ತುಳಸಿದಾಸ್, ತುಲಸಿದಾಸ್, ಗೋಸ್ವಾಮಿ ತುಲ್ಸಿದಾಸ್, ತುಲಸಿದಾಸ ಎಂದೂ ಕರೆಯುವರು. (1532-1623) ದೇವನಾಗರಿಯಲ್ಲಿ ಒಬ್ಬ ಮಹಾ ಅವಧಿ ಭಕ್ತ, ತತ್ವಜ್ಞಾನಿ, ವಾಗ್ಗೇಯಕಾರ ಹಾಗೂ ಹಿಂದೂ ದೈವ ರಾಮನಿಗೆ ಅರ್ಪಿಸಿದ ಮಹಾಕಾವ್ಯ ಮತ್ತು ಧರ್ಮಗ್ರಂಥವಾದ ರಾಮಚರಿತಮಾನಸ ದ ಕೃತಿಕರ್ತ.
ತಾಯಿ ಹುಲ್ಸಿ ಹಾಗೂ ತಂದೆ ಆತ್ಮಾರಾಮ್ ದುಬೆ ಇವರಿಗೆ ಮಗನಾಗಿ ತುಲ್ಸಿದಾಸ್‌ರವರು ಶ್ರಾವಣ ಶುಕ್ಲ ಸಪ್ತಮಿ, ವಿಕ್ರಮಿ ಸಮ್ವತ್ 1554 (ಕ್ರಿ.ಶ. 1532)ರಲ್ಲಿ ಅಕ್ಬರನ ಆಳ್ವಿಕೆಯ ಸಮಯದಲ್ಲಿ, ಭಾರತ ದೇಶದ ಉತ್ತರಪ್ರದೇಶದ ಬಂದ ಜಿಲ್ಲೆಯಲ್ಲಿ ಜನಿಸಿದರು. ತುಲ್ಸಿದಾಸರು ಪರಶರ ಗೋತ್ರದ ಸರ್ಯುಪರೀನ್ ಬ್ರಾಹ್ಮಣರಾಗಿದ್ದರು.
ತುಳಸಿದಾಸರನ್ನು ಮಹಾ ಸಂತ ವಾಲ್ಮೀಕಿಯ ಅವತಾರವೆಂದು ಪರಿಗಣಿಸಲಾಗಿದೆ. ಭವಿಷ್ಯೋತ್ತರ ಪುರಾಣದಲ್ಲಿ, ದೇವನಾದ ಶಿವನು ಪಾರ್ವತಿಗೆ, ಹೇಗೆ ವಾಲ್ಮೀಕಿಯು ಕಲಿಯುಗದಲ್ಲಿ ದೇಶೀಯ ಭಾಷೆಯಲ್ಲಿ ಶ್ರೀ ರಾಮನ ಕೀರ್ತಿಗಳನ್ನು ಹಾಡಲು ಹನುಮಂತನಿಂದ ವರವನ್ನು ಪಡೆದನೆಂದು ಹೇಳುತ್ತಾನೆ. ಶಿವನ ಈ ಭವಿಷ್ಯವಾಣಿಯು ಶ್ರಾವಣ ಶುಕ್ಲ ಸಪ್ತಮಿ, ವಿಕ್ರಮಿ ಸಮ್ವತ್ 1554 ರಂದು ವಾಲ್ಮೀಕಿಯು ತುಲಸಿದಾಸರಾಗಿ ಅವತರಿಸುವ ಮೂಲಕ ಫಲಕಾರಿಯಾಯಿತು.
ತುಳಸಿದಾಸರ ಸಮಕಾಲೀನರಾದ ಹಾಗೂ ಮಹಾ ಭಕ್ತರಾದ ನಭದಾಸರು ಕೂಡ ತಮ್ಮ ಕೃತಿ ಭಕ್ತ್‌ಮಾಲ್‌ನಲ್ಲಿ ತುಳಸಿದಾಸರನ್ನು ವಾಲ್ಮೀಕಿಯವರ ಅವತಾರವೆಂದು ಬಣ್ಣಿಸಿದ್ದಾರೆ. ರಾಮನಂದಿ ಪಂಥವು ವಾಲ್ಮೀಕಿಯವರೇ ಕಲಿಯುಗದಲ್ಲಿ ತುಳಸಿದಾಸರಾಗಿ ಅವತರಿಸಿದ್ದಾರೆಂದು ದೃಢವಾಗಿ ನಂಬಿದೆ.
ರಾಮಾನುಜರಂತೆ ತುಳಸಿದಾಸರೂ ಎಲ್ಲ ಸದ್ಗುಣಗಳನ್ನು ಹೊಂದಿರುವ ಪರಮಶಕ್ತ ಸಶರೀರ ದೇವರನ್ನು, ಜೊತೆಗೆ ಶಂಕರಾಚಾರ್ಯರ ನಿರ್ಗುಣ ನಿರ್ಲಿಪ್ತ ಅಶರೀರ ಬ್ರಾಹ್ಮಣ. ಮಾನವ ವರ್ಗದ ಹಾರೈಕೆಗಾಗಿ ದೈವವೇ ಒಮ್ಮೆ ಮಾನವ ರೂಪ ತಾಳಿ ಜನ್ಮ ತಾಳಿ ರಾಮನಾಗಿ ಅವತರಿಸುತ್ತಾರೆ ಎಂಬುದರಲ್ಲಿ ನಂಬಿಕೆ ಹೊಂದಿದ್ದರು. ಆದ್ದರಿಂದ ದೇಹವನ್ನು ತುಚ್ಛೀಕರಿಸದೇ ಗೌರವಿಸಲಾಗುತ್ತದೆ.
ಭಕ್ತಿಯಿಂದ ದೇವರ ಬಳಿ ಸಾಗಬೇಕು, ನಿಸ್ವಾರ್ಥ ಭಕ್ತಿ ಮತ್ತು ಪರಿಪೂರ್ಣ ಪ್ರೀತಿಯಲ್ಲಿ ಆತ್ಮ ಸಮರ್ಪಣೆ ಹಾಗೂ ಸ್ವಾರ್ಥದ ಎಲ್ಲ ಕ್ರಿಯೆಗಳನ್ನು ಆತನ ಧ್ಯಾನದಲ್ಲಿ ಶುದ್ಧೀಕರಿಸುವ ಮೂಲಕ ಅವನ ಬಳಿ ಹೋಗಬೇಕು. ಎಲ್ಲ ಜೀವಿಗಳನ್ನೂ ಪ್ರೀತಿಯಿಂದ ಕಾಣು, ಆಗ ನೀನು ಸಂತಸವಾಗಿರುತ್ತೀಯ; ಆತ ಎಲ್ಲ ವಸ್ತುವಿನಲ್ಲೂ ಇರುವುದರಿಂದ, ನೀನು ಎಲ್ಲ ವಸ್ತುಗಳನ್ನು ಪ್ರೀತಿಸಿದಾಗ, ದೇವರು ನಿನ್ನನ್ನು ಪ್ರೀತಿಸುತ್ತಾನೆ. ದೈವದಿಂದ ಆತ್ಮ ಬಂದಿದ್ದು, ಈ ಆತ್ಮವನ್ನು ಜೀವನದ ಕರ್ಮಗಳ ಬಂಧನಕ್ಕೆ ಸಮರ್ಪಿಸಲಾಗಿದೆ.
ಮನುಷ್ಯವರ್ಗ ತನ್ನ ಮೊಂಡುತನದಲ್ಲಿ ಕಾರ್ಯಗಳ ಬಲೆಯಲ್ಲಿ ತಮ್ಮನ್ನು ತಾವು ಬಂಧಿಸಿಕೊಂಡಿದ್ದು, ದೇವರ ಭಕ್ತಿಯಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡು ಪರಮಾನಂದವನ್ನು ಕಾಣುತ್ತಿರುವವರ ಬಗ್ಗೆ ಕೇಳಿ ತಿಳಿದಿದ್ದರೂ, ಬಿಡುಗಡೆಯ ಪ್ರಯತ್ನ ಮಾಡುತ್ತಿಲ್ಲ. ಆಸೆಗಳನ್ನು ನಂದಿಸಿಕೊಳ್ಳುವ ಮೂಲಕ ಪರಮೋಚ್ಛ ಮನೆಯಲ್ಲಿ ಆತ್ಮವು ಪಡೆದುಕೊಂಡ ಪರಮಾನಂದವು ದೈವನಲ್ಲಿ ಕರಗುವುದಲ್ಲ ಬದಲಾಗಿ ವೈಯಕ್ತಿಕತೆಗೆ ಬದ್ಧವಾಗಿ ಆತನಲ್ಲಿ ಒಂದಾಗುವುದಾಗಿದೆ. ಇದು ಜನ್ಮ ಮತ್ತು ಪುನರ್ಜನ್ಮಗಳಿಂದ ಮುಕ್ತಿ ಹಾಗೂ ಪರಮೋಚ್ಛವಾದ ಸಂತಸವಾಗಿದೆ ಸರ್ಯುಪರೇನ್ ಬ್ರಾಹ್ಮಣರಾದ ತುಲಸಿ, ಇಡೀ ಹಿಂದು ಸರ್ವ ಮಂದಿರವನ್ನು ಗೌರವಿಸುತ್ತಾರೆ ಹಾಗೂ ಬ್ರಾಹ್ಮಣರ ವಿಶೇಷ ದೈವವಾದ ಶಿವ ಅಥವಾ ಮಹಾದೇವನಿಗೆ ತನ್ನ ಭಕ್ತಿ ಸಲಿಸುವಲ್ಲಿ ವಿಶೇಷವಾಗಿ ಜಾಗರೂಕರಾಗಿರುತ್ತಾರೆ ಹಾಗೂ ರಾಮನ ಭಕ್ತಿ ಹಾಗೂ ಶಿವನ ಸಖ್ಯದ ನಡುವೆ ಅಸಮಂಜಸತೆಯೇನೂ ಇಲ್ಲ. ಅವರ ಎಲ್ಲ ಬರಹಗಳ ವಸ್ತುನಿಷ್ಟ ಉದ್ದೇಶ ರಾಮನ ಕುರಿತು ಭಕ್ತಿಯನ್ನು ಮೈಗೂಡಿಸುವುದಾಗಿದ್ದು, ರಾಮ ಮುಕ್ತಿಯ ಮಾರ್ಗ ಹಾಗೂ ಹುಟ್ಟು ಮತ್ತು ಸಾವುಗಳ ಸರಪಳಿಯಿಂದ ಮುಕ್ತರು, ಬ್ರಾಹ್ಮಣರಂತೆ ಕೆಳಜಾತಿಯ ಮನುಜರಿಗೂ ಉಚಿತ ಮತ್ತು ಮುಕ್ತವಾದ ಮುಕ್ತಿಯ ದಾರಿ ಈ ರಾಮ ಎಂಬಂತೆ ಚಿತ್ರಿಸಿದ್ದಾರೆ.
ತುಳಸಿದಾಸರು ಶ್ರೀರಾಮನ ಮತ್ತೊಬ್ಬ ಪರಮಭಕ್ತ. ತುಳಸಿದಾಸರು ಶ್ರೀರಾಮನ ಬಗ್ಗೆ ಕವಿತೆ ಹಾಗೂ ಭಜನೆಗಳನ್ನು ಬರೆದು ಹಾಡುತ್ತಲಿದ್ದರೂ ಅವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಹನುಮಂತನ ನೆರವಿನಿಂದಾಗಿ ತುಳಸಿದಾಸರು ಶ್ರೀರಾಮನನ್ನು ಭೇಟಿಯಾದರು.
ತುಳಸಿದಾಸರು ತನ್ನ ದೈವಿಕ ಆತ್ಮದಿಂದ ಹನುಮಂತ ದೇವರನ್ನು ಹೇಗೆ ಭೇಟಿಯಾಗುವುದು ಎಂದು ತಿಳಿದುಕೊಂಡರು. ಹನುಮಂತ ದೇವರನ್ನು ಭೇಟಿಯಾದ ವೇಳೆ ಶ್ರೀರಾಮನ ಭೇಟಿಯಾಗಲು ತನಗೆ ನೆರವಾಗಬೇಕು ಎಂದು ತುಳಸಿದಾಸರು ಕೇಳಿಕೊಂಡರು. ಶ್ರೀರಾಮನ ಭೇಟಿಯಾಗಬೇಕಿದ್ದರೆ ಚಿತ್ರಕೂಟವೆಂಬ ಬೆಟ್ಟಕ್ಕೆ ತೆರಳಬೇಕು ಎಂದು ಹನುಂತ ದೇವರು ಸೂಚಿಸುವರು. ಶ್ರೀರಾಮ ದೇವರನ್ನು ನೋಡಬೇಕೆಂಬ ಹಂಬಲದೊಂದಿಗೆ ತುಳಸಿದಾಸರು ಚಿತ್ರಕೂಟದ ಬೆಟ್ಟದತ್ತ ಪ್ರಯಾಣ ಬೆಳೆಸಿದರು. ತುಳಸಿದಾಸರು ಪ್ರಯಾಣಿಸುತ್ತಿರುವ ವೇಳೆ ದಾರಿ ಮಧ್ಯೆ ಇಬ್ಬರು ಸುಂದರ ಯುವಕರು ಕುದುರೆ ಮೇಲೆ ಪ್ರಯಾಣಿಸುತ್ತಿದ್ದರು. ಅದಾಗ್ಯೂ, ಕುದುರೆ ಮೇಲೆ ಪ್ರಯಾಣಿಸುತ್ತಿದ್ದವರು ಸೋದರರಾದ ಶ್ರೀರಾಮ ದೇವರು ಮತ್ತು ಲಕ್ಷಣ ಎಂದು ತುಳಸಿದಾಸರಿಗೆ ತಿಳಿಯದೇ ಹೋಯಿತು. ಹನುಮಂತ ಈ ಬಗ್ಗೆ ತುಳಸಿದಾಸರಿಗೆ ಹೇಳಿದಾಗ ಈ ವಿಚಾರ ತಿಳಿಯಿತು.
ತಾನು ತುಂಬಾ ಭಕ್ತಿಯಿಂದ ಪೂಜಿಸುತ್ತಿದ್ದ ಶ್ರೀರಾಮನನ್ನು ಗುರುತಿಸಲು ತನಗೆ ಸಾಧ್ಯವಾಗಲಿಲ್ಲ ಎನ್ನುವ ನೋವು ತುಳಸಿದಾಸರನ್ನು ಬಹುವಾಗಿ ಕಾಡಿತು. ಅದಾಗ್ಯೂ, ತುಳಸಿದಾಸರನ್ನು ಸಮಾಧಾನಪಡಿಸಿದ ಹನುಮಂತ, ಶ್ರೀರಾಮ ದರ್ಶನಕ್ಕೆ ಮತ್ತೊಂದು ಅವಕಾಶ ಸಿಗುವುದು ಎಂದು ಭರವಸೆ ನೀಡುವನು. ಶ್ರೀರಾಮ ಮರುದಿನ ಬೆಳಗ್ಗೆ ಮತ್ತೆ ಇಲ್ಲಿಗೆ ಬರುವನು ಎಂದು ಹನುಮಂತ ಹೇಳುತ್ತಾನೆ. ಇದನ್ನು ಕೇಳಿದ ತುಳಿಸದಾಸರು ಸಂಪೂರ್ಣ ರಾತ್ರಿ ಮರುದಿನ ಬೆಳಗ್ಗಿನ ಬಗ್ಗೆ ಯೋಚಿಸುತ್ತಾ ಕಳೆದರು. ಬೆಳಗ್ಗೆ ಎದ್ದು ನಿತ್ಯಾಧಿಕರ್ಮಗಳನ್ನು ಪೂರೈಸಿದ ಬಳಿಕ ತಿಲಕವನ್ನು ಇಡಲು ಶ್ರೀಗಂಧ ತಯಾರಿಸುತ್ತಿದ್ದ ವೇಳೆ ಅವರ ಮುಂದೆ ಒಬ್ಬ ಪುಟ್ಟ ಬಾಲಕ ಕಾಣಿಸಿಕೊಳ್ಳುತ್ತಾನೆ.
ಶ್ರೀರಾಮ ದೇವರನ್ನು ಗುರುತಿಸಲು ಮತ್ತೆ ತುಳಸಿದಾಸರಿಗೆ ಸಾಧ್ಯವಾಗುವುದಿಲ್ಲವೆಂದು ಅರಿತುಕೊಂಡ ಹನುಮಂತ ದೇವರು ಒಂದು ದೋಹವನ್ನು ಪಠಿಸುವರು. ಚಿತ್ರಕೂಟವೆಂಬ ಪರ್ವತದಲ್ಲಿ ಹಲವಾರು ಮಂದಿ ಸನ್ಯಾಸಿಗಳು ಸೇರಿದ್ದಾರೆ. ತುಳಸಿದಾಸರು ಶ್ರೀಗಂಧವನ್ನು ತೇಯುತ್ತಿರುವರು, ಶ್ರೀರಾಮ ದೇವರು ತಿಲಕ ಹಾಕುವರು.
ಹನುಮಂತ ದೇವರು ದೋಹ ಪಠಿಸುತ್ತಾ ಇದ್ದಂತೆ ತುಳಸಿದಾಸರಿಗೆ ತನ್ನ ಮುಂದೆ ನಿಂತಿರುವ ಮಗು ಶ್ರೀರಾಮ ದೇವರು ಎಂದು ತಕ್ಷಣವೇ ತಿಳಿದುಬರುತ್ತದೆ. ತುಳಸಿದಾಸರು ತದೇಕಚಿತ್ತದಿಂದ ಪ್ರೀತಿ ಹಾಗೂ ಭಕ್ತಿಯಿಂದ ಶ್ರೀರಾಮ ದೇವರನ್ನು ನೋಡುವರು.
ಧನ್ಯವಾದಗಳು.
GIPHY App Key not set. Please check settings