in

ನಾರದ ಮುನಿಗಳು ಭಗವಾನ್‌ ವಿಷ್ಣುವನ್ನು ಶಪಿಸಲು ಕಾರಣವೇನು..?

ನಾರದ ಮುನಿಗಳು ಭಗವಾನ್‌ ವಿಷ್ಣುವನ್ನು ಶಪಿಸಲು ಕಾರಣವೇನು..?
ನಾರದ ಮುನಿಗಳು ಭಗವಾನ್‌ ವಿಷ್ಣುವನ್ನು ಶಪಿಸಲು ಕಾರಣವೇನು..?

ನಾರದರನ್ನು ದೇವರುಗಳ ಸಂದೇಶವಾಹಕ ಮತ್ತು ಭೂಮಿಯ ಮೊದಲ ಪತ್ರಕರ್ತ ಎಂದೂ ಕೂಡ ಕರೆಯಲಾಗುತ್ತದೆ. ನಾರದರ ಶಾಪದಿಂದಾಗಿ ವಿಷ್ಣು ಲಕ್ಷ್ಮಿ ದೇವಿಯನ್ನು ಕಳೆದುಕೊಳ್ಳುತ್ತಾರೆ. 

ಒಂದು ಕಾಲದಲ್ಲಿ ನಾರದ ಮುನಿಗಳು ಮದುವೆಯಾಗುವ ಆಸೆಯನ್ನು ತೊರೆದಿದ್ದರು, ಸನ್ಯಾಸಿ ಎಂಬ ಅಭಿಪ್ರಾಯವಾಗಿತ್ತು. ನಾರದ ಮುನಿಗಳು ತಮ್ಮ ಜೀವನದಲ್ಲಿ ಮದುವೆಯನ್ನು ನಿರಾಕರಿಸಿರುವುದಕ್ಕಾಗಿ ಬ್ರಹ್ಮಾಂಡದಲ್ಲಿ ಪ್ರಶಂಸೆಯನ್ನು ಪಡೆದುಕೊಂಡಿದ್ದರು.

ಒಮ್ಮೆ ನಾರದ ಮಹರ್ಷಿಗಳು ಒಂದು ವಿಶೇಷವಾದ ತಪೋವನದಲ್ಲಿ ತಪಸ್ಸಿಗೆ ಕುಳಿತುಕೊಳ್ಳುತ್ತಾರೆ. ನಾರದ ಮುನಿ ತಪಸ್ಸಿಗೆ ಕುಳಿತಾಗ ಯಾವ ಶಕ್ತಿಯೂ ವಿಚಲಿತಗೊಳಿಸಲಾಗಬಾರದು ಎಂಬ ವರವನ್ನು ಶಿವ ನೀಡಿರುತ್ತಾನೆ. ನಾರದರ ಅತ್ಯುಗ್ರವಾಗಿ ತಪಸ್ಸು ಮಾಡುತ್ತಿರುವುದನ್ನು ಕಂಡ ಇಂದ್ರ ದೇವನು ನಾರದದ ತಪಸ್ಸು ಭಂಗ ಮಾಡಬೇಕೆಂದು ಉಪಾಯ ಮಾಡುತ್ತಾನೆ. ಅಗ್ನಿ, ವರುಣ ಮತ್ತು ವಾಯುರನ್ನು ಕಳಿಸಿ ತಪಸ್ಸು ಭಂಗಕ್ಕೆ ಯತ್ನಿಸುತ್ತಾನೆ. ಆದ್ರೆ ಅಗ್ನಿ, ವರುಣ ಮತ್ತು ವಾಯುರ ಪ್ರಯತ್ನಗಳು ವಿಫಲವಾಗುತ್ತೆ.

ನಾರದ ಮುನಿಗಳು ಭಗವಾನ್‌ ವಿಷ್ಣುವನ್ನು ಶಪಿಸಲು ಕಾರಣವೇನು..?
ನಾರದ ಮಹರ್ಷಿಗಳು

ಆಗ ಇಂದ್ರದೇವ ಪ್ರಣಯದೇವನಾದ ಕಾಮದೇವನನ್ನು ಕರೆದು, ನಾರದ ಮುನಿಯ ತಪಸ್ಸನ್ನು ಭಂಗ ಮಾಡುವಂತೆ ಆದೇಶಿಸುತ್ತಾನೆ. ನಾರದರ ತಪೋಭಂಗವನ್ನುಂಟು ಮಾಡಲು ಯಾವ ಮಾರ್ಗವನ್ನು ಬೇಕಾದರೂ ಅನುಸರಿಸುವಂತೆ ಆತನು ಕಾಮದೇವನಿಗೆ ಅಪ್ಪಣೆ ಮಾಡುತ್ತಾನೆ. ರತಿ, ಅಪ್ಸರೆ, ಸ್ವರ್ಗಲೋಕದ ದೇವಕನ್ಯೆಯೂ ಅಥವಾ ದೇವಲೋಕದ ನರ್ತಕಿಯರೋ ಯಾರೇ ಆಗಿರಲಿ ಅವರನ್ನು ಬಳಸಿಕೊಂಡು ನಾರದಮಹರ್ಷಿಯ ತಪಸ್ಸು ಭಂಗ ಮಾಡಲು ಕಾಮದೇವನಿಗೆ ಇಂದ್ರ ಆಜ್ಞೆ ಮಾಡುತ್ತಾನೆ. ಅದರಂತೆಯೇ ಕಾಮದೇವನು ತನ್ನಿಂದಾಗುವ ಎಲ್ಲಾ ಮಾರ್ಗಗಳನ್ನು ಪ್ರಯೋಗಿಸುತ್ತಾನೆ. ಸಂಪೂರ್ಣ ಪ್ರಯತ್ನಗಳ ನಡುವೆಯೂ ನಾರದ ಮುನಿಗಳು ಮಾತ್ರ ಕುಳಿತಲ್ಲಿಯೇ ಕೂತು ತಪಸ್ಸು ಮಾಡುತ್ತಿರುತ್ತಾರೆ. ಕೊನೆಗೆ ಕಾಮದೇವ ಸೋಲನ್ನೊಪ್ಪುತ್ತಾನೆ.

ಎಷ್ಟೆಲ್ಲಾ ಆದ ಮೇಲೆ ನಾರದ ಮುನಿಗಳು ತಪಸ್ಸಿನಿಂದ ಎಚ್ಚರಗೊಂಡು, ನಾನು ಎಲ್ಲಾ ದೇವತೆಗಳನ್ನೂ ಸೋಲಿಸಿದ್ದೇನೆ. ಪ್ರಣಯದೇವನಾದ ಕಾಮದೇವನನ್ನೂ ಜಯಿಸಿದ್ದೇನೆ ಎಂದು ಹೆಮ್ಮೆಯಿಂದ ಬೀಗುತ್ತಾ ಕೈಲಾಸಕ್ಕೆ ಹೋಗಿ ಶಿವನ ಬಳಿ ತನ್ನ ಸಾಮಾರ್ಥ್ಯವನ್ನು ವರ್ಣಿಸುತ್ತಾನೆ. ಅಹಂಕಾರದಿಂದ ಬೀಗುತ್ತಾನೆ. ಆಗ ಭಗವಾನ್ ಶಿವ ಈ ವಿಚಾರವನ್ನು ಭಗವಾನ್ ವಿಷ್ಣುವಿಗೆ ತಿಳಿಸದಂತೆ ಸಲಹೆ ನೀಡುತ್ತಾನೆ. ಆದ್ರೆ ನಾರದ ಮುನಿ ಶಿವನ ಸಲಹೆಯನ್ನು ತಿರಸ್ಕರಿಸಿ ಈ ವಿಷವನ್ನು ವಿಷ್ಣುವಿಗೆ ತಿಳಿಸುತ್ತಾನೆ. ಆಗ ವಿಷ್ಣು ನಾರದನಿಗೆ “ನಾರದಾ ಎಚ್ಚರವಿರಲಿ” ಎಂದು ಹೇಳುತ್ತಾನೆ.

ನಾರದ ಮುನಿಗಳು ಭಗವಾನ್‌ ವಿಷ್ಣುವನ್ನು ಶಪಿಸಲು ಕಾರಣವೇನು..?
ನಾರದರ ಮುಖ ಕೋತಿಯಂತಾಗಿರುವುದು

ನಾರದರ ಹಿರಿಮೆಯನ್ನು ಕುಗ್ಗಿಸಲು ಭಗವಾನ್‌ ವಿಷ್ಣು ಮಾಯಾ ನಗರವನ್ನು ನಿರ್ಮಿಸಿದನು. ವಿಷ್ಣುವಿನ ಈ ಮಾಯಾ ನಗರದಲ್ಲಿ ಲಕ್ಷ್ಮಿ ದೇವಿಯು ರಾಜಕುಮಾರಿಯ ರೂಪದಲ್ಲಿ ಜನಿಸಿದಳು. ಆಕೆಯನ್ನು ನೋಡಿದಾಕ್ಷಣ ನಾರದ ಮುನಿಯ ಮನಸ್ಸಿನಲ್ಲಿ ಮದುವೆ ಆಸೆ ಹುಟ್ಟಲು ಕಾರಣವಾಯಿತು. ಆಗ ನಾರದ ಮುನಿಗಳು ಭಗವಾನ್‌ ವಿಷ್ಣುವಿನ ಬಳಿ ಹೋಗಿ ತನ್ನನ್ನು ಹರಿಯಂತೆ ಸುಂದರಗೊಳಿಸಿ ಎಂದು ಕೇಳಿಕೊಳ್ಳುತ್ತಾನೆ. ಆಗ ವಿಷ್ಣು ನಾರದರನ್ನು ಹರಿಯಂತೆ ಸುಂದರಗೊಳಿಸುತ್ತಾನೆ.

ನಾರದರನ್ನು ಲಕ್ಷ್ಮಿ ನಿರಾಕರಿಸುತ್ತಾರೆ :

ಮಾತೆ ಲಕ್ಷ್ಮಿ ನಾರದರನ್ನು ನಿರಾಕರಿಸಲೆಂದು ನಾರದರ ಬಾಯಿಯನ್ನು ಕೋತಿಯ ಬಾಯಿಯಂತೆ ಮಾಡಿದರು. ಲಕ್ಷ್ಮಿ ದೇವಿಗೆ ವಿವಾಹ ಮಾಡಲು ಸ್ವಯಂವರವನ್ನು ಏರ್ಪಡಿಸಲಾಯಿತು. ಸ್ವಯಂವರದಲ್ಲಿ ನಾರದರು ತನ್ನ ಹೊಸ ರೂಪದಲ್ಲಿ ಭಾಗಿಯಾದರು. ನಾರದರಿಗೆ ತನ್ನ ಮುಖ ಕೋತಿಯಂತಾಗಿಸುವುದು ತಿಳಿದಿರುವುದಿಲ್ಲ. ಆತನು ತನ್ನನ್ನು ವಿಷ್ಣು, ಹರಿಯಂತೆ ಸುಂದರಗೊಳಿಸಿದ್ದಾರಂದು ತಿಳಿದು ಭಾವಿಸಿದ್ದರು. ಸ್ವಯಂವರದಲ್ಲಿ ಲಕ್ಷ್ಮಿ ಮಾತೆಯು ನಾರದರ ಮುಖವನ್ನು ನೋಡುತ್ತಿದ್ದಂತೆ ನಗುತ್ತಾ ವಿಷ್ಣುವಿಗೆ ಹಾರವನ್ನು ಹಾಕುತ್ತಾಳೆ. ಇದು ನಾರದರಿಗೆ ಅವಮಾನ ಮಾಡಿದಂತಾಯಿತು. ನಾರದರು ಸ್ವಯಂವರದಿಂದ ಹಿಂದಿರುಗುವಾಗ ಕೊಳದಲ್ಲಿ ತನ್ನ ಮುಖವನ್ನು ನೋಡಿ ಆಶ್ಚರ್ಯಗೊಂಡರು. ಭಗವಾನ್‌ ವಿಷ್ಣು ನನಗೆ ಮೋಸ ಗೊಳಿಸಿದ್ದಾರೆಂದು ಭಾವಿಸಿದರು. ಆದರೆ ನಾರದರಿಗೆ ಹರಿ ಎಂದರೆ ಮಂಗವೆಂಬುದು ತಿಳಿದಿರಲಿಲ್ಲ.

ಭಗವಾನ್‌ ವಿಷ್ಣುವಿಗೆ ನಾರದರ ಶಾಪ:

ಕೋಪದಿಂದ ನಾರದರು ವಿಷ್ಣುವನ್ನು ಶಪಿಸಿದರು. ನಾರದರು ವಿಷ್ಣು ತನ್ನ ಮುಖವನ್ನು ಮಂಗನಂತೆ ಮಾಡಲು ಕಾರಣವೇನೆಂಬುದನ್ನು ಕೋಪದಿಂದ ಕೇಳುತ್ತಾರೆ. ನಾರದರು ವಿಷ್ಣುವನ್ನು ಕುರಿತು, ನಾನು ನಿಮ್ಮಲ್ಲಿ ನನ್ನನ್ನು ಸುಂದರ ರಾಜಕುಮಾರನಂತೆ ಮಾಡಲು ಹೇಳಿದರೆ ನೀವು ನನ್ನನ್ನು ಮಂಗನಂತೆ ಮಾಡಿದ್ದೀರಿ. ಇದರಿಂದ ನಾನು ನನ್ನ ಪ್ರೀತಿಯನ್ನು ಕಳೆದುಕೊಂಡಿದ್ದೇನೆ. ನನ್ನ ಪ್ರೀತಿಯನ್ನು ಕಳೆದುಕೊಂಡು ನಾನು ದುಃಖದ ಸಾಗರದಲ್ಲಿ ಮುಳುಗಿ ಹೋಗಿದ್ದೇನೆ. ನನ್ನಂತೆಯೇ ನೀವು ಕೂಡ ನಿಮ್ಮ ಪ್ರೀತಿಯನ್ನು ಕಳೆದುಕೊಳ್ಳುವಂತಾಗಲಿ. ನಿಮ್ಮ ಪ್ರಿಯತಮೆ ಕೂಡ ನಿಮ್ಮಿಂದ ದೂರಾಗಲಿ ಎಂದು ಶಾಪವನ್ನು ನೀಡುತ್ತಾನೆ. ಹಾಗೂ ನನ್ನ ಮುಖವನ್ನು ಕೋತಿಯ ಮುಖದಂತೆ ಮಾಡಿರುವುದರಿಂದ ನಿಮ್ಮ ಪ್ರೀತಿಯನ್ನು ಅಥವಾ ಪ್ರಿಯತಮೆಯನ್ನು ಪುನಃ ಪಡೆಯಲು ಕೋತಿಯ ಸಹಾಯವನ್ನೇ ತೆಗೆದುಕೊಳ್ಳುವಿರಿ ಎಂದು ಶಾಪವನ್ನು ನೀಡುತ್ತಾರೆ. ಆಗ ವಿಷ್ಣು ನಾರದರ ಶಾಪಕ್ಕೆ ಮುಗುಳ್ನಕ್ಕು ಅದನ್ನು ಅಲ್ಲಗಳೆಯುತ್ತಾರೆ.

ನಾರದ ಮುನಿಗಳು ಭಗವಾನ್‌ ವಿಷ್ಣುವನ್ನು ಶಪಿಸಲು ಕಾರಣವೇನು..?
ಭಗವಾನ್‌ ವಿಷ್ಣು ಭೂಮಿಯಲ್ಲಿ ರಾಮನಾಗಿ ಅವತರಿಸಿದಾಗ ತಾಯಿ ಲಕ್ಷ್ಮಿಯು ಸೀತೆಯಾಗಿ ಅವತರಿಸುತ್ತಾರೆ

ಭಗವಾನ್‌ ವಿಷ್ಣು ಮತ್ತು ಲಕ್ಷ್ಮಿ ದೇವಿ :

ನಂತರ ವಿಷ್ಣು ಮಾನವನಾಗಿ ಭೂಮಿಯಲ್ಲಿ ಅವತಾರವೆತ್ತಿದಾಗ ತನ್ನ ಪ್ರಿತಿಯಿಂದ ದೂರವಿರಬೇಕಾಗುತ್ತದೆ. ಅಂದರೆ ಭಗವಾನ್‌ ವಿಷ್ಣು ಭೂಮಿಯಲ್ಲಿ ರಾಮನಾಗಿ ಅವತರಿಸಿದಾಗ ತಾಯಿ ಲಕ್ಷ್ಮಿಯು ಸೀತೆಯಾಗಿ ಅವತರಿಸುತ್ತಾರೆ. ಹಾಗೂ ಇಬ್ಬರು ಕೂಡ ವನವಾಸದಲ್ಲಿ ಬೇರೆ ಬೇರೆಯಾಗುತ್ತಾರೆ. ಸೀತೆಯನ್ನು ಹುಡುಕಲು ರಾಮನು ಹನುಮನ ಆಶ್ರಯವನ್ನು, ಸಹಾಯವನ್ನು ತೆಗೆದುಕೊಳ್ಳುತ್ತಾನೆ.

ನಾರಾಯಣ ಪ್ರಿಯ ನಾರದನಿಂದ ವಿಷ್ಣುವಿಗೆ ಶಾಪ, ರಾಮನ ಅವತಾರದಲ್ಲಿ ಹನುಮಂತನ ಸಹಾಯ ಪಡೆಯಲು ಕಾರಣವಾಗಿದ್ದು ಇದೇ ಕೋಪ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ತಲೆಕೂದಲಿನ ಆರೋಗ್ಯಕ್ಕೆ ಮೊಸರು

ತಲೆಕೂದಲಿನ ಆರೋಗ್ಯಕ್ಕೆ ಮೊಸರು

ಅಂತರಾಷ್ಟ್ರೀಯ "ಮಂಕಿ ಡೇ"

ಅಂತರಾಷ್ಟ್ರೀಯ “ಮಂಕಿ ಡೇ”