in

ನಮ್ಮ ನಾಡಿನ ಜಲಧಾರೆಗಳು : ಹೇಮಾವತಿ

ನದಿ ಹೇಮಾವತಿ ಕರ್ನಾಟಕ ಪಶ್ಚಿಮ ಘಟ್ಟದಲ್ಲಿ ಹುಟ್ಟುತ್ತದೆ. ಕಾವೇರಿ ನದಿಯನ್ನು ಸೇರುವ ಮುನ್ನ  ಮುಖ್ಯ ಪಟ್ಟಣಗಳಾದ ಸಕಲೇಶಪುರ ಮತ್ತು ಹೊಳೆನರಸೀಪುರದಿಂದ ಹಾದುಹೋಗುತ್ತದೆ.

1979 ರಲ್ಲಿ ಹಾಸನ ಜಿಲ್ಲೆಯ ಗೊರೂರು ಎಂಬಲ್ಲಿ ಹೇಮಾವತಿ ನದಿಗೆ ಆಣೆಕಟ್ಟು ಕಟ್ಟಲಾಗಿದೆ. ಈ ಅಣೆಕಟ್ಟಿನ ಎತ್ತರ  58 ಮೀಟರ್ ಮತ್ತು 4692 ಮೀಟರ್ ಉದ್ದವಿದೆ. ಇದು 8502 ಹೆಕ್ಟಾರ್ ಜಲಾಶಯವಾಗಿದ್ದು ಸುಮಾರು 37.1 tmcft   ನೀರನ್ನು ಸಂಗ್ರಹಣೆ ಮಾಡಬಹುದು . ಈ ಜಲಾಶಯದ ನೀರನ್ನು ಹಾಸನ, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳಲ್ಲಿ ವ್ಯವಸಾಯಕ್ಕೆ ಬಳಸುತ್ತಾರೆ.

ಈ ಜಲಾಶಯದ ನೀರಿನ ಹೊರಹರಿವಿಗೆ 6  ಬಾಗಿಲುಗಳಿವೆ. ಮಳೆಗಾಲದಲ್ಲಿ ನೀರಿನ ಹರಿವು ಹೆಚ್ಚು ಇರುವುದರಿಂದ ಪ್ರವಾಸಿಗರಿಗೆ ಕೂಗಿ ಕರೆದಂತಿರುತ್ತದೆ . ಮೂಡಿಗೆರೆ ತಾಲೂಕಿನ ಜಾವಳಿ ಎಂಬುದು ಹೇಮಾವತಿ ನದಿಯ ಉಗಮ ಸ್ಥಾನ. ಹಾಸನ ಜಿಲ್ಲೆಯ ಜನರ ಜೀವನದಿ ನಮ್ಮ ಹೇಮಾವತಿ.

ನಮ್ಮ ನಾಡಿನ ಜಲಧಾರೆಗಳು : ಹೇಮಾವತಿ

ಮುಂಗಾರಿನಲ್ಲಿ ಮೈದುಂಬಿ ಹರಿಯುವ ಹೇಮಾವತಿ ರೈತರ ಜೀವನಾಡಿ. ಹೆಚ್ಚಿನ  ರೈತರು ನದಿಯ ನೀರನ್ನ ತಮ್ಮ ವ್ಯವಸಾಯಕ್ಕೆ ಅವಲಂಬಿಸಿದ್ದಾರೆ. ತನ್ನ ಉಗಮ ಸ್ಥಾನದಿಂದ ಹೇಮಾವತಿ ನದಿಯ ಉದ್ದ ಸುಮಾರು 245 kmನಷ್ಟಿದೆ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ರಾವಣ- ಅದ್ಭುತ ಚಕ್ರವರ್ತಿ ಮತ್ತು ಉತ್ತಮ ನಾಯಕ

ಭಾರತದ ಪವಿತ್ರ ಮತ್ತು ಪ್ರಾಚೀನ ನದಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟ ನದಿ ಸರಸ್ವತಿ