in

ಬ್ರೆಡ್ ನವಶಿಲಾಯುಗದ ಆಹಾರದ ಚಕ್ರದಲ್ಲಿ ಸೇರಿದೆ

ಬ್ರೆಡ್
ಬ್ರೆಡ್

ಸಾಮಾನ್ಯವಾಗಿ ಬ್ರೆಡ್ ಶಬ್ದವು ರೊಟ್ಟಿ ಎಂಬ ಅರ್ಥಕ್ಕಿಂತ ಹೆಚ್ಚಾಗಿ ಇಂಗ್ಲಿಷ ಉಚ್ಚಾರಣೆಯನ್ನೇ ಎಲ್ಲೆಡೆ ಪ್ರಚಲಿತಗೊಳಿಸಿದೆ. ಬ್ರೆಡ್ ಒಂದು ವ್ಯಾಪಾರಿ ಆಹಾರದ ಸರಕು ಎನ್ನುವಂತೆ ಮಾರಲಾಗುತ್ತದೆ. ಇದನ್ನು ಹಿಟ್ಟಿನಲ್ಲಿ ಮಾಡಿದ ಕಣಕವನ್ನು ನಿರಂತರವಾಗಿ ನಾದಿ ಅದನ್ನು ನೀರು ಬೆರೆಸಿದ ವಿವಿಧ ಮಸಾಲೆ ಪದಾರ್ಥಗಳ ಮಿಶ್ರಣದೊಂದಿಗೆ ಬೇಯಿಸುವುದರ ಮೂಲಕ ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ಈ ನಾದಿದ ಕಣಕವನ್ನು ಕಾವಲಿಯಲ್ಲಿಟ್ಟು ಸುಡುವ ಅಥವಾ ಬೇಯಿಸುವ ಪ್ರಕ್ರಿಯೆ ನಡೆಯುತ್ತದೆ. ಇನ್ನು ಕೆಲವು ಅಡುಗೆ ಮನೆಗಳಲ್ಲಿ ಬ್ರೆಡ್ ಗಳನ್ನು ಹಬೆ ಮೇಲೆ, ಕೆಂಡದ ಮೇಲೆ ಸುಡಲಾಗುತ್ತದೆ. ಇಲ್ಲವೆ ತೈಲ ರಹಿತ ಬಾಣಲೆ ಅಥವಾ ತವೆ ಮೇಲೆ ಸಿದ್ದಗೊಳಿಸಲಾಗುತ್ತದೆ. ಇದರ ತಯಾರಿಕೆಯಲ್ಲಿ ಹುಳಿ ಪದಾರ್ಥವನ್ನು ಸೇರಿಸಬಹುದು ಅಥವಾ ಸೇರಿಸದೇ ಇರಬಹುದು. ಉಪ್ಪು, ಕೊಬ್ಬಿನಾಂಶ ಮತ್ತುಹುಳಿಯಾಗುವ ಪದಾರ್ಥ ಗಳು ಉದಾಹರಣೆಗೆ ಈಸ್ಟ್ ಮತ್ತು ಅಡುಗೆ ಸೋಡಾ ಇವು ಸಾಮಾನ್ಯ ಘಟಕಾಂಶಗಳೆನಿಸಿವೆ. ಆದರೂ ಬ್ರೆಡ್ ಇನ್ನಿತರ ಪದಾರ್ಥ ಅಂಶಗಳನ್ನೂ ಒಳಗೊಂಡಿರುತ್ತದೆ. ಉದಾಹರಣೆಗೆ ಹಾಲು, ಮೊಟ್ಟೆ, ಸಕ್ಕರೆ, ಮಸಾಲೆ, ಹಣ್ಣು ತರಕಾರಿಗಳು, ನೆಲಗಡಲೆ ಅಥವಾ ದ್ವಿದಳ ಬೀಜಗಳು ಬ್ರೆಡ್ ಅತ್ಯಂತ ಹಳೆಯದಾದ ಬೇಯಿಸಿದ ಆಹಾರಗಳಲ್ಲಿ ಒಂದಾಗಿದೆ. ಇದನ್ನು ನವಶಿಲಾಯುಗದ ಹಿಂದೆಯೂ ಗುರುತಿಸಲಾಗಿದೆ. ಇದನ್ನು ಆಡು ಮಾತಿನಲ್ಲಿ “ದಿನ ನಿತ್ಯದ ಬದುಕಿನ ಬುತ್ತಿ” ಎಂದೂ ಹೇಳುವ ವಾಡಿಕೆ ಇದೆ. ಬ್ರೆಡ್ ತಯಾರಿಕೆಯಲ್ಲಿ ಹುಳಿ ಬೆರಸುವಿಕೆಯು ಅರ್ವಾಚೀನ ಇತಿಹಾಸದ ವೇಳೆಗೆ ಪ್ರಚಲಿತದಲ್ಲಿತ್ತು. ತಾಜಾ ಬ್ರೆಡ್ ಅದರ ರುಚಿ, ಸುವಾಸನೆ, ಗುಣಮಟ್ಟ, ಅದರ ಗೋಚರತೆ ಮತ್ತು ಅದರ ಮೃದು ಎಳೆಯ ರಚನೆಯ ಮೇಲೆ ಅದರ ಜನಪ್ರಿಯತೆ ಪಡೆಯುತ್ತದೆ. ಅದರ ತಾಜಾತನವನ್ನು ಕಾಯ್ದುಕೊಳ್ಳುವಲ್ಲಿ ಅದರ ರುಚಿ ಮತ್ತು ಮಹತ್ವ ಅಡಗಿದೆ. ಗಟ್ಟಿಯಾದ ಅಥವಾ ಒಣಗಿ ಹೋದ ಅದನ್ನು ತಂಗಳು ಎನ್ನಲಾಗುತ್ತದೆ. ಆಧುನಿಕ ಬ್ರೆಡ್ ನ್ನು ಹಲವು ಬಾರಿ ವಿಶೇಷ ಕಾಗದ ಅಥವಾ ಪ್ಲ್ಯಾಸ್ಟಿಕ್ ತೆಳು ಹಾಳೆಯಂತಹ ಅಥವಾ ಬ್ರೆಡ್ ಬಾಕ್ಸ್ ನಲ್ಲಿಟ್ಟು ಅದನ್ನು ಒಣಗದಂತೆ ತಡೆಯಲಾಗುತ್ತದೆ. ಬೆಚ್ಚಗಿನ,ಆರ್ದ್ರ ವಾತಾವರಣದಲ್ಲಿಟ್ಟ ಬ್ರೆಡ್ ಸಾಮಾನ್ಯವಾಗಿ ಫಂಗಸ್ ಅಥವಾ ಬೂಸ್ಟ್ ನಂತಹ ಎಳೆಯನ್ನು ಅದರ ಮೇಲೆ ಬೆಳೆಯುವಂತೆ ಮಾಡುವುದು ಸಹಜ. ಶೀತ ಪೆಟ್ಟಿಗೆಯ ಕಡಿಮೆ ಉಷ್ಣತೆಯಲ್ಲಿಟ್ಟ ಬ್ರೆಡ್, ಕೊಠಡಿಯ ಉಷ್ಣತೆಯಲ್ಲಿಟ್ಟ ಬ್ರೆಡ್ ಗಿಂತ ಕಡಿಮೆ ವೇಗದಲ್ಲಿ ಹಾಳಾಗುತ್ತದೆ. ಇಲ್ಲಿ ಅದರ ಬೇಗ ಹಾಳಾಗುವ ಗುಣದಿಂದಾಗಿ ಅದು ನಿರುಪಯುಕ್ತವಾಗುತ್ತದೆ. ಬ್ರೆಡ್ ಒಳಗಿನ ಭಾಗವನ್ನು ಬೇಯಿಸಿದ ಮತ್ತು ಇನ್ನುಳಿದ ಪಾಕ ಪ್ರವೀಣ ವೃತ್ತಿಪರರು ಎಂದು ಅದರ ಪುಟ್ಟ ಭಾಗ ವನ್ನು ಮೆದುಗೊಳಿಸಿರುತ್ತಾರೆ. ಆದರೆ ಇದನ್ನು ಸಣ್ಣ ಹೋಳುಗಳು ಎಂದು ಗೊಂದಲಕ್ಕೀಡಾಗಬಾರದು ಅದು ಫಳಕುಗಳಿಗಿಂತ ಮೆದು ಎಳೆಯಂತಹದ್ದು. ಹೊರಗಿನ ಗಟ್ಟಿ ಪೊರೆಭಾಗವನ್ನು ಕ್ರಸ್ಟ್ ಅಥವಾ ಗಟ್ಟಿ ಪೊರೆ ಎನ್ನಲಾಗುತ್ತದೆ.

ಬ್ರೆಡ್ ನವಶಿಲಾಯುಗದ ಆಹಾರದ ಚಕ್ರದಲ್ಲಿ ಸೇರಿದೆ
ಬ್ರೆಡ್ ಅತ್ಯಂತ ಪುರಾತನವೆನ್ನಲಾದ ನವಶಿಲಾಯುಗದ ಆಹಾರ

ಬ್ರೆಡ್ ಅತ್ಯಂತ ಪುರಾತನವೆನ್ನಲಾದ ನವಶಿಲಾಯುಗದ ಆಹಾರದ ಚಕ್ರದಲ್ಲಿ ಕಾಣ ಸಿಗುತ್ತದೆ. ಮೊದಲ ಬಾರಿಗೆ ಬ್ರೆಡ್ ನ ಬೇಯಿಸಿದ ಅವತರಣಿಕೆಯು ಬಹುಶಃ ಧಾನ್ಯದ-ಕಲಸಿದ ಹಿಟ್ಟು ಇದನ್ನು ನೆಲಗಡಲೆಯಂಥ ಕಾಳುಗಳ ಹಿಟ್ಟಿನಿಂದ ಪ್ರಯೋಗ ಮಾಡಲಾಗಿತ್ತು. ಆದರೆ ಇದು ಆಕಸ್ಮಿಕ ಎನ್ನುವಂತೆ ಅಥವಾ ಉದ್ದೇಶಪೂರ್ವಕವಾಗಿ ನೀರು ಮತ್ತು ಇತರ ಧಾನ್ಯಹಿಟ್ಟುಗಳೊಂದಿಗೆ ಬೇಯಿಸಿದಾಗ ಇದು ಬ್ರೆಡ್ ರೂಪ ಪಡೆದಿರಬೇಕು. ಹೀಗೆ ಈಸ್ಟ್ ಎಲ್ಲೆಡೆಗೂ ಸರ್ವಾಂತರಯಾಮಿಯಾಗಿರುತ್ತದೆ. ದ್ವಿದಳ ಧಾನ್ಯದ ಕಾಳುಗಳ ಕಲಸಿದ ಹಿಟ್ಟು ನೈಸರ್ಗಿಕವಾಗಿ ಹುಳಿಯನ್ನು ತಡೆಯುತ್ತದೆ. ಆರಂಭಿಕ ಬ್ರೆಡ್ ತಯಾರಿಕೆಯಲ್ಲಿ ಬಹುಮೂಲದ ಹುಳಿ ಪದಾರ್ಥಗಳ ವಿಭಿನ್ನ ಪ್ರಕಾರಗಳು ಲಭ್ಯವಿದ್ದವು. ಗಾಳಿ ತುಂಬಿದ ಅಥವಾ ಅಮ್ಲಜನಕ ಮೂಲದ ಈಸ್ಟ್ ಗಳನ್ನು ಕೆಲ ಕಾಲ ಗಾಳಿಗೆ ಒಡ್ಡಿದ ಕಲಸಿದ ಹಿಟ್ಟಿನ ಕಣಕದಿಂದಲೂ ಪಡೆಯಬಹುದು. ಪ್ಲಿನಿ ದಿ ಎಲ್ಡರ್ ವರದಿ ಮಾಡಿದ ಪ್ರಕಾರ ಗಾಲ್ಸ್ ಮತ್ತು ಇಬೆರಿಯನ್ಸ್ ಬೀರ್ ನಿಂದ ತೆಗೆದ ನೊರೆಯನ್ನು ಹಿಟ್ಟು ಮಾಡಿ ಅದರ ಮೂಲಕ “ಇನ್ನಿತರಿಗಿಂತ ಅತ್ಯಂತ ಹಗುರಾದ ಬ್ರೆಡ್ ತಯಾರಿಸಲು ಸಮರ್ಥರಾದರು. ಪುರಾತನ ಜಗತ್ತಿನಲ್ಲಿ ಬೀರ್ ಗಿಂತ ದ್ರಾಕ್ಷಿರಸ ಮತ್ತು ಹಿಟ್ಟಿನಿಂದ ತಯಾರಿಸಿ ಅದನ್ನು ಕಳೆತುಹೋಗುವಂತೆ ಇಲ್ಲವೆ ಎಂಜೈಮ್ ಗಳ ಕಿಣ್ವಗಳನ್ನು ಉದ್ದೀಪನಗೊಳಿಸಲಾಗುತಿತ್ತು. ಅದಲ್ಲದೇ ಗೋದಿ ಹೊಟ್ಟನ್ನು ವೈನ್ ನಲ್ಲಿ ಕಿಣ್ವಗಳಾಗಿಸಿದಾಗ ಅದು ಈಸ್ಟ್ ಆಗಿ ಪರಿವರ್ತಿತವಾಗುತ್ತಿತ್ತು. ಈಸ್ಟ್ ಅಥವಾ ಹುಳಿಯನ್ನು ಬ್ರೆಡ್ ಗೆ ಸೇರಿಸಲು ಕಣಕದ ಒಂದು ಭಾಗವನ್ನು ಅಥವಾ ಸಣ್ಣ ತುಣುಕನ್ನು ರಾತ್ರಿ ಗಾಳಿಗೆ ತೆರೆದಿಡಲಾಗುತಿತ್ತು. ಅದು ಬೆರೆಸುವ ಹುಳಿಗೆ ಆರಂಭಿಕ ವಾಗಿ ಕೆಲಸ ಮಾಡುವ ಮೂಲವಾಗುತ್ತಿತ್ತು. ಅತ್ಯಂತ ಪ್ರಮುಖ ಘಟನೆಯೆನ್ನುವಂತೆ 1961 ರಲ್ಲಿ ಕೊರ್ಲೆವುಡ್ ಫ್ರೆಡ್ ಪ್ರೊಸೆಸ್ ಎಂಬುದನ್ನು ಅಭಿವೃದ್ಧಿಪಡಿಸಲಾಯಿತು. ಇದು ಕಿಣ್ವಗೊಳ್ಳುವ ಅಥವಾ ಫರ್ಮೆಂಟೇಶನ್ ನ ಸಮಯವನ್ನು ಉಳಿಸಿ ಶೀಘ್ರದಲ್ಲಿಯೇ ಯಾಂತ್ರೀಕತ ವಿಧಾನವನ್ನು ಕಣಕದ ಬ್ರೆಡ್ ತಯಾರಿಕೆಯಲ್ಲಿ ಪರಿಚಯಿಸಿತು. ಈ ಸಂಸ್ಕರಣೆಯಲ್ಲಿ ಅತಿ-ಹೆಚ್ಚಿನ ಶಕ್ತಿ ಮಿಶ್ರಣಕ್ಕೆ ಕಳಪೆ ಧಾನ್ಯಗಳ ಬಳಕೆ ಇಂದು ವಿಶ್ವಾದ್ಯಂತ ಕಾರ್ಖಾನೆಗಳಲ್ಲಿ ವ್ಯಾಪಕವಾಗಿದೆ. ಇತ್ತೀಚೆಗೆ ಸ್ಥಳೀಯ ಬ್ರೆಡ್ ತಯಾರಕರು ತಮ್ಮ ಪ್ರದೇಶ ವ್ಯಾಪ್ತಿಯಲ್ಲಿಯೇ ಜನಪ್ರಿಯತೆ ಗಳಿಸಿದ್ದಾರೆ.

ಬ್ರೆಡ್ ಒಂದು ವ್ಯಾಪಾರೀ ಆಹಾರ ಸರಕಾಗಿ ಯುರೊಪ್ ನಲ್ಲಿ, ಜನಪ್ರಿಯವಾಗಿದೆ. ಯುರೊಪಿಯನ್ ಮೂಲದ ಸಂಸ್ಕೃತಿಗಳಾದ- ಅಮೆರಿಕಾಸ್, ಮತ್ತು ದಿಮಿಡ್ಲ್ ಈಸ್ಟ್ /ನಾರ್ತ್ ಆಫ್ರಿಕಾ, ಆದರೆ ಈಸ್ಟ್ ಆಫ್ರಿಕಾದಲ್ಲಿ ಇದಕ್ಕೆ ವಿರೋಧವಿದ್ದು ಅಲ್ಲಿ ಅಕ್ಕಿ ಯನ್ನು ಮಾರಾಟ ಆಹಾರ ಸರಕಾಗಿ ಪರಿಗಣಿಸಲಾಗುತ್ತದೆ. ಬ್ರೆಡ್ ನ್ನು ಸಾಮಾನ್ಯವಾಗಿಗೋದಿ-ಹಿಟ್ಟು ಗೋದಿ ಕಣಕ ಇತ್ಯಾದಿಗಳಲ್ಲಿ ಯುಕ್ತ ಪ್ರಮಾಣದ ಈಸ್ಟ್ ಬೆರಸಿ ತಯಾರಿಸಲಾಗುತ್ತದೆ.ಈಸ್ಟ್ ನೊಂದಿಗೆ ಮಿಶ್ರಣವಾದ ಇದನ್ನು ನಾದಿದ ನಂತರ ಕಾವಲಿಒಲೆಯಲ್ಲಿ ಬೇಯಿಸಲಾಗುತ್ತದೆ. ಅದರಲ್ಲಿರುವ ವ್ಯಾಪಕ ಪ್ರಮಾಣದ ಗೋದಿ ಅಂಟು-ಜಿಗಿ ಸಾಮಾನ್ಯ ಗೋದಿ ಇದನ್ನು ಬ್ರೆಡ್ ನ ಗೋದಿ ಎನ್ನಲಾಗುತ್ತದೆ.ಯಾಕೆಂದರೆ ಬ್ರೆಡ್ ತಯಾರಿಕೆಯಲ್ಲಿ ಅತ್ಯಂತ ಸಾಮಾನ್ಯ ಧಾನ್ಯ ಎಂದರೆ ಗೋದಿ. ಇದನ್ನು ಇನ್ನುಳಿದ ಗೋದಿ ಹಿಟ್ಟು ಮೂಲದಿಂದಲೂ ತಯಾರಿಸಲಾಗುತ್ತದೆ

ಬ್ರೆಡ್ ನವಶಿಲಾಯುಗದ ಆಹಾರದ ಚಕ್ರದಲ್ಲಿ ಸೇರಿದೆ
ಬ್ರೆಡ್

ಬ್ರೆಡ್ ನ್ನು ಯಾವುದೇ ತಾಪಮಾನದಲ್ಲಿ ಒದಗಿಸಿ ಪೂರೈಸಬಹುದಾಗಿದೆ. ಒಮ್ಮೆ ಅದನ್ನು ಸೂಕ್ತವಾಗಿ ಬೇಯಿಸಿದರೆ ಅದನ್ನು ಸರಿಯಾಗಿ ಬಿಲ್ಲೆ ಯಂತೆ ಮಾರ್ಪಡಿಸಬಹುದು. ಇದನ್ನು ಸಾಮಾನ್ಯವಾಗಿ ಕೈಯಿಂದಲೇ ಅಥವಾ ಕೆಲವು ವೇಳೆ ಚೂರಿ ಮತ್ತು ಫೊರ್ಕ್ ಮೂಲಕ ಸೇವಿಸಬಹುದು. ಅದನ್ನು ಹಾಗೆಯೇ ತಿನ್ನಬಹುದು ಇಲ್ಲವೆ ಇನ್ನಾವದಾದರೂ ಜೊತೆಯ ವ್ಯಂಜನದೊಂದಿಗೆ ತಿನ್ನಬಹುದು. ಇದು ಘನೀಕರಿಸಿದ ಆಹಾರವಾಗಿದೆ. ಬ್ರೆಡ್ ನ್ನು ದ್ರವ ಪದಾರ್ಥಗಳಲ್ಲಿ ಅದ್ದಿಕೊಂಡು ತಿಂದರೆ ಇನ್ನೂ ರುಚಿಕಟ್ಟಾಗಿರುತ್ತದೆ, ಗ್ರೆವಿ, ಆಲಿವ್ ಎಣ್ಣೆ , ಅಥವಾ ಮೀನು ಸಾರು ಪ್ಯಾಟೆ, ಹೀಗೆ ಅದು ಹಲವಾರು ರುಚಿಗಳೊಂದಿಗೆ ಅಂದರೆ ಸಿಹಿ ಮತ್ತು ಹುಳಿಯೊಂದಿಗೆ ತಿನ್ನಬಹುದು. ಇದು ಎಲ್ಲಾ ಕಾಲಮಾನಕ್ಕೂ ಸಿಗುವುದರಿಂದ ಸರ್ವತ್ರ ಪೂರೈಸಬಹುದು. ಸ್ಯಾಂಡ್ ವಿಚ್ ಎಲ್ಲಾ ತರಹದ ಮಾಂಸ, ಬೆಣ್ಣೆ, ತರಕಾರಿಗಳು ಅಥವಾ ಕಾಂಡಿಮೆಂಟ್ಸ್ಗಳನ್ನು ಬ್ರೆಡ್ ನೊಳಗೆ ಮಿಶ್ರಣ ಮಾಡಿ ಸೇವಿಸಬಹುದಾಗಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಆರೋಗ್ಯಕ್ಕೆ ಯೋಗ್ಯವಾದ ಲೋಹ ಕಂಚು

ಹಿಂದಿನ ಕಾಲದಿಂದಲೂ ಆರೋಗ್ಯಕ್ಕೆ ಯೋಗ್ಯವಾದ ಲೋಹ ಕಂಚು

ದೈತ್ಯ ಜೀವಿ ಆನೆ

ದೈತ್ಯ ಜೀವಿ ಆನೆ