ್ಕೆ ಹಚ್ಚಬೇಕು. ನಂತರ ಅರ್ಧ ಗಂಟೆ ಬಿಟ್ಟು ತನ್ನೀರಿನಿಂದ ತೊಳೆಯಬೇಕು. ಈ ರೀತಿ ವಾರದಲ್ಲಿ ಒಂದು ಸಾರಿ ಮಾಡಬೇಕು. ಇದರಿಂದ ಮುಖದ ಸೌಂದರ್ಯದಲ್ಲಿ ಬದಲಾವಣೆಯನ್ನೂ ಕಾಣಬಹುದು.

ಆಲೂಗಡ್ಡೆ ಕಡಿಮೆ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಹಾಯ ಮಾಡುತ್ತದೆ. ಇದರಲ್ಲಿ ಇರುವ ಪೊಟ್ಯಾಷಿಯಂ ಅಂಶವು ಕಡಿಮೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಆಲೂಗಡ್ಡೆಯಿಂದ ಹಲವಾರು ಲಾಭಗಳು ಇವೆ. ಆದ್ರೆ ಕೆಲವರಿಗೆ ಈ ತರಕಾರಿ ಸೂಕ್ತವಾಗಿದ್ದರೆ ಇನ್ನೂ ಕೆಲವರಿಗೆ ಸೂಕ್ತ ಅನ್ನಿಸುವುದಿಲ್ಲ. ಹಾಗಾದರೆ ಯಾರಿಗೆ ಆಲೂಗಡ್ಡೆ ದೇಹಕ್ಕೆ ಅನುಗುಣವಾಗಿ ಹೊಂದಾಣಿಕೆ ಆಗುತ್ತದೆ ಅಂಥವರು ಸೇವನೆ ಮಾಡಬೇಕು. ಥೈರಾಯಿಡ ಸಮಸ್ಯೆ ಇರುವವರು ಈ ಆಲೂಗಡ್ಡೆಯನ್ನು ಸೇವನೆ ಮಾಡದೆ ಇರುವುದು ಉತ್ತಮ.
ಧನ್ಯವಾದಗಳು.

What do you think?

-1 Points
Upvote Downvote

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

One Comment

ಅಪ್ಪು ಮಗಳು ವಂದಿತ ಎಸೆಸೆಲ್ಸಿ ಪರೀಕ್ಷೆಯ ರಿಸಲ್ಟ್.

ಅಪ್ಪು ಮಗಳು ವಂದಿತ ಎಸೆಸೆಲ್ಸಿ ಪರೀಕ್ಷೆಯ ರಿಸಲ್ಟ್.

ಇಂದು ಮೇ31 ಭಯಂಕರವಾದ ಮಂಗಳವಾರ 110ವರ್ಷಗಳ ನಂತರ ಈ5 ರಾಶಿಯವರಿಗೆ ತಾಯಿ ಚಾಮುಂಡೇಶ್ವರಿ ಕೃಪೆಯಿಂದ ಮುಟ್ಟಿದೆಲ್ಲ ಚಿನ್ನ

ಇಂದು ಮೇ31 ಭಯಂಕರವಾದ ಮಂಗಳವಾರ 110ವರ್ಷಗಳ ನಂತರ ಈ5 ರಾಶಿಯವರಿಗೆ ತಾಯಿ ಚಾಮುಂಡೇಶ್ವರಿ ಕೃಪೆಯಿಂದ ಮುಟ್ಟಿದೆಲ್ಲ ಚಿನ್ನ