in , ,

ಚಳಿಗಾಲದಲ್ಲಿ ಆರೋಗ್ಯಕ್ಕೆ ಹಿತವಾದ ಐದು ಬಗೆಯ ಹಣ್ಣುಗಳು

ಐದು ಬಗೆಯ ಹಣ್ಣುಗಳು
ಐದು ಬಗೆಯ ಹಣ್ಣುಗಳು

ಈಗಾಗಲೇ ಚಳಿಗಾಲ ಶುರುವಾಗಿದೆ….ಚರ್ಮ ಒಣಗುವುದು, ನಿರ್ಜಲೀಕರಣ ಸಾಮಾನ್ಯ ಸಮಸ್ಯೆಯಾಗಿದೆ. ಹಣ್ಣುಗಳ ಪ್ರಯೋಜನ ಅಂತೂ ಗೊತ್ತು. ಆದರೆ ಚಳಿಗಾಲದಲ್ಲಿ. ಸಿಗುವ ಕೆಲವು ಹಣ್ಣುಗಳು ಮತ್ತು ಅವುಗಳ ಪ್ರಯೋಜನಗಳನ್ನು ಮತ್ತೊಮ್ಮೆ ನೆನಪಿಸಿಕೊಳ್ಳೋಣ.

 ಸದ್ಯಕ್ಕೆ ಚಳಿಗಾಲದಲ್ಲಿ ಸಿಗುವ ಐದು ಬಗೆಯ  ಹಣ್ಣುಗಳು ಮತ್ತು ಅವುಗಳ ಪ್ರಯೋಜನಗಳು ತಿಳಿಯೋಣ

1. ಸೀತಾಫಲ ಹಣ್ಣು: 

ಚಳಿಗಾಲದಲ್ಲಿ ಆರೋಗ್ಯಕ್ಕೆ ಹಿತವಾದ ಐದು ಬಗೆಯ ಹಣ್ಣುಗಳು
ಸೀತಾಫಲ ಹಣ್ಣು

 ಸೀತಾಫಲ ಹಣ್ಣು ರುಚಿಕರ ಹಾಗೂ ಪಚನಕಾರಿಯಾಗಿ ಒಳ್ಳೆಯ ಬೇಡಿಕೆ ಹೊಂದಿದೆ. ಇದರ ಬೀಜ ಹಾಗೂ ಎಲೆಗಳು ಕೀಟನಿರೋಧಕ ಗುಣಗಳನ್ನು ಹೊಂದಿದೆ. ಇದು

ಔಷದೀಯ ಗುಣಗಳು :

ಸೀತಾಫಲದ ಎಲೆಗಳನ್ನು ನುಣ್ಣಗೆ ಅರೆದು ಕುರು, ಗಡ್ಡೆ(ಗ್ರಂಥಿ)ಗಳಿಗೆ ಹಚ್ಚಿದರೆ ಆರಿ ಅಥವಾ ಸಣ್ಣದಾಗಿ ಸೋರಿಹೋಗುತ್ತದೆ. ಇದೇ ಎಲೆಗಳನ್ನು ಅರೆದು ಹಚ್ಚಿದರೆ ಬೆಂಕಿ ಬರುವುದು. ನವೆ(ದಡಿಕೆ) ಗುಣವಾಗುತ್ತದೆ. ೩ ರಿಂದ ೬ ದಿವಸ.

ಜ್ವರ, ಕೆಮ್ಮುದಮ್ಮಿಗೆ : 

ಸೀತಾಫಲದ ಗಿಡದ ತೊಗಟೆ ೧ ತೊಲೆ ಜಜ್ಜಿ ೪ ಕುಡ್ತೆ ನೀರು ಬತ್ತಿಸಿ ೧ ಕುಡ್ತೆ ಮಾಡಿ ಆರಿಸಿ ಇಟ್ಟುಕೊಂಡು ದಿನಕ್ಕೆ ೩-೪ ಸಲ ಜೇನು ಕುಡಿದರೆ ಜ್ವರ, ಕೆಮ್ಮ, ಗೂರಲು(ಉಬ್ಬಸ) ಗುಣವಾಗಿ ನಿತ್ರಾಣ ಕಮ್ಮಿಯಾಗುತ್ತದೆ. ರೋಗಕ್ಕನುಸರಿಸಿ ಕೆಲವು ದಿವಸಗಳ ವರೆಗೆ ಸೇವಿಸುತ್ತಾ ಬರುವುದು.

ಹುಣ್ಣು, ಗಾಯಗಳಿಗೆ : 

ಸೀತಾಫಲದ ಎಲೆ ತಂದು ಒಣಗಿಸಿ ಬಾಣಲೆಯಲ್ಲಿ ಹಾಕಿ ಕರಕಾಗುವಂತೆ ಹುರಿದು ಹುಡಿಮಾಡಿಟ್ಟುಕೊಡು ಗಾಯಕ್ಕೆ ಹಾಕಿದರೆ, ಗುಣವಾಗುತ್ತದೆ. ಹುಡಿಯನ್ನು ವ್ಯಾಸಲೀನ್ ಹಾಕಿ ಮುಲಾಮಿನಂತೆ ಮಾಡಿಟ್ಟು ಹುಣ್ಣುಗಳಿಗೆ ಹಚ್ಚುತ್ತ ಬಂದರೆ ಹುಣ್ಣುಗಳು ಮಾಯುತ್ತವೆ.

ಮೈಯಲ್ಲಿ ಹುಣ್ಣುಹುಳ ಆದರೆ; ದನಗಳ ಹುಳಕ್ಕೂ

ಸೀತಾಫಲದ ಎಲೆಗಳನ್ನು ತಂದು ಒಣಗಿಸಿ ಸಮಭಾಗ ಹೊಗೆ ಸಪ್ಪು ಸೇರಿಸಿ ಬಾಣಲೆಯಲ್ಲಿ ಹಾಕಿ ಬೂದಿ ಆಗುವ ವರೆಗೆ ಹುರಿದು ೧/೩ ಭಾಗದಷ್ಟು ಸುಣ್ಣದ ಹುಡಿ ಹಾಕಿ ಕಲಸಿ ಹಚ್ಚಿಕೊಳ್ಳಬೇಕು.

2. ಪೇರಳೆ ಹಣ್ಣು

ಚಳಿಗಾಲದಲ್ಲಿ ಆರೋಗ್ಯಕ್ಕೆ ಹಿತವಾದ ಐದು ಬಗೆಯ ಹಣ್ಣುಗಳು
ಸೀಬೆ ಹಣ್ಣು , ಪೆರ್ಲ ಹಣ್ಣು, ಗುವಾವ್ ಫ್ರುಟ್

ಇದನ್ನು ಸೀಬೆ ಹಣ್ಣು , ಪೆರ್ಲ ಹಣ್ಣು, ಗುವಾವ್ ಫ್ರುಟ್ ಅಂತೆಲ್ಲಾ ಕರೆಯುತ್ತಾರೆ. ಇದರಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ದೇಹದ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಮಾಡುತ್ತದೆ. ಅಲ್ಲದೆ ದೇಹದಲ್ಲಿ ಉಂಟಾಗುವ ಉತ್ಕರ್ಷಣ ಕ್ರಿಯೆಯನ್ನು ನಿಯಂತ್ರಿಸುವ ಶಕ್ತಿ ಹೊಂದಿದೆ.

ಸೀಬೆ ಹಣ್ಣಿನಲ್ಲಿ ನಮಗೆ ಅಗತ್ಯವಾದ ವಿಟಮಿನ್ ಸಿ, ಪೊಟ್ಯಾಷಿಯಂ, ವಿಟಮಿನ್ ಎ ಮತ್ತು ಅಗತ್ಯ ಪೋಷಕಾಂಶಗಳು ಹೇರಳವಾಗಿದೆ. ಇದನ್ನು ನಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಅಗಾಧಪ್ರಮಾಣದಲ್ಲಿ ಬದಲಾವಣೆಗಳನ್ನು ಕಾಣಬಹುದಾಗಿದೆ. 

ಪೇರಲ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ. ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ರೋಗಕಾರಕಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ಶೀ, ಜ್ವರ, ಕೆಮ್ಮುಗಳಂತಹ ಚಿಕ್ಕ ಪುಟ್ಟ ತೊಂದರೆಗಳಿಂದ ದೂರವಾಗಬಹುದು.

ವಿಟಮಿನ್ ಸಿ ದೇಹದ ಜೀವಕೋಶಗಳನ್ನು ಹಾನಿಗೊಳಗಾಗದಂತೆ ತಡೆಯುತ್ತದೆ. ಇದರಿಂದಾಗಿ ಕ್ಯಾನ್ಸರ್, ಸಂಧಿವಾತ ಮತ್ತು ಹೃದ್ರೋಗದಂತಹ ಗಂಭೀರ ಕಾಯಿಲೆಗಳಿಂದ ದೂರವಿರಿಸುತ್ತದೆ.

3. ದಾಳಿಂಬೆ ಹಣ್ಣು

ಚಳಿಗಾಲದಲ್ಲಿ ಆರೋಗ್ಯಕ್ಕೆ ಹಿತವಾದ ಐದು ಬಗೆಯ ಹಣ್ಣುಗಳು
ದಾಳಿಂಬೆ ಹಣ್ಣು

ದಾಳಿಂಬೆಯು ಹೃದಯಕ್ಕೆ ಒಳ್ಳೆಯದು ಹಾಗೂ ದೇಹಶಕ್ತಿ ವರ್ಧಕ, ಅತಿಸಾರದಲ್ಲಿ ಬಹಳ ಪ್ರಯೋಜನಕಾರಿ. ಬಾಯಿ ರುಚಿಯನ್ನೂ ವೃದ್ದಿಸಬಲ್ಲದು.

ಉಪಯೋಗಗಳು :

ಇದರ ಹಣ್ಣು ರುಚಿಕರವಾಗಿದ್ದು, ತಿನ್ನಲು ಹಾಗೂ ಪಾನೀಯ ತಯಾರಿಸಲು ಉಪಯೋಗಿಸುತ್ತಾರೆ. ಹಣ್ಣಿನ ಸಿಪ್ಪೆ,ತೊಗಟೆ, ಬೀಜ ಹಾಗೂ ಎಲೆಗಳು ಔಷಧಿಗಳಲ್ಲಿ ಬಳಸಲ್ಪಡುತ್ತವೆ. ದಾರುವು ಸಣ್ಣ ಕಣರಜನೆ ಹೊಂದಿದ್ದು,ಕೈ ಬೆತ್ತ, ಉಪಕರಣಗಳ ಹಿಡಿ ಇತ್ಯಾದಿಗಳ ತಯಾರಿಕೆಯಲ್ಲಿ ಉಪಯೋಗಿಸಲ್ಪಡುತ್ತದೆ.

ಪ್ರತಿದಿನ ದಾಳಿಂಬೆ ಸೇವಿಸಿದರೆ, ಇದರಲ್ಲಿರುವ ವಿಟಮಿನ್ ಸಿ, ಆಂಟಿ ಆಕ್ಸಿಡೆಂಟ್ ಮತ್ತು ಉರಿಯೂತದ ಮತ್ತು ಆಂಟಿವೈರಲ್ ಗುಣಗಳು ಅನೇಕ ರೋಗಗಳಿಂದ ರಕ್ಷಿಸುತ್ತದೆ. ತಜ್ಞರ ಪ್ರಕಾರ, ದಾಳಿಂಬೆಯ ಔಷಧೀಯ ಗುಣಗಳಿಂದಾಗಿ, ಇದು ಅಪಾಯಕಾರಿ ರೋಗಗಳು ಬರದಂತೆ ತಡೆಯಬಲ್ಲದು. ದಾಳಿಂಬೆ ನಮ್ಮ ದೇಹವನ್ನು ಆರೋಗ್ಯವಾಗಿರಿಸುವುದಲ್ಲದೆ, ನಮ್ಮ ಕೂದಲು ಮತ್ತು ಚರ್ಮವನ್ನು ಸಹ ಆರೋಗ್ಯವಾಗಿರಿಸುತ್ತದೆ. 

ಹೂ ಮತ್ತು ಚಿಗುರಿನ ಕಷಾಯ ರಕ್ತಭೇದಿಗೆ ಒಳ್ಳೆಯದು.

ಬೇರಿನ ಚಕ್ಕೆಯ ಕಷಾಯದಿಂದ ಲಾಡಿ ಹುಳುವಿನ ಸಮಸ್ಯೆ ನಿವಾರಣೆ ಆಗುತ್ತದೆ.

ಬೇರನ್ನು ಅರೆದು ಹಣೆಗೆ ಲೇಪಿಸಿದರೆ ಉಷ್ಣದ ತಲೆನೋವು ವಾಸಿಯಾಗುತ್ತದೆ.

ಮೊಗ್ಗುಗಳನ್ನು ಒಣಗಿಸಿ ದಿನಕ್ಕೆ ಎರಡು ಹೊತ್ತು ಗುಲಗಂಜಿಯಷ್ಟು ಸೇವಿಸುವುದು ಕೆಮ್ಮು ಗುಣವಾಗುವುದಕ್ಕೆ ಸಹಕಾರಿಯಾಗಿದೆ.

ಚಿಗುರಿನ ಎಲೆಯ ಕಷಾಯವನ್ನು ನಿಯಮಿತವಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಗ್ಯಾಸ್ಟ್ರಿಕ್‍ಟ್ರಬಲ್ ನಿವಾರಣೆಯಾಗುವುದು.

ಚಿಗುರು ಎಲೆಗಳ ಕಷಾಯವನ್ನು ಮುಕ್ಕಳಿಸುವುದರಿಂದ ಬಾಯಿಹುಣ್ಣು ಗುಣವಾಗುವುದು.

4. ಕಿತ್ತಳೆ ಹಣ್ಣು

ಚಳಿಗಾಲದಲ್ಲಿ ಆರೋಗ್ಯಕ್ಕೆ ಹಿತವಾದ ಐದು ಬಗೆಯ ಹಣ್ಣುಗಳು
ನಾಗ್ಪುರ ಕಿತ್ತಳೆ ಹಣ್ಣು

 ಕಿತ್ತಳೆಯಲ್ಲಿ ಒಂದು ನೂರಕ್ಕೂ ಹೆಚ್ಚು ಬಗೆಗಳಿವೆ. ಮೆಡಿಟರೇನಿಯನ್ ಪ್ರದೇಶದಲ್ಲಿ ಬೆಳೆಯಲಾಗುವ ಜಾಫ, ಶಮೂಟಿ, ಬೆಲ್ಲಾಡಿ, ಅಮೆರಿಕದ ಫ್ಲಾರಿಡದಲ್ಲಿ ಬೆಳೆಯಲಾಗುವ ಡ್ಯಾನ್ಸಿ ಟ್ಯಾಂಜರಿನ್, ದಿ ಟೆಂಪಲ್, ಜಪಾನ್ ದೇಶದ ಮೂಲವಾಸಿಯಾದ ಸಾಟ್ಸುಮ, ಭಾರತದ ನಾಗಪುರಿ, ಕೊಡಗು, ಉನ್ಷು ಮತ್ತು ಕುನ್ಷು ಬಗೆಗಳು ಮುಖ್ಯವಾದುವು. ಶಮೂಟಿ ಬಗೆಯಲ್ಲಿ ಬೀಜಗಳಿಲ್ಲ. ಸಾಟ್ಸುಮ ಬಗೆ ಬೇರಾವ ಬಗೆಗಳಿಗಿಂತ ಹೆಚ್ಚು ಚಳಿಯನ್ನು ತಡೆದುಕೊಳ್ಳಬಲ್ಲುದು. ಭಾರತದ ನಾಗಪುರಿ ಕಿತ್ತಳೆ ಕೊಡಗಿನ ಬಗೆಗಿಂತ ಹೆಚ್ಚು ರುಚಿಯುಳ್ಳದ್ದು. ಉನ್ಷು ಮತ್ತ ಕುನ್ಷು ಬಗೆಗೆಳು ಪರದೇಶದಿಂದ ಬಂದಿರುವ ಮಿಶ್ರ ಜಾತಿಯವು; ಕಿತ್ತಳೆರಸದ ಉತ್ಪಾದನೆಗೆ ಮಾತ್ರ ಉಪಯುಕ್ತವಾಗಿವೆ. ಇವುಗಳಲ್ಲೂ ಬೀಜಗಳಿಲ್ಲ.

ಉಪಯೋಗಗಳು:

ಕಿತ್ತಳೆಯಲ್ಲಿ ಸಿಟ್ರಸ್ ಲೆಮನಾಯ್ಡ್ ಅಂಶ ಹೇರಳವಾಗಿರುವುದರಿಂದ ಚರ್ಮ, ಶ್ವಾಸಕೋಶ, ಹೊಟ್ಟೆ ಮತ್ತು ಹಲವಾರು ಬಗೆಯ ಕ್ಯಾನ್ಸರ್ ಅನ್ನು ದೂರವಿರಿಸುತ್ತದೆ.

ಕಿತ್ತಳೆಯ ರಸವನ್ನು ಕುಡಿಯುವುದರಿಂದ ಕಿಡ್ನಿಯಲ್ಲಿನ ಕಲ್ಲುಗಳು ಕರಗಲು ಸಹಾಯವಾಗುವುದರ ಜೊತೆಗೆ ಕಿಡ್ನಿಗೆ ಸಂಬಂಧ ಪಟ್ಟ ತೊಂದರೆಗಳನ್ನು ದೂರವಿರಿಸುತ್ತದೆ.

ನಾರಿನಾಂಶ ಹೇರಳವಾಗಿರುವುದರಿಂದ ಮಲಬದ್ಧತೆಯನ್ನು ದೂರಮಾಡುತ್ತದೆ.

ಕಿತ್ತಳೆಯಲ್ಲಿರುವ ಪಾಲಿಫೆನಾಲ್ ವೈರಸ್ ಸೋಂಕನ್ನು ಎದುರಿಸಲು ಸಹಾಯಕವಾಗಿದೆ.

ಕಿತ್ತಳೆಯಲ್ಲಿರುವ ವಿಟಮಿನ್ ಸಿ ಕೂದಲಿನ ಪೋಷಣೆಗೆ ಬೇಕಾದ ಕೊಲಾಜಿನ್ ವೃದ್ಧಿಗೆ ಸಹಾಯಕ, ಅಂತೆಯೇ ಕೂದಲು ಉದುರುವುದನ್ನು ತಪ್ಪಿಸುತ್ತದೆ.

ಈ ಹಣ್ಣು ಶ್ವಾಸಕೋಶದ ಆರೋಗ್ಯವನ್ನು ಕಾಪಾಡುತ್ತದೆ.

ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಸೋಂಕು ಮತ್ತು ರೋಗಗಳಿಂದ ನಿಮ್ಮನ್ನೂ ದೂರವಿರಿಸುವಲ್ಲಿ ಸಹಾಯಕವಾಗಿರುತ್ತದೆ.

5. ದ್ರಾಕ್ಷಿ  ಹಣ್ಣು

ಚಳಿಗಾಲದಲ್ಲಿ ಆರೋಗ್ಯಕ್ಕೆ ಹಿತವಾದ ಐದು ಬಗೆಯ ಹಣ್ಣುಗಳು
ದ್ರಾಕ್ಷಿ  ಹಣ್ಣು

ಈ ಚಳಿಗಾಲದಲ್ಲಿ ಕಂಡುಬರುವ, ಪ್ರಮುಖ ಹಣ್ಣುಗಳಲ್ಲಿ ಹಸಿರು ದ್ರಾಕ್ಷಿ ಕೂಡ ಒಂದು. ಸ್ವಲ್ಪ ಹುಳಿ ಹಾಗೂ ಸಿಹಿ ಅನುಭವ ನೀಡುವ ದ್ರಾಕ್ಷಿ ತಿನ್ನುವ ಪ್ರಯೋಜನಗಳು.

ದ್ರಾಕ್ಷಿ ತಿನ್ನುವುದು ಕರುಳಿನ ಚಲನೆಗೆ ಸಹಾಯ ಮಾಡುತ್ತದೆ. ದ್ರಾಕ್ಷಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಕರುಳಿನ ಚಾಲನೆ ಸುಲಭವಾಗುತ್ತದೆ. ಇದರಿಂದ ಸುಲಭವಾಗಿ ಆಹಾರ ಜೀರ್ಣಗೊಳ್ಳುತ್ತದೆ. ದೇಹದ ಮೇಲೆ ತಣ್ಣನೆಯ ಪರಿಣಾಮವನ್ನು ಬೀರುತ್ತದೆ. ಉಷ್ಣ ದೇಶವನ್ನು ಹೊಂದಿರುವ ಜನರು ಇದನ್ನು ಸೇವಿಸಿದರೆ ಆರೋಗ್ಯಕ್ಕೆ ಉತ್ತಮ ಪರಿಣಾಮ ಬೀರುತ್ತದೆ. 

ದೇಹದಲ್ಲಿ ರಕ್ತದ ಸಂಚಾರ ಸರಿಯಾಗಿ ನಡೆದರೆ ಮಾತ್ರ, ಆರೋಗ್ಯದಲ್ಲಿ ನಮಗೆ ಯಾವುದೇ ತೊಂದರೆ ಇರುವುದಿಲ್ಲ. ಇಲ್ಲದಿದ್ದರೆ, ಹೃದಯ ರಕ್ತನಾಳದಲ್ಲಿ ಸಮಸ್ಯೆಗಳು ಕಾಣಲು ಶುರುವಾಗುತ್ತದೆ.

ಇದರ ಜೊತೆಗೆ ಕಾಣಿಸಿಕೊಳ್ಳುವ ಈ ಕೆಟ್ಟ ಕೊಲೆಸ್ಟ್ರಾಲ್ಅಂಶ ಹೃದಯದ ಕಾರ್ಯಚಟುವಟಿಕೆಗೆ ಇನ್ನಷ್ಟು ಸಮಸ್ಯೆ ಕೊಡುತ್ತದೆ. ಹೀಗಾಗಿ ದ್ರಾಕ್ಷಿ ಹಣ್ಣುಗಳ ಸೇವನೆ ಮಾಡುವುದು ಆರೋಗ್ಯಕ್ಕೆ ಹಿತಕರ. ಅಲ್ಲದೇ ಇದು ಹೃದಯದ ಆರೋಗ್ಯವನ್ನು ಅಚ್ಚುಕಟ್ಟಾಗಿ ಕಾಪಾಡುತ್ತದೆ.

ದ್ರಾಕ್ಷಿ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ಅಷ್ಟೇ ರುಚಿಕರ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳು ಹೃದಯಾಘಾತ, ರಕ್ತ ಹೆಪ್ಪುಗಟ್ಟುವಿಕೆ ಮುಂತಾದ ಸಮಸ್ಯೆಗಳಿಂದ ರಕ್ಷಿಸಲು ಕೆಲಸ ಮಾಡುತ್ತದೆ. ಇದಲ್ಲದೆ, ಇದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ.

ದ್ರಾಕ್ಷಿಯ ಸೇವನೆಯು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯಕವಾಗಿದೆ. ದ್ರಾಕ್ಷಿಯನ್ನು ಸೇವಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ಬಲಪಡಿಸಬಹುದು. ಬಲವಾದ ರೋಗನಿರೋಧಕ ಶಕ್ತಿಯು ದೇಹವನ್ನು ಅನೇಕ ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ದ್ರಾಕ್ಷಿಯನ್ನು ಕಣ್ಣುಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ವಿಟಮಿನ್ ಎ ದ್ರಾಕ್ಷಿಯಲ್ಲಿ ಹೇರಳವಾಗಿ ಕಂಡು ಬರುತ್ತದೆ. ಇದು ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಯನ್ನು ನಿವಾರಿಸಲು, ನಿಮ್ಮ ಆಹಾರದಲ್ಲಿ ದ್ರಾಕ್ಷಿಯನ್ನು ಸೇರಿಸಿಕೊಳ್ಳಬಹುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಮೊಟ್ಟೆ ಇಡುವ ಪ್ರಾಣಿ

ಮರಿ ಬದಲಿಗೆ ಮೊಟ್ಟೆ ಇಡುವ ಪ್ರಾಣಿಗಳು

ಕಪ್ಪೆಗಳ ಬಗ್ಗೆ

ಕಪ್ಪೆಗಳ ಬಗ್ಗೆ ವಿವರಣೆ