in

ಹಿಂದೂ ಪವಿತ್ರ ಗ್ರಂಥಗಳು ಭಗವದ್ಗೀತೆ ಮತ್ತು ರಾಮಾಯಣ

ಭಗವದ್ಗೀತೆ ಮತ್ತು ರಾಮಾಯಣ
ಭಗವದ್ಗೀತೆ ಮತ್ತು ರಾಮಾಯಣ

ಶ್ರೀ ಭಗವದ್ಗೀತೆಯು ಮಹಾಭಾರತದಲ್ಲಿನ ಕುರುಕ್ಷೇತ್ರ ಯುಧ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಕೃಷ್ಣನಿಂದ ಅರ್ಜುನನಿಗೆ ಮಾಡಲ್ಪಟ್ಟ ಉಪದೇಶ. ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಮುಖ್ಯವಾದುದು.

ಗೀತೆಯನ್ನು ಪಾಂಡವ ರಾಜಕುಮಾರ ಅರ್ಜುನ ಮತ್ತು ಅವರ ಮಾರ್ಗದರ್ಶಿ ಮತ್ತು ರಥ ಸಾರಥಿ ಶ್ರೀ ಕೃಷ್ಣನ ನಡುವಿನ ಸಂಭಾಷಣೆಯ ನಿರೂಪಣಾ ಚೌಕಟ್ಟಿನಲ್ಲಿ ಹೊಂದಿಸಲಾಗಿದೆ. ಪಾಂಡವರು ಮತ್ತು ಕೌರವರ ನಡುವಿನ ಧರ್ಮ ಯುದ್ಧ ಆರಂಭದಲ್ಲಿ, ಅರ್ಜುನನು ತನ್ನ ಸ್ವಂತ ರಕ್ತಸಂಬಂಧಿಗಳ ವಿರುದ್ಧದ ಯುದ್ಧದಲ್ಲಿ ಯುದ್ಧವು ಉಂಟುಮಾಡುವ ಹಿಂಸೆ ಮತ್ತು ಸಾವಿನ ಬಗ್ಗೆ ನೈತಿಕ ಸಂದಿಗ್ಧತೆ ಮತ್ತು ಹತಾಶೆಯಿಂದ ತುಂಬಿರುತ್ತಾನೆ. ಅವರು ತ್ಯಜಿಸಬೇಕೆ ಎಂದು ಅವರು ಆಶ್ಚರ್ಯ ಪಡುತ್ತಾರೆ ಮತ್ತು ಕೃಷ್ಣನ ಸಲಹೆಯನ್ನು ಹುಡುಕುತ್ತಾರೆ, ಅವರ ಉತ್ತರಗಳು ಮತ್ತು ಪ್ರವಚನವು ಭಗವದ್ಗೀತೆಯನ್ನು ಒಳಗೊಂಡಿದೆ. “ನಿಸ್ವಾರ್ಥ ಕ್ರಿಯೆಯ” ಮೂಲಕ “ಧರ್ಮವನ್ನು ಎತ್ತಿಹಿಡಿಯುವ ತನ್ನ ಕ್ಷತ್ರಿಯ ಕರ್ತವ್ಯವನ್ನು ಪೂರೈಸಲು” ಕೃಷ್ಣನು ಅರ್ಜುನನಿಗೆ ಸಲಹೆ ನೀಡುತ್ತಾನೆ. ಅರ್ಜುನನು ಎದುರಿಸುತ್ತಿರುವ ಯುದ್ಧವನ್ನು ಮೀರಿದ ಸಂದಿಗ್ಧತೆಗಳು ಮತ್ತು ತಾತ್ವಿಕ ಸಮಸ್ಯೆಗಳು.

ಭಗವದ್ಗೀತೆ ಮಹಾಭಾರತ ಮಹಾಕಾವ್ಯದ ಭೀಷ್ಮಪರ್ವದ ೨೩ ನೇ ಅಧ್ಯಾಯದಿಂದ ೪೦ ನೇ ಅಧ್ಯಾಯದ ನಡುವೆ ಬರುವ ಭಾಗ. ಹಿಂದೂ ಧರ್ಮ ಮತ್ತು ತತ್ವಶಾಸ್ತ್ರದ ಮುಖ್ಯ ಪಠ್ಯಗಳಲ್ಲಿ ಒಂದಾದ ಸುಮಾರು ೭೦೦ ಶ್ಲೋಕಗಳ ಭಗವದ್ಗೀತೆ, ಹಿಂದೂ ಚಿಂತನೆ ಮತ್ತು ವೈದಿಕ, ಅಧ್ಯಾತ್ಮಿಕ, ಯೋಗಿಕ ಹಾಗೂ ತಾಂತ್ರಿಕ ತತ್ವಶಾಸ್ತ್ರಗಳ ಒಟ್ಟು ಸಮಾಗಮವೆನ್ನಬಹುದು. ಕೆಲವೊಮ್ಮೆ ಯೋಗೋಪನಿಷತ್ ಅಥವಾ ಗೀತೋಪನಿಷತ್ ಪಂಚಮವೇದವೆಂದೂ ಭಗವದ್ಗೀತೆಯನ್ನು ಕರೆಯಲಾಗುತ್ತದೆ.

ಹಿಂದೂ ಪವಿತ್ರ ಗ್ರಂಥಗಳು ಭಗವದ್ಗೀತೆ ಮತ್ತು ರಾಮಾಯಣ
ಭಗವದ್ಗೀತೆ

‘ಭಗವದ್ಗೀತೆ’ ಆರಂಭವಾಗುವುದು ಮಹಾಭಾರತ ಯುದ್ಧದ ಆರಂಭವಾಗುವ ಮೊದಲು. ತಮ್ಮ ಸೈನ್ಯಕ್ಕೆ ರಣಭೂಮಿಯಲ್ಲಿ ಇದಿರಾದ ಕೌರವರ ಸೇನೆಯಲ್ಲಿ ತನ್ನ ಬಹಳಷ್ಟು ಬಂಧುಗಳನ್ನು ಕಂಡು ಅರ್ಜುನ ಉತ್ಸಾಹ ಕಳೆದುಕೊಂಡು ಮಾರ್ಗದರ್ಶನಕ್ಕಾಗಿ ಕೃಷ್ಣನತ್ತ ತಿರುಗಿದಾಗ. ಆತ್ಮದ ಅಮರತ್ವದ ಬಗ್ಗೆ ಪ್ರಸ್ತಾಪಿಸುತ್ತ ಕೃಷ್ಣ ‘ಗೀತೋಪದೇಶ’ವನ್ನು ಆರಂಭಿಸುತ್ತಾನೆ. ಇದರ ನಂತರ ನಾಲ್ಕು ಯೋಗಮಾರ್ಗಗಳಾದ ಭಕ್ತಿ, ಕರ್ಮ, ಧ್ಯಾನ ಮತ್ತು ಜ್ಞಾನ ಮಾರ್ಗಗಳನ್ನು ವಿವರಿಸುತ್ತಾನೆ. ಇದನ್ನು ಶ್ರೀಕೃಷ್ಣನು ಅರ್ಜುನನಿಗೆ ಮಾರ್ಗಶಿರ ಮಾಸದ ಶುಕ್ಲಪಕ್ಷದ ಏಕಾದಶಿಯ ದಿನ ಉಪದೇಶಿಸಿದನು. ಆದುದರಿಂದ ಇದನ್ನು ಗೀತಾ ಜಯಂತಿ ಅಂತ ಕರೆಯಲಾಗಿದೆ.

ರಾಮಾಯಣ

ರಾಮಾಯಣ ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಮುಖ್ಯವಾದುದು. ಈ ಬೃಹದ್ಕಾವ್ಯವು ವಾಲ್ಮೀಕಿ ಮಹರ್ಷಿಗಳಿಂದ ರಚಿಸಲ್ಪಟ್ಟಿದೆ. ರಾಮಾಯಣವನ್ನು ತತ್ಪುರುಷ ಸಮಾಸವಾಗಿ ವಿಭಜಿಸಿದರೆ (ರಾಮನ+ಅಯನ=ರಾಮಾಯಣ) “ರಾಮನ ಕಥೆ” ಎಂಬ ಅರ್ಥ ಬರುತ್ತದೆ. ರಾಮಾಯಣವು ೨೪೦೦೦ ಶ್ಲೋಕಗಳಿಂದುಂಟಾದ ೭ ಕಾಂಡಗಳಿಂದ ಕೂಡಿದೆ. ರಾಮಾಯಣದ ಕಥೆಯು ಮುಖ್ಯವಾಗಿ ಅಯೋಧ್ಯೆಯ ಸೂರ್ಯವಂಶದ ರಾಜಪುತ್ರ ರಾಮ, ಆತನ ಮಡದಿ ಸೀತೆ ಹಾಗೂ ಸೀತೆಯ ಅಪಹರಣ ಮಾಡಿದ ರಾವಣನ ಸಂಹಾರ ಕುರಿತಾಗಿದೆ. ವಾಲ್ಮೀಕಿ ಮಹರ್ಷಿಗಳಿಂದ ರಚಿತವಾದ ಈ ಕಾವ್ಯ ರಾಮನ ಮಕ್ಕಳಾದ ಲವ-ಕುಶರಿಂದ ಪ್ರಚಲಿತವಾಯಿತು. ಪ್ರಾಚೀನ ಭಾರತದ ಪ್ರಮುಖ ಸಾಹಿತ್ಯಕ ಕೃತಿಗಳಲ್ಲೊಂದಾದ ರಾಮಾಯಣವು ಭಾರತ ಉಪಖಂಡದ ಕಲೆ ಮತ್ತು ಸಂಸ್ಕೃತಿಯ ಮೇಲೆ ಆಳವಾದ ಪ್ರಭಾವ ಬೀರಿದೆ. ರಾಮನ ಕಥೆಯು ಅನೇಕ ಭಾಷೆಗಳಲ್ಲಿ ನಂತರದ ಬಹಳಷ್ಟು ಸಾಹಿತ್ಯಕ್ಕೆ ಸ್ಫೂರ್ತಿಯಾಯಿತು.

ವಾಲ್ಮೀಕಿಯು ತನ್ನ ರಾಮಾಯಣದಲ್ಲಿ ರಾಮನ ಮೂಲಕ ಮಾನವನ ಬಾಳುವೆಯ ರೀತಿಯ ಕುರಿತು ತನ್ನ ನೀತಿಯನ್ನು ವ್ಯಕ್ತಪಡಿಸುತ್ತಾನೆ. ಜೀವನವು ಕ್ಷಣ ಭಂಗುರವಾಗಿದ್ದು, ಭೋಗಲಾಲಸೆಯ ನೀತಿಯು ಅರ್ಥಹೀನವಾದದ್ದು. ಆದರೆ ಹಾಗೆಂದು ಯಾವುದೇ ವ್ಯಕ್ತಿಯು ಪುರಾತನ ಶಾಸ್ತ್ರಗಳಲ್ಲಿ ಹೇಳಿದ ಹಕ್ಕುಬಾಧ್ಯತೆಗಳಿಗೆ ವಿಮುಖನಾಗಬಾರದು. ವೇದದಲ್ಲಿ ಉಕ್ತವಾದದ್ದೇ ಧರ್ಮ, ವ್ಯಕ್ತಿಯು ಧರ್ಮವನ್ನು ಧರ್ಮಕ್ಕಾಗಿ ಪಾಲಿಸಬೇಕೇ ಹೊರತು ಅದರಿಂದ ಉಂಟಾಗುವ ಲಾಭ, ನಷ್ಟಗಳಿಗಾಗಿ ಅಲ್ಲ ಎಂಬುದು ಅವನ ಅಭಿಪ್ರಾಯ.

ಇಂಥ ಧರ್ಮಪಾಲನೆಯಿಂದ ಇಹಲೋಕದಲ್ಲೂ ಪರಲೋಕದಲ್ಲೂ ವ್ಯಕ್ತಿಯ ಕಲ್ಯಾಣವಾಗುವುದು ಅಷ್ಟೇ ಅಲ್ಲದೆ , ಯಾವುದೇ ಮಾತು ಕೊಡುವ ಮೊದಲೇ ಪರಿಣಾಮಗಳನ್ನು ಕುರಿತು ಯೋಚಿಸಬೇಕು ಮತ್ತು ಒಮ್ಮೆ ಮಾತು ಕೊಟ್ಟ ಮೇಲೆ ಎಷ್ಟೇ ಕಷ್ಟವಾಗಲಿ ಅದನ್ನು ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ರಾಮಾಯಣವು ಒತ್ತು ಕೊಡುತ್ತದೆ. ನಾರದ ಮುನಿಯು ಇಡೀ ರಾಮಾಯಣವನ್ನು ಸ್ವಲ್ಪದರಲ್ಲಿ ವಾಲ್ಮೀಕಿಗೆ ಹೇಳಿದ ಸಂಕ್ಷೇಪ ರಾಮಾಯಣವು ವಾಲ್ಮೀಕಿ ರಾಮಾಯಣದ ಮೊದಲ ಸರ್ಗವಾಗಿದೆ. ನಾರದನು ಆದರ್ಶ ಮನುಷ್ಯನ ೧೬ ಗುಣಗಳನ್ನು ಪಟ್ಟಿ ಮಾಡಿ ರಾಮನು ಈ ಎಲ್ಲ ೧೬ ಗುಣಗಳನ್ನು ಹೊಂದಿದ ಸಂಪೂರ್ಣ ಮಾನವ ಎಂದು ಹೇಳುತ್ತಾನೆ.

ಹಿಂದೂ ಪವಿತ್ರ ಗ್ರಂಥಗಳು ಭಗವದ್ಗೀತೆ ಮತ್ತು ರಾಮಾಯಣ
ರಾಮಾಯಣ

ವಾಲ್ಮೀಕಿಯು ಅವನನ್ನು ತನ್ನ ಕಥೆಯಲ್ಲಿ ಒಬ್ಬ ಅತಿಮಾನವ ಎಂದು ಚಿತ್ರಿಸದೆ, ಎಲ್ಲ ಗುಣ ದೋಷಗಳಿಂದ ಕೂಡಿ, ನೈತಿಕ ಸಂದಿಗ್ಧಗಳನ್ನೆದುರಿಸಿ ಅವುಗಳನ್ನು ಧರ್ಮವನ್ನು ಅನುಸರಿಸುವುದರಿಂದ ಗೆದ್ದ ಒಬ್ಬ ಸಹಜ ಮಾನವನನ್ನಾಗಿ ಚಿತ್ರಿಸಿದ್ದಾನೆ. ವಾಲ್ಮೀಕಿ ರಾಮಾಯಣದಲ್ಲಿ ಕಥಾನಾಯಕನ ಪರಿಶುದ್ಧ ಚಾರಿತ್ರ್ಯದ ಬಗ್ಗೆ ಸಂಶಯವನ್ನುಂಟು ಮಾಡುವ ಅನೇಕ ಸಂದರ್ಭಗಳಿವೆ.

ಅವುಗಳೆಂದರೆ-
ತನ್ನ ರಾಜ್ಯವನ್ನು ಮರಳಿ ಪಡೆಯಲು ಸುಗ್ರೀವನಿಗೆ ಸಹಾಯ ಮಾಡಲು ವಾಲಿಯನ್ನು ಮರದ ಮರೆಯಿಂದ ರಾಮನು ಕೊಲ್ಲುವುದು ಯುದ್ಧದ ನಿಯಮಗಳಿಗೆ ವಿರೋಧವಾಗಿತ್ತು.

ಸೀತೆಯು ರಾವಣನ ಸೆರೆಯಿಂದ ಬಿಡುಗಡೆ ಹೊಂದಿದಾಗ ಅಗ್ನಿಯನ್ನು ಪ್ರವೇಶಿಸಿ ತನ್ನ ಪರಿಶುದ್ಧತೆಯನ್ನು ಸಿದ್ಧ ಮಾಡುವಂತೆ ರಾಮನು ಅವಳನ್ನು ಬಲವಂತಪಡಿಸುತ್ತಾನೆ.

ನಂತರ ಶೂದ್ರ ಶಂಬೂಕನನ್ನು ಸಮಾಜದ ಕೆಳವರ್ಗದಲ್ಲಿದ್ದು ಯೋಗಿಗಳಂತೆ ತಪಸ್ಸನ್ನು ಮಾಡಿದ್ದಕ್ಕಾಗಿ ರಾಮನು ಕೊಲ್ಲುವನು. ಇವು ಮತ್ತು ಉಳಿದ ಅನೇಕ ಇಂಥ ರಾಮಾಯಣದಲ್ಲಿನ ಪ್ರಸಂಗಗಳು ಕಥಾನಾಯಕನಾದ ರಾಮನ ಮನುಷ್ಯ ಸಹಜ ಗುಣವನ್ನೆತ್ತಿ ತೋರಿಸಿ ಕಥೆಯ ಮೂಲ ನೀತಿಯಾಗಿರುವ ‘ಮನುಷ್ಯನು ಸತ್ಯಮಾರ್ಗವನ್ನು ಅನುಸರಿಸಲು ಅತಿಮಾನವನಿರುವುದು ಅವಶ್ಯವಿಲ್ಲ’ ಎಂಬುದನ್ನು ಸಮರ್ಥಿಸುತ್ತವೆ.

ರಾಮಾಯಣವು ಸಂಸ್ಕೃತ ಕಾವ್ಯದ ಮೇಲೆ ಶ್ಲೋಕದ ಹೊಸ ಛಂದಸ್ಸಿನಿಂದಾಗಿ ಬಹುಮುಖ್ಯ ಪ್ರಭಾವ ಬೀರಿದೆ. ಇದು ಪುರಾತನ ಹಿಂದೂ ಋಷಿಗಳ ಬೋಧನೆಗಳನ್ನು ಕಥಾಮಾಧ್ಯಮದ ಮೂಲಕ ಹಾಗೂ ತಾತ್ವಿಕ ಮತ್ತು ಭಕ್ತಿಸಂಬಂಧಿತ ಚರ್ಚಾಭಾಗಗಳನ್ನು ಒಳಗೊಂಡಿದೆ. ರಾಮ, ಸೀತೆ, ಲಕ್ಷ್ಮಣ, ಭರತ, ಹನುಮಂತ ಮತ್ತು ಕಥೆಯ ಖಳನಾಯಕನಾದ ರಾವಣ ಈ ಎಲ್ಲ ಪಾತ್ರಗಳು ಭಾರತದ ಸಾಂಸ್ಕೃತಿಕ ಪ್ರಜ್ಞೆಯ ಭಾಗವಾಗಿವೆ.

ರಾಮ ಕಥೆಯಿಂದ ಪ್ರಭಾವಗೊಂಡ ಪ್ರಮುಖರೆಂದರೆ- ೧೬ನೇ ಶತಮಾನದ ಹಿಂದಿ ಕವಿ ತುಳಸೀದಾಸರು, ೧೩ನೇ ಶತಮಾನದ ತಮಿಳು ಕವಿ ಕಂಬ, ೨೦ನೇ ಶತಮಾನದ ಕನ್ನಡದ ರಾಷ್ಟ್ರಕವಿ ಕುವೆಂಪು(ರಾಮಾಯಣ ದರ್ಶನಂ).
ರಾಮಾಯಣ ಕೇವಲ ಹಿಂದೂ ಧಾರ್ಮಿಕ ಕೃತಿಯಾಗಿ ಉಳಿದಿಲ್ಲ. ಎಂಟನೆ ಶತಮಾನದಿಂದ ಅನೇಕ ಭಾರತೀಯ ವಸಾಹತುಗಳು ಆಗ್ನೇಯ ಏಷ್ಯಾದಲ್ಲಿ ಏರ್ಪಟ್ಟಾಗ ರಾಮಾಯಣದ ಕಥೆ ವಿವಿಧ ರೂಪಾಂತರಗಳ ಮೂಲಕ ಆ ದೇಶಗಳಿಗೂ ಹರಡಿತು. ಈ ಪ್ರದೇಶದಲ್ಲಿ ಖ್ಮೇರ್, ಮಜಪಾಹಿತ್, ಶೈಲೇಂದ್ರ, ಚಂಪಾ, ಶ್ರೀವಿಜಯ ಮೊದಲಾದ ಕೆಲವು ಮುಖ್ಯ ಭಾರತೀಯ ಸಾಮ್ರಾಜ್ಯಗಳು ಸ್ಥಾಪಿಸಲ್ಪಟ್ಟವು. ಇವುಗಳ ಮೂಲಕ ರಾಮಾಯಣ ಇಂಡೊನೇಷ್ಯಾ,ಜಾವಾ, ಸುಮಾತ್ರಾ ಮತ್ತು ಬೋರ್ನಿಯೊ, ಥೈಲೆಂಡ್, ಕಾಂಬೋಡಿಯ, ಮಲೇಶಿಯ, ವಿಯೆಟ್ನಾಮ್ ಮತ್ತು ಲಾಓಸ್ ಗಳಲ್ಲಿ ಸಾಹಿತ್ಯ, ಶಿಲ್ಪಕಲೆ ಮತ್ತು ನಾಟಕ ಮಾಧ್ಯಮಗಳಲ್ಲಿ ವ್ಯಕ್ತವಾಯಿತು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಸಾಮಾನ್ಯ ಹೊಟ್ಟೆ ನೋವು

ಸಾಮಾನ್ಯ ಹೊಟ್ಟೆನೋವಿಗೆ ಮನೆಯಲ್ಲಿಯೇ ಸುಲಭ ಪರಿಹಾರಗಳು

ತುಳಸಿದಾಸ್

ತುಳಸಿದಾಸ್